ಪಂಜ
ಪಂಜ ಎಂಬ ಊರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದಲ್ಲಿದೆ.. [೧]
ಇತಿಹಾಸ
ಬದಲಾಯಿಸಿಕ್ರಿ.ಶ. ೧೦ನೇ ಶತಮಾನದಲ್ಲಿ ೨ನೇ ಮಯೂರವರ್ಮನು ಚಾಲುಕ್ಯರ ಅಧೀನ ಅರಸನಾಗಿದ್ದು ಸಮಗ್ರ ತುಳುನಾಡು ಅವನ ಅಧೀನದಲ್ಲಿತ್ತು. ಆ ಸಮಯದಲ್ಲಿ ವಿಷ್ಣುವರ್ಧನನು ಹೊಂಬಚ್ಚದ ಜೈನರಸನ ರಾಜ್ಯವನ್ನು ಸೂರೆ ಮಾಡಿ ಅವನನ್ನು ಕೊಂದಾಗ ಅವನ ಸಂಸಾರ ಹಾಗೂ ಮಂತ್ರಿವರ್ಗದವರು ಪಶ್ಚಿಮಘಟ್ಟದಲ್ಲಿ ಅಡಗಿಕೊಂಡಿದ್ದರು. ವಿಷ್ಣುವರ್ಧನನ ಕಾಲಾನಂತರ ಅವನ ಮಗ ನರಸಿಂಹ ಬಲ್ಲಾಳ ಘಟ್ಟಕ್ಕೆ ಬಂದು ತುಳುನಾಡಿನ್ನು ವೀಕ್ಷಿಸಲು ಕುದುರೆಮುಖ ಇಳಿದು ಬಂಗಾಡಿಗೆ ಬಂದನು. ಆಗ ಹೊಂಬಚ್ಚದ ನರಸಿಂಹ ಅರಸನ ಪರಿವಾರ ಹಾಗೂ ಮಂತ್ರಿಗಳೆಲ್ಲರೂ ವೀರಬಲ್ಲಾಳನು ನೇತ್ರಾವತಿ ದಂಡೆಯಲ್ಲಿ ರಾಜಕುಮಾರನ್ನೆತ್ತಿಕೊಂಡು ತೊಡೆಯಲ್ಲಿ ಕುಳ್ಳಿರಿಸಿ ಹಾಲು ಕುಡಿಸುವಾಗ ಹಾಲು ಚೆಲ್ಲಿ ನೇತ್ರಾವತಿ ನದಿಗೆ ಸೇರಿತು. ಇದರಿಂದ ಅರಸನು ಪ್ರಸನ್ನನಾಗಿ ನೇತ್ರಾವತಿ ಹುಟ್ಟುವಲ್ಲಿಂದ ಅದು ಸಮುದ್ರಸೇರುವವರೆಗಿನ ರಾಜ್ಯವನ್ನು ಬಿಟ್ಟುಕೊಟ್ಟನು. ಅವನು ಮಂಗಳೂರು ಸಂಸ್ಥಾನದ ಎಲ್ಲಾ ಸೀಮೆಗಳ ಅಧಿಪತಿಯಾದನು.
ಪುರಾಣ
ಬದಲಾಯಿಸಿ೨ ನೇ ಮಯೂರವರ್ಮನು ತನ್ನ ಮಗಳನ್ನು ಕುಂಬಳೆ ಬ್ರಾಹ್ಮಣ ಕುಮಾರನಿಗೆ ಮದುವೆ ಮಾಡಿಕೊಟ್ಟು ಕೋಟೆಕಾರಿನಲ್ಲಿ ಅರಮನೆ ಕಟ್ಟಿಸಿ, ಕುಂಬ್ಳೆ ಸೀಮೆ, ಸುಳ್ಳಿಯ ಸೀಮೆ, ಪಂಜ ಸೀಮೆ, ವಿಟ್ಲ ಸೀಮೆ ಇವೇ ಮೊದಲಾದ ಸೀಮೆಗಳನ್ನು ಬ್ರಾಹ್ಮಣ ಕುಮಾರನಿಗೆ ಕೊಟ್ಟನು.ಇವನ ಮಗ ಜಯನರಸಿಂಹನು ಪ್ರಖ್ಯಾತ ಅರಸನಾಗಿ ರಾಜ್ಯಭಾರ ಮಾಡಿದನು. ಅವನ ಕಾಲದಲ್ಲಿ ಗಜಪುಷ್ಪಾಕಾರದ ಈಶ್ವರ ದೇವಾಲಯಗಳು ಕಟ್ಟಲ್ಪಟ್ಟವು ಎಂದು ತಿಳಿದು ಬರುತ್ತದೆ. ಆದರೆ ಶಾಸನಾಧಾರಗಳಲ್ಲಿ ಇವನ ಕಾಲಾನಂತರ ಇವನ ಅನುಯಾಯಿಗಳು ನಿರ್ಬಲರಾದುದರಿಂದ ಇವನ ರಾಜ್ಯವು ಕುಂಬ್ಳೆ ಸೀಮೆ ಬಿಟ್ಟು ಉಳಿದ ವಿಟ್ಲ ಮತ್ತು ವಿಟ್ಲದ ಪೂರ್ವ ಸೀಮೆಗಳು ಬಂಗರಸನು ಆಳ್ವಿಕೆಗೆ ಒಳಪಟ್ಟಿತು.ಈ ಪೈಕಿ ವಿಟ್ಲಸೀಮೆಯ ಅರಸು ಬಂಗಾರ ದಿವಾನರಾಗಿ ನಿಯೋಜಿಸಲ್ಪಟ್ಟನು. ಇದು ಎರಡು ಸಾವಿರ ಸೀಮಪ್ರದೇಶವೆಂದು ಪ್ರಖ್ಯಾತಿ ಪಡೆಯಿತು. ಸುಳ್ಯ ಸೀಮೆಯು ಏಳೂವರೆ ಸಾವಿರ ಸೀಮಾ ಪ್ರದೇಶವೆಂದು ದಾಖಲೆಗಳಲ್ಲಿ ಕಂಡುಬರುತ್ತದೆ. ಪಂಜ ಸೀಮೆಯು ಸಾವಿರ ಸೀಮಾ ಪ್ರದೇಶವೆಂದು ಪ್ರಖ್ಯಾತಿ ಪಡೆಯಿತು
ಭಾಷೆ
ಬದಲಾಯಿಸಿಇಲ್ಲಿ ಸಾಮಾನ್ಯವಾಗಿ ಕನ್ನಡ, ತುಳು, ಅರೆಗನ್ನಡ ಮಾತನಾಡುವ ಜನರಿದ್ದಾರೆ.
ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿಇಲ್ಲಿ ಕೋಟಿಚೆನ್ನಯ್ಯ ಗರಡಿ, ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ, ಬಂಟಮಲೆ ಚಾರಣ ಪ್ರದೇಶ ಪ್ರೇಕ್ಷಣೀಯ ಸ್ಥಳಗಳಾಗಿವೆ.[೨]
ಉಲ್ಲೇಖಗಳು
ಬದಲಾಯಿಸಿ- ↑ http://www.onefivenine.com/india/villages/Dakshin-Kannad/Sulya/Panja
- ↑ https://www.google.com/search?client=ms-android-lenovo&ei=3yVEXNG3BoP7rQHv06yIAg&q=shree+parivaara+panchalingeshwara+temple+panja&oq=shree+parivaara+panchalingeshwara+temple+panja&gs_l=mobile-gws-wiz-serp.12..33i160.59285.82175..82892...22.0..5.577.12620.0j4j42j3j0j1......0....1.......5..35i39j46i39j0i131j0i67j46i67j46i20i263j46i131j46j0j0i10j0i20i263j0i22i10i30j0i22i30j0i13j0i13i10i30j33i21j30i10j33i10i21.70vdfdSEsTI#trex=m_t:lcl_akp,rc_f:nav,rc_ludocids:1351681419324504463,rc_q:Shree%2520Parivara%2520Panchalingeshwara%2520Temple,ru_q:Shree%2520Parivara%2520Panchalingeshwara%2520Temple