ನಯನ ಸೂಡ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ನಯನ ಜೆ ಸೂಡ, ಕನ್ನಡ ರಂಗಭೂಮಿಯ ಸಕ್ರೀಯ ಕಲಾವಿದೆ, ನಿರ್ದೇಶಕಿ, ವಸ್ತ್ರ ವಿನ್ಯಾಸಕಿ, ರಂಗ ವಿನ್ಯಾಸಕಿ ಮತ್ತು ಸಂಘಟಕಿ. 7 ನೇ ವಯಸ್ಸಿನಲ್ಲಿ ನಾಟಕದಲ್ಲಿ ಪಾತ್ರ ಮಾಡುವಗಿನಿಂದ ಇಲ್ಲಿಯವರೆಗೆ ಸುಮಾರು 20ಕ್ಕೂ ಹೆಚ್ಚು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.[೧] ರಂಗಪಯಣ ಎಂಬ ಸಾಂಸ್ಕೃತಿಕ ಸಂಸ್ಥೆಯ ಮೂಲಕ ಹೊಸ ಹೊಸ ನಾಟಕಗಳನ್ನು ಕಟ್ಟಿ ರಂಗ ಕ್ರಿಯೆಯಲ್ಲಿ ನಿರಂತರವಾಗಿ ಕೆಲಸ ಮಾಡುತಿದ್ದಾರೆ.
ನಯನ ಸೂಡ | |
---|---|
Nationality | ಭಾರತೀಯ |
Education | ಎಂ.ಎ |
Alma mater | ನ್ಯಾಷನಲ್ ಕಾಲೇಜು, ಬೆಂಗಳೂರು |
Occupation(s) | ನಟಿ, ನಿರ್ದೇಶಕಿ, ರಂಗ ಸಂಘಟಕಿ, ವಿನ್ಯಾಸಕಿ |
Years active | 20+ |
Organisation | ರಂಗಪಯಣ |
Works | ಗುಲಾಬಿ ಗ್ಯಾಂಗು, ಚಂದ್ರಗಿರಿಯ ತೀರದಲ್ಲಿ, ನವರಾತ್ರಿ ಕೊನೆಯ ದಿನಗಳು |
Spouse | ರಾಜ್‌ಗುರು ಹೊಸಕೋಟೆ |
ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ
ಬದಲಾಯಿಸಿಕರಾವಳಿಯ ಉಡುಪಿ ಜಿಲ್ಲೆ ಕಾರ್ಕಳದ ಸಮೀಪ ಹೆಬ್ರಿ ಗ್ರಾಮಕ್ಕೆ ಸೇರಿದ ದಂಪತಿಗಳ ಮಗಳಾಗಿ ಹುಟ್ಟಿದ್ದು ಶಿವಮೊಗ್ಗ ಪಟ್ಟಣದಲ್ಲಿ. ತಮ್ಮ ಕುಟುಂಬದೊಂದಿಗೆ 4 ನೇ ವಯಸ್ಸಿನಲ್ಲಿ ಬೆಂಗಳೂರಿನ ಕೆ ಆರ್ ಪುರಕ್ಕೆ ವಲಸೆ ಬಂದಿರುತ್ತಾರೆ. ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಬಿ ನಾರಾಯಣಪುರದ ಸರ್ಕಾರಿ ಶಾಲೆಯಲ್ಲಿ ಮತ್ತು ಪದವಿ ಪೂರ್ವ ಶಿಕ್ಷಣವು ಸರ್ಕಾರಿ ಪ.ಪೂ ಕಾಲೇಜು ಕೆ ಆರ್ ಪುರದಲ್ಲಿ ಪೂರ್ಣಗೊಂಡಿತು. ಪದವಿಯನ್ನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡು ಸದ್ಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ʼಮಹಿಳಾ ಅಧ್ಯಯನʼ ವಿಭಾಗದಲ್ಲಿ ಶಿಕ್ಷಣ(ಪಿ.ಎಚ್ ಡಿ) ಮುಂದುವರೆಸಿದ್ದಾರೆ.
ರಂಗಭೂಮಿ
ಬದಲಾಯಿಸಿತನ್ನ ಏಳನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶ ಮಾಡಿದ ನಯನ, ಅಲ್ಲಿಂದ ಸತತವಾಗಿ ಯಾವುದೇ ಹಂತದಲ್ಲೂ ವಿರಾಮ ಕೊಡದೆ ಇಲ್ಲಿಯವರೆಗೂ ಸಕ್ರಿಯಳಾಗಿದ್ದಾರೆ. ನಾಡಿನ ಎಲ್ಲಾ ಪ್ರಮುಖ ರಂಗವೇದಿಕೆಗಳಲ್ಲಿ ಅಭಿನಯಿಸುವುದರ ಜೊತೆಗೆ ದೇಶದ ಅನೇಕ ವೇದಿಕೆಗಳಲ್ಲಿ ಅಂದರೆ ಮುಂಬೈ, ಕಾನ್ಪುರ್, ದೆಹಲಿ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ನಟಿಸಿ ರಂಗಾಭಿಮಾನಿಗಳ ಪ್ರೀತಿಗೆ ಪಾತ್ರಳಾಗಿದ್ದರೆ. ರಂಗಭೂಮಿಯಿಂದಲೇ ದೇಶವನ್ನು ಸುತ್ತಿರುವ ಅವರ ನಟನೆಗಾಗಿ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳು ಸಂದಿವೆ.
ಸಾಹಿತ್ಯವೆಂಬುದು ಸಮಾಜದ ಕನ್ನಡಿಯೆಂಬುದು ಎಲ್ಲರಿಗೂ ತಿಳಿದ ವಿಷಯ. ಈ ಸಾಹಿತ್ಯವನ್ನು ನಾಟಕದ ಮೂಲಕ ಜನರನ್ನು ತಲುಪಿಸುವ ಕೆಲಸ ತುಂಬಾ ಹಿಂದಿನಿಂದಲೂ ನಡೆದು ಬಂದಿದೆ. ಇದಕ್ಕೆ ನಯನ ಕೂಡ ಹೊರತಲ್ಲ. ಕನ್ನಡ ಮೇರು ಸಾಹಿತಿಗಳಾದ ಕುವೆಂಪು ಅವರಿಂದ ಹಿಡಿದು, ಈಗಿನ ಹಿರಿಯ - ಕಿರಿಯ ಸಾಹಿತಿಗಳವರೆಗೆ ಅನೇಕರ ನಾಟಕಗಳಿಗೆ ಬಣ್ಣಹಚ್ಚಿದ್ದಾರೆ.
ರಂಗಪ್ರವೇಶ
ಬದಲಾಯಿಸಿಸಿ.ಲಕ್ಷ್ಮಣ್ ಅವರ ಗರಡಿಯಲ್ಲಿ "ಕಾರಣಿಕ ಶಿಶು" ಎಂಬ ನಾಟಕದ ಮೂಲಕ ರಂಗ ಪ್ರವೇಶ ಪಡೆದ ನಯನ, ಅದೇ ನಾಟಕವನ್ನು ಸುಮಾರು ಐನ್ನೂರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ಇದರ ನಡುವೆ ಕುವೆಂಪುರವರ ನನ್ನ ಗೋಪಾಲ, ಮೋಡಣ್ಣನ ತಮ್ಮ, ಬೊಮ್ಮನ ಹಳ್ಳಿ ಕಿಂದರಿ ಜೋಗಿ ಅಲ್ಲದೆ, ಉದರಂ ಸರ್ವಾಂಗ ಪೋಷಕಂ (ತೊಗಲು ಗೊಂಬೆಯಾಟ), ಬೆಂಗಳೂರಿಗೆ ಬಂದ ನಾರದ, ಸ್ವಾತಂತ್ರ್ಯ ದೀಪಿಕೆ, ಝಾನ್ಸಿರಾಣಿ ನೃತ್ಯ ನಾಟಕ, ಸಂಗೊಳ್ಳಿರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಮಕ್ಕಳಿರ ಹೂ ಕೀಳಬೇಡಿ, ಸಿಂಡ್ರಲಾ, ಗುರುಮೂರ್ತಪ್ಪನ ತೋಟ, ತ್ಯಾಗಿ ಲಕ್ಷ್ಮಿ, ಹಾಗೂ ಇನ್ನೂ ಅನೇಕ ಮಕ್ಕಳ ನಾಟಕಗಳಲ್ಲಿ ಭಿನ್ನ ಭಿನ್ನ ಪಾತ್ರಗಳನ್ನು ಸಾವಿರಾರು ಪ್ರದರ್ಶನಗಳಿಗೆ ಬಣ್ಣ ಹಚ್ಚಿದ್ದಾರೆ.
ನಂತರ ಪದವಿ ಅಧ್ಯಯನ ನಮಯದಲ್ಲಿ ನಟಿಯಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಅವುಗಳಲ್ಲಿ ಹಳ್ಳಿಯೂರ ಹಮ್ಮೀರ, ಚಿರಸ್ಮರಣೆ, ಭಾರತಾಂಬೆ, ಗಾಜಿಪುರದ ಹಜಾಮ, ದೇವರೆಂಬ ಹೆಸರಿನಲ್ಲಿ, ನನಗ್ಯಾಕೊ ಡೌಟು, ಸಂಗ್ಯಾಬಾಳ್ಯ, ಬುಡುಗನಾದ, ನಾಡಪ್ರಭು ಕೆಂಪೆಗೌಡ, ಖರೆಖರೆ ಸಂಗ್ಯಾಬಾಳ್ಯ, ಜಲಗಾರ, ಬಲಿದಾನ, ಬಿರುಗಾಳಿ, ಕಾನೀನ, ಏಕಲವ್ಯ, ಮಿತ್ತಬೈಲ್ ಯಮುನಕ್ಕ, ಹುಲಿ ಹಿಡಿದ ಕಡಸು, ಮುದ್ಧಣ್ಣನ ಪ್ರಮೋಷನ್ ಪ್ರಸಂಗ, ಅಂತಿಗೊನೆ, ದೊರೆ ಇಡಿಪಾಸ್, ಬದುಕು ಜಟಕ ಬಂಡಿ, ಕ್ರಾಂತಿ, ಮಾಮ ಮೋಷಿ, ಶಿವಿ, ಕರ್ಪೂರದ ಗೊಂಬೆ, ಗುಬ್ಬಿಯ ಗೂಡಲ್ಲಿ, ಅಪ್ಪ, ಕಿನ್ನುಡಿ ಬೆಳಕಲ್ಲಿ. ಶರೀಫ, ಜೇನು ಹುಡುಗಿ, ಕೇಂಪೇಗೌಡ ನೃತ್ಯ ನಾಟಕ, ಅರಹಂತ, ಅವನಿ ಸೇರಿದಂತೆ ಅನೇಕ ನಾಟಕಗಳಲ್ಲಿನ ಅದೆಷ್ಟೊ ಪಾತ್ರಗಳಿಗೆ ಜೀವ ತುಂಬಿಸಲು ಪ್ರಯತ್ನಿಸಿದ್ದಾರಲ್ಲದೆ ಈ ನಾಟಕಗಳ ಮರು ಪ್ರದರ್ಶನಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ರಂಗ ನಿರ್ದೇಶಕಿಯಾಗಿ
ಬದಲಾಯಿಸಿಪದವಿ ಶಿಕ್ಷಣಕ್ಕೆ ನ್ಯಾಷನಲ್ ಕಾಲೇಜಿಗೆ ಬಂದ ನಯನ, ಕಾಲೇಜಿನ ಇಂಟರ್ ಕ್ಲಾಸ್ ಡ್ರಾಮ ಕಾಂಪಿಟೇಷನ್ ಅಲ್ಲಿ ಲೋರ್ಕ ಅವರ ಯರ್ಮ ನಾಟಕವನ್ನು ನಿರ್ದೇಶಿಸಿ ಅಭಿನಯಿಸುವ ಮೂಲಕ ನಾಟಕ ನಿರ್ದೇಶನಕ್ಕೆ ಅಡಿಯಿಟ್ಟರು. ಕಾಲೇಜಿನ ದಿನಗಳಲ್ಲಿ ಯರ್ಮ, ಮಂಥರಾ ಹಾಗೂ ಮೌನ ಕೋಗಿಲೆ, ಮಾದರ ಚೆನ್ನಯ್ಯ[೨] ನಾಟಕಗಳನ್ನು ನಿರ್ದೇಶಿಸಿದ್ದರು. ಮುಂದೆ ಸಾರ ಅಬೂಬ್‌ಕ್ಕರ್ ಅವರ ಚಂದ್ರಗಿರಿ ತೀರದಲ್ಲಿ ಕಾದಂಬರಿಯನ್ನು ರಂಗರೂಪಕ್ಕೆ ತಂದು ಆ ನಾಟಕವನ್ನು ನಿರ್ದೇಶಿಸಿದರು.[೩] ಈ ನಾಟಕವೂ ಕೂಡ ಅನೇಕ ಯುವ ನಟ-ನಟಿಯರಿಗೆ ವೇದಿಕಯಾಯಿತು. ದೇಶದ ನಾನ ಪ್ರಮುಖ ರಂಗವೇದಿಕೆಗಳಲ್ಲಿ ಈ ನಾಟಕ ಪ್ರದರ್ಶನವಾಯಿತು. ಅಂತರ್ ರಾಷ್ಟ್ರೀಯ ನಾಟಕೋತ್ಸವದಲ್ಲೂ ಪ್ರದರ್ಶನವಾಗಿ ಹೆಸರು ಗಳಿಸಿತ್ತು. ಈ ನಾಟಕ ಮೈಸೂರಿನಲ್ಲಿ ನಡೆದ "ಬಹುರೂಪಿ" ನಾಟಕೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನಗೊಂಡಿದೆ. ಕನ್ನಡ ಪತ್ರಿಕಾ ಮಾಧ್ಯಮಗಳಲ್ಲಿ ಅಲ್ಲದೆ ಇಂಗ್ಲಿಷ್ ಪತ್ರಿಕೆಗಳಲ್ಲೂ ನಾಟಕದ ಬಗ್ಗೆ ಸಕಾರಾತ್ಮ ವಿಮರ್ಶೆಗಳು ಬಂದವು.
ರಂಗ ಸಂಘಟಕಿಯಾಗಿ
ಬದಲಾಯಿಸಿನಗರದ ಪ್ರತಿಷ್ಠಿತ ಸಮುದಾಯಗಳ ನಿರ್ಲಕ್ಷಕ್ಕೆ ಒಳಗಾಗಿರುವ, ನಮ್ಮ ನಗರವನ್ನು ಸದಾ ಸ್ವಚ್ಛವಾಗಿಡಲು ಶ್ರಮಿಸುವ ಕೊಳಗೇರಿನಿವಾಸಿಗಳ ಮಕ್ಕಳಿಗೆ ಉಚಿತ ರಂಗ ತರಬೇತಿಯನ್ನು ನೀಡುವ ಮೂಲಕ ರಂಗಭೂಮಿಯ ಕಲಿಕೆಯನ್ನು ವಿಸ್ತರಿಸಿಕೊಂಡ ನಯನಗೆ, ಬೇರೆ ಬೇರೆ ಊರುಗಳಿಂದ ಬಂದು ಶೆಡ್ ಹಾಕಿಕೊಂಡ ಕೂಲಿ ಕಾರ್ಮಿಕರ ಮಕ್ಕಳಿಗೆ ರಂಗ ತರಬೇತಿ, ನಂತರ ಬಡ ಸರ್ಕಾರಿ ಶಾಲೆ ಮಕ್ಕಳಿಗೆ, ಬಾಲಾಪರಾಧಿಗಳಿಗೆ ತಿಂಗಳುಗಳ ಕಾಲ ಉಚಿತ ರಂಗ ಶಿಕ್ಷಣ ನೀಡುವ ಅವಕಾಶ ಒಲಿದಿದ್ದು ರಂಗಭೂಮಿಯಿಂದಲೇ. ಬೀದಿ ನಾಟಕಗಳ ಮೂಲಕ ಸಾಮಾಜಿಕ ಜಾಗೃತಿಗಳಲ್ಲಿ ತೊಡಗಿಸಿಕೊಂಡಿದ್ದು ಅಲ್ಲದೆ ಸಾಮಾಜಿಕ ಜಾಗೃತಿಗಾಗಿ ಏರ್ಪಡಿಸುವ ಅನೇಕ ರಂಗ ಶಿಬಿರಗಳಲ್ಲಿ ಸ್ವಯಂ ಪ್ರೇರಣೆಯಿಂದ ಸಕ್ರೀಯವಾಗಿ ಭಾಗವಹಿಸುತಿದ್ದಾರೆ.
ನಾಟಕಗಳು
ಬದಲಾಯಿಸಿಅಕ್ಕಯ್
ಬದಲಾಯಿಸಿಸಿನೆಮಾ
ಬದಲಾಯಿಸಿಪ್ರಶಸ್ತಿ ಮತ್ತು ಗೌರವ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ೧.೩ "ರಂಗಭೂಮಿಯ ಬಹುಪ್ರತಿಭೆ ನಯನಾ". Asianet ಸುವರ್ಣ ನ್ಯೂಸ್. 11 April 2018.
{{cite news}}
: Check date values in:|date=
(help) - ↑ ಸಮತಳ, ಕಾವ್ಯ (2 ಜನವರಿ 2018). "ಹೆಣ್ಣು ಮಕ್ಕಳ ಗ್ಯಾಂಗ್ ವಾರ್". ಪ್ರಜಾವಾಣಿ.
- ↑ KARNOOR, MAITHREYI (16 June 2016). "By the banks of Chandragiri". The Hindu.
- ↑ ತಥಾಗತ, ಪುನೀತ್ (20 ಮಾರ್ಚ್ 2022). "ರಂಗಭೂಮಿ: ಪದ್ಮಶಾಲಿ ಅಕ್ಕಯ್ - ಬದುಕಿಗಾಗಿ ನಡೆಸಿದ ಹೋರಾಟದ ಕಥನ". ಪ್ರಜಾವಾಣಿ.
{{cite news}}
: Check date values in:|date=
(help) - ↑ ANANDRAJ, SHILPA (March 03, 2022). "Watch a play inspired by Akkai Padmashali". The Hindu.
{{cite news}}
: Check date values in:|date=
(help)