ಪಾದರಕ್ಷೆ ತಯಾರಿಕೆ
ಪಾದರಕ್ಷೆ ತಯಾರಿಕೆಯು ಪಾದರಕ್ಷೆಗಳನ್ನು ತಯಾರಿಸುವ ಪ್ರಕ್ರಿಯೆ.
ಪಾದರಕ್ಷೆ ತಯಾರಕರು ಶೂಗಳು, ಬೂಟುಗಳು, ಎಕ್ಕಡಗಳು, ಕ್ಲಾಗ್‍ಗಳು ಮತ್ತು ಮಾಕಸನ್‍ಗಳು ಸೇರಿದಂತೆ ಅನೇಕ ಪಾದರಕ್ಷಾ ವಸ್ತುಗಳನ್ನು ತಯಾರಿಸಬಹುದು. ಅಂತಹ ವಸ್ತುಗಳನ್ನು ಸಾಮಾನ್ಯವಾಗಿ ಚಕ್ಕಡ, ಕಟ್ಟಿಗೆ, ರಬ್ಬರು, ಪ್ಲಾಸ್ಟಿಕ್, ಸೆಣಬು ಅಥವಾ ಇತರ ಸಸ್ಯವಸ್ತುವಿನಿಂದ ತಯಾರಿಸಲಾಗುತ್ತದೆ. ಇವು ಹಲವುವೇಳೆ ಅಟ್ಟೆಯ ದೀರ್ಘ ಬಾಳಿಕೆಗಾಗಿ ಬಹುಸಂಖ್ಯೆಯ ಭಾಗಗಳನ್ನು ಹೊಂದಿರುತ್ತವೆ ಮತ್ತು ಚಕ್ಕಡದ ಮೇಲ್ಭಾಗಕ್ಕೆ ಹೊಲಿಯಲ್ಪಟ್ಟಿರುತ್ತವೆ.
ಪಾದರಕ್ಷೆ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವ ವೃತ್ತಿಗಳು ಚಮ್ಮಾರ, ಮೋಚಿ ಮತ್ತು ಮುಚ್ಚಿಗರ ವೃತ್ತಿಗಳನ್ನು ಒಳಗೊಂಡಿವೆ. ಇಂದು, ಪಾದರಕ್ಷೆಗಳನ್ನು ಹಲವುವೇಳೆ ಕುಶಲಕರ್ಮದ ಬದಲಾಗಿ ಪ್ರಮಾಣದ ಆಧಾರದ ಮೇಲೆ ತಯಾರಿಸಲಾಗುತ್ತದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Shoemaker's Workshop - The Canadian Museum of Civilization
- "Bespoke Shoemaking a guide to handmade shoemaking", a book teaching traditional hand shoemaking.