ನಿವಾತಿ ಕೋಟೆಯು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್‌ನಿಂದ ದಕ್ಷಿಣಕ್ಕೆ ೧೦ ಕಿಮೀ ದೂರದಲ್ಲಿದೆ. ಈ ಕೋಟೆಯು ನಿವಾತಿ ಗ್ರಾಮದ ಸಮೀಪವಿರುವ ಬೆಟ್ಟದ ಮೇಲೆ ಇದೆ. ಕೋಟೆಯು ೪-೫ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ದಟ್ಟವಾದ ಪೊದೆಗಳಿಂದ ಆವೃತವಾಗಿದೆ.

ನಿವಾತಿ ಕೆರೆ
ಕೊಂಕಣ ಕರಾವಳಿ ಶ್ರೇಣಿ ಇದರ ಭಾಗ
ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ
ನಿರ್ದೇಶಾಂಕಗಳು15°56′20.4″N 73°30′41.9″E / 15.939000°N 73.511639°E / 15.939000; 73.511639
ಶೈಲಿಸಮುದ್ರ ಕೋಟೆ
ಎತ್ತರ೩೦೦ ಫೀಟ್
ಸ್ಥಳದ ಮಾಹಿತಿ
ಒಡೆಯಖಾಸಗಿ
ಇವರ ಹಿಡಿತದಲ್ಲಿದೆ
(೧೭೩೯-೧೮೧೮)
 ಯುನೈಟೆಡ್ ಕಿಂಗ್ಡಂ
  • ಈಸ್ಟ್ ಇಂಡಿಯಾ ಕಂಪನಿ (೧೮೧೮-೧೮೫೭)
  • ಬ್ರಿಟಿಷ್ ರಾಜ್ (೧೮೫೭-೧೯೪೭)
 India (1947-)
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿGood
ಸ್ಥಳದ ಇತಿಹಾಸ
ಸಾಮಗ್ರಿಗಳುಕೆಂಪು ಲ್ಯಾಟರೈಟ್ ಕಲ್ಲು

ಇತಿಹಾಸ

ಬದಲಾಯಿಸಿ

೧೬೬೪ ರಲ್ಲಿ ಸಿಂಧುದುರ್ಗ ಕೋಟೆಯನ್ನು ನಿರ್ಮಿಸಿದ ತಕ್ಷಣವೇ ಶಿವಾಜಿ ಮಹಾರಾಜರು ಈ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯನ್ನು ಕಾರ್ಲಿ ತೊರೆ ಮತ್ತು ವೆಂಗುರ್ಲಾ ಬಂದರನ್ನು ನೋಡಲು ಬಳಸಲಾಗುತ್ತಿತ್ತು. ಈ ಕೋಟೆಯನ್ನು ನಂತರ ಸಾವಂತವಾಡಿಯ ಸಾವಂತ ವಶಪಡಿಸಿಕೊಂಡರು. ೧೭೪೮ ರಲ್ಲಿ ಪೋರ್ಚುಗಿಸರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಇಸ್ಮಾಯಿಲ್ ಖಾನ್ ಈ ಕೋಟೆಯನ್ನು ವಶಪಡಿಸಿಕೊಂಡನು. ೧೭೮೭ ರಲ್ಲಿ ಕೊಲ್ಲಾಪುರದ ಕಾರ್ವಿರ್ಕರು ಈ ಕೋಟೆಯ ಮೇಲೆ ಹಿಡಿತ ಸಾಧಿಸಿದರು. ೧೮೦೩ ರಲ್ಲಿ ಕೋಟೆಯ ನಿಯಂತ್ರಣವು ಸಾವಂತರಿಗೆ ಹಸ್ತಾಂತರವಾಯಿತು. ಬ್ರಿಟಿಷ್ ಸೇನೆಯ ಎಚ್‌ಎಂ IV ರೈಫಲ್ಸ್ ಯಾವುದೇ ಪ್ರತಿರೋಧವಿಲ್ಲದೆ ಫೆಬ್ರವರಿ ೪, ೧೮೧೮ ರಂದು ಈ ಕೋಟೆಯನ್ನು ವಶಪಡಿಸಿಕೊಂಡಿತು. []

ತಲುಪುವ ವಿಧಾನ

ಬದಲಾಯಿಸಿ

ಮುಂಬೈನಿಂದ ೫೨೬ ಕಿಮೀ ದೂರದಲ್ಲಿರುವ ಮಾಲ್ವಾನ್ ಈ ಸ್ಥಳಕ್ಕೆ ಹತ್ತಿರದ ಪಟ್ಟಣವಾಗಿದೆ. ಈ ಕೋಟೆಯು ನಿವಾಟಿ ಮತ್ತು ಪರುಲೆ ಗ್ರಾಮಗಳಿಗೆ ಸಮೀಪದಲ್ಲಿದೆ. ಮಾಲ್ವಾನ್ ಮತ್ತು ಕುಡಾಲ್‌ನಿಂದ ನಿವಾಟಿ ಕೋಟೆಗೆ ನೇರ ಬಸ್ಸುಗಳಿವೆ.

ನೋಡಬೇಕಾದ ಸ್ಥಳಗಳು

ಬದಲಾಯಿಸಿ

ದ್ವಾರಗಳು ಮತ್ತು ಬುರುಜುಗಳು ಉತ್ತಮ ಸ್ಥಿತಿಯಲ್ಲಿವೆ. ಇಡಿ ಕೋಟೆಯನ್ನು ೨೦ ಅಡಿ ಅಗಲ ಮತ್ತು ೧೦ ಅಡಿ ಆಳದ ಕಂದಕದಿಂದ ರಕ್ಷಿಸಲಾಗಿದೆ. ಕೋಟೆಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಸಮುದ್ರದ ಮಧ್ಯದಲ್ಲಿರುವ 'ನಿವಾಟಿ ರಾಕ್' ಎಂಬ ಲೈಟ್ ಹೌಸ್ ಅನ್ನು ನೀವು ನೋಡಬಹುದು.

15°56′20.4″N 73°30′41.9″E / 15.939000°N 73.511639°E / 15.939000; 73.511639

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Gazetteer Of The Ratnagiri District". Gazetteers.maharashtra.gov.in. Retrieved 2018-05-28.