ಕರಾಳ ವಿನೋದ
ವಿಕಟ ವಿನೋದ (ಫ್ರೆಂಚ್ ನ ಹ್ಯೂಮರ್ ನಾಯರ್ ನಿಂದ ಬಂದಿದೆ) ಎಂಬುದು ಅತಿವಾಸ್ತವಿಕತವಾದಿ ಸಿದ್ಧಾಂತಿಯಾದ ಆಂಡ್ರೆ ಬ್ರೆಟನ್ 1935 ರಲ್ಲಿ ರಚಿಸಿದ ಪದವಾಗಿದೆ,[೧][೨] ಇದನ್ನು ಹಾಸ್ಯ ಮತ್ತು ವಿಡಂಬನೆ[೩][೪] ಯ ಪ್ರಕಾರವನ್ನು ಸೂಚಿಸಲೆಂದು ರಚಿಸಿದರು. ಈ ಪ್ರಕಾರದಲ್ಲಿ ಸಿನಿಕತೆ ಮತ್ತು ಸಂದೇಹವಾದದಿಂದ ವಿನೋದವನ್ನು ಮಾಡಲಾಗುತ್ತದೆ.[೧] ವಿಕಟ ವಿನೋದವೆಂಬುದು ಸಾವಿನ ವಿಷಯದ ಮೇಲೆ ಮಾಡಲಾಗುವ ವಿಡಂಬನೆಯಾಗಿದೆ.[೫][೬] ಬ್ರೆಟನ್, ಜೊನಥನ್ ಸ್ವಿಫ್ಟ್ ರನ್ನು ವಿಕಟ ವಿನೋದದ ಜನಕನೆಂದು ಗುರುತಿಸುತ್ತಾರೆ. ಇದನ್ನುವಿಶೇಷವಾಗಿ ಅವರ ಡೈರೆಕ್ಷನ್ಸ್ ಆಫ್ ಸರ್ವೆಂಟ್ಸ್ (1731) ಅ ಮಾಡೆಸ್ಟ್ ಪ್ರಪೊಸಲ್ (1729), ಅ ಮೆಡಿಟೇಷನ್ ಅಪ್ ಆನ್ ಅ ಬ್ರೂಮ್-ಸ್ಟಿಕ್ (1710), ಮತ್ತು ಕೆಲವು ಸೂಕ್ತಿಗಳ ತುಣುಕುಗಳಲ್ಲಿ ಕಾಣಬಹುದಾಗಿದೆ.[೨]
ಕರಾಳ ವಿನೋದ ಅಥವಾ ಘೋರ ವಿನೋದ ಎಂಬ ಪದಗಳನ್ನು ತರುವಾಯ ಬ್ರೆಟನ್ ರ ಪದದ ಪರ್ಯಾಯಗಳೆಂದು ವ್ಯಾಖ್ಯಾನಿಸಲಾಯಿತು. ವಿಕಟ ವಿನೋದದಲ್ಲಿ, ವಿಷಯಗಳನ್ನು ಮತ್ತು ಸಂಗತಿಗಳನ್ನು ನಿಷಿದ್ಧದಂತೆ ಭಾವಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಸಾವಿಗೆ ಸಂಬಂಧಿಸಿದವುಗಳನ್ನು ಅವುಗಳ ಗಾಂಭೀರ್ಯತೆ ಉಳಿಸುವಾಗ ಅಸಾಮಾನ್ಯವಾದ ಹಾಸ್ಯ ಅಥವಾ ವಿಂಡಬನೆಯ ರೂಪದಲ್ಲಿ ನೋಡಲಾಗುತ್ತದೆ; ಆದ್ದರಿಂದ ಶ್ರೋತೃಗಳಿಗೆ ಕೆಲವೊಮ್ಮೆ ಏಕಕಾಲದಲ್ಲಿ ಹಾಸ್ಯ ಮತ್ತು ಕಿರಿಕಿರಿ ಎರಡು ಅನುಭವವನ್ನು ನೀಡುವುದು ಕರಾಳ ವಿನೋದದ ಆಶಯವಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಇತಿಹಾಸ ಮತ್ತು ನಿಷ್ಪತ್ತಿ
ಬದಲಾಯಿಸಿಈ ಪದವನ್ನು ಅನ್ತಾಲಜಿ ಆಫ್ ಬ್ಲ್ಯಾಕ್ ಹ್ಯೂಮರ್ (ವಿಕಟ ವಿನೋದ ಸಂಕಲನ) (Anthologie de l'humour noir )ಯಿಂದ ತೆಗೆದುಕೊಳ್ಳಲಾಗಿದೆ. ಇದು 45 ಬರಹಗಾರರು ಬರೆದಿರುವ ಬರಹಗಳನ್ನು ಒಳಗೊಂಡ 1939 ರ ಫ್ರೆಂಚ್ ಸಂಕಲನವಾಗಿದ್ದು, ಇದನ್ನು ಆಂಡ್ರೆ ಬ್ರೆಟನ್ ರವರು ಸಂಪಾದಿಸಿದ್ದಾರೆ. 1950 ರ ಮತ್ತು 1960 ರ ಹೊತ್ತಿನಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಕರಾಳ ವಿನೋದ ಸಾಹಿತ್ಯಿಕ ಪ್ರಕಾರವೆಂಬಂತೆ ಪ್ರಸಿದ್ಧಿಗೆ ಬಂದಿತು. ಅನಂತರ ಇಂಗ್ಲೀಷ್-ಭಾಷೆಯ ಸಂಕಲನವನ್ನು ಬ್ರೂಸ್ ಜೇ ಫ್ರೈಡ್ ಮನ್ ರವರು ಸಂಪಾದಿಸಿ, ಬ್ಲ್ಯಾಕ್ ಹ್ಯೂಮರ್ , ಎಂಬ ಹೆಸರನ್ನು ನೀಡಿದರು. ಇದು ಈ ಪ್ರಕಾರದ ಅನೇಕ ಉದಾಹರಣೆಗಳನ್ನು ಹೊಂದಿದೆ. .
ಗುಣಲಕ್ಷಣಗಳು, ವಿಷಯಗಳು, ಶೈಲಿ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(August 2009) |
ಕರಾಳ ವಿನೋದ ಎಂಬ ಪದವು 'ವಿಕಟ ವಿನೋದ', 'ಘೋರ ಹಾಸ್ಯ', ಅಥವಾ, ನಿರ್ದಿಷ್ಟವಾಗಿ ಸಾವಿಗೆ ಸಂಬಂಧಿಸಿದ್ದರೆ, 'ವಿಕೃತ ಹಾಸ್ಯ' ಎಂದು ಕರೆಯಲಾಗುವ ಪದಗಳನ್ನು ಒಳಗೊಂಡಿದೆ. ಅತ್ಯಂತ ಗಾಂಭೀರವಾದ ಮತ್ತು ನಿಷಿದ್ಧ ವಿಷಯಗಳನ್ನು ಹೆಚ್ಚಾಗಿ ಹಗುರವಾಗಿಸುವುದು ವಿಕಟ ವಿನೋದದ ಉದ್ದೇಶವಾಗಿದೆ. ಅಲ್ಲದೇ ಕೆಲ ಹಾಸ್ಯಗಾರರು ಅಸಭ್ಯ ವಿಷಯಗಳನ್ನು ತಿಳಿಸಲು ಇದನ್ನು ಸಾಧನದಂತೆ ಬಳಸುತ್ತಾರೆ. ಈ ಮೂಲಕ ಅವರ ಶ್ರೋತೃಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತಾರೆ ಮತ್ತು ಮನರಂಜನೆಯನ್ನು ನೀಡುತ್ತಾರೆ. ಈ ಪ್ರಕಾರದ ಪ್ರಸಿದ್ಧ ವಿಷಯಗಳು ಕೆಳಕಂಡಂತಿವೆ: ಕೊಲೆ, ಆತ್ಮಹತ್ಯೆ, ಖಿನ್ನತೆ, ಬಯ್ಯುವುದು, ವಿಕಾರಗೊಳಿಸುವುದು, ಯುದ್ಧ, ಭಾಷಾಸಂಕರ, ಕುಡಿದು ಬಯ್ಯುವುದು, ಮರಣಾಂತಕವಾದ ಕಾಯಿಲೆ, ಕೌಟುಂಬಿಕ ಹಿಂಸೆ, ಲೈಗಿಂಕ ಹಿಂಸೆ, ಶಿಶುಕಾಮ, ಬುದ್ಧಿ ವಿಕಲ್ಪ, ದುಃಸ್ವಪ್ನ, ಕಾಯಿಲೆ, ಜನಾಂಗೀಯತೆ, ದೌರ್ಬಲ್ಯ (ದೈಹಿಕ ಮತ್ತು ಮಾನಸಿಕ ಎರಡು ರೀತಿಯಲ್ಲು), ಅಭಿಮಾನತಿರೇಕ, ಭ್ರಷ್ಟಾಚಾರ, ಮತ್ತು ಅಪರಾಧ. ಇದಕ್ಕೆ ವ್ಯತಿರಿಕ್ತವಾಗಿ ನೀಲಿ ಹಾಸ್ಯ(ಅಶ್ಲೀಲ ಹಾಸ್ಯ), ನಗ್ನತೆ, ಲೈಂಗಿಕತೆ ಮತ್ತು ದೈಹಿಕ ಸ್ರಾವದಂತಹ ಅಶ್ಲೀಲ ವಿಷಯಗಳ ಮೇಲೆ ಗಮನಹರಿಸುತ್ತದೆ.
ಇವುಗಳು ಅಂತರಸಂಬಂಧಿಗಳಾಗಿದ್ದರು, ಕರಾಳ ವಿನೋದವು, ನೇರ ಅಶ್ಲೀಲತೆಗಿಂತ ಭಿನ್ನವಾಗಿದೆ. ಈ ವಿಷಯದಲ್ಲಿ ಇದು ಅತ್ಯಂತ ಸೂಕ್ಷ್ಯಮವಾಗಿದೆ ಮತ್ತು ಜನರ ಮನಸ್ಸನ್ನು ನೋಯಿಸುವ ಬಿಚ್ಚುನುಡಿಯ ಉದ್ದೇಶವನ್ನು ಹೊಂದಿರುವುದಿಲ್ಲ. ಅಶ್ಲೀಲ ಹಾಸ್ಯದಲ್ಲಿ, ಬಹುಪಾಲು ಹಾಸ್ಯ ಅಂಶಗಳು ಆಘಾತ ಮತ್ತು ಪ್ರತ್ಯುದ್ರೇಕದಿಂದಲೆ ಬಂದರೆ, ಕರಾಳ ವಿನೋದ ಅಣಕ, ಅಥವಾ ನಿಯತಿವಾದದ ಅಂಶಗಳನ್ನು ಒಳಗೊಂಡಿರುತ್ತದೆ.
ಉದಾಹರಣೆಗೆ, ಇಂಗೀಷ್ ನಲ್ಲಿ ಮೂಲ ಮಾದರಿಯ ಕರಾಳ-ವಿನೋದವು, ಟ್ರಿಸ್ಟಮ್ ಶಾಂಡಿ ಯ ಸ್ವ-ಊನಗೊಳಿಸಿಕೊಳ್ಳುವ ಕಾದಂಬರಿಯಲ್ಲಿ ಕಂಡುಬಂದಿವೆ. ಟ್ರಿಸ್ಟಮ್ ಐದು ವರ್ಷದವನಿದ್ದಾಗ ಮೂತ್ರಪಾತ್ರೆ ಇಲ್ಲದಿದ್ದ ಕಾರಣ ತೆರೆದ ಕಿಟಕಿಯ ಹೊರಗೆ ಮೂತ್ರ ವಿಸರ್ಜನೆಯನ್ನು ಮಾಡುತ್ತಿದ್ದ. ಆ ಸಂದರ್ಭದಲ್ಲಿ ಕಿಟಕಿಯ ಬಾಗಿಲುವಾಡ ಕೆಳಗೆ ಬಿದ್ದು ಮುಂದೋಲಗವನ್ನು ಕತ್ತರಿಸಿಹೋಯಿತು; ಇದಕ್ಕೆ ಅವನ ಕುಟುಂಬ ಅವ್ಯವಸ್ಥಿತವಾದ ಕ್ರಿಯೆಯೊಂದಿಗೆ ಮತ್ತು ಶಾಂತಚಿತ್ತದ ವಿಷಯಾಂತರದೊಂದಿಗೆ ಪ್ರತಿಕ್ರಿಯಿಸಿತು.
ನಿಷ್ಪಲಗೊಳಿಸಿದ ಆತ್ಮಹತ್ಯೆಯು ಕೂಡ ಇದಕ್ಕೆ ಸಂಬಂಧಿಸಿದ ವಿಷಯವಾಗಿದೆ. ಉದಾಹರಣೆಗೆ, ವ್ಯೇಟಿಂಗ್ ಫಾರ್ ಗೋಡಾಟ್ ನಾಟಕದಲ್ಲಿ, ಒಬ್ಬ ವ್ಯಕ್ತಿ ನೇಣುಹಾಕಿಕೊಳ್ಳಲೆಂದು ಅವನ ಬೆಲ್ಟ್ ಅನ್ನು ತೆಗೆಯುತ್ತಾನೆ, ಇದರಿಂದ ಅವನ ಪ್ಯಾಂಟ್ ಕೆಳಗೆ ಜಾರುತ್ತದೆ.
ಲೇಖಕರು
ಬದಲಾಯಿಸಿರೋಲ್ಡ್ ಧಾಲ್,[೭] ಥಾಮಸ್ ಸೈಕಾನ್,[೩] ಕರ್ಟ್ ವೊನೆಗಟ್,[೩] ವಾರೆನ್ ಜೆವೊನ್, ಜೊಸೆಫ್ ಹೆಲ್ಲರ್,[೩] ಮತ್ತು ಫಿಲಿಪ್ ರೋತ್ [೩] ನಂತಹ ಬರಹಗಾರರು, ಕಾದಂಬರಿಗಳು, ಕಥೆಗಳು, ನಾಟಕಗಳು ಮತ್ತು ಹಾಡುಗಳಲ್ಲಿ ಗಹನವಾದ ಮತ್ತು ಭಯಂಕರ ವಿಷಯವನ್ನು ಹಾಸ್ಯದ ರೀತಿಯಲ್ಲಿ ಬರೆದಿದ್ದಾರೆ.
ಲೆನಿ ಬ್ರೂಸ್,[೪], ಜಾರ್ಜ್ ಕಾರ್ಲಿನ್, ಬಿಲ್ ಹಿಕ್ಸ್, ಜಿಮ್ಮಿ ಕಾರ್, ಕ್ರಿಸ್ ಮೊರೀಸ್ ಮತ್ತು ಮಾಂಟಿ ಪಿಥನ್ ಎಂಬ ಹಾಸ್ಯಗಾರರನ್ನು ಒಳಗೊಂಡ ತಂಡ ಮತ್ತು ಇತ್ತೀಚಿಗೆ ಕೂಡ ಬೊ ಬರ್ನ್ ಹ್ಯಾಮ್ ಈ ಪ್ರಕಾರವನ್ನು ಪ್ರಸಿದ್ಧಗೊಳಿಸಲು ಸಹಾಯಮಾಡಿದ್ದಾರೆ. ಸೌತ್ ಪಾರ್ಕ್, ಮೆಟಾಲೊಕ್ಯಾಲಿಪ್ಸೆ ಮತ್ತು ವೆಂಚರ್ ಬ್ರಾಸ್ ನಂತಹ ಪ್ರಸಿದ್ಧ ಕಾರ್ಟುನ್ ಪ್ರದರ್ಶನಗಳು ಅವುಗಳ ಕರಾಳ ಹಾಸ್ಯಕ್ಕಾಗಿ ಪ್ರಸಿದ್ಧವಾಗಿವೆ. ಅಲ್ಲದೇ ಇದರ ಫಲಿತಾಂಶವೆಂಬಂತೆ ಅನೇಕ ವಿವಾದಗಳನ್ನು ಹುಟ್ಟುಹಾಕಿವೆ.
ಚಲನಚಿತ್ರ
ಬದಲಾಯಿಸಿಕರಾಳ ವಿನೋದವನ್ನು, ಅದರ ಗಂಭೀರತೆಯನ್ನು ಹಾಗೇಯೇ ಉಳಿಸುವುದರೊಂದಿಗೆ ಸಾಮಾನ್ಯವಾಗಿ ನಾಟಕೀಯ ಮತ್ತು ವಿಡಂಬನೆಯ ಚಲನಚಿತ್ರಗಳಲ್ಲಿ ಬಳಸಲಾಗುತ್ತದೆ.
ಕರಾಳ ವಿನೋದವು, ಅನೇಕ ಆರಾಧನೆಯ ಚಲನಚಿತ್ರಗಳ, ದೂರದರ್ಶನದ ಪ್ರದರ್ಶನಗಳ ಮತ್ತು ವಿಡಿಯೋ ಗೇಮ್ಸ್ ಗಳ ಪ್ರಚಲಿತ ವಿಷಯವಾಗಿದೆ. 1964 ರ ಸ್ಟ್ಯಾನ್ಲೆ ಕುಬ್ರಿಕ್ ರವರ ಚಲನಚಿತ್ರಡಾ. ಸ್ಟ್ರೇಂಜ್ ಲವ್ ಕರಾಳ ವಿನೋದದ ಅತ್ಯಂತ ಜನಪ್ರಿಯ ಪ್ರಚಲಿತ ಉದಾಹರಣೆಗಳಲ್ಲಿ ಒಂದನ್ನು ಸಾದರಪಡಿಸಿದೆ.[೩] ನ್ಯೂಕ್ಲಿಯರ್ ಯುದ್ಧ ಮತ್ತು ಭೂಮಿಯ ಮೇಲೆ ಸಂಭವವಿರುವ ಜೀವನದ ಸರ್ವನಾಶ ಈ ಚಿತ್ರದ ವಿಷಯವಾಗಿದೆ. ಸಾಮಾನ್ಯವಾಗಿ, ನ್ಯೂಕ್ಲಿಯರ್ ಯುದ್ಧದ ಬಗೆಗಿನ ನಾಟಕಗಳು, ನ್ಯೂಕ್ಲಿಯರ್ ಯುದ್ಧವನ್ನು ತಡೆಗಟ್ಟುವ ಪ್ರಯತ್ನದ ಮೇಲೆ ನಿಗೂಢತೆಯನ್ನು ಸೃಷ್ಟಿಸುವುದರೊಂದಿಗೆ ವಿಷಯವನ್ನು ಗುರುತರವಾಗಿ ಮತ್ತು ಗಂಭೀರತೆಯಿಂದ ನೋಡುತ್ತವೆ. ಆದರೆ ಡಾ.ಸ್ಟ್ರೇಂಜ್ ಲವ್ ವಿಷಯವನ್ನು ಇದರ ಬದಲಿಗೆ ಹಾಸ್ಯಸ್ಪದ ರೀತಿಯಲ್ಲಿ ನೋಡುತ್ತದೆ. ಉದಾಹರಣೆಗೆ, ಚಲನಚಿತ್ರದಲ್ಲಿ ನ್ಯೂಕ್ಲಿಯರ್ ಯುದ್ಧವನ್ನು ತಡೆಗಟ್ಟಲು ವಿಫಲವಾದ - ಸುರಕ್ಷಿತ ಕಾರ್ಯವಿಧಾನಗಳನ್ನು ರಚಿಸಲಾಗಿರುತ್ತದೆ. ಈ ವ್ಯವಸ್ಥೆ ಖಚಿತವಾಗಿ ಯುದ್ಧ ನಡೆಯುತ್ತದೆ ಎಂಬುದನ್ನು ದೃಢಪಡಿಸುತ್ತದೆ. ಕಥೆಯ ಪ್ರಕಾರ ತಂಡದ ನಾಯಕ ಮ್ಯಾನಂಡ್ರೇಕ್ ಮಾತ್ರ ಚಲನಚಿತ್ರದಲ್ಲಿ ವಿವೇಕಶೀಲನಾಗಿ ಕಂಡುಬಂದರೆ, ದುಷ್ಟ ಗುರಿಗಾಗಿ ಹೋರಾಡುವ ನಾಯಕನ ಪಾತ್ರವನ್ನು ಮೇಜರ್ ಕಾಂಗ್ ತುಂಬಿದ್ದಾರೆ.
ಇವನ್ನೂ ಗಮನಿಸಿ
ಬದಲಾಯಿಸಿ- ಭಯಾನಕ ಹಾಸ್ಯ
- ಮೂಲರೂಪದ ಹಾಸ್ಯ
- ಅತಿನಮ್ರತೆಯ ಹಾಸ್ಯ
- ಘಾತುಕ ಮುಖಭಾವದ ಹಾಸ್ಯ
- ಘೋರ
- ಸಮಸ್ಯೆಯ ನಾಟಕಗಳು
- ಶಡನ್ ಫ್ರೆಡೆ
- ಶಾಕ್ ವ್ಯಾಲ್ಯೂ
ಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ http://books.google.es/books?id=L7jEg8rQZoUC
- ↑ ೨.೦ ೨.೧ Lezard, Nicholas (2009-02-21). "From the sublime to the surreal". The Guardian. London.
- ↑ ೩.೦ ೩.೧ ೩.೨ ೩.೩ ೩.೪ ೩.೫ http://www.encyclopedia.com/doc/1E1-blackhum.html
- ↑ ೪.೦ ೪.೧ "black humor - Hutchinson encyclopedia article about black humor". Encyclopedia.farlex.com. Archived from the original on 2011-05-11. Retrieved 2010-06-24.
- ↑ ಥಾಮಸ್ ಲೆಕ್ಲೇರ್ (1975) ಡೆತ್ ಅಂಡ್ಬ್ಲ್ಯಾಕ್ ಹ್ಯೂಮರ್ ಇನ್ ಕ್ರಿಟಿಕ್ಯೂ , ಸಂಪುಟ. 17, 1975
- ↑ http://www.jstor.org/pss/306869
- ↑ ಜೇಮ್ಸ್ ಸೆಂಟರ್ ಟಾಕಿಂಗ್ ಬುಕ್ಸ್:ಚಿಲ್ಡ್ರನ್ಸ್ ಆಥರ್ಸ್ ಟಾಕ್ ಅಬೌಟ್ ದಿ ಕ್ರಾಫ್ಟ್, ಕ್ರಿಯೆಟಿವಿಟಿ ಅಂಡ್ ಪ್ರೊಸಸ್ ಆಫ್ ರೈಟಿಂಗ್, ಸಂಪುಟ 2 p.97 ರೂಟ್ಲೆಡ್ಜ್, 2002