2014-15ರ-ರಾಷ್ಟ್ರೀಯ ಕ್ರೀಡಾಕೂಟ
2014-15ರ-ರಾಷ್ಟ್ರೀಯ ಕ್ರೀಡಾಕೂಟ-ತಿರುವನಂತಪುರ
ಬದಲಾಯಿಸಿ- ದಿನಾಂಕ: 4-2-2015-6-2-2015 ತಿರವನಂತಪುರದಲ್ಲಿ ನೆಟೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ, ಈಜಿನಲ್ಲಿ ಕರ್ನಾಟಕ ರಾಜ್ಯದ ಸ್ಪರ್ಧಿಗಳ ಪದಕ ಬೇಟೆಯಲ್ಲಿ ಮಾಳವಿಕಾ,ಮತ್ತು ಅರವಿಂದ್‌ಗೆ ರಜತ ಬಂದಿದೆ.
- ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಸ್ಪರ್ಧಿಗಳ ಪದಕ ಬೇಟೆ ಮುಂದುವರಿದಿದೆ. ಪುರುಷರ ವಿಭಾಗದ 200ಮೀ. ವೈಯಕ್ತಿಕ ಮೆಡ್ಲೆ ಮತ್ತು 50ಮೀ.ಬ್ಯಾಕ್‌ಸ್ಟ್ರೋಕ್‌ನಲ್ಲಿ ಎಂ.ಅರವಿಂದ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರೆ, ಮಹಿಳೆಯರ 400ಮೀ. ಫ್ರೀಸ್ಟೈಲ್‌ನಲ್ಲಿ ರಾಜ್ಯದ ವಿ. ಮಾಳವಿಕಾ ರಜತದ ಸಾಧನೆ ತೋರಿದ್ದಾರೆ.
- ಶುಕ್ರವಾರ ನಡೆದ 50 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಅರ ವಿಂದ್ 27.26 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. ಸರ್ವಿಸಸ್‌ನ ಪಿ.ಎಸ್.ಮಧು 27.02 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಸಂಭ್ರಮ ಆಚರಿಸಿದರು. ಮಧ್ಯಪ್ರದೇಶದ ರೋಹಿತ್ ಇಮೋಲಿಯಾ (ಕಾಲ: 27.22ಸೆ.) ಬೆಳ್ಳಿ ಪದಕ ಜಯಿಸಿದರು.
- 200ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿಯೂ ಮಧು ಪ್ರಾಬಲ್ಯ ಮೆರೆದರು. ಅವರು ಎರಡು ನಿಮಿಷ 8.98 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣಕ್ಕೆ ಮುತ್ತಿಟ್ಟರು. 2011ರಲ್ಲಿ ವೀರ್ ಧವಳ್ ಖಾಡೆ (ಕಾಲ: 2:11.74ಸೆ.) ನಿರ್ಮಿಸಿದ್ದ ದಾಖಲೆ ಯನ್ನು ಅವರು ಮುರಿದರು.
- ಕರ್ನಾಟಕದ ಎಂ.ಅರವಿಂದ್ ಎರಡು ನಿಮಿಷ 9.49 ಸೆಕೆಂಡುಗಳಲ್ಲಿ ಗುರಿ ಸೇರುವಲ್ಲಿ ಯಶಸ್ವಿಯಾಗಿ ರಜತ ಪದಕಕ್ಕೆ ಕೊರಳೊಡ್ಡಿದರು. ಮಧ್ಯಪ್ರದೇಶದ ಸಂದೀಪ್ ಸೆಜ್ವಾಲ್ ಈ ವಿಭಾಗದ ಕಂಚು ತಮ್ಮದಾಗಿಸಿಕೊಂಡರು.
- ಮಿಂಚಿದ ಮಾಳವಿಕಾ: ಮಹಿಳೆಯರ 400 ಮೀ. ಫ್ರೀಸ್ಟೈಲ್‌ನಲ್ಲಿ ರಾಜ್ಯದ ಮಾಳವಿಕಾ ನಾಲ್ಕು ನಿಮಿಷ 35.07ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕದ ಒಡತಿಯಾದರು.
- ಮಹಾರಾಷ್ಟ್ರದ ಆಕಾಂಕ್ಷಾ ವೋಹ್ರಾ (ಕಾಲ: 4:32.50ಸೆ.) ನೂತನ ಕೂಟ ದಾಖಲೆಯೊಂದಿಗೆ ಬಂಗಾರದ ಸಾಧನೆ ತೋರಿದರು. ಮಧ್ಯಪ್ರದೇಶದ ರಿಚಾ ಮಿಶ್ರಾ ಕಂಚಿಗೆ ತೃಪ್ತಿಪಟ್ಟರು.
- ವಾನಿಯಾ, ದಾಮಿನಿಗೆ ಕಂಚು: ಮಹಿಳೆಯರ 50ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ವಾನಿಯಾ ಕಪೂರ್ 31.40 ಸೆಕೆಂಡುಗಳಲ್ಲಿ ಮುಕ್ತಾಯದ ಗೆರೆ ಮುಟ್ಟಿ ಕಂಚು ಗೆದ್ದುಕೊಂಡರು. ಗುಜರಾತ್‌ನ ಮಾನಾ ಪಟೇಲ್ ಮತ್ತು ಮಹಾರಾಷ್ಟ್ರದ ಜ್ಯೋತ್ಸ್ನಾ ಪನ್ಸಾರೆ ಕ್ರಮವಾಗಿ ಈ ವಿಭಾಗದ ಚಿನ್ನ ಮತ್ತು ಬೆಳ್ಳಿಯನ್ನು ಒಲಿಸಿಕೊಂಡರು.
- ಮಹಿಳೆಯರ 200ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ರಾಜ್ಯದ ಈಜುಗಾರ್ತಿ ದಾಮಿನಿ ಕೆ.ಗೌಡ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
- ಅವರು ಎರಡು ನಿಮಿಷ 29.34 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿಗೆ ತೃಪ್ತಿಪಟ್ಟರು.
- ಮಧ್ಯಪ್ರದೇಶದ ರಿಚಾ ಮಿಶ್ರಾ (ಕಾಲ: 2:25.78ಸೆ.) ನೂತನ ಕೂಟ ದಾಖಲೆಯೊಂದಿಗೆ ಬಂಗಾರ ಗೆದ್ದರೆ, ತಮಿಳುನಾಡಿನ ಎ.ವಿ.ಜಯವೀಣಾ ರಜತ ತಮ್ಮದಾಗಿಸಿಕೊಂಡರು.
- ಅನಿಶಾಗೆ ಕಂಚು: ಮಹಿಳೆಯರ 1ಮೀ. ಸ್ಪ್ರಿಂಗ್ ಬೋರ್ಡ್ ಡೈವಿಂಗ್‌ನಲ್ಲಿ ರಾಜ್ಯದ ಅನಿಶಾ ಗಾಂವ್ಕರ್ 86.10 ಪಾಯಿಂಟ್ಸ್ ಕಲೆಹಾಕಿ ಕಂಚು ಗೆದ್ದುಕೊಂಡರು.
- ಈ ವಿಭಾಗದ ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಮಧ್ಯಪ್ರದೇಶದ ರಾಧಿಕಾ ಮತ್ತು ಭವಿಕಾ ಅವರ ಪಾಲಾದವು.
- ‘ಚಿನ್ನ’ದ ದೀಪಾ: ಜಿಮ್ನಾಸ್ಟಿಕ್ಸ್‌ನಲ್ಲಿ ತ್ರಿಪುರದ ದೀಪಾ ಕರ್ಮಾಕರ್ ಚಿನ್ನದ ಬೇಟೆಯಾಡಿದರು. ಅವರು ಮಹಿಳೆ ಯರ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 5 ಬಂಗಾರ ಕೊರಳಿಗೆ ಹಾಕಿಕೊಂಡರು. ಮೊದಲ ದಿನ ಮೂರು ಸ್ವರ್ಣ ಗೆದ್ದಿದ್ದ ಅವರು ಅಂತಿಮ ದಿನವಾದ ಶುಕ್ರವಾರ ‘ಫ್ಲೋರ್ ಎಕ್ಸರ್‌ಸೈಸಸ್’ ಮತ್ತು ‘ಬ್ಯಾಲೆನ್ಸ್ ಬೀಮ್’ ಸ್ಪರ್ಧೆಗಳಲ್ಲೂ ಬಂಗಾರದ ನಗು ಚೆಲ್ಲಿದರು.
- ಶೂಟಿಂಗ್‌ನಲ್ಲಿ ಸರ್ವಿಸಸ್ ಪ್ರಾಬಲ್ಯ: ಪುರುಷರ 50ಮೀ.ರೈಫಲ್–3 ಪೊಷಿಸನ್ ಸ್ಪರ್ಧೆಯಲ್ಲಿ ಸರ್ವಿಸಸ್‌ನ ಸತ್ಯೇಂದರ್ ಸಿಂಗ್ 445.5 ಪಾಯಿಂಟ್ಸ್ ಗಳಿಸಿ ಚಿನ್ನ ಗೆದ್ದರು.
- ಪದಕ ಪಟ್ಟಿಯಲ್ಲಿ ಸರ್ವಿಸಸ್ 38 ಚಿನ್ನ, 11ಬೆಳ್ಳಿ ಮತ್ತು 12 ಕಂಚು ಸೇರಿದಂತೆ 61ಪದಕ ಪಡೆದು ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದೆ.
- ಮಹಾರಾಷ್ಟ್ರ 25 ಚಿನ್ನ, 29 ಬೆಳ್ಳಿ ಮತ್ತು 20 ಕಂಚು ಒಳಗೊಂಡಂತೆ 74 ಪದಕ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, 25 ಬಂಗಾರ, 13 ರಜತ ಮತ್ತು 6 ಕಂಚು ಸೇರಿದಂತೆ 44ಪದಕ ಗಳಿಸಿರುವ ಹರಿಯಾಣ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
- ಎರಡು ಚಿನ್ನ ಹಾಗೂ ತಲಾ 13 ಬೆಳ್ಳಿ ಹಾಗೂ ಕಂಚಿನೊಟ್ಟಿಗೆ 28 ಪದಕ ಗೆದ್ದಿರುವ ಕರ್ನಾಟಕ 16ನೇ ಸ್ಥಾನದಲ್ಲಿದೆ.
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Kerala to host 35th National Games from January 31". The Hindu. 27 June 2014. Retrieved 27 June 2014.
- ↑ "Sachin Tendulkar to be goodwill ambassador for national games". The Hindu. 28 May 2014. Retrieved 27 June 2014.
- ↑ "Glitter and glamour mark opening ceremony". January 31, 2015.
- ↑ "Indian National Games 2015 Kerala Schedule - Calendar". Indian Crux. 4 December 2014. Retrieved 21 January 2014.
- ↑ "Green rules of the National Games". Thehindu.com. 9 February 2015. Retrieved 18 April 2018.
- ↑ ಪ್ರಜಾವಾಣಿ ೭-೨-೨೦೧೫