ನಾ. ಸೋಮೇಶ್ವರ
ಡಾ. ಸೋಮೇಶ್ವರ್,[೨] ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ[೩] ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಫ್ರತಿದಿನ ತಪ್ಪದೆ 'ಉತ್ಸಾಹ ಹಾಗೂ ಕ್ರಮಬದ್ಧತೆ'ಯಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮ ೪,000 ಕಂತುಗಳನ್ನು ದಾಟಿ ಮುಂದುವರೆದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ. ಇವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.
ಡಾ.ನಾರಪ್ಪ ಸೋಮೇಶ್ವರ | |
---|---|
ಜನನ | ಬೆಂಗಳೂರು,ಕರ್ನಾಟಕ,ಭಾರತ | ೧೪ ಮೇ ೧೯೫೫
ವಿದ್ಯಾಭ್ಯಾಸ | ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆಯಿಂದ ಬಿಎಸ್ಸಿ, ಎಂ ಬಿ ಬಿ ಎಸ್ ಸಂಸ್ಥೆ, ಬೆಂಗಳೂರು (1981–86) |
ಸಕ್ರಿಯ ವರ್ಷಗಳು | 1986–ಪ್ರಸ್ತುತ |
ಗಮನಾರ್ಹ ಕೆಲಸಗಳು | ಏಳು ಸುತ್ತಿನ ಕೋಟಿಯಲಿ ಎಂಟುಕೋಟಿ ಭಂಟರು ಮನುಷ್ಯ ದೇಹದ ಸ್ವನಿರೋಧಕ ಶಕ್ತಿಯ ಬಗ್ಗೆ ವಿವರಣೆ. |
Medical career | |
Profession | ವೈದ್ಯಕೀಯ ಪ್ರಾಕ್ಟೀಷನರ್.[೧] |
Notable prizes | ಡಾ.ಪಿ.ಎಸ್.ಶಂಕರ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, ೨೦೦೩ ರಲ್ಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ಬಿ.ಸಿ.ರಾಯ್ ಡಾಕ್ಟರ್ಸ್ ಡೇ ಅವಾರ್ಡ್, ಆರ್ಯಭಟ್ಟ ಇಂಟರ್‌ನ್ಯಾಷನಲ್ ಅವಾರ್ಡ್ |
ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮದ ಮೂಲಕ ಜನರ ಹೃದಯ ತಟ್ಟಿದವರು.[೪] ‘ಜೀವನಾಡಿ’ ಆರೋಗ್ಯ ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಬರವಣಿಗೆಗೆ ಮತ್ತು ಉಪನ್ಯಾಸಗಳೆರಡರಲ್ಲಿಯೂ ತಮ್ಮದೇ ಆದ ಶೈಲಿ ರೂಢಿಸಿಕೊಂಡವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ವೈದ್ಯವಿಶ್ವಕೋಶದಲ್ಲಿ ಇವರು ಬರೆದ ಅನುವಂಶಿಕ ರೋಗಗಳನ್ನು ಕುರಿತು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರು ದೂರದರ್ಶನದಲ್ಲಿ ವಿಜ್ಞಾನ ಹಾಗೂ ಆರೋಗ್ಯದ ಕುರಿತು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆಕಾಶವಾಣಿಯಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಜೀವನ, ಶಿಕ್ಷಣ, ವೃತ್ತಿ, ಕುಟುಂಬ
ಬದಲಾಯಿಸಿಸೋಮೇಶ್ವರ್ ಅವರು ನಾರಪ್ಪ ಹಾಗೂ ತಾಯಿ ಅಂಜನಾರವರ ಮಗನಾಗಿ ೧೪ ಮೇ ೧೯೫೫ ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು.[೫] ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆ ಸಲಹೆಗಾರರಾಗಿದ್ದಾರೆ. ಸೋಮೇಶ್ವರ್ ಅವರ ಪತ್ನಿ ರುಕ್ಮಾವತಿ.
ಡಾ|| ನಾ. ಸೋಮೇಶ್ವರರವರು ಮೂಢನಂಬಿಕೆಗಳ ನಿವಾರಣೆ, ಆರೋಗ್ಯ ಜಾಗೃತಿ, ಏಡ್ಸ್ ಕುರಿತು ಅನೇಕ ಸಂಘ-ಸಂಸ್ಥೆ, ಕಾಲೇಜುಗಳಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಅಸ್ಟ್ರಾಜೆನಿಕ್ ಫಾರ್ಮಾ ಇಂಡಿಯಾ ಲಿಮಿಟೆಡ್ ಸಂಸ್ಥೆಯುಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಥಟ್ ಅಂತ ಹೇಳಿ ಕಾರ್ಯಕ್ರಮ
ಬದಲಾಯಿಸಿ೨೦೦೪ ರಲ್ಲಿ ಚಂದನದ ನಿರ್ದೇಶಕ ವೆಂಕಟೇಶ್ವರಲುರವರ ಕಾಲದಲ್ಲಿ ಶುರುವಾದ ಕಾರ್ಯಕ್ರಮ, ಹಾಲಿ ನಿರ್ದೇಶಕ ಮಹೇಶ್ ಜೋಶಿಯವರ ಸಹಕಾರದಿಂದ ಎಡೆತಡೆಯಿಲ್ಲದೆ ಮುಂದುವರೆದಿದೆ. ಕಾರ್ಯಕ್ರಮದ ನಿರ್ಮಾಪಕರಾಗಿ ಉಷಾ ಕಿಣಿ ಮತ್ತು ಎಚ್.ಎನ್.ಆರತಿ, ಮತ್ತು ಹಾಲಿ ರಘು ಐಡಿಹಳ್ಳಿ ನೋಡಿಕೊಳ್ಳುತ್ತಿದ್ದಾರೆ. ಸೋಮೇಶ್ವರರು ಕಾರ್ಯಕ್ರಮ ವಾರದಲ್ಲಿ ಐದು ದಿನಗಳ ಕಾಲ ದಿನಕ್ಕೆ ಸುಮಾರು ೧೨ ಗಂಟೆಗಳ ಕಾಲವನ್ನು ಮೀಸಲಾಗಿಡುತ್ತಾರೆ.[೬] ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಕನಿಷ್ಠ ಪಕ್ಷ ೩ ಗಂಟೆ ತಗಲುತ್ತದೆ. ಇದರ ಸಲುವಾಗಿಯೇ ಸೋಮೇಶ್ವರ್ ರವರು, ತಮ್ಮ ಖಾಸಗಿಜೀವನದಲ್ಲಿ ಹಲವಾರು ಆದ್ಯತೆಗಳಲ್ಲಿ ರಾಜಿ ಮಾಡಿ ಕೊಂಡಿದ್ದಾರೆ.
ಪ್ರಕಟಿಸಿದ ಪುಸ್ತಕಗಳು
ಬದಲಾಯಿಸಿಇವರ ಒಟ್ಟು ಹತ್ತು ಪುಸ್ತಕಗಳು ಪ್ರಕಟಗೊಂಡಿದ್ದು ಅವುಗಳಲ್ಲಿ "ಬಹಿರಂಗ ಶುದ್ಧ", "ಏಳುಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು", "ಬದುಕು ನೀಡುವ ಬದಲೀ ಜೋಡಣೆ", “ಪ್ರಕೃತಿಯ ಸೂಪರ್ ಕಂಪ್ಯೂಟರ್-ಮಿದುಳು", ಪ್ರಮುಖವಾದವುಗಳು.
- ೩೦ ಕ್ಕೂ ಮಿಗಿಲಾದ ಪುಸ್ತಕಗಳು.
- ಏಳು ಸುತ್ತಿನ ಕೋಟೆಯಲಿ ಎಂಟುಕೋಟಿ ಬಂಟರು (ಬಹಳ ಪ್ರಸಿದ್ಧವಾದದ್ದು)
ಪ್ರಶಸ್ತಿಗಳು
ಬದಲಾಯಿಸಿ- ೨೦೦೩ ರಲ್ಲಿ ವೈದ್ಯಸಾಹಿತ್ಯ ಪ್ರಶಸ್ತಿ,[೭]
- ಡಾಕ್ಟರ್ಸ್ ಡೇ ಅವಾರ್ಡ್,
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
- ಆರ್ಯಭಟ್ಟ ಅಂತಾರಾಷ್ಟ್ರೀಯ ಪ್ರಶಸ್ತಿ
- ವಿದ್ಯಾರತ್ನ-ರಾಷ್ಟ್ರೀಯ ಪ್ರಶಸ್ತಿ
- ಡಾ|| ಬಿ.ಸಿ. ರಾಯ್ ವೈದ್ಯ ದಿನಾಚರಣೆ ಪ್ರಶಸ್ತಿ
- ರನ್ನ ಸಾಹಿತ್ಯ ಪ್ರಶಸ್ತಿ
- ಎಂ. ಜಿ. ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ
- ಸ್ನೇಹ-ಸೇತು ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ- ↑ Sampada: Kannada Magazine. Archived 2016-03-11 ವೇಬ್ಯಾಕ್ ಮೆಷಿನ್ ನಲ್ಲಿ., Sampada,6 January 2011.
- ↑ Dr. Naa Someshwara nettv4u.com, ಡಾ.ನಾ.ಸೋಮೇಶ್ವರರ ಪರಿಚಯ
- ↑ samskruti sallapa, naa. someshwara
- ↑ "ಥಟ್ ಅಂತ ಹೇಳಿ! - ಒಂದು ಪಕ್ಷಿ ನೋಟ" [Thatt Antha Heli! - A Bird's View] (in Kannada). sampada.net. Archived from the original on 17 June 2010. Retrieved 3 March 2018.
{{cite web}}
: CS1 maint: unrecognized language (link) - ↑ "ಸೋಮೇಶ್ವರ್ ಗೆ ಅರುವತ್ತು, ಥಟ್ ಅಂತ ವಿಶ್ ಮಾಡಿl" (in Kannada). filmibeat.com. 14 May 2015. Archived from the original on 17 May 2015. Retrieved 3 March 2018.
{{cite web}}
: CS1 maint: unrecognized language (link) - ↑ filmy beat, ಓದಿ, 'ಥಟ್ ಅಂತ ಹೇಳಿ!?' ರೂವಾರಿಗಳ ಸಂದರ್ಶನ * ಶ್ರೀರಾಮ್ ಭಟ್ Published: Tuesday, May 29, 2012
- ↑ ಹಿಂದೂ ದಿನಪತ್ರಿಕೆ, ವೈದ್ಯಸಾಹಿತ್ಯ ಪ್ರಶಸ್ತಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Rambling with Bellur, Posts tagged : Dr.Na.Someshwara,July, 6,2013
- ಕನ್ನಡ ಪ್ರಭ, 13 Feb 2014,ನಾ.ಸೋಮೇಶ್ವರ,'ಕಲಿಕೆ ನಿತ್ಯ ನಿರಂತರ'[ಶಾಶ್ವತವಾಗಿ ಮಡಿದ ಕೊಂಡಿ]
- Official website Archived 2017-05-12 ವೇಬ್ಯಾಕ್ ಮೆಷಿನ್ ನಲ್ಲಿ.