ಪರಶುರಾಮ್
ಟೆಂಪ್ಲೇಟು:Infobox film/short description
ಪರಶುರಾಮ್ |
---|
ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸ್ವಯಂ-ನಿವೃತ್ತಿ ಹೊಂದಿದ ಪರಶುರಾಂ,ಬೆಂಗಳೂರಿನಲ್ಲಿ ಖಾಸಗಿ ಭದ್ರತಾ ಸಂಸ್ಥೆಯನ್ನು ನಡೆಸುತ್ತಾ,ಪತ್ನಿ ಉಷಾ, ಮಗನ ಜೊತೆ ನೆಮ್ಮದಿಯ ಬದುಕು ನಡೆಸುತ್ತಿರುತ್ತಾನೆ. ರಾಜ್ಯ ಸರ್ಕಾರವನ್ನೇ ಮುಷ್ಟಿಯಲ್ಲಿ ಇಟ್ಟುಕೊಂಡಿರುವ ಎಂಡಿ,ಪುರೋಹಿತ್ ಮತ್ತು ನಾಯಕ್ ಎಂಬ ಮೂರು ಮಂದಿಯ ಪಟ್ಟಭದ್ರ ಹಿತಾಸಕ್ತಿಗಳು ಸಮಾಜ-ವಿರೋಧಿ ಕಾರ್ಯ ಮಾಡುತ್ತಿರುತ್ತಾರೆ. ಕೊಳಚೆ ಪ್ರದೇಶದ ಗುಡಿಸಲುಗಳಿಗೆ ಕೊಳ್ಳಿ ಇಟ್ಟು, ಬಡವರನ್ನು ಎತ್ತಂಗಡಿ ಮಾಡಿಸುವ ಅವರ ಕಾರ್ಯವನ್ನು ತಡೆವ ಪರಶುರಾ, ಅಲ್ಲಿಯ ಅಪ್ಪು ಎಂಬ ಹುಡುಗನನ್ನು ಒಳ್ಳೆ ದಾರಿಗೆ ತರುತ್ತಾನೆ. ಚಿತ್ರನಟಿ ಮೋಹಿನಿಯನ್ನು ಅಪಹರಣ ಮಾಡಲು ಅಪ್ಪುವನ್ನು ಬಳಸುವ ಕಳ್ಳರನ್ನು ಪರಶುರಾಂ ಹಿಡಿದು ಪೋಲಿಸರಿಗೆ ಒಪ್ಪಿಸುತ್ತಾನೆ. ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಅಕ್ರಮ ಹಣ ನೀಡಲು ಚಂದಾ ಎತ್ತಲು ಬಂದ ಪುಂಡರನ್ನು ಪರಶುರಾಂ, ಬಡಿದು ಪಳಗಿಸುತ್ತಾನೆ. ಎಂಡಿ,ಪುರೋಹಿತ್ ಮತ್ತು ನಾಯಕ್ ಪರಶುರಾಂ ನ ಚರಿತ್ರೆ ಅರಿತು ಸಂಧಾನಕ್ಕೆ ಕರೆಸುತ್ತಾನೆ. ಆದರೆ, ಪರಶುರಾಂ ಅವರ ಬೆದರಿಕೆಗೆ ಬಗ್ಗದೆ, ಅವರಿಗೇ ಎಚ್ಚರಿಕೆ ನೀಡುತ್ತಾನೆ. ಮಗನ ಹುಟ್ಟುಹಬ್ಬದ ದಿನವೇ ಮಗ ಮತ್ತು ಪತ್ನಿಯನ್ನು ಕಳೆದುಕೊಳ್ಳುತ್ತಾನೆ. ಅಪ್ಪು, ಮೋಹಿನಿ ಮತ್ತು ಪತ್ರಕರ್ತನೊಬ್ಬನ ಸಹಾಯದಿಂದ ಜೆಕೆ,ಪುರೋಹಿತ್ ಮತ್ತು ನಾಯಕ್ ಮೂವರನ್ನೂ ಸಂಹಾರ ಮಾಡುವ ಮೂಲಕ ಪರಶುರಾ, ತನ್ನ ಸೇಡು ತೀರಿಸುಕೊಳ್ಳುತ್ತಾನೆ.