ಪವಾಡ ಪುರುಷ ಅಡಿವೆಪ್ಪ ಮಹಾರಾಜರು
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಮನುಷ್ಯನ ಜೀವನ ಸಾರ್ಥಕಕ್ಕೆ ಜ್ಞಾನ, ಭಕ್ತಿ ಅತ್ಯಂತ ಅವಶ್ಯಕ. ಭಕ್ತಿ, ಜ್ಞಾನದ ಮೂಲವೇ ಗುರು. ಅಂತಹ ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು, ನಡೆದಾಡುವ ದೈವವಾ ದವರು ಕಾಮನಕೇರಿ-ಬೂದಿಹಾಳದ ಗುರುಸಿದ್ಧ ಪುರುಷ ಅಡಿವೆಪ್ಪ ಮಹಾರಾಜರು.
ಜನನ
ಬದಲಾಯಿಸಿವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕಾಮನಕೇರಿ-ಬೂದಿಹಾಳ ಗ್ರಾಮದಲ್ಲಿ 1927ರಲ್ಲಿ ಗದಿಗೆಪ್ಪ, ಶಂಕ್ರಮ್ಮ ದಂಪತಿ ಉದರದಲ್ಲಿ ಇವರು ಜನ್ಮ ತಾಳಿದರು.
ಸಾಕ್ಷಾತ್ ದರ್ಶನ
ಬದಲಾಯಿಸಿಬಾಲ್ಯದಲ್ಲಿ ಕುರಿ ಕಾಯುವ ಕಾಯಕದಲ್ಲಿ ತೊಡಗಿದ್ದ (8ನೇ ವಯಸ್ಸಿನಲ್ಲಿ) ಅಜ್ಜರಿಗೆ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಮದಾಳ ಕರಿಸಿದ್ಧನ ಸಾಕ್ಷಾತ್ ದರ್ಶನವಾಗುತ್ತದೆ. ಅಂದಿನಿಂದ ಅವರ ಹಾವಭಾವ ಕೇವಲ ಡೊಳ್ಳು ಬಾರಿಸುವ ರೀತಿಯಲ್ಲಿ ಕುಣಿಯ ತೊಡಗಿದನ್ನು ಕಂಡು, ಮನೆಯವರು ಗಾಬರಿಗೊಳ್ಳುತ್ತಾರೆ. ಆಗ ನಾನು ಕಮದಾಳದ ಕರಿಸಿದ್ಧನಿದ್ದೇನೆ ಎಂದು ನುಡಿಯುತ್ತಾರೆ.
ಕೆಲ ವರ್ಷಗಳ ನಂತರ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಮದಾಳದ ಕರಿದೇವರ ಪಟ್ಟದ ಆಳಾಗಿ ದುಡಿದು, 13 ದಿನದ ಮಗುವನ್ನು ಮಾತನಾಡಿಸಿದ ಸಿದ್ದಪ್ಪ ಮುತ್ಯಾರ ತರುವಾಯ ಮಠಕ್ಕೆ ಯಾರು? ಎಂದು ಭಕ್ತಕೋಟಿ ಕೇಳಿದಾಗ, ಮುಂದೆ ಡೋಣಿ ನಾಡಿನಲ್ಲಿ ಕರಿದೇವರ ಆಳ ಹುಟ್ಟಿ ಬರ್ತೈತಿ. ಅವರ ನಾಮ ಅಡಿವೆಪ್ಪ ಎಂದೈತಿ, ಅವ ಬಂದು ಕೃಷ್ಣೆ ನದಿಯಿಂದ ಭೀಮಾ ನದಿವರೆಗೆ ನಾಡಿನ ಉದ್ದಗಲಕ್ಕ ಮಠ ಬೆಳಿಸ್ತಾನ. ಬಡವನಿಗೆ ಭಾಗ್ಯ, ಬಂಜೆಗೆ ಮಕ್ಕಳು, ಮೂಕರಿಗೆ ಮಾತು, ಅಂಧರಿಗೆ ಕಣ್ಣು ಕೊಡುವ ಶಿವನಾಗಿ ಬರ್ತಾನ ಅಂತ ಹೇಳಿ ಜೀವ ತ್ಯಜಿಸಿದ್ದರು.
ಪ್ರಳಯ
ಬದಲಾಯಿಸಿದೇಶದ ಹಾಗೂ ಜಗತ್ತಿನ ಭವಿಷ್ಯವಾಣಿಯನ್ನು ಪ್ರತಿ ವರ್ಷ ಯುಗಾದಿ ಹಬ್ಬದ ದಿನ ಅಡಿವೆಪ್ಪ ಮಹಾರಾಜರು ನುಡಿಯುತ್ತಾರೆ. ಅವರು ನುಡಿದಂತೆ ಜಗತ್ತು ನಡೆದಿದೆ ಎಂಬುದು ಜನರ ನಂಬಿಕೆ. 9.9.1999ಕ್ಕೆ ಪ್ರಳಯ ಆಗಲಿದೆ ಎಂದು ಕೆಲವರು ಪುಕಾರು ಎಬ್ಬಿಸಿದ್ದರು. ಆಗ ಅಡಿವೆಪ್ಪ ಅಜ್ಜರು ಏನೂ ಆಗುವುದಿಲ್ಲ. ಧನಿಕರು, ರೈತರಿಗೆ ಮಳಿ–ಬೆಳಿ ಚಲೋ ಆಗತೈತಿ ಅಂದಿದ್ದರು. ಅವರು ನುಡಿದಂತೆ ಅವಘಡ ಸಂಭವಿಸಲಿಲ್ಲ.
ದೇವಸ್ಥಾನ
ಬದಲಾಯಿಸಿಸಂಕಷ್ಟ ಹೇಳಿಕೊಂಡು ಬಂದ ಭಕ್ತರಿಗೆ ಪರಿಹಾರ ನೀಡುವ ಜತೆಗೆ ಕಮದಾಳದಲ್ಲಿ ಕರಿಸಿದ್ಧೇಶ್ವರರ ಭವ್ಯವಾದ ದೇವಸ್ಥಾನ ಕಟ್ಟಿಸಿದರು. ನಂತರ ರಾಜ್ಯದಲ್ಲಿಯೇ ಎತ್ತರದ ಮಹಲಗಂಭ (ದೀಪಗಂಭ)ವನ್ನು ಬೀರಕಬ್ಬಿಯಲ್ಲಿ ಸ್ಥಾಪಿಸಿದರು. ಶಿವಣಗಿ, ಕಾಮನಕೇರಿ-ಬೂದಿಹಾಳ, ಇವಣಗಿ, ರಾಮನಹಟ್ಟಿ, ಕೊಪ್ಪ, ಗಿರಿಸಾಗರ ಸೇರಿದಂತೆ ಹತ್ತು ಹಲವು ಗ್ರಾಮಗಳಲ್ಲಿ ಮಸೀದಿ, ಮಂದಿರ ನಿರ್ಮಾಣಕ್ಕೆ ಕಾರಣಿಕರ್ತರಾಗುವ ಮೂಲಕ ಸರ್ವಧರ್ಮದ ಪರಿಪಾಲಕರಾಗಿದ್ದಾರೆ ಅಡಿವೆಪ್ಪ ಮಹಾರಾಜರು.[೧]
ಉಲ್ಲೇಖಗಳು
ಬದಲಾಯಿಸಿ