ನಿರುಪಮಾ ರಾಜೇಂದ್ರ

  ನಿರುಪಮಾ ರಾಜೇಂದ್ರ ಅವರು ಭಾರತೀಯ ಶಾಸ್ತ್ರೀಯ ನೃತ್ಯಪ್ರಕಾರಗಳಾದ ಭರತನಾಟ್ಯ ಮತ್ತು ಕಥಕ್ ನೃತ್ಯದಲ್ಲಿ ಜನಮನ್ನಣೆಯನ್ನು ಗಳಿಸಿದ್ದಾರೆ. ಅವರು ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಿರುಪಮಾ ಮತ್ತು ಅವರ ಪತಿ ರಾಜೇಂದ್ರ (ನಿರುಪಮಾ ಮತ್ತು ರಾಜೇಂದ್ರ) ಒಟ್ಟಿಗೆ ಕಥಕ್ ಅನ್ನು ಪ್ರದರ್ಶಿಸುತ್ತಾರೆ. ನೃತ್ಯವನ್ನು ಹೆಚ್ಚು ಬೆಳೆಸುವ ಉದ್ದೇಶದಿಂದ ಅವರು ೧೯೯೪ ರಲ್ಲಿ ಅಭಿನವ ನೃತ್ಯ ಕಂಪನಿಯನ್ನು ಸ್ಥಾಪಿಸಿದರು. ಅವರು ಸಾಂಪ್ರದಾಯಿಕ ಮತ್ತು ಸಮಕಾಲೀನ ನೃತ್ಯ ಶೈಲಿಗಳನ್ನು ಬೆಸೆಯುವ ಪ್ರಯತ್ನಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಈ ನೃತ್ಯ ಜೋಡಿಯು ಅನೇಕ ಪ್ರದರ್ಶನಗಳನ್ನು ನೀಡಿದ್ದು, ನಾಟ್ಯ ಮಯೂರಿ ಮತ್ತು ನಾಟ್ಯ ಮಯೂರ (೧೯೯೮), ಕರ್ನಾಟಕ ಕಲಾಶ್ರೀ (೨೦೧೧) ಮತ್ತು ನೃತ್ಯ ಚೂಡಾಮಣಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಆರಂಭಿಕ ಜೀವನ

ಬದಲಾಯಿಸಿ
 
೨೦೧೩ ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಹಾ ಮಾಯಾ ನೃತ್ಯೋತ್ಸವದಲ್ಲಿ ಪ್ರದರ್ಶನ ನೀಡುತ್ತಿರುವುದು

ನಿರುಪಮಾ ಅವರಿಗೆ ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಒಲವು ಇತ್ತು. ಅವರು ಐದನೇ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಿದರು. ಅವರು ನೃತ್ಯವನ್ನು ಅಭಿವ್ಯಕ್ತಿಯ ಪ್ರಮುಖ ರೂಪವಾಗಿ ನೋಡಿದರು ಮತ್ತು ಅದನ್ನು ಜನರೊಂದಿಗೆ ಹಂಚಿಕೊಳ್ಳಲು ಇಷ್ಟಪಟ್ಟರು. ಚಿಕ್ಕಂದಿನಲ್ಲಿ ಕಥಕ್ ಮತ್ತು ಭರತನಾಟ್ಯ ಎರಡನ್ನೂ ಕಲಿತ ನಿರುಪಮಾ ಅವರಿಗೆ ಕಥಕ್ ಕಲಾ ಪ್ರಕಾರದ ಪ್ರತಿಗಿನ ಅವರ ಉತ್ಸಾಹವು ಗುರು ಮಾಯಾ ರಾವ್ ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು.

ವೈಯಕ್ತಿಕ ಜೀವನ

ಬದಲಾಯಿಸಿ

ನಿರುಪಮಾ ಅವರು ಮತ್ತು ರಾಜೇಂದ್ರ ಇಬ್ಬರೂ ತಮ್ಮ ಗುರು ಮಾಯಾ ರಾವ್ ಅವರ ಬಳಿ ವಿದ್ಯಾರ್ಥಿಗಳಾಗಿದ್ದಾಗ ಒಬ್ಬರನ್ನೊಬ್ಬರು ಭೇಟಿಯಾದರು. ನಿರುಪಮಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ. ೨೫ ನೇ ವಯಸ್ಸಿನಲ್ಲಿ ರಾಜೇಂದ್ರ ಮತ್ತು ನಿರುಪಮಾ ಅವರು ವಿವಾಹವಾದರು ಮತ್ತು ಅವರು ತಮ್ಮ ವೃತ್ತಿಜೀವನವವನ್ನಾಗಿ ಪ್ರದರ್ಶನ ಕಲೆಗಳನ್ನು ಆರಿಸಿಕೊಂಡರು. ದಿನಕಳೆದಂತೆ ಅವರ ನೃತ್ಯಕ್ಷೇತ್ರದಲ್ಲಿನ ಪ್ರಯೋಗ, ತರಬೇತಿ ಮತ್ತು ಅಭ್ಯಾಸಗಳು ಬೆಳೆಯುತ್ತಾ ಹೋಯಿತು. ಇಂದು ಅವರು ತಮ್ಮ ನೃತ್ಯ ಕಂಪನಿ ಅಭಿನವ ಮೂಲಕ ಕಥಕ್‌ಗೆ ಹೊಸ ಮತ್ತು ಆಧುನಿಕ ತಿರುವನ್ನು ನೀಡಿದ ಕಲಾವಿದರಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. [] []

ಅಭಿನವ ನೃತ್ಯ ಸಂಸ್ಥೆ

ಬದಲಾಯಿಸಿ

ಸಾಂಪ್ರದಾಯಿಕ ಭಾರತೀಯ ನೃತ್ಯ ಪ್ರಕಾರಗಳನ್ನು ಭಾರತ ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಈ ದಂಪತಿಗಳು "ಅಭಿನವಾಸ್" ಅನ್ನು ೧೯೯೪ ರಲ್ಲಿ ಸ್ಥಾಪಿಸಿದರು. ಈ ನೃತ್ಯ ಕಂಪನಿಯು ದೇವರು ಮತ್ತು ಪ್ರಕೃತಿ ಎರಡನ್ನೂ ಸಾಕಾರಗೊಳಿಸುವ ವಿವಿಧ ನೃತ್ಯ ಶೈಲಿಯಗಳನ್ನು ಸಂಯೋಜನೆ ಮಾಡಿದೆ.

ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಈ ಜೋಡಿಯು ವಿಶಿಷ್ಟವಾದ ಪ್ರಸ್ತುತಿ ಶೈಲಿಯನ್ನು ಹೊರತಂದಿದೆ. ಜನಾಂಗೀಯ ಮತ್ತು ಸಮಕಾಲೀನ ನೃತ್ಯ ಮತ್ತು ಜಾಝ್, ಸ್ಪ್ಯಾನಿಷ್, ಆಫ್ರೋ ಮತ್ತು ವಿಶ್ವ ಸಂಗೀತದಂತಹ ಸಂಗೀತ ಪ್ರಕಾರಗಳ ಸಮ್ಮಿಶ್ರಣವನ್ನು ಮಾಡಿ ನೃತ್ಯಪ್ರದರ್ಶನಗಳನ್ನು ನೀಡುತ್ತಾರೆ. ಇವರ ಸಾಂಪ್ರದಾಯಿಕ ಕಲೆಯೊಂದಿಗೆ ಸಮಕಾಲೀನವನ್ನು ವಿಲೀನಗೊಳಿಸುವ ಶೈಲಿಯು ಕುಮುದಿನಿ ಲಖಿಯಾ ಅವರಿಂದ ಸ್ಫೂರ್ತಿಯನ್ನು ಪಡೆದಿದೆ. [] ಅಭಿನವ ನೃತ್ಯ ಸಂಸ್ಥೆಯು ಕಲಾ ಪ್ರಕಾರದ ಸ್ವಂತಿಕೆಯನ್ನು ಗಮನದಲ್ಲಿಟ್ಟುಕೊಂಡು ಶಾಸ್ತ್ರೀಯ ನೃತ್ಯವನ್ನು ಪುನರುಜ್ಜೀವನಗೊಳಿಸಿದೆ. ಹೊಸ ತಂತ್ರಗಳು ಮತ್ತು ಶೈಲಿಗಳನ್ನು ಸಂಯೋಜಿಸುವಾಗ, ಕಥೆಯ ನಿಜವಾದ ಸಾರವನ್ನು ಉಳಿಸಿಕೊಳ್ಳುವಲ್ಲಿ ಮುಖ್ಯ ಸವಾಲು ಇರುತ್ತದೆ.

ಪ್ರದರ್ಶನಗಳು

ಬದಲಾಯಿಸಿ

ನಿರುಪಮಾ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಕಾರ್ಯಕ್ರಮಗಳಿಗೆ ನೃತ್ಯ ಸಂಯೋಜನೆ ಮತ್ತು ಪ್ರದರ್ಶನಗಳನ್ನು ನೀಡಿದ್ದಾರೆ. ಕಂಪನಿಯು 'ಮದನೋತ್ಸವ ಎಂಬ ವಾರ್ಷಿಕ ಉತ್ಸವವನ್ನು ಆಯೋಜಿಸುತ್ತದೆ. [] ಇದು ಜೀವನ ಮತ್ತು ವಸಂತ ಋತುವಿನ ಆಚರಣೆಯಾಗಿದೆ.

ಕೆಲವು ಗಮನಾರ್ಹ ಪ್ರದರ್ಶನಗಳು:

  • ಹರ್ಷಿಕಾ - ೨೦೨೦
  • ಜೈಸಿಯಾನಾ ೨೦೧೪
  • ಉತ್ಸವ ಪರ್ವ - ೨೦೨೦ - ೩ ದಿನ - ದಿನ ೧ - ರಾಮ ಕಥಾ ವಿಸ್ಮಯ (ರಾಮಾಯಣ), [] ದಿನ ೨ - ಇಂಟರ್ ಡಿಸಿಪ್ಲಿನರಿ ಕಾನ್ಕ್ಲೇವ್, ದಿನ ೩ - ಮದನೋತ್ಸವ (ವಸಂತ ಸಂಭ್ರಮ) []
  • ಕಲಾ ದ್ವಾರಕಾ - ೨೦೨೦ - ಆನ್‌ಲೈನ್ ನೃತ್ಯ ಉತ್ಸವ []
  • ರಸಾನಂದ (ಕೃಷ್ಣನ ಮೇಲಿನ ಪ್ರೀತಿ)
  • ಕೃಷ್ಣಾ - ಫೈರ್ ಟು ಫ್ರಾಸ್ಟ್ - ೨೦೧೯ - ದ್ರೌಪದಿ ಆಧಾರಿತ
  • ಒಜೆ‍ಎಸ್(OJAS) - ಕೃಷ್ಣನ ಚಿತ್ರಣ - ೨೦೧೦
 
೨೦೧೩ ರಲ್ಲಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ರಾಜೇಂದ್ರ ಓಜಸ್(ಓಜೆಎಎಸ್) ಪ್ರದರ್ಶನ

ಪ್ರಶಸ್ತಿಗಳು ಮತ್ತು ಮನ್ನಣೆಗಳು

ಬದಲಾಯಿಸಿ

ಪ್ರದರ್ಶನ ಕಲೆಗಳ ಕ್ಷೇತ್ರಕ್ಕೆ ಅವರ ಅಪಾರ ಕೊಡುಗೆಗಳಿಗಾಗಿ, ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ:

  • ನಿರುಪಮಾ- ನಾಟ್ಯ ಮಯೂರಿ - (೧೯೯೮)
  • ರಾಜೇಂದ್ರ ಸರ್- ನಾಟ್ಯ ಮಯೂರ- (೧೯೯೮)
  • ಪ್ರದರ್ಶನ ಕಲೆಯ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ- (೨೦೧೧)
  • ಕೃಷ್ಣ ಗಾನ ಸಭಾದ ಪ್ರತಿಷ್ಠಿತ ನೃತ್ಯ ಚೂಡಾಮಣಿ ಶೀರ್ಷಿಕೆ
  • ೨೦೧೩ ರಲ್ಲಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನರ್ತಕಿ ಯು.ಎಸ್. ಕೃಷ್ಣರಾವ್ ಅವರಿಗೆ ಗೌರವಾರ್ಥವಾಗಿ ಆಯೋಜಿಸಲಾದ ಮಹಾ ಮಾಯಾ ನೃತ್ಯೋತ್ಸವದಲ್ಲಿ ನಿರುಪಮಾ ರಾಜೇಂದ್ರ ಅವರ ಕೊಡುಗೆಗಳಿಗಾಗಿ ಗೌರವಿಸಲಾಯಿತು. []

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "What's kept dancer couple Nirupama and Rajendra together? - Times of India". The Times of India (in ಇಂಗ್ಲಿಷ್). Retrieved 2021-03-28.
  2. "Taking the pandemic in their stride". Deccan Herald (in ಇಂಗ್ಲಿಷ್). 2020-11-08. Retrieved 2021-03-28.
  3. Swaminathan, Chitra (2016-12-01). "An interesting story unfolds". The Hindu (in Indian English). ISSN 0971-751X. Retrieved 2021-03-28.
  4. Govind, Ranjani (2018-03-21). "Day-long dance, music and games". The Hindu (in Indian English). ISSN 0971-751X. Retrieved 2021-03-28.
  5. "Dance, drama, Disney and more in Rama Katha Vismaya". Express News Service. 17 February 2020. Retrieved 28 March 2020.
  6. "Performed Activity Study Day Range", Definitions, Qeios, 2020-02-07, retrieved 2021-03-28
  7. "Taking the pandemic in their stride". Deccan Herald (in ಇಂಗ್ಲಿಷ್). 2020-11-08. Retrieved 2021-03-28.
  8. "Award for the dancing duo Nirupama Rajendra at Maha Maya". www.narthaki.com. Retrieved 2013-09-18.