ಪೀಜೊ ವಿದ್ಯುತ್ತು ಎಂದರೆ ಕೆಲವು ವಿದ್ಯುದ್ವಾಹಕ ಅಸಮವರ್ತಿ ಸ್ಫಟಿಕ ಹಲ್ಲೆಗಳ (ವೇಫರ್ಸ್) ಮೇಲೆ (ಉದಾ: ಕ್ವಾರ್ಟ್ಸ್, ರೋಚೆಲ್ ಲವಣ, ಬೇರಿಯಮ್ ಟೈಟನೇಟ್) ಯಾಂತ್ರಿಕವಾಗಿ ಪೀಡನವನ್ನು (ಸ್ಟ್ರೆಸ್) ಹೇರಿದಾಗ ವಿದ್ಯುದ್ಧ್ರುವೀಕರಣ ಉಂಟಾಗಿ ವಿದೃಶ ವಿದ್ಯುದಾವೇಶಗಳು ಹಲ್ಲೆಯ ವಿರುದ್ಧ ಮೇಲ್ಮೈಗಳಲ್ಲಿ ಮೂಡುವ ವಿದ್ಯಮಾನ.[] ಅಂತೆಯೇ, ಇಂಥ ಹಲ್ಲೆಗಳ ವಿರುದ್ಧ ಮೇಲ್ಮೈಗಳ ನಡುವೆ ವಿದ್ಯುದ್ವಿಭವಾಂತರ ಪ್ರಯೋಗಿಸಿದಾಗ ವಿಲೋಮ ಪರಿಣಾಮ ಉಂಟಾಗುತ್ತದೆ. ಅರ್ಥಾತ್, ಅವುಗಳ ಆಕಾರ ಮತ್ತು ಗಾತ್ರಗಳಲ್ಲಿ ವಿರೂಪಣೆ ಕಂಡುಬರುತ್ತದೆ.

ಪೀಜೊವಿದ್ಯುತ್ ತಕ್ಕಡಿ

ಪೀಡನೆಗೆ ಅನುಲೋಮಾನುಪಾತದಲ್ಲಿ ವಿದ್ಯುದ್ಧ್ರುವೀಕರಣವಿರುತ್ತದೆ. ವಿದ್ಯುದ್ಧ್ರುವೀಕರಣ =K x ಪೀಡನ. ಇಲ್ಲಿ, K ಎಂಬುದು ಪದಾರ್ಥದಿಂದ ಪದಾರ್ಥಕ್ಕೆ ಬದಲಾಗುವ ಪೀಜೊ ವಿದ್ಯುತ್ ಸಹಾಂಕ. ವಿಲೋಮ ಪೀಜೊ ವಿದ್ಯುತ್ಪರಿಣಾಮ ಬಲು ಅಲ್ಪ ಪ್ರಮಾಣದಲ್ಲಿರುತ್ತದೆ. ಉದಾ: 106 ವೋಲ್ಟ್/ಮೀಟರ್ ವಿದ್ಯುತ್‌ಕ್ಷೇತ್ರವನ್ನು ಪ್ರಯೋಗಿಸಿದಾಗ ಕ್ವಾರ್ಟ್ಸ್ ಸ್ಫಟಿಕದ 1 ಸೆಂಮೀ ಉದ್ದದಲ್ಲಾಗುವ ಬದಲಾವಣೆ ಕೇವಲ 0.001 ಮಿಮೀ.

ಇಂಥ ಸ್ಫಟಿಕವನ್ನೊಳಗೊಂಡ ವಿದ್ಯನ್ಮಂಡಲದಲ್ಲಿ ವಿದ್ಯುತ್ತಿನ ಆಂದೋಲನಗಳೊಂದಿಗೆ ಸ್ಫಟಿಕದಲ್ಲಾಗುವ ಕ್ಲುಪ್ತ ಆವೃತ್ತಿಯ ಯಾಂತ್ರಿಕ ಆಂದೋಲನಗಳನ್ನು ಮೇಳೈಸಬಹುದು.

ಉಪಯೋಗಗಳು

ಬದಲಾಯಿಸಿ

ಇದು ಆಂದೋಲನಗಳ ಆವೃತ್ತಿ ಸ್ಥಿರವಾಗಿರಬೇಕಾದ ಗಡಿಯಾರ, ರೇಡಿಯೊ ಪ್ರೇಷಕ ಮುಂತಾದ ಸಾಧನಗಳಲ್ಲಿ ಉಪಯುಕ್ತ. ಯಾಂತ್ರಿಕ ಸಂಜ್ಞೆಯನ್ನು ವಿದ್ಯುತ್ಸಂಜ್ಞೆಯಾಗಿಯೂ ವಿದ್ಯುತ್ಸಂಜ್ಞೆಯನ್ನು ಯಾಂತ್ರಿಕ ಸಂಜ್ಞೆಯಾಗಿಯೂ ಪರಿವರ್ತಿಸಲು ಕ್ರಮವಾಗಿ ಪೀಜೊ ವಿದ್ಯುತ್ಪರಿಣಾಮ ಮತ್ತು ಅದರ ವಿಲೋಮಗಳು ಉಪಯುಕ್ತ. ಶ್ರವಣಾತೀತ ಧ್ವನಿಯ ಉತ್ಪಾದನೆಯಲ್ಲಿಯೂ ವಿಲೋಮ ಪೀಜೊ ವಿದ್ಯುತ್ಪರಿಣಾಮದ ಬಳಕೆ ಉಂಟು.[]

ಉಲ್ಲೇಖಗಳು

ಬದಲಾಯಿಸಿ
  1. Holler, F. James; Skoog, Douglas A. & Crouch, Stanley R. (2007). Principles of Instrumental Analysis (6th ed.). Cengage Learning. p. 9. ISBN 978-0-495-01201-6.
  2. Krautkrämer, J. & Krautkrämer, H. (1990). Ultrasonic Testing of Materials. Springer. pp. 119–49. ISBN 978-3-662-10680-8.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: