ಪಾಂಗಾಳ
ಪಾಂಗಾಳ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಗ್ರಾಮ. ಮಂಗಳೂರಿ (ಕುಡ್ಲ) ನಿಂದ ಮುಂಬೈಗೆ (ಬಾಂಬೆ) ಸಂಪರ್ಕಿಸುವ ಭಾರತದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೬ (ಎನ್ ಹೆಚ್ ೬೬) ಈ ಗ್ರಾಮದ ಮೂಲಕ ಹಾದುಹೋಗುತ್ತದೆ. ಈ ಗ್ರಾಮವು ಪಾಂಗಾಳ ನದಿಯ ಉತ್ತರ ದಡದಲ್ಲಿದೆ. ಮಲ್ಲಿಗೆ ಹೂಗಳಿಗೆ ಹೆಸರುವಾಸಿಯಾದ ಶಂಕರಾಪುರ ಗ್ರಾಮವು ಈ ಗ್ರಾಮದ ಸಮೀಪದಲ್ಲಿದೆ. ಪಾಂಗಾಳ ಗ್ರಾಮದಲ್ಲಿ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ವಿಜಯಾ ಬ್ಯಾಂಕಿನ ಶಾಖೆಯೊಂದು ಈ ಗ್ರಾಮದಲ್ಲಿದೆ. ೨೦೦೧ರ ಭಾರತೀಯ ಜನಗಣತಿಯ ಪ್ರಕಾರ, ಪಾಂಗಾಳವು ೪೩೮ ಮನೆಗಳಲ್ಲಿ ೧೯೪೮ (೯೦೩ ಪುರುಷರು, ೧೦೪೫ ಮಹಿಳೆಯರು ಸೇರಿದಂತೆ) ಜನಸಂಖ್ಯೆಯನ್ನು ಹೊಂದಿದೆ. ಪಾಂಗಾಳದಲ್ಲಿ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಪಾಂಗಾಳ ಪೋಸ್ಟ್‌ನ ಪೋಸ್ಟಲ್ ಕೋಡ್ ೫೭೬೧೨೨.[೧]
ಪಾಂಗಾಳವು ಕಾಪು ವಿಧಾನಸಭಾ ಕ್ಷೇತ್ರ ಮತ್ತು ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದೆ.
ಭಾಷೆ
ಬದಲಾಯಿಸಿತುಳು ಇಲ್ಲಿ ಸ್ಥಳೀಯ ಭಾಷೆ. ತುಳು ಹೊರತುಪಡಿಸಿ, ಜನರು ಕನ್ನಡ ಮತ್ತು ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ.
ಧಾರ್ಮಿಕ ಸಂಸ್ಥೆಗಳು
ಬದಲಾಯಿಸಿ- ಹಜರತ್ ಅರಬಿ ವಲಿಯುಲ್ಲಾ ಕೈಪುಂಜಾಲ್
- ಬ್ರಹ್ಮಲಿಂಗೇಶ್ವರ ದೇವಸ್ಥಾನ ಅಲ್ಲಡೆ
- ದಂಡತೀರ್ಥ
- ಕೊತ್ವಾಲ ಗುತ್ತು ನಾಗ ಬನ
- ಪಾಂಗಾಳ ಆಲಡೆ ದೇವಸ್ಥಾನ
ಸಾರಿಗೆ
ಬದಲಾಯಿಸಿಪಡುಬಿದ್ರಿ ರೈಲು ನಿಲ್ದಾಣ ಮತ್ತು ಉಡುಪಿ ರೈಲು ನಿಲ್ದಾಣಗಳು ಪಾಂಗಾಳಕ್ಕೆ ಹತ್ತಿರದ ರೈಲು ನಿಲ್ದಾಣಗಳಾಗಿವೆ.[೨]