ಪಲ್ಲಾಸ್ ಎನ್ನುವುದು ನಾಲ್ಕು ಪ್ರಕಾಶತಮ, ಪ್ರಾಯಶಃ ಅತಿದೊಡ್ಡ, ಕ್ಷುದ್ರಗ್ರಹಗಳ ಪೈಕಿ ಒಂದು. ಉಳಿದವು ಅನುಕ್ರಮವಾಗಿ ಸಿರಿಸ್, ಜೂನೋ ಮತ್ತು ವೆಸ್ಟ. ಇದನ್ನು 1802 ಮಾರ್ಚ್ 28 ರಂದು, ಜರ್ಮನಿಯ ಖಗೋಳವಿಜ್ಞಾನಿ ಹೈನ್ರಿಕ್ ಆಲ್ಬರ್ಸ್ (1758-1840) ಆವಿಷ್ಕರಿಸಿದ.

ವಿಎಲ್‍ಟಿ-ಸ್ಫಿಯರ್‌ನಿಂದ ತೆಗೆದ ಪಲ್ಲಾಸ್‍ನ ಚಿತ್ರ

ಈ ಕ್ಷುದ್ರಗ್ರಹವನ್ನು ಕುರಿತ ವೈಜ್ಞಾನಿಕ ಅಂಕೆಅಂಶಗಳು ಹೀಗಿವೆ: ರಾಶಿ 2.6 X 1020 ಕೆಜಿ,[೧] ತ್ರಿಜ್ಯ 240 ಕಿಮೀ, ಆವರ್ತನಾವಧೀ 10 ಗಂಟೆಗಳು, ಪರಿಭ್ರಮಣಾವಧಿ 4.61 ವರ್ಷಗಳು, ಸೂರ್ಯನಿಂದ ಸರಾಸರಿ ದೂರ 2,768 ಖಮಾ, ಕಕ್ಷೆಯ ಉತ್ಕೇಂದ್ರತೆ 0.235, ಕ್ರಾಂತಿವೃತ್ತಕ್ಕೆ ಕಕ್ಷೆಯ ಬಾಗು 34.80, ಪ್ರತಿಫಲನ ಸಾಮರ್ಥ್ಯ 0.13, ಆಲ್ಬೆಡೋ 0.07.

ಉಲ್ಲೇಖಗಳು

ಬದಲಾಯಿಸಿ
  1. Marsset, M, Brož, M, Vernazza, P, et al. (2020). "The violent collisional history of aqueously evolved (2) Pallas" (PDF). Nature Astronomy. 4 (6): 569–576. Bibcode:2020NatAs...4..569M. doi:10.1038/s41550-019-1007-5. hdl:10261/237549. S2CID 212927521.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪಲ್ಲಾಸ್&oldid=1229137" ಇಂದ ಪಡೆಯಲ್ಪಟ್ಟಿದೆ