ನೀನಾ ಗುಪ್ತಾ (ಗಣಿತಜ್ಞೆ)
ಗಣಿತಜ್ಞೆ
ನೀನಾ ಗುಪ್ತಾ(ಗಣಿತಜ್ಞೆ) ರವರು ಕೊಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಅಂಕಿಅಂಶ ಮತ್ತು ಗಣಿತದ ಘಟಕದಲ್ಲಿ ಸಹಾಯಕ ಪ್ರೊಫೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[೨] ಅವರು ಸಂವಹನ ಬೀಜಗಣಿತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುಪ್ತಾ ರವರು ಹಿಂದೆ ಐಎಸ್ಐ ನಲ್ಲಿ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನಲ್ಲಿ ಸಂದರ್ಶಕರಾಗಿದ್ದರು.[೩] ಇವರಿಗೆ ೨೦೧೪ ರಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯಂಗ್ ಸೈಂಟಿಸ್ಟ್ ಅವಾರ್ಡ್ [೪] ಹಾಗೂ ೨೦೧೩ ರಲ್ಲಿ ಅವರಿಗೆ ಸರಸ್ವತಿ ಕೌಸಿಕ್ ಮೆಡಲ್ ಅನ್ನು ನೀಡಿ ಸನ್ಮಾನಿಸಲಾಯಿತು.
ಡಾ. ನೀನಾ ಗುಪ್ತಾ | |
---|---|
ವಾಸಸ್ಥಳ | ಭಾರತ |
ಪೌರತ್ವ | ಭಾರತೀಯ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಗಣಿತಶಾಸ್ತ್ರ,ಸಂವಹನ ಬೀಜಗಣಿತ , ಅಫೈನ್ ಅಲ್ಜಿಬ್ರೈಕ್ ಜಿಯೋಮೆಟ್ರಿ |
ಸಂಸ್ಥೆಗಳು | ಐಎಸ್ಐ, ಟಿಐಎಫ್ಆರ್ |
ವಿದ್ಯಾಭ್ಯಾಸ | ಪಿ.ಎಚ್.ಡಿ., ಮಾಸ್ಟರ್ ಆಫ್ ಮ್ಯಾಥಮೆಟಿಕ್ಸ್, ಬಿ.ಎಸ್ಸಿ. |
ಅಭ್ಯಸಿಸಿದ ವಿದ್ಯಾಪೀಠ | ಐಎಸ್ಐ, ಬೆಥೂನೆ ಕಾಲೇಜು. |
ಮಹಾಪ್ರಬಂಧ | ಲಾರೆಂಟ್ ಪಾಲಿನೋಮಿಯಲ್ ಫೈಬ್ರೇಷನ್ಸ್ ಮತ್ತು ಕ್ವಾಸಿ ಎ* ಬೀಜಗಣಿತದಲ್ಲಿ ಕೆಲವು ಫಲಿತಾಂಶಗಳು. (೨೦೧೧) |
ಡಾಕ್ಟರೇಟ್ ಸಲಹೆಗಾರರು | ಪ್ರೊ. ಅಮರ್ತ್ಯ ದತ್ತ |
ಪ್ರಸಿದ್ಧಿಗೆ ಕಾರಣ | ವಿಶೇಷ ಜ್ಯಾರಿಸ್ಕಿ[೧] ರದ್ದತಿ ಸಮಸ್ಯೆ ಗೆ ಪ್ರತಿ ಉದಾಹರಣೆ ಒದಗಿಸಿದ್ದಾರೆ. |
ಜನನ
ಬದಲಾಯಿಸಿಶಿಕ್ಷಣ
ಬದಲಾಯಿಸಿ- ಕೊಲ್ಕತ್ತಾದ ಬೆಥೂನೆ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಪದವಿ - ೨೦೦೬.[೭]
- ಐಎಸ್ಐ ನಿಂದ ಗಣಿತಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ - ೨೦೦೮.
- ಅಮರ್ತ್ಯ ಕುಮಾರ್ ದತ್ತ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿ - ೨೦೧೧.[೮]
ಉನ್ನತ ಸ್ಥಾನಗಳು
ಬದಲಾಯಿಸಿ- ಸ್ಟ್ಯಾಟಸ್ಟಿಕಲ್ ಮತ್ತು ಮ್ಯಾಥಮೆಟಿಕ್ಸ್ ಯುನಿಟ್ ನಲ್ಲಿ (ಎಸ್ಎಮ್ಯು), ಐಎಸ್ಐ ಕೊಲ್ಕತ್ತಾ (ಜೂನ್ ೨೦೧೪ ) - ಸಹಾಯಕ ಪ್ರೊಫೆಸರ್.
- ಐಎಸ್ಐ ಕೊಲ್ಕತ್ತಾದಲ್ಲಿ ಇನ್ಸ್ ಪಾಯರ್ ಸಿಬ್ಬಂದಿ (ಡಿಸೆಂಬರ್ ೨೦೧೨- ಜೂನ್ ೨೦೧೪).
- ಟಿಐಎಫ್ಆರ್ ಮುಂಬೈನಲ್ಲಿ - ವಿಸಿಟಿಂಗ್ ಫೆಲೋ (ಮೇ ೨೦೧೨- ಡಿಸೆಂಬರ್ ೨೦೧೨).
- ಶ್ಯಾಮಾ ಪ್ರಸಾದ್ ಮುಖರ್ಜಿ ರಿಸರ್ಚ್ ಫೆಲೋ , ಐಎಸ್ಐ ಕಲ್ಕತ್ತಾ - ಸೆಪ್ಟೆಂಬರ್ ೨೦೦೮- ಫೆಬ್ರವರಿ ೨೦೧೨.
ಪ್ರಶಸ್ತಿಗಳು
ಬದಲಾಯಿಸಿ- ಬಿ.ಎಮ್. ಗಣಿತಶಾಸ್ತ್ರದಲ್ಲಿ ಬಿರ್ಲಾ ವಿಜ್ಞಾನ ಪ್ರಶಸ್ತಿ - ೨೦೧೭.[೯]
- ಸ್ವರ್ಣ ಜಯಂತಿ ಫೆಲೋಶಿಪ್ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಭಾರತ) - ೨೦೧೫.[೧೦]
- ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ ಪ್ರೊ.ಎ.ಕೆ.ಅಗರ್ವಾಲ್ ಪ್ರಶಸ್ತಿ , ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿ - ೨೦೧೪.[೧೧]
- ಐಎನ್ಎಸ್ಎ ಯಂಗ್ ಸೈಂಟಿಸ್ಟ್ ಪ್ರಶಸ್ತಿ - ೨೦೧೪.[೧೨]
- ಮದ್ರಾಸ್ ವಿಶ್ವವಿದ್ಯಾನಿಲಯದಿಂದ ರಾಮನುಜನ್ ಪ್ರಶಸ್ತಿ - ೨೦೧೪.[೧೩]
- ಟಿಐಎಫ್ಆರ್ ನಿಂದ ಕೌಸಿಕ್ ಮೆಡಲ್ - ೨೦೧೩.[೧೪]
- ಇನ್ ಸ್ಪಾಯರ್ ಫ್ಯಾಕಲ್ಟಿ ಫೆಲೋಶಿಪ್ ಅವಾರ್ಡ್ - ೨೦೧೨.[೧೫]
- ಗಣಿತಶಾಸ್ತ್ರದಲ್ಲಿ ಮಾಸ್ಟರ್ಸ್ ಪ್ರೋಗ್ರಾಂನಲ್ಲಿ ಅತ್ಯುತ್ತಮ ಪಾತ್ರಕ್ಕಾಗಿ ಪಿ.ಸಿ.ಪನೇಸರ್ ಚಿನ್ನದ ಪದಕ , ಐಎಸ್ಐ - ೨೦೦೮.
- ಬಿ.ಎಸ್ಸಿ. (ಗಣಿತಶಾಸ್ತ್ರದಲ್ಲಿ) ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮೊದಲನೆಯ ಸ್ಥಾನ - ೨೦೦೬.
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Zariski Cancellation Problem". Archived from the original on 2019-03-26. Retrieved 2019-03-26.
- ↑ "Indian Statistical Institute". Archived from the original on 2019-07-03. Retrieved 2019-03-25.
- ↑ Theological Indian Neena Gupta
- ↑ http://www.insaindia.org/youngmedal.php
- ↑ https://www.ias.ac.in/describe/associate/Gupta,_Dr_Neena
- ↑ http://www.wikiwand.com/en/List_of_Indian_mathematicians
- ↑ https://www.revolvy.com/page/Neena-Gupta-(mathematician)
- ↑ Up/closed Neena Gupta
- ↑ https://www.isical.ac.in/~statmath/seeaward.php
- ↑ http://dst.gov.in/sites/default/files/List-SJF-Award-2014-15.pdf
- ↑ "ಆರ್ಕೈವ್ ನಕಲು" (PDF). Archived from the original (PDF) on 2016-09-10. Retrieved 2019-03-26.
- ↑ INSA Young Scientist Award
- ↑ https://www.isical.ac.in/~statmath/seeaward.php
- ↑ Kausik Meadl
- ↑ "inasindia". Archived from the original on 2016-08-28. Retrieved 2019-03-26.