ನೆಲ್ಲಿಕಟ್ಟೆ ಎಸ್.ಸಿದ್ದೇಶ್

ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ (ಮಾರ್ಚ್ ೦೪ , ೧೯೭೨) ಕವಿಗಳು, ಅಂಕಣ ಬರಹಗಾರರು. ಸಂಶೋದಕರು, ವಿಮರ್ಶಕರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ಕವನ, ಕತೆ, ಪ್ರಬಂಧ, ಸಂಶೋಧನೆ, ವಿಮರ್ಶೆ ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ಇವರುಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್
ಜನನ
ನೆಲ್ಲಿಕಟ್ಟೆ ಎಸ್.ಸಿದ್ದೇಶ್

೦೪ ಮಾರ್ಚ್ ೧೯೭೨
ನೆಲ್ಲಿಕಟ್ಟೆ ಗ್ರಾಮ , ಚಿತ್ರದುರ್ಗ ತಾಲ್ಲೂಕು.
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕುವೆಂಪು ವಿಶ್ವವಿದ್ಯಾಲಯ. ನಿರ್ದೇಶಕರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾನಿಲಯ

ಜನನ, ಜೀವನ

ಬದಲಾಯಿಸಿ

ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಇವರು ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದಲ್ಲಿ ಮಾರಕ್ಕ-ಎಚ್.ಸಿದ್ದಪ್ಪ ದಂಪತಿಗಳ ಮಡಿಲಲ್ಲಿ ಜನಿಸಿದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಇಸಾಮುದ್ರ, ಕಾಲಗೆರೆ ಗ್ರಾಮಗಳಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು, ಬಿದರಕೆರೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು, ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಏಳನೆ ರ‍್ಯಾಂಕ್‌ನೊಂದಿಗೆ ಬಿ.ಎ.ಪದವಿಯನ್ನು ಮತ್ತು ತರಳಬಾಳು ಜಗದ್ಗುರು ಶ್ರೀಶ್ರೀಶ್ರೀ ಶಿವಕುಮಾರ ಶಿವಾಚಾರ್ಯಸ್ವಾಮಿಗಳ ಸ್ಮರಣಾರ್ಥ ಚಿನ್ನದ ಪದಕದೊಂದಿಗೆ ಬಿ.ಇಡಿ. ಪದವಿಯನ್ನು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರನೆ ರ‍್ಯಾಂಕ್‌ನೊಂದಿಗೆ ಕನ್ನಡ ಎಂ.ಎ. ಪದವಿಯನ್ನು, `ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ : ಒಂದು ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ (ಪಿಎಚ್.ಡಿ.) ಡಾಕ್ಟರೇಟ್ ಪದವಿಯನ್ನು ಪಡೆದಿರುವರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

ಕೃತಿಗಳು[ಬದಲಾಯಿಸಿ]

ಬದಲಾಯಿಸಿ

ಪಿ.ಎಚ್ ಡಿ ಸಂಶೋಧನಾ ಪ್ರಬಂಧ

ಬದಲಾಯಿಸಿ
  • ಅಭಿನವಕಾಳಿದಾಸ ಬಸವಪ್ಪ ಶಾಸ್ತ್ರಿ:ಒಂದು ಅಧ್ಯಯನ, ೨೦೦೫

ಕೃತಿಗಳು

ಬದಲಾಯಿಸಿ
  1. ಬಿಸಿಲು-ಮಳೆ, (೨೦೦೧, ೨೦೧೭)
  2. ಸಾಹಿತಿ ಸಂಕುಲ, (೨೦೦೧)
  3. ಛಲಬೇಕು ಶರಣಂಗೆ, (೨೦೦೨)
  4. ವ್ಯಕ್ತಿತ್ವವಿಕಾಸ ಮತ್ತು ಕನ್ನಡ ಸಾಹಿತ್ಯ, (೨೦೦೭, ೨೦೧೭)
  5. ಅಭಿನವಕಾಳಿದಾಸ ಬಸಪ್ಪ ಶಾಸ್ತ್ರಿ (೨೦೦೮, ೨೦೧೭)
  6. ಸಿರಿಗನ್ನಡ ಜಾನಪದ, (೨೦೦೮)
  7. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ್ಮ, (೨೦೦೯)
  8. ಯುವಜನತೆ ಮತ್ತು ದುಶ್ಚಟಗಳು, (೨೦೧೦)
  9. ಸಿರಿಗನ್ನಡ ಪ್ರಾಚೀನ ಕವಿಗಳು, (೨೦೧೦)
  10. ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ವಚನಾಮೃತ, (೨೦೧೩)
  11. ಕನಕದಾಸರ ಲೋಕದೃಷ್ಟಿ, (೨೦೧೩)
  12. ಸಂವೇದನೆ, (೨೦೧೪)
  13. ಅಜಾತ, (೨೦೧೫)
  14. ಶ್ರೀಗುರು, (೨೦೧೭)
  15. ಮರ್ತ್ಯದ ವಿಸ್ಮಯ ಮಹದೇವಮ್ಮ, (೨೦೧೮)
  16. ತನ್ನ ತಾನರಿದೆಡೆ, (೨೦೧೮)
  17. ಅಂತರಂಗ-ಸಿ.ಡಿ, (೨೦೨೦)
  18. ಜಗಳೂರು ತಾಲ್ಲೂಕು ಗೆಜೆಟಿಯರ್ ಇ, (೨೦೨೧)
  19. ಅಂಬೇಡ್ಕರ್ ಮತ್ತು ಆಧ್ಯಾತ್ಮ, (೨೦೨೧)
  20. ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ, (೨೦೨೨)
  21. ಬುದ್ಧಕಟ್ಟ ಬಯಸಿದ ಸಮಾಜ , (೨೦೨೩)

ಸಂಶೋಧನಾ ಯೋಜನೆಗಳು

ಬದಲಾಯಿಸಿ
  1. ನೆಲ್ಲಿಕಟ್ಟೆ ಗ್ರಾಮ: ಸಾಂಸ್ಕೃತಿಕ ಅಧ್ಯಯನ (ಕುವೆಂಪು ವಿಶ್ವವಿದ್ಯಾಲಯ)
  2. ಛಲವಾದಿ ಜನಾಂಗ: ಸಾಂಸ್ಕೃತಿಕ ಅಧ್ಯಯನ (ಯು.ಜಿ.ಸಿ)
  3. ಅಂಬೇಡ್ಕರ್ ಮತ್ತು ಅಧ್ಯಾತ್ಮ (ಕುವೆಂಪು ವಿಶ್ವವಿದ್ಯಾಲಯ)

ಗೌರವ, ಪ್ರಶಸ್ತಿಗಳು

ಬದಲಾಯಿಸಿ
  1. ಮಹಾತ್ಮ ಜ್ಯೋತಿ ಬಾಪುಲೆ’ ರಾಷ್ಟ್ರೀಯ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ದೆಹಲಿ (೨೦೧೦).
  2. ‘ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ’ ಕೃತಿಗೆ ಪುಸ್ತಕ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತು, ಬೆಂಗಳೂರು (೨೦೧೦).
  3. ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ) ಬೆಂಗಳೂರು (೨೦೨೨).
  4. ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ) ಬೆಂಗಳೂರು (೨೦೨೩).

ಉಲ್ಲೇಖಗಳು

ಬದಲಾಯಿಸಿ

[] [] []

  1. "Golden Jubilee Award to Dr. Nellikatte S. Siddesh". Chitradurga News. Retrieved 2024-11-20.
  2. "Golden Jubilee Award to Dr. Nellikatte S. Siddesh". Karnataka Kahale. Retrieved 2024-11-20.
  3. "Ambedkar is Aware of the Existence of This World – Dr. Nellikatte S. Siddesh". Suddi One. Retrieved 2024-11-20.