ನಮ್ಮಣ್ಣ ಡಾನ್ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ನಮ್ಮಣ್ಣ ಡಾನ್ 2012 ರಲ್ಲಿ ಬಿಡುಗಡೆಯಾದ ಕನ್ನಡ ಹಾಸ್ಯ ಚಲನಚಿತ್ರವಾಗಿದ್ದು, ರಮೇಶ್ ಅರವಿಂದ್, ಮೋನಾ ಪರ್ವರೇಶ್ ಮತ್ತು ಸನಾತಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಮೇಶ್ ಅವರೇ ಡಿಬಿಸಿ ಶೇಖರ್ ಅವರೊಂದಿಗೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಮ್ಯಾಥ್ಯೂ ಮನು ಚಿತ್ರದ ಸಂಗೀತ ನಿರ್ದೇಶಕರು. ರಮೇಶ್ ಅವರ ಸೋದರ ಮಾವ ರವಿ ಜೋಶಿ ಅವರು ಲವ ಕುಶ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. []

ಪಾತ್ರವರ್ಗ

ಬದಲಾಯಿಸಿ
  • ರಮೇಶ್ ಅರವಿಂದ್
  • ಮೋನಾ ಪರ್ವರೇಶ್
  • ಸನಾತಿನಿ
  • ರಾಜು ತಾಳಿಕೋಟಿ
  • ರಾಜೇಂದ್ರ ಕಾರಂತ್
  • ನಿತೇಶ್ ನಿಟ್ಟೂರು
  • ಸುನಯನಾ ಸುರೇಶ್
  • ವೀಣಾ ಭಟ್
  • ಅಚ್ಯುತ್ ರಾವ್
  • ಲಯೇಂದ್ರ

ವಿಮರ್ಶೆಗಳು

ಬದಲಾಯಿಸಿ

ಚಲನಚಿತ್ರವು ಅದರ ವಿಷಯಕ್ಕಾಗಿ ಪ್ರಶಂಸೆಗಳೊಂದಿಗೆ ಉತ್ತಮ ವಿಮರ್ಶೆಗಳನ್ನು ಪಡೆಯಿತು. IBNLive.com ವಿಮರ್ಶಿಸುತ್ತ ಹೇಳಿತು, "ಅದರ ಊಹೆಯ ಪ್ರಕಾರವೇ ಚಿತ್ರವು ಸಾಗಿದರೂ, 'ನಮ್ಮಣ್ಣ ಡಾನ್' ಮುಖ್ಯವಾಗಿ ಅದರ ತಂಗಾಳಿಯಂಥ ನಿರೂಪಣೆಯಿಂದಾಗಿ ಗೆಲ್ಲುತ್ತದೆ. ಚಿತ್ರದಲ್ಲಿ ಹಾಸ್ಯ ಮತ್ತು ಭಾವನಾತ್ಮಕ ದೃಶ್ಯಗಳೆರಡಕ್ಕೂ ಜಾಗವಿದೆ. ಈ ಎಲ್ಲಾ ಅಂಶಗಳು 'ನಮ್ಮಣ್ಣ ಡಾನ್' ಅನ್ನು ಸಾಕಷ್ಟು ಹಾಸ್ಯಮಯ ಸನ್ನಿವೇಶಗಳೊಂದಿಗೆ ಸಂವೇದನಾಶೀಲ, ಮನತಟ್ಟುವ, ಆದರೂ ಮನರಂಜನೆಯ ಚಿತ್ರವನ್ನಾಗಿ ಮಾಡಿದೆ. ಪ್ರಸ್ತುತಿಯು ಚಲನಚಿತ್ರವನ್ನು ಎಲ್ಲಾ ರೀತಿಯಲ್ಲಿ ಗೆಲ್ಲಿಸಿದೆ". [] DNAIndia.com 5 ರಲ್ಲಿ 2.5 ನಕ್ಷತ್ರಗಳನ್ನು ನೀಡಿತು ಮತ್ತು "ಚಿತ್ರದ ಅತ್ಯುತ್ತಮ ವಿಷಯವೆಂದರೆ ಹಿಂಸೆಯ ಸಂಪೂರ್ಣ ಗೈರುಹಾಜರಿ . ಚಿತ್ರವು ಹಾಸ್ಯದ ಮೂಲಕ ಸಂದೇಶವೊಂದನ್ನು ತಲುಪಿಸಿದೆ; ಹೌದು, ನೀವು ಖಂಡಿತವಾಗಿಯೂ ನಿಮ್ಮ ಕುಟುಂಬವನ್ನು ತೆಗೆದುಕೊಂಡು ಚಿತ್ರವೀಕ್ಷಣೆಗೆ ಹೋಗಬಹುದು". []

ಧ್ವನಿಮುದ್ರಿಕೆ

ಬದಲಾಯಿಸಿ

ಮ್ಯಾಥ್ಯೂಸ್ ಮನು ಅವರು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ []

  • "ಈ ಜೀವ ನಿನಗಾಗಿ" - ರಾಜೇಶ್ ಕೃಷ್ಣನ್
  • "ಬೊಂಗು ಬೊಂಗು" - ಜೋಗಿ ಸುನೀತ
  • "ಜುಂಬಾಲಕ ಸಕ್ಕತ್" - ಮ್ಯಾಥ್ಯೂಸ್ ಮನು

ಉಲ್ಲೇಖಗಳು

ಬದಲಾಯಿಸಿ
  1. "Kannada Movie/Cinema News - MY HOO DON NAHI ?NAMMANNA DON?". Chitratara.com. Retrieved 2020-01-20.
  2. 00000. "News18.com: CNN-News18 Breaking News India, Latest News Headlines, Live News Updates". Ibnlive.in.com. Archived from the original on 2013-09-22. Retrieved 2020-01-20. {{cite web}}: |last= has numeric name (help)
  3. "Review: 'Nammanna Don' (Kannada)". Dnaindia.com. 2012-02-18. Retrieved 2020-01-20.
  4. "Nammanna". 123musiq.com. Retrieved 2020-01-20.

ಬಾಹ್ಯ ಕೊಂಡಿಗಳು

ಬದಲಾಯಿಸಿ