ಪಕೋಡಾ ಒಂದು ಕರಿದ ಲಘು ಆಹಾರ (ಫ್ರಿಟರ್). ಮೂಲತಃ ಭಾರತದ್ದಾದ ಇದು ದಕ್ಷಿಣ ಏಷ್ಯಾದ್ಯಂತ ಕಾಣಸಿಗುತ್ತದೆ. ಪಕೋಡಾಗಳನ್ನು ಒಂದು ಅಥವಾ ಎರಡು ಪದಾರ್ಥಗಳಿಂದ ತಯಾರಿಸಲಾಗುತ್ತದೆ, ಉದಾಹರಣೆಗೆ ಈರುಳ್ಳಿ, ಬದನೆಕಾಯಿ, ಆಲೂಗಡ್ಡೆ, ಪಾಲಕ್, ಬಾಳೆಕಾಯಿ, ಚೀಸ್, ಹೂಕೋಸು, ಟೊಮೇಟೊ, ಅಥವಾ ಮೆಣಸಿನಕಾಯಿ.