ಪಾನಕಗಳು
ಪಾನಕವೆಂದರೆ ದ್ರವ ರೂಪದ ಸೇವನೆಯ ಪದಾರ್ಥವಾಗಿದೆ. ಪಾನಕಗಳನ್ನು ಮನೆಯಲ್ಲಿಯೇ ಲಭ್ಯವಿರುವ ಸಾಮಗ್ರಿಗಳಿಂದ ತಯಾರಿಸಬಹುದು. ಪಾನಕಗಳು ದೇಹದ ದಾಹ ತೀರಿಸುವುದರೊಂದಿಗೆ ಅರೋಗ್ಯ ವೃದ್ಧಿಸುತ್ತವೆ.ಇದರ ಸೇವನೆಯ ಫಲಿತಾಂಶ ವೈದ್ಯರ ಮತ್ತು ಔಷಧ ತಯಾರಕರ ಆದಾಯ ವೃದ್ಧಿಗೆ ಅನುಕೂಲವಾಗುತ್ತದೆ. ಭಾರತದ ಆಯುರ್ವೇದದಲ್ಲಿ ಪಾನಕಕ್ಕೆ ವಿಶೇಷ ಇತಿಹಾಸವಿದೆ.[೧]
ವಿವಿಧ ಪಾನಕಗಳು
ಬದಲಾಯಿಸಿತಯಾರಿಸಲು ಬೇಕಾದ ಇತರ ಸಾಮಾಗ್ರಿಗಳು
ಬದಲಾಯಿಸಿಪಾನಕ ತಯಾರಿಸುವ ವಿಧಾನಗಳು:
ಬದಲಾಯಿಸಿಹಣ್ಣಿನ ಪಾನಕಗಳನ್ನು ತಯಾರಿಸುವಾಗ ಬೆಲ್ಲ,ಏಲಕ್ಕಿ, ಲಂಬೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇತರ ಪಾನಕಗಳನ್ನು ತಯಾರಿಸುವಾಗ ಕಾಳುಮೆಣಸು,ಬೆಲ್ಲ,ಏಲಕ್ಕಿಯನ್ನು ಬಳಸುತ್ತಾರೆ. ಉದಾಹರಣೆ: ಬೆಲ್ಲದ ಪಾನಕ ನೀರನ್ನು ಕುದಿಸಿ ಅದಕ್ಕೆ ಬೆಲ್ಲ ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಇನ್ನಷ್ಟು ಕುದಿಸಿ ಆರಿದ ನಂತರ ಪಾನಕವನ್ನು ಕುಡಿಯಬಹುದು. ಪಾನಕವನ್ನು ತಯಾರಿಸುವಾಗ ಕಬ್ಬಿನ ರಸದಿಂದ ತೆಗೆದ ಜೋನಿ ಬೆಲ್ಲವನ್ನು ಉಪಯೋಗಿಸುವುದು ಸೂಕ್ತ. ಸಕ್ಕರೆ ಕಾಯಿಲೆ ಇರುವವರು ತುಂಬಾ ಸಿಹಿಯಾದ ಹಣ್ಣುಗಳಿಂದ ಪಾನಕ ತಯಾರಿಸದೆ ಇರುವುದು ಸೂಕ್ತ.[೩] [೪]
ಉಪಯುಕ್ತತೆ
ಬದಲಾಯಿಸಿ- ಮೂಲವ್ಯಾಧಿ,ವ್ರಣ,ರಕ್ತ ಹೀನತೆ,ಗಂಟಲು ಕೆರೆತವನ್ನು ಶಮನಗೊಳಿಸುತ್ತದೆ.
- ಹಸಿವು,ದಾಹಗಳನ್ನು ನಿಯಮಿತವಾಗಿಸುತ್ತದೆ
- ಉಷ್ಣ,ನಿಶ್ಶಕ್ತಿಯನ್ನು ನಿವಾರಿಸಿ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ.
- ಶಕ್ತಿ ವರ್ಧಕ[೫]
ಆರೋಗ್ಯ ಪಾನೀಯ
ಬದಲಾಯಿಸಿಪದಾರ್ಥಗಳು
ಬದಲಾಯಿಸಿತಯಾರಿಸುವ ವಿಧಾನ
ಬದಲಾಯಿಸಿರಾಗಿಯನ್ನು ನೀರಿನಲ್ಲಿ ಎರಡು ಮೂರು ಬಾರಿ ತೊಳೆದು ಶುಭ್ರವಾದ ಬಟ್ಟೆಯಲ್ಲಿ ಹರಡಿ ಮೂರು ದಿನಗಳ ಕಾಲ ಮೊಳಕೆ ಬರಿಸಿ,ಒಣಗಿಸಿ ಉಜ್ಜಿ ಮೊಳಕೆ ತೆಗಿಯುವುದು. ಗೋಧಿ ಹಾಗೂ ನೆಲಗಡಲೆಯನ್ನು ಪರಿಮಳ ಬರುವ ವರೆಗೆ ಹುರಿಯುವುದು. ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಬೆರೆಸಿ ಮಿಕ್ಸರಿನಲ್ಲಿ ಪುಡಿಮಾಡಿ ಜರಡಿ ಹಿಡಿದು ಶೇಖರಿಸಿಡುವುಡು. ಇದನ್ನು ಹಾಲು ಅಥವಾ ನೀರಿಗೆ ಹಾಕಿ ಉಪ್ಪು,ಬೆಲ್ಲ ಸೇರಿಸಿ ಸೇವಿಸಬಹುದು.
ಉಲ್ಲೇಖಗಳು
ಬದಲಾಯಿಸಿ- ↑ https://www.joyfulbelly.com/Ayurveda/recipes/time/Drink.
- ↑ "ಆರ್ಕೈವ್ ನಕಲು". Archived from the original on 2018-07-17. Retrieved 2017-12-30.
- ↑ http://Health%20Drinks%20-%20Axiom%20Ayurveda%20https://www.axiomayurveda.com/health-drinks Archived 2016-01-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Bellada panaka | Ram navami panaka recipe | Panaka for ram navami ... vegrecipesofkarnataka.com/17-bella-panaka-jaggery-juice.php
- ↑ http://www.medindia.net/alternativemedicine/ayurvedaanddiet/ayurvedic.../paanaka.asp