ಪೊಟ್ಯಾಶಿಯಮ್

ಆವರ್ತಕ ಕೋಷ್ಟಕದಲ್ಲಿ ಪರಮಾಣು ಸಂಖ್ಯೆ ೧೯ ಮೂಲಧಾತು
(ಪೋಟ್ಯಾಶಿಯಮ್ ಇಂದ ಪುನರ್ನಿರ್ದೇಶಿತ)


೧೯ ಆರ್ಗಾನ್ಪೊಟ್ಯಾಶಿಯಮ್ಕ್ಯಾಲ್ಶಿಯಮ್
Na

K

Rb
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಪೊಟ್ಯಾಶಿಯಮ್, K, ೧೯
ರಾಸಾಯನಿಕ ಸರಣಿಕ್ಷಾರ ಲೋಹ
ಗುಂಪು, ಆವರ್ತ, ಖಂಡ 1, 4, s
ಸ್ವರೂಪಬೆಳ್ಳಿಯ ಹೊಳಪು
ಅಣುವಿನ ತೂಕ 39.0983(1) g·mol−1
ಋಣವಿದ್ಯುತ್ಕಣ ಜೋಡಣೆ [Ar] 4s1
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 8, 1
ಭೌತಿಕ ಗುಣಗಳು
ಹಂತsolid
ಸಾಂದ್ರತೆ (ಕೋ.ತಾ. ಹತ್ತಿರ)0.89 g·cm−3
ದ್ರವಸಾಂದ್ರತೆ at ಕ.ಬಿ.0.828 g·cm−3
ಕರಗುವ ತಾಪಮಾನ336.53 K
(63.38 °C, 146.08 °ಎಫ್)
ಕುದಿಯುವ ತಾಪಮಾನ1032 K
(759 °C, 1398 °F)
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic body centered
ಆಕ್ಸಿಡೀಕರಣ ಸ್ಥಿತಿಗಳು1
(strongly basic oxide)
ವಿದ್ಯುದೃಣತ್ವ0.82 (Pauling scale)
ಅಣುವಿನ ತ್ರಿಜ್ಯ220 pm
ಅಣುವಿನ ತ್ರಿಜ್ಯ (ಲೆಖ್ಕಿತ)243 pm
ತ್ರಿಜ್ಯ ಸಹಾಂಕ196 pm
ವಾನ್ ಡೆರ್ ವಾಲ್ಸ್ ತ್ರಿಜ್ಯ275 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆparamagnetic
ಉಷ್ಣ ವಾಹಕತೆ(300 K) 102.5 W·m−1·K−1
ಉಷ್ಣ ವ್ಯಾಕೋಚನ(25 °C) 83.3 µm·m−1·K−1
ಶಬ್ದದ ವೇಗ (ತೆಳು ಸರಳು)(20 °C) 2000 m/s
ಯಂಗ್ ಮಾಪಾಂಕ3.53 GPa
ವಿರೋಧಬಲ ಮಾಪನಾಂಕ1.3 GPa
ಸಗಟು ಮಾಪನಾಂಕ3.1 GPa
ಮೋಸ್ ಗಡಸುತನ0.4
ಬ್ರಿನೆಲ್ ಗಡಸುತನ0.363 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-09-7
ಉಲ್ಲೇಖನೆಗಳು

ಪೊಟ್ಯಾಶಿಯಮ್ (Potassium) ಒಂದು ಮೃದುವಾದ ಬೆಳ್ಳಿಯಂತ ಹೊಳಪುಳ್ಳ ಕ್ಷಾರ ಲೋಹ ಮೂಲಧಾತು. ರಾಸಾಯನಿಕವಾಗಿ ಸೋಡಿಯಮ್ ಅನ್ನು ಹೋಲುವ ಈ ಧಾತು, ನೀರು ಮತ್ತು ಗಾಳಿಗಳೊಂದಿಗೆ ಬಹಳ ಬೇಗ ರಾಸಾಯನಿಕ ಪ್ರಕ್ರಿಯೆಗೆ ಒಳಗೊಳ್ಳುತ್ತದೆ. ಭೂಪದರದ ಸುಮಾರು ೧.೫% ತೂಕವು ಈ ಲೋಹದಿಂದ ಬಂದಿದೆ.

ಇದರ ಪ್ರತೀಕ K, ಪರಮಾಣು ಸಂಖ್ಯೆ ೧೯ ಮತ್ತು ಪರಮಾಣು ತೂಕ ೩೦.೧೦೨. ವನಸ್ಪತಿಗಳ ಜ್ವಲನಾನಂತರ ದೊರೆಯುವ ಭಸ್ಮದಲ್ಲಿರುವ ಪೊಟ್ಯಾಶ್ (K2CO3) ರೂಪದಲ್ಲಿ ಪೊಟ್ಯಾಸಿಯಮ್ ಮಾನವನಿಗೆ ಬಲು ಹಿಂದಿನಿಂದಲೂ ಪರಿಚಿತವಿದೆ. ಭೂಮಿಯಲ್ಲಿ ಹರಡಿಹೋಗಿರುವ ಧಾತುಗಳ ಪೈಕಿ ಬಾಹುಲ್ಯದಲ್ಲಿ ಪೊಟ್ಯಾಸಿಯಮ್ಮಿಗೆ ಏಳನೆಯ ಸ್ಥಾನ ಉಂಟು.[] ಇದರ ತೀಕ್ಷ್ಣ ರಾಸಾಯನಿಕ ತೀವ್ರತೆಯಿಂದಾಗಿ ಇದು ನಿಸರ್ಗದಲ್ಲಿ ಧಾತುರೂಪದಲ್ಲಲ್ಲದೆ ಸಂಯುಕ್ತ ರೂಪದಲ್ಲಿ ಮಾತ್ರ ದೊರೆಯುತ್ತದೆ. ಪೊಟ್ಯಾಸಿಯಮ್ಮಿನ ಅದುರು ಜರ್ಮನಿಯ ಸ್ಟ್ಯಾಸ್‌ಫರ್ಟ್ ಎಂಬಲ್ಲಿಯೂ ರಷ್ಯ, ಮೆಕ್ಸಿಕೋ ಇಂಗ್ಲೆಂಡ್, ಆಸ್ಟ್ರೇಲಿಯ, ಸ್ಪೇನ್, ಚಿಲಿ, ಕೆನಡ, ಪೋಲಂಡ್ ಹಾಗೂ ಭಾರತ ದೇಶಗಳ ಅನೇಕ ಪ್ರದೇಶಗಳಲ್ಲಿಯೂ ಲಭ್ಯವಿದೆ.[][][]

ತಯಾರಿಕೆ

ಬದಲಾಯಿಸಿ

ಅದುರಿನಿಂದ ಧಾತುವಿನ ಉದ್ಧೃತಿ (ತಯಾರಿಕೆ): ಸರ್ ಹಂಫ್ರಿ ಡೇವಿ (೧೭೭೮-೧೮೨೯) ಎಂಬಾತ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ (KOH) ಎಂಬ ಪ್ರತ್ಯಾಮ್ಲವನ್ನು ಪ್ರವಾಹೀ ರೂಪದಲ್ಲಿ ವಿದ್ಯುದ್ವಿಶ್ಲೇಷಣೆಗೆ ಒಳಪಡಿಸಿ ಪೊಟ್ಯಾಸಿಯಮ್ ಧಾತುವನ್ನು ಮೊದಲ ಬಾರಿಗೆ ತಯಾರಿಸಿದ (೧೮೦೩).[] ಧಾತುವಿನ ಉದ್ಧೃತಿಯ ಈ ವಿಧಾನದಲ್ಲಿ ಮುಂದೆ ಹಲವಾರು ಸುಧಾರಣೆಗಳಾಗಿ ಇತ್ತೀಚಿಗೆ ಪೊಟ್ಯಾಸಿಯಮ್ಮನ್ನು ಈ ಮುಂದಿನ ವಿಧಾನದಿಂದ ತೃಪ್ತಿಕರವಾಗಿ ಪಡೆಯಲಾಗುತ್ತಿದೆ.

ಪೊಟ್ಯಾಸಿಯಮ್ ಕ್ಲೋರೈಡ್ ಲವಣ KCl ಪ್ರವಾಹೀ ರೂಪಧಾರಣೆ ಮಾಡುವಂತೆ ಅದಕ್ಕೆ ಉಷ್ಣ ಊಡಿ ಆ ಪ್ರವಾಹಿಯಲ್ಲಿ ಸೋಡಿಯಮ್ ಧಾತುವಿನ ಬಾಷ್ಪಗಳನ್ನು ಹಾಯಿಸುವುದರಿಂದ ಸೋಡಿಯಮ್ ಕ್ಲೋರೈಡ್ (NaCl) ತಯಾರಾಗಿ ಪೊಟ್ಯಾಸಿಯಮ್ ಧಾತುವಿನ ಬಾಷ್ಪಗಳು ಹೊರಬರುತ್ತವೆ. ಇದಕ್ಕೆ ವಿಶೇಷ ತಣ್ಪನ್ನು ಊಡಿದಾಗ ಇವು ಘನರೂಪ ತಳೆಯುತ್ತವೆ. ಈ ರೀತಿ ದೊರೆತ ಧಾತು ಸೇಕಡಾ ೯೯.೫ ರಷ್ಟು ಶುದ್ಧವಾಗಿರುತ್ತದೆ.

ಗುಣಧರ್ಮಗಳು

ಬದಲಾಯಿಸಿ

ಪೊಟ್ಯಾಸಿಯಮ್ ಬೆಳ್ಳಿಯಂತೆ ಶುಭ್ರವರ್ಣದ ಹಾಗೂ ಹೊಳಪುಳ್ಳ ಧಾತು. ಇದರ ಸಾಪೇಕ್ಷ ಸಾಂದ್ರತೆ ೦.೮೬. ಇದರ ದ್ರವನಬಿಂದು ೬೩.೭C. ಕುದಿಬಿಂದು ೧೮೦C. ಅತಿ ಮೃದು. ಹೀಗಾಗಿ ಇದನ್ನು ಬೆರಳುಗಳಿಂದ ಒತ್ತಿ ಚಪ್ಪಟೆ ಮಾಡಬಹುದು. ಚೂರಿಯಿಂದ ಕತ್ತರಿಸಲೂಬಹುದು.[] ಇದಕ್ಕೆ ವಿಶೇಷ ರಾಸಾಯನಿಕ ತೀವ್ರತೆ ಉಂಟು. ರಾಸಾಯನಿಕ ಕ್ರಿಯೆಗಳಲ್ಲೆಲ್ಲ ಸೋಡಿಯಮ್ ಧಾತುವನ್ನು ಹೋಲುವುದಾದರೂ ಇದು ಸೋಡಿಯಮ್ಮಿಗಿಂತ ತೀವ್ರತರವಾಗಿದೆ. ವಾತಾವರಣಕ್ಕೆ ತೆರೆದಿಟ್ಟಾಗ ಇದರ ಮೇಲೆ ಪೊಟ್ಯಾಸಿಯಮ್ ಆಕ್ಸೈಡ್ ಪೊರೆ ಮೈದಳೆದು ಹೊಳಪು ಮಾಯವಾಗುತ್ತದೆ.[] ಸಾರಜನಕದೊಡನೆ ಮಾತ್ರ ವರ್ತಿಸದು.[] ಫ್ಲೋರೀನ್, ಕ್ಲೋರೀನ್, ಬ್ರೋಮೀನ್ ಹಾಗೂ ಅಯೊಡೀನುಗಳೊಂದಿಗೆ ವರ್ತಿಸಿದಾಗಲೆಲ್ಲ ಸ್ಫೋಟಗಳುಂಟಾಗುತ್ತವೆ - ೨೦೦C ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಇದು ಹೈಡ್ರೊಜನ್ ಹಾಗೂ ಅಮೋನಿಯ ಅನಿಲಗಳೊಂದಿಗೆ ವರ್ತಿಸುತ್ತದೆ.  ನೀರಿನೊಂದಿಗೆ ಪೊಟ್ಯಾಸಿಯಮ್ ವಿಶೇಷ ತೀವ್ರತೆಯಿಂದ ವರ್ತಿಸುತ್ತದೆ. ಈ ಕ್ರಿಯೆಯಿಂದ ಹೈಡ್ರೋಜನ್ ಅನಿಲವೂ ಅಧಿಕೋಷ್ಣತೆಯೂ ಉಂಟಾಗಿ ಹೈಡ್ರೋಜನ್ ಒಡನೆ ಉರಿಯತೊಡಗುತ್ತದೆ. ಜಲಮಿಶ್ರಿತ ಆಮ್ಲಗಳೊಡನೆ ಈ ಧಾತು ಇನ್ನೂ ಹೆಚ್ಚು ತೀವ್ರತೆಯಿಂದ ವರ್ತಿಸಿ ಆಯಾ ಲವಣಗಳನ್ನೂ ಜೊತೆಗೆ ಉಷ್ಣತೆಯನ್ನೂ ಉಂಟುಮಾಡುತ್ತದೆ. ಪೊಟ್ಯಾಸಿಯಮ್ಮಿಗೆ ಇಷ್ಟೊಂದು ವಿಶೇಷ ರಾಸಾಯನಿಕ ತೀವ್ರತೆ ಇದ್ದಾಗ್ಗೂ ಇದು ನಿರಾರ್ದ್ರ ಆಮ್ಲಜನಕದ ಜೊತೆಗೆ ವರ್ತಿಸುವುದಿಲ್ಲವೆಂಬುದು ವಿಸ್ಮಯಕರ ಸತ್ಯ. ಅಂತೆಯೇ ಉರಿಯುತ್ತಿರುವ ಪೊಟ್ಯಾಸಿಯಮ್ಮಿನಿಂದ ಜ್ವಾಲೆಗಳನ್ನು ನಂದಿಸಲು ರೂಕ್ಷ (ಜಲಾಂಶರಹಿತ) ಆಮ್ಲಜನಕವನ್ನು ಉಪಯೋಗಿಸುತ್ತಾರೆ.

ಪೊಟ್ಯಾಸಿಯಮ್ ಆರ್ದ್ರ ಹವೆಯಲ್ಲಿ ಉರಿದು ಪೊಟ್ಯಾಸಿಯಮ್ ಸೂಪರ್ ಆಕ್ಸೈಡ್ (KO2) ಎಂಬ ಕಿತ್ತಳೆಯ ವರ್ಣದ ಭಸ್ಮವನ್ನು ಕೊಡುತ್ತದೆ.[] ಇದು ನೀರಿನೊಂದಿಗೆ ವರ್ತಿಸಿದಾಗ ಹಲವಾರು ರಾಸಾಯನಿಕ ಕ್ರಿಯೆಗಳು ನಡೆದು ಕೊನೆಯ ಹಂತದಲ್ಲಿ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ದ್ರಾವಣವೂ ಆಮ್ಲಜನಕವೂ ಸಿದ್ಧವಾಗುತ್ತವೆ. ಭಸ್ಮವನ್ನು ನಿರ್ದ್ರವ್ಯತೆಯಲ್ಲಿ ಕಾಸಲು ಅದು ವಿಭಜನೆಗೊಂಡು ಪೊಟ್ಯಾಸಿಯಮ್ ಪೆರಾಕ್ಸೈಡ್ (K2O2) ಹಾಗೂ ಆಮ್ಲಜನಕ ತಯಾರಾಗುತ್ತವೆ. ಪೊಟ್ಯಾಸಿಯಮ್ಮನ್ನು ಸೋರುಪ್ಪಿನೊಂದಿಗೆ (KNO3) ಕಾಸಲು ತಿಳಿಹಳದಿ ವರ್ಣದ ಪೊಟ್ಯಾಸಿಯಮ್ ಸಬ್ ಆಕ್ಸೈಡ್ (K2O) ತಯಾರಾಗುತ್ತದೆ. ಇಂಗಾಲದ ಮಾನಾಕ್ಸೈಡ್ ಹಾಗೂ ಡೈಆಕ್ಸೈಡುಗಳೊಂದಿಗೆ ವರ್ತಿಸಿದಾಗಲೆಲ್ಲ ಸ್ಫೋಟಗಳಾಗುತ್ತವೆ ಎಂದೇ ಪೊಟ್ಯಾಸಿಯಮ್ಮಿನ ಜ್ವಾಲೆಗಳನ್ನು ನಂದಿಸಲು ನೀರನ್ನಾಗಲಿ ಇಂಗಾಲ ಡೈ ಆಕ್ಸೈಡನ್ನಾಗಲಿ ಉಪಯೋಗಿಸುವುದು ನಿಷ್ಪ್ರಯೋಜಕ. ಬಟ್ಟೆ ಒಗೆಯಲು ಉಪಯೋಗಿಸುವ ಸೋಡಖಾರ (Na2CO3) ಮಾತ್ರ ಈ ಕಾರ್ಯ ಮಾಡಬಲ್ಲದು. ಪೊಟ್ಯಾಸಿಯಮ್ಮನ್ನು ಸದಾ ಕಲ್ಲೆಣ್ಣೆಯಂಥ ದ್ರವದಲ್ಲಿ ಮುಳುಗಿಸಿಟ್ಟು ಕಾಯ್ದಿರಿಸಬೇಕಾಗುತ್ತದೆ.

ಉಪಯೋಗಗಳು

ಬದಲಾಯಿಸಿ

ಪೊಟ್ಯಾಸಿಯಮ್ ಸೂಪರ್ ಆಕ್ಸೈಡ್ ತಯಾರಿಸುವಲ್ಲಿ ಪೊಟ್ಯಾಸಿಯಮ್ಮಿನ ವಿಶೇಷ ಉಪಯೋಗ ಉಂಟು. ಈ ಆಕ್ಸೈಡ್ ಶ್ವಾಸೋಚ್ಛ್ವಾಸ ಕ್ರಿಯೆಯಿಂದ ಹುಟ್ಟುವ ನೀರಿನ ಬಾಷ್ಪ ಹಾಗೂ ಇಂಗಾಲ ಡೈ ಆಕ್ಸೈಡುಗಳನ್ನು ಹೀರಿಕೊಂಡು ಆಮ್ಲಜನಕವನ್ನು ಹೊರಬಿಡುವುದರಿಂದ ಆಕಾಶ ಯಾನಕ್ಕಾಗಿ ಉಪಯೋಗಿಸುವ ನೌಕೆಗಳಲ್ಲಿ ಇದರ ಉಪಯೋಗವಿದೆ.[೧೦][೧೧] ಪೊಟ್ಯಾಸಿಯಮ್ ಅದರ ಹಲವಾರು ಸಂಯುಕ್ತಗಳ ರೂಪದಲ್ಲಿ ಬಹಳ ಬಳಕೆಯಲ್ಲಿದೆ. ಇವುಗಳ ಪೈಕಿ ಮುಖ್ಯವಾದದ್ದು ಪೊಟ್ಯಾಶ್. ರಾಸಾಯನಿಕ ಗೊಬ್ಬರದ ಮಿಶ್ರಣ ಮಾಡುವಲ್ಲಿ ಪೊಟ್ಯಾಸಿಯಮ್ ಕ್ಲೋರೈಡಿನ ಉಪಯೋಗವಿದೆ.[೧೨][೧೩][೧೪] ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಸಾಬೂನು ತಯಾರಿಕೆಯಲ್ಲಿಯೂ ಪೊಟ್ಯಾಸಿಯಮ್ ನೈಟ್ರೇಟ್ ಸಿಡಿಮದ್ದು, ಮದ್ದು, ಬೆಂಕಿಪೆಟ್ಟಿಗೆ ಮುಂತಾದುವುಗಳ ತಯಾರಿಕೆಯಲ್ಲಿಯೂ ಬೇಕಾಗುತ್ತದೆ.[೧೫]

ಉಲ್ಲೇಖಗಳು

ಬದಲಾಯಿಸಿ
  1. Greenwood, p. 69
  2. Garrett, Donald E. (1995-12-31). Potash: deposits, processing, properties and uses. Springer. ISBN 978-0-412-99071-7.
  3. Ober, Joyce A. "Mineral Commodity Summaries 2008:Potash" (PDF). United States Geological Survey. Retrieved 2008-11-20.
  4. Ober, Joyce A. "Mineral Yearbook 2006:Potash" (PDF). United States Geological Survey. Retrieved 2008-11-20.
  5. Davy, Humphry (1809). "Ueber einige neue Erscheinungen chemischer Veränderungen, welche durch die Electricität bewirkt werden; insbesondere über die Zersetzung der feuerbeständigen Alkalien, die Darstellung der neuen Körper, welche ihre Basen ausmachen, und die Natur der Alkalien überhaupt" [On some new phenomena of chemical changes that are achieved by electricity; particularly the decomposition of flame-resistant alkalis [i.e., alkalies that cannot be reduced to their base metals by flames], the preparation of new substances that constitute their [metallic] bases, and the nature of alkalies generally]. Annalen der Physik. 31 (2): 113–175. Bibcode:1809AnP....31..113D. doi:10.1002/andp.18090310202. p. 157: In unserer deutschen Nomenclatur würde ich die Namen Kalium und Natronium vorschlagen, wenn man nicht lieber bei den von Herrn Erman gebrauchten und von mehreren angenommenen Benennungen Kali-Metalloid and Natron-Metalloid, bis zur völligen Aufklärung der chemischen Natur dieser räthzelhaften Körper bleiben will. Oder vielleicht findet man es noch zweckmässiger fürs Erste zwei Klassen zu machen, Metalle und Metalloide, und in die letztere Kalium und Natronium zu setzen. — Gilbert. (In our German nomenclature, I would suggest the names Kalium and Natronium, if one would not rather continue with the appellations Kali-metalloid and Natron-metalloid which are used by Mr. Erman [i.e., German physics professor Paul Erman (1764–1851)] and accepted by several [people], until the complete clarification of the chemical nature of these puzzling substances. Or perhaps one finds it yet more advisable for the present to create two classes, metals and metalloids, and to place Kalium and Natronium in the latter — Gilbert.)
  6. Augustyn, Adam. "Potassium/ Chemical element". Encyclopedia Britannica. Retrieved 2019-04-17. Potassium Physical properties
  7. Greenwood, p. 76
  8. Holleman, Arnold F.; Wiberg, Egon; Wiberg, Nils (1985). "Potassium". Lehrbuch der Anorganischen Chemie (in ಜರ್ಮನ್) (91–100 ed.). Walter de Gruyter. ISBN 978-3-11-007511-3.
  9. Lide, David R. (1998). Handbook of Chemistry and Physics (87th ed.). Boca Raton, Florida, United States: CRC Press. pp. 477, 520. ISBN 978-0-8493-0594-8.
  10. Greenwood, p. 74
  11. Marx, Robert F. (1990). The history of underwater exploration. Courier Dover Publications. p. 93. ISBN 978-0-486-26487-5.
  12. Cordel, Oskar (1868). Die Stassfurter Kalisalze in der Landwirthschalt: Eine Besprechung ... (in ಜರ್ಮನ್). L. Schnock.
  13. Birnbaum, Karl (1869). Die Kalidüngung in ihren Vortheilen und Gefahren (in ಜರ್ಮನ್).
  14. United Nations Industrial Development Organization and Int'l Fertilizer Development Center (1998). Fertilizer Manual. pp. 46, 417. ISBN 978-0-7923-5032-3.
  15. Browne, C. A. (1926). "Historical notes upon the domestic potash industry in early colonial and later times". Journal of Chemical Education. 3 (7): 749–756. Bibcode:1926JChEd...3..749B. doi:10.1021/ed003p749.

ಹೊರಗಿನ ಕೊಂಡಿಗಳು

ಬದಲಾಯಿಸಿ
  • "Potassium". Drug Information Portal. U.S. National Library of Medicine.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: