ಗಂಟೆ (ಕಾಲದ ಏಕಮಾನ)

ಸಮಯದ ಮಾಪನದ ಘಟಕ, ೬೦ ನಿಮಿಷ

ಗಂಟೆಯು ಕಾಲದ ಒಂದು ಏಕಮಾನವಾಗಿದ್ದು ಇದನ್ನು ಒಂದು ದಿನ124 ಭಾಗ ಎಂದು ಸಾಂಪ್ರದಾಯಿಕವಾಗಿ ಲೆಕ್ಕಹಾಕಲಾಗಿದೆ. ಪರಿಸ್ಥಿತಿಗಳನ್ನು ಅವಲಂಬಿಸಿ ವೈಜ್ಞಾನಿಕವಾಗಿ 3,599–3,601 ಸೆಕೆಂಡುಗಳಿಗೆ ಸಮ ಎಂದು ಲೆಕ್ಕಹಾಕಲಾಗಿದೆ.

ಸಾದೃಶ್ಯಕ ಮುಖವಿರುವ ೧೨-ಗಂಟೆಗಳ ಗಡಿಯಾರದಲ್ಲಿ ಮಧ್ಯರಾತ್ರಿಯಿಂದ (ಅಥವಾ ಮಧ್ಯಾಹ್ನ) ೧ ಗಂಟೆಯವರೆಗೆ

ಗಂಟೆಯನ್ನು ಆರಂಭದಲ್ಲಿ ಪ್ರಾಚೀನ ನಿಕಟಪ್ರಾಚ್ಯದಲ್ಲಿ ರಾತ್ರಿ ಅಥವಾ ಹಗಲಿನ ಸಮಯದ 112 ದ ಚರ ಅಳತೆಯಾಗಿ ಸ್ಥಾಪಿಸಲಾಯಿತು. ಅಂತಹ ನಿರ್ದಿಷ್ಟ ಕಾಲದ, ತಾತ್ಕಾಲಿಕ ಅಥವಾ ಅಸಮವಾದ ಗಂಟೆಗಳು ಋತು ಮತ್ತು ಅಕ್ಷಾಂಶ ಬದಲಾದಂತೆ ಬದಲಾಗುತ್ತಿದ್ದವು. ಅಲ್-ಬಿರುನಿ[] ಮತ್ತು ಸ್ಯಾಕ್ರೊಬೊಸ್ಕೊನಂತಹ[] ಮಧ್ಯಯುಗದ ಖಗೋಳಶಾಸ್ತ್ರಜ್ಞರು ತರುವಾಯ ಗಂಟೆಯನ್ನು ೬೦ ನಿಮಿಷಗಳಾಗಿ, ಮತ್ತು ಪ್ರತಿ ನಿಮಿಷವನ್ನು ೬೦ ಸೆಕೆಂಡುಗಳಾಗಿ ವಿಭಜಿಸಿದರು. ಸಮ ಅಥವಾ ಸಮದಿವಾರಾತ್ರಿಯ ಗಂಟೆಗಳನ್ನು ಮಧ್ಯಾಹ್ಯದಿಂದ ಮಧ್ಯಾಹ್ನದವರೆಗೆ ಅಳೆಯಲಾದ ದಿನದ 124 ಭಾಗವೆಂದು ತೆಗೆದುಕೊಳ್ಳಲಾಗಿತ್ತು; ಈ ಏಕಮಾನದ ಅಪ್ರಧಾನ ಋತು ಸಂಬಂಧಿ ಬದಲಾವಣೆಗಳನ್ನು ಕಟ್ಟಕಡೆಗೆ ಗಂಟೆಯನ್ನು ಸರಾಸರಿ ಸೌರದಿನದ 124 ಭಾಗವೆಂದು ಮಾಡಿ ನಯಗೊಳಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ
  1. Al-Biruni (1879) [1000]. The Chronology of Ancient Nations. Translated by Sachau, C. Edward. pp. 147–149.
  2. Nothaft, C. Philipp E. (2018), Scandalous Error: Calendar Reform and Calendrical Astronomy in Medieval Europe, Oxford: Oxford University Press, p. 126, ISBN 9780198799559