ಪತ್ರಿಕಾ ಸೂಚನಾ ಕಾರ್ಯಾಲಯ
ಪತ್ರಿಕಾ ಸೂಚನಾ ಕಾರ್ಯಾಲಯ, ಸಾಮಾನ್ಯವಾಗಿ ಪಿಐಬಿ ಎಂದು ಆಂಗ್ಲ ಭಾಷೆಯಲ್ಲಿ ಸಂಕ್ಷಿಪ್ತಗೊಳಿಸಲಾಗಿದೆ. ಇದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿರುವ ಪತ್ರಿಕಾ ಸೂಚನಾ ಕಾರ್ಯಾಲಯ, ಮುದ್ರಣ, ವಿದ್ಯುನ್ಮಾನ ಮತ್ತು ವೆಬ್ ಮಾಧ್ಯಮಗಳಿಗೆ ಸರ್ಕಾರದ ಯೋಜನೆಗಳು, ನೀತಿಗಳು, ಕಾರ್ಯಕ್ರಮ ಉಪಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುತ್ತದೆ.ಇದು ಭಾರತೀಯ ಗಣರಾಜ್ಯದ 22 ಅಧಿಕೃತ ಭಾಷೆಗಳ ಪೈಕಿ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಡೋಗ್ರಿ, ಪಂಜಾಬಿ, ಬಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ಮೈಟೈ (ಮಣಿಪುರಿ) ತಮಿಳು, ಕನ್ನಡ, ತೆಲುಗು, ಮಲಯಾಳಂ, ಕೊಂಕಣಿ ಮತ್ತು ಉರ್ದು ಸೇರಿದಂತೆ 14 ಭಾರತೀಯ ಅಧಿಕೃತ ಭಾಷೆಗಳಲ್ಲಿ ಲಭ್ಯವಿದೆ.
पत्र सूचना कार्यालय | |
Agency overview | |
---|---|
Formed | 1919 |
Headquarters | ರಾಷ್ಟ್ರೀಯ ಮಾಧ್ಯಮ ಕೇಂದ್ರ, ನವದೆಹಲಿ |
Minister responsible |
|
Agency executive |
|
Website | pib |
ಪಿಐಬಿಯ ಮುಖ್ಯಸ್ಥರು ಭಾರತ ಸರ್ಕಾರದ ಅಧಿಕೃತ ವಕ್ತಾರರೂ ಆಗಿರುತ್ತಾರೆ ಮತ್ತು ಪ್ರಧಾನ ಮಹಾ ನಿರ್ದೇಶಕರ (ವಿಶೇಷ ಕಾರ್ಯದರ್ಶಿ) ಹುದ್ದೆಯನ್ನು ಹೊಂದಿದ್ದಾರೆ. ಪ್ರಸ್ತುತ ಈ ಹುದ್ದೆಯ ನೇತೃತ್ವವನ್ನು ರಾಜೇಶ್ ಮಲ್ಹೋತ್ರಾ ವಹಿಸಿಕೊಂಡಿದ್ದಾರೆ.[೧]
ಉಲೇಖಗಳು
ಬದಲಾಯಿಸಿ- ↑ "Satyendra Prakash named new PIB DG". PIB. Archived from the original on 8 October 2022. Retrieved 8 October 2022."Satyendra Prakash named new PIB DG". PIB. Archived from the original on 8 October 2022. Retrieved 8 October 2022.