ಅಥರ್ವವೇದದಲ್ಲಿ ಮತ್ತು ಉಪನಿಷತ್ತುಗಳಲ್ಲಿ ನಾಡಿ ಶಬ್ದವು ಹೃದಯದಿಂದ ದೇಹದ ಇತರ ಭಾಗಗಳಿಗೆ ಅಥವಾ ಇತರ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಸೂಚಿಸುತ್ತದೆ. ಹಿತಾ ಎಂಬ ೭೨೦೦೦ ನಾಡಿಗಳು ಹೃದಯದಿಂದ ಎಲ್ಲಾ ಕಡೆಗೂ ಹರಡಿವೆ. ಜೀವಾತ್ಮ ಗಾಢ ನಿದ್ರೆಯಲ್ಲಿರುವಾಗ ಈ ನಾಡಿಗಳ ಮೂಲಕ ಹೃದಯವನ್ನು ಸೇರಿರುತ್ತಾನೆ. ಸುಷುಮ್ನಾ ಎಂಬ ನಾಡಿಯ ಮೂಲಕ ಶರೀರವನ್ನು ಬಿಡುವಾತ ಅಮೃತತ್ವವನ್ನು ಹೊಂದುತ್ತಾನೆ. ಶಾಕ್ತ ತಂತ್ರಗಳ ಪ್ರಕಾರ ನಾಡಿಗಳೆಂದರೆ ಪ್ರಾಣವನ್ನು ಒಯ್ಯುವ ಸೂಕ್ಷ್ಮವಾದ ಅಭೌತನಾಳಗಳು. ಇವುಗಳಿಗೆ ಯೋಗನಾಡಿಗಳೆಂದು ಹೆಸರು. ಇವುಗಳಲ್ಲಿ ಇಡಾ ಪಿಂಗಳ ಸುಷುಮ್ನಾ ಎಂಬಿವು ಅತ್ಯಂತ ಮುಖ್ಯವಾದುವು.

ದೇಹದಲ್ಲಿ ಲಂಬವಾಗಿ ಚಲಿಸುವ ಇಡಾ (B), ಸುಷುಮ್ನಾ (C), ಮತ್ತು ಪಿಂಗಲಾ (D) ಎಂಬ ಮೂರು ಪ್ರಮುಖ ನಾಡಿಗಳು ಅಥವಾ ಚಾನಲ್‌ಗಳನ್ನು ತೋರಿಸುವ ಭಾರತೀಯ ತತ್ತ್ವಶಾಸ್ತ್ರದ ಸೂಕ್ಷ್ಮ ದೇಹದ ಒಂದು ಸರಳೀಕೃತ ನೋಟ

ಕುಂಡಲಿನಿ ಯೋಗಕ್ಕೆ ಸಂಬಂಧಿಸಿದಂತೆ, ಮೂರು ಮುಖ್ಯ ನಾಡಿಗಳಿವೆ: ಇಡಾ, ಪಿಂಗಳಾ, ಮತ್ತು ಸುಷುಮ್ನಾ. ಇಡಾ ("ನೆಮ್ಮದಿ") ಬೆನ್ನೆಲುಬಿನ ಎಡಕ್ಕಿದೆ, ಪಿಂಗಳಾ ("ಕಂದು ಬಣ್ಣ", "ಬಂಗಾರದ ಬಣ್ಣ", "ಸೌರ") ಬೆನ್ನೆಲುಬಿನ ಬಲ ಪಾರ್ಶ್ವದಲ್ಲಿದೆ, ಮತ್ತು ಇಡಾಕ್ಕೆ ಅನುರೂಪವಾಗಿದೆ. ಸುಷುಮ್ನಾ ("ಬಹಳ ಪ್ರಭಾವಿ", "ಮೃದು") ಮಧ್ಯದಲ್ಲಿ ಬೆನ್ನುಹುರಿಯ ಉದ್ದಕ್ಕೆ ಏಳು ಚಕ್ರಗಳ ಮೂಲಕ ಸಾಗುತ್ತದೆ. ಸರಿಯಾದ ಪರಿಸ್ಥಿತಿಗಳಲ್ಲಿ, ಕುಂಡಲಿನಿಯ ಶಕ್ತಿಯು ಸುರುಳಿ ಬಿಚ್ಚಿಕೊಂಡು, ಬೆನ್ನುಹುರಿಯ ಬುಡದಲ್ಲಿರುವ ಬ್ರಹ್ಮದ್ವಾರದ ಮೂಲಕ ಸುಷುಮ್ನಾವನ್ನು ಪ್ರವೇಶಿಸುತ್ತದೆ ಎಂದು ಹೇಳಲಾಗಿದೆ.

ಮೂಲಗಳು

ಬದಲಾಯಿಸಿ