ನವಜೀತ್ ಕೌರ್ ಧಿಲ್ಲೋನ್

ನವಜೀತ್ ಕೌರ್ ಧಿಲ್ಲೋನ್ (ಜನನ ೬ ಮಾರ್ಚ್ ೧೯೯೫) ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದು ಇವರು ಚಕ್ರ ಎಸೆತಗಾರರಾಗಿ ಸ್ಪರ್ಧಿಸುತ್ತಾರೆ. ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಮಹಿಳೆಯರ ೪೧೬೫ ಒಟ್ಟಾರೆ ಶ್ರೇಯಾಂಕದಲ್ಲಿ ಅವರ ಪ್ರಸ್ತುತ ವಿಶ್ವ ಶ್ರೇಯಾಂಕವು ೪೬ ಆಗಿದೆ. [] ಅವರು ೨೦೧೮ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಅಂತಿಮ ೫೭.೪೩ ಮೀ ಎಸೆತದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದರು ಮತ್ತು ೨೦೧೪ ರಲ್ಲಿ ಅಥ್ಲೆಟಿಕ್ಸ್‌ನಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯರಾದರು. ಅವರು ೫೯.೧೮ ರ ವೈಯಕ್ತಿಕ ಶ್ರೇಷ್ಠತೆಯನ್ನು ಹೊಂದಿದ್ದಾರೆ.

ನವಜೀತ್ ಧಿಲ್ಲೋನ್
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುನವಜೀತ್ ಕೌರ್ ಧಿಲ್ಲೋನ್
ರಾಷ್ರೀಯತೆಭಾರತೀಯರು
ಜನನ (1995-03-06) ೬ ಮಾರ್ಚ್ ೧೯೯೫ (ವಯಸ್ಸು ೨೯)
ಅಮೃತಸರ, ಭಾರತ[]
Sport
ದೇಶಭಾರತ
ಕ್ರೀಡೆಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)ಚಕ್ರ ಎಸೆತ
Achievements and titles
ವೈಯಕ್ತಿಕ ಪರಮಶ್ರೇಷ್ಠಚಕ್ರ ಎಸೆತ: ೫೯.೧೮ ಮೀ (೨೦೧೮)

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನ ಕಂಚಿನ ಪದಕಕ್ಕಾಗಿ ತಮ್ಮ ನಗದು ಪ್ರಶಸ್ತಿಯನ್ನು ಸ್ವೀಕರಿಸಲು ಧಿಲ್ಲೋನ್ ಅವರು ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಅವರು ಪಂಜಾಬ್ ಸರ್ಕಾರದಿಂದ ಉದ್ಯೋಗದ ಪ್ರಸ್ತಾಪವನ್ನು ಸ್ವೀಕರಿಸುವ ಭರವಸೆಯನ್ನು ಹೊಂದಿದ್ದರು. [] ಅವರು ಪ್ರಸ್ತುತ ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. []

ಜೂನ್ ೨೦೨೨ ರಲ್ಲಿ ಡೋಪಿಂಗ್ ಉಲ್ಲಂಘನೆಯ ನಂತರ, ಅವರನ್ನು ಮೂರು ವರ್ಷಗಳ ಅವಧಿಯವರೆಗೆ ನಿಷೇಧಿಸಲಾಯಿತು. []

ವೃತ್ತಿ

ಬದಲಾಯಿಸಿ

ಅಮೃತಸರದಲ್ಲಿ ಜನಿಸಿದ ಧಿಲ್ಲೋನ್ ೨೦೧೦ ರಲ್ಲಿ ಚಕ್ರ ಎಸೆತದಲ್ಲಿ ಭಾರತೀಯ ಜೂನಿಯರ್ ಪ್ರಶಸ್ತಿಯನ್ನು ಮತ್ತು ೨೦೧೧ ರಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿಯನ್ನು ಗೆದ್ದರು. ಅವರು ೨೦೧೧ ರ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಅರ್ಹತೆಯಲ್ಲಿ ಸ್ಪರ್ಧಿಸಿ ಪ್ರವೇಶ ಪಡೆದರು. []೨೦೧೧ ರ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ತಮ್ಮ ಮೊದಲ ಪದಕವನ್ನು (ಕಂಚಿನ) ಗೆದ್ದರು. [] ಧಿಲ್ಲೋನ್ ೨೦೧೨ ರ ಭಾರತೀಯ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಶಾಟ್‌ಪುಟ್ / ಡಿಸ್ಕಸ್ ಡಬಲ್‌ನಲ್ಲಿ ಗೆದ್ದರು. ೨೦೧೨ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದರು. []

೨೦೧೩ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಾಟ್‌ಪುಟ್ ಮತ್ತು ಡಿಸ್ಕಸ್ ಎರಡರಲ್ಲೂ ಸ್ಪರ್ಧಿಸುವ ಮೂಲಕ ಧಿಲ್ಲೋನ್ ೨೦೧೩ ರ ಸೀಸನ್‌ನಲ್ಲಿ ಸೀನಿಯರ್ ಶ್ರೇಣಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. [] ೨೦೧೪ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ವಯಸ್ಸಿನ ವಿಭಾಗದಲ್ಲಿ ಪದಕಗಳು ಬಂದವು. ಅಲ್ಲಿ ಅವರು ಶಾಟ್‌ಪುಟ್‌ನಲ್ಲಿ ಮೂರನೇ ಸ್ಥಾನ ಮತ್ತು ಡಿಸ್ಕಸ್‌ನಲ್ಲಿ ಎರಡನೇ ಸ್ಥಾನ ಪಡೆದರು. [] ಅವರು ೨೦೧೪ ರ ಅಥ್ಲೆಟಿಕ್ಸ್‌ನಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ೫೬.೩೬ ರ ವೈಯಕ್ತಿಕ ಅತ್ಯುತ್ತಮ ಚಕ್ರ ಎಸೆತದೊಂದಿಗೆ ಕಂಚಿನ ಪದಕವನ್ನು ಪಡೆದು ಪ್ರಗತಿ ಸಾಧಿಸಿದರು.

೨೦೧೪ ಮತ್ತು ೨೦೧೫ ರಲ್ಲಿ ಡಿಸ್ಕಸ್‌ನ ರಾಷ್ಟ್ರೀಯ ವೇದಿಕೆಯಲ್ಲಿ ಧಿಲ್ಲೋನ್ ರವರು ಅಗ್ರಸ್ಥಾನದಲ್ಲಿದ್ದರು. ಅವರು ಹಿರಿಯರ ಶ್ರೇಣಿಗೆ ಸೇರಿದರು, ಜೊತೆಗೆ ೨೦೧೫ ರ ಭಾರತದ ರಾಷ್ಟ್ರೀಯ ಕ್ರೀಡಾಕೂಟದ ಶಾಟ್‌ಪುಟ್ ಹಾಗೂ ಚಕ್ರ ಎಸೆತ ಎರಡರಲ್ಲಿಯೂ ಭಾಗವಹಿಸಿದ್ದಾರೆ. ೨೦೧೫ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಡಿಸ್ಕಸ್‌ನಲ್ಲಿ ಆರನೇ ಸ್ಥಾನ ಪಡೆದಿದ್ದರು. ಅವರು ೨೦೧೬ ಮತ್ತು ೨೦೧೭ ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲಿಲ್ಲ. ಆದರೂ ಅವರು ಆ ವರ್ಷಗಳಲ್ಲಿ ಶಾಟ್‌ಪುಟ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು ಮತ್ತು ರಾಷ್ಟ್ರೀಯ ಡಿಸ್ಕಸ್‌ನಲ್ಲಿ ರನ್ನರ್ ಅಪ್ ಆಗಿದ್ದರು. [] ಧಿಲ್ಲೋನ್ ೨೦೧೮ ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಕ್ರ ಎಸೆತದಲ್ಲಿ ಕಂಚಿನ ಪದಕವನ್ನು ಗೆದ್ದರು - ಇದು ಅವರ ಮೊದಲ ಅಂತರರಾಷ್ಟ್ರೀಯ ಪದಕ. [೧೦] [೧೧]

ಅಂತರರಾಷ್ಟ್ರೀಯ ಸ್ಪರ್ಧೆಗಳು

ಬದಲಾಯಿಸಿ
  • ಇಂಡಿಯಾ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್
    • ಚಕ್ರ ಎಸೆತ: ೨೦೧೪, ೨೦೧೫
    • ಗುಂಡು ಎಸೆತ: ೨೦೧೬, ೨೦೧೭
  • ಭಾರತದ ರಾಷ್ಟ್ರೀಯ ಆಟಗಳು

ಉಲ್ಲೇಖಗಳು

ಬದಲಾಯಿಸಿ
  1. Navjeet Dhillon Archived 2018-04-13 ವೇಬ್ಯಾಕ್ ಮೆಷಿನ್ ನಲ್ಲಿ.. GC2018. Retrieved 2018-04-15.
  2. "Navjeet Kaur DHILLON | Profile | iaaf.org". www.iaaf.org. Retrieved 2019-07-27.
  3. "CWG 2018: Amritsar athlete Navjeet Dhillon wins bronze in discus throw". The Indian Express (in Indian English). 2018-04-13. Retrieved 2019-07-27.
  4. "Navjeet Kaur Dhillon". olympic.ind.in. Archived from the original on 2019-07-27. Retrieved 2019-07-27.
  5. "Top discus thrower Navjeet Dhillon banned for 3 years for failing dope test". The Times of India (in ಇಂಗ್ಲಿಷ್). August 28, 2022. Retrieved 2022-10-12.
  6. ೬.೦ ೬.೧ ೬.೨ Navjeet Dhillon. IAAF. Retrieved 2018-04-15.
  7. Commonwealth Youth Games 2011. World Junior Athletics History (archived). Retrieved on 2014-08-16.
  8. Krishnan, Ram. Murali (2012-06-13). Ashraf steals the show in Asian Juniors with 80.85m world junior hammer lead. IAAF. Retrieved on 2018-04-15.
  9. 16th Asian Junior Athletics Championships Men Results Archived 26 July 2014[Date mismatch] at Archive.is. Taipei2014. Retrieved on 2014-07-13.
  10. "CWG 2018: Seema Punia wins silver, Navjeet Dhillon claims bronze in discus throw". The Times of India. 12 April 2018. Retrieved 13 April 2018.
  11. "Navjeet Dhillon". 2018 Commonwealth Games. Archived from the original on 13 ಏಪ್ರಿಲ್ 2018. Retrieved 13 April 2018.


ಬಾಹ್ಯ ಕೊಂಡಿಗಳು

ಬದಲಾಯಿಸಿ