ಪೆಲ್ಲಿಂಗ್
ಪೆಲ್ಲಿಂಗ್ ಭಾರತದ ಸಿಕ್ಕಿಂ ರಾಜ್ಯದ ಪಶ್ಚಿಮ ಸಿಕ್ಕಿಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಗಿರಿಧಾಮವಾಗಿದೆ. ಪ್ರವಾಸಿಗರ ಒಳಹರಿವಿನೊಂದಿಗೆ, ಈ ಪ್ರದೇಶವು ರೂಪಾಂತರಕ್ಕೆ ಒಳಗಾಗುತ್ತಿದೆ, ಮತ್ತು ರಸ್ತೆಗಳನ್ನು ಸರಿಪಡಿಸಲಾಗಿದೆ ಹಾಗೂ ಹೋಟೆಲ್‌ಗಳನ್ನು ಸ್ಥಾಪಿಸಲಾಗಿದೆ.
ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಬದಲಾಯಿಸಿಹಿಮಾಲಯ ಮತ್ತು ಕಾಂಚನಜುಂಗಾವನ್ನು ಇಲ್ಲಿಂದ ನಿಕಟವಾಗಿ ವೀಕ್ಷಿಸಬಹುದು. ಚಾರಣಿಗರು ಮತ್ತು ಇತರ ಸಂಚಾರಿ ಸಾಹಸಿಗಳು ಪಶ್ಚಿಮ ಸಿಕ್ಕಿಂನಲ್ಲಿ ಶ್ರಮದಾಯಕ ಮತ್ತು ಪ್ರಯಾಸಕರ ಚಾರಣಗಳನ್ನು ಕೈಗೊಳ್ಳಲು ನೆಲೆಯಾಗಿ ಪೆಲ್ಲಿಂಗ್ ರೂಪಗೊಂಡಿದೆ. ಪೆಲ್ಲಿಂಗ್‌ನ ಸುತ್ತಲಿನ ಭೂಮಿ ಇನ್ನೂ ಸ್ಪರ್ಶಿಸಲಾಗದ ಪ್ರದೇಶವಾಗಿದೆ ಮತ್ತು ಬೆಟ್ಟದ ಅಂಚಿನಲ್ಲಿ ಹಲವಾರು ಜಲಪಾತಗಳನ್ನು ಹೊಂದಿರುವ ಆಲ್ಪೈನ್ ಸಸ್ಯವರ್ಗದಿಂದ ಆವರಿಸಲ್ಪಟ್ಟಿದೆ. ಚಳಿಗಾಲದ ತಿಂಗಳುಗಳಲ್ಲಿ, ಪೆಲ್ಲಿಂಗ್ ಕೆಲವೊಮ್ಮೆ ಹಿಮದ ಹೊದಿಕೆಯಿಂದ ಮುಚ್ಚಲ್ಪಟ್ಟಿರುತ್ತದೆ.
ಪ್ರವಾಸಿ ಆಕರ್ಷಣೆಗಳು
ಬದಲಾಯಿಸಿಪೆಲ್ಲಿಂಗ್ನಲ್ಲಿ ಮತ್ತು ಸುತ್ತಮುತ್ತಲು ಭೇಟಿ ನೀಡಬಹುದಾದ ಸ್ಥಳಗಳಲ್ಲಿ ಸ್ಥಳೀಯ ಬೌದ್ಧಮಠಗಳು, ರಾಕ್ ಗಾರ್ಡನ್, ಜಲಪಾತ, ರಾಣಿ ಧುಂಗಾಳ ಪವಿತ್ರ ಬಂಡೆ, ಭವ್ಯವಾದ ದ್ವಿಮುಖದ ಕಾಂಚನ್‌ಜುಂಗಾ ಜಲಪಾತ, ಪುರಾತನ ವಿಲಕ್ಷಣವಾದ ಸಿಂಗ್‌ಶೋರ್ ಸೇತುವೆ, ಚಾಂಗೇ ಜಲಪಾತಗಳು ಮತ್ತು ಬೌದ್ಧರಿಗೆ ಪವಿತ್ರವಾದ ಖೆಚಿಯೋಪಾಲ್ರಿ ಸರೋವರ ಸೇರಿವೆ.
ರಾಬ್ಡೆಂಟ್ಸೆ ಅರಮನೆ ಅವಶೇಷಗಳು - ರಾಬ್ಡೆಂಟ್ಸೆ 1670 ರಿಂದ 1814 ರವರೆಗೆ ಹಿಂದಿನ ಸಿಕ್ಕಿಂ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿತ್ತು. ಆಕ್ರಮಣಕಾರಿ ಗೂರ್ಖಾ ಸೈನ್ಯದಿಂದ ರಾಜಧಾನಿ ನಗರವು ನಾಶವಾಯಿತು ಮತ್ತು ಅರಮನೆಯ ಅವಶೇಷಗಳು ಮತ್ತು ಸ್ತೂಪಗಳು ಮಾತ್ರ ಈಗ ಇಲ್ಲಿ ಕಂಡುಬರುತ್ತವೆ. ಪೆಮಯಾಂಗ್‍ಟ್ಸೆ ಮಠವು ಸಿಕ್ಕಿಂನಲ್ಲಿರುವ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ, ಇದು ಬಹುತೇಕ ಪಾಳುಬಿದ್ದಿದೆ.
ಪೆಮಯಾಂಗ್‍ಟ್ಸೆ ಬೌದ್ಧಮಠ - ಇದನ್ನು 1705 ರಲ್ಲಿ ನಿರ್ಮಿಸಲಾಯಿತು. ಮೂರು ಅಂತಸ್ತಿನ ರಚನೆಯಾಗಿ ನಿರ್ಮಿಸಲ್ಪಟ್ಟ ಈ ಮಠವು ಅದರ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಹೊಂದಿದೆ. ಸಂತರು ಮತ್ತು ರಿಂಪೋಚೆಗಳ ಪ್ರತಿಮೆಗಳು ವಿವಿಧ ಮಹಡಿಗಳಲ್ಲಿ ದೈವೀಕರಿಸಲ್ಪಟ್ಟಿವೆ.
ರಿಂಬಿ ಜಲಪಾತ - ಇದು ಪಶ್ಚಿಮ ಸಿಕ್ಕಿಂನಲ್ಲಿನ ಅತ್ಯಂತ ಹಳೆಯ ಜಲಪಾಟ ಮತ್ತು ಇದನ್ನು ೧೯೭೦ ರ ದಶಕದ ಆರಂಭದಲ್ಲಿ ಕೊನೆಯ ಸಿಕ್ಕಿಮೀ ರಾಜನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ರಾಜ್ಯ ಸರ್ಕಾರವು ಇಲ್ಲಿಯ ಸೆವಾರೊ ರಾಕ್ ಗಾರ್ಡನ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಬಂಡೆಗಳು, ಮಾರ್ಗಗಳು, ಕೊಳಗಳು, ಅಂದಗೊಳಿಸಿದ ಉದ್ಯಾನಗಳು ಇತ್ಯಾದಿಗಳೊಂದಿಗೆ ಪೂರ್ಣಗೊಂಡಿದೆ.
ಕಾಂಚನಜುಂಗಾ ಜಲಪಾತ - ಇದು ಪೆಲ್ಲಿಂಗ್ ನಿಂದ ಸುಮಾರು 28 ಕಿ.ಮೀ. ದೂರದಲ್ಲಿದೆ. ಇದು ಸಿಕ್ಕಿಂನ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ ಮತ್ತು ಸಾಮಾನ್ಯವಾಗಿ ವರ್ಷವಿಡೀ ಸಕ್ರಿಯವಾಗಿರುತ್ತದೆ.
ಚಾಂಗೇ ಜಲಪಾತ - ಇದು ಪೆಲ್ಲಿಂಗ್ ನಿಂದ 10 ಕಿ.ಮೀ. ದೂರದಲ್ಲಿದೆ.
ಸಂಗಾ ಚೋಯೆಲಿಂಗ್ ಬೌದ್ಧಮಠ - ಪೆಲ್ಲಿಂಗ್‌ನ ಮೇಲಿರುವ ಪರ್ವತಶ್ರೇಣಿಯ ಮೇಲೆ ಇದು ನೆಲೆಗೊಂಡಿದೆ. ಕ್ರಿ.ಶ 1697 ರಲ್ಲಿ ನಿರ್ಮಿಸಲ್ಪಟ್ಟ ಇದು ರಾಜ್ಯದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ.
ಪೆಲ್ಲಿಂಗ್ ಸ್ಕೈ ವಾಕ್ ಮತ್ತು ಚೆನ್‍ರೆಜ಼ಿಗ್ ಪ್ರತಿಮೆ - ಸಂಗಾ ಚೋಯೆಲಿಂಗ್ ಬಳಿ ಹೊಸ ಆಕರ್ಷಣೆಯೆಂದರೆ ಚೆನ್‍ರೆಜ಼ಿಗ್ (ಅವಲೋಕಿತೇಶ್ವರ) ನ ದೈತ್ಯಾಕಾರದ 137 ಅಡಿ ಪ್ರತಿಮೆ ಮತ್ತು ಪ್ರತಿಮೆಗೆ ದಾರಿ ತೋರುವ ಗಾಜಿನಿಂದ ಮಾಡಿದ ಪಾರದರ್ಶಕ ಸ್ಕೈ ವಾಕ್. ಇದನ್ನು ನವೆಂಬರ್ 2018 ರಲ್ಲಿ ತೆರೆಯಲಾಯಿತು ಮತ್ತು ಅಂದಿನಿಂದ ಇದು ಗಮನಾರ್ಹವಾದ ಸಂಖ್ಯೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸಿದೆ.[೧]
ಸಿಂಗ್‍ಶೋರ್ ಸೇತುವೆ -ಇದು ಪೆಲ್ಲಿಂಗ್‌ನಿಂದ ಸುಮಾರು ೨೬ ಕಿಮೀ ದೂರದಲ್ಲಿದೆ. ಸೇತುವೆಯು 100 ಮೀ ಎತ್ತರ ಮತ್ತು 240 ಮೀ ಉದ್ದವಿದೆ. ಇದು ಸಿಕ್ಕಿಂನ ಅತಿ ಎತ್ತರದ ಸೇತುವೆ ಮತ್ತು ಏಷ್ಯಾದ ಎರಡನೇ ಅತಿ ಎತ್ತರದ ಸೇತುವೆಯಾಗಿದೆ.
ಉಲ್ಲೇಖಗಳು
ಬದಲಾಯಿಸಿ
- ↑ Narzary, Jitaditya (2019-01-24). "Pelling Skywalk to Chenrezig Statue near Sanga Choeling". The Travelling Slacker (in ಅಮೆರಿಕನ್ ಇಂಗ್ಲಿಷ್). Retrieved 2019-02-08.