ಕಾವೇರಿ ಕನ್ನಡ ಮೀಡಿಯಂ

ಕಾವೇರಿ ಕನ್ನಡ ಮೀಡಿಯಂ ಪ್ರಸ್ತುತವಾಗಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೧೦:೩೦ ವರೆಗೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯು 28 ಆಗಸ್ಟ್ 2023 ಕ್ಕೆ ಪ್ರಥಮ ಪ್ರದರ್ಶನಗೊಂಡಿತು[] [] []. ಈ ಕಾರ್ಯಕ್ರಮವು ಬಂಗಾಳಿ ಭಾಷೆಯ ಬಂಗಾಳ ಮೀಡಿಯಂ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ. ಧಾರಾವಾಹಿಯಲ್ಲಿ ಪ್ರಿಯಾ ಜೆ.ಆಚಾರ್, ರಕ್ಷಿತ್ ಅರಸ್ ಗೋಪಾಲ್ ಮತ್ತು ಹಿರಿಯ ನಟಿ ಮಹಾಲಕ್ಷ್ಮೀ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


ಕಾವೇರಿ ಕನ್ನಡ ಮೀಡಿಯಂ
ಶೈಲಿದೈನಂದಿನ ಧಾರಾವಾಹಿ
ತಯಾರಕರುಸ್ಟಾರ್ ಸುವರ್ಣ
ಬರೆದವರುರತಿ ಬಾಲಾ
ನಿರ್ದೇಶಕರುಆರ್ ಪ್ರೀತಮ್ ಶೆಟ್ಟಿ
ನಟರುಪ್ರಿಯಾ ಜೆ.ಆಚಾರ್
ನಿರೂಪಣಾ ಸಂಗೀತಕಾರಕವಿ ರಾಜ್
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಆರ್ ಪ್ರೀತಮ್ ಶೆಟ್ಟಿ ಸುನಂದಾ ವಿ ತಿಮ್ಮಾಪುರ
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ಸಮಯ20-22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಪಿಂಗಾರ ಕ್ರಿಯೆಷನ್
ಪ್ರಸಾರಣೆ
ಮೂಲ ವಾಹಿನಿಸ್ಟಾರ್ ಸುವರ್ಣ
ಮೂಲ ಪ್ರಸಾರಣಾ ಸಮಯ28 ಆಗಸ್ಟ್ 2023 – ಪ್ರಸ್ತುತ

ಕಥಾ ಹಂದರ

ಬದಲಾಯಿಸಿ

ಈ ಕಥೆಯು ಕಾವೇರಿ ಎಂಬ ಪ್ರತಿಭಾನ್ವಿತ ಹುಡುಗಿಯ ಸುತ್ತ ಸುತ್ತುತ್ತದೆ, ಅವಳು ಹಳ್ಳಿಯಲ್ಲಿ ವಾಸಿಸುತ್ತಿರುವ ಶಿಕ್ಷಕಿ ಆಗಿರುತ್ತಾಳೆ. ಅಲ್ಲಿ ಅವಳು ಯುವ ವಿದ್ಯಾರ್ಥಿಗಳಿಗೆ ಕನ್ನಡ ಶಾಲೆಯಲ್ಲಿ ಪಾಠ ಮಾಡುತ್ತಿರುತ್ತಾಳೆ. ಕಾವೇರಿಗೆ ತನ್ನ ಮಾತೃ ಭಾಷೆಯಾದ ಕನ್ನಡದ ಬಗ್ಗೆ ಅಪಾರ ಗೌರವವಿದೆ.

ಮತ್ತೊಂದೆಡೆ, ಕಥೆಯ ನಾಯಕ ಆಗಸ್ತ್ಯ ಹೆಸರಾಂತ ಇಂಗ್ಲೀಷ್ ಶಾಲೆಯೊಂದರ ಮಾಲೀಕನಾಗಿರುತ್ತಾನೆ. ಅವನು ಅಹಂಕಾರಿ ಹಾಗೂ ಸ್ವಾರ್ಥಿ ಆಗಿದ್ದಾನೆ. ಅವನ ಸಹೋದರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಟ್ರಸ್ಟಿ ಸದಸ್ಯರಾಗಿರುತ್ತಾಳೆ. ಸಹೋದರ-ಸಹೋದರಿ ಇಬ್ಬರೂ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿರುತ್ತಾರೆ ಮತ್ತು ಕನ್ನಡ ಭಾಷೆ ಅಥವಾ ಪ್ರಾದೇಶಿಕ ಸಂಪ್ರದಾಯದ ಬಗ್ಗೆ ಅಸಡ್ಡೆಯನ್ನು ಹೊಂದಿರುತ್ತಾರೆ. ವಾಸ್ತವವಾಗಿ, ಅವರು ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡದ ಜನರನ್ನು ಕೀಳಾಗಿ ಕಾಣುತ್ತಾರೆ.

ಹೀಗೆ ಒಂದು ದಿನ ಆಗಸ್ತ್ಯ, ಅವನ ಸೋದರಿ ಮತ್ತು ಆತನ ಶಾಲೆಯ ಟ್ರಸ್ಟಿ ಸದಸ್ಯರು ಸೇರಿ ತಮ್ಮ ಇಂಗ್ಲೀಷ್ ಮಾಧ್ಯಮದ ಶಾಲೆಗೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ದಾಖಾಲತಿ ಮಾಡುವಂತೆ ಪ್ರಭಾವ ಬೀರಲು ಕಾವೇರಿಯ ಗ್ರಾಮಕ್ಕೆ ಬರುತ್ತಾರೆ.

ಆದರೆ, ಕನ್ನಡ ಭಾಷೆಯ ಬಗ್ಗೆ ಗ್ರಾಮಸ್ಥರಿಗಿರುವ ಗೌರವವನ್ನು ನೋಡಿದ ಸಹೋದರ-ಸಹೋದರಿ ಕಾವೇರಿಗೆ ಸವಾಲನ್ನು ಹಾಕುತ್ತಾರೆ. ನಗರದ ತಮ್ಮ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕನ್ನಡವನ್ನು ಪಾಠ ಮಾಡುವಂತೆ ಹೇಳುತ್ತಾರೆ. ಕಾವೇರಿ ಸವಾಲನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುತ್ತಾಳೆ ಮತ್ತು ಅದಕ್ಕೆ ಸಿದ್ಧನಿದ್ದೇನೆ ಎಂದು ಹೇಳುತ್ತಾಳೆ.

ಪಾತ್ರವರ್ಗ

ಬದಲಾಯಿಸಿ

ಮುಖ್ಯ ಪಾತ್ರಗಳು

ಬದಲಾಯಿಸಿ
  • ಪ್ರಿಯಾ ಜೆ. ಆಚಾರ್(2023-ಪ್ರಸ್ತುತ): ಕಥಾ ನಾಯಕಿ ಕಾವೇರಿ ಪಾತ್ರದಲ್ಲಿ.
  • ರಕ್ಷಿತ್ ಅರಸ್ ಗೋಪಾಲ್ (2023-ಪ್ರಸ್ತುತ)[]: ಕಥಾ ನಾಯಕ ಆಗಸ್ತ್ಯ ಪಾತ್ರದಲ್ಲಿ.
  • ಮಹಾಲಕ್ಷ್ಮೀ(2023-ಪ್ರಸ್ತುತ) []: ಪ್ರಮೋದ ದೇವಿಯಾಗಿ. ಆಗಸ್ತ್ಯ ಮತ್ತು ಅನಿಕಾ ಅಜ್ಜಿ ಪಾತ್ರದಲ್ಲಿ.

ಪೋಷಕ ಪಾತ್ರಗಳು

ಬದಲಾಯಿಸಿ
  • ಅನು ಪೂವಮ್ಮ(2023-ಪ್ರಸ್ತುತ): ಅನಿಕಾ ಪಾತ್ರದಲ್ಲಿ. ಆಗಸ್ತ್ಯ ಸೋದರಿಯಾಗಿ.
  • ಲಕ್ಷ್ಮೀ ಸಿದ್ಧಯ್ಯ(2023-ಪ್ರಸ್ತುತ): ಅಂಬಿಕಾ ಪಾತ್ರದಲ್ಲಿ. ಆಗಸ್ತ್ಯ ಮತ್ತು ಅನಿಕಾ ತಾಯಿಯಾಗಿ
  • ರಶ್ಮಿತಾ ಚೆಂಗಪ್ಪ(2024- ಪ್ರಸ್ತುತ) []: ವೃಂದಾ ಪಾತ್ರದಲ್ಲಿ. ಖಳನಾಯಕಿಯಾಗಿ.
    • ಸುಕೃತಾ ನಾಗ್(2023-2024)[]: ವೃಂದಾ ಪಾತ್ರದಲ್ಲಿ.
  • ದೇವಯ್ಯ ಕಲಕಂದ (2024-ಪ್ರಸ್ತುತ): ವೀವೆಕ್ ಪಾತ್ರದಲ್ಲಿ. ವೃಂದಾ ಅಣ್ಣ ಮತ್ತು ಅನಿಕಾ ಗಂಡನಾಗಿ.

ರೂಪಾಂತರಗಳು

ಬದಲಾಯಿಸಿ
ಭಾಷೆ ಶೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ಬಂಗಾಳಿ ಬಂಗಾಲ ಮೀಡಿಯಂ
বাংলা মিডিয়াম
12 ಡಿಸೆಂಬರ್ 2022 ಸ್ಟಾರ್ ಜಾಸ್ಲಾ 2 ನವೆಂಬರ್ 2023 ಮೂಲ
ತೆಲುಗು Yadaloyallo Indradanassu
యడలోయల్లో ఇంద్రదనస్సు
24 ಏಪ್ರಿಲ್ 2023 ಸ್ಟಾರ್ ಮಾ 17 ಫೆಬ್ರವರಿ 2024 ರೀಮೆಕ್
ಕನ್ನಡ Kaveri Kannada Medium
ಕಾವೇರಿ ಕನ್ನಡ ಮೀಡಿಯಂ
28 ಆಗಸ್ಟ್ 2023 ಸ್ಟಾರ್ ಸುವರ್ಣ ಪ್ರಸಾರವಾಗುತ್ತಿದೆ

ಉಲ್ಲೇಖಗಳು

ಬದಲಾಯಿಸಿ
  1. "ಕಾವೇರಿ ಕನ್ನಡ ಮೀಡಿಯಮ್: ಇಂದಿನನಿಂದ ಸ್ಟಾರ್ ಸುವರ್ಣದಲ್ಲಿ ಪ್ರಸಾರ". The Times of India. Retrieved 28 ಆಗಸ್ಟ್ 2023.
  2. "ಕನ್ನಡದ ಕಂಪನ್ನು ಪಸರಿಸಲು ಬರ್ತಿದೆ ಹೊಚ್ಚ ಹೊಸ ಧಾರಾವಾಹಿ "ಕಾವೇರಿ ಕನ್ನಡ ಮೀಡಿಯಂ"!". ಝೀ ನ್ಯೂಸ್ ಇಂಡಿಯಾ. Retrieved 26 ಆಗಸ್ಟ್ 2023.
  3. "ದೈವಾರಾಧನೆ ಬಗ್ಗೆ ಅವಹೇಳನ, ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ವಿರುದ್ಧ ಜಾತಿ ನಿಂದನೆ ಕೇಸ್‌". ಸುವರ್ಣ ನ್ಯೂಸ್. Retrieved 10 ಫೆಬ್ರವರಿ 2024.
  4. "ಮೊದಲ ಮಗು ನೀರಿಕ್ಷೆಯಲ್ಲಿ ಕಾವೇರಿ ಕನ್ನಡ ಮೀಡಿಯಂ ನಟ ರಕ್ಷಿತ್ ಅರಸ್ ಗೋಪಾಳ್". ವಿಜಯ ಕರ್ನಾಟಕ. Retrieved 20 ಫೆಬ್ರವರಿ 2024.
  5. "ಕಿರುತೆರೆಗೆ Mahalakshmi ಗ್ರ್ಯಾಂಡ್ ಎಂಟ್ರಿ: 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಟನೆ". ವಿಜಯ ಕರ್ನಾಟಕ. Retrieved 23 ಆಗಸ್ಟ್ 2023.
  6. "ವೃಂದಾ' ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ರಶ್ಮಿತಾ ಚೆಂಗಪ್ಪ". ಫಿಲ್ಮಿಬೀಟ್ ಕನ್ನಡ. Retrieved 23 ಜುಲೈ 2024.
  7. "ಕಾವೇರಿ - ಅಗಸ್ತ್ಯನ ಬಾಳಲ್ಲಿ ಬಿರುಗಾಳಿಯಾಗುತ್ತಾಳಾ ವೃಂದಾ..?". ಫಿಲ್ಮಿಬೀಟ್ ಕನ್ನಡ. Retrieved 17 ಡಿಸೆಂಬರ್ 2023.


ಬಾಹ್ಯಕೊಂಡಿಗಳು

ಬದಲಾಯಿಸಿ