ಸಿಂಧುದುರ್ಗ್ ಕೋಟೆ

  ಸಿಂಧುದುರ್ಗ್ ಕೋಟೆಯು ಒಂದು ಐತಿಹಾಸಿಕ ಕೋಟೆಯಾಗಿದ್ದು ಭಾರತದ ಮಹಾರಾಷ್ಟ್ರ ರಾಜ್ಯದ ಕರಾವಳಿಗೆ ಸ್ವಲ್ಪ ದೂರದಲ್ಲಿರುವ ಒಂದು ದ್ವೀಪದಲ್ಲಿ ಸ್ಥಿತವಾಗಿದೆ. ಈ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದರು. ಈ ಕೋಟೆಯು ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಿಂಧುದುರ್ಗ್ ಜಿಲ್ಲೆಯ ಮಾಲ್ವಣ್ ಪಟ್ಟಣದ ದಡದಲ್ಲಿದೆ. ಇದು ಸಂರಕ್ಷಿತ ಸ್ಮಾರಕವಾಗಿದೆ.[]

ಮುಖ್ಯ ಭೂಭಾಗದಿಂದ ಸಿಂಧುದುರ್ಗ್ ಕೋಟೆಯ ನೋಟ

ಇತಿಹಾಸ

ಬದಲಾಯಿಸಿ

ಸಿಂಧುದುರ್ಗ್ ದ್ವೀಪ-ಕೋಟೆಯನ್ನು ಮರಾಠ ಸಾಮ್ರಾಜ್ಯದ ಆಡಳಿತಗಾರ ಶಿವಾಜಿ ನಿರ್ಮಿಸಿದ.[] ವಿದೇಶಿ (ಆಂಗ್ಲ, ಡಚ್, ಫ್ರೆಂಚ್ ಮತ್ತು ಪೋರ್ಚುಗೀಸ್) ವ್ಯಾಪಾರಿಗಳ ಹೆಚ್ಚುತ್ತಿರುವ ಪ್ರಭಾವಕ್ಕೆ ಪ್ರತಿಯಾಗಿ ಮತ್ತು ಜಂಜೀರಾದ ಸಿದ್ಧಿಗಳ ಏಳಿಗೆಯನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿತ್ತು.[] 1664 ರಲ್ಲಿ ಹಿರೋಜಿ ಇಂದುಲ್ಕರ್ ಇದರ ನಿರ್ಮಾಣದ ಮೇಲ್ವಿಚಾರಣೆ ಮಾಡಿದರು. ಖುರ್ಟೆ ದ್ವೀಪ ಎಂದು ಕರೆಯಲ್ಪಡುವ ಒಂದು ಸಣ್ಣ ದ್ವೀಪದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ.

ರಚನೆಯ ವಿವರಗಳು

ಬದಲಾಯಿಸಿ

ಎರಕಹೊಯ್ಯಲು 4,000 ಪೌಂಡ್‌ಗಳಿಗಿಂತ ಹೆಚ್ಚು ಸೀಸವನ್ನು ಬಳಸಲಾಯಿತು ಮತ್ತು ಅಡಿಪಾಯದ ಕಲ್ಲುಗಳನ್ನು ದೃಢವಾಗಿ ಹಾಕಲಾಯಿತು. 25 ನವೆಂಬರ್ 1664 ರಂದು ನಿರ್ಮಾಣ ಪ್ರಾರಂಭವಾಯಿತು. ಮೂರು ವರ್ಷಗಳ ಅವಧಿಯಲ್ಲಿ (1664-1667) ನಿರ್ಮಿಸಲಾದ ಸಮುದ್ರ ಕೋಟೆಯು 48 ಎಕರೆಗಳಲ್ಲಿ ಹರಡಿಕೊಂಡಿದೆ. ಸಮೀಪಿಸುವ ಶತ್ರುಗಳಿಗೆ ಮತ್ತು ಅರಬ್ಬೀ ಸಮುದ್ರದ ಅಲೆಗಳು ಹಾಗೂ ಉಬ್ಬರವಿಳಿತಗಳಿಗೆ ನಿರೋಧಕವಾಗಿ ಕಾರ್ಯನಿರ್ವಹಿಸಲು ಬೃಹತ್ ಗೋಡೆಗಳನ್ನು ವಿನ್ಯಾಸಗೊಳಿಸಲಾಗಿದೆ. ಮುಖ್ಯ ದ್ವಾರವನ್ನು ಯಾರೂ ಹೊರಗಿನಿಂದ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಮರೆಮಾಡಲಾಗಿದೆ.

ಚಿತ್ರಸಂಪುಟ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "List of the protected monuments of Mumbai Circle district-wise" (PDF). Archived from the original (PDF) on 6 June 2013.
  2. Sen, Sailendra (2013). A Textbook of Medieval Indian History. Primus Books. p. 207. ISBN 978-9-38060-734-4.
  3. "Tour De Kokan : Explore Various Places & Information". Best Places to visit - Travel Information - Tour De Konkan. Archived from the original on 2022-03-30. Retrieved 2022-08-10.