ವೆಂಗುರ್ಲಾ
ವೆಂಗುರ್ಲಾ ಭಾರತದ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಗೋವಾ ರಾಜ್ಯದಿಂದ ಸ್ವಲ್ಪವೇ ಉತ್ತರದಲ್ಲಿದೆ. ಇದು ಮುಖ್ಯವಾಗಿ ಗೋಡಂಬಿ, ಮಾವು, ತೆಂಗು ಮತ್ತು ವಿವಿಧ ರೀತಿಯ ಬೆರಿ ಮರಗಳ ಸಮೃದ್ಧ ಹಸಿರು ಎಲೆಗಳಿರುವ ಅರ್ಧವೃತ್ತಾಕಾರದ ಗುಡ್ಡಗಳಿಂದ ಆವೃತವಾಗಿದೆ.ಅರೇಬಿಯನ್ ಸಮುದ್ರವು ವೆಂಗುರ್ಲಾದ ಪಶ್ಚಿಮದಲ್ಲಿದೆ.
ಈ ಪಟ್ಟಣವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ವೆಂಗುರ್ಲಾ ತಾಲೂಕು ದೇವಿ ಸಾತೇರಿ, ಶ್ರೀ ರಾಮೇಶ್ವರ, ಕನ್ಯಾಲೆ ರೇಡಿಯಲ್ಲಿ ಶ್ರೀ ನವದುರ್ಗಾ, ರೇಡಿ ಹಾಗೂ ಶಿರೋಡಾದಲ್ಲಿ ಶ್ರೀ ಮೌಳಿ, ಆರಾವಳಿಯಲ್ಲಿ ಶ್ರೀ ವೆಟೋಬ, ಕನ್ಯಾಲೆ ರೇಡಿಯಲ್ಲಿ ಶ್ರೀ ರಾಮಪುರುಷ ದೇವಾಲಯ, ರೇಡಿಯಲ್ಲಿ ಶ್ರೀ ಗಣೇಶ ಮತ್ತು ಶ್ರೀ ರಾವಲ್‍ನಾಥ್ ಸೇರಿದಂತೆ ಕೆಲವು ದೇವಾಲಯಗಳನ್ನು ಹೊಂದಿದೆ.
ಆಸಕ್ತಿಯ ಸ್ಥಳಗಳು
ಬದಲಾಯಿಸಿ- ಮೋಚೆಮಾಡ್ ಬೀಚ್
- ಡಚ್ ರಕ್ಷಿತ ಕಾರ್ಖಾನೆ (1637)
- ವೇಲಾಘರ್
- ಕೇಪಾದೇವಿ ದೇವಸ್ಥಾನ, ಉಭದಂಡ
- ಅಸೋಲಿ
- ಬೆಳಕಿನ ಮನೆ
- ತೇರೆಖೋಲ್ ಬೀಚ್
- ಮಾನಸೀಶ್ವರ ದೇವಸ್ಥಾನ, ಬಗಾಯತ್‍ವಾಡಿ
- ಕಾಲ್ವಿ ಬೀಚ್, ಕೇಲೂಸ್
- ರೇಡಿ
- ವೆಂಗುರ್ಲಾ ಜೆಟ್ಟಿ
- ಸಾಗರೇಶ್ವರ್ ಬೀಚ್
- ದಾಭೋಲಿ ಬೀಚ್
- ಉಭದಂಡ ಬೀಚ್
- ವಾಯಂಗಾನಿ ಬೀಚ್
- ಬಗಾಯತ್‍ವಾಡಿ ಬೀಚ್
- ಮುಥ್ ಬೀಚ್
- ಮಾನಸೀಶ್ವರ ದೇವಾಲಯ
- ದಾಭೋಸ್‍ವಾಡಾ, ವೆಂಗುರ್ಲಾ ಬಂದರು ರಸ್ತೆ
- ನವಘರ್ ಬೀಚ್
ಚಿತ್ರಸಂಪುಟ
ಬದಲಾಯಿಸಿ-
ಮೋಚೆಮಾಡ್
-
ವೇಲಾಘರ್
-
ತೇರೆಖೋಲ್
-
ವೆಂಗುರ್ಲಾ
ಉಲ್ಲೇಖಗಳು
ಬದಲಾಯಿಸಿ
ಹೊರಗಿನ ಕೊಂಡಿಗಳು
ಬದಲಾಯಿಸಿ- Vengurla:Waman Parulekar - information about Vengurla
- Navadurga at Redi Vengurla - information about famous Navadurga Temple at Redi, Vengurla