ಹೂಕೋಸು ಬ್ರಾಸಿಕೇಸೀ ಕುಟುಂಬ ಬ್ರಾಸೀಕಾ ಆಲರೇಸಿಯಾ ಜಾತಿಯಲ್ಲಿನ ಹಲವಾರು ತರಕಾರಿಗಳ ಪೈಕಿ ಒಂದು. ಇದು ಬೀಜದಿಂದ ಸಂತಾನೋತ್ಪತ್ತಿ ಮಾಡುವ ಒಂದು ವಾರ್ಷಿಕ ಸಸ್ಯ. ವಿಶಿಷ್ಟವಾಗಿ, ಕೇವಲ ಮೇಲ್ಭಾಗವನ್ನು (ಬಿಳಿ ಭಾಗ) ತಿನ್ನಲಾಗುತ್ತದೆ, ಮತ್ತು ಕಾಂಡ ಹಾಗೂ ಸುತ್ತಲಿನ ದಪ್ಪನೆಯ, ಹಸಿರು ಎಲೆಗಳನ್ನು ತರಕಾರಿ ಸೂಪ್‌ನಲ್ಲಿ ಬಳಸಲಾಗುತ್ತದೆ ಇಲ್ಲವೆ ತೆಗೆದುಹಾಕಲಾಗುತ್ತದೆ. ಸಸ್ಯಮುಲ-ಪರಿಚಯ ಜನಪ್ರಿಯ ತರಕಾರಿಗಳಲ್ಲಿ ಹೂಕೋಸಿಗೆ ಅಗ್ರಸ್ಥಾನ.ಇದು ಚಳಿಗಾಲದ ಪ್ರಮೂಖವಾದಂತಹ ಬೆಳೆ.ನೊರೆ ಬಿಳುಪು ಬಣ್ಣದ ಹೂಗೆಡ್ಡೆಗಳನ್ನು ಉತ್ಕೃಷ್ಟ ತರಕಾರಿಯಾಗಿ ವಿವಿಧ ಅಡಿಗೆಗಳ ತಯಾರಿಕೆಯಲ್ಲಿ ಬಳಸಲಾಗುವುದು. ಹೂಗಳು

ಯಾವ ಸಮಸ್ಯೆ ಇರುವವರೆಲ್ಲಾ ಹೂಕೋಸು ತಿನ್ನಬಾರದು ?

ಬದಲಾಯಿಸಿ

ಹೂಕೋಸನ್ನು ಬಹಳ ಪ್ರಯೋಜನಕಾರಿ ತರಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಸಮೃದ್ಧವಾಗಿದೆ, ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದರೆ ಕೆಲವರು ಹೂಕೋಸುಗಳನ್ನು ಎಚ್ಚರಿಕೆಯಿಂದ ಸೇವಿಸಬೇಕು. ಏಕೆಂದರೆ ಇದು ಕೆಲವು ಅನನುಕೂಲಗಳನ್ನು ಹೊಂದಿದೆ. ಹೂಕೋಸಿನಲ್ಲಿರುವ ರಾಫಿನೋಸ್ ಎಂಬ ಕಾರ್ಬೋಹೈಡ್ರೇಟ್ ಜೀರ್ಣಾಂಗ ವ್ಯವಸ್ಥೆಗೆ ಅತ್ಯಂತ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ.

​ಥೈರಾಯ್ಡ್ ಸಮಸ್ಯೆ​

ಬದಲಾಯಿಸಿ

ಥೈರಾಯ್ಡ್ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಹೂಕೋಸು ತಿನ್ನಬೇಕು, ಏಕೆಂದರೆ ಇದು ಹೂಕೋಸಿನಲ್ಲಿರುವ ಈಸ್ಟ್ರೊಜೆನ್ ಅನ್ನು ಕಡಿಮೆ ಮಾಡುತ್ತದೆ, ಇದು ಥೈರಾಯ್ಡ್ ಮೇಲೆ ಪರಿಣಾಮ ಬೀರುತ್ತದೆ[]

​ ​ಮೂತ್ರಪಿಂಡದ ಕಲ್ಲು​

ಬದಲಾಯಿಸಿ

ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಹೂಕೋಸು ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ, ಏಕೆಂದರೆ ಇದು ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಗೆ ಕಾರಣವಾಗಬಹುದು

ಜೀರ್ಣಕ್ರಿಯೆ ಸಮಸ್ಯೆ​

ಬದಲಾಯಿಸಿ

ಕೆಲವು ಜನರಿಗೆ ಜೀರ್ಣಕ್ರಿಯೆಯ ಕಾರ್ಯಗಳಿಗೆ ಉತ್ತಮವಾಗಿಲ್ಲದಿರಬಹುದು. ಇದು ಗ್ಯಾಸ್, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಟ್ಟೆ ಕರುಳಿನ ಸಮಸ್ಯೆಗಳು ಅಥವಾ IBS ನಂತಹ ಮೊದಲೇ ಅಸ್ತಿತ್ವದಲ್ಲಿರುವ ಜೀರ್ಣಕಾರಿ ಸಮಸ್ಯೆಗಳಿರುವ ಜನರು ಹೂಕೋಸುಗಳನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಹೂಕೋಸು ತಿನ್ನುವುದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ

ಬದಲಾಯಿಸಿ

ಹೊಟ್ಟೆಯ ಗ್ಯಾಸ್, ಅಜೀರ್ಣ ಮತ್ತು ವಾಯು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಹೂಕೋಸು ತ್ಯಜಿಸಬೇಕು. ಹೂಕೋಸಿನಲ್ಲಿರುವ ರಾಫಿನೋಸ್ ಎಂಬ ಕಾರ್ಬೋಹೈಡ್ರೇಟ್ ಕರುಳಿನಲ್ಲಿ ಅನಿಲವನ್ನು ಉತ್ಪಾದಿಸುತ್ತದೆ, ಇದು ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣವನ್ನು ಹೆಚ್ಚಿಸುತ್ತದೆ.[]

ಪೌಷ್ಟಿಕಾಂಶಗಳು

ಬದಲಾಯಿಸಿ
Cauliflower, raw
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz)
ಆಹಾರ ಚೈತನ್ಯ 104 kJ (25 kcal)
ಶರ್ಕರ ಪಿಷ್ಟ 5 g
- ಸಕ್ಕರೆ 1.9 g
- ಆಹಾರ ನಾರು 2 g
ಕೊಬ್ಬು 0.3 g
ಪ್ರೋಟೀನ್(ಪೋಷಕಾಂಶ) 1.9 g
ನೀರು 92 g
Thiamine (vit. B1) 0.05 mg (4%)
Riboflavin (vit. B2) 0.06 mg (5%)
Niacin (vit. B3) 0.507 mg (3%)
Pantothenic acid (B5) 0.667 mg (13%)
Vitamin B6 0.184 mg (14%)
Folate (vit. B9) 57 μg (14%)
Vitamin C 48.2 mg (58%)
ವಿಟಮಿನ್ ಇ 0.08 mg (1%)
ವಿಟಮಿನ್ ಕೆ 15.5 μg (15%)
ಕ್ಯಾಲ್ಸಿಯಂ 22 mg (2%)
ಕಬ್ಬಿಣ ಸತ್ವ 0.42 mg (3%)
ಮೆಗ್ನೇಸಿಯಂ 15 mg (4%)
ಮ್ಯಾಂಗನೀಸ್ 0.155 mg (7%)
ರಂಜಕ 44 mg (6%)
ಪೊಟಾಸಿಯಂ 299 mg (6%)
ಸೋಡಿಯಂ 30 mg (2%)
ಸತು 0.27 mg (3%)
Link to USDA Database entry
Percentages are roughly approximated
using US recommendations for adults.
Source: USDA Nutrient Database

ಉಲ್ಲೇಖಗಳು

ಬದಲಾಯಿಸಿ
  1. "ಹೂಕೋಸು ಗೋಬಿ ಮಂಚೂರಿಯನ್‍ಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು." Vijay Karnataka. Retrieved 31 August 2024.
  2. "ಯಾವ ಸಮಸ್ಯೆ ಇರುವವರೆಲ್ಲಾ ಹೂಕೋಸು ತಿನ್ನಬಾರದು ?". Vijay Karnataka. Retrieved 31 August 2024.
"https://kn.wikipedia.org/w/index.php?title=ಹೂಕೋಸು&oldid=1243356" ಇಂದ ಪಡೆಯಲ್ಪಟ್ಟಿದೆ