ನಿಮಾಡಿ ಭಾಷೆ
ಮಧ್ಯಪ್ರದೇಶದಲ್ಲಿ ಮಾತನಾಡುವ ಪ್ರಮುಖ ಉಪಭಾಷೆಗಳಲ್ಲಿ ಒಂದು ನಿಮಾಡಿ ಕೂಡ ಒಂದು.[೧] ಈ ಭಾಷೆಯು ಇಂಡೋ-ಆರ್ಯನ್ ಮೂಲದ್ದು ಎಂದು ಗುರ್ತಿಸಲಾಗಿದ್ದು,[೨] ಈ ಭಾಷೆಯನ್ನು ಮಹರಾಷ್ಟ್ರದ ಗಡಿ ಪ್ರದೇಶ ಮತ್ತು ಮಧ್ಯ ಪ್ರದೇಶದ ಮಾಲ್ಪಾದ ದಕ್ಷಿಣದ ಜಿಲ್ಲೆಗಳಾದ ಬಾರ್ವಾನಿ, ಖಾಂಡ್ವಾ, ಬರ್ವಾಹಾ, ಖಾರ್ಗೂನ್, ಬುರ್ಹಾನ್ಪುರ್, ಬೇಡಿಯಾ, ಸನಾವಾಡ್, ಧಾರ್, ಹರ್ಡಾ ಮತ್ತು ದಕ್ಷಿಣಾ ದೇವಾಸ್ ನಲ್ಲಿ ಈ ಭಾಷೆಯ ಪ್ರಭಾವ ಹೆಚ್ಚಿದೆ. ಈ ಭಾಷೆಯನ್ನು 21.5 ಲಕ್ಷ ಜನರು ಮಾತನಾಡುತ್ತಾರೆ.[೩]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಸಾಹಿತ್ಯ
ಬದಲಾಯಿಸಿನಿಮಾಡಿ ಭಾಷೆಯಲ್ಲಿ ಅನೇಕ ವಿದ್ವಾಂಸರು ಸಾಹಿತ್ಯ ರಚನೆ ಮಾಡಿದ್ದು ಭಾಷೆ ಬೆಳೆಯಲು ಶ್ರಮಿಸಿದ್ದಾರೆ, ಅವರಲ್ಲಿ ರಾಮನಾರಾಯಣ ಉಪಧ್ಯಾಯ, ಮಹದೇವ ಪ್ರಸಾದ್ ಚತುರ್ವೇದಿ, ಪ್ರಭಾಕರ್ ಜಿ ದುಬೆ, ಜೀವನ್ ಜೋಶಿ ಪ್ರಮುಖರು.
ಮಹದೇವ್ ಪ್ರಸಾದ್ ಚತುರ್ವೇದಿ
ಬದಲಾಯಿಸಿಇವರು ಭಗವದ್ಗೀತೆಯನ್ನು ನಿಮಾಡಿ ಭಾಷೆಯಲ್ಲಿ ಅಮ್ಮರ್ ಬೋಲ್ ಎಂದು ಅನುವಾದ ಮಾಡಿದ್ದಾರೆ. ಈ ಕಾವ್ಯವು ಮಧ್ಯ ನಿಮಾರಿಯಲ್ಲಿನ ಮೊದಲ ಮಹಾಕಾವ್ಯವಾಗಿದೆ.
ಪ್ರಭಾಕರ್ ಜಿ ದುಬೆ
ಬದಲಾಯಿಸಿವೃತ್ತಿಯಲ್ಲಿ ಶಿಕ್ಷಕರಾಗಿದ್ದು ನಿಮಾರಿಯಲ್ಲಿ ಅನೇಕ ಹಾಡು ಮತ್ತು ನಾಟಕಗಳನ್ನು ರಚನೆ ಮಾಡಿ ಹಾಡಿಸಿದ್ದಾರೆ. ಇವರು ನಿಮಾಡಿ ಭಾಷೆಗೆ ನೀಡಿರುವ ಕೊಡುಗೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇವರು ಗಮ್ಮತ್ ಸ್ವಾಂಗ್ ಶೈಲಿಯ ಹಾಡುಗಳಿಗೆ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದಾರೆ. ಇವರು ರಚನೆ ಮಾಡಿರುವ ತುಮ್ಕಾ ಎನ್ನುವ ಪುಸ್ತಕಕ್ಕೆ ಅಕಾಡಮಿಯ ಪ್ರಶಸ್ತಿ ಕೂಡ ಲಭಿಸಿದೆ.
ನಿಮಾಡಿ ಭಾಷೆಗೆ ಇರುವ ಇತರ ಹೆಸರುಗಳು
ಬದಲಾಯಿಸಿ- ಭೂನಿ
- ನಿಮ್ಮಾಡಿ
- ನಿಮರಿ
- ನಿಮಾಡಿ
ಉಲ್ಲೇಖಗಳು
ಬದಲಾಯಿಸಿ<refrences />