ಪಡ್ಡಾಯಿ (ತುಳು ಚಲನಚಿತ್ರ)
ಪಡ್ಡಾಯಿ ೨೦೧೮ರಲ್ಲಿ ತೆರೆಕಂಡ ಒಂದು ತುಳು ಚಲನಚಿತ್ರ. ನಿರ್ದೇಶಕ ಅಭಯಸಿಂಹರ ಚೊಚ್ಚಲ ತುಳು ಚಲನಚಿತ್ರ ಇದಾಗಿದೆ.
ಪಾತ್ರ ವರ್ಗ
ಬದಲಾಯಿಸಿಈ ಚಲನಚಿತ್ರದಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿಧಿ, ಚಂದ್ರಹಾಸ ಉಳ್ಳಾಲ, ಗೋಪಿನಾಥ್ ಭಟ್, ಅವಿನಾಶ್ ರೈ, ಸದಾಶಿವ ನಿನಾಸಂ, ಶ್ರೀನಿಧಿ ಆಚಾರ್, ಪ್ರಭಾಕರ ಕಾಪಿಕಾಡ್, ವಾಣಿ ಪೆರಿಯೋಡಿ, ರವಿ ಭಟ್, ಮಲ್ಲಿಕಾ ಜ್ಯೋತಿಗುಡ್ಡೆ, ಸಂತೋಷ್ ಶೆಟ್ಟಿ ಮತ್ತಿತರು ನಟಿಸಿದ್ದಾರೆ.
ಕಥಾ ತಿರುಳು
ಬದಲಾಯಿಸಿಯಕ್ಷಗಾನ, ಭೂತಾರಾಧನೆಗೆ ಒತ್ತು ನೀಡಿ ಕಡಲ ಮಧ್ಯದಲ್ಲೂ ಕೆಲವು ದೃಶ್ಯಗಳನ್ನು ಸೆರೆಹಿಡಿದಿದೆ ಪಡ್ಡಾಯಿ ಚಿತ್ರ. ಮುಖಂಡರೊಬ್ಬರ ಮನೆಯಲ್ಲಿನ ಕೆಲಸದಾಳು ದನಿಯ, ತನ್ನ ಪತ್ನಿಯ ಮೂಲಕ ಹೇಗೆ ಬದಲಾಗುತ್ತಾನೆ ಮತ್ತು ಸಮಾಜ ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದೇ ಕಥಾ ಹಂದರ. "ಅತಿ ಆಸೆ ಗತಿ ಕೇಡು" ಎಂಬ ನೀತಿ ಇದರಲ್ಲಿದೆ.[೧] ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕದ ಸ್ಪೂರ್ತಿಯಿಂದಾಗಿ ಮಾಡಿದ ಕರಾವಳಿಯ ಮೊಗವೀರರ ಬದುಕನ್ನು ತೋರಿಸುವ ಚಿತ್ರ ಇದಾಗಿದೆ.[೨]
ಚಿತ್ರ ತಂಡ
ಬದಲಾಯಿಸಿಪದದ ಅರ್ಥ
ಬದಲಾಯಿಸಿತುಳುವಿನ ಪಡ್ಡಾಯಿ ಅಂದರೆ ಕನ್ನಡದ ಪಶ್ಚಿಮ ದಿಕ್ಕು ಎಂದರ್ಥ. ತುಳುನಾಡಿನ ಮೊಗವೀರರು ಕಡಲನ್ನು ಪಡ್ಡಾಯಿ ಎಂದೂ ಕರೆಯುವ ಕ್ರಮವಿದೆ.
ಪ್ರಶಸ್ತಿ
ಬದಲಾಯಿಸಿ೬೫ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡ್ಡಾಯಿ - ತುಳು ಚಲನಚಿತ್ರಕ್ಕೆ ದೊರಕಿದೆ.[೩] [೪]
ರಾಷ್ಟ್ರೀಯ ಪ್ರಶಸ್ತಿ ಪಡೆದ ಇತರೆ ತುಳು ಚಿತ್ರಗಳು
ಬದಲಾಯಿಸಿ- ಬಂಗಾರ್ ಪಟ್ಲೇರ್ (೧೯೯೩)
- ಕೋಟಿ ಚೆನ್ನಯ (೨೦೦೭)
- ಗಗ್ಗರ (೨೦೧೦)
- ಮದಿಪು (೨೦೧೭) [೫]
ಉಲ್ಲೇಖಗಳು
ಬದಲಾಯಿಸಿ- ↑ https://www.udayavani.com/kannada/news/nri-news/289582/paddayi-tulu-film
- ↑ https://m.dailyhunt.in/news/india/kannada/prajavani-epaper-praj/nyuyaark+sinimotsavakke+paddaayi-newsid-84183152
- ↑ https://vijaykarnataka.indiatimes.com/entertainment/gossip/paddayi-wins-before-release-says-abhaya-simha/articleshow/63857040.cms
- ↑ https://www.udayavani.com/english/news/mangaluru/286050/tulu-movie-%E2%80%98paddayi%E2%80%99-receives-national-honour
- ↑ https://www.thehindu.com/todays-paper/tp-features/tp-fridayreview/paddayi-tulus-own-macbeth/article24226763.ece