ದಲಿತ
ಜಾತಿ
(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಇಂದ ಪುನರ್ನಿರ್ದೇಶಿತ)
ದಲಿತ ಸಾಂಪ್ರದಾಯಿಕವಾಗಿ "ಅಸ್ಪೃಶ್ಯ" ಎಂದು ಗುರುತಿಸಲಾಗುವ ಜನರ ಗುಂಪಿನ ಒಂದು ಹೆಸರು. ದಲಿತರು ದಕ್ಷಿಣ ಏಷ್ಯಾದ ಎಲ್ಲೆಡೆಯಲ್ಲಿರುವ ಹಲವಾರು ಜಾತಿಗಳ ಜನರು. ಅವರು ಅನೇಕ ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅನೇಕ ಧರ್ಮಗಳನ್ನು ಅನುಸರಿಸುತ್ತಾರೆ.
ಇತಿವೃತ್ತ
ಬದಲಾಯಿಸಿ- ದಲಿತರಲ್ಲಿ ಪ್ರಮುಖವಾಗಿ ಎರಡು ವರ್ಗಗಳಿವೆ-
- ಹೊಲೆಯ- ಉಪಜಾತಿ:ಆದಿಕರ್ನಾಟಕ,
- ಮಾದಿಗ-ಉಪಜಾತಿ: ಆದಿಜಾಂಬವ. ಉಪಪಂಗಡಗಳಂತು ಇಲ್ಲಿ ಹೇರಳವಾಗಿವೆ.
- ಭಾರತೀಯ ಸಂವಿಧಾನ ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸಿಲ್ಲವಾದರೂ ಜಾತಿ ವ್ಯವಸ್ಥೆಯನ್ನು ಆಧರಿಸಿದ ಭೇದಭಾವಗಳನ್ನು ನಿಷೇಧಿಸಿದೆ. ಆದಾಗ್ಯೂ ಇಲ್ಲಿ ದಲಿತರ ವಿರುದ್ಧ ಪೂರ್ವಾಗ್ರಹಗಳಿವೆ. ಅವರ ವಿರುದ್ಧ ತಾರತಮ್ಯವನ್ನು ಆಚರಿಸಲಾಗುತ್ತದೆ.
- ಭಾರತದ ಸ್ವಾತಂತ್ರ್ಯದ ನಂತರ, ಗಮನಾರ್ಹ ರೀತಿಯಲ್ಲಿ ಅವರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅನೇಕ ಸಾಮಾಜಿಕ ಸಂಘಟನೆಗಳು ಕೂಡ ಸುಧಾರಿತ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅವಕಾಶಗಲನ್ನು ಒದಗಿಸುವುದರ ಮೂಲಕ ದಲಿತರ ಸ್ಥಿತಿಯನ್ನು ಉತ್ತಮಪಡಿಸಲು ಶ್ರಮಿಸಿವೆ.
- ೨೦೦೧ ರಲ್ಲಿ, ದಲಿತ ಜನಸಂಖ್ಯೆಯ ಪ್ರಮಾಣ ಭಾರತದ ಒಟ್ಟು ಜನಸಂಖ್ಯೆಯ ೧೬.೨ ಪ್ರತಿಶತ ಇತ್ತು. ದಲಿತರು ಭಾರತದ ಎಲ್ಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಇದ್ದಾರೆ.
- ೨೦೦೧ ರಲ್ಲಿ, ಪಂಜಾಬ್ ರಾಜ್ಯವು ಜನಸಂಖ್ಯೆಯ ಅತಿಹೆಚ್ಚು ಭಾಗ (ಸುಮಾರು೨೯ ಶೇಕಡಾ)ರಷ್ಟು, ದಲಿತರನ್ನು ಹೊಂದಿತ್ತು ಮತ್ತು ಮಿಜೋರಾಮ್ ರಾಜ್ಯವು ಅತಿ ಕಡಿಮೆ ಭಾಗ ( ಹೆಚ್ಚೂಕಡಿಮೆ ಇಲ್ಲವೇ ಇಲ್ಲ ಎನ್ನುವಷ್ಟು) ದಲಿತ ಜನರನ್ನು ಹೊಂದಿತ್ತು. ಭಾರತ ಸರ್ಕಾರವು ಅವರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಿ ಅವರ ಹಿತವನ್ನು ಕಾಯುತ್ತದೆ.
ಪದದ ಅರ್ಥ
ಬದಲಾಯಿಸಿ- 'ದಲಿತ' ಶಬ್ದಕ್ಕೆ ಸಮಾನಾರ್ಥಕವಾಗಿ 'ಪರಿಶಿಷ್ಟ ಜಾತಿ(SCHEDULED CASTE ONLY)'ಶಬ್ದವನ್ನು ಬಳಸಲಾಗುತ್ತದೆ.ಈ ಶಬ್ದಗಳು ಶೂದ್ರರು ಮತ್ತು ಅಸ್ಪೃಶ್ಯರಂತಹ ಭಾರತದ ಐತಿಹಾಸಿಕವಾಗಿ ಭೇದಭಾವ ಮಾಡಲ್ಪಟ್ಟ ಕೆಳಜಾತಿಗಳನ್ನು ಒಳಗೊಳ್ಳುತ್ತವೆ. ದಲಿತರನ್ನು ಸಾಮಾನ್ಯವಾಗಿ ಹಿಂದೂಧರ್ಮದೊಂದಿಗೆ ಗುರುತಿಸಲಾಗಿದೆ.
- ದಲಿತರು ಮತ್ತು ಅಂಥ ಜನರು ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲೂ ಇದ್ದಾರೆ. ದಲಿತರಂಥ ಸಾಮಾಜಿಕ ಸ್ಥಿತಿಗತಿಗಳನ್ನು ಹೊಂದಿದ ಜನರು ಜಪಾನ್, ಕೊರಿಯಾ, ಯೆಮೆನ್, ಸೋಮಾಲಿಯಾಗಳಲ್ಲೂ ಇದ್ದಾರೆ.
ದಲಿತರು ಮತ್ತು ಧರ್ಮಗಳು
ಬದಲಾಯಿಸಿ೨೦೦೬ರ ಸಾಚಾರ್ ಸಮಿತಿ ವರದಿಯು ಪರಿಶಿಷ್ಟಜಾತಿ ಮತ್ತು ವರ್ಗಗಳ ಜನರು ಹಿಂದೂಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತೋರಿಸುತ್ತದೆ.
ಧರ್ಮ | ಪರಿಶಿಷ್ಟ ಜಾತಿ(SC) |
|
ಬೌದ್ಧಧರ್ಮ | 89.50% | ಕ್ರಿಶ್ಚಿಯನ್ ಧರ್ಮ | 9.00% | ಸಿಖ್ ಧರ್ಮ | 30.70% | ಹಿಂದೂ ಧರ್ಮ | 22.20% | ಝಾರತುಷ್ಟ್ರ ಧರ್ಮ | – |
---|
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ
ಬದಲಾಯಿಸಿ- ‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಆದರೆ ಸಾಮಾಜಿಕವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಜಾತಿಗಳಿಗೆ ಆದ್ಯತೆ ನೀಡಲೇಬೇಕು. ಅದಕ್ಕೆ ಒಳಮೀಸಲಾತಿ ಎನ್ನಿ, ಮೀಸಲಾತಿ ಪುನರ್ ವಿಂಗಡಣೆ ಎನ್ನಿ, ಮೀಸಲಾತಿ ಗುಂಪುಗಳು ಎನ್ನಿ, ಏನು ಬೇಕಾದರೂ ಹೇಳಿ. ಅದು ಸಂವಿಧಾನದ ಯಾವುದೇ ವಿಧಿಗಳ ಉಲ್ಲಂಘನೆಯಾಗುವುದಿಲ್ಲ. ಹೀಗೆ ಒಳಮೀಸಲಾತಿ ನೀಡುವುದರಿಂದ ಎಲ್ಲರಲ್ಲಿಯೂ ಸಮಾನತೆ ಬರುತ್ತದೆ. ಸಮಾನ ಅವಕಾಶ ಒದಗುತ್ತದೆ. ಇದರಿಂದ ಯಾರೂ ಯಾರನ್ನೂ ದ್ವೇಷಿಸುವ ಸಂದರ್ಭ ಇಲ್ಲ. ಯಾರ ಬಗ್ಗೆ ಅಸೂಯೆ ಪಡುವ ಕಾರಣಗಳೂ ಇಲ್ಲ. ಸಿಟ್ಟಿಗೂ ಅವಕಾಶ ಇಲ್ಲ’.
- ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಲು 2005ರಲ್ಲಿ ನೇಮಕವಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಸ್ಪಷ್ಟ ಅಭಿಪ್ರಾಯ ಇದು.
- ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು (ಗುಂಪುಗಳ ವಿವರಕ್ಕೆ ಈ ಲೇಖನದ ಮೇಲ್ಭಾಗದಲ್ಲಿರುವ ‘ಯಾವ ಗುಂಪಲ್ಲಿ ಯಾರಿದ್ದಾರೆ’ ಬಾಕ್ಸ್ ನೋಡಿ). ಪರಿಶಿಷ್ಟ ಜಾತಿಗೆ ಈಗ ಇರುವ ಶೇ 15ರಷ್ಟು ಮೀಸಲಾತಿಯಲ್ಲಿ ಮೊದಲ ಗುಂಪಿಗೆ ಶೇ 6, ಎರಡನೇ ಗುಂಪಿಗೆ ಶೇ 5, ಮೂರನೇ ಗುಂಪಿಗೆ ಶೇ 3 ಹಾಗೂ ನಾಲ್ಕನೇ ಗುಂಪಿಗೆ ಶೇ 1ರಷ್ಟು ಮೀಸಲಾತಿ ಒದಗಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಈ ಬಗ್ಗೆ ತಿದ್ದುಪಡಿ ತರಬೇಕು ಎಂದೂ ಆಯೋಗ ಶಿಫಾರಸು ಮಾಡಿದೆ.[೧]
ಒಳಮೀಸಲಾತಿಗೆ ವಿರೋಧ
ಬದಲಾಯಿಸಿ- ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಗುರುತಿಸಿಕೊಳ್ಳುವವರು ಎಡಗೈ, ಬಲಗೈ ಎರಡೂ ಸಮುದಾಯದಲ್ಲಿದ್ದಾರೆ. ಜಾತಿ ಹೆಸರಿನಲ್ಲಿ ಗುರುತಿಸಿಕೊಳ್ಳುವವರಲ್ಲಿಯೇ ಗೊಂದಲವಿದೆ. ರಾಜ್ಯ ಸರ್ಕಾರ ನಡೆಸಿದ ಜಾತಿವಾರು ಜನಗಣತಿಯಲ್ಲಿ ಉಪಜಾತಿಗಳ ವಿವರವನ್ನು ಪಡೆದುಕೊಂಡಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಒಳಮೀಸಲಾತಿ ನೀಡುವ ಮುನ್ನ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲಿ. ಇಲ್ಲದಿದ್ದರೆ, ಯಾರಾದರೂ ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋದರೆ ಸರ್ಕಾರದ ಅಪೇಕ್ಷೆಯೂ ಈಡೇರುವುದಿಲ್ಲ ಎಂದು ಜೆಡಿಎಸ್ ಶಾಸಕರೊಬ್ಬರು ಅಭಿಪ್ರಾಯಪಟ್ಟರು.
- ಮುಖ್ಯಮಂತ್ರಿಗೆ ನಿಜವಾಗಿ ಒಳಮೀಸಲಾತಿ ಜಾರಿ ಮಾಡಬೇಕೆಂಬ ಸದಿಚ್ಛೆ ಇದ್ದರೆ ಹಿಂದುಳಿದ ವರ್ಗದಲ್ಲಿ ಮೊದಲು ಒಳಮೀಸಲಾತಿ ತರಲಿ. ಪ್ರವರ್ಗ ಎ ಯಲ್ಲಿ 95 ಜಾತಿಗಳಿದ್ದು ಕೇವಲ 23 ಜಾತಿಗಳಿಗೆ ಮೀಸಲಾತಿ ಸಿಕ್ಕಿದೆ. ಶೇ 15ರಷ್ಟು ಮೀಸಲಾತಿ ಇರುವ ಪ್ರವರ್ಗ 2ಎ ನಲ್ಲಿ 102 ಜಾತಿಗಳಿದ್ದು, ಕುರುಬ, ಈಡಿಗ ಸಮುದಾಯಗಳಷ್ಟೇ ಹೆಚ್ಚಿನ ಸೌಲಭ್ಯ ಪಡೆದಿವೆ. ಉಪ್ಪಾರ, ಗೊಲ್ಲ, ಬೆಸ್ತ, ಕ್ಷೌರಿಕ, ಮಡಿವಾಳ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ. ಪ್ರವರ್ಗ 2 ಬಿ ಯಲ್ಲಿ ಮುಸ್ಲಿಮರು ಹೆಚ್ಚಿನ ಸೌಲಭ್ಯ ಪಡೆದಿದ್ದಾರೆ. ಪ್ರವರ್ಗ 3 ಎ ಯಲ್ಲಿ ಒಕ್ಕಲಿಗರು, ಪ್ರವರ್ಗ 3 ಬಿ ಯಲ್ಲಿ ಲಿಂಗಾಯತರು ಮೀಸಲಾತಿಯ ಬಹುಪಾಲನ್ನು ದಕ್ಕಿಸಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಮುನ್ನ ಹಿಂದುಳಿದವರಲ್ಲಿ ಮೀಸಲಾತಿ ತಂದರೆ 200ಕ್ಕೂ ಹೆಚ್ಚು ಮೀಸಲಾತಿ ವಂಚಿತ ಜಾತಿಗಳಿಗೆ ಸೌಲಭ್ಯ ಸಿಗಲಿದೆ. ಸರ್ಕಾರ ಈ ಬಗ್ಗೆ ಮರು ಚಿಂತನೆ ಮಾಡಲಿ ಎಂದು ಬಿಜೆಪಿ ಶಾಸಕರೊಬ್ಬರು ಸಲಹೆ ನೀಡಿದರು.ವಿರೋಧಕ್ಕೆ ವಿವಿಧ ಆಯಾಮ;;ವೈ.ಗ. ಜಗದೀಶ್;10 Dec, 2016 Archived 2016-12-10 ವೇಬ್ಯಾಕ್ ಮೆಷಿನ್ ನಲ್ಲಿ.
ಒಳಮೀಸಲಾತಿ ಒತ್ತಾಯ ದಲಿತ ಏಕತೆಗೆ ಮಾರಕ
ಬದಲಾಯಿಸಿ- 1976ರ ಎಲ್.ಜಿ.ಹಾವನೂರ್ ವರದಿಯಲ್ಲಿ ಉಲ್ಲೇಖವಾಗಿರುವಂತೆ, ಮಾದಿಗ ಜಾತಿ ಜನಸಂಖ್ಯೆ ರಾಜ್ಯದ ಒಟ್ಟಾರೆ ಪರಿಶಿಷ್ಟರಲ್ಲಿ ಶೇ 57.3ರಷ್ಟಿತ್ತು. ಶೇ 15ರಲ್ಲಿ ಇವರಿಗೆ ಸಿಗಬೇಕಾದ ಪಾಲು ಶೇ 8. ಆದರೆ ಸಿಕ್ಕಿರುವುದು ಶೇ 2ರಷ್ಟು ಮಾತ್ರ. ಇನ್ನುಳಿದ 6ರಷ್ಟನ್ನು ಯಾರು ದೋಚಿದರು? ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾದರೆ ಕಳೆದುಕೊಂಡಿರುವ ಶೇ 6ರ ಅವಕಾಶಗಳನ್ನು ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ವಾಪಸ್ ಪಡೆಯಬಹುದೆಂಬ ಆಸೆಗಣ್ಣಿನಿಂದ ಮಾದಿಗ ಜಾತಿ ಸಮುದಾಯವು ಸದಾಶಿವ ವರದಿ ಜಾರಿಗೆ ಹಟ ಹಿಡಿದು ಕುಳಿತಿದೆ. ಇದಕ್ಕೆ ಪೂರಕವಾಗಿ ಧರಣಿ, ಜನಶಕ್ತಿ ಸಮಾವೇಶ, ವಿಚಾರ ಸಂಕಿರಣಗಳನ್ನು ಸಂಘಟಿಸುತ್ತಿದೆ. ಮಾತ್ರವಲ್ಲದೆ ಹಿಂದೆ ಬೆಳಗಾವಿ ಅಧಿವೇಶನದ ಸಮಯದಲ್ಲಿ ‘ವಿಧಾನಸೌಧ ಚಲೋ’ ನಡೆಸಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದ ಘಟನೆಗೆ, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷಿಯಾಗಿದ್ದಾರೆ. ಮೀಸಲಾತಿಯಲ್ಲಿ ಸಮಪಾಲು ಬೇಕೆಂದು ಹಟ ಹಿಡಿಯುವಂತೆ ಕಣ್ಣುತೆರೆಸಿದ ಮತ್ತಷ್ಟು ಸಂಗತಿಗಳನ್ನು ಗಮನಿಸಬೇಕಾಗಿದೆ.
- ಪ್ರಮುಖವಾಗಿ ಒಳಮೀಸಲಾತಿ ವಿರೋಧಿ ನಿಲುವಿನ ಸಾರಾಂಶ ಇಲ್ಲಿದೆ: ಸದಾಶಿವ ಆಯೋಗದ ವರದಿ ಅವೈಜ್ಞಾನಿಕ, ಹೊಲೆಮಾದಿಗ ಜಾತಿಗಳ ನಡುವೆ ಒಳಜಗಳಕ್ಕೆ ಕಾರಣವಾಗುತ್ತದೆ, ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿದೆ, ಒಳಮೀಸಲಾತಿ ಒತ್ತಾಯ ದಲಿತ ಏಕತೆಗೆ ಮಾರಕ, ಖಾಸಗೀಕರಣದ ಸಂದರ್ಭದಲ್ಲಿ ಒಳಮೀಸಲಾತಿ/ಮೀಸಲಾತಿ ಅಪ್ರಸ್ತುತ.
- ಈ ಎಲ್ಲ ಕಾರಣಗಳೂ ಅವೈಜ್ಞಾನಿಕವಾದವು. ತಾತ್ವಿಕ ಆಧಾರ ಮತ್ತು ನೈತಿಕ ಹೊಣೆಗಾರಿಕೆಯಿಲ್ಲದವು. ಮೊದಲನೆಯದಾಗಿ, ಅವಿವೇಕ ಮತ್ತು ಸ್ವಹಿತಾಸಕ್ತಿಯಲ್ಲಿ ಹುಟ್ಟಿದ ಅಭಿಪ್ರಾಯಗಳಾಗಿವೆ. ‘ಆಯೋಗದ ವರದಿಯ ಪ್ರತಿ ಯಾರ ಕೈಗೂ ಸಿಕ್ಕಿಲ್ಲ. ವಿಧಾನಸಭೆಯಲ್ಲಿ ಮಂಡಿಸುವವರೆಗೆ, ಮುಕ್ತ ಚರ್ಚೆಗೆ ಒಳಗಾಗುವವರೆಗೆ ವರದಿಯ ಯಾವ ಅಂಶವೂ ಬೆಳಕಿಗೆ ಬರುವುದಿಲ್ಲ. ಪತ್ರಿಕೆಯಲ್ಲಿ ವರದಿಯಾದ ಮುಖ್ಯಾಂಶಗಳ ಆಧಾರದ ಮೇಲೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದ್ದರಿಂದ ವರದಿ ಅವೈಜ್ಞಾನಿಕ’ ಎನ್ನುವುದು ಒಳಮೀಸಲಾತಿ ವಿರೋಧಿಗಳ ಸ್ವ-ಕಲ್ಪನೆ.[೨]
ಅಂಕೆ ಸಂಖ್ಯೆಗಳು ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಇದುವೆರೆಗೂ ಸಾರ್ವಜನಿಕರ ಅವಗಾಹನೆಗೆ ಬಿಟ್ಟಿರುವುದಿಲ್ಲ ಹಾಗಾಗಿ ಇದು ಕೇವಲ ಅಲ್ಲಲ್ಲಿ ಸಿಗುವ ಅಂಕಿ ಸಂಖ್ಯೆಗಳನ್ನು ಆಧರಿಸಿದ್ದಾಗಿದೆ.
ಬದಲಾಯಿಸಿಗುಂಪುಗಳ ವಿಭಾಗ
ಬದಲಾಯಿಸಿಗುಂಪು | ಗುಂಪಿನ ವಿವರ | ಶೇಕಡಾ ಪ್ರಮಾಣ | ಜನಸಂಖ್ಯೆ | |
---|---|---|---|---|
1. | ಎಡಗೈ ಗುಂಪು ಮಾದಿಗ, ಆದಿದ್ರಾವಿಡ, ಭಾಂಬಿ | 33.47% | 32,35,517 | |
2. | ಬಲಗೈ ಗುಂಪು ಹೊಲೆಯ, ಆದಿ ಕರ್ನಾಟಕ, ಚಲವಾದಿ, | 32.01% | 30,93,693 | |
3. | ಇತರೆ, ಆದಿ ಆಂಧ್ರ ಆದಿಯ, ಬಂಧಿ,
ಜಂಗಮ, ಹೊಲೆಯ ದಾಸರಿ ಮತ್ತು ಇತರ 42 ಜನಾಂಗದವರು. || 4.65% || 4,49,879 | |||
4. | ಸ್ಪರ್ಶರು,ಬಂಜಾರ, ಬೋವಿ, ಕೊರಚ, ಕೊರಮ, ಮತ್ತು ಇತರರು. | 23.64% | 22,84,642 | |
5 | ಜನರಿಕ್ : ಉಪಜಾತಿ ಬಹಿರಂಗಕ್ಕೆ ನಿರಾಕರಿಸಿದವರು | 6,02,373 |
ರಾಜ್ಯದ ಪರಿಶಿಷ್ಟಜಾತಿ ಉದ್ಯೋಗಿಗಳ ವಿವರ ಶೇಕಡಾವಾರು
ಬದಲಾಯಿಸಿ- ಜನರಿಕ್ : ಉಪಜಾತಿ ಬಹಿರಂಗಕ್ಕೆ ನಿರಾಕರಿಸಿದವರು.
ಗುಂಪು | ಉದ್ಯೋಗಿಗಳ ಪ್ರಮಾಣ | ರಾಜ್ಯ ಕೇಂದ್ರ ಬ್ಯಾಂಕ್ ಖಾಸಗಿವಲಯ | ಚುನಾಯಿತ ಪ್ರತಿನಿಧಿಗಳು |
---|---|---|---|
1 | 15.85 | 31.75 | 34.76 |
2 | 14.50 | 38.17 | 33.85 |
3 | 2 | 8.69 | 4.29 |
4 | 10.86 | 15.74 | 22.66 |
ಜನರಿಕ್ | 1.99 | 5.66 | 4.45 |
- ಆಧಾರ: 2011ರ ಜನಗಣತಿ ಆಧರಿಸಿದ ಸದಾಶಿವ ಆಯೋಗದ ವರದಿ.
ಕರ್ನಾಟಕದಲ್ಲಿ ಪರಿಶಿಷ್ಟರ ಸಂಖ್ಯೆ
ಬದಲಾಯಿಸಿಪರಿಶಿಷ್ಟ ಜಾತಿ ಜನಸಂಖ್ಯೆ | ಪುರುಷರು | ಮಹಿಳೆಯರು | ನಗರವಾಸಿಗಳು | ಗ್ರಾಮ ವಾಸಿಗಳು |
---|---|---|---|---|
96.66 ಲಕ್ಷ | 49.05 ಲಕ್ಷ | 47.60 ಲಕ್ಷ | 22.82 ಲಕ್ಷ | 73.83 ಲಕ್ಷ |
50.75% | 49.25% | 23.61% | 76.39% |
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ಒಳಮೀಸಲಾತಿ;ನ್ಯಾ. ಸದಾಶಿವ ಆಯೋಗದ 'ಸದಾಶಯ' ಏನು?;ರವೀಂದ್ರ ಭಟ್ಟ;10 Dec, 2016". Archived from the original on 2016-12-10. Retrieved 2016-12-10.
- ↑ ಜಾತಿಯಲ್ಲಿ ಒಳಮೀಸಲಾತಿ;ಒಳಗಣ್ಣು ತೆರೆಯಲಿ;ಕೆ.ಬಿ. ಸಿದ್ದಯ್ಯ;10 Dec, 2016[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಅಂತರಾಳ;ನ್ಯಾ. ಸದಾಶಿವ ಆಯೋಗದ 'ಸದಾಶಯ' ಏನು?;ರವೀಂದ್ರ ಭಟ್ಟ;10 Dec, 2016". Archived from the original on 2016-11-23. Retrieved 2016-12-10.