ಪಲ್ಪ್ ಫಿಕ್ಷನ್ (ಚಲನಚಿತ್ರ)
ಪಲ್ಪ್ ಫಿಕ್ಷನ್ ೧೯೯೪ರ ಒಂದು ಅಮೇರಿಕನ್[೪] ಅಪರಾಧ ವಿಷಯದ ಚಲನಚಿತ್ರ. ಇದನ್ನು ಕ್ವೆಂಟಿನ್ ಟ್ಯಾರಂಟೀನೊ ಬರೆದು ನಿರ್ದೇಶಿಸಿದ್ದಾರೆ. ಕ್ವೆಂಟಿನ್ ಇದನ್ನು ರೋಜರ್ ಆ್ಯವರಿಯೊಂದಿಗೆ ಕಲ್ಪಿಸಿದರು.[೫] ಜಾನ್ ಟ್ರವೋಲ್ಟಾ, ಸ್ಯಾಮ್ಯುವೆಲ್ ಎಲ್. ಜ್ಯಾಕ್ಸನ್, ಬ್ರೂಸ್ ವಿಲ್ಲೀಸ್, ಟಿಮ್ ರಾತ್, ವಿಂಗ್ ರೇಮ್ಸ್ ಮತ್ತು ಉಮಾ ಥರ್ಮನ್ ನಟಿಸಿರುವ ಈ ಚಿತ್ರವು ಅಪರಾಧಿಕ ಲಾಸ್ ಆಂಜಲೀಸ್‍ನ ಹಲವು ಕಥೆಗಳನ್ನು ಹೇಳುತ್ತದೆ. ಚಿತ್ರದ ಶೀರ್ಷಿಕೆಯು ೨೦ನೇ ಶತಮಾನದ ಮಧ್ಯಭಾಗದಲ್ಲಿ ಜನಪ್ರಿಯವಾಗಿದ್ದ, ಚಿತ್ರಾತ್ಮಕ ಹಿಂಸೆ ಹಾಗೂ ಆಕರ್ಷಕ ಸಂಭಾಷಣೆಗಾಗಿ ಪರಿಚಿತವಾಗಿದ್ದ ಬೂಸಾ ಬರಹದ ನಿಯತಕಾಲಿಕಗಳು ಮತ್ತು ವ್ಯವಹಾರ ದೃಷ್ಟಿಯ ಅಪರಾಧಿಕ ಕಾದಂಬರಿಗಳನ್ನು ಸೂಚಿಸುತ್ತದೆ.
ಪಲ್ಪ್ ಫಿಕ್ಷನ್ | |
---|---|
ನಿರ್ದೇಶನ | ಕ್ವೆಂಟಿನ್ ಟ್ಯಾರಂಟೀನೊ |
ನಿರ್ಮಾಪಕ | ಲಾರೆನ್ಸ್ ಬೆಂಡರ್ |
ಲೇಖಕ | ಕ್ವೆಂಟಿನ್ ಟ್ಯಾರಂಟೀನೊ |
ಕಥೆ |
|
ಪಾತ್ರವರ್ಗ |
|
ಛಾಯಾಗ್ರಹಣ | ಆಂಜ್ರೇಯ್ ಸೆಕ್ಯೂಲಾ |
ಸಂಕಲನ | ಸ್ಯಾಲಿ ಮೆಂಕೆ |
ವಿತರಕರು | ಮಿರಾಮ್ಯಾಕ್ಸ್ ಫಿಲ್ಮ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೭".
|
ಅವಧಿ | 154 ನಿಮಿಷಗಳು[೧] |
ದೇಶ | ಅಮೇರಿಕ ಸಂಯುಕ್ತ ಸಂಸ್ಥಾನ |
ಭಾಷೆ | ಇಂಗ್ಲಿಷ್ |
ಬಂಡವಾಳ | $8–8.5 ಮಿಲಿಯನ್[೨][೩] |
ಬಾಕ್ಸ್ ಆಫೀಸ್ | $213.9 ಮಿಲಿಯನ್[೨] |
ಟ್ಯಾರಂಟೀನೊ ಪಲ್ಪ್ ಫಿಕ್ಷನ್‍ನ್ನು ೧೯೯೨ ಮತ್ತು ೧೯೯೩ರಲ್ಲಿ ಬರೆದರು, ಮತ್ತು ಆ್ಯವರಿ ಮೂಲತಃ ಟ್ರೂ ರೋಮ್ಯಾನ್ಸ್ ಚಿತ್ರಕ್ಕಾಗಿ ಬರೆದ ದೃಶ್ಯಗಳನ್ನು ಸೇರಿಸಿಕೊಂಡರು. ಇದರ ಕಥೆಯು ಕಾಲಾನುಕ್ರಮದಲ್ಲಿ ನಡೆಯುವುದಿಲ್ಲ. ಈ ಚಲನಚಿತ್ರವು ಆರಂಭದ ಕ್ಷಣಗಳಿಂದಲೂ ಸ್ವ ಸೂಚಕವಾಗಿದೆ, ಮತ್ತು "ಪಲ್ಪ್" ಶಬ್ದದ ಎರಡು ನಿಘಂಟು ವ್ಯಾಖ್ಯಾನಗಳನ್ನು ಕೊಡುವ ಒಳಶೀರ್ಷಿಕೆಯೊಂದಿಗೆ ಆರಂಭವಾಗುತ್ತದೆ. ಗಣನೀಯ ಪ್ರಮಾಣದ ಪರದೆ ಸಮಯವನ್ನು ಸ್ವಗತಗಳು ಹಾಗೂ ಅನುದ್ದೇಶಿತ ಸಂಭಾಷಣೆಗಳಿಗೆ ಮೀಸಲಿಡಲಾಗಿದೆ. ಸಾರಸಂಗ್ರಹಿ ಸಂಭಾಷಣೆಯು ಹಲವು ವಿಷಯಗಳ ಬಗ್ಗೆ ಪ್ರತಿ ಪಾತ್ರದ ದೃಷ್ಟಿಕೋನಗಳನ್ನು ಬಹಿರಂಗಗೊಳಿಸುತ್ತದೆ, ಮತ್ತು ಚಿತ್ರವು ಹಾಸ್ಯ ಹಾಗೂ ಪ್ರಬಲ ಹಿಂಸೆಯ ವ್ಯಂಗ್ಯಾತ್ಮಕ ಸಂಯೋಜನೆಯನ್ನು ಹೊಂದಿದೆ. ಇದು ಮಿರಾಮ್ಯಾಕ್ಸ್ ಸಂಪೂರ್ಣವಾಗಿ ಬಂಡವಾಳ ಒದಗಿಸಿದ ಮೊದಲ ಚಿತ್ರವಾಗಿತ್ತು.
೧೯೯೪ರ ಕಾನ್ ಚಲನಚಿತ್ರೋತ್ಸವದಲ್ಲಿ ಪಲ್ಪ್ ಫಿಕ್ಷನ್ ಪಾಲ್ಮ್ ಡೋರ್ ಪ್ರಶಸ್ತಿಯನ್ನು ಗೆದ್ದಿತು, ಮತ್ತು ಪ್ರಮುಖ ವಿಮರ್ಶಾತ್ಮಕ ಹಾಗೂ ವಾಣಿಜ್ಯಿಕ ಯಶಸ್ಸೆನಿಸಿಕೊಂಡಿತು. ೬೭ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಇದು ಅತ್ಯುತ್ತಮ ಚಲನಚಿತ್ರ ಸೇರಿದಂತೆ ಏಳು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು ಮತ್ತು ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿ ಗೆದ್ದಿತು; ಇದು ಟ್ರವೋಲ್ಟಾ, ಜ್ಯಾಕ್ಸನ್ ಹಾಗೂ ಥರ್ಮನ್‍ರಿಗೆ ಅಕ್ಯಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಗಳಿಸಿಕೊಟ್ಟಿತು ಮತ್ತು ಅವರ ವೃತ್ತಿಗಳನ್ನು ವರ್ಧಿಸಿತು. ಇದರ ತಯಾರಿಕೆ, ಮಾರಾಟಗಾರಿಕೆ, ವಿತರಣೆ ಹಾಗೂ ಲಾಭದಾಯಕತೆಯು ಸ್ವತಂತ್ರ ಸಿನೆಮಾದ ಮೇಲೆ ವ್ಯಾಪಕ ಪ್ರಭಾವ ಬೀರಿತು.
ಪಲ್ಪ್ ಫಿಕ್ಷನ್ ಟ್ಯಾರಂಟೀನೊರ ಮೇರುಕೃತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ, ಮತ್ತು ಇದರ ಚಿತ್ರಕಥೆಯನ್ನು ವಿಶೇಷವಾಗಿ ಪ್ರಶಂಸಿಸಲಾಗಿದೆ.[೬] ಚಿತ್ರದ ಆತ್ಮಾರ್ಥಕತೆ, ಅಸಾಂಪ್ರದಾಯಿಕ ರಚನೆ ಮತ್ತು ವ್ಯಾಪಕ ಗೌರವಾರ್ಪಣೆ ಹಾಗೂ ಅನುಕರಣದ ಕಾರಣ ವಿಮರ್ಶಕರು ಇದನ್ನು ಆಧುನಿಕೋತ್ತರ ಚಲನಚಿತ್ರದ ಒರೆಗಲ್ಲೆಂದು ವರ್ಣಿಸಿದ್ದಾರೆ. ಇದನ್ನು ಹಲವುವೇಳೆ ಸಾಂಸ್ಕೃತಿಕ ಕವಲುಗೆರೆಯೆಂದು ಪರಿಗಣಿಸಲಾಗಿದೆ, ಮತ್ತು ಇದು ಇದರ ಶೈಲಿಯ ಅಂಶಗಳನ್ನು ಅಳವಡಿಸಿಕೊಂಡ ಚಲನಚಿತ್ರಗಳು ಮತ್ತು ಇತರ ಮಾಧ್ಯಮಗಳ ಮೇಲೆ ಪ್ರಭಾವ ಬೀರಿದೆ. ಇದು ಅನೇಕ ವಿಮರ್ಶಕರ ಸಾರ್ವಕಾಲಿಕ ಶ್ರೇಷ್ಠ ಚಲನಚಿತ್ರಗಳ ಪಟ್ಟಿಗಳಲ್ಲಿ ಕಾಣಿಸಿಕೊಂಡಿದೆ. ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಅಥವಾ ಸೌಂದರ್ಯತ್ಮಕವಾಗಿ ಮಹತ್ವದ್ದೆಂದು, ೨೦೧೩ರಲ್ಲಿ, ಕಾಂಗ್ರೆಸ್ ಗ್ರಂಥಾಲಯವು ಅಮೇರಿಕದ ರಾಷ್ಟ್ರೀಯ ಚಲನಚಿತ್ರ ನೋಂದಣಿ ಕಚೇರಿಯಲ್ಲಿ ಸಂರಕ್ಷಣೆಗಾಗಿ ಪಲ್ಪ್ ಫಿಕ್ಷನ್ನ್ನು ಆಯ್ಕೆಮಾಡಿತು.[೭]
ಕಥಾವಸ್ತು
ಬದಲಾಯಿಸಿನಿರೂಪಣಾ ರಚನೆ
ಬದಲಾಯಿಸಿಪಲ್ಪ್ ಫಿಕ್ಷನ್ನ ಕಥೆಯನ್ನು ಕಾಲಾನುಸಾರವಾದ ಕ್ರಮದಲ್ಲಿ ಹೇಳಲಾಗಿದೆ ಮತ್ತು ಮೂರು ಮುಖ್ಯ ಪರಸ್ಪರ ಸಂಬಂಧಿಸಿದ ಕಥೆಗಳನ್ನು ಅನುಸರಿಸುತ್ತದೆ: ಮಾಬ್ ಬಾಡಿಗೆ ಹಂತಕ ವಿನ್ಸೆಂಟ್ ವೇಗಾ ಮೊದಲ ಕಥೆಯ ನಾಯಕನಾಗಿದ್ದಾನೆ, ಮುಷ್ಟಿಯುದ್ಧಗಾರ ಬುಚ್ ಕೂಲಿಜ್ ಎರಡನೇ ಕಥೆಯ ನಾಯಕನಾಗಿದ್ದಾನೆ, ಮತ್ತು ವಿನ್ಸೆಂಟ್‍ನ ಜೊತೆಗಾರ ಜೂಲ್ಸ್ ವಿನ್‍ಫೀಲ್ಡ್ ಮೂರನೇಯದರ ನಾಯಕನಾಗಿದ್ದಾನೆ.
ಚಿತ್ರವು ಉಪಾಹಾರ ಗೃಹದಲ್ಲಿ ಒಬ್ಬ ದಂಪತಿಯು ಆಗಗೊಳಿಸಿದ ದರೋಡೆಯಿಂದ ಆರಂಭಗೊಳ್ಳುತ್ತದೆ. ನಂತರ ವಿನ್ಸೆಂಟ್, ಜೂಲ್ಸ್ ಹಾಗೂ ಬುಚ್‍ರ ಕಥೆಗಳಿಗೆ ಮುಂದುವರಿಯುತ್ತಾದೆ. ಒಟ್ಟು ಏಳು ನಿರೂಪಣಾ ದೃಶ್ಯಭಾಗಗಳಿವೆ; ಮೂರು ಮುಖ್ಯ ಕಥಾಹಂದರಗಳ ಮೊದಲು ಪಠ್ಯದ ತುಣುಕುಗಳು ಬರುತ್ತವೆ:
- "ಪೀಠಿಕೆ – ಉಪಾಹಾರ ಗೃಹ" (i)
- "ವಿನ್ಸೆಂಟ್ ವೇಗಾ ಮತ್ತು ಮಾರ್ಸೆಲಸ್ ವಾಲೇಸ್‍ನ ಹೆಂಡತಿ"ಯ ಮುನ್ನುಡಿ
- "ವಿನ್ಸೆಂಟ್ ವೇಗಾ ಮತ್ತು ಮಾರ್ಸೆಲಸ್ ವಾಲೇಸ್‍ನ ಹೆಂಡತಿ"
- "ದ ಗೋಲ್ಡ್ ವಾಚ್"ಗೆ ಮುನ್ನುಡಿ
- "ದ ಗೋಲ್ಡ್ ವಾಚ್"
- "ದ ಬಾನಿ ಸಿಚುವೇಶನ್"
- "ಹಿನ್ನುಡಿ – ಉಪಾಹಾರ ಗೃಹ" (ii)
ಸಾರಾಂಶ
ಬದಲಾಯಿಸಿಬಾಡಿಗೆ ಹಂತಕರಾದ ಜೂಲ್ಸ್ ವಿನ್‍ಫೀಲ್ಡ್ ಮತ್ತು ವಿನ್ಸೆಂಟ್ ವೇಗಾ ವ್ಯವಹಾರ ಜೊತೆಗಾರನಾದ ಬ್ರೆಟ್‍ನಿಂದ ತಮ್ಮ ಒಡೆಯ, ಅಪರಾಧಿ ತಂಡದವನಾದ ಮಾರ್ಸೆಲಸ್ ವಾಲೇಸ್‍ಗಾಗಿ ಒಂದು ಬ್ರೀಫ಼್‍ಕೇಸ್ ಪಡೆಯಲು ಒಂದು ಅಪಾರ್ಟ್‌ಮಂಟ್‍ಗೆ ಆಗಮಿಸುತ್ತಾರೆ. ವಿನ್ಸೆಂಟ್ ಬ್ರೀಫ಼್‍ಕೇಸ್‍ನ ಒಳವಸ್ತುಗಳನ್ನು ತಪಾಸಣೆ ಮಾಡಿದ ನಂತರ, ಜೂಲ್ಸ್ ಬ್ರೆಟ್‍ನ ಒಬ್ಬ ಸಹವರ್ತಿಗೆ ಗುಂಡು ಹೊಡೆದು, ನಂತರ ಬೈಬಲ್‍ನ ಒಂದು ಭಾಗವನ್ನು ನುಡಿಯುತ್ತಾನೆ ಮತ್ತು ಮಾರ್ಸೆಲಸ್‍ನನ್ನು ವಂಚಿಸಿದ್ದಕ್ಕಾಗಿ ಅವನು ಹಾಗೂ ವಿನ್ಸೆಂಟ್ ಬ್ರೆಟ್‍ನನ್ನು ಸಾಯಿಸುತ್ತಾರೆ. ಅವರು ಬ್ರೀಫ಼್‍ಕೇಸ್‍ನ್ನು ಮಾರ್ಸೆಲಸ್ ಬಳಿ ಒಯ್ಯುತ್ತಾರೆ, ಆದರೆ ಅವನು ತನ್ನ ಮುಂಬರುವ ಪಂದ್ಯದಲ್ಲಿ ಉದ್ದೇಶಪೂರ್ವಕವಾಗಿ ಸೋಲುವಂತೆ ಚ್ಯಾಂಪಿಯನ್ ಬಾಕ್ಸರ್ ಬುಚ್ ಕೂಲಿಜ್‍ನ ಮನವೊಲಿಸುತ್ತಿರುವಾಗ ಕಾಯಬೇಕಾಗುತ್ತದೆ.
ಮುಂದಿನ ದಿನ, ವಿನ್ಸೆಂಟ್ ತನ್ನ ಮಾದಕವಸ್ತು ವ್ಯಾಪಾರಿ ಲಾನ್ಸ್‌ನಿಂದ ಹೆರೋಯಿನ್‍ನ್ನು ಖರೀದಿಸುತ್ತಾನೆ. ಸೂಜಿಮದ್ದಿನಿಂದ ಮಾದಕವಸ್ತುವನ್ನು ಚುಚ್ಚಿಕೊಂಡ ಮೇಲೆ, ಮಾರ್ಸೆಲಸ್ ಊರಿನ ಹೊರಗೆ ಹೋದಾಗ ಮಿಯಾಳ ಜೊತೆಹೋಗಲು ಒಪ್ಪಿಕೊಂಡಂತೆ ಮಾರ್ಸೆಲಸ್‍ನ ಹೆಂಡತಿ ಮಿಯಾಳನ್ನು ಭೇಟಿಯಾಗಲು ಹೋಗುತ್ತಾನೆ. ಅವರು ೧೯೫೦ರ ವಿಷಯವಸ್ತುವುಳ್ಳ ರೆಸ್ಟೊರೆಂಟ್‍ನಲ್ಲಿ ತಿನ್ನುತ್ತಾರೆ ಮತ್ತು ಟ್ವಿಸ್ಟ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಮತ್ತು ಟ್ರೋಫಿಯೊಂದಿಗೆ ಮನೆಗೆ ಮರಳುತ್ತಾರೆ. ವಿನ್ಸೆಂಟ್ ಶೌಚಾಲಯದಲ್ಲಿರುವಾಗ, ಮಿಯಾಗೆ ಅವನ ಹೆರೋಯಿನ್ ದೊರಕಿ ಅದನ್ನು ಕೊಕೇನ್ ಎಂದು ತಪ್ಪಾಗಿ ತಿಳಿದು ಮೂಗಿನಿಂದ ಒಳಗೆಳೆದುಕೊಂಡು ಅದು ಮಿತಿಮೀರಿಬಿಡುತ್ತದೆ. ವಿನ್ಸೆಂಟ್ ಬೇಗನೇ ಅವಳನ್ನು ಲಾನ್ಸ್‌ನ ಮನೆಗೆ ಕರೆದೊಯ್ಯುತ್ತಾನೆ ಮತ್ತು ಅಲ್ಲಿ ಅವರು ಅವಳ ಹೃದಯಕ್ಕೆ ಅಡ್ರೆನಲಿನ್ ಔಷಧಿಯನ್ನು ಒಳಚುಚ್ಚಿ ಅವಳನ್ನು ಉಳಿಸಿಕೊಳ್ಳುತ್ತಾರೆ.
ಬುಚ್ ತನ್ನ ಎದುರಾಳಿಯನ್ನು ಆಕಸ್ಮಿಕವಾಗಿ ಸಾಯಿಸಿ, ಮಾರ್ಸೆಲಸ್‍ಗೆ ದ್ರೋಹ ಮಾಡಿ ಪಂದ್ಯವನ್ನು ಗೆಲ್ಲುತ್ತಾನೆ. ಅವನು ಮತ್ತು ಅವನ ಗೆಳತಿ ಫ಼ಾಬಿಯೇನ್ ಅಡಗಿಕೊಂಡು ಓಡಿಹೋಗಲು ಸಿದ್ಧವಾಗುತ್ತಿರುವ ಮೋಟೆಲ್‍ನಲ್ಲಿ, ಅವಳು ತನ್ನ ಅಚ್ಚುಮೆಚ್ಚಿನ ಕುಲಸ್ವತ್ತಾದ ತನ್ನ ತಂದೆಯ ಚಿನ್ನದ ಕೈಗಡಿಯಾರವನ್ನು ಪ್ಯಾಕ್ ಮಾಡಲು ಮರೆತಿದ್ದಾಳೆಂದು ತಿಳಿಯುತ್ತದೆ ಮತ್ತು ಬಹಳ ಸಿಟ್ಟಾಗುತ್ತಾನೆ. ಕೈಗಡಿಯಾರವನ್ನು ಪಡೆಯಲು ತನ್ನ ಅಪಾರ್ಟ್‌ಮಂಟ್‍ಗೆ ಮರಳಿದಾಗ, ಅವನು ಅಡಿಗೆಮನೆಯ ಕಟ್ಟೆಯ ಮೇಲೆ ಸೈಲೆನ್ಸರ್ ಇರುವ ಮ್ಯಾಕ್-೧೦ನ್ನು ಗಮನಿಸುತ್ತಾನೆ ಮತ್ತು ಶೌಚಾಲಯದಲ್ಲಿ ಫ಼್ಲಶ್ ಆಗಿದ್ದನ್ನು ಕೇಳಿಸಿಕೊಳ್ಳುತ್ತಾನೆ. ವಿನ್ಸೆಂಟ್ ಶೌಚಾಲಯದಿಂದ ಹೊರಬಂದಾಗ ಬುಚ್ ಅವನನ್ನು ಗುಂಡಿಕ್ಕಿ ಸಾಯಿಸುತ್ತಾನೆ ಮತ್ತು ಬಂದೂಕನ್ನು ಒಳಗೆ ಬಿಡುತ್ತಾನೆ.
ತನ್ನ ಕಾರ್‌ನಲ್ಲಿ ಸಂಚಾರಿ ದೀಪಸ್ಥಳದಲ್ಲಿ ಬುಚ್ ಕಾಯುತ್ತಿರುವಾಗ, ರಸ್ತೆ ದಾಟುತ್ತಿರುವ ಮಾರ್ಸೆಲಸ್ ಆಕಸ್ಮಿಕವಾಗಿ ಅವನನ್ನು ನೋಡುತ್ತಾನೆ ಮತ್ತು ಅವನನ್ನು ಗಿರವಿ ಅಂಗಡಿಯೊಳಗೆ ಅವನನ್ನು ಹಿಂಬಾಲಿಸುತ್ತಾನೆ. ಅದರ ಮಾಲೀಕ ಮೇನರ್ಡ್ ಬಂದೂಕು ತೋರಿಸಿ ಅವರನ್ನು ಸೆರೆಹಿಡಿದು ತಳಮನೆಯಲ್ಲಿ ಕಟ್ಟಿ ಹಾಕುತ್ತಾನೆ. ಮೇನರ್ಡ್‌ನ ಜೊತೆಗೆ ಭದ್ರತಾ ಪಾಲಕನಾದ ಜ಼ೆಡ್ ಸೇರಿ ಮಾರ್ಸೆಲಸ್‍ನನ್ನು ಇನ್ನೊಂದು ಕೊಣೆಗೆ ಕರೆದೊಯ್ದು ಅವನ ಮೇಲೆ ಅತ್ಯಾಚಾರ ಮಾಡುತ್ತಾರೆ ಮತ್ತು ಬುಚ್‍ನನ್ನು ಕಾಯಲು ದಾಸ್ಯದ ಉಡುಪಿನಲ್ಲಿರುವ ಮೂಕ ವ್ಯಕ್ತಿ ಜಿಂಪ್‍ನನ್ನು ಬಿಡುತ್ತಾರೆ. ಬುಚ್ ಕಟ್ಟು ಬಿಡಿಸಿಕೊಂಡು ಜಿಂಪ್‍ನನ್ನು ಹೊಡೆದು ನಿಶ್ಚೇತಗೊಳಿಸುತ್ತಾನೆ. ಅವನು ಇನ್ನೇನು ಓಡಿಹೋಗುವುದರಲ್ಲಿರುತ್ತಾನೆ ಆದರೆ ಮಾರ್ಸೆಲಸ್‍ನನ್ನು ಕಾಪಾಡಲು ನಿರ್ಧರಿಸಿ, ಗಿರವಿ ಅಂಗಡಿಯಿಂದ ಕಟಾನಾದೊಂದಿಗೆ ಮರಳುತ್ತಾನೆ. ಅವನು ಮೇನರ್ಡ್‌ನನ್ನು ಸಾಯಿಸುತ್ತಾನೆ; ಮಾರ್ಸೆಲಸ್ ಮೇನರ್ಡ್‌ನ ಬಂದೂಕನ್ನು ಪಡೆದು ಜ಼ೆಡ್‍ಗೆ ಗುಂಡು ಹೊಡೆಯುತ್ತಾನೆ. ಅವನು ಯಾರಿಗೂ ಅತ್ಯಾಚಾರದ ಬಗ್ಗೆ ಹೇಳದಿದ್ದರೆ ಮತ್ತು ಲಾಸ್ ಏಂಜಲೀಸ್‍ನ್ನು ಶಾಶ್ವತವಾಗಿ ತೊರೆದು ಹೋದರೆ ಅವರಿಬ್ಬರ ನಡುವೆ ಯಾವುದೇ ಋಣವಿರುವುದಿಲ್ಲ ಎಂದು ಮಾರ್ಸೆಲಸ್ ಬುಚ್‍ಗೆ ಹೇಳುತ್ತಾನೆ. ಬುಚ್ ಜ಼ೆಡ್‍ನ ಮೋಟರ್‌ಸೈಕಲ್ ಮೇಲೆ ಫ಼ಾಬಿಯೆನ್‍ಳನ್ನು ಕೂಡಿಸಿಕೊಂಡು ಹೊರಟು ಹೋಗುತ್ತಾನೆ.
ಸ್ವಲ್ಪ ಮುಂಚೆ, ವಿನ್ಸೆಂಟ್ ಮತ್ತು ಜೂಲ್ಸ್ ಬ್ರೆಟ್‍ನನ್ನು ಅವನ ಅಪಾರ್ಟ್‌ಮಂಟ್‍ನಲ್ಲಿ ಸಾಯಿಸಿದ ಮೇಲೆ, ಶೌಚಾಲಯದಿಂದ ಮತ್ತೊಬ್ಬನು ರಭಸದಿಂದ ಹೊರಬಂದು ಅವರ ಮೇಲೆ ಹುಚ್ಚುಚ್ಚಾಗಿ ಗುಂಡು ಹಾರಿಸುತ್ತಾನೆ, ಮತ್ತು ಪ್ರತಿ ಬಾರಿಯೂ ಗುರಿ ತಪ್ಪುತ್ತಾನೆ; ಜೂಲ್ಸ್ ಮತ್ತು ವಿನ್ಸೆಂಟ್ ಅವನನ್ನು ಸಾಯಿಸುತ್ತಾರೆ. ಅವರು ಬದುಕಿರುವುದು ಒಂದು ಪವಾಡ ಎಂದು ಜೂಲ್ಸ್ ತಿಳಿಸುತ್ತಾನೆ, ಆದರೆ ವಿನ್ಸೆಂಟ್ ಒಪ್ಪುವುದಿಲ್ಲ. ಜೂಲ್ಸ್ ಚಾಲನೆ ಮಾಡುವಾಗ, ವಿನ್ಸೆಂಟ್ ಬ್ರೆಟ್‍ನ ಸಹವರ್ತಿ ಮಾರ್ವಿನ್ ತಲೆಗೆ ಆಕಸ್ಮಿಕವಾಗಿ ಗುಂಡು ಹಾರಿಸುತ್ತಾನೆ. ಅವರು ಕಾರನ್ನು ಜೂಲ್ಸ್‌ನ ಸ್ನೇಹಿತ ಜಿಮಿಯ ಮನೆಯಲ್ಲಿ ಅಡಗಿಸಿಡುತ್ತಾರೆ, ಮತ್ತು ಆ ಸ್ನೇಹಿತನು ತನ್ನ ಹೆಂಡತಿ ಮನೆಗೆ ಬರುವಷ್ಟರಲ್ಲಿ ಸಮಸ್ಯೆಯನ್ನು ನಿಭಾಯಿಸಬೇಕೆಂದು ಬೇಡಿಕೆಯಿಡುತ್ತಾನೆ. ಮಾರ್ಸೆಲಸ್ ತನ್ನ ಫಿಕ್ಸರ್ ವಿನ್‍ಸ್ಟನ್ ವುಲ್ಫ್‌ನನ್ನು ಕಳಿಸುತ್ತಾನೆ. ಜೂಲ್ಸ್ ಮತ್ತು ವಿನ್ಸೆಂಟ್ ಕಾರನ್ನು ಸ್ವಚ್ಛಗೊಳಿಸಿ, ಶವವನ್ನು ಪೆಟ್ಟಿಗೆಯಲ್ಲಿ ಅಡಗಿಸಿ, ತಮ್ಮ ರಕ್ತಮಯವಾದ ಬಟ್ಟೆಗಳನ್ನು ಎಸೆದು, ಕಾರನ್ನು ಕಳಪೆ ವಸ್ತುಗಳ ಕೇಂದ್ರಕ್ಕೆ ಒಯ್ಯಬೇಕು ಎಂದು ಅವನು ನಿರ್ದೇಶಿಸುತ್ತಾನೆ.
ಒಂದು ಉಪಾಹಾರ ಕೇಂದ್ರದಲ್ಲಿ, ಅಪಾರ್ಟ್‌ಮಂಟ್‌ನಲ್ಲಿ ತಮ್ಮ ಪವಾಡಸದೃಶ ಬದುಕುಳಿದಿರುವಿಕೆಯು ದೈವಿಕ ಹಸ್ತಕ್ಷೇಪದ ಸಂಕೇತವಾಗಿತ್ತು ಎಂದು ಮನವರಿಕೆಯಾಗಿ ತಾನು ತನ್ನ ಅಪರಾಧದ ಜೀವನದಿಂದ ನಿವೃತ್ತನಾಗಬೇಕೆಂದುಕೊಂಡಿದ್ದೇನೆ ಎಂದು ಜೂಲ್ಸ್ ವಿನ್ಸೆಂಟ್‍ಗೆ ಹೇಳುತ್ತಾನೆ. ವಿನ್ಸೆಂಟ್ ಶೌಚಾಲಯದಲ್ಲಿರುವಾಗ, "ಪಂಪ್ಕಿನ್" ಮತ್ತು "ಹನಿ ಬನಿ" ಎಂಬ ಅಡ್ಡಹೆಸರಿನ ದಂಪತಿ ರೆಸ್ಟೊರೆಂಟ್‌ನ್ನು ದರೋಡೆಮಾಡುತ್ತಾರೆ. ಜೂಲ್ಸ್ ಪಂಪ್ಕಿನ್‍ನನ್ನು ವಶಪಡಿಸಿಕೊಂಡು ಅವನಿಗೆ ಬಂದೂಕು ತೋರಿಸಿ ಹಿಡಿದಿಡುತ್ತಾನೆ; ಹನಿ ಬನಿ ಉನ್ಮಾದಗೊಂಡು ತನ್ನ ಬಂದೂಕನ್ನು ಅವನೆಡೆ ಗುರಿಯಿಡುತ್ತಾಳೆ. ವಿನ್ಸೆಂಟ್ ಮರಳಿಬಂದು ತನ್ನ ಬಂದೂಕನ್ನು ಅವಳಿಗೆ ಗುರುಯಿಡುತ್ತಾನೆ. ಜೂಲ್ಸ್ ಬೈಬಲ್‍ನ ಭಾಗವನ್ನು ಪಠಿಸಿ, ತನ ಅಪರಾಧದ ಜೀವನದ ಬಗ್ಗೆ ಉಭಯಭಾವವನ್ನು ವ್ಯಕ್ತಪಡಿಸಿ, ಆ ಕಳ್ಳರಿಗೆ ತನ್ನ ಹಣವನ್ನು ತೆಗೆದುಕೊಂಡು ಹೋಗಲು ಬಿಡುತ್ತಾನೆ. ಜೂಲ್ಸ್ ಮತ್ತು ವಿನ್ಸೆಂಟ್ ಬ್ರೀಫ಼್‍ಕೇಸ್‍ನೊಂದಿಗೆ ಉಪಾಹಾರ ಗೃಹದಿಂದ ಹೊರಡುತ್ತಾರೆ.
ಪಾತ್ರವರ್ಗ
ಬದಲಾಯಿಸಿ- ವಿನ್ಸೆಂಟ್ ವೇಗಾ ಆಗಿ ಜಾನ್ ಟ್ರವೋಲ್ಟಾ
- ಜೂಲ್ಸ್ ವಿನ್‍ಫೀಲ್ಡ್ ಆಗಿ ಸ್ಯಾಮ್ಯುಯೆಲ್ ಎಲ್. ಜ್ಯಾಕ್ಸನ್
- ಮಿಯಾ ವಾಲೇಸ್ ಆಗಿ ಉಮಾ ಥರ್ಮನ್
- ವಿನ್‍ಸ್ಟನ್ ವುಲ್ಫ್ ಆಗಿ ಹಾರ್ವಿ ಕೈಟಲ್
- ರಿಂಗೊ/"ಪಂಪ್ಕಿನ್" ಆಗಿ ಟಿಮ್ ರಾತ್
- ಯೊಲಾಂಡಾ/"ಹನಿ ಬನಿ" ಆಗಿ ಅಮ್ಯಾಂಡಾ ಪ್ಲಮರ್
- ಫ಼ಾಬಿಯೆನ್ ಆಗಿ ಮೆರಿಯಾ ಡ ಮಡೈರೋಸ್
- ಮಾರ್ಸೆಲಸ್ ವಾಲೇಸ್ ಆಗಿ ವಿಂಗ್ ರೇಮ್ಸ್
- ಲಾನ್ಸ್ ಆಗಿ ಎರಿಕ್ ಸ್ಟೋಲ್ಟ್ಝ್
- ಜೋಡಿ ಆಗಿ ರೊಸಾನಾ ಆರ್ಕೆಟ್
- ಕ್ಯಾಪ್ಟನ್ ಕೂನ್ಸ್ ಆಗಿ ಕ್ರಿಸ್ಟಫ಼ರ್ ವಾಕೆನ್
- ಬುಚ್ ಕೂಲಿಜ್ ಆಗಿ ಬ್ರೂಸ್ ವಿಲ್ಲೀಸ್
ತಯಾರಿಕೆ
ಬದಲಾಯಿಸಿಬರವಣಿಗೆ
ಬದಲಾಯಿಸಿರೋಜರ್ ಆ್ಯವರಿ ೧೯೯೦ರ ಶರತ್ಕಾಲದಲ್ಲಿ ಮುಂದೆ ಪಲ್ಪ್ ಫಿಕ್ಷನ್‍ನ ಚಿತ್ರಕಥೆಯಾದ ವಸ್ತುವನ್ನು ಬರೆಯಲು ಆರಂಭಿಸಿದರು:
ಟ್ಯಾರಂಟೀನೊ ಪಲ್ಪ್ ಫಿಕ್ಷನ್‍ನ ಕಥೆಯ ಮೇಲೆ ಕೆಲಸಮಾಡಲು ಮಾರ್ಚ್ ೧೯೯೨ರಲ್ಲಿ ಆ್ಯಮ್‍ಸ್ಟರ್ಡ್ಯಾಮ್‍ನಲ್ಲಿ ಶುರುಮಾಡಿದರು.[೮] ಅಲ್ಲಿ ಅವರನ್ನು ಆ್ಯವರಿ ಜೊತೆಗೂಡಿದರು ಮತ್ತು ಯೋಜನೆಗೆ ಒಂದು ಭಾಗವನ್ನು ಕೊಡುಗೆ ನೀಡಿದರು ಮತ್ತು ಅದರ ಪುನರ್ಲೇಖನದಲ್ಲಿ ಹಾಗೂ ಅದರ ಜೊತೆಗೆ ಜೋಡಣೆಯಾಗುವ ಹೊಸ ಕಥಾಹಂದರಗಳ ಅಭಿವೃದ್ಧಿಯಲ್ಲಿ ಭಾಗವಹಿಸಿದರು. ಜನವರಿ ೧೯೯೩ರಲ್ಲಿ, ಪಲ್ಪ್ ಫಿಕ್ಷನ್‍ನ ಚಿತ್ರಕಥೆಯು ಮುಗಿದಿತ್ತು.
ಬಂಡವಾಳ
ಬದಲಾಯಿಸಿತಮ್ಮ ನಿರ್ಮಾಪಕರ ಜೊತೆಗೂಡಿ ಟ್ಯಾರಂಟೀನೊ ಚಿತ್ರಕಥೆಯನ್ನು ಜರ್ಸಿ ಫಿಲ್ಮ್‌ಗೆ ತಂದರು. ಅಂತಿಮವಾಗಿ ಸುಮಾರು $1 ಮಿಲಿಯನ್ ಮೌಲ್ಯದ ಒಂದು ತಯಾರಿಕಾ ಒಪ್ಪಂದವನ್ನು ಮಾಡಿಕೊಳ್ಳಲಾಯಿತು: ಈ ಒಪ್ಪಂದವು ಟ್ಯಾರಂಟೀನೊರ ಹೊಸದಾಗಿ ರಚಿತವಾದ ನಿರ್ಮಾಣ ಸಂಸ್ಥೆಗೆ ಆರಂಭಿಕ ಬಂಡವಾಳ ಮತ್ತು ಕಚೇರಿ ಸೌಕರ್ಯಗಳನ್ನು ಒದಗಿಸಿತು. ಜರ್ಸಿ ಕೊಲಂಬಿಯಾ ಟ್ರೈಸ್ಟಾರ್‌ದೊಂದಿಗೆ ವಿತರಣಾ ಒಪ್ಪಂದ ಮಾಡಿಕೊಂಡಿತು. ಆದರೆ ಜೂನ್‍ನಲ್ಲಿ, ಈ ನಿರ್ಮಾಣಶಾಲೆಯು ತನ್ನ ನಿರ್ಧಾರವನ್ನು ಬದಲಾಯಿಸಿತು. ಮಾದಕವಸ್ತು ಬಳಕೆಯ ದೃಶ್ಯಗಳ ಕಾರಣ ಚಿತ್ರವನ್ನು ನಿರ್ಮಿಸಲು ನಿರ್ಮಾಣಶಾಲೆಯು ಪ್ರತಿರೋಧ ತೋರುತ್ತಿತ್ತು.
ಚಿತ್ರಕಥೆಯನ್ನು ಮಿರಾಮ್ಯಾಕ್ಸ್‌ಗೆ ತಂದಾಗ ಈ ನಿರ್ಮಾಣಶಾಲೆಯು ನಿರ್ಮಾಣ ಮಾಡಲು ಒಪ್ಪಿಕೊಂಡಿತು. $8.5 ಮಿಲಯನ್‍ನಷ್ಟು ಬಂಡವಾಳ ಒದಗಿಸಲಾಯಿತು. ಇದು ಮಿರಾಮ್ಯಾಕ್ಸ್ ಸಂಪೂರ್ಣವಾಗಿ ಹಣ ಒದಗಿಸಿದ ಮೊದಲ ಚಲನಚಿತ್ರವಾಗಿತ್ತು. ಈ ಯೋಜನೆಗಾಗಿ ಸೇರಿಸಿಕೊಳ್ಳಲಾದ ಅತಿ ದೊಡ್ಡ ತಾರೆಯೆಂದರೆ ಬ್ರೂಸ್ ವಿಲ್ಲೀಸ್. ಅವನ ಹೆಸರನ್ನು ಬಳಸಿಕೊಂಡು, ಮಿರಾಮ್ಯಾಕ್ಸ್ ಚಿತ್ರದ ವಿಶ್ವಾದ್ಯಂತ ಹಕ್ಕುಗಳಿಗೆ $11 ಮಿಲಿಯನ್ ಸಂಗ್ರಹಿಸಿತು, ಮತ್ತು ಚಿತ್ರದ ಲಾಭದಾಯಕತೆಯನ್ನು ಬಹುತೇಕ ಖಚಿತಗೊಳಿಸಿತು.
ಚಿತ್ರಿಕರಣ
ಬದಲಾಯಿಸಿಪ್ರಧಾನ ಛಾಯಗ್ರಹಣವು ಸೆಪ್ಟಂಬರ್ ೨೦, ೧೯೯೩ರಂದು ಆರಂಭವಾಯಿತು. ಕಲ್ವರ್ ಸಿಟಿ, ಹಾಥಾರ್ನ್‌ನಲ್ಲಿ ಚಿತ್ರೀಕರಣ ನಡೆಯಿತು. ಸ್ವತಃ ಟ್ಯಾರಂಟೀನೊ ಸಾಧಾರಣ ಗಾತ್ರದ ಪಾತ್ರದಲ್ಲಿ ಅಭಿನಯಿಸಿದರು. ಚಿತ್ರೀಕರಣವು ನವೆಂಬರ್ ೩೦ಕ್ಕೆ ಮುಗಿಯಿತು.
ಸಂಗೀತ
ಬದಲಾಯಿಸಿಪಲ್ಪ್ ಫಿಕ್ಷನ್ ಚಿತ್ರಕ್ಕಾಗಿ ಯಾವುದೇ ಸಂಗೀತವನ್ನು ಸಂಯೋಜಿಸಲಾಗಲಿಲ್ಲ; ಬದಲಾಗಿ ಕ್ವೆಂಟಿನ್ ಟ್ಯಾರಂಟೀನೊ ಸರ್ಫ಼್ ಮ್ಯೂಸಿಕ್, ರಾಕ್ ಅಂಡ್ ರೋಲ್, ಸೋಲ್ ಹಾಗು ಪಾಲ್ ಹಾಡುಗಳ ಸಾರಸಂಗ್ರಹಿ ಮಿಶ್ರಣವನ್ನು ಬಳಸಿದರು.
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ
ಬದಲಾಯಿಸಿಬಿಡುಗಡೆ ಮತ್ತು ಬಾಕ್ಸ್ ಆಫ಼ಿಸ್
ಬದಲಾಯಿಸಿಪಲ್ಪ್ ಫಿಕ್ಷನ್ ಕಾನ್ ಚಲನಚಿತ್ರೋತ್ಸವದಲ್ಲಿ ಮೇ ೧೯೯೪ರಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಮಧ್ಯರಾತ್ರಿ ಗಂಟೆಯ ಪ್ರದರ್ಶನದಲ್ಲಿ ತೆರೆಕಂಡ ಈ ಚಿತ್ರವು ಕೋಲಾಹಲವನ್ನು ಉಂಟುಮಾಡಿತು.[೯] ಈ ಚಿತ್ರವು ಪಾಲ್ಮ್ ಡ್ಯೋರ್ ಗೆದ್ದ ಮೇಲೆ ಪ್ರಚಾರದ ಹೆಚ್ಚಿನ ಅಲೆ ಉಂಟಾಯಿತು.[೧೦]
ಅಕ್ಟೋಬರ್ ೧೪, ೧೯೯೪ ರಂದು, ಪಲ್ಪ್ ಫಿಕ್ಷನ್ ಅಮೇರಿಕದಲ್ಲಿ ಬಿಡುಗಡೆಯಾಯಿತು. $8.5 ಮಿಲಿಯನ್ ಬಂಡವಾಳದಲ್ಲಿ ನಿರ್ಮಾಣವಾದ ಮತ್ತು ಮಾರಾಟಗಾರಿಕೆ ವೆಚ್ಚಗಳಲ್ಲಿ ಸುಮಾರು $10 ಮಿಲಿಯನ್ ವ್ಯಯಿಸಿದ ಈ ಚಿತ್ರವು ಅಮೇರಿಕದ ಬಾಕ್ಸ್ ಆಫ಼ಿಸ್‍ನಲ್ಲಿ $107.93 ಮಿಲಿಯನ್ ಗಳಿಸಿತು. $100 ಮಿಲಿಯನ್ ಮೀರಿದ ಮೊದಲ ಸ್ವತಂತ್ರ ಚಿತ್ರವಾಯಿತು. ವಿಶ್ವಾದ್ಯಂತ, ಸುಮಾರು $213 ಮಿಲಿಯನ್‍ನಷ್ಟು ಗಳಿಸಿತು.[೧೧]
ಪ್ರಭಾವ
ಬದಲಾಯಿಸಿಬೇಗನೇ ಪಲ್ಪ್ ಫಿಕ್ಷನ್ ತನ್ನ ಯುಗದ ಅತ್ಯಂತ ಮಹತ್ವದ ಚಲನಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿತು.
ಪಲ್ಪ್ ಫಿಕ್ಷನ್ ಏಕಕಾಲದಲ್ಲಿ ಜಾನ್ ಟ್ರವೋಲ್ಟಾ ಹಾಗೂ ಫಿಲ್ಮ್ ನ್ವಾರ್‌ನ್ನು ಮತ್ತೆ ಬೆಳಕಿಗೆ ತಂದಿತು ಎಂದು ಸಾಮಾನ್ಯ ಚಲನಚಿತ್ರೋದ್ಯಮದ ಅಭಿಪ್ರಾಯವಾಗಿತ್ತು. ಈ ಚಿತ್ರಕ್ಕೆ ಕರಾಳ ವಿನೋದ[೫] ಮತ್ತು ನಿಯೊ ನ್ವಾರ್‌ನ ಲೇಬಲ್ಲನ್ನು ಹಚ್ಚಲಾಯಿತು. ಪಲ್ಪ್ ಫಿಕ್ಷನ್‍ನ ಶೈಲಿಯ ಪ್ರಭಾವವು ಬೇಗನೇ ಸ್ಪಷ್ಟವಾಯಿತು. ಅನೇಕ ಹಾಲಿವುಡ್ ಚಲನಚಿತ್ರಗಳು ಇದನ್ನು ಅನುಕರಿಸಿದವು.
ಈ ಚಲನಚಿತ್ರವನ್ನು ದೂರದರ್ಶನ, ಸಂಗೀತ, ಸಾಹಿತ್ಯ ಮತ್ತು ಜಾಹೀರಾತಿನ ಮೇಲೆ ಪ್ರಭಾವಬೀರಿದ "ಪ್ರಮುಖ ಸಾಂಸ್ಕೃತಿಕ ಘಟನೆ", "ಅಂತರರಾಷ್ಟ್ರೀಯ ವಿದ್ಯಮಾನ" ಎಂದು ವರ್ಣಿಸಲಾಗಿದೆ.[೧೨][೧೩] ಬಿಡುಗಡೆಯಾದ ಸ್ವಲ್ಪವೇ ಸಮಯದಲ್ಲಿ, ಇದನ್ನು ಅಂತರಜಾಲ ಬಳಕೆದಾರರ ಬೆಳೆಯುತ್ತಿರುವ ಸಮುದಾಯದಲ್ಲಿ ಗಮನದ ಮಹತ್ವದ ಕೇಂದ್ರಬಿಂದುವಾಗಿ ಗುರುತಿಸಲಾಯಿತು.
ಈ ಚಲನಚಿತ್ರದ ಹಲವಾರು ದೃಶ್ಯಗಳು ಮತ್ತು ಚಿತ್ರಗಳು ಆದರ್ಶಪ್ರಾಯ ಸ್ಥಾನವನ್ನು ಮುಟ್ಟಿದವು.
ಈಗ ಪಲ್ಪ್ ಫಿಕ್ಷನ್ ಸಾರ್ವಕಾಲಿಕ ಶ್ರೇಷ್ಠ ಚಲನಚಿತ್ರಗಳ ಹಲವಾರು ವಿಮರ್ಶಾತ್ಮಕ ಮೌಲ್ಯಮಾಪನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಚಲನಚಿತ್ರವು ಜನಪ್ರಿಯ ಸಮೀಕ್ಷೆಗಳಲ್ಲಿ ಬಹಳ ಮೇಲಿನ ಸ್ಥಾನಗಳಲ್ಲಿ ಒಂದನ್ನು ಪಡೆಯುತ್ತದೆ.
ಪ್ರಶಸ್ತಿ ಗೌರವಗಳು
ಬದಲಾಯಿಸಿಒಟ್ಟು ಇಪ್ಪತ್ತಾರು ನಾಮನಿರ್ದೇಶನಗಳಿಂದ ಪಲ್ಪ್ ಫಿಕ್ಷನ್ ೬೭ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಮೂಲ ಚಿತ್ರಕಥೆ ಸೇರಿದಂತೆ ಎಂಟು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿತು.[೧೦][೧೪][೧೫][೧೬][೧೭]
ಉಲ್ಲೇಖಗಳು
ಬದಲಾಯಿಸಿ- ↑ "PULP FICTION". British Board of Film Classification. Archived from the original on ಮೇ 10, 2015. Retrieved November 11, 2012.
- ↑ ೨.೦ ೨.೧ "Pulp Fiction (1994)". Box Office Mojo. Retrieved May 13, 2012.
- ↑ Waxman (2005), p. 67; Biskind (2004), p. 170; Polan (2000), p. 69; Dawson (1995), pp. 147–148.
- ↑ Sanders, Steven; Skoble, Aeon G. (2008). The Philosophy of TV Noir. University of Kentucky Press. p. 3.
- ↑ ೫.೦ ೫.೧ See, e.g., King (2002), pp. 185–7; Kempley, Rita (1994-10-14). "Pulp Fiction (R)". The Washington Post. Retrieved 2007-09-19.; LaSalle, Mike (1995-09-15). "Pulp Grabs You Like a Novel". San Francisco Chronicle. Archived from the original on 2012-01-12. Retrieved 2007-09-20.
- ↑ "101 Greatest Screenplays". Writers Guild of America, West. Archived from the original on March 6, 2013. Retrieved November 29, 2015.
- ↑ O'Sullivan, Michael (December 18, 2013). "Library of Congress announces 2013 National Film Registry selections". The Washington Post. Retrieved December 18, 2013.
- ↑ Steves, Rick (2015-04-14). Rick Steves Amsterdam & the Netherlands. Avalon Travel. ISBN 978-1-63121-067-9.
- ↑ Maslin, Janet (1994-09-23). "Pulp Fiction; Quentin Tarantino's Wild Ride On Life's Dangerous Road". ದ ನ್ಯೂ ಯಾರ್ಕ್ ಟೈಮ್ಸ್. Retrieved 2007-09-11.
- ↑ ೧೦.೦ ೧೦.೧ "All the Awards—Festival 1994". Cannes Festival. Archived from the original on 2007-10-13. Retrieved 2007-09-14.
- ↑ Biskind (2004), p. 189; Waxman (2005), p. 78; "Pulp Fiction". Box Office Mojo. Retrieved 2006-12-29. Box Office Mojo gives $106 million in foreign grosses for a worldwide total of $213.9 million; Biskind and Waxman apparently concur that $105m/$212.9m are the correct figures.
- ↑ Villella, Fiona A. (January 2000). "Circular Narratives: Highlights of Popular Cinema in the '90s". Senses of Cinema. Archived from the original on November 26, 2006. Retrieved 2006-12-31.
- ↑ Samuels, Mark (2006-11-08). "Pulp Fiction". Total Film. Retrieved 2007-09-21. For musical influence, see, e.g., Sarig, Roni (1996). "Fun Lovin' Criminals—Come Find Yourself". Rolling Stone. Archived from the original on 2008-06-21. Retrieved 2007-10-08.
- ↑ "Academy Awards for Pulp Fiction". AMPAS. Archived from the original on October 29, 2013. Retrieved 2006-12-29.
- ↑ "Film Winners 1990–1999" (PDF). BAFTA. Archived from the original (PDF) on 2007-02-02. Retrieved 2006-12-29.
- ↑ "Awards Search/Pulp Fiction". Hollywood Foreign Press Association. Retrieved 2007-09-12.
- ↑ Maslin, Janet (1995-01-04). ""Pulp Fiction" Gets Top Prize From National Film Critics". The New York Times. Retrieved 2007-09-27.
ಗ್ರಂಥಸೂಚಿ
ಬದಲಾಯಿಸಿ- Bailey, Jason (2013). Pulp Fiction: The Complete Story of Quentin Tarantino's Masterpiece (Voyageur Press). ISBN 0-7603-4479-5
- Barker, Martin, and Thomas Austin (2000). From Antz to Titanic: Reinventing Film Analysis (Pluto Press). ISBN 0-7453-1579-8
- Bart, Peter (2000). The Gross: The Hits, the Flops—The Summer That Ate Hollywood (New York: St. Martin's). ISBN 0-312-25391-5
- Bell, David (2000). "Eroticizing the Rural", in De-Centering Sexualities: Politics and Representations Beyond the Metropolis, ed. David Shuttleton, Diane Watt, and Richard Phillips (London and New York: Routledge). ISBN 0-415-19466-0
- Biskind, Peter (2004). Down and Dirty Pictures: Miramax, Sundance, and the Rise of Independent Film (New York: Simon & Schuster). ISBN 0-684-86259-X
- Brooker, Peter, and Will Brooker (1996). "Pulpmodernism: Tarantino's Affirmative Action", in Film Theory: Critical Concepts in Media and Cultural Studies, ed. Philip Simpson, Andrew Utterson, and Karen J. Shepherdson (London and New York: Routledge). ISBN 0-415-25971-1
- Charyn, Jerome (2006). Raised by Wolves: The Turbulent Art and Times of Quentin Tarantino (New York: Thunder's Mouth Press). ISBN 1-56025-858-6
- Christopher, Nicholas (2006). Somewhere in the Night: Film Noir and the American City (Emeryville, Calif.: Shoemaker & Hoard). ISBN 1-59376-097-3
- Conard, Mark T. (2006). "Symbolism, Meaning, and Nihilism in Pulp Fiction", in The Philosophy of Film Noir, ed. Mark T. Conard (Lexington: University Press of Kentucky). ISBN 0-8131-2377-1
- Constable, Catherine (2004). "Postmodernism and Film", in The Cambridge Companion to Postmodernism, ed. Steven Connor (Cambridge: Cambridge University Press). ISBN 0-521-64840-8
- Dancyger, Ken (2002). The Technique of Film and Video Editing: History, Theory, and Practice, 3d ed. (New York: Focal Press). ISBN 0-240-80420-1
- Dargis, Manohla (1994a). "Pulp Instincts", Sight and Sound 4, no. 5 (May). Collected in Quentin Tarantino: Interviews, ed. Gerald Peary (Jackson: University Press of Mississippi, 1998). ISBN 1-57806-051-6
- Dargis, Manohla (1994b). "Quentin Tarantino on Pulp Fiction", Sight and Sound 4, no. 11 (November).
- Davis, Todd F., and Kenneth Womack (1998). "Shepherding the Weak: The Ethics of Redemption in Quentin Tarantino's Pulp Fiction", Literature/Film Quarterly 26, no. 1.
- Dawson, Jeff (1995). Quentin Tarantino: The Cinema of Cool (New York and London: Applause). ISBN 1-55783-227-7
- Desser, David (2003). "Global Noir: Genre Film in the Age of Transnationalism", in Film Genre Reader III, ed. Barry Keith Grant (Austin: University of Texas Press). ISBN 0-292-70185-3
- Dinshaw, Carolyn (1997). "Getting Medieval: Pulp Fiction, Gawain, Foucault", in The Book and the Body, ed. Dolores Warwick Frese and Katherine O'Brien O'Keeffe (Notre Dame: University of Notre Dame Press). ISBN 0-268-00700-4
- Ebert, Roger (1997). Questions for the Movie Answer Man (Kansas City, Mo.: Andrews McMeel). ISBN 0-8362-2894-4
- Fraiman, Susan (2003). Cool Men and the Second Sex (New York: Columbia University Press). ISBN 0-231-12962-9
- Fulwood, Neil (2003). One Hundred Violent Films that Changed Cinema (London and New York: Batsford/Sterling). ISBN 0-7134-8819-0
- Gallafent, Edward (2006). Quentin Tarantino (London: Pearson Longman). ISBN 0-582-47304-7
- Giroux, Henry A. (1996). Fugitive Cultures: Race, Violence, and Youth (London and New York: Routledge). ISBN 0-415-91577-5
- Gormley, Paul (2005). The New-Brutality Film: Race and Affect in Contemporary Hollywood Cinema (Bristol, UK, and Portland, Ore.: Intellect). ISBN 1-84150-119-0
- Groth, Gary (1997). "A Dream of Perfect Reception: The Movies of Quentin Tarantino", in Commodify Your Dissent: Salvos from The Baffler, ed. Thomas Frank and Matt Weiland (New York: W.W. Norton). ISBN 0-393-31673-4
- Hirsch, Foster (1997). "Afterword", in Crime Movies, exp. ed., Carlos Clarens (Cambridge, Mass.: Da Capo). ISBN 0-306-80768-8
- Hoffman, David (2005). The Breakfast Cereal Gourmet (Kansas City, Mo.: Andrews McMeel). ISBN 0-7407-5029-1
- King, Geoff (2002). Film Comedy (London: Wallflower Press). ISBN 1-903364-35-3
- Kolker, Robert (2000). A Cinema of Loneliness: Penn, Stone, Kubrick, Scorsese, Spielberg, Altman, 3d ed. (New York: Oxford University Press). ISBN 0-19-512350-6
- Miller, Stephen Paul (1999). The Seventies Now: Culture As Surveillance (Durham, N.C.: Duke University Press). ISBN 0-8223-2166-1
- Mottram, James (2006). The Sundance Kids: How the Mavericks Took Back Hollywood (New York:Macmillan). ISBN 0-571-22267-6
- O'Brien, Geoffrey (1994). "Quentin Tarantino's Pulp Fantastic", in Castaways of the Image Planet: Movies, Show Business, Public Spectacle (Washington, D.C.: Counterpoint). ISBN 1-58243-190-6
- Parker, Philip (2002). The Art and Science of Screenwriting, 2d ed. (Bristol, UK: Intellect). ISBN 1-84150-065-8
- Polan, Dana. (2000). Pulp Fiction (London: BFI). ISBN 0-85170-808-0
- Rabinowitz, Paula (2002). Black & White & Noir: America's Pulp Modernism (New York: Columbia University Press). ISBN 0-231-11480-X
- Real, Michael R. (1996). Exploring Media Culture: A Guide (Thousand Oaks, Calif., London, and New Delhi: Sage). ISBN 0-8039-5877-3
- Reinhartz, Adele (2003). Scripture on the Silver Screen (Louisville, Ky.: Westminster John Knox Press). ISBN 0-664-22359-1
- Rubin, Nathan (1999). Thrillers (Cambridge, New York, and Melbourne: Cambridge University Press). ISBN 0-521-58839-1
- Silver, Alain, and James Ursini (2004). Film Noir (Cologne: Taschen). ISBN 3-8228-2261-2
- Tarantino, Quentin (1994). Pulp Fiction: A Screenplay (New York: Hyperion/Miramax). ISBN 0-7868-8104-6
- Thomas, Brian (2003). VideoHound's Dragon: Asian Action & Cult Flicks (Canton, Mich.: Visible Ink Press). ISBN 1-57859-141-4
- Tincknell, Estella (2006). "The Soundtrack Movie, Nostalgia and Consumption", in Film's Musical Moments, ed. Ian Conrich and Estella Tincknell (Edinburgh: Edinburgh University Press). ISBN 0-7486-2344-2
- Walker, David (2005). "Tarantino, Quentin", in The Routledge Companion to Postmodernism, 2d ed., ed. Stuart Sim (London and New York: Routledge). ISBN 0-415-33358-X
- Waxman, Sharon (2005). Rebels on the Backlot: Six Maverick Directors and How They Conquered the Hollywood Studio System (New York: HarperCollins). ISBN 0-06-054017-6
- White, Glyn (2002). "Quentin Tarantino", in Fifty Contemporary Filmmakers, ed. Yvonne Tasker (London and New York: Routledge). ISBN 0-415-18973-X
- Willis, Sharon (1997). High Contrast: Race and Gender in Contemporary Hollywood Film (Durham, N.C.: Duke University Press). ISBN 0-8223-2041-X
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Official website
- ಟೆಂಪ್ಲೇಟು:AFI film
- ಪಲ್ಪ್ ಫಿಕ್ಷನ್ at IMDb
- ಪಲ್ಪ್ ಫಿಕ್ಷನ್ at AllMovie
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಪಲ್ಪ್ ಫಿಕ್ಷನ್ (ಚಲನಚಿತ್ರ)
- ಪಲ್ಪ್ ಫಿಕ್ಷನ್ at Metacritic
- ಪಲ್ಪ್ ಫಿಕ್ಷನ್ at Rotten Tomatoes
- Pulp Fiction bibliography (via UC Berkeley)
- Discussion of Pulp Fiction use of Ezekiel 25:17 at Bibledex.com