ನಜ್ಹತ್ ಪರ್ವೀನ್
ನಜ್ಹತ್ ಮಾಸಿಹ್ ಪರ್ವೀನ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗು ವಿಕೇಟ್ ಕೀಪರ್. ದೇಶಿ ಕ್ರಿಕೆಟ್‍ನಲ್ಲಿ ಮಧ್ಯ ಪ್ರದೇಶ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ.[೧][೨]
ಆರಂಭಿಕ ಜೀವನ
ಬದಲಾಯಿಸಿನಜ್ಹತ್ ಪರ್ವೀನ್ ರವರು ಸೆಪ್ಟಂಬರ್ ೫, ೧೯೯೬ರಂದು ಮಧ್ಯ ಪ್ರದೇಶದಲ್ಲಿ ಜನಿಸಿದರು. ನಜ್ಹತ್, ಮಾಸಿಹ್ ಆಲಂ ಮತ್ತು ನಸಿಮಾ ಬೇಗಮ್‌ರವರ ಪುತ್ರಿ. ಇವರಿಗೆ ನಾಲ್ಕು ಜನ ಒಡಹುಟ್ಟಿದವರು, ಹಿರಿಯ ಸಹೋದರ ಸೋಹೈಲ್, ಹಿರಿಯ ಸಹೋದರಿ ನೆಮತ್ ಪರ್ವೀನ್, ಕಿರಿಯ ಸಹೋದರಿ ಆಶಿಯಾ ಪರ್ವೀನ್ ಮತ್ತು ಕಿರಿಯ ಸಹೋದರ ಅಯಾನ್ ಅಶ್ರಫ್. ನಜ್ಹತ್ ತಮ್ಮ ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಬೀದಿಯಲ್ಲಿ ಕ್ರಿಕೆಟ್ ಆಟವಾಡುತಿದ್ದರು. ಕ್ರಿಕೆಟ್ ಆಡುವ ಮೊದಲು ಇವರು ಫೂಟ್‍ಬಾಲ್ ಆಟದಲ್ಲಿ ಮಧ್ಯ ಪ್ರದೇಶವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ರಾಜ್ಯ ಮಟ್ಟದ ೧೦೦ ಮೀ ಓಟದ ಸ್ಪರ್ದೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರ ಪೋಷಕರು ಇವರಿಗೆ ಕ್ರೀಡೆಯಲ್ಲಿ ಬಹಳ ಬೆಂಬಲವನ್ನು ನೀಡಿದ್ದಾರೆ, ಆದರೂ ಸಾಮಾಜಿಕ ಒತ್ತಡ ಇವರ ಮೇಲೆ ಇದ್ದಿತು ಆದರೆ ಇವರು ೨೦೧೭ರ ವಿಶ್ವಕಪ್ ಆಡಿದಾಗ ಈ ದೋರಣಗಳು ದೂರವಾದವು.[೩][೪][೫][೬][೭]
ವೃತ್ತಿ ಜೀವನ
ಬದಲಾಯಿಸಿಪ್ರಥಮ ದರ್ಜೆ ಕ್ರಿಕೆಟ್
ಬದಲಾಯಿಸಿದೇಶಿ ಕ್ರಿಕೆಟ್‍ನಲ್ಲಿ ಮಧ್ಯ ಪ್ರದೇಶ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ. ೨೦೧೧ರಲ್ಲಿ ಸಿಂಗ್ರಾಲಿನ ಅಂತರ-ಜಿಲ್ಲಾ ಪಂದ್ಯಾವಳಿಯಲ್ಲಿ ಜಿಲ್ಲಾ ಮಹಿಳಾ ತಂಡ ರಚಿನೆಯಾದಾಗ ಇವರ ಕ್ರಿಕೆಟ್ ವೃತ್ತಿ ಆರಂಭವಾಯಿತು.ಜಿಲ್ಲಾ ಕ್ರಿಕೆಟ್ ಆಡಳಿತವು ಸಾಕಷ್ಟು ಆಟಗಾರರನ್ನು ಹೊಂದಿರಲಿಲ್ಲ ಆಗ ಜೂನಿಯರ್ ರಾಷ್ಟ್ರೀಯ ಫೂಟ್‍ಬಾಲ್ ಆಟಗಾರರಾಗಿದ್ದ ನುಜತ್ ಅವರನ್ನು ಕ್ರಿಕೆಟ್ ತಂಡದ ಭಾಗವಾಗಿ ಆಹ್ವಾನಿಸಲಾಯಿತು. ಸಿಂಗ್ರಾಲಿ ತಂಡವನ್ನು ಪ್ರತಿನಿಧಿಸುವ ಅಂತರ-ಜಿಲ್ಲೆಯ ಕ್ರಿಕೆಟ್ ತಂಡದಲ್ಲಿ ಇವರು ವಿಕೆಟ್-ಕೀಪರ್ ಆಗಿ ಆಟವಾಡಿದರು.ಇವರ ಆಟದ ವೈಖರಿಯನ್ನ ಗುರುತಿಸಿ ಮಧ್ಯ ಪ್ರದೇಶದ ಅಂಡರ್ -೧೯ ಮಹಿಳಾ ಕ್ರಿಕೆಟ್ ತಂಡದಲ್ಲಿ ಇವರಿಗೆ ವಿಶೇಷ ಸ್ಥಾನ ನೀಡಲಾಯಿತು. ೨೦೧೨-೧೩ರಲ್ಲಿ, ಇವರ ವೈಖರಿಯ ಆಧಾರದ ಮೇಲೆ, ಇವರು ಮಧ್ಯ ವಲಯದ ಅಂಡರ್ -೧೯ ಮಹಿಳಾ ಕ್ರಿಕೆಟ್ ತಂಡದ ಉಪ-ನಾಯಕಯಾಗಿ ನೇಮಕಗೊಂಡರು. ಇವರು ರೇವಾ ಕ್ರಿಕೆಟ್ ಅಸೋಸಿಯೇಷನ್ ತರಬೇತುದಾರರಾದ ಅರ್ಲ್ ಅಂಥೋನಿ ರವರ ತರಬೇತಿಯನ್ನು ಪಡೆದರು. ಇವರು ಸಿಂಗ್ರಾಲಿನಿಂದ ರೇವಾಕ್ಕೆ ಒಂಬತ್ತು ಗಂಟೆಗಳ ಕಾಲ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದರು, ೦೩ ತಿಂಗಳಿನಲ್ಲಿ ೧೫-೨೦ ದಿನಗಳ ಕಾಲ ತಮ್ಮ ತರಬೇತುದಾರರಿಂದ ಅಭ್ಯಾಸ ನಡೆಸುತ್ತದ್ದರು. ನಜ್ಹತ್ ಪರ್ವೀನ್‍ರ ಪ್ರಕಾರ, ಇವರು ಆಗಾಗ್ಗೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದದು ಇವರ ಪೋಷಕರಿಗೆ ಚಿಂತೆ ಉಂಟು ಮಾಡುತಿತ್ತು.[೮][೯]
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಮೇ ೧೫, ೨೦೧೭ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಐರ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ೦೮ನೇ ಏಕದಿನ ಪಂದ್ಯದ ಮೂಲಕ ನಜ್ಹತ್ ಪರ್ವೀನ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೧೮, ೨೦೧೮ರಲ್ಲಿ ವಿಜಯವಾಡದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಪರ್ವೀನ್ ಮೂಲಕ ನಜ್ಹತ್ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೦][೧೧]
ಪಂದ್ಯಗಳು
ಬದಲಾಯಿಸಿ- ಏಕದಿನ ಕ್ರಿಕೆಟ್ : ೦೧ ಪಂದ್ಯಗಳು[೧೨]
- ಟಿ-೨೦ ಕ್ರಿಕೆಟ್ : ೧೩ ಪಂದ್ಯಗಳು
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2018-10-11. Retrieved 2019-01-07.
- ↑ https://www.cricbuzz.com/profiles/11887/nuzhat-parween
- ↑ https://www.firstpost.com/sports/icc-womens-world-cup-2017-nuzhat-parween-has-the-ability-to-make-full-use-of-limited-chances-3531331.html
- ↑ https://www.news18.com/cricketnext/news/mp-small-town-girl-picked-for-icc-world-cup-2017-1416529.html
- ↑ https://www.mykhel.com/cricket/nuzhat-parveen-new-kid-on-the-block-indian-women-s-cricket-007771.html
- ↑ https://femalecricket.com/female-cricket-blogs/884-interview-with-nuzhat-parween.html
- ↑ http://www.lhrtimes.com/2017/07/24/bcci-money-will-help-daughter-buy-new-house-says-woman-wks-father/
- ↑ https://cricketarchive.com/Archive/Players/1164/1164047/1164047.html
- ↑ https://www.thequint.com/sports/cricket/nuzhat-parween-to-play-india-women-cricket-world-cup
- ↑ http://www.espncricinfo.com/series/11118/scorecard/1089527/india-women-vs-ireland-women-8th-match-womens-quadrangular-series--in-south-africa--2017
- ↑ http://www.espncricinfo.com/series/10845/scorecard/1063546/india-women-vs-west-indies-women-1st-t20i-wi-women-tour-of-india-2016-17
- ↑ http://www.espncricinfo.com/india/content/player/960973.html