ಪಂಜರವು ಹಲವುವೇಳೆ ಜಾಲರಿ, ಸಲಾಕೆಗಳು ಅಥವಾ ತಂತಿಗಳಿಂದ ತಯಾರಿಸಲಾದ ಒಂದು ಆವರಣ. ಇದನ್ನು ಒಂದು ವಸ್ತು ಅಥವಾ ಜೀವಿಯನ್ನು ನಿರ್ಬಂಧದಲ್ಲಿಡಲು ಅಥವಾ ರಕ್ಷಿಸಿಡಲು ಬಳಸಲಾಗುತ್ತದೆ. ಪಂಜರವು ಒಂದು ಪ್ರಾಣಿ ಅಥವಾ ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು, ಒಂದು ಪ್ರಾಣಿ ಅಥವಾ ವ್ಯಕ್ತಿಯನ್ನು ಸೆರೆಹಿಡಿಯುವುದು, ಅಥವಾ ಮೃಗಾಲಯದಲ್ಲಿ ಒಂದು ಪ್ರಾಣಿಯನ್ನು ಪ್ರದರ್ಶಿಸುವುದು ಸೇರಿದಂತೆ, ಅನೇಕ ಉದ್ದೇಶಗಳನ್ನು ಪೂರೈಸಬಹುದು.[]

ಕಲ್ಲಂಗಡಿ ಹಣ್ಣುಗಳನ್ನು ಹೊಂದಿರುವ ಗೋಳಾಕಾರದ ಪಂಜರ

ನಿರ್ಮಾಣ

ಬದಲಾಯಿಸಿ

ಸಾಮಾನ್ಯವಾಗಿ ಜೀವಿಗಳನ್ನು ಹಿಡಿದಿಡುವುದು ಪಂಜರದ ಉದ್ದೇಶವಾಗಿರುತ್ತದಾದ್ದರಿಂದ, ಕನಿಷ್ಠಪಕ್ಷ ಅದರ ರಚನೆಯ ಸ್ವಲ್ಪ ಭಾಗವು ಗಾಳಿ ಮತ್ತು ಬೆಳಕಿನ ಪ್ರವೇಶಕ್ಕೆ ಅವಕಾಶ ನೀಡುವಂತೆ ಇರಬೇಕು. ಹಾಗಾಗಿ ಕೆಲವು ಪಂಜರಗಳನ್ನು ಬಹಳ ಹತ್ತಿರ ಒಟ್ಟಾಗಿ ಕಡಿಮೆ ಅಂತರವಿರುವಂತೆ (ಉದ್ದೇಶಿತ ಬಂಧಿತನು ಅವುಗಳ ಮಧ್ಯದಿಂದ ತಪ್ಪಿಸಿಕೊಳ್ಳಲಾಗದಂತೆ) ಸಲಾಕೆಗಳಿಂದ, ಅಥವಾ ಯಾವುದೋ ಬಗೆಯ ಜಾಲರಿಯಿಂದ ಮುಚ್ಚಿದ ಕಿಟಕಿಗಳಿಂದ ತಯಾರಿಸಿರಬಹುದು.

ಉಲ್ಲೇಖಗಳು

ಬದಲಾಯಿಸಿ
  1. "A Cage-Free Zoo is Coming to Western Sydney". Broadsheet Sydney.
"https://kn.wikipedia.org/w/index.php?title=ಪಂಜರ&oldid=960757" ಇಂದ ಪಡೆಯಲ್ಪಟ್ಟಿದೆ