ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ (ಕನ್ನಡ ಧಾರಾವಾಹಿ)

ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು 2024ರ ಸೆಪ್ಟಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮವು ನೀನಾದೆ ನಾ ಕನ್ನಡ ಧಾರಾವಾಹಿಯ ಎರಡನೇ ಭಾಗ ಆಗಿದೆ[] [] . ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ಈ ಧಾರಾವಾಹಿಯನ್ನು 'ಪಿಂಗಾರ ಪ್ರೊಡಕ್ಷನ್' ಸಂಸ್ಥೆ ಮೂಲಕ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ[]. ಈ ಧಾರಾವಾಹಿಯಲ್ಲಿ ದಿಲೀಪ ಶೆಟ್ಟಿ'' ಮತ್ತು ಖುಷಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.


ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುಪ್ರೀತಮ್ ಶೆಟ್ಟಿ
ನಟರುದಿಲೀಪ್ ಆರ್. ಶೆಟ್ಟಿ, ಖುಷಿ ಶಿವು
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ಸ್ಥಳ(ಗಳು)ದಕ್ಷಿಣ ಕನ್ನಡ, ಉಡುಪಿ
ನಿರ್ಮಾಣ ಸಂಸ್ಥೆ(ಗಳು)ಪಿಂಗಾರ ಪ್ರೊಡಕ್ಷನ್
ಪ್ರಸಾರಣೆ
ಮೂಲ ವಾಹಿನಿಸ್ಟಾರ್ ಸುವರ್ಣ
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುನೀನಾದೆ ನಾ

ಕಥಾ ನಾಯಕ ವಿಕ್ರಂ ರೌಡಿಸಂ ಮಾಡಿಕೊಂಡು, ಕುಡ್ಲದ ಕರುಣಾಕರ ಶೆಟ್ಟಿ ಎಂಬ ಡಾನ್‌ ಬಲಗೈ ಬಂಟನಾಗಿರುತ್ತಾನೆ. ಇತ್ತ ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳು ಆಗಿರುತ್ತಾಳೆ. ಉಡುಪಿ ಕೃಷ್ಣನ ಭಕ್ತೆ ಮತ್ತು ಜೊತೆ ಚಿಕ್ಕದೊಂದು ಬಟ್ಟೆ ಉದ್ಯಮವನ್ನೂ ನಡೆಸುತ್ತಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತೇ? ಎನ್ನುವುದು ಕಥೆ ಮುಂದುವರಿದಂತೆ ತಿಳಿಯಲಿದೆ.

ಹಿನ್ನಲೆ

ಬದಲಾಯಿಸಿ

ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯದಲ್ಲಿ ಕಥೆ ಬದಲಾಗಿದ್ದು, ನೀನಾದೆ ನಾ ಧಾರಾವಾಹಿ ಪಾತ್ರಗಳಾದ ನಾಯಕ ವಿಕ್ರಂ ಹಾಗೂ ವೇದಾ ಇಬ್ಬರೂ ಈ ಧಾರಾವಾಹಿಯಲ್ಲಿ ಮುಂದುವರೆದಿದ್ದಾರೆ[]. ಕರ್ನಾಟಕದ ದೈವಾರಾಧನೆಯ ತವರೂರಾದ ತುಳುನಾಡಿನಲ್ಲಿ ಈ ಕಥೆ ಆರಂಭವಾಗಿದೆ [].

ಪಾತ್ರವರ್ಗ

ಬದಲಾಯಿಸಿ

ಮುಖ್ಯ ಪಾತ್ರಗಳು

ಬದಲಾಯಿಸಿ
  • ದಿಲೀಪ್ ಶೆಟ್ಟಿ: ಕಥಾ ನಾಯಕ ವಿಕ್ರಮ ಪಾತ್ರದಲ್ಲಿ
  • ಖುಷಿ ಶಿವು[]:ಕಥಾ ನಾಯಕಿಯಾಗಿ ವೇದಾ ಪಾತ್ರದಲ್ಲಿ

ಪೋಷಕ ಪಾತ್ರಗಳು

ಬದಲಾಯಿಸಿ
  • ರವಿ ಕಲಾಬ್ರಹ್ಮ: ವೇದಾ ತಂದೆಯಾಗಿ
  • ಶೈಲಶ್ರೀ: ವೇದಾ ತಾಯಿಯಾಗಿ

ಉಲ್ಲೇಖಗಳು

ಬದಲಾಯಿಸಿ
  1. "ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ 'ನೀನಾದೆ ನಾ' ಜೋಡಿ! ವೀಕ್ಷಕರಂತೂ ಫುಲ್‌ ಖುಷ್‌!". News18 Kannada. Retrieved September 3, 2024.
  2. "ನೀನಾದೆ ನಾ ಧಾರಾವಾಹಿ ಮುಕ್ತಾಯ ಆದರೂ ಗುಡ್ ನ್ಯೂಸ್ ಇದೆ ಮರ್ರೆ; ಇದು ಕನ್ನಡ ಕಿರುತೆರೆಯಲ್ಲೇ ಅಪರೂಪ!". ವಿಜಯ ಕರ್ನಾಟಕ. Retrieved 29 Aug 2024.
  3. S, Muralidhar. "ಹೊಸ ಕಥೆ, ಹೊಸ ಟೀಮ್, ಹೀರೋ-ಹೀರೋಯಿನ್ ಮಾತ್ರ ಅವರೇ; ಪ್ರೀತಿಯ ಹೊಸ ಅಧ್ಯಾಯದೊಂದಿಗೆ 'ನೀನಾದೆ ನಾ'". ಫಿಲ್ಮಿಬೀಟ್ ಕನ್ನಡ. Retrieved 3 ಸೆಪ್ಟಂಬರ್ 2024.
  4. "ನೀನಾದೆ ನಾ 'ವಿಕ್ರಮ್-ವೇದಾ' ಈ ಕಥೆ ಮುಗೀತು, ಪ್ರೀತಿಯ ಹೊಸ ಅಧ್ಯಾಯ ಶೀಘ್ರವೇ ಶುರುವಾಗಲಿದೆ!". ಸುವರ್ಣ ನ್ಯೂಸ್. Retrieved Aug 28, 2024.
  5. "ಕಿರುತೆರೆಯಲ್ಲಿ ಹೊಸ ಧಾರಾವಾಹಿ ಹಬ್ಬ: ನೀನಾದೆ ನಾ ಹೊಸ ಅಧ್ಯಾಯ ಆರಂಭಿಸಿದ ಕಾವೇರಿ ಕನ್ನಡ ಮೀಡಿಯಂ ನಿರ್ದೇಶಕ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 3 ಸೆಪ್ಟಂಬರ್ 2024.
  6. "ನೀನಾದೆ ನಾ ಸೀರಿಯಲ್ ನ ಬಬ್ಲಿ ಹುಡುಗಿ ಖುಷಿ, ರಿಯಲ್ ಲೈಫಲ್ಲಿ ಯಡವಟ್ಟು ರಾಣಿಯಂತೆ". ಏಷ್ಯಾನೆಟ್ ಸುವರ್ಣ ನ್ಯೂಸ್. Retrieved 31 ಆಗಸ್ಟ್ 2023.

ಬಾಹ್ಯಕೊಂಡಿಗಳು

ಬದಲಾಯಿಸಿ