ನಿಗೂಢ ರಹಸ್ಯ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ


ನಿಗೂಢ ರಹಸ್ಯ - ಇದು 1990ರ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದನ್ನು ಪೇರಾಲ ಅವರು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಶಂಕರ್ ನಾಗ್, ಗೀತಾ , ವನಿತಾ ವಾಸು ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿದ್ದರು. ಚಿತ್ರಕ್ಕೆ ಸಂಗೀತವನ್ನು ಹಂಸಲೇಖ ಒದಗಿಸಿದರು. ಈ ಚಿತ್ರವು ಶಂಕರ್ ನಾಗ್ ಅವರ ಮರದ ನಂತರ ಬಿಡುಗಡೆ ಆಯಿತು. ಅವರ ಸೋದರ ಅನಂತ್ ನಾಗ್ ಅವರು ಶಂಕರ್ ನಾಗ್ ಅವರ ಪಾತ್ರಕ್ಕೆ ಧ್ವನಿ ನೀಡಿದರು.

ನಿಗೂಢ ರಹಸ್ಯ (ಚಲನಚಿತ್ರ)
ನಿಗೂಢ ರಹಸ್ಯ
ನಿರ್ದೇಶನಪೇರಾಲ
ನಿರ್ಮಾಪಕಜಗದೀಶ್ ಮಲ್ನಾಡ್
ಪಾತ್ರವರ್ಗಶಂಕರನಾಗ್ ಗೀತಾ ವನಿತಾವಾಸು, ತಾರ, ದೊಡ್ಡಣ್ಣ, ಮೈಸೂರು ಲೋಕೇಶ್,ಸದಾಶಿವ ಬ್ರಹ್ಮಾವರ
ಸಂಗೀತಹಂಸಲೇಖ
ಛಾಯಾಗ್ರಹಣಮನೋಹರ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಜೆ.ಆರ್.ಕೆ.ವಿಷನ್ಸ್


ಚಿತ್ರಕಥೆ ಬದಲಾಯಿಸಿ

ಇಂಜಿನಿಯರ್ ಮೋಹನನು ಒಂದು ದೊಡ್ಡ ಕಟ್ಟಡ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಆದರೆ ಅವನು ಇರಬೇಕಾಗಿ ಬರುವ ಸ್ಥಳವು ನಿಗೂಢವಾಗಿ ಪರಿಣಮಿಸುತ್ತದೆ. ಅಲ್ಲಿ ಕೆಲವು ವಿಶೇಷ ದಿನಗಳಲ್ಲಿ ಯಾರಾದರೂ ಒಬ್ಬರು ಸುದೀರ್ಘ ವಿದ್ಯುತ್ ನಿಲುಗಡೆಯ ಸಂದರ್ಭದಲ್ಲಿ ಕಾಣೆಯಾಗುತ್ತಿರುತ್ತಾರೆ ಮತ್ತು ಕೆಲ ದಿನಗಳ ನಂತರ ಊರ ಹೊರಗಡೆ ಅವರ ಶವವು ಸಿಗುತ್ತಿರುತ್ತದೆ. ಅಷ್ಟೇ ಅಲ್ಲದೆ ಒಂದು ದೆವ್ವ,ಒಂದು ದೆವ್ವದ ಮನೆ, ಕಾಣೆಯಾಗುವ ಜನರ ಗುಂಪು, ಮತ್ತು ಒಬ್ಬ ಶಕ್ತಿಶಾಲಿ ದೈತ್ಯ ಇವೆಲ್ಲ ಇವನಿಗೆ ಎದುರಾಗುತ್ತವೆ. ಚಲನಚಿತ್ರದ ಉಳಿದ ಭಾಗವು ಮೋಹನನು ಸತ್ಯವನ್ನು ಹೀಗೆ ಬಯಲಿಗೆಳೆಯುತ್ತಾನೆ ಎಂಬುದನ್ನು ತೋರಿಸುತ್ತದೆ.


ಪಾತ್ರವರ್ಗ ಬದಲಾಯಿಸಿ


ಹಿನ್ನೆಲೆ ಸಂಗೀತ ಬದಲಾಯಿಸಿ

ಸಮಸಂಖ್ಯೆ ಹಾಡು ಹಾಡುಗಾರರು
1 "ಮದನ ಮೋಹನ" ಎಸ್. ಜಾನಕಿ
2 " ತಿಳಿಯ ನೀರ" ಕೆ.ಜೆ.ಜೇಸುದಾಸ್, ಮಂಜುಳಾ ಗುರುರಾಜ್
3 "ಮಾನಸ ರಾಗವಿದು" ಎಸ್ ಜಾನಕಿ
4 "ಏನಪ್ಪಾ ಯಜಮಾನ" ಹಂಸಲೇಖ
5 "ಲಾಲಿ ಜೋ" ಕೆ.ಜೆ.ಜೇಸುದಾಸ್, ಎಸ್ ಜಾನಕಿ