ನಿಕಾನ್‌ ಕಾರ್ಪೊರೇಷನ್‌ (Nikon Corporation (株式会社ニコン Kabushiki-gaisha Nikon?) listen  (ಟೆಂಪ್ಲೇಟು:Tyo) ಎಂಬ ಸಂಸ್ಥೆಯು ನಿಕಾನ್‌‌ ಅಥವಾ ನಿಕಾನ್‌‌ ಕಾರ್ಪ್‌ ಎಂಬ ಹೆಸರುಗಳಿಂದಲೂ ಚಿರಪರಿಚಿತವಾಗಿದ್ದು, ಇದು ಜಪಾನ್‌‌ನ ಟೋಕಿಯೋ‌‌ದಲ್ಲಿ ತನ್ನ ದ್ರ ಕಾರ್ಯಾಲಯವನ್ನು ಹೊಂದಿರುವ ಒಂದು ಬಹುರಾಷ್ಟ್ರೀಯ ಸಂಸ್ಥೆಯಾಗಿದೆ ಮತ್ತು ದೃಗ್ವಿಜ್ಞಾನ ಹಾಗೂ ಚಿತ್ರಿಸುವಿಕೆಯ ಕ್ಷೇತ್ರದಲ್ಲಿ ವಿಶೇಷಜ್ಞತೆಯನ್ನು ಪಡೆದಿದೆ. ಇದರ ಉತ್ಪನ್ನಗಳಲ್ಲಿ ಕ್ಯಾಮರಗಳು, ದುರ್ಬೀನುಗಳು, ಸೂಕ್ಷ್ಮದರ್ಶಕಗಳು, ಅಳತೆಯ ಉಪಕರಣಗಳು, ಮತ್ತು ಅರೆವಾಹಕ ನಿರ್ಮಾಣದ ಛಾಯಾಶಿಲಾಮುದ್ರಣ ಹಂತಗಳಲ್ಲಿ ಬಳಸಲಾಗುವ ಸ್ಟೆಪರ್‌‌ಗಳು ಸೇರಿವೆ; ಸ್ಟೆಪರ್‌ಗಳ ವಲಯದಲ್ಲಿ ಇದು ವಿಶ್ವದ ಎರಡನೇ ಅತಿದೊಡ್ಡ ತಯಾರಕ ಎನಿಸಿಕೊಂಡಿದೆ.[] ನಿಕಾನ್‌‌ನ ಹಿಡುವಳಿಯಲ್ಲಿರುವ ಕಂಪನಿಗಳಿಂದ ನಿಕಾನ್‌‌ ಗ್ರೂಪ್‌ ರೂಪುಗೊಂಡಿದೆ.[] ಇದರ ಉತ್ಪನ್ನ ಶ್ರೇಣಿಯಲ್ಲಿ ನಿಕಾರ್‌‌ ಚಿತ್ರಿಸುವಿಕೆಯ ಮಸೂರಗಳು (F-ಮೌಂಟ್‌ ಕ್ಯಾಮರಗಳು, ದೊಡ್ಡ ಗಾತ್ರದ ಛಾಯಾಗ್ರಹಣ, ಛಾಯಾಚಿತ್ರದ ವರ್ಧಕಗಳು, ಮತ್ತು ಇತರ ಅನ್ವಯಿಕೆಗಳಿಗೆ ಮೀಸಲಾಗಿರುವಂಥದ್ದು), 135 ಫಿಲಂ SLR ಕ್ಯಾಮರಗಳ ನಿಕಾನ್‌‌ F-ಸರಣಿ, ಡಿಜಿಟಲ್‌ SLR ಕ್ಯಾಮರಗಳ ನಿಕಾನ್‌‌ D-ಸರಣಿ, ಅಡಕ ಶೈಲಿಯ ಡಿಜಿಟಲ್‌ ಕ್ಯಾಮರಗಳ ಕೂಲ್‌ಪಿಕ್ಸ್‌ ಸರಣಿ, ಮತ್ತು ನೀರೊಳಗಿನ ಚಿತ್ರೀಕರಣಕ್ಕೆ ಬಳಸುವ ಫಿಲ್ಮ್‌ ಕ್ಯಾಮರಗಳ ನಿಕಾನೊಸ್‌ ಸರಣಿ ಇವೆಲ್ಲವೂ ಸೇರಿವೆ. ಕ್ಯಾಮರ ಮತ್ತು ಮಸೂರದ ತಯಾರಿಕಾ ವಲಯದಲ್ಲಿನ ನಿಕಾನ್‌‌ ಸಂಸ್ಥೆಯ ಮುಖ್ಯ ಪ್ರತಿಸ್ಪರ್ಧಿಗಳಲ್ಲಿ ಕ್ಯಾನನ್‌, ಕ್ಯಾಸಿಯೋ, ಕೊಡ್ಯಾಕ್‌, ಸೋನಿ, ಪೆಂಟಾಕ್ಸ್‌, ಪ್ಯಾನಸೋನಿಕ್‌, ಫ್ಯೂಜಿಫಿಲ್ಮ್‌‌ ಮತ್ತು ಒಲಿಂಪಸ್‌ ಮೊದಲಾದವು ಸೇರಿವೆ.

ನಿಕಾನ್ ಕಾರ್ಪೊರೇಶನ್
株式会社ニコン
ಸಂಸ್ಥೆಯ ಪ್ರಕಾರಸಾರ್ವಜನಿಕ (ಟೆಂಪ್ಲೇಟು:Tyo)
ಸ್ಥಾಪನೆJapan ಟೋಕ್ಯೊ
(25 ಜುಲೈ 1917)
ಮುಖ್ಯ ಕಾರ್ಯಾಲಯJapan ಶಿಂಜೂಕು, ಟೋಕ್ಯೊ, ಜಪಾನ್
ಪ್ರಮುಖ ವ್ಯಕ್ತಿ(ಗಳು)
ಉದ್ಯಮಚಿತ್ರಣ
ಉತ್ಪನ್ನಅರೆವಾಹಕ ಉದ್ಯಮಕ್ಕಾಗಿ ನಿಷ್ಕೃಷ್ಟ ಉಪಕರಣಗಳು, ಅಂಕೀಯ ಚಿತ್ರಣ ಉಪಕರಣಗಳು ಮತ್ತು ಕ್ಯಾಮರಾಗಳು, ಸೂಕ್ಷ್ಮದರ್ಶಕಗಳು, ಕನ್ನಡಕ ಮಸೂರಗಳು, ದ್ಯುತೀಯ ಮಾಪನ ಮತ್ತು ತಪಾಸಣಾ ಉಪಕರಣಗಳು
ಆದಾಯDecrease ಟೆಂಪ್ಲೇಟು:Yen (ಹವ2010)[]
ಆದಾಯ(ಕರ/ತೆರಿಗೆಗೆ ಮುನ್ನ)Decrease ಟೆಂಪ್ಲೇಟು:Yen (FY2010)[]
ನಿವ್ವಳ ಆದಾಯDecrease ಟೆಂಪ್ಲೇಟು:Yen (FY2010)[]
ಉದ್ಯೋಗಿಗಳು26,125 (ಏಕೀಕೃತ, ಮಾರ್ಚ್ 31, 2010ರಂದು ಇರುವಂತೆ)[]
ಪೋಷಕ ಸಂಸ್ಥೆಮಿಟ್ಸುಬೀಶಿ ಗುಂಪು
ಜಾಲತಾಣನಿಕಾನ್ ಜಾಗತಿಕ ಮಹಾದ್ವಾರ
ಟೋಕಿಯೋದ ನಿಷಿಓಯಿಯಲ್ಲಿರುವ ನಿಕಾನ್‌ನ ಪಶ್ಚಿಮ ಕಟ್ಟಡ

ನಿಪಾನ್‌ ಕೋಗಕು ಕೋಗ್ಯೋ ಕಾಬುಷಿಕಿಗೈಶಾ (日本光学工業株式会社 "ಜಪಾನ್‌‌ ಆಪ್ಟಿಕಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌") ಎಂಬ ಹೆಸರಿನೊಂದಿಗೆ 1917ರ ಜುಲೈ 25ರಂದು ಸಂಸ್ಥಾಪಿಸಲ್ಪಟ್ಟ ಈ ಕಂಪನಿಯು, 1988ರಲ್ಲಿ ತನ್ನ ನಿಕಾನ್‌‌ ಕ್ಯಾಮರಗಳು ಬಿಡುಗಡೆಯಾದ ನಂತರ ತನ್ನ ಹೆಸರನ್ನು ನಿಕಾನ್‌‌ ಕಾರ್ಪೊರೇಷನ್ ಎಂಬುದಾಗಿ ಮರುನಾಮಕರಣ ಮಾಡಿಕೊಂಡಿತು. ನಿಕಾನ್‌‌ ಕಂಪನಿಯು ಮಿಟ್ಸುಬಿಷಿ ಗ್ರೂಪ್‌ನ ಕಂಪನಿಗಳಲ್ಲಿ ಒಂದಾಗಿದೆ.[]

ಇತಿಹಾಸ

ಬದಲಾಯಿಸಿ

ದೃಗ್ವೈಜ್ಞಾನಿಕ ಉಪಕರಣಗಳ ಮೂವರು ಅಗ್ರಗಣ್ಯ ತಯಾರಕರು ವಿಲೀನಗೊಂಡು 'ನಿಪಾನ್‌ ಕೋಗಕು ಟೋಕಿಯೋ K.K.' ಎಂದು ಕರೆಯಲ್ಪಟ್ಟ ಒಂದು ವ್ಯಾಪಕವಾದ, ಸಂಪೂರ್ಣವಾಗಿ ಏಕೀಕರಿಸಲ್ಪಟ್ಟ ದೃಗ್ವೈಜ್ಞಾನಿಕ ಉಪಕರಣಗಳ ಕಂಪನಿಯನ್ನು ರೂಪಿಸಿದಾಗ, 1917ರ ಜುಲೈ 25ರಂದು ನಿಕಾನ್‌‌ ಕಾರ್ಪೊರೇಷನ್‌ ಸ್ಥಾಪಿಸಲ್ಪಟ್ಟಿತು. ಮುಂದಿನ ಅರವತ್ತು ವರ್ಷಗಳಲ್ಲಿ ಬೆಳೆಯುತ್ತಲೇ ಹೋದ ಈ ಕಂಪನಿಯು, ದೃಗ್ವೈಜ್ಞಾನಿಕ ಮಸೂರಗಳು (ಮೊದಲ ಕ್ಯಾನನ್‌ ಕ್ಯಾಮರಗಳಿಗಾಗಿ ಮೀಸಲಾದವುಗಳನ್ನೂ ಒಳಗೊಂಡಂತೆ) ಮತ್ತು ಕ್ಯಾಮರಗಳು, ದುರ್ಬೀನುಗಳು, ಸೂಕ್ಷ್ಮದರ್ಶಕಗಳು ಮತ್ತು ಪರಿಶೀಲನಾ ಉಪಕರಣದಲ್ಲಿ ಬಳಸಲಾಗುವ ಸಾಧನಗಳ ಓರ್ವ ತಯಾರಕ ಎನಿಸಿಕೊಂಡಿತು. IIನೇ ಜಾಗತಿಕ ಸಮರದ ಅವಧಿಯಲ್ಲಿ ಹತ್ತೊಂಬತ್ತು ಕಾರ್ಖಾನೆಗಳವರೆಗೆ ಈ ಕಂಪನಿಯು ಬೆಳೆಯಿತು ಮತ್ತು ನೌಕರರ ಸಂಖ್ಯೆಯು 23,000ಕ್ಕೆ ಏರಿತು; ಜಪಾನೀ ಸೇನೆಗೆ ದುರ್ಬೀನುಗಳು, ಮಸೂರಗಳು, ಬಾಂಬ್‌-ಗುರಿಯ ಸಾಧನಗಳು, ಮತ್ತು ಪರಿದರ್ಶಕಗಳಂಥ ವಸ್ತುಗಳನ್ನು ಸರಬರಾಜು ಮಾಡುವ ಹೊಣೆಗಾರಿಕೆಯನ್ನು ಈ ಅವಧಿಯಲ್ಲಿ ಕಂಪನಿಯು ಹೊತ್ತುಕೊಂಡಿತ್ತು.

ಜಪಾನ್‌‌ ಹೊರಗೆ ಸಿಕ್ಕ ಮಾನ್ಯತೆ

ಬದಲಾಯಿಸಿ

ಯುದ್ಧದ ನಂತರ ನಿಪಾನ್‌ ಕೋಗಕು ಕಂಪನಿಯು ಏಕೈಕ ಕಾರ್ಖಾನೆಯೊಂದರಲ್ಲಿ ತನ್ನ ನಾಗರಿಕ ಉತ್ಪನ್ನ ಶ್ರೇಣಿಯನ್ನು ನಿರ್ಮಿಸುವ ಪರಿಪಾಠಕ್ಕೆ ಹಿಂದಿರುಗಿತು. 1948ರಲ್ಲಿ, ನಿಕಾನ್‌‌ I ಎಂಬ ಹೆಸರಿನ, ನಿಕಾನ್‌‌-ವ್ಯಾಪಾರಮುದ್ರೆಯ ಗುರುತು ಹಾಕಲ್ಪಟ್ಟ ಮೊದಲ ಕ್ಯಾಮರ ಬಿಡುಗಡೆಯಾಯಿತು.[] ಅಮೆರಿಕಾದ ಡೇವಿಡ್‌ ಡೌಗ್ಲಸ್‌ ಡಂಕನ್‌ ಎಂಬ ಹೆಸರಿನ ಛಾಯಾಗ್ರಾಹಿ-ಪತ್ರಕರ್ತನು ಕೊರಿಯಾದ ಯುದ್ಧದ ಸಮಯದಲ್ಲಿ ನಿಕಾನ್‌‌ ಮಸೂರಗಳನ್ನು ಬಳಕೆಮಾಡುವ ಮೂಲಕ ಅವನ್ನು ಜನಪ್ರಿಯಗೊಳಿಸಿದ. ಕೊರಿಯಾದ ಯುದ್ಧವು ಪ್ರಾರಂಭವಾದಾಗ ಟೋಕಿಯೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಂಕನ್‌, ಜುನ್‌ ಮಿಕಿ ಎಂಬ ಓರ್ವ ಜಪಾನೀ ಯುವ ಛಾಯಾಗ್ರಾಹಕನನ್ನು ಭೇಟಿಯಾದ ಮತ್ತು ಈತನಿಂದ ಡಂಕನ್‌ಗೆ ನಿಕಾನ್‌‌ ಮಸೂರಗಳು ಪರಿಚಯಿಸಲ್ಪಟ್ಟವು. 1950ರ ಜುಲೈನಿಂದ 1951ರ ಜನವರಿಯವರೆಗೆ ಕೊರಿಯಾದ ಯುದ್ಧದ ಕುರಿತು ಡಂಕನ್‌ ವರದಿ ಮಾಡಿದ.[] ತಾನು ಹೊಂದಿದ್ದ ಲೈಕಾ ಕಂಪನಿಯ ಗುರಿದೂರಮಾಪಕ ಕ್ಯಾಮರಗಳಿಗೆ ಅವನು ನಿಕಾನ್‌‌ ಮಸೂರಗಳನ್ನು ಅಳವಡಿಸಿದ್ದರಿಂದಾಗಿ ಉನ್ನತ ಛಾಯಾವ್ಯತ್ಯಾಸದ ನೆಗಟಿವ್‌ಗಳು ರೂಪುಗೊಂಡವು ಹಾಗೂ ಮಧ್ಯದ ದೃಷ್ಟಿಕ್ಷೇತ್ರದಲ್ಲಿ ಇವು ಅತ್ಯಂತ ಸ್ಫುಟವಾದ ಪೃಥಕ್ಕರಣವನ್ನು (ರೆಸಲ್ಯೂಷನ್‌) ಹೊಂದಿದ್ದವು.[]

ಹೆಸರುಗಳು ಮತ್ತು ವ್ಯಾಪಾರದ ಮುದ್ರೆಗಳು

ಬದಲಾಯಿಸಿ
ಚಿತ್ರ:Nikko old logo.jpg
ನಿಕಾರ್‌‌ ಬ್ರಾಂಡ್‌ ವಿಕಸನಗೊಳ್ಳಲು ಕಾರಣವಾದ ನಿಕ್ಕೊ ಮಾತೃಕಂಪನಿಯ ಬ್ರಾಂಡ್‌

ನಿಪಾನ್‌ ಕೋಗಕು ಕೋಗ್ಯೋ ಕಾಬುಷಿಕಿಗೈಶಾ (日本光学工業株式会社 "ಜಪಾನ್‌‌ ಆಪ್ಟಿಕಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌") ಎಂಬ ಹೆಸರಿನೊಂದಿಗೆ 1917ರಲ್ಲಿ ಸಂಸ್ಥಾಪಿಸಲ್ಪಟ್ಟ ಈ ಕಂಪನಿಯು, 1988ರಲ್ಲಿ ತನ್ನ ನಿಕಾನ್‌‌ ಕ್ಯಾಮರಗಳು ಬಿಡುಗಡೆಯಾದ ನಂತರ ತನ್ನ ಹೆಸರನ್ನು ನಿಕಾನ್‌‌ ಕಾರ್ಪೊರೇಷನ್ ಎಂಬುದಾಗಿ ಮರುನಾಮಕರಣ ಮಾಡಿಕೊಂಡಿತು. 1946ರಷ್ಟು ಹಿಂದಕ್ಕೆ ಕರೆದೊಯ್ಯುವ ನಿಕಾನ್‌‌ ಎಂಬ ಹೆಸರು ನಿಪಾನ್‌ ಕೋಗಕು (日本光学: "ಜಪಾನ್‌‌ ಆಪ್ಟಿಕಲ್‌") ಕಂಪನಿಯ ಒಂದು ವಿಲೀನಗೊಳಿಸುವಿಕೆಯಾಗಿದೆ ಮತ್ತು ಝೇಯಿಸ್‌‌ನ ಬ್ರಾಂಡ್‌ ಆಗಿರುವ ಐಕಾನ್‌‌‌ ನ ಒಂದು ಅನುಕರಣೆಯಾಗಿದೆ. ಆದರೂ, ಸರಕುಮುದ್ರೆಯನ್ನು ಹೊತ್ತಿರುವ "ಐಕಾನ್‌" ಎಂಬ ಹೆಸರಿನ ತನ್ನ ಕ್ಯಾಮರವನ್ನು ನಿಕಾನ್‌‌ ಉಲ್ಲಂಘಿಸಿದೆ ಎಂಬುದಾಗಿ ಝೇಯಿಸ್‌ ಕಂಪನಿಯು ದೂರುನೀಡಿದ್ದರಿಂದಾಗಿ ಜರ್ಮನಿಯಲ್ಲಿ ನಿಕಾನ್‌ ಒಂದಷ್ಟು ಆರಂಭಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು; ಇದರಿಂದಾಗಿ 1963ರಿಂದ 1968ರವರೆಗೆ ನಿರ್ದಿಷ್ಟವಾಗಿ ನಿಕಾನ್‌‌ F ಶ್ರೇಣಿಯ ಕ್ಯಾಮರಾಗಳು 'ನಿಕಾರ್‌‌' ಎಂಬ ಹಣೆಪಟ್ಟಿ ಲಗತ್ತಿಸಿಕೊಂಡು ಮಾರುಕಟ್ಟೆಗೆ ಬಂದವು.[]

1932ರಲ್ಲಿ ನಿಕಾರ್‌‌ ಬ್ರಾಂಡ್‌ ಪರಿಚಯಿಸಲ್ಪಟ್ಟಿತು; ಇದು ನಿಕ್ಕೋ (日光) ಎಂಬ ಮುಂಚಿನ ಆವೃತ್ತಿಯೊಂದರ ಒಂದು ಪಾಶ್ಚಾತ್ಯೀಕರಿಸಲ್ಪಟ್ಟ ಸಲ್ಲಿಕೆಯಾಗಿತ್ತು ಮತ್ತು ಕಂಪನಿಯ ಮೂಲ ಸಂಪೂರ್ಣ ಹೆಸರಿನ[] ಒಂದು ಸಂಕ್ಷಿಪ್ತರೂಪವಾಗಿತ್ತು (ಕಾಕತಾಳೀಯವೆಂಬಂತೆ ನಿಕ್ಕೋ ಎಂಬುದು "ಸೂರ್ಯನ ಬೆಳಕು" ಎಂಬ ಅರ್ಥವನ್ನು ಕೊಡುತ್ತದೆ ಮತ್ತು ನಿಕ್ಕೋ ಎಂಬುದು ಜಪಾನೀ ಪಟ್ಟಣವೊಂದರ ಹೆಸರಾಗಿದೆ).

ಜಯ್ಕೊ [೧೦] ಎಂಬುದು ಸೂಕ್ಷ್ಮದರ್ಶಕಗಳಲ್ಲಿ ಬಳಸಲಾದ ಒಂದು ಆರಂಭಿಕ ಬ್ರಾಂಡ್‌ ಆಗಿತ್ತು ಹಾಗೂ ಇದು "ಜಪಾನ್‌‌ ಆಪ್ಟಿಕಲ್‌ ಇಂಡಸ್ಟ್ರೀಸ್‌ ಕೊ"[ಸೂಕ್ತ ಉಲ್ಲೇಖನ ಬೇಕು] ಎಂಬುದರ ಒಂದು ಸಂಕ್ಷಿಪ್ತರೂಪವಾಗಿತ್ತು.

ನಿಕಾನ್‌‌ ನ್ನು ವಿಶ್ವದಾದ್ಯಂತ ವಿಭಿನ್ನವಾಗಿ ಉಚ್ಚರಿಸಲಾಗುತ್ತದೆ. [nikoɴ] ಎಂಬುದು ಜಪಾನೀ ಉಚ್ಚಾರಣೆಯಾಗಿದೆ; /ˈnɪkɒn/ ಎಂಬುದು ಬ್ರಿಟಿಷ್‌ ಉಚ್ಚಾರಣೆಯಾಗಿದೆ; /ˈnaɪkɒn/ ಎಂಬುದು ಉತ್ತರ ಅಮೆರಿಕಾದ ಉಚ್ಚಾರಣೆಯಾಗಿದೆ.

ನಿಕಾನ್‌‌ F ಸರಣಿಯ ಉಗಮ

ಬದಲಾಯಿಸಿ

ನಿಕಾನ್‌‌ SP ಕ್ಯಾಮರ ಮತ್ತು 1950ರ ದಶಕ ಹಾಗೂ 1960ರ ದಶಕದ ಇತರ ಗುರಿದೂರಮಾಪಕ ಕ್ಯಾಮರಗಳು, ಲೈಕಾ ಮತ್ತು ಝೇಯಿಸ್‌ ಕಂಪನಿಯಿಂದ ಉತ್ಪಾದನೆಯಾದ ಮಾದರಿಗಳೊಂದಿಗೆ ನೇರವಾಗಿ ಸ್ಪರ್ಧಿಸಿದವು. ಆದಾಗ್ಯೂ, ನಿಕಾನ್‌‌ F ಏಕ-ಮಸೂರದ ಪರಾವರ್ತಕ (ರಿಫ್ಲೆಕ್ಸ್‌) ಕ್ಯಾಮರಗಳ ಶ್ರೇಣಿಯ ಮೇಲೆ ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸುವ ಸಲುವಾಗಿ, ತನ್ನ ಗುರಿದೂರಮಾಪಕ ಕ್ಯಾಮರ ಶ್ರೇಣಿಯ ಅಭಿವೃದ್ಧಿ ಕಾರ್ಯವನ್ನು ಕಂಪನಿಯು ಕ್ಷಿಪ್ರವಾಗಿ ನಿಲ್ಲಿಸಿತು ಹಾಗೂ ನಿಕಾನ್‌‌ F ಏಕ-ಮಸೂರದ ಪರಾವರ್ತಕ ಕ್ಯಾಮರಗಳು 1959ರಲ್ಲಿ ಪರಿಚಯಿಸಲ್ಪಟ್ಟು ಯಶಸ್ವಿಯಾದವು[ಸೂಕ್ತ ಉಲ್ಲೇಖನ ಬೇಕು]. ಸರಿಸುಮಾರಾಗಿ 30 ವರ್ಷಗಳವರೆಗೆ, ನಿಕಾನ್‌‌ನ F-ಸರಣಿ SLR ಕ್ಯಾಮರಗಳು ವೃತ್ತಿಪರ ಛಾಯಾಗ್ರಾಹಕರಿಂದ[ಸೂಕ್ತ ಉಲ್ಲೇಖನ ಬೇಕು] ಮಾತ್ರವೇ ಅಲ್ಲದೇ, U.S. ಬಾಹ್ಯಾಕಾಶ ಕಾರ್ಯಕ್ರಮದ ವತಿಯಿಂದಲೂ ಅತ್ಯಂತ ವ್ಯಾಪಕವಾಗಿ ಬಳಸಲ್ಪಟ್ಟ ಸಣ್ಣ-ಗಾತ್ರದ ಕ್ಯಾಮರಗಳು ಎನಿಸಿಕೊಂಡವು.

ವೃತ್ತಿಪರ SLR ಛಾಯಾಗ್ರಹಣದಲ್ಲಿನ[ಸೂಕ್ತ ಉಲ್ಲೇಖನ ಬೇಕು] ಅನೇಕ ವಿಶಿಷ್ಟ ಲಕ್ಷಣಗಳನ್ನು ನಿಕಾನ್‌‌ ಜನಪ್ರಿಯಗೊಳಿಸಿತು: ಅದಲು-ಬದಲು ಮಾಡಬಹುದಾದ ಮಸೂರಗಳನ್ನು ಹೊಂದಿರುವ ಮಾಡ್ಯೂಲ್‌ಗಳನ್ನುಳ್ಳ ಕ್ಯಾಮರ ವ್ಯವಸ್ಥೆ, ಮೋಟಾರು ಚಾಲನೆಗಳು, ಮತ್ತು ದತ್ತಾಂಶ ಮೀಸಲುಗಳು; ಏಕೀಕರಿಸಲ್ಪಟ್ಟ ಬೆಳಕಿನ ಮಾಪನ ಮತ್ತು ಮಸೂರದ ಸೂಚಿಸುವಿಕೆ; ಪುನಃ ಬಳಸಲಾಗದ ಫ್ಲಾಷ್‌ಬಲ್ಬುಗಳಿಗೆ ಬದಲಾಗಿ ವಿದ್ಯುನ್ಮಾನ ಭ್ರಮಣದರ್ಶಕ ಫ್ಲಾಷ್‌ಗನ್ನುಗಳು; ವಿದ್ಯುನ್ಮಾನ ಮುಚ್ಚಳ ನಿಯಂತ್ರಣ; ಮೌಲ್ಯಮಾಪಕ ಬಹು-ವಲಯದ "ಮ್ಯಾಟ್ರಿಕ್ಸ್‌" ಮಾಪನ; ಮತ್ತು ಅಂತರ್ನಿರ್ಮಿತ ಮೋಟಾರು ಚಾಲಿತ ಫಿಲಂ ಮುಂಬರಿಕೆ ಇವೇ ಮೊದಲಾದವು ಸದರಿ ವಿಶಿಷ್ಟ ಲಕ್ಷಣಗಳಲ್ಲಿ ಸೇರಿದ್ದವು. ಆದಾಗ್ಯೂ, ಸ್ವಯಂ-ನಾಭೀಕರಿಸುವ ಲಕ್ಷಣವೊಂದನ್ನು ಹೊಂದಿದ್ದ SLR ಕ್ಯಾಮರಗಳು 1980ರ ದಶಕದ ಮಧ್ಯಭಾಗದಲ್ಲಿ ಮಿನೋಲ್ಟಾ ಮತ್ತು ಇತರ ಕಂಪನಿಗಳಿಂದ ಲಭ್ಯವಾಗತೊಡಗಿದವು. ಹೀಗಾಗಿ ನಿಕಾನ್ ಕಂಪನಿಯ ತಯಾರಿಕೆಯಾದ ಕೈಯಿಂದ-ನಾಭೀಕರಿಸುವ ಕ್ಯಾಮರಗಳ ಶ್ರೇಣಿಯು ಹಳೆಯದಾಗಿ[ಸೂಕ್ತ ಉಲ್ಲೇಖನ ಬೇಕು] ಕಾಣಿಸಿಕೊಳ್ಳಲು ಪ್ರಾರಂಭಿಸಿತು.

ಸ್ವಯಂ-ನಾಭೀಕರಿಸುವ ಮೊದಲ ಮಾದರಿಗಳ ಪೈಕಿ ಒಂದಾದ, ನಿಧಾನಗತಿಯ ಮತ್ತು ದೊಡ್ಡ ಗಾತ್ರದ F3AF ಕ್ಯಾಮರವನ್ನು ಪರಿಚಯಿಸಿದ ಹೊರತಾಗಿಯೂ, ತನ್ನ F-ಮೌಂಟ್‌ ಜೊತೆಗಿನ ಮಸೂರದ ಹೊಂದಾಣಿಕೆಯನ್ನು ಕಾಯ್ದುಕೊಂಡು ಹೋಗುವುದಕ್ಕೆ ಕಂಪನಿಯು ದೃಢನಿಶ್ಚಯ ಮಾಡಿದ್ದರಿಂದಾಗಿ, ಸ್ವಯಂ-ನಾಭೀಕರಿಸುವ ತಂತ್ರಜ್ಞಾನದಲ್ಲಿನ ಕ್ಷಿಪ್ರ ಪ್ರಗತಿಗಳಿಗೆ ತಡೆಒಡ್ಡಿದಂತಾಯಿತು. ಸಂಪೂರ್ಣವಾಗಿ ವಿದ್ಯುನ್ಮಾನ ಸ್ವರೂಪದ ಕ್ಯಾನನ್‌ EOS ಕ್ಯಾಮರಗಳು ಮತ್ತು ಕ್ಯಾನನ್‌ EF ಮಸೂರದ ಆಧಾರದೊಂದಿಗೆ, ಮಸೂರ-ಕ್ಯಾಮರದ ಇಂಟರ್‌ಫೇಸ್‌ನ ಒಂದು ಹೊಸ ಬಗೆಯನ್ನು 1987ರಲ್ಲಿ ಕ್ಯಾನನ್‌ ಪರಿಚಯಿಸಿತು. ಕ್ಯಾನನ್‌ನ ವಿದ್ಯುನ್ಮಾನ ಶೈಲಿಯ ನಾಭೀಕರಿಸುವಿಕೆ ಮತ್ತು ಬೆಳಕುಕಿಂಡಿಯ ನಿಯಂತ್ರಣದ ದೆಸೆಯಿಂದ ಮಸೂರದ ಹೆಚ್ಚಿನ ವೇಗದ ಕಾರ್ಯಕ್ಷಮತೆಯು ಹೊರಹೊಮ್ಮಿದ್ದರಿಂದಾಗಿ, ಅನೇಕ ವೃತ್ತಿಪರ ಛಾಯಾಗ್ರಾಹಕರು (ವಿಶೇಷವಾಗಿ ಕ್ರೀಡಾವಿಭಾಗ ಮತ್ತು ಸುದ್ದಿವಿಭಾಗಗಳಲ್ಲಿ ಇರುವವರು) 1990ರ ದಶಕದ ಉದ್ದಕ್ಕೂ ಕ್ಯಾನನ್‌ ವ್ಯವಸ್ಥೆಗೆ ತಮ್ಮ ಒಲವನ್ನು ಬದಲಾಯಿಸುವಂತಾಯಿತು.[೧೧]

ನಿಷ್ಕೃಷ್ಟ ಉಪಕರಣಗಳ ತಯಾರಿಕೆ

ಬದಲಾಯಿಸಿ

ಕ್ಯಾಮರಗಳ ಜೊತೆಗೆ, ಛಾಯಾಶಿಲಾಮುದ್ರಣದ ಉಪಕರಣಗಳನ್ನೂ ಸಹ ನಿಕಾನ್‌‌ ಕಾರ್ಪೊರೇಷನ್‌ (ನಿಕಾನ್‌‌) ಅಭಿವೃದ್ಧಿಪಡಿಸುತ್ತದೆ ಮತ್ತು ತಯಾರಿಸುತ್ತದೆ. 1980ರಲ್ಲಿ, NSR-1010G ಎಂಬ ಹೆಸರಿನ ಮೊದಲ ನಿಕಾನ್‌‌ ಸ್ಟೆಪರ್ ಜಪಾನ್‌ನಲ್ಲಿ ತಯಾರಿಸಲ್ಪಟ್ಟಿತು. ಅಲ್ಲಿಂದೀಚೆಗೆ, ಅರೆವಾಹಕಗಳು ಮತ್ತು ದ್ರವಸ್ಫಟಿಕ ಉದ್ದರ್ಶನಗಳ ಉತ್ಪಾದನೆಗೆ ಸಂಬಂಧಿಸಿದ ಸ್ಟೆಪರ್‌ಗಳು ಮತ್ತು ಸ್ಕ್ಯಾನರ್‌ಗಳ ಐವತ್ತಕ್ಕೂ ಹೆಚ್ಚಿನ ಮಾದರಿಗಳನ್ನು ನಿಕಾನ್‌‌ ಕಂಪನಿಯು (ನಿಕಾನ್‌‌ ಇನ್‌ಸ್ಟ್ರುಮೆಂಟ್ಸ್‌ ವಿಭಾಗದ ಮೂಲಕ) ಪರಿಚಯಿಸಿದೆ. ಅರೆವಾಹಕ ಮತ್ತು ದ್ರವಸ್ಫಟಿಕ ಉದ್ದರ್ಶನದ (ಲಿಕ್ವಿಡ್‌ ಕ್ರಿಸ್ಟಲ್‌ ಡಿಸ್‌ಪ್ಲೇ-LCD) ನಿರ್ಮಾಣ, ಪರಿಶೀಲನೆ, ಮತ್ತು ಅಳತೆಗಳಲ್ಲಿನ ಬಳಕೆಗೆ ಸಂಬಂಧಿಸಿದ ನಿಷ್ಕೃಷ್ಟ ಉಪಕರಣಗಳನ್ನು ನಿಕಾನ್‌‌ ಕಂಪನಿಯು ಪ್ರಸಕ್ತವಾಗಿ ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ. ಕ್ಯಾಮರಗಳನ್ನು ಒಳಗೊಂಡಂತೆ ದೃಶ್ಯವನ್ನು ಪ್ರತಿಮೀಕರಿಸುವ ಉತ್ಪನ್ನಗಳನ್ನೂ ಸಹ ನಿಕಾನ್‌‌ ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ. ಸೂಕ್ಷ್ಮದರ್ಶಕಗಳಂಥ ಉಪಕರಣಗಳು, ರಾಸಾಯನಿಕ ಯಾಂತ್ರಿಕ ಮೆರುಗು ಕೊಡುವ (ಕೆಮಿಕಲ್‌ ಮೆಕ್ಯಾನಿಕಲ್‌ ಪಾಲಿಷಿಂಗ್‌-CMP) ವ್ಯವಸ್ಥೆಗಳು, ದುರ್ಬೀನುಗಳು, ಸಮೀಕ್ಷೆ ನಡೆಸುವ ಉಪಕರಣಗಳು, ಕಣ್ಣಿನ ಧಾರಣ-ಸಾಧನಗಳು, ಕ್ರೀಡಾ ದೃಶ್ಯೋಪಕರಣಗಳು, ಹಾಗೂ ಅಳೆಯುವ ಮತ್ತು ಪರಿಶೀಲನೆ ನಡೆಸುವ ದೃಗ್ವೈಜ್ಞಾನಿಕ ಉಪಕರಣಗಳು ಇವೇ ಮೊದಲಾದ ಇತರ ಉತ್ಪನ್ನಗಳು ಈ ಪಟ್ಟಿಯಲ್ಲಿ ಸೇರಿವೆ.

1982ರಲ್ಲಿ, ನಿಕಾನ್‌‌ ಪ್ರಿಸಿಷನ್‌ ಇಂಕ್‌. (NPI) ಕಂಪನಿಯು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸ್ಥಾಪಿಸಲ್ಪಟ್ಟಿತು. NPI ಎಂಬುದು ಉತ್ತರ ಅಮೆರಿಕಾದ ಮಾರಾಟ ಮತ್ತು ಸೇವಾ ಅಂಗವಾಗಿದೆ; ನಿರ್ದಿಷ್ಟವಾಗಿ ಹೇಳುವುದಾದರೆ ಇದು ನಿಕಾನ್‌‌ ಕಾರ್ಪೊರೇಷನ್‌ನ ಅರೆವಾಹಕ ಛಾಯಾಶಿಲಾಮುದ್ರಣ ಉಪಕರಣಕ್ಕೆ ಸಂಬಂಧಿಸಿದ ವಿಭಾಗವಾಗಿದೆ ಮತ್ತು ಕ್ಯಾಲಿಫೋರ್ನಿಯಾದ ಬೆಲ್‌ಮಾಂಟ್‌ ಎಂಬಲ್ಲಿ ತನ್ನ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಗ್ರಾಹಕ ನೆಲೆಯಿಂದ ಪ್ರೇರೇಪಿಸಲ್ಪಟ್ಟ ಕಂಪನಿಯು ಕ್ಷಿಪ್ರವಾಗಿ ವಿಸ್ತರಣೆಯನ್ನು ಕಂಡಿತು. 1990ರಲ್ಲಿ, ತನ್ನ ಈಗಿನ ಕೇಂದ್ರ ಕಾರ್ಯಾಲಯವನ್ನು NPI ತೆರೆಯಿತು. ಈಗ ಈ ಸೌಕರ್ಯವು ಸಾಂಸ್ಥಿಕ ಕಚೇರಿಗಳು, ಸಂಪೂರ್ಣವಾಗಿ ಸಜ್ಜುಗೊಂಡಿರುವ ಒಂದು ವಿಶ್ವವ್ಯಾಪಕ ತರಬೇತಿ ಕೇಂದ್ರ (ವರ್ಲ್ಡ್‌ವೈಡ್‌ ಟ್ರೈನಿಂಗ್‌ ಸೆಂಟರ್‌-WWTC), ಸೇವಾ ಕಾರ್ಯಾಚರಣೆಗಳು, ಅನ್ವಯಿಕೆಗಳ ಎಂಜಿನಿಯರಿಂಗ್‌, ತಂತ್ರಜ್ಞಾನದ ಎಂಜಿನಿಯರಿಂಗ್‌, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಎಂಜಿನಿಯರಿಂಗ್‌ ವಿಭಾಗಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಅರೆವಾಹಕ ಸ್ಫಟಿಕ, ಛಾಯಾಮುಸುಕು, ಮಟ್ಟಸವಾದ ಪಟ್ಟಿಯ ಪ್ರದರ್ಶಿಕೆ, ಮತ್ತು ತೆಳುವಾದ-ಫಿಲಂನ ಕಾಂತೀಯ ಬಿಲ್ಲೆ ಇವೇ ಮೊದಲಾದ ವಲಯಗಳ ಉದ್ಯಮಗಳಿಗೆ ಸೇವೆ ಸಲ್ಲಿಸುವ ನಿಕಾನ್‌‌ ಉಪಕರಣಗಳಿಗೆ ಸಂಬಂಧಿಸಿದಂತಿರುವ ತರಬೇತಿ, ತಾಂತ್ರಿಕ ಬೆಂಬಲ, ಮಾರಾಟ, ಮತ್ತು ಮಾರಾಟಗಾರಿಕೆಯ ವಿಭಾಗಗಳನ್ನೂ ಇದು ಒಳಗೊಂಡಿದೆ. ಇಂದು, ಅರೆವಾಹಕದ ತಯಾರಿಕೆಯ ನಿರ್ಣಾಯಕ ಹಂತಗಳಲ್ಲಿ ಬಳಸಲ್ಪಡುವ ಮುಂದುವರಿದ ಛಾಯಾಶಿಲಾಮುದ್ರಣ ಉಪಕರಣವನ್ನು ಸರಬರಾಜು ಮಾಡುವಲ್ಲಿ ಮತ್ತು ಬೆಂಬಲ ನೀಡುವಲ್ಲಿ NPI ಕಂಪನಿಯು ಒಂದು ಉದ್ಯಮ-ಅಗ್ರೇಸರನಾಗಿದೆ. ನಿಕಾನ್‌‌ ರಿಸರ್ಚ್‌ ಕಾರ್ಪೊರೇಷನ್‌ ಆಫ್‌ ಅಮೆರಿಕಾ (NRCA) ಎಂಬ ಛಾವಣಿಯ ಅಡಿಯಲ್ಲಿ ನಿಕಾನ್‌‌ ಕಂಪನಿಯು U.S.ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಚರಣೆಗಳನ್ನೂ ಸಹ ಹೊಂದಿದ್ದು, ಇದು ಜಪಾನ್‌ನ ಕಾಗೊಹರಾದಲ್ಲಿನ ನಿಷ್ಕೃಷ್ಟ ಉಪಕರಣಗಳ ವಿಭಾಗದ R&D ಪ್ರಯತ್ನಗಳನ್ನು ನೇರವಾಗಿ ಬೆಂಬಲಿಸುತ್ತದೆ.

ಸಾಂಸ್ಕೃತಿಕ ಚಟುವಟಿಕೆಗಳು

ಬದಲಾಯಿಸಿ
ಚಿತ್ರ:Nikon-tokyo-large.jpg
ನಿಕಾನ್‌‌ ಸಲೂನ್‌ನ ಒಳಭಾಗ

ಜಪಾನ್‌ನಲ್ಲಿ ನಿಕಾನ್‌ ಕಂಪನಿಯು ನಿಕಾನ್‌ ಸಲೂನ್‌ ವಸ್ತುಪ್ರದರ್ಶಗಳನ್ನು ಆಯೋಜಿಸುತ್ತದೆ, ಹವ್ಯಾಸಿ ಛಾಯಾಗ್ರಾಹಕರಿಗಾಗಿ (ಇವರಿಗೆ ಕಂಪನಿಯು ನಿಕಾನ್‌ ಸಲೂನ್‌ ಪುಸ್ತಕಗಳ ಸರಣಿಯನ್ನು ವಿತರಿಸುತ್ತದೆ) ನಿಕಾರ್‌ ಕ್ಲಬ್‌ನ್ನು ನಡೆಸುತ್ತದೆ, ಮತ್ತು ಇನಾ ನೊಬುವೊ ಪ್ರಶಸ್ತಿ, ಮಿಕಿ ಜುನ್‌ ಪ್ರಶಸ್ತಿ ಮತ್ತು ಮಿಕಿ ಜುನ್‌ ಇನ್ಸ್‌ಪಿರೇಷನ್‌ ಪ್ರಶಸ್ತಿಗಳನ್ನು ವ್ಯವಸ್ಥೆಗೊಳಿಸುತ್ತದೆ.

ಡಿಜಿಟಲ್‌ ಛಾಯಾಗ್ರಹಣ

ಬದಲಾಯಿಸಿ

1991ರಲ್ಲಿ NASAಗಾಗಿ ಸಲ್ಲಿಸಲ್ಪಟ್ಟ ಸಂಶೋಧನೆ ಯೋಜನೆಗಳಾಗಿ ಮೊದಲ ಡಿಜಿಟಲ್‌ SLR ಕ್ಯಾಮರಗಳ (DSLRಗಳ) ಪೈಕಿ ಕೆಲವನ್ನು ನಿಕಾನ್‌‌ ಸೃಷ್ಟಿಸಿತು.[೧೨] ಅಸ್ತಿತ್ವದಲ್ಲಿರುವ ನಿಕಾನ್‌‌ ಫಿಲಂ ಕ್ಯಾಮರಗಳ ಶರೀರಭಾಗವನ್ನು ಆಧರಿಸಿದ ಡಿಜಿಟಲ್‌ SLR ಕ್ಯಾಮರಗಳನ್ನು ತಯಾರಿಸಲು 1990ರ ದಶಕದಲ್ಲಿ ಕೊಡ್ಯಾಕ್‌ ಜೊತೆಗೆ ಮಾಡಿಕೊಂಡ ಸಹಭಾಗಿತ್ವದ ನಂತರ, 1999ರಲ್ಲಿ ತನ್ನದೇ ಹೆಸರಿನ ಅಡಿಯಲ್ಲಿ ನಿಕಾನ್‌‌ D1 SLR ಕ್ಯಾಮರವನ್ನು ನಿಕಾನ್‌‌ ಬಿಡುಗಡೆಮಾಡಿತು. ಒಂದು 35 ಮಿ.ಮೀ. ಫಿಲಂ ಚೌಕಟ್ಟಿನ ಗಾತ್ರದ ಕೇವಲ 2/3ನಷ್ಟಿದ್ದ APS-C-ಗಾತ್ರದ ಬೆಳಕಿನ ಸಂವೇದಕವೊಂದನ್ನು ಇದು ಬಳಸಿಕೊಂಡಿತಾದರೂ (ನಂತರದಲ್ಲಿ ಇದನ್ನು ಒಂದು "DX ಸಂವೇದಕ" ಎಂದು ಕರೆಯಲಾಯಿತು), ಸಾಕಷ್ಟಿರುವ ಬಿಂಬದ ಗುಣಮಟ್ಟವನ್ನು ಹೊಂದಿರುವ ಮತ್ತು ಒಂದು ಫಿಲಂ SLR ಕ್ಯಾಮರಕ್ಕೆ ಬದಲಿಯಾಗಿ ಬಳಸಲು ಕೆಲವೊಂದು ವೃತ್ತಿಪರರು (ನಿರ್ದಿಷ್ಟವಾಗಿ ಹೇಳುವುದಾದರೆ, ಛಾಯಾಗ್ರಾಹಿ-ಪತ್ರಕರ್ತರು ಮತ್ತು ಕ್ರೀಡಾ ಛಾಯಾಗ್ರಾಹಕರು) ಒಲವು ತೋರಿಸುವುದಕ್ಕೆ ಕಾರಣವಾದ ಒಂದು ಕಡಿಮೆ ಬೆಲೆಯನ್ನು ಹೊಂದಿರುವ ಮೊದಲ ಡಿಜಿಟಲ್‌ ಕ್ಯಾಮರಗಳ ಪೈಕಿ D1 ಕ್ಯಾಮರ ಸೇರಿಕೊಂಡಿತ್ತು. ಕಂಪನಿಯು ಒಂದು ಕೂಲ್‌ಪಿಕ್ಸ್‌ ಶ್ರೇಣಿಯನ್ನೂ ಸಹ ಹೊಂದಿದ್ದು, 2000ರ ದಶಕದ ಆರಂಭಿಕ ಅವಧಿಯುದ್ದಕ್ಕೂ ಬಳಕೆದಾರರ ಡಿಜಿಟಲ್‌ ಛಾಯಾಗ್ರಹಣದ ಆಸಕ್ತಿ ಹೆಚ್ಚುಹೆಚ್ಚು ಚಾಲ್ತಿಯಲ್ಲಿದ್ದ ಕಾರಣದಿಂದ ಈ ಶ್ರೇಣಿಯೂ ಬೆಳೆಯಿತು.

2000ರ ದಶಕದ ಮಧ್ಯಭಾಗದ ಉದ್ದಕ್ಕೂ, ನಿಕಾನ್ ಕಂಪನಿಯ ವೃತ್ತಿಪರ ಮತ್ತು ಉತ್ಸಾಹಶಾಲಿ DSLR ಕ್ಯಾಮರಾಗಳ ಶ್ರೇಣಿ ಹಾಗೂ ಹಿಂದಕ್ಕೆ ಹೊಂದಿಕೊಳ್ಳುವ AF-S ಮಸೂರ ಶ್ರೇಣಿಯನ್ನು ಒಳಗೊಂಡಿರುವ ಮಸೂರಗಳು, SLR ಕ್ಯಾಮರಗಳ ಮಾರಾಟದಲ್ಲಿ ಕ್ಯಾನನ್‌ ನಂತರದ ಎರಡನೇ ಸ್ಥಾನದಲ್ಲಿ ಉಳಿದುಕೊಂಡವು. ಅಷ್ಟೇ ಅಲ್ಲ, ಸಾಂಪ್ರದಾಯಿಕವಾದ 35 ಮಿ.ಮೀ. ಫಿಲಂ ಚೌಕಟ್ಟುಗಳಷ್ಟೇ ದೊಡ್ಡದಾಗಿರುವ ಬೆಳಕಿನ ಸಂವೇದಕಗಳನ್ನು ಹೊಂದಿರುವ ವೃತ್ತಿಪರ DSLR ಕ್ಯಾಮರಗಳನ್ನು ನಿರ್ಮಿಸುವಲ್ಲಿ ಕ್ಯಾನನ್‌ ಕಂಪನಿಯು ಹಲವಾರು ವರ್ಷಗಳ ಅಗ್ರಗಣ್ಯತೆಯನ್ನು ಹೊಂದಿತ್ತು.[೧೩] ತದ್ವಿರುದ್ಧವೆಂಬಂತೆ, 1999ರಿಂದ 2007ರವರೆಗಿನ ಅವಧಿಯಲ್ಲಿ ಎಲ್ಲಾ ನಿಕಾನ್‌‌ DSLR ಕ್ಯಾಮರಗಳು ಸಣ್ಣದಾಗಿರುವ DX ಗಾತ್ರದ ಸಂವೇದಕವನ್ನು ಬಳಸಿಕೊಂಡವು.

ನಂತರ 2005ರಲ್ಲಿ ನಿಕಾನ್‌‌ನ ಆಡಳಿತ ಮಂಡಳಿಯು ಬದಲಾದ್ದರಿಂದ ಹೊಸ ಕ್ಯಾಮರ ವಿನ್ಯಾಸಗಳು ಹೊರಬಂದವು; 2007ರ ಅಂತ್ಯಭಾಗದಲ್ಲಿ ಬಂದ ಸಂಪೂರ್ಣ-ಚೌಕಟ್ಟಿನ ನಿಕಾನ್‌‌ D3, ಕೆಲವೇ ತಿಂಗಳುಗಳ ನಂತರ ಬಂದ ನಿಕಾನ್‌‌ D700, ಮತ್ತು ಮಧ್ಯಮ-ಶ್ರೇಣಿಯ SLR ಕ್ಯಾಮರಗಳು ಇದರಲ್ಲಿ ಸೇರಿದ್ದವು. ಛಾಯಾಗ್ರಹಣ ಕ್ಷೇತ್ರದಲ್ಲಿನ ಹೊಸತನದ ಓರ್ವ ಅಗ್ರಗಣ್ಯ ಪ್ರವರ್ತಕನಾಗಿ ನಿಕಾನ್‌‌ ಕಂಪನಿಯು ವೃತ್ತಿಪರ ಮತ್ತು ಹವ್ಯಾಸಿ-ಉತ್ಸಾಹಶಾಲಿ ಛಾಯಾಗ್ರಾಹಕರ ವಲಯಗಳಲ್ಲಿ ತನ್ನ ಪ್ರಸಿದ್ಧಿಯ ಬಹುಭಾಗವನ್ನು ಮರುಗಳಿಸಿತು. ಅದರಲ್ಲೂ ವಿಶೇಷವಾಗಿ ಕಂಪನಿಯ ವಿನೂತನ ಮಾದರಿಗಳು ಹೊರಹೊಮ್ಮಿಸಿದ ವೇಗ, ದಕ್ಷತೆ, ಮತ್ತು ಕಡಿಮೆ-ಬೆಳಕಿನಲ್ಲಿನ ಕಾರ್ಯಕ್ಷಮತೆ ಇವೇ ಮೊದಲಾದ ವಿಶಿಷ್ಟತೆಗಳು ಈ ಪ್ರಸಿದ್ಧಿಗೆ ಕಾರಣವಾದವು.[೧೪][unreliable source?] 2008ರಲ್ಲಿ ಪರಿಚಯಿಸಲ್ಪಟ್ಟ ಮಧ್ಯಮ-ಶ್ರೇಣಿಯ ನಿಕಾನ್‌‌ D90 ಕ್ಯಾಮರ ಕೂಡಾ ವಿಡಿಯೋವನ್ನು ದಾಖಲಿಸುವಲ್ಲಿನ ಮೊದಲ SLR ಕ್ಯಾಮರ ಎನಿಸಿಕೊಂಡಿತು.[೧೫][೧೬] ಅಲ್ಲಿಂದೀಚೆಗೆ ವಿಡಿಯೋ ಸ್ವರೂಪವನ್ನು ನಿಕಾನ್‌‌ DSLR ಕ್ಯಾಮರಗಳ ಅನೇಕ ಮಾದರಿಗಳಲ್ಲಿ ಪರಿಚಯಿಸಲಾಗಿದ್ದು, ನಿಕಾನ್‌‌ D3S, ನಿಕಾನ್‌‌ D7000 ಮತ್ತು ನಿಕಾನ್‌‌ D3100 ಮಾದರಿಗಳು ಅವುಗಳಲ್ಲಿ ಸೇರಿವೆ.[೧೭][೧೮][೧೯]

ಫಿಲಂ ಕ್ಯಾಮರ ಉತ್ಪಾದನೆ

ಬದಲಾಯಿಸಿ

2000ದ ದಶಕದ ಮಧ್ಯಭಾಗದಲ್ಲಿ ನಿಕಾನ್‌‌ D70ನಂಥ ಕೈಗೆಟುಕುವ ಬೆಲೆಯ, ಬಳಕೆದಾರ-ಮಟ್ಟದ DSLR ಕ್ಯಾಮರಗಳನ್ನು ನಿಕಾನ್‌‌ ಒಮ್ಮೆ ಪರಿಚಯಿಸುತ್ತಿದ್ದಂತೆ, ಉದ್ಯಮದಲ್ಲಿನ ಸಾರ್ವತ್ರಿಕ ಪ್ರವೃತ್ತಿಯನ್ನು ಅನುಸರಿಸಿ ಅದರ ಬಳಕೆದಾರ ಮತ್ತು ವೃತ್ತಿಪರ ಫಿಲಂ ಕ್ಯಾಮರಗಳ ಮಾರಾಟವು ಕ್ಷಿಪ್ರವಾಗಿ ಕುಸಿಯಿತು. ತನ್ನ ಬಹುಪಾಲು ಫಿಲಂ ಕ್ಯಾಮರ ಮಾದರಿಗಳು ಮತ್ತು ತನ್ನೆಲ್ಲಾ ದೊಡ್ಡ ಗಾತ್ರದ ಮಸೂರಗಳ ತಯಾರಿಕೆಯನ್ನು ನಿಲ್ಲಿಸಲಿರುವುದಾಗಿ ಮತ್ತು ಡಿಜಿಟಲ್‌ ಮಾದರಿಗಳ ಮೇಲೆ ಗಮನಹರಿಸಲಿರುವುದಾಗಿ 2006ರ ಜನವರಿಯಲ್ಲಿ ನಿಕಾನ್‌‌ ಘೋಷಿಸಿತು.[೨೦] ಅದೇನೇ ಇದ್ದರೂ, ನಿಕಾನ್‌‌ ಕಂಪನಿಯು ಏಕೈಕ ಪ್ರಮುಖ ಕ್ಯಾಮರ ತಯಾರಕನಾಗಿದ್ದು, ಈಗಲೂ ಫಿಲಂ SLR ಕ್ಯಾಮರಗಳನ್ನು ತಯಾರಿಸುತ್ತಿದೆ. ಪ್ರಸಕ್ತ ಮಾದರಿಗಳಲ್ಲಿ ನಿಕಾನ್‌‌ F6 ಎಂಬ ವೃತ್ತಿಪರ ಕ್ಯಾಮರ ಮತ್ತು FM10 ಎಂಬ ಹವ್ಯಾಸಿ ಕ್ಯಾಮರ ಸೇರಿವೆ.

ಥಾಯ್‌ ಕಾರ್ಯಾಚರಣೆಗಳು

ಬದಲಾಯಿಸಿ

ಒಂದಷ್ಟು ಉತ್ಪಾದನೆಯು (ಅದರಲ್ಲೂ ವಿಶೇಷವಾಗಿ ಕೂಲ್‌ಪಿಕ್ಸ್‌ ಕ್ಯಾಮರಗಳ ಮತ್ತು ಕೆಲವೊಂದು ಕೆಳ-ದರ್ಜೆಯ ಮಸೂರಗಳ ಉತ್ಪಾದನೆ) ಚೀನಾ ಮತ್ತು ಇಂಡೋನೇಷಿಯಾಗಳಲ್ಲಿ ನಡೆಯುವುದರೊಂದಿಗೆ, ನಿಕಾನ್‌‌ ಕಂಪನಿಯು ತನ್ನ ತಯಾರಿಕೆ ಸೌಲಭ್ಯಗಳ ಬಹುಭಾಗವನ್ನು ಥೈಲೆಂಡ್‌‌ಗೆ ವರ್ಗಾಯಿಸಿದೆ. ಥೈಲೆಂಡ್‌ನಲ್ಲಿನ ಬ್ಯಾಂಕಾಕ್‌‌‌ನ ಉತ್ತರ ಭಾಗದಲ್ಲಿರುವ ಅಯುಥಾಯಾ ಎಂಬಲ್ಲಿ ಕಂಪನಿಯು 1991ರಲ್ಲಿ ಕಾರ್ಖಾನೆಯೊಂದನ್ನು ನಿರ್ಮಿಸಿತು. 2000ನೇ ವರ್ಷದ ವೇಳೆಗೆ, ಇದು 2,000 ಮಂದಿ ನೌಕರರನ್ನು ಹೊಂದಿತ್ತು. ಮುಂದಿನ ಕೆಲವು ವರ್ಷಗಳಲ್ಲಿ ಕಂಡುಬಂದ ಸ್ಥಿರವಾದ ಬೆಳವಣಿಗೆಯ ಕಾರಣದಿಂದಾಗಿ ಹಾಗೂ ಮೂಲತಃ 19,400 ಚದರ ಮೀಟರುಗಳಷ್ಟು (208,827 ಚದರ ಅಡಿಗಳು) ಇದ್ದ ನೆಲದ ಸ್ಥಳಾವಕಾಶವು 46,200 ಚದರ ಮೀಟರುಗಳಷ್ಟು (497,300 ಚದರ ಅಡಿಗಳು) ಪ್ರಮಾಣಕ್ಕೆ ಹೆಚ್ಚಳಗೊಂಡಿದ್ದರಿಂದಾಗಿ, ನಿಕಾನ್‌‌ ಉತ್ಪನ್ನಗಳ ಒಂದು ವ್ಯಾಪಕವಾದ ಶ್ರೇಣಿಯನ್ನು ತಯಾರಿಸಲು ಕಾರ್ಖಾನೆಗೆ ಅವಕಾಶ ಸಿಕ್ಕಂತಾಯಿತು. 2004ರ ವೇಳೆಗೆ, ಇದು 8,000ಕ್ಕಿಂತಲೂ ಹೆಚ್ಚಿನ ಕೆಲಸಗಾರರನ್ನು ಹೊಂದಿತ್ತು.

ನಿಕಾನ್‌‌ನ ಥೈಲೆಂಡ್‌ ಘಟಕದಲ್ಲಿ ತಯಾರಿಸಲ್ಪಡುವ ಉತ್ಪನ್ನಗಳ ಶ್ರೇಣಿಯಲ್ಲಿ ಇವು ಸೇರಿವೆ: ಪ್ಲಾಸ್ಟಿಕ್‌ ಎರಕ ಹೊಯ್ಯುವಿಕೆ, ದೃಗ್ವೈಜ್ಞಾನಿಕ ಉಪಕರಣಗಳ ಭಾಗಗಳು, ವರ್ಣಲೇಪನ, ಮುದ್ರಿಸುವಿಕೆ, ಲೋಹ ಸಂಸ್ಕರಿಸುವಿಕೆ, ಲೋಹಲೇಪ, ಗೋಲಾಕಾರದ ಮಸೂರ ಸಂಸ್ಕರಣೆ, ಗೋಲಾಕಾರದ್ದಲ್ಲದ ಮಸೂರ ಸಂಸ್ಕರಣೆ, ಪಟ್ಟಕ ಸಂಸ್ಕರಣೆ, ವಿದ್ಯುತ್ತಿನ ಮತ್ತು ವಿದ್ಯುನ್ಮಾನ ಶೈಲಿಯ ಆಧಾರ ಚೌಕಟ್ಟಿನ ಸಂಸ್ಕರಣೆ, ಸದ್ದಿಲ್ಲದ ಅಲೆಯ ಮೋಟಾರು ಮತ್ತು ಸ್ವಯಂ-ನಾಭೀಕರಿಸುವ ಘಟಕದ ಉತ್ಪಾದನೆ.

2009ರ ವೇಳೆಗೆ ಇದ್ದಂತೆ, ನಿಕಾನ್‌ನ ನಿಕಾನ್‌‌ DX ಗಾತ್ರದ ಎಲ್ಲಾ DSLR ಕ್ಯಾಮರಗಳು ಥೈಲೆಂಡ್‌ನಲ್ಲಿ ತಯಾರಿಸಲ್ಪಟ್ಟರೆ, ನಿಕಾನ್‌ನ ನಿಕಾನ್‌‌ FX ಗಾತ್ರದ (ಸಂಪೂರ್ಣ ಚೌಕಟ್ಟಿನ) ಕ್ಯಾಮರಗಳು (D700, D3, D3S ಮತ್ತು D3X) ಜಪಾನ್‌‌ನಲ್ಲಿ ನಿರ್ಮಿಸಲ್ಪಟ್ಟವು. ಥೈಲೆಂಡ್‌ನಲ್ಲಿನ ತಯಾರಿಕಾ ಸೌಕರ್ಯವು ನಿಕಾನ್‌‌ನ ಬಹುಪಾಲು ಡಿಜಿಟಲ್‌ "DX" ಝೂಮ್‌ ಮಸೂರಗಳನ್ನಷ್ಟೇ ಅಲ್ಲದೇ, ನಿಕಾರ್‌‌ ಶ್ರೇಣಿಯಲ್ಲಿರುವ ಇತರ ಹಲವಾರು ಮಸೂರಗಳನ್ನೂ ತಯಾರಿಸುತ್ತದೆ.

ಕ್ಯಾಮರಗಳು

ಬದಲಾಯಿಸಿ

ಡಿಜಿಟಲ್‌ ಕ್ಯಾಮರದ ಮಾರುಕಟ್ಟೆಯ ಮೇಲೆ ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸುವ ಸಲುವಾಗಿ, ತನ್ನ ಫಿಲಂ ಕ್ಯಾಮರಗಳಿಗೆ ಸಂಬಂಧಿಸಿದ ಎರಡು ಮಾದರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾದರಿಗಳನ್ನೂ ಸ್ಥಗಿತಗೊಳಿಸುವುದಾಗಿ 2006ರ ಜನವರಿಯಲ್ಲಿ ನಿಕಾನ್‌‌ ಘೋಷಿಸಿತು.[೨೧] ಆದರೂ ಕೆಳ-ದರ್ಜೆಯ FM10 (ಕೊಸಿನಾದಿಂದ ತಯಾರಿಸಲ್ಪಟ್ಟಿದ್ದು) ಕ್ಯಾಮರಗಳ ಮಾರಾಟವನ್ನು ಅದು 2009ರವರೆಗೂ ಮುಂದುವರಿಸಿತು, ಮತ್ತು ಉನ್ನತ-ಮಟ್ಟದ F6 (ಸ್ವತಃ ನಿಕಾನ್‌‌ನಿಂದ ತಯಾರಿಸಲ್ಪಟ್ಟಿದ್ದು) ಕ್ಯಾಮರಗಳನ್ನು ಅದು ಈಗಲೂ ನೀಡುತ್ತಿದೆ. ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಂತರದ ಹತ್ತು ವರ್ಷಗಳ ಅವಧಿಯವರೆಗೆ ಎಲ್ಲಾ ಫಿಲಂ ಕ್ಯಾಮರಗಳ ಸೇವಾ-ದುರಸ್ತಿ ಕಾರ್ಯಗಳನ್ನು ನಡೆಸುವುದರ ಕುರಿತು ನಿಕಾನ್‌‌ ಬದ್ಧತೆಯನ್ನು ವ್ಯಕ್ತಪಡಿಸಿದೆ.[೨೨]

ಕೈಯಿಂದ ನಾಭೀಕರಿಸುವ ವ್ಯವಸ್ಥೆಯನ್ನು ಹೊಂದಿರುವ 35 ಮಿ.ಮೀ. ಫಿಲಂ SLR ಕ್ಯಾಮರಗಳು

ಬದಲಾಯಿಸಿ
  • ನಿಕಾನ್‌‌ F ಸರಣಿ (1959–1972, ಕಾನೂನುಬದ್ಧ ಕಾರಣಗಳ ಅನುಸಾರವಾಗಿ ಜರ್ಮನಿಯಲ್ಲಿ ನಿಕಾರ್‌‌ F ಎಂದು ಹೆಸರಾಗಿದೆ)
 
ನಿಕಾನ್‌‌ FTN ಏಕ-ಮಸೂರದ ಪರಾವರ್ತಕ ಕ್ಯಾಮರ
  • ‌ನಿಕಾರೆಕ್ಸ್ ಸರಣಿ (1960–1964)
  • ನಿಕಾರ್‌ಮ್ಯಾಟ್ FT ಸರಣಿ (1965–1977, ಜಪಾನ್‌‌‌‌ನಲ್ಲಿ ಇದು ನಿಕೋಮ್ಯಾಟ್‌ FT ಎಂದೇ ಪ್ರಸಿದ್ಧ)
  • ನಿಕಾನ್‌‌ F2 ಸರಣಿ (1971–1980)
  • ನಿಕಾರ್‌ಮ್ಯಾಟ್‌ EL ಸರಣಿ (1972–1977, ಜಪಾನ್‌‌ನಲ್ಲಿ ಇದು ನಿಕೋಮ್ಯಾಟ್‌ EL ಎಂದೇ ಪ್ರಸಿದ್ಧ)
  • ನಿಕಾನ್‌‌ EL2 (1977)
  • ನಿಕಾನ್‌‌ FM (1977)
  • ನಿಕಾನ್‌‌ FE (1978)
  • ನಿಕಾನ್‌‌ EM (1979)
  • ನಿಕಾನ್‌‌ F3 ಸರಣಿ (1980–1997)
  • ನಿಕಾನ್‌‌ FG (1982)
  • ನಿಕಾನ್‌‌ FM2 ಸರಣಿ (1982–2000)
  • ನಿಕಾನ್‌‌ FE2 (1983)
  • ನಿಕಾನ್‌‌ FA (1983)
  • ನಿಕಾನ್‌‌ FG-20 (1984)
  • ನಿಕಾನ್‌‌ F-301 (1985, ಉತ್ತರ ಅಮೆರಿಕಾದಲ್ಲಿ ಇದು N2000 ಎಂದೇ ಪ್ರಸಿದ್ಧ)
  • ನಿಕಾನ್‌‌ F-601M (1990, ಉತ್ತರ ಅಮೆರಿಕಾದಲ್ಲಿ ಇದು N6000 ಎಂದೇ ಪ್ರಸಿದ್ಧ)
  • ನಿಕಾನ್‌‌ FM10 (1995)
  • ನಿಕಾನ್‌‌ FE10 (1996)
  • ನಿಕಾನ್‌‌ FM3A (2001)

ಫಿಲಂ APS SLR ಕ್ಯಾಮರಗಳು

ಬದಲಾಯಿಸಿ
  • ನಿಕಾನ್‌‌ ಪ್ರೋನಿಯಾ 600i / ಪ್ರೋನಿಯಾ 6i (1996)[೨೩]
  • ನಿಕಾನ್‌‌ ಪ್ರೋನಿಯಾ S (1997)[೨೪]

ಸ್ವಯಂ-ನಾಭೀಕರಿಸುವ ವ್ಯವಸ್ಥೆಯನ್ನು ಹೊಂದಿರುವ 35 ಮಿ.ಮೀ. ಫಿಲಂ SLR ಕ್ಯಾಮರಗಳು

ಬದಲಾಯಿಸಿ
 
ನಿಕಾನ್‌‌ AC-2E ದತ್ತಾಂಶ ಕೊಂಡಿಯ ವ್ಯವಸ್ಥೆ (1993)
  • ನಿಕಾನ್‌‌ F3AF (1983, ಸ್ವಯಂ-ನಾಭೀಕರಿಸುವ DX-1 ಕಿರುದರ್ಶಕವನ್ನು ಹೊಂದಿರುವ ಮಾರ್ಪಡಿಸಲಾದ F3 ಶರೀರ)
  • ನಿಕಾನ್‌‌ F-501 (1986, ಉತ್ತರ ಅಮೆರಿಕಾದಲ್ಲಿ N2020 ಎಂದೇ ಚಿರಪರಿಚಿತ)
  • ನಿಕಾನ್‌‌ F-401 (1987, U.S.ನಲ್ಲಿ N4004 ಎಂದೇ ಚಿರಪರಿಚಿತ)
  • ನಿಕಾನ್‌‌ F-801 (1988, U.S.ನಲ್ಲಿ N8008 ಎಂದೇ ಚಿರಪರಿಚಿತ)
  • ನಿಕಾನ್‌‌ F4 (1988)
  • ನಿಕಾನ್‌‌ F-401S (1989, U.S.ನಲ್ಲಿ N4004S ಎಂದೇ ಚಿರಪರಿಚಿತ)
  • ನಿಕಾನ್‌‌ F-601 (1990, U.S.ನಲ್ಲಿ N6006 ಎಂದೇ ಚಿರಪರಿಚಿತ)
  • ನಿಕಾನ್‌‌ F-401X (1991, U.S.ನಲ್ಲಿ N5005 ಎಂದೇ ಚಿರಪರಿಚಿತ)
  • ನಿಕಾನ್‌‌ F-801S (1991, U.S.ನಲ್ಲಿ N8008S ಎಂದೇ ಚಿರಪರಿಚಿತ)
  • ನಿಕಾನ್‌‌ F90 (1992, U.S.ನಲ್ಲಿ N90 ಎಂದೇ ಚಿರಪರಿಚಿತ)
  • ನಿಕಾನೊಸ್‌ RS (1992) - ನೀರೊಳಗಿನ ಚಿತ್ರೀಕರಣಕ್ಕಾಗಿ.
  • ನಿಕಾನ್‌‌ F50 (1994, U.S.ನಲ್ಲಿ N50 ಎಂದೇ ಚಿರಪರಿಚಿತ)
  • ನಿಕಾನ್‌‌ F70 (1994, U.S.ನಲ್ಲಿ N70 ಎಂದೇ ಚಿರಪರಿಚಿತ)
  • ನಿಕಾನ್‌‌ F90X (1994, U.S.ನಲ್ಲಿ N90S ಎಂದೇ ಚಿರಪರಿಚಿತ)
  • ನಿಕಾನ್‌‌ F5 (1996)
  • ನಿಕಾನ್‌‌ F60 (1999, U.S.ನಲ್ಲಿ N60 ಎಂದೇ ಚಿರಪರಿಚಿತ)
  • ನಿಕಾನ್‌‌ F100 (1999)
  • ನಿಕಾನ್‌‌ F65 (2000, U.S.ನಲ್ಲಿ N65 ಎಂದೇ ಚಿರಪರಿಚಿತ)
  • ನಿಕಾನ್‌‌ F80 (2000, U.S.ನಲ್ಲಿ N80 ಎಂದೇ ಚಿರಪರಿಚಿತ)
  • ನಿಕಾನ್‌‌ F55 (2002, U.S.ನಲ್ಲಿ N55 ಎಂದೇ ಚಿರಪರಿಚಿತ)
  • ನಿಕಾನ್‌‌ F75 (2003, U.S.ನಲ್ಲಿ N75 ಎಂದೇ ಚಿರಪರಿಚಿತ)
  • ನಿಕಾನ್‌‌ F6 (2004)

ಗುರಿದೂರಮಾಪಕ ಕ್ಯಾಮರಗಳು

ಬದಲಾಯಿಸಿ
 
ನಿಕಾನ್‌‌ SP ಗುರಿದೂರಮಾಪಕ ಕ್ಯಾಮರ
  • ನಿಕಾನ್‌‌ I (1948)[೨೫]
  • ನಿಕಾನ್‌‌ M (1949)[೨೬]
  • ನಿಕಾನ್‌‌ S (1951)[೨೭]
  • ನಿಕಾನ್‌‌ S2 (1954)[೨೮]
  • ನಿಕಾನ್‌‌ SP (1957)[೨೯]
  • ನಿಕಾನ್‌‌ S3 (1958)[೩೦]
  • ನಿಕಾನ್‌‌ S4 (1959)[೩೧]
  • ನಿಕಾನ್‌‌ S3M (1960)[೩೨]
  • ನಿಕಾನ್‌‌ S3 2000 (2000)[೩೩]
  • ನಿಕಾನ್‌‌ SP ಸೀಮಿತ ಆವೃತ್ತಿ (2005)[೩೪]

ಅಡಕ ಶೈಲಿಯ ಕ್ಯಾಮರಗಳು

ಬದಲಾಯಿಸಿ

1983 ಮತ್ತು 2000ರ ದಶಕದ[೩೫] ಆರಂಭದ ನಡುವೆ ಅಡಕ ಶೈಲಿಯ ಕ್ಯಾಮರಗಳ ಒಂದು ವ್ಯಾಪಕ ಶ್ರೇಣಿಯು ನಿಕಾನ್‌ನಿಂದ ನಿರ್ಮಿಸಲ್ಪಟ್ಟಿತು. ಕ್ಯಾಮರಗಳನ್ನು ಒಂದರ ಸರಣಿ ಹೆಸರಿನಿಂದ (ಅಂದರೆ L35/L135-ಸರಣಿ, RF/RD-ಸರಣಿ, W35-ಸರಣಿ, EF ಅಥವಾ AW-ಸರಣಿ ಎಂಬ ರೀತಿಯಲ್ಲಿ) ಹೆಸರಿಸುವ ಮೂಲಕ ನಿಕಾನ್‌‌ ಮೊದಲಿಗೆ ತನ್ನ ಕಾರ್ಯವನ್ನು ಆರಂಭಿಸಿತು. ನಂತರದ ಉತ್ಪಾದನಾ ಆವರ್ತನಗಳಲ್ಲಿ, ಒಂದೆಡೆ ಒಂದು ಸರಣಿ-ಹೆಸರಿನೊಂದಿಗೆ ಮತ್ತು ಮತ್ತೊಂದೆಡೆ ಒಂದು ಮಾರಾಟದ ಹೆಸರಿನೊಂದಿಗೆ ಕ್ಯಾಮರಗಳು ಜೋಡಿಯಾಗಿ ಬ್ರಾಂಡ್‌ ಮಾಡಲ್ಪಟ್ಟವು. ಉದಾಹರಣೆಗೆ, ಒಂದು ವ್ಯಾಪಕವಾದ ಝೂಮ್‌ ಶ್ರೇಣಿಯೊಂದಿಗಿನ ಕ್ಯಾಮರಗಳಿಗಾಗಿ ಝೂಮ್‌-ಟಚ್‌ ಎಂಬ ಹೆಸರು, ತೀರಾ ಅಡಕ ಶೈಲಿಯ ಮಾದರಿಗಳಿಗಾಗಿ ಲೈಟ್‌-ಟಚ್‌ ಎಂಬ ಹೆಸರು, ಬಳಸಲು ಸುಲಭವಾಗಿರುವ ಕ್ಯಾಮರಗಳಿಗಾಗಿ ಫನ್‌-ಟಚ್‌ ಎಂಬ ಹೆಸರು ಹಾಗೂ ಎರಚಿದ ನೀರಿಗೆ ಪ್ರತಿರೋಧಕತೆಯನ್ನು ಹೊಂದಿರುವ ಕ್ಯಾಮರಗಳಿಗಾಗಿ ಸ್ಪೋರ್ಟ್‌-ಟಚ್‌ ಎಂಬ ಹೆಸರನ್ನು ಮಾರಾಟ ಹೆಸರುಗಳಾಗಿ ಬಿಂಬಿಸಲಾಯಿತು. 1990ರ ದಶಕದ ಅಂತ್ಯಭಾಗದ ನಂತರ, ಸರಣಿಯ ಹೆಸರುಗಳನ್ನು ನಿಕಾನ್‌‌ ಕೈಬಿಟ್ಟಿತು ಮತ್ತು ಕೇವಲ ಮಾರಾಟದ ಹೆಸರಿನೊಂದಿಗೆ ತನ್ನ ಕೈಂಕರ್ಯವನ್ನು ಮುಂದುವರಿಸಿತು. ನಿಕಾನ್‌‌ನ APS-ಕ್ಯಾಮರಗಳೆಲ್ಲವೂ ನ್ಯೂವಿಸ್‌ ಎಂಬುದಾಗಿ ಹೆಸರಿಸಲ್ಪಟ್ಟವು.

ಪ್ರವೇಶ-ಮಟ್ಟದ, ಸ್ಥಿರವಾದ-ಮಸೂರದ-ಕ್ಯಾಮರಗಳಿಂದ ಮೊದಲ್ಗೊಂಡು ನಿಕಾನ್‌‌ 35Ti ಎಂಬ ಅತ್ಯುನ್ನತ ಮಾದರಿಯವರೆಗಿನ ಎಲ್ಲಾ ಬೆಲೆಯ ಶ್ರೇಣಿಗಳಲ್ಲಿ, ಟೈಟಾನಿಯಂ ಶರೀರ ಮತ್ತು 3D-ಮ್ಯಾಟ್ರಿಕ್ಸ್‌-ಮಾಪನದೊಂದಿಗೆ ಕ್ಯಾಮರಗಳು ಮಾರುಕಟ್ಟೆಗೆ ಬಂದವು.

ನೀರೊಳಗಿನ ಬಳಕೆಯ (ಶ್ರೇಣಿ-ನಾಭೀಕರಿಸುವ) ಕ್ಯಾಮರಗಳು

ಬದಲಾಯಿಸಿ
  • ನಿಕಾನೊಸ್‌ I (1963,1}ಫ್ರಾನ್ಸ್‌‌‌ನಲ್ಲಿ ಮೂಲತಃ ಇದು ಕ್ಯಾಲಿಪ್ಸೊ/ನಿಕಾರ್‌‌ ಎಂದು ಚಿರಪರಿಚಿತವಾಗಿತ್ತು)
  • ನಿಕಾನೊಸ್‌ II (1968)
  • ನಿಕಾನೊಸ್‌ III (1975)
  • ನಿಕಾನೊಸ್‌ IV-A (1980)
  • ನಿಕಾನೊಸ್‌ V (1984)

ಅಡಕ ಶೈಲಿಯ ಡಿಜಿಟಲ್‌ ಕ್ಯಾಮರಗಳು

ಬದಲಾಯಿಸಿ
  • ನಿಕಾನ್‌‌ ಕೂಲ್‌ಪಿಕ್ಸ್‌ ಸರಣಿ

ಏಕ ಮಸೂರದ ಪರಾವರ್ತಕ ಡಿಜಿಟಲ್‌ ಕ್ಯಾಮರಗಳು

ಬದಲಾಯಿಸಿ
 
ನಿಕಾನ್‌‌ D3 ಕ್ಯಾಮರದ ಶರೀರ
 
ನಿಕಾರ್‌‌ ಮಸೂರ ಮತ್ತು ನಿಕಾನ್‌‌ "ವೇಗದಬೆಳಕಿನ" ಫ್ಲಾಶ್‌ ಜೊತೆಗಿನ ನಿಕಾನ್‌‌ D200 ಕ್ಯಾಮರ

ಉನ್ನತ-ಮಟ್ಟದ (ವೃತ್ತಿಪರ) - FX/ಸಂಪೂರ್ಣ ಚೌಕಟ್ಟು ಸಂವೇದಕ

  • ನಿಕಾನ್‌‌ D3, ಆಗಸ್ಟ್‌ 23, 2007
  • ನಿಕಾನ್‌‌ D3X, ಡಿಸೆಂಬರ್‌ 1, 2008
  • ನಿಕಾನ್‌‌ D3S, ಅಕ್ಟೋಬರ್‌ 14, 2009

ಉನ್ನತ-ಮಟ್ಟದ (ಪ್ರೊಸ್ಯೂಮರ್‌) - FX/ಸಂಪೂರ್ಣ ಚೌಕಟ್ಟು ಸಂವೇದಕ

  • ನಿಕಾನ್‌‌ D700, ಜುಲೈ 1, 2008

ಉನ್ನತ-ಮಟ್ಟದ (ವೃತ್ತಿಪರ) - DX ಸಂವೇದಕ, ಉನ್ನತ ಪೃಥಕ್ಕರಣ

  • ನಿಕಾನ್‌‌ D1, ಜೂನ್‌ 15, 1999
  • ನಿಕಾನ್‌‌ D1X, ಫೆಬ್ರುವರಿ 5, 2001
  • ನಿಕಾನ್‌‌ D2X, ಸೆಪ್ಟೆಂಬರ್‌ 16, 2004
  • ನಿಕಾನ್‌‌ D2XS, ಜೂನ್‌ 1, 2006

ಉನ್ನತ-ಮಟ್ಟದ (ವೃತ್ತಿಪರ) - DX ಸಂವೇದಕ, ಉನ್ನತ ವೇಗ

  • ನಿಕಾನ್‌‌ D1H, ಫೆಬ್ರುವರಿ 5, 2001
  • ನಿಕಾನ್‌‌ D2H, ಜುಲೈ 22, 2003
  • ನಿಕಾನ್‌‌ D2HS, ಫೆಬ್ರುವರಿ 16, 2005

ಉನ್ನತ-ಮಟ್ಟದ (ಪ್ರೊಸ್ಯೂಮರ್‌) - DX ಸಂವೇದಕ

  • ನಿಕಾನ್‌‌ D100, 21 ಫೆಬ್ರುವರಿ 2002
  • ನಿಕಾನ್‌‌ D200, 1 ನವೆಂಬರ್‌ 2005
  • ನಿಕಾನ್‌‌ D300, 23 ಆಗಸ್ಟ್‌ 2007[೩೬]
  • ನಿಕಾನ್‌‌ D300S, 30 ಜುಲೈ 2009[೩೭]

ಮಧ್ಯಮ ಶ್ರೇಣಿಯ - DX ಸಂವೇದಕ

  • ನಿಕಾನ್‌‌ D7000, 15 ಸೆಪ್ಟೆಂಬರ್‌ 2010[೩೮]

ಮಧ್ಯಮ ಶ್ರೇಣಿಯ (ಬಳಕೆದಾರ) - DX ಸಂವೇದಕ

  • ನಿಕಾನ್‌‌ D70, 28 ಜನವರಿ 2004
  • ನಿಕಾನ್‌‌ D70S, 20 ಏಪ್ರಿಲ್‌ 2005
  • ನಿಕಾನ್‌‌ D80, 9 ಆಗಸ್ಟ್‌ 2006
  • ನಿಕಾನ್‌‌ D90, 27 ಆಗಸ್ಟ್‌ 2008[೩೯]
  • ನಿಕಾನ್‌‌ D5000, 14 ಏಪ್ರಿಲ್‌ 2009

ಪ್ರವೇಶ-ಮಟ್ಟದ (ಬಳಕೆದಾರ) - DX ಸಂವೇದಕ

  • ನಿಕಾನ್‌‌ D50, 20 ಏಪ್ರಿಲ್‌ 2005
  • ನಿಕಾನ್‌‌ D40, 16 ನವೆಂಬರ್‌ 2006
  • ನಿಕಾನ್‌‌ D40X, 6 ಮಾರ್ಚ್‌ 2007
  • ನಿಕಾನ್‌‌ D60, 29 ಜನವರಿ 2008
  • ನಿಕಾನ್‌‌ D3000, 30 ಜುಲೈ 2009
  • ನಿಕಾನ್‌‌ D3100, 19 ಆಗಸ್ಟ್‌ 2010[೪೦]

ನಿಕಾನ್‌‌ನ ಕಚ್ಚಾ ಬಿಂಬದ ಗಾತ್ರದ ಸ್ವರೂಪವು NEF ಆಗಿದ್ದು ಇದು ನಿಕಾನ್‌‌ ವಿದ್ಯುನ್ಮಾನ ಕಡತಕ್ಕೆ ಮೀಸಲಾಗಿದೆ. ಬಿಂಬದ ಕಡತಗಳಿಗಾಗಿರುವ "DSCN" ಪೂರ್ವಪ್ರತ್ಯಯವು "ಡಿಜಿಟಲ್‌ ಸ್ಟಿಲ್‌ ಕ್ಯಾಮರ - ನಿಕಾನ್‌‌" ಎಂಬ ಪದಗುಚ್ಛಕ್ಕೆ ಮೀಸಲಾಗಿರುವಂಥದ್ದಾಗಿದೆ.

ಛಾಯಾ ಮಸೂರಗಳು

ಬದಲಾಯಿಸಿ

F-ಮೌಂಟ್‌ ಕ್ಯಾಮರಗಳಿಗಾಗಿರುವ ಮಸೂರಗಳು

ಬದಲಾಯಿಸಿ
  • ನೋಡಿ: ನಿಕಾನ್‌‌ F-ಮೌಂಟ್‌ → ನಿಕಾರ್‌‌

ಛಾಯಾಗ್ರಹಣ ಮತ್ತು ಪ್ರತಿಮೀಕರಿಸುವುದಕ್ಕೆ ಸಂಬಂಧಿಸಿದ ಇತರ ಮಸೂರಗಳು

ಬದಲಾಯಿಸಿ

ವಿದ್ಯುನ್ಮಾನ ಫ್ಲಾಶ್‌ ಘಟಕಗಳು

ಬದಲಾಯಿಸಿ

ನಿಕಾನ್‌‌ ಕಂಪನಿಯು ತನ್ನ ವಿದ್ಯುನ್ಮಾನ ಫ್ಲಾಶ್‌ ಗನ್‌ಗಳಿಗಾಗಿ ಸ್ಪೀಡ್‌ಲೈಟ್‌ ಎಂಬ ಪರಿಭಾಷೆಯನ್ನು ಬಳಸುತ್ತದೆ.

  • SB-R200
  • SB-400
  • SB-600
  • SB-700
  • SB-800
  • SB-900
  • R1C1

ಫಿಲಂ ಸ್ಕ್ಯಾನರ್‌ಗಳು

ಬದಲಾಯಿಸಿ
 
ನಿಕಾನ್‌‌ ಕೂಲ್‌ಸ್ಕ್ಯಾನ್‌ V ಫಿಲಂ ಸ್ಕ್ಯಾನರ್‌

ನಿಕಾನ್‌‌ನ ಡಿಜಿಟಲ್‌ ಕ್ಯಾಮರ ಶ್ರೇಣಿಯು ವೈವಿಧ್ಯಮಯ ಸ್ವರೂಪಗಳಿಗಾಗಿ ಮೀಸಲಾದ ಸ್ಕ್ಯಾನರ್‌ಗಳ ಒಂದು ಯಶಸ್ವಿ ಶ್ರೇಣಿಯನ್ನೂ ಒಳಗೊಳ್ಳುತ್ತದೆ; ಅಡ್ವಾನ್ಸ್‌ಡ್‌ ಫೋಟೋ ಸಿಸ್ಟಮ್‌ (IX240), 35 ಮಿ.ಮೀ., ಮತ್ತು 60 ಮಿ.ಮೀ. ಫಿಲಂ ಮೊದಲಾದವು ಇದರಲ್ಲಿ ಸೇರಿವೆ.

  • (1988) LS-3500 (4096x6144, 4000 ಡಿಪಿಐ) SCSI[೪೧]
  • (1992) ಕೂಲ್‌ಸ್ಕ್ಯಾನ್‌ LS-10 (2700 ಡಿಪಿಐ) SCSI. LED ಬೆಳಗುವಿಕೆಯನ್ನು ಸೂಚಿಸಲೆಂದು "ಕೂಲ್‌ಸ್ಕ್ಯಾನ್‌" ಎಂಬುದಾಗಿ ಹೆಸರಿಸಲ್ಪಟ್ಟಿದ್ದರಲ್ಲಿ ಮೊದಲನೆಯದು.[೪೨]
  • (1994) LS-3510AF (5000x5000, 3500 ಡಿಪಿಐ) SCSI. ಸ್ವಯಂ-ನಾಭೀಕರಿಸುವ ಮಸೂರವು ಅಳವಡಿಸಲ್ಪಟ್ಟಿದೆ.
  • (1996) ಸೂಪರ್‌ ಕೂಲ್‌ಸ್ಕ್ಯಾನ್‌ LS-1000 (2592x3888, 2700 ಡಿಪಿಐ) SCSI. ಸ್ಕ್ಯಾನ್‌ ಸಮಯವು ಅರ್ಧದಷ್ಟು[೪೩] ಕಡಿತಗೊಳಿಸಲ್ಪಟ್ಟಿದೆ.
  • (1996) ಕೂಲ್‌ಸ್ಕ್ಯಾನ್‌ II LS-20 E (2700 ಡಿಪಿಐ) SCSI[೪೪]
  • (1998) ಕೂಲ್‌ಸ್ಕ್ಯಾನ್‌ LS-2000 (2700 ಡಿಪಿಐ, 12-ಬಿಟ್‌) SCSI, ಬಹುವಿಧದ ಮಾದರಿ, "ಕ್ಲೀನ್‌ಇಮೇಜ್‌" ತಂತ್ರಾಂಶ[೪೫]
  • (1998) ಕೂಲ್‌ಸ್ಕ್ಯಾನ್‌ III LS-30 E (2700 ಡಿಪಿಐ, 10-ಬಿಟ್‌) SCSI[೪೬]
  • (2001) ಕೂಲ್‌ಸ್ಕ್ಯಾನ್‌ IV LS-40 ED (2900 ಡಿಪಿಐ, 12-ಬಿಟ್‌, 3.6D) USB, ಸಿಲ್ವರ್‌ಫಾಸ್ಟ್‌, ICE, ROC, GEM[೪೭]
  • (2001) ಕೂಲ್‌ಸ್ಕ್ಯಾನ್‌ LS-4000 ED (4000 ಡಿಪಿಐ, 14-ಬಿಟ್‌, 4.2D) ಫೈರ್‌ವೈರ್‌[೪೮]
  • (2001) ಕೂಲ್‌ಸ್ಕ್ಯಾನ್‌ LS-8000 ED (4000 ಡಿಪಿಐ, 14-ಬಿಟ್‌, 4.2D) ಫೈರ್‌ವೈರ್‌, ಬಹುಸ್ವರೂಪ[೪೯]
  • (2003) ಕೂಲ್‌ಸ್ಕ್ಯಾನ್‌ V LS-50 ED (4000 ಡಿಪಿಐ, 14-ಬಿಟ್‌, 4.2D) USB
  • (2003) ಸೂಪರ್‌ ಕೂಲ್‌ಸ್ಕ್ಯಾನ್‌ LS-5000 ED (4000 ಡಿಪಿಐ, 16ಬಿಟ್‌, 4.8D) USB
  • (2004) ಸೂಪರ್‌ ಕೂಲ್‌ಸ್ಕ್ಯಾನ್‌ LS-9000 ED (4000 ಡಿಪಿಐ, 16ಬಿಟ್‌, 4.8D) ಫೈರ್‌ವೈರ್‌, ಬಹುಸ್ವರೂಪ

4096 x 6144 ಪಿಕ್ಸೆಲ್‌ಗಳಷ್ಟಿರುವ ಒಂದು ಗರಿಷ್ಟ ಪೃಥಕ್ಕರಣದೊಂದಿಗಿನ ನಿಕಾನ್‌‌ LS-3500 ಎಂಬ ತನ್ನ ಮೊದಲ ಸ್ಕ್ಯಾನರ್‌ನ್ನು 1988ರಲ್ಲಿ ನಿಕಾನ್‌‌ ಪರಿಚಯಿಸಿತು. 'ಕೂಲ್‌' LED ಬೆಳಕಿನ ವ್ಯವಸ್ಥೆಯ ಅಭಿವೃದ್ಧಿಗೆ ಮುಂಚಿತವಾಗಿ ಹ್ಯಾಲೋಜೆನ್‌ ದೀಪವೊಂದನ್ನು ಈ ಸ್ಕ್ಯಾನರ್‌ ಬಳಸುತ್ತಿತ್ತು (ಆದ್ದರಿಂದಲೇ ಇದನ್ನನುಸರಿಸಿಕೊಂಡು ಬಂದ ಮಾದರಿಗಳಿಗೆ 'ಕೂಲ್‌ಸ್ಕ್ಯಾನ್‌' ಹೆಸರನ್ನು ನೀಡಲಾಯಿತು). ಹೀಗೆ ನಂತರದಲ್ಲಿ ಬಂದ LED ಆಧರಿತ ಕೂಲ್‌ಸ್ಕ್ಯಾನ್‌ ಮಾದರಿಯ ಪೃಥಕ್ಕರಣವು ಹೆಚ್ಚಳವನ್ನು ಕಾಣಲಿಲ್ಲವಾದರೂ, ಬೆಲೆಯು ಗಣನೀಯವಾಗಿ ಕಡಿಮೆಯಿತ್ತು. ಬಣ್ಣದ ಆಳ, ಸ್ಕ್ಯಾನ್‌ನ ಗುಣಮಟ್ಟ, ಪ್ರತಿಮೀಕರಿಸುವಿಕೆ ಮತ್ತು ಯಂತ್ರಾಂಶದ ಕಾರ್ಯಾತ್ಮಕತೆಗಳಷ್ಟೇ ಅಲ್ಲದೇ, ಸ್ಕ್ಯಾನ್‌ ಮಾಡುವ ವೇಗವೂ ಸಹ ಅದನ್ನನುಸರಿಸಿಕೊಂಡು ಬಂದ ಪ್ರತಿಯೊಂದು ಮಾದರಿಯೊಂದಿಗೆ ಕ್ರಮೇಣವಾಗಿ ಸುಧಾರಿಸಿದವು. ಅಂತಿಮವಾಗಿ 'ಶ್ರೇಣಿಯಲ್ಲಿಯ ಅಗ್ರಗಣ್ಯ' ಎಂದು ಕರೆಸಿಕೊಂಡ 35 ಮಿ.ಮೀ. ಕೂಲ್‌ಸ್ಕ್ಯಾನ್‌ LS-5000 ED ಮಾದರಿಯು ಮಹತ್ತರವಾದ ಸಂಖ್ಯೆಯಲ್ಲಿ ಚಿತ್ರಫಲಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಒಂದು ಸಮರ್ಥ ಸಾಧನವಾಗಿ ಹೊರಹೊಮ್ಮಿತು; ಸೆರೆಹಿಡಿಯಲ್ಪಟ್ಟ 50 ಚಿತ್ರಫಲಕಗಳು ಅಥವಾ 40 ಬಿಂಬಗಳನ್ನು ಫಿಲಂ ಸುರುಳಿಯ ಮೇಲೆ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಿತ್ತು. ವಿಶೇಷ ಸಂಯೋಜಕಗಳನ್ನು ಬಳಸಿಕೊಂಡು ಒಂದೇ ತಂಡದಲ್ಲಿ ಈ ಎಲ್ಲವನ್ನೂ ಅದು ಸ್ಕ್ಯಾನ್‌ ಮಾಡುವಷ್ಟು ಸಮರ್ಥವಾಗಿತ್ತು. ಸಂಸ್ಕರಿಸುವಿಕೆಯ-ನಂತರದ ಯಾವ ಕಾರ್ಯವೂ ಸಹ ನಿರ್ವಹಿಸಲ್ಪಡದ ಸಂದರ್ಭಗಳಲ್ಲಿ, 20 ಸೆಕೆಂಡುಗಳಿಗಿಂತಲೂ ಕಡಿಮೆ ಸಮಯದಲ್ಲಿ ಗರಿಷ್ಟ ಪೃಥಕ್ಕರಣದ ಏಕೈಕ ಸ್ಕ್ಯಾನ್‌ ಒಂದು ನಿರ್ವಹಿಸಲ್ಪಡುತ್ತಿತ್ತು. ಕೂಲ್‌ಸ್ಕ್ಯಾನ್‌ 9000 ED ಮಾದರಿಯು ಬಿಡುಗಡೆಯಾಗುವುದರೊಂದಿಗೆ, ತನ್ನ ಅತ್ಯಂತ ಸದ್ಯೋಚಿತವಾಗಿರುವ ಫಿಲಂ ಸ್ಕ್ಯಾನರ್‌ನ್ನು ನಿಕಾನ್‌‌ ಪರಿಚಯಿಸಿತು; ಈ ಸ್ಕ್ಯಾನರ್‌ಗಳು ಮಿನೋಲ್ಟಾ ಡಿಮೇಜ್‌ ಸ್ಕ್ಯಾನರ್‌ಗಳ ರೀತಿಯಲ್ಲಿಯೇ, ಡಿಜಿಟಲ್‌ ICEಯ ಒಂದು ವಿಶೇಷ ಆವೃತ್ತಿಯ ಕಾರಣದಿಂದಾಗಿ ಕೊಡಾಕ್ರೋಮ್‌ ಫಿಲಂನ್ನು ಸ್ಕ್ಯಾನ್‌ ಮಾಡಲು ಸಮರ್ಥವಾಗಿದ್ದವು ಮತ್ತು ಇದು ವಿಶ್ವಾಸಾರ್ಹವಾಗಿ ಧೂಳು ಮತ್ತು ಗೀಚುಗೆರೆ ಈ ಎರಡರಿಂದಲೂ ಮುಕ್ತವಾಗಿರುತ್ತಿತ್ತು ಎಂಬುದು ಗಮನಾರ್ಹ ಸಂಗತಿ. ಲೇಸರ್‌ಸಾಫ್ಟ್‌ ಇಮೇಜಿಂಗ್ ಕಂಪನಿಯ ಸಿಲ್ವರ್‌ಫಾಸ್ಟ್‌ ಎಂಬ ಸ್ಕ್ಯಾನ್‌ ತಂತ್ರಾಂಶವು 2008ರ ಅಂತ್ಯದಿಂದಲೂ ಇದೇ ರೀತಿಯ ಕೌಶಲವನ್ನು (iSRD) ಒಳಗೊಂಡಿದ್ದು, ಅದು ಕೊಡಾಕ್ರೋಮ್‌ ಸ್ಕ್ಯಾನ್‌ಗಳಿಂದ ಧೂಳು ಮತ್ತು ಗೀಚುಗೆರೆಗಳನ್ನು ತೆಗೆದುಹಾಕುವುದಕ್ಕೆ ಪ್ರತಿಯೊಂದು ನಿಕಾನ್‌‌ ಫಿಲಂ ಸ್ಕ್ಯಾನರ್‌ಗೆ ಅವಕಾಶ ಮಾಡಿಕೊಡುತ್ತದೆ. ಮ್ಯಾಕ್‌ OS 10.5 ಆವೃತ್ತಿಯೊಂದಿಗೆ ಇದನ್ನು ಹೊಂದಿಕೊಳ್ಳುವಂತೆ ಮಾಡುವ ಸಲುವಾಗಿ 2007ರ ಅಂತ್ಯದಲ್ಲಿ ತಂತ್ರಾಂಶದ ಸಂಕೇತದ ಬಹುಭಾಗವನ್ನು ಮರುಬರೆಯಬೇಕಾಗಿ ಬಂತು. ಮೆಸಿಂತೋಷ್‌ ಮತ್ತು ವಿಂಡೋಸ್‌ ವಿಸ್ಟಾ 64-ಬಿಟ್ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ತನ್ನ ನಿಕಾನ್‌‌ ಸ್ಕ್ಯಾನ್‌ ತಂತ್ರಾಂಶದ ಬೆಂಬಲ ನೀಡುವುದನ್ನು ತಾನು ನಿಲ್ಲಿಸುವುದಾಗಿ ನಿಕಾನ್‌‌ ಘೋಷಿಸಿತು.[೫೦] ಸಿಲ್ವರ್‌ಫಾಸ್ಟ್‌ ಅಥವಾ ವ್ಯೂಸ್ಕ್ಯಾನ್‌‌ನಂಥ ತಟಸ್ಥ ತಂತ್ರಾಂಶ ಪರಿಹಾರೋಪಾಯಗಳು ಅಧಿಕೃತವಾದ ನಿಕಾನ್‌‌ ಚಾಲನಾ ಸಾಧನಗಳಿಗೆ ಮತ್ತು ಸ್ಕ್ಯಾನ್‌ ಮಾಡುವ ತಂತ್ರಾಂಶಕ್ಕೆ ಪರ್ಯಾಯಗಳನ್ನು ಒದಗಿಸುತ್ತವೆ, ಮತ್ತು ಬಹುಪಾಲು ಪ್ರಸಕ್ತ ಕಾರ್ಯಾಚರಣಾ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಪರಿಷ್ಕರಿಸಿದ ಚಾಲನಾ ಸಾಧನಗಳನ್ನು ಕಾಯ್ದುಕೊಂಡು ಹೋಗುತ್ತವೆ. 1994 ಮತ್ತು 1996ರ ನಡುವೆ, ಸ್ಕ್ಯಾನ್‌ಟಚ್ ಎಂದು ಹೆಸರಿಸಲ್ಪಟ್ಟ ಮಟ್ಟಸ ಸಮತಲದ ಸ್ಕ್ಯಾನರ್‌‌ನ ಮೂರು ಮಾದರಿಗಳನ್ನು ನಿಕಾನ್‌‌ ಅಭಿವೃದ್ಧಿಪಡಿಸಿತು; ಆದರೆ ಸ್ಪರ್ಧಾತ್ಮಕವಾಗಿದ್ದ ಮಟ್ಟಸ ಸಮತಲದ ಉತ್ಪನ್ನಗಳೊಂದಿಗೆ ಅವು ಪೈಪೋಟಿ ನಡೆಸಲು ಆಗಲಿಲ್ಲವಾದ್ದರಿಂದ, ಅವುಗಳ ತಯಾರಿಕೆಯನ್ನು ನಿಲ್ಲಿಸಲಾಯಿತು ಹಾಗೂ ತನ್ನ ಫಿಲಂ ಸ್ಕ್ಯಾನರ್‌ಗಳ ಕಡೆಗೆ ನಿಕಾನ್‌ ಗಮನಹರಿಸಿತು.

ಕ್ರೀಡಾ ದೃಶ್ಯೋಪಕರಣಗಳು

ಬದಲಾಯಿಸಿ

ದುರ್ಬೀನುಗಳು

ಬದಲಾಯಿಸಿ
  • ಸ್ಪ್ರಿಂಟ್‌ IV
  • ಸ್ಪೋರ್ಟ್‌ಸ್ಟಾರ್‌ IV
  • ಟ್ರಾವೆಲೈಟ್‌ v
  • ಮೈಕ್ರಾನ್‌
  • ಆಕ್ಷನ್‌ VII
  • ಆಕ್ಷನ್‌ VII ಝೂಮ್‌
  • ಸ್ಪೋರ್ಟರ್‌ I
  • ವೆಂಚರರ್‌‌ 8/10x32
  • ವೆಂಚರರ್‌‌ 8x42
  • ರೂಫ್‌ ಪ್ರಿಸಂ
  • ಮೊನಾರ್ಕ್‌
  • ಆಕ್ಷನ್‌ EX
  • ಸ್ಟೇಬಿಲ್‌ಐಸ್‌
  • ಸುಪೀರಿಯರ್‌ E
  • ಮೆರೈನ್‌

ನೆಲೆಪತ್ತೆಯ ದರ್ಶಕಗಳು

ಬದಲಾಯಿಸಿ
  • ಸ್ಪಾಟರ್‌‌ XL II WP
  • ಸ್ಪಾಟಿಂಗ್‌ ಸ್ಕೋಪ್‌ R/A II
  • ಸ್ಪಾಟಿಂಗ್‌ ಸ್ಕೋಪ್‌ 80
  • ಫೀಲ್ಡ್‌ ಸ್ಕೋಪ್‌ III
  • ಫೀಲ್ಡ್‌ ಸ್ಕೋಪ್‌ ED 82

ಬಂದೂಕು ದರ್ಶಕಗಳು

ಬದಲಾಯಿಸಿ
  • ಮೊನಾರ್ಕ್‌
  • ಲೇಸರ್‌ IRT
  • ಎನ್‌ಕೋರ್
  • ಕಯೋಟ್‌ ಸ್ಪೆಷಲ್‌
  • ಸ್ಲಗ್‌ಹಂಟರ್‌
  • ಬಕ್‌ಮಾಸ್ಟರ್‌
  • ಪ್ರೋಸ್ಟಾಫ್‌
  • ಟೀಮ್‌ ರಿಯಲ್‌ಟ್ರೀ

ಇತರ ಉತ್ಪನ್ನಗಳು

ಬದಲಾಯಿಸಿ

ಕಣ್ಣಿನ ಉಪಕರಣ, ಬೂದುಗಾಜುಗಳು, ಏಕಾಕ್ಷಿ ಮಸೂರಗಳು, ದುರ್ಬೀನು ದೂರದರ್ಶಕಗಳು, ಸೂಕ್ಷ್ಮದರ್ಶಕಗಳು, ಲೇಸರ್‌ ಗುರಿದೂರಮಾಪಕಗಳು, ಸೂಕ್ಷ್ಮದರ್ಶಕದ ಬಳಕೆಗಾಗಿರುವ ಕ್ಯಾಮರಗಳು, ಅನುಕಲಿತ ಮಂಡಲಗಳು ಮತ್ತು ದ್ರವಸ್ಫಟಿಕ ಉದ್ದರ್ಶನಗಳು, ಹಾಗೂ ಅರೆವಾಹಕ ಸಾಧನದ ಪರಿಶೀಲನಾ ಉಪಕರಣದ ತಯಾರಿಕೆಗೆ ಸಂಬಂಧಿಸಿದ ದೃಗ್ವೈಜ್ಞಾನಿಕ ಮತ್ತು ವಿಡಿಯೋ-ಆಧರಿತ ಅಳತೆ ಉಪಕರಣಗಳನ್ನೂ ಸಹ ನಿಕಾನ್‌‌ ತಯಾರಿಸುತ್ತದೆ. 2008ರ ವೇಳೆಗೆ ಇದ್ದಂತೆ, ಕಂಪನಿಯ ಆದಾಯದ ಸುಮಾರು ಮೂರನೇ ಒಂದು ಭಾಗವು ಸ್ಟೆಪರ್‌ಗಳು ಮತ್ತು ಸ್ಕ್ಯಾನರ್‌ಗಳಿಂದ ಬರುತ್ತದೆ.[೫೧] ನಿಕಾನ್‌‌, ನಿಜಿ, ನೊಬಿಲಿ-ಟೈ, ಪ್ರೆಸಿಯೊ, ಮತ್ತು ವೆಲಾಸಿಟಿ VTI ಎಂಬ ಬ್ರಾಂಡ್‌ಗಳ ಅಡಿಯಲ್ಲಿ ಕನ್ನಡಕಗಳು, ಬಿಸಿಲಿನ ಕನ್ನಡಕ, ಮತ್ತು ಕನ್ನಡಕದ ಚೌಕಟ್ಟುಗಳನ್ನೂ ಸಹ ನಿಕಾನ್‌‌ ತಯಾರಿಸುತ್ತದೆ.[೫೨]

ಟಿಪ್ಪಣಿಗಳು ಮತ್ತು ಆಕರಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ "Annual Report FY2010: Nikon" (PDF). Archived from the original (PDF) on 2010-10-05. Retrieved 2010-10-25.
  2. "Analyst: Top IC suppliers remain largely unchanged 2007". Solid State Technology. Electro IQ. 2008-05-18. Retrieved 2010-02-05.
  3. "Nikon Group Companies". Nikon Corporation. Archived from the original on 2019-10-16. Retrieved 2010-02-05.
  4. "Nikon Company Profile". mitsubishi.com committee. Archived from the original on 2011-09-27. Retrieved 2011-01-27.
  5. "Nikon Camera History". Archived from the original on 2010-02-04. Retrieved 2010-02-05.
  6. "David Douglas Duncan". Harry Ransom Center. The University of Texas at Austin. Archived from the original on 2007-12-16. Retrieved 2010-02-05.
  7. Kouichi Ohsita (2007-09-30). "The Thousand and One Nights, Tale 36 : Nikkor P.C 8.5 cm f/2". NIKKOR Club Quarterly magazine. Nikon Corporation. Archived from the original on 2010-03-29. Retrieved 2010-02-05.
  8. Amateur Photographer Magazine (UK), p. 61, 2009-10-17 {{citation}}: Missing or empty |title= (help)
  9. "The 75th Anniversary of NIKKOR Lenses". Nikon Corporation. 18 March 2008. Archived from the original on 7 April 2008. Retrieved 5 February 2010.
  10. "Corporate History". Nikon Corporation. Archived from the original on 2010-01-14. Retrieved 2010-02-05.
  11. "Canon EOS Resources: SLR Cameras - Modern Classic SLR Series". Photography in Malaysia. Retrieved 2010-02-05.
  12. "NASA F4 Electronic Still Camera". NikonWeb.com. Retrieved 2010-02-05.
  13. Ken Rockwell. "Nikon vs. Canon". Kenrockwell.com. Retrieved 2010-02-05.
  14. "Some Initial Thoughts on The Nikon D700". Luminous Landscape. 2008-07-02. Archived from the original on 2010-01-08. Retrieved 2010-02-05.
  15. "Nikon D90 plus hands-on preview". Digital Photography Review. 2008-08-27. Retrieved 2010-02-05.
  16. "Digital SLR Camera Nikon D90". Nikon Corporation. 2008-08-27. Archived from the original on 2008-08-28. Retrieved 2010-02-05.
  17. "Nikon Canada". 2010-10-29.
  18. "Nikon Canada". 2010-10-29.
  19. "Nikon Canada". 2010-10-29.
  20. "Nikon Strengthens Digital Focus for 2006". Nikon Corporation. 2006-02-14. Retrieved 2010-02-05.
  21. "Nikon to focus on digital cameras". BBC News. 2006-01-12. Retrieved 2010-02-05.
  22. "Reshaping Nikon's Film Camera Assortment". Nikon USA. 2006-01-11. Retrieved 2010-02-05.
  23. "Nikon PRONEA 600i (PRONEA 6i)". Nikon Corporation. Archived from the original on 2010-12-10. Retrieved 2010-11-08.
  24. "Nikon PRONEA S". Nikon Corporation. Archived from the original on 2010-12-10. Retrieved 2010-11-08.
  25. "A Short History of Nippon Kogaku Japan". Nikon Historical Society Online. Archived from the original on 2010-03-02. Retrieved 2010-02-05.
  26. "Nikon M Unsynced". 26 November 2003. Retrieved 2010-02-05.
  27. "Nikon S". 26 November 2003. Retrieved 2010-02-05.
  28. Karen Nakamura (26 November 2003). "Classic Cameras - Nikon S2". Retrieved 2010-02-05.
  29. "Nikon Rangefinder SP". 26 November 2003. Retrieved 2010-02-05.
  30. "Nippon Kogaku Nikon S3 Camera". 17 June 2001. Retrieved 2010-02-05.
  31. "Nikon S4 Rangefinder". 26 November 2003. Retrieved 2010-02-05.
  32. "Nikon S3M". 26 November 2003. Retrieved 2010-02-05.
  33. "Nikon S3 2000 Rangefinder". 5 April 2009. Retrieved 2010-02-05.
  34. "Nikon Rangefinder SP Black 2005". 5 April 2009. Retrieved 2010-02-05.
  35. "Nikon Compact cameras, by Nikon". Imaging.nikon.com. Archived from the original on 2009-05-01. Retrieved 2010-09-09.
  36. "Nikon D300". Nikon UK. Archived from the original on 2013-06-27. Retrieved 2008-01-17.
  37. "Nikon D300s". Nikon Global Site. 2009-07-30. Archived from the original on 2010-05-14. Retrieved 2009-07-30.
  38. "Digital-SLR camera Nikon D7000". Nikon Corporation. September 15, 2010. Archived from the original on 2010-09-18. Retrieved 2010-09-16.
  39. "Nikon D90". Nikon Corporation. August 27, 2008. Archived from the original on 2008-08-28. Retrieved 2010-09-19.
  40. "Nikon D3100". Digital SLR Cameras products line-up. Nikon Corporation. August 19, 2010. Archived from the original on 2011-03-21. Retrieved 2010-08-19.
  41. "Nikon | Digital Archives on Camera Products | 35mm Film Scanner LS-3500". Imaging.nikon.com. Archived from the original on 2010-11-02. Retrieved 2010-11-09.
  42. "35mm Film Scanner COOLSCAN (LS-10)". Imaging.nikon.com. Archived from the original on 2010-11-02. Retrieved 2010-11-09.
  43. "Nikon | Digital Archives on Camera Products | 35mm Film Scanner SUPER COOLSCAN LS-1000". Imaging.nikon.com. Archived from the original on 2010-11-02. Retrieved 2010-11-09.
  44. "Nikon | Digital Archives on Camera Products | 35mm Film Scanner COOLSCAN II (LS-20)". Imaging.nikon.com. Archived from the original on 2010-11-02. Retrieved 2010-11-09.
  45. "Nikon | Digital Archives on Camera Products | SUPER COOLSCAN 2000 (LS-2000)". Imaging.nikon.com. Archived from the original on 2010-11-02. Retrieved 2010-11-09.
  46. "Nikon | Digital Archives on Camera Products | COOLSCAN III (LS-30)". Imaging.nikon.com. Archived from the original on 2010-11-02. Retrieved 2010-11-09.
  47. "Nikon | Digital Archives on Camera Products | COOLSCAN IV ED (LS-40 ED)". Imaging.nikon.com. Archived from the original on 2010-11-02. Retrieved 2010-11-09.
  48. "Nikon | Digital Archives on Camera Products | SUPER COOLSCAN 4000 ED (LS-4000 ED)". Imaging.nikon.com. Archived from the original on 2010-11-02. Retrieved 2010-11-09.
  49. "Nikon | Digital Archives on Camera Products | SUPER COOLSCAN 8000 ED (LS-8000 ED)". Imaging.nikon.com. Archived from the original on 2010-11-15. Retrieved 2010-11-09.
  50. "Mac OS 10.5 (Leopard) compatibility". Nikon Europe. Retrieved 2010-02-05.[permanent dead link]
  51. "Nikon annual report 2008" (PDF) (Press release). Nikon Corporation. Archived from the original (PDF) on 2010-01-31. Retrieved 2010-02-05.
  52. "Trademarks". Nikon Corporation. 6 November 2009. Archived from the original on 2010-02-05. Retrieved 2010-02-05.

ಇವನ್ನೂ ಗಮನಿಸಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Portal