ಪಾಠಶಾಲಾ ಬಸದಿಯ ಮಂಗಳೂರು ಮತ್ತು ಕಾರ್ಕಳ ನಡುವಿನ ಹೆದ್ದಾರಿಯ ಪಕ್ಕದಲ್ಲಿ ಮೂಡುಬಿದಿರೆ ಜೈನಮಠದ ಎದುರುಗಡೆ ಇದೆ. ಇದರ ಪಕ್ಕದಲ್ಲಿಯೇ ಸುಮಾರು ೫೦ ಮೀಟರ್ ಅಂತರದಲ್ಲಿ ಪಡು ಬಸದಿ ಇದೆ. ಈ ಬಸದಿಯ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮಕ್ಕೆ ಸೇರಿರುವಂತಹದ್ದು. ಈ ಬಸದಿಯ ಪಕ್ಕದಲ್ಲಿ ಶಾಲೆ ಇದೆ. ಹಿಂದೆ ಇಲ್ಲಿ ಸಂಸ್ಕತ ಪಾಠಶಾಲೆ ಇತ್ತು. ಬಸದಿಯಲ್ಲಿ ಪೂಜಿಸಲ್ಪಡುವ ಮುಖ್ಯ ದೇವರು ಮುನಿಸುವ್ರತ.

ಪ್ರಾಂಗಣ

ಬದಲಾಯಿಸಿ

ಬಸದಿಯನ್ನು ಪ್ರವೇಶಿಸುವಾಗ ಬಸದಿಯ ಎಡಭಾಗದಲ್ಲಿ ಕಾರ್ಯಾಲಯವಿದೆ. ಹಾಗೆಯೇ ಬಸದಿಯ ಎದುರುಗಡೆ ಸಭಾಂಗಣವಿದೆ. ಹಾಗೆಯೇ ಯಾವುದೇ ದ್ವಾರಪಾಲಕರ ಮೂರ್ತಿಗಳು ಸಹ ಇಲ್ಲ. ಒಟ್ಟಾಗಿ ಹೇಳುವುದಾದರೆ ಈ ಬಸದಿಯಲ್ಲಿ ಯಾವುದೇ ಶಿಲ್ಪ ಕಲಾಕೃತಿಗಳು ಇಲ್ಲದೆ ಸರಳ ಮತ್ತು ಸುಂದರವಾಗಿದೆ. ಈ ಬಸದಿಯಲ್ಲಿ ೪ ಕಂಬಗಳಿಂದ ಕೂಡಿರುವಂತಹ ಪ್ರಾರ್ಥನಾ ಮಂಟಪವಿದೆ. ಅಲ್ಲಿ ಸಾಮಾನ್ಯವಾಗಿ ಇರುವಂತೆ ಜಯಂಘಂಟೆ ಜಾಗಟೆಗಳನ್ನು ತೂಗುಹಾಕಲಾಗಿದೆ. ಆದರೆ ಈ ಪ್ರಾರ್ಥನಾ ಮಂಟಪದ ಕಂಬಗಳಲ್ಲಿ ಯಾವುದೇ ಶಿಲ್ಪಾಕೃತಿ ಇಲ್ಲ.

ಪ್ರಾರ್ಥನಾ ಮಂದಿರ

ಬದಲಾಯಿಸಿ

ಪ್ರಾರ್ಥನಾ ಮಂಟಪವನ್ನು ಪ್ರವೇಶಿಸಿದ ನಂತರ ಸಿಗುವಂತ ಮಂಟಪವೇ ತೀರ್ಥ ಮಂಟಪ ಇಲ್ಲಿ ಗಂಧಕುಟಿಯು ತೀರ್ಥಂಕರ ಮಂಟಪದಲ್ಲಿ ಇದೆ. ಇಲ್ಲಿ ಕೇವಲ ಎರಡು ಮಂಟಪಗಳು ಮಾತ್ರ ಕಂಡುಬರುತ್ತವೆ. ಇಲ್ಲಿ ಮುಖ್ಯವಾಗಿ ಪದ್ಮಾವತಿ ಅಮ್ಮನವರ ಮೂರ್ತಿ ಇದ್ದ ಈ ಮೂರ್ತಿಗೆ ಸಾಮಾನ್ಯವಾಗಿ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಮೂರ್ತಿಯು ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಈ ಬಸದಿಯಲ್ಲಿ ಅಮ್ಮನವರ ಎದುರುಗಡೆ ಹೂ ಹಾಕಿ ನೋಡುವ ಯಾವುದೇ ಕ್ರಮ ಕೂಡ ಇಲ್ಲ. ಜಿನ ಬಿಂಬಗಳ ಪೀಠದ ಮೇಲೆ ಯಾವುದೇ ಬರವಣಿಗೆ ಇಲ್ಲ.

ಮೂರ್ತಿಗಳು

ಬದಲಾಯಿಸಿ

ಬಸದಿಯಲ್ಲಿ ಮೂಲನಾಯಕ ಶ್ರೀ ಮುನಿಸುವ್ರತ ಸ್ವಾಮಿ ಆರಾಧಿಸಲ್ಪಡುತ್ತಿದ್ದಾರೆ. ಈ ಮೂರ್ತಿಯು ಬಿಳಿ ಶಿಲೆಯಿಂದ ಮಾಡಲ್ಪಟ್ಟಿದೆ. ಮೂರು ಅಡಿ ಎತ್ತರ ಇದ್ದು ಖಡ್ಗಾಸನ ಭಂಗಿಯಲ್ಲಿದೆ. ಇದಕ್ಕೆ ಸುಂದರವಾದ ಮಕರ ತೋರಣದ ಲೋಹದ ಪ್ರಭಾವಳಿ ಇದೆ. ದಿನವೂ ಬಿಂಬಕ್ಕೆ ಕ್ಷೀರಾಭಿಷೇಕ ಪಂಚಾಮೃತ ಅಭಿಷೇಕ, ಜಲಾಭಿಷೇಕ ಇತ್ಯಾದಿಗಳನ್ನು ಮಾಡಲಾಗುತ್ತದೆ. ಸ್ವಾಮಿಗೆ ವಜ್ರಲೇಪನ ಮಾಡಲಾಗಿಲ್ಲ. ಈ ಬಿಂಬವನ್ನು ಹಿಂದಿನ ಮೂಡುಬಿದಿರೆಯ ಮಠಾಧೀಶರೊಬ್ಬರು ಸಾವಿರ ಕಂಬದ ಬಸದಿಯ ಸಿದ್ಧಕೂಟದಿಂದ ನೀಡಿ ಪ್ರತಿಷ್ಟಾಪಿಸಲಾಗಿದೆ ಹೇಳುತ್ತಾರೆ. ಇಲ್ಲಿ ಸ್ವಾಮಿಗೆ ಅಥವಾ ಪದ್ಮಾವತಿ ಅಮ್ಮನವರಿಗೆ ವಿಶೇಷ ಹರಕೆಗಳನ್ನು ಹೇಳಿ ಕಾರ್ಯ ಸಾಧನೆ ಆದಂತು ಘಟನೆಗಳು ಇವೆ. ಶನಿ ಪೀಡೆಗಳು ಪರಿಹರಿಸಿಕೊಳ್ಳುವ ಈ ಸ್ವಾಮಿಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ.[]

ಬಸದಿಯಲ್ಲಿ ದಿನದಲ್ಲಿ ಅಮ್ಮನವರಿಗೆ ಕೇವಲ ಬೆಳಿಗ್ಗೆ ಮಾತ್ರ ಪೂಜೆ ಮಾಡಲಾಗುತ್ತದೆ. ಈ ಬಸದಿಯಲ್ಲಿ ಪ್ರತಿ ಶನಿವಾರದಂದು ವಿಶೇಷ ಪೂಜೆ ನಡೆಯುತ್ತದೆ. ಬಸದಿಯಲ್ಲಿ ದಶಲಕ್ಷಣ ಪರ್ವ ಜೀವದಯಾಷ್ಟಮಿ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡುವುದಿಲ್ಲ. ಬಸದಿಯಲ್ಲಿ ಯಾವುದೇ ಕ್ಷೇತ್ರಪಾಲನ ಸನ್ನಿಧಿ ಇಲ್ಲ. ಬಸದಿಯ ಸುತ್ತಲೂ ಯಾವುದೇ ಪ್ರಕಾರ ಗೋಡೆ ಇಲ್ಲ. ಈ ಬಸದಿಯು ಕೆಂಪು ಕಲ್ಲಿನಿಂದ ನಿರ್ಮತವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ. p. ೧೨೫. {{cite book}}: More than one of |pages= and |page= specified (help)