ಪದ್ಮಶ್ರೀ ವಾರಿಯರ್

ಪದ್ಮಶ್ರೀ ವಾರಿಯರ್ (ಯೆಲ್ಲೆಪೆಡ್ಡಿ ಪದ್ಮಶ್ರೀ ) ಒಬ್ಬ ಭಾರತೀಯ-ಅಮೇರಿಕನ್ ಉದ್ಯಮಿ ಮತ್ತು ತಂತ್ರಜ್ಞಾನ ಕಾರ್ಯನಿರ್ವಾಹಕಿ. ಅವರು ಸಿಸ್ಕೋದಂತಹ ತಂತ್ರಜ್ಞಾನ ಸಂಸ್ಥೆಗಳಲ್ಲಿ ನಾಯಕತ್ವದ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅಲ್ಲಿ ಅವರು ಏಳು ವರ್ಷಗಳ ಕಾಲ ಸಿಟಿಒ ಆಗಿ ಸೇವೆ ಸಲ್ಲಿಸಿದರು ಮತ್ತು ಐದು ವರ್ಷಗಳ ಕಾಲ ಮೊಟೊರೊಲಾದಲ್ಲಿ ಕೂಡ ಸಿಟಿಒ ಆಗಿದ್ದರು . ಅವರು ಎಲೆಕ್ಟ್ರಿಕ್ ಕಾರು ತಯಾರಕ ನಿಯೋ ಯುಎಸ್‌ಅ ನ ಸಿ‌ಇಒ ಆಗಿಯೂ ಸೇವೆ ಸಲ್ಲಿಸಿದರು. ಪ್ರಸ್ತುತ, ಅವರು ಮಾನಸಿಕ ಸ್ವಾಸ್ಥ್ಯದ ಮೇಲೆ ಕೇಂದ್ರೀಕರಿಸಿದ ಕ್ಯುರೇಟೆಡ್ ಓದುವ ವೇದಿಕೆಯಾದ ಫೇಬಲ್‌ನ ಸಂಸ್ಥಾಪಕಿ ಮತ್ತು ಸಿ‌ಇಒ ಆಗಿದ್ದಾರೆ. [] ಅವರು ಮೈಕ್ರೋಸಾಫ್ಟ್ [] ಮತ್ತು ಸ್ಪೊಟಿಫ಼ೈ ನಿರ್ದೇಶಕರ ಮಂಡಳಿಯಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. []

ಪದ್ಮಶ್ರೀ ವಾರಿಯರ್
ಸೆಪ್ಟೆಂಬರ್ ೨೦೧೬ ರಲ್ಲಿ ವಾರಿಯರ್
Born
ಯೆಲ್ಲೆಪೆಡ್ಡಿ ಪದ್ಮಶ್ರೀ

ವಿಜಯವಾಡ, ಆಂಧ್ರ ಪ್ರದೇಶ, ಭಾರತ
Education
  • ಐಐಟಿ ಡೆಲ್ಲಿ (ಬಿಎಸ್)
  • ಕಾರ್ನೆಲ್ ವಿಶ್ವವಿದ್ಯಾನಿಲಯ (ಎಮ್‌ಎಸ್)
Spouseಮೋಹನ್ ದಾಸ್ ವಾರಿಯರ್
Children1

೨೦೧೪ರಲ್ಲಿ, ಅವರು ಫೋರ್ಬ್ಸ್‌ನಿಂದ ವಿಶ್ವದ ೧೦೦ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟರು. [] ೨೦೧೮ ರಲ್ಲಿ ಅವರು ಫೋರ್ಬ್ಸ್‌ನಿಂದ "ಅಮೆರಿಕದ ಟಾಪ್ ೫೦ ವುಮೆನ್ ಇನ್ ಟೆಕ್" ನಲ್ಲಿ ಕಾಣಿಸಿಕೊಂಡರು. []

ಆರಂಭಿಕ ಜೀವನ

ಬದಲಾಯಿಸಿ

ಯೆಲ್ಲೆಪೆಡ್ಡಿ ಪದ್ಮಶ್ರೀ ಅವರು ಭಾರತದ ಆಂಧ್ರಪ್ರದೇಶದ ವಿಜಯವಾಡದ ತೆಲುಗು ಕುಟುಂಬದಲ್ಲಿ ಜನಿಸಿದರು. [] ಅವಳು ವಿಜಯವಾಡದ ಮಕ್ಕಳ ಮಾಂಟೆಸ್ಸರಿ ಶಾಲೆ ಮತ್ತು ಮಾರಿಸ್ ಸ್ಟೆಲ್ಲಾ ಕಾಲೇಜಿನಲ್ಲಿ ತಮ್ಮ ವಿದ್ಯಭ್ಯಾಸ ಮಾಡಿದರು. ವಾರಿಯರ್ ೧೯೮೨ ರಲ್ಲಿ ಐಐಟಿ ದೆಹಲಿಯಿಂದ ರಾಸಾಯನಿಕ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. [] [] ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. []

ವೃತ್ತಿ

ಬದಲಾಯಿಸಿ

ಮೊಟೊರೊಲಾ

ಬದಲಾಯಿಸಿ

ವಾರಿಯರ್ ೧೯೮೪ ರಲ್ಲಿ ಮೊಟೊರೊಲಾವನ್ನು ಸೇರಿದರು [೧೦] ಕಂಪನಿಯಲ್ಲಿ ತನ್ನ ೨೩ ವರ್ಷಗಳ ಅವಧಿಯಲ್ಲಿ ಅವರು ಕಾರ್ಪೊರೇಟ್ ಉಪಾಧ್ಯಕ್ಷರಾಗಿ ಮತ್ತು ಮೊಟೊರೊಲಾದ ಎನರ್ಜಿ ಸಿಸ್ಟಮ್ಸ್ ಗ್ರೂಪ್‌ನ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು ಮತ್ತು ಅದರ ಸೆಮಿಕಂಡಕ್ಟರ್ ಉತ್ಪನ್ನಗಳ ವಲಯದಲ್ಲಿ ಕಾರ್ಪೊರೇಟ್ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. [೧೦] ಮೊಟೊರೊಲಾದ ಸಿಟಿಒ ಆಗುವ ಮೊದಲು, ಅರಿಜೋನಾದ ಟೆಂಪೆಯಲ್ಲಿ ಮೊಟೊರೊಲಾದ ಉತ್ಪನ್ನವಾದ ಥಾಟ್‌ಬೀಮ್‌ನ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು. ಜನವರಿ ೨೦೦೩ರಲ್ಲಿ ಮೊಟೊರೊಲಾದ ಸಿಟಿಒ ಎಂದು ಹೆಸರಿಸಿದಾಗ, ವಾರಿಯರ್ ಹಿರಿಯ ಉಪಾಧ್ಯಕ್ಷರಾದರು ಮತ್ತು ೨೦೦೫ ರಲ್ಲಿ ಅವರು ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಬಡ್ತಿ ಪಡೆದರು. [೧೧] [೧೨]

ವಾರಿಯರ್ ಸಿಟಿಒ ಆಗಿದ್ದಾಗ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಿಂದ ೨೦೦೪ರ ರಾಷ್ಟ್ರೀಯ ತಂತ್ರಜ್ಞಾನದ ಪದಕವನ್ನು ಮೊಟೊರೊಲಾಗೆ ನೀಡಲಾಯಿತು, ಕಂಪನಿಯು ಈ ಗೌರವವನ್ನು ಪಡೆದ ಮೊದಲ ಬಾರಿಯಾಗಿತ್ತು. ಈ ಅವಧಿಯಲ್ಲಿ ಅವರು "ಸೀಮ್‌ಲೆಸ್ ಮೊಬಿಲಿಟಿ"ಯ ಪ್ರತಿಪಾದಕರಾಗಿದ್ದರು - ವ್ಯಕ್ತಿಯ ಜೀವನದ ಎಲ್ಲಾ ಅಂಶಗಳಲ್ಲಿ ತಡೆರಹಿತ ಸಂವಹನವನ್ನು ಹೊಂದುವ ಪರಿಕಲ್ಪನೆಯಿದ್ದಿತ್ತು. ಕನಸು ಸಂಪೂರ್ಣವಾಗಿ ನನಸಾಗಲಿಲ್ಲ, ಅಂತಿಮವಾಗಿ ಮೊಟೊರೊಲಾ ಮಾರ್ಕೆಟಿಂಗ್ ಪ್ರಸ್ತುತಿಗಳಿಂದ ಪರಿಕಲ್ಪನೆಯನ್ನು ಕೈಬಿಡಲಾಯಿತು.

ಸಿಸ್ಕೋ

ಬದಲಾಯಿಸಿ

೪ ಡಿಸೆಂಬರ್ ೨೦೦೭ರಂದು, ಅವರು ಸಿಸ್ಕೋ ಸಿಸ್ಟಮ್ಸ್‌ನಲ್ಲಿ ಸಿಟಿಒ ಆಗಲು ಮೊಟೊರೊಲಾವನ್ನು ತೊರೆದರು. [೧೩] ನಂತರ ಜೂನ್ ೨೦೧೫[೧೪]ರಂದು ಸಿಸ್ಕೋವನ್ನು ಕೂಡ ತೊರೆದರು.

ಅವರು ಡಿಸೆಂಬರ್ ೨೦೧೫ರಲ್ಲಿ ಚೀನೀ ಎಲೆಕ್ಟ್ರಿಕ್ ಕಾರ್ ಕಂಪನಿಯಾದ ನಿಯೊ ಸಂಯೋಜಿತ ಮಂಡಳಿಯ ಸದಸ್ಯರಾಗಿ ಮತ್ತು ನಿಯೊ ಯು.ಎಸ್. ನ ಸಿ‌ಇಒ ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿ ಸೇರಿದರು. ಡಿಸೆಂಬರ್ ೨೦೧೮[೧೫] ನಿಯೊಗೆ ರಾಜೀನಾಮೆ ನೀಡಿದರು.

ಫ಼ೇಬಲ್

ಬದಲಾಯಿಸಿ

ಸೆಪ್ಟೆಂಬರ್ ೨೦೧೯ ರಲ್ಲಿ, ವಾರಿಯರ್ ಫೇಬಲ್ ಎಂಬ ಹೊಸ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. ಅಲ್ಲಿ ಅವರು ಇದರ ಅಧ್ಯಕ್ಷರು ಮತ್ತು ಸಿ‌ಇಒ ಆಗಿ ಸೇವೆ ಸಲ್ಲಿಸುತ್ತಾರೆ. [] ಜನವರಿ ೨೦೨೧ ರಲ್ಲಿ, ಫೇಬಲ್ ತನ್ನ ಆಪ್, ಚಂದಾದಾರಿಕೆ ಆಧಾರಿತ ಪುಸ್ತಕ ಶಿಫಾರಸು ಎಂಜಿನ್ ಮತ್ತು ಖಾಸಗಿ ಸಾಮಾಜಿಕ ನೆಟ್‌ವರ್ಕ್ ಅನ್ನು ಪ್ರಾರಂಭಿಸಿತು. [೧೬] ವಾರಿಯರ್ ಅವರು ಅರಿವಿನ ಫಿಟ್ನೆಸ್ ಅನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. [೧೭]

ಗುರುತಿಸುವಿಕೆ

ಬದಲಾಯಿಸಿ

ಫಾರ್ಚ್ಯೂನ್ ಪತ್ರಿಕೆಯು ತನ್ನ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಲ್ಕು ಉದಯೋನ್ಮುಖ ತಾರೆಗಳಲ್ಲಿ ಒಬ್ಬರೆಂದು ಕರೆದಿದೆ. [೧೮] ಇವರನ್ನು ೧೦ "ಅಧಿಕ ಸಂಭಾವನೆ" ಮತ್ತು "ಯುವ ಮತ್ತು ಶಕ್ತಿಯುತ" ವರ್ಗಗಳ ನಡುವೆ ಇರಿಸಿತು. ೨೦೦೫ ರಲ್ಲಿ, ದಿ ಎಕನಾಮಿಕ್ ಟೈಮ್ಸ್ ವಾರಿಯರ್ ಅನ್ನು ೧೧ ನೇ ಅತ್ಯಂತ ಪ್ರಭಾವಶಾಲಿ ಜಾಗತಿಕ ಭಾರತೀಯ ಎಂದು ಶ್ರೇಣೀಕರಿಸಿತು. [೧೯] ೨೦೦೧ ರಲ್ಲಿ ವರ್ಕಿಂಗ್ ವುಮನ್ ಮ್ಯಾಗಜೀನ್‌ನಿಂದ "ವಿಮೆನ್ ಎಲಿವೇಟಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿ" ಪ್ರಶಸ್ತಿಯನ್ನು ಸ್ವೀಕರಿಸಲು ರಾಷ್ಟ್ರವ್ಯಾಪಿ ಆಯ್ಕೆಯಾದ ಆರು ಮಹಿಳೆಯರಲ್ಲಿ ಒಬ್ಬರು. [೨೦] ೨೦೧೪ ರ ಹೊತ್ತಿಗೆ, ಅವರು ಫೋರ್ಬ್ಸ್‌ನಿಂದ ವಿಶ್ವದ ೭೧ ನೇ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. [] ೨೦೧೮ ರಲ್ಲಿ ಅವರು ಫೋರ್ಬ್ಸ್‌ನಿಂದ "ಅಮೆರಿಕದ ಟಾಪ್ ೫೦ ವುಮೆನ್ ಇನ್ ಟೆಕ್" ನಲ್ಲಿ ಕಾಣಿಸಿಕೊಂಡರು. [೨೧]

ಕಂಪ್ಯೂಟಿಂಗ್ ಕಾರ್ಡ್‌ಗಳಲ್ಲಿ ಗಮನಾರ್ಹ ಮಹಿಳೆಯರಲ್ಲಿ ವಾರಿಯರ್ ಕಾಣಿಸಿಕೊಂಡಿದ್ದಾರೆ. [೨೨]

ಮಂಡಳಿಯ ಭಾಗವಹಿಸುವಿಕೆ

ಬದಲಾಯಿಸಿ

ವಾರಿಯರ್ ಡಿಸೆಂಬರ್ ೨೦೧೫ರಿಂದ ಮೈಕ್ರೊಸೊಫ಼್ಟ್ ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ. [೨೩] [] ಅವರು ಸ್ಪೊಟಿಫ಼ೈ ನಲ್ಲಿ ಮಂಡಳಿಯ ಸದಸ್ಯರೂ ಆಗಿದ್ದಾರೆ. [೨೪] ಅವರು ೨೦೧೩ ರಿಂದ ೨೦೧೬[೨೫] [೨೬] ಗ್ಯಾಪ್ ಇನ್‌‌ಕಾರ್ಪೊರೆಟೆಡ್ ಬೋರ್ಡ್‌ನ ಸದಸ್ಯರಾಗಿದ್ದರು ಮತ್ತು ೨೦೧೪ ರಿಂದ ೨೦೧೬ರವರೆಗೆ ಬಾಕ್ಸ್ ಬೋರ್ಡ್‌ನಲ್ಲಿದ್ದರು.

ವಾರಿಯರ್ ಅವರು ಥಾರ್ನ್, [೨೭] ಜೋಫ್ರಿ ಬ್ಯಾಲೆಟ್, [೨೮] ಚಿಕಾಗೋದ ವಿಜ್ಞಾನ ಮತ್ತು ಉದ್ಯಮದ ವಸ್ತುಸಂಗ್ರಹಾಲಯ, [೨೯] ಚಿಕಾಗೋ ಮೇಯರ್ಸ್ ಟೆಕ್ನಾಲಜಿ ಕೌನ್ಸಿಲ್, [೩೦] ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಾರೆ. [೩೧] ಅವರು ಈ ಹಿಂದೆ ಕಾರ್ನೆಲ್ ಯೂನಿವರ್ಸಿಟಿ ಬೋರ್ಡ್, [೩೨] ಟೆಕ್ಸಾಸ್ ಗವರ್ನರ್ ಕೌನ್ಸಿಲ್ ಫಾರ್ ಡಿಜಿಟಲ್ ಎಕಾನಮಿ, [೧೦] ಎಫ಼್‌ಸಿಸಿ ಗಾಗಿ ತಂತ್ರಜ್ಞಾನ ಸಲಹಾ ಮಂಡಳಿ ಮತ್ತು ನ್ಯಾಷನಲ್ ಸೈನ್ಸ್ ಫೌಂಡೇಶನ್‌ನ ಕಂಪ್ಯೂಟಿಂಗ್ ಮತ್ತು ಮಾಹಿತಿ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದರು. ಅವರು ರಾಜ್ಯ ಇಲಾಖೆಯ ಅಂತರರಾಷ್ಟ್ರೀಯ ಮಹಿಳಾ ನಾಯಕರ ಮಾರ್ಗದರ್ಶನ ಪಾಲುದಾರಿಕೆಯಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. [೩೧] ವಾರಿಯರ್ ೨೦೦೫ ರಿಂದ [೩೩] ರವರೆಗೆ ಕಾರ್ನಿಂಗ್ ಇನ್ಕಾರ್ಪೊರೇಟೆಡ್‌ನ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ವಾರಿಯರ್‌ರವರು ಮೋಹನ್ ದಾಸ್ ವಾರಿಯರ್ ಅವರನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. [೩೪] [೩೫]

ಉಲ್ಲೇಖಗಳು

ಬದಲಾಯಿಸಿ
  1. "Can former Cisco CTO Padmasree Warrior build a better social network for book lovers?". Fortune (magazine). 14 ಜನವರಿ 2021.
  2. ೨.೦ ೨.೧ ೨.೨ "Padmasree Warrior". Microsoft (in ಇಂಗ್ಲಿಷ್). 2 ಡಿಸೆಂಬರ್ 2015. Retrieved 20 ಜೂನ್ 2020.
  3. "Padmasree Warrior". Spotify (in ಇಂಗ್ಲಿಷ್). Retrieved 20 ಜೂನ್ 2020.
  4. ೪.೦ ೪.೧ "The World's 100 Most Powerful Women". Forbes. Retrieved 26 ಜೂನ್ 2014.
  5. "Padmasree Warrior". Forbes.
  6. "NextEV's Padmasree Warrior on Studio 1.0 - Bloomberg". YouTube. Archived from the original on 3 ಅಕ್ಟೋಬರ್ 2022. Retrieved 25 ಡಿಸೆಂಬರ್ 2022.{{cite web}}: CS1 maint: bot: original URL status unknown (link)
  7. "IIT-Delhi Award goes to Padmasree Warrior, CTO Motorola". The Economic Times. Bennett, Coleman & Co. Ltd. 23 ಆಗಸ್ಟ್ 2004.
  8. "IIT alumni dominate global Indian tech influencers list". The Times of India. Bennett, Coleman & Co. Ltd. 18 ಫೆಬ್ರವರಿ 2012. Retrieved 27 ಜೂನ್ 2012.
  9. Gilpin, Lyndsey. "Cisco CTO Padmasree Warrior: Engineer, Artist, Business Leader, Sage". TechRepublic. ZDNet. Retrieved 28 ಜೂನ್ 2014.
  10. ೧೦.೦ ೧೦.೧ ೧೦.೨ "Padmasree Warrior". VideoLectures.Net. VideoLectures.Net. Retrieved 27 ಜೂನ್ 2012.
  11. "Padmasree Warrior Biography from Motorola" (PDF). Archived from the original (PDF) on 8 ಜುಲೈ 2011. Retrieved 25 ಡಿಸೆಂಬರ್ 2022.
  12. WITI – Hall of Fame
  13. Savitz, Eric. "Cisco Names Padmasree Warrior Chief Technology Officer". Tech Trader Daily. Barron's. Retrieved 28 ಜೂನ್ 2014.
  14. "Report: Cisco CTO Warrior is leaving the company".
  15. "Chinese Tesla competitor NIO loses its US chief executive, Padmasree Warrior". Business Insider.
  16. "Can former Cisco CTO Padmasree Warrior build a better social network for book lovers?". Fortune (magazine). 14 ಜನವರಿ 2021.
  17. "Fable is working to improve cognitive fitness, says CEO Padmasree Warrior". Business Insider (in ಇಂಗ್ಲಿಷ್). Retrieved 20 ಜೂನ್ 2020.
  18. "50 Most Powerful Women in Business 2006 | Fortune Magazine". Money.cnn.com. Retrieved 13 ಏಪ್ರಿಲ್ 2013.
  19. Duttagupta, Ishani (11 ಏಪ್ರಿಲ್ 2005). "Advantage IIT". The Economic Times - indiatimes. Archived from the original on 11 ಏಪ್ರಿಲ್ 2005. Retrieved 19 ಏಪ್ರಿಲ್ 2015.
  20. "TECHXNY/PC EXPO and Working Woman Magazine Announce Winners of First Annual W.E.S.T". Prnewswire.com. Retrieved 13 ಏಪ್ರಿಲ್ 2013.
  21. "Padmasree Warrior". Forbes.
  22. "Notable Women in Computing".
  23. "Microsoft proposes election of new board members". Microsoft News Center. Microsoft. 19 ಅಕ್ಟೋಬರ್ 2015. Retrieved 30 ಡಿಸೆಂಬರ್ 2015.
  24. "Spotify - Governance - Board of Directors - Padmasree Warrior". Spotify. Retrieved 17 ಜೂನ್ 2019.
  25. Lynch, Shana. "Cisco CTO Padmasree Warrior joins Gap board". Silicon Valley Business Journal. American City Business Journals. Retrieved 28 ಜೂನ್ 2014.
  26. "Padmasree Warrior leaves Box's board after joining Microsoft's". VentureBeat. 29 ಜನವರಿ 2016.
  27. "Thorn - About Us". Thorn (organization). Retrieved 17 ಜೂನ್ 2019.
  28. McKenzie, Sheena (20 ಮೇ 2014). "5 things you didn't know about Cisco's Warrior". Leading Women. CNN. Retrieved 28 ಜೂನ್ 2014.
  29. Dugdale, Addy (10 ಮಾರ್ಚ್ 2010). "Crib Sheet: Padmasree Warrior, CTO of Cisco Systems". Leadership. Fast Company. Retrieved 28 ಜೂನ್ 2014.
  30. Cooney, Michael (5 ಡಿಸೆಂಬರ್ 2007). "Cisco lands Padmasree Warrior, Geek Queen". Layer 8. Network World. Retrieved 28 ಜೂನ್ 2014.
  31. ೩೧.೦ ೩೧.೧ "Padmasree Warrior". WITI Hall of Fame. WITI. Retrieved 28 ಜೂನ್ 2014.
  32. "Board of trustees adds seven new members". Cornell University. 28 ಮೇ 2013.
  33. Reese, Brad (19 ಮೇ 2008). "Cisco CTO Padmasree Warrior off Corning Board of Directors". Network World. Network World. Archived from the original on 14 ಜನವರಿ 2015. Retrieved 28 ಜೂನ್ 2014.
  34. McAlone, Nathan. "12 spouses who are lucky to be married to the most powerful women in Silicon Valley". Business Insider. Retrieved 9 ಜುಲೈ 2019.
  35. "5 things you didn't know about Cisco's Warrior". CNN. Retrieved 9 ಜುಲೈ 2019.


ಬಾಹ್ಯ ಕೊಂಡಿಗಳು

ಬದಲಾಯಿಸಿ
  • Padmasree Warrior on Twitter
  • Profile