ಪನೀರ್ ಮಖನಿ

ಭಾರತದ ಪನೀರ್ ಕರಿ ಖಾದ್ಯ

ಪನೀರ್ ಮಖನಿ (ಪನೀರ್ ಬಟರ್ ಮಸಾಲಾ ಎಂದೂ ಕರೆಯಲ್ಪಡುತ್ತದೆ) ಪನೀರ್‌ನ ಸ್ವಲ್ಪ ಸಿಹಿಯಾಗಿರುವ ಕೆನೆಭರಿತ ಖಾದ್ಯ. ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡಿತು. ಇದರ ಗ್ರೇವಿಯನ್ನು ಸಾಮಾನ್ಯವಾಗಿ ಬೆಣ್ಣೆ (ಮಕ್ಖನ್), ಟೊಮೇಟೊ, ಗೋಡಂಬಿ ಅಥವಾ ಕೆನೆಯಿಂದ ತಯಾರಿಸಲಗುತ್ತದೆ.[೧] ಈ ಗ್ರೇವಿಯನ್ನು ತಯಾರಿಸಲು ಕೆಂಪು ಖಾರದ ಪುಡಿ ಮತ್ತು ಗರಂ ಮಸಾಲಾದಂತಹ ಸಂಪಾರ ಪದಾರ್ಥಗಳನ್ನು ಕೂಡ ಬಳಸಲಾಗುತ್ತದೆ.

ಪನೀರ್ ಬಟರ್ ಮಸಾಲಾ ಭಾರತದಲ್ಲಿ ಪೂರೈಸಲು ವಿನಂತಿಸಲಾದ ಅಗ್ರ ಐದು ಆಹಾರಗಳಲ್ಲಿ ಒಂದು ಎಂದು ಒಂದು ಸಮೀಕ್ಷೆಯು ಕಂಡುಕೊಂಡಿತು.[೨]

ಮಖನಿ ಎಂದರೆ 'ಬೆಣ್ಣೆಯುಳ್ಳ' ಎಂದು. ಈ ಖಾದ್ಯವು ೧೯೫೦ರ ದಶಕದಲ್ಲಿ ಹುಟ್ಟಿಕೊಂಡಿತು. ಆಗ ದೆಹಲಿಯ ಮೋತಿ ಮೆಹೆಲ್ ರೆಸ್ಟೋರೆಂಟ್‍ನ ಪಂಜಾಬಿಗಳು ಸಾಸ್‍ನ್ನು ಟೊಮೇಟೊ ಆಧಾರಿತ ಮೇಲೋಗರದಲ್ಲಿ ತಾಜಾ ಬೆಣ್ಣೆಯನ್ನು ಸೇರಿಸಿ ಆವಿಷ್ಕರಿಸಿದರು.[೩]

ಉಲ್ಲೇಖಗಳು ಬದಲಾಯಿಸಿ

  1. "Paneer Makhani – NDTV Food". food.ndtv.com. Retrieved 2016-07-31.
  2. "India Is Very Partial To This One Dish While Ordering Late Night Deliveries Online". Retrieved 2016-07-31.
  3. Tarla Dalal (20 February 1990). Desi Khana. Sanjay & Co. pp. 40–. ISBN 978-81-86469-00-2. Paneer Makhani as the name suggests is a very rich subzi from the lap of Punjab. It uses one of Punjabi cuisines most loved ingredients butter. In traditional Punjabi houses, the women folk make pure white butter from thick creamy milk.