ಪೂನಮ್ ಯಾದವ್
ಪೂನಮ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗು ಬಲಗೈ ಲೆಗ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಕೇಂದ್ರ ವಲಯ, ಉತ್ತರ ಪ್ರದೇಶ ಹಾಗು ರೈಲ್ವೇಸ್ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ.[೧][೨]
ವಯಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಹುಟ್ಟು | ಆಗ್ರಾ, ಉತ್ತರಪ್ರದೇಶ, ಭಾರತ | ೨೪ ಆಗಸ್ಟ್ ೧೯೯೧||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | ||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ | ||||||||||||||||||||||||||||||||||||||||||||||||||||
ಪಾತ್ರ | ಬೌಲರ್ | ||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | |||||||||||||||||||||||||||||||||||||||||||||||||||||
ರಾಷ್ಟೀಯ ತಂಡ | |||||||||||||||||||||||||||||||||||||||||||||||||||||
ಒಂದೇ ಟೆಸ್ಟ್ (ಕ್ಯಾಪ್ ೮೧) | ೧೬ ನವೆಂಬರ್ ೨೦೧೪ v ದಕ್ಷಿಣ ಆಫ್ರಿಕಾ | ||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೦೭) | ೧೨ ಏಪ್ರೀಲ್ ೨೦೧೩ v ಬಾಂಗ್ಲಾದೇಶ | ||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್ | ||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೪೧) | ೫ ಏಪ್ರಿಲ್ ೨೦೧೩ v ಬಾಂಗ್ಲಾದೇಶ | ||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೮ ಮಾರ್ಚ್ ೨೦೨೦ v ಆಸ್ಟ್ರೇಲಿಯಾ | ||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | |||||||||||||||||||||||||||||||||||||||||||||||||||||
| |||||||||||||||||||||||||||||||||||||||||||||||||||||
ಮೂಲ: Cricinfo, ೮ ಮಾರ್ಚ್ ೨೦೨೦ |
ಆರಂಭಿಕ ಜೀವನ
ಬದಲಾಯಿಸಿಪೂನಮ್ ಯಾದವ್ ರವರು ಆಗಸ್ಟ್ ೨೪, ೧೯೯೧ರಂದು ಆಗ್ರಾ, ದೆಹಲಿಯಲ್ಲಿ ಜನಿಸಿದರು. ಇವರ ತಂದೆಯ ಹೆಸರು ರಘುವೀರ್ ಸಿಂಗ್ ಯಾದವ್, ಒಬ್ಬ ನಿವೃತ್ತ ಸೇನಾಧಿಕಾರಿ. ಇವರ ತಾಯಿಯ ಹೆಸರು ಮುನ್ನಾ ದೇವಿ ಮತ್ತು ಇವರು ಗೃಹಿಣಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾದವ್ ಅವರು ಶಾಲಾ ಶಿಕ್ಷಣ ಮತ್ತು ಪದವಿ ಶಿಕ್ಷಣ ಪಡೆದರು. ಕೇಂದ್ರ ವಲಯ, ಉತ್ತರ ಪ್ರದೇಶ ಮತ್ತು ರೈಲ್ವೇಸ್ ಇವರ ದೇಶೀಯ / ರಾಜ್ಯ ತಂಡಗಳು . ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬೌಲರ್ ಆಗಿ ಆಯ್ಕೆಯಾದರು. ಪ್ರಸ್ತುತ ಇವರ ತರಬೇತುದಾರರು ಹೆಮಲತಾ ಕಲಾ ಆಗಿದ್ದಾರೆ. ತಮ್ಮ ವೃತ್ತಿಜೀವನವನ್ನು ಮುಂದುವರೆಸಲು, ಯಾದವ್ ಅವರು ಆಗ್ರಾಗೆ ಸ್ಥಲಾಂತರಗೊಂಡರು. ಅಲ್ಲಿ ಅವರು ಏಕಲವ್ಯ ಕ್ರೀಡಾಂಗಣದಲ್ಲಿ ತರಬೇತಿ ಪಡೆದರು. ಮೂರು ವರ್ಷಗಳ ನಂತರ, ಯಾದವ್ ಬಹುತೇಕ ಕ್ರಿಕೆಟ್ನಿಂದ ಹೊರಗುಳಿಯಲು ಇಛ್ಛಿಸಿದ್ದರು, ಆದರೆ ತನ್ನ ತಂದೆಯಿಂದ ಮತ್ತಷ್ಟು ಮುಂದುವರಿಯಲು ಪ್ರೇರೇಪಿಸಲ್ಪಟ್ಟರು.[೩][೪]
ವೃತ್ತಿ ಜೀವನ
ಬದಲಾಯಿಸಿಪ್ರಥಮ ದರ್ಜೆ ಕ್ರಿಕೆಟ್
ಬದಲಾಯಿಸಿಪೂನಮ್ ಯಾದವ್ ದೇಶೀ ಕ್ರಿಕೆಟ್‍ನಲ್ಲಿ ಕೇಂದ್ರ ವಲಯ, ಉತ್ತರ ಪ್ರದೇಶ ಹಾಗು ರೈಲ್ವೇಸ್ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ. ಪ್ರಮುಖವಾಗಿ ಇವರು ಕ್ರಿಕೆಟ್ ತಂಡಕ್ಕೆ ಬೌಲರ್ ಆಗಿ ಆಯ್ಕೆಯಾದರು. ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.[೫][೬]
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಏಪ್ರಿಲ್ ೦೫, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ಪೂನಮ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೧೬, ೨೦೧೪ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.ನಂತರ ಏಪ್ರಿಲ‍್ ೧೨, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಏಕದಿನ ಪಂದ್ಯದ ಮೂಲಕ ಪೂನಮ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೭][೮][೯]
ಪಂದ್ಯಗಳು
ಬದಲಾಯಿಸಿ- ಏಕದಿನ ಕ್ರಿಕೆಟ್ : ೩೫ ಪಂದ್ಯಗಳು[೧೦]
- ಟಿ-೨೦ ಕ್ರಿಕೆಟ್ : ೪೮ ಪಂದ್ಯಗಳು
- ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು
ವಿಕೇಟ್‌ಗಳು
ಬದಲಾಯಿಸಿ- ಟಿ-೨೦ ಕ್ರಿಕೆಟ್‌ನಲ್ಲಿ : ೬೯
- ಟೆಸ್ಟ್ ಕ್ರಿಕೆಟ್‌ನಲ್ಲಿ : ೦೩
- ಏಕದಿನ ಕ್ರಿಕೆಟ್‌ನಲ್ಲಿ : ೫೩
ಗ್ಯಾಲರಿ
ಬದಲಾಯಿಸಿ-
೨೦೧೯ ರ ಆಗಸ್ಟ್ ೨೯ ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಅಧ್ಯಕ್ಷರು, ಶ್ರೀ ರಾಮ್ ನಾಥ್ ಕೋವಿಂದ್ ಅವರು ೨೦೧೯ ರ ಅರ್ಜುನ ಪ್ರಶಸ್ತಿ, ಕ್ರಿಕೆಟ್ಗಾಗಿ ಶ್ರೀಮತಿ ಪೂನಮ್ ಯಾದವ್ ಅವರಿಗೆ ಹೊಳೆಯುವ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಉಲ್ಲೇಖಗಳು
ಬದಲಾಯಿಸಿ- ↑ http://www.bcci.tv/player/1814/Poonam-Yadav
- ↑ https://starsunfolded.com/poonam-yadav/
- ↑ "ಆರ್ಕೈವ್ ನಕಲು". Archived from the original on 2018-12-15. Retrieved 2018-12-28.
- ↑ "ಆರ್ಕೈವ್ ನಕಲು". Archived from the original on 2018-12-15. Retrieved 2018-12-28.
- ↑ "ಆರ್ಕೈವ್ ನಕಲು". Archived from the original on 2018-12-15. Retrieved 2018-12-28.
- ↑ https://www.cricbuzz.com/profiles/10016/poonam-yadav
- ↑ http://www.espncricinfo.com/series/12157/scorecard/625900/india-women-vs-bangladesh-women-3rd-t20i-bangladesh-women-tour-of-india-2012-13
- ↑ http://www.espncricinfo.com/series/11521/scorecard/797899/india-women-vs-south-africa-women-only-test-south-africa-women-tour-of-india-2014-15
- ↑ http://www.espncricinfo.com/series/12157/scorecard/625903/india-women-vs-bangladesh-women-3rd-odi-bangladesh-women-tour-of-india-2012-13
- ↑ http://www.espncricinfo.com/india/content/player/630972.html