ದ ಕ್ರೋನಿಕಲ್ಸ್ ಆಫ್ ನಾರ್ನಿಯಾ

ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಮಕ್ಕಳಿಗಾಗಿ C. S. ಲೆವಿಸ್‌ ಬರೆದ ಏಳು ಕಾಲ್ಪನಿಕಕಾದಂಬರಿಗಳ ಒಂದು ಸರಣಿ. ಇದನ್ನು ಮಕ್ಕಳ ಸಾಹಿತ್ಯದ ಶ್ರೇಷ್ಠ ಗ್ರಂಥ ಎಂದು ಪರಿಗಣಿಸಲಾಗುತ್ತದೆ. ಸುಮಾರು 120 ದಶಲಕ್ಷ ಪ್ರತಿಗಳು 41 ಭಾಷೆಗಳಲ್ಲಿ ಪ್ರಕಟಗೊಂಡು ಮಾರಾಟವಾದ ಈ ಕಾದಂಬರಿಗಳ ಸರಣಿಯು ಲೇಖಕರ ಅತ್ಯುತ್ತಮ ಕೃತಿಯಾಗಿದೆ. 1949ರಿಂದ 1954ರವರೆಗಿನ ಅವಧಿಯಲ್ಲಿ ಲೆವಿಸ್‌ನಿಂದ ಬರೆಯಲ್ಪಟ್ಟ ಮತ್ತು ಪಾಲಿನ್ ಬೇಯ್ನೆಸ್‌‌‌ಳಿಂದ ಚಿತ್ರಗಳಿಂದ ಅಂದಗೊಳಿಸಲ್ಪಟ್ಟ ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ವನ್ನು ರೇಡಿಯೊ, ದೂರದರ್ಶನ, ರಂಗಭೂಮಿ ಮತ್ತು ಸಿನಿಮಾ ಇತ್ಯಾದಿಗಳಿಗಾಗಿ ಸಂಪೂರ್ಣವಾಗಿ ಅಥವಾ ಭಾಗಶಃ ಅನೇಕ ಬಾರಿ ಹೊಂದಾವಣೆ ಮಾಡಿಕೊಳ್ಳಲಾಗಿದೆ. ಕ್ರೈಸ್ತ ಧರ್ಮದ ಹಲವು ಸಾಂಪ್ರದಾಯಿಕ ಅಂಶಗಳೊಂದಿಗೆ ಈ ಸರಣಿಯು ಗ್ರೀಕ್ ಮತ್ತು ರೋಮನ್ ಪುರಾಣದಿಂದ ಮಾತ್ರವಲ್ಲದೆ ಸಾಂಪ್ರದಾಯಿಕ ಬ್ರಿಟಿಷ್ ಮತ್ತು ಐರಿಷ್ಕಟ್ಟು ಕಥೆಗಳಿಂದ ಪಾತ್ರಗಳನ್ನು ಮತ್ತು ಚಿಂತೆಗಳನ್ನು ಪಡೆದುಕೊಂಡಿದೆ.

The Chronicles of Narnia
ಚಿತ್ರ:Narnia books.jpg
First-edition covers, in order of publication.
ಲೇಖಕClive Staples Lewis
ಭಾಷೆEnglish
ಶೈಲಿFantasy
Children's literature
ಪ್ರಕಾಶಕHarperTrophy
ಪ್ರಕಟವಾದ ದಿನಾಂಕ1950–1956
ಮಾಧ್ಯಮ ವರ್ಗPrint (hardcover and paperback)

ಪ್ರಾಣಿಗಳು ಮಾತನಾಡುವ, ಮ್ಯಾಜಿಕ್ ಸಾಮಾನ್ಯವಾಗಿರುವ ಮತ್ತು ಒಳ್ಳೆಯತನವು ಕೆಟ್ಟದುದರ ವಿರುದ್ಧ ಹೋರಾಡುವ ಸ್ಥಳ ಕಾಲ್ಪನಿಕ ಲೋಕ ನಾರ್ನಿಯಾದ ವಿಕಾಸಗೊಳ್ಳುತ್ತಾ ಹೋಗುವ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸುವ ಮಕ್ಕಳ ಸಾಹಸಗಳನ್ನು ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಒಳಗೊಂಡಿದೆ. ಪ್ರತಿಯೊಂದು ಪುಸ್ತಕವೂ (ದ ಹೋರ್ಸ್ ಆಂಡ್ ಹಿಸ್ ಬಾಯ್ ಅನ್ನು ಹೊರತುಪಡಿಸಿ), ಮುಖ್ಯಪಾತ್ರದ ಮಕ್ಕಳು ನಮ್ಮ ಪ್ರಪಂಚದಿಂದ ನಾರ್ನಿಯಾಕ್ಕೆ ಮಾಂತ್ರಿಕವಾಗಿ ಹೋಗಿ, ಅಲ್ಲಿ ನಾರ್ನಿಯಾವನ್ನು ಉಳಿಸಲು ಅಸ್ಲಾನ್ ಎಂಬ ಸಿಂಹಕ್ಕೆ ಸಹಾಯ ಮಾಡುವ ಕಥೆಯನ್ನು ಹೊಂದಿವೆ.

ಏಳು ಪುಸ್ತಕಗಳು

ಬದಲಾಯಿಸಿ

ದ ಕ್ರೋನಿಕಲ್ಸ್ ಆಫ್ ನಾರ್ನಿಯಾ 1954ರಿಂದ ಇಂದಿನವರೆಗೆ ನಿರಂತರವಾಗಿ ಪ್ರಕಟಗೊಳ್ಳುತ್ತಿದೆ ಹಾಗೂ ಇದುವರೆಗೆ ಸುಮಾರು 100 ದಶಲಕ್ಷ ಪ್ರತಿಗಳು 41 ಭಾಷೆಗಳಲ್ಲಿ ಮಾರಾಟವಾಗಿವೆ.[][] ನಾರ್ನಿಯಾ ಸರಣಿಯ ಕೊನೆಯ ಪುಸ್ತಕ ದ ಲಾಸ್ಟ್ ಬ್ಯಾಟಲ್‌ ‌ಗಾಗಿ ಲೆವಿಸ್‌ 1956ರ ಕಾರ್ನೆಜೀ ಪದಕವನ್ನು ಪಡೆದನು. ಈ ಪುಸ್ತಕಗಳನ್ನು ಲೆವಿಸ್‌ 1949ರಿಂದ 1954ರವರೆಗಿನ ಅವಧಿಯಲ್ಲಿ ಬರೆದನು. ಆದರೆ ಅವುಗಳನ್ನು ಮ‌ೂಲತಃ ಪ್ರಕಟಗೊಂಡ ಕ್ರಮದಲ್ಲಿ ಅಥವಾ ಪ್ರಸ್ತುತ ಅವು ಇರುವ ಕಾಲಾನುಕ್ರಮದಲ್ಲಿ ಜೋಡಿಸಿದ ಕ್ರಮದಲ್ಲಿ ಬರೆಯಲಾಗಿಲ್ಲ.[] ಮ‌ೂಲತಃ ಸಚಿತ್ರವಾಗಿ ವಿವರಿಸಿದವಳು ಪಾಲಿನ್ ಬೇಯ್ನೆಸ್‌. ಅವಳ ಪೆನ್ ಮತ್ತು ಶಾಯಿ ಚಿತ್ರಗಳನ್ನು ಇಂದಿನ ಪ್ರಕಟನೆಗಳಲ್ಲೂ ಬಳಸಲಾಗುತ್ತಿದೆ. ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ವನ್ನು ಪೂರ್ಣಗೊಳಿಸಿದ ಏಳು ಪುಸ್ತಕಗಳನ್ನು ಅವು ಮ‌ೂಲತಃ ಪ್ರಕಟಗೊಂಡ ಕ್ರಮದಲ್ಲಿ ಈ ಕೆಳಗೆ ತೋರಿಸಲಾಗಿದೆ (ಕೆಳಗಿನ ಓದುವ ಕ್ರಮವನ್ನು ಗಮನಿಸಿ). ಕಾದಂಬರಿಗಳು ಸಂಪೂರ್ಣಗೊಂಡ ದಿನಾಂಕವು ಇಂಗ್ಲಿಷ್ (ಉತ್ತರಾರ್ಧ ಗೋಳ) ಕಾಲಾವಧಿಯನ್ನು ಸೂಚಿಸುತ್ತದೆ.

ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌' (1950)

ಬದಲಾಯಿಸಿ

ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ 1949ರ ಚಳಿಗಾಲದಲ್ಲಿ ಪೂರ್ಣಗೊಂಡು[] 1950ರಲ್ಲಿ ಪ್ರಕಟವಾಯಿತು. ಇದು ನಾಲ್ಕು ಸಾಮಾನ್ಯ ಮಕ್ಕಳ ಕಥೆಯನ್ನು ಹೇಳುತ್ತದೆ: ಪೀಟರ್‌, ಸೂಸಾನ್, ಎಡ್ಮಂಡ್‌ ಮತ್ತು ಲ್ಯೂಸಿ ಪೆವೆನ್ಸಿ. ಅವರು ಪ್ರೊಫೆಸರ್ ಡೈಗರಿ ಕಿರ್ಕೆಯ ಮನೆಯಲ್ಲಿ ಒಂದು ಬಟ್ಟೆಬೀರನ್ನು(ವಾರ್ಡ್‌ರೋಬ್) ಕಾಣುತ್ತಾರೆ. ಅದು ಅವರನ್ನು ಮಾಂತ್ರಿಕ ಲೋಕ ನಾರ್ನಿಯಾಕ್ಕೆ ಕೊಂಡೊಯ್ಯುತ್ತದೆ. ಈ ಮಕ್ಕಳು ನಿರಂತರ ಚಳಿಗಾಲದ ಶತಮಾನದಷ್ಟು ಕಾಲದಿಂದ ನಾರ್ನಿಯಾ ಸಾಮ್ರಾಜ್ಯವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡಿದ್ದ ಕೆಟ್ಟ ವೈಟ್ ವಿಚ್‌‌ನಿಂದ ನಾರ್ನಿಯಾವನ್ನು ಕಾಪಾಡಲು ಮಾತನಾಡುವ ಸಿಂಹ ಅಸ್ಲಾನ್‌ಗೆ ಸಹಾಯ ಮಾಡುತ್ತಾರೆ. ಮಕ್ಕಳು ಈ ಹೊಸದಾಗಿ ಕಂಡುಹಿಡಿದ ಭೂಮಿಯ ರಾಜ ರಾಣಿಯರಾಗುತ್ತಾರೆ ಮತ್ತು ನಂತರದ ಪುಸ್ತಕಗಳಲ್ಲಿ ಪುನಃಕಂಡುಹಿಡಿಯಲಾಗುವ ಆಸ್ತಿಯನ್ನು ಉಳಿಸಿಹೋಗುತ್ತಾರೆ.

ಪ್ರಿನ್ಸ್ ಕ್ಯಾಸ್ಪಿಯನ್: ದ ರಿಟರ್ನ್ ಟು ನಾರ್ನಿಯಾ' (1951)

ಬದಲಾಯಿಸಿ

ಪ್ರಿನ್ಸ್ ಕ್ಯಾಸ್ಪಿಯನ್: ದ ರಿಟರ್ನ್ ಟು ನಾರ್ನಿಯಾ 1949ರ ಶರತ್ಕಾಲದಲ್ಲಿ ಪೂರ್ಣಗೊಂಡು 1951ರಲ್ಲಿ ಪ್ರಕಟಗೊಂಡಿತು. ಇದು ಪೆವೆನ್ಸಿ ಮಕ್ಕಳ ನಾರ್ನಿಯಾದ ಎರಡನೇ ಪ್ರವಾಸದ ಕಥೆಯನ್ನು ಹೇಳುತ್ತದೆ. ಅವರು ಸೂಸಾನ್‌ನ ಕೋಡಿನ ಸಾಮರ್ಥ್ಯದಿಂದ ಆಕರ್ಷಿಸಲ್ಪಡುತ್ತಾರೆ. ಅವಶ್ಯಕತೆ ಇರುವಾಗ ಸಹಾಯ ಮಾಡುವಂತೆ ಅಪ್ಪಣೆ ಮಾಡಿ ಪ್ರಿನ್ಸ್ ಕ್ಯಾಸ್ಪಿಯನ್ನಿಂದ ಗಾಳಿಯಲ್ಲಿ ತೇಲಾಡುತ್ತಾರೆ. ಅವರು ತಿಳಿದಂತೆ ನಾರ್ನಿಯಾವನ್ನು ಮೀರಿಸಿದ ಬೇರೊಂದು ಸ್ಥಳವಿಲ್ಲ. ಅವರ ಕೋಟೆಯು ನಾಶಗೊಳ್ಳುತ್ತದೆ ಮತ್ತು ಎಲ್ಲಾ ವನದೇತವತೆಗಳು ಅವರನ್ನು ಹಿಮ್ಮೆಟ್ಟುತ್ತವೆ. ಅಸ್ಲಾನ್‌ನ ಮ್ಯಾಜಿಕ್ ಮಾತ್ರ ಅವರನ್ನು ಎಚ್ಚರಗೊಳಿಸುತ್ತದೆ. ಕ್ಯಾಸ್ಪಿಯನ್ ಅಧಿಕಾರವನ್ನು ದುರಾಕ್ರಮಣ ಮಾಡಿದ ಅವನ ಅಂಕಲ್ ಮಿರಾಜ್‌ನಿಂದ ತಪ್ಪಿಸಿಕೊಳ್ಳಲು ಕಾಡಿಗೆ ಪಲಾಯನ ಮಾಡುತ್ತಾನೆ. ಮಕ್ಕಳು ನಾರ್ನಿಯಾವನ್ನು ಉಳಿಸಲು ಮತ್ತೆ ಒಂದುಗೂಡುತ್ತಾರೆ.

ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್ (1952)

ಬದಲಾಯಿಸಿ

1950ರ ಚಳಿಗಾಲದಲ್ಲಿ ಸಂಪೂರ್ಣಗೊಂಡು 1952ರಲ್ಲಿ ಪ್ರಕಟವಾದ ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ‌ನಲ್ಲಿ, ಎಡ್ಮಂಡ್‌ ಮತ್ತು ಲ್ಯೂಸಿ ಪೆವೆನ್ಸಿ ಅವರ ಅತಿ ನಿಷ್ಠೆಯ ಸೋದರಸಂಬಂಧಿ ಯ‌ೂಸ್ಟೇಸ್ ಸ್ಕ್ರಬ್‌ನೊಂದಿಗೆ ನಾರ್ನಿಯಾಕ್ಕೆ ಹಿಂದಿರುಗುತ್ತಾರೆ. ಅಲ್ಲಿ ಅವರು, ಮಿರಾಜ್‌ ಅಧಿಕಾರವನ್ನು ಆಕ್ರಮಿಸಿಕೊಂಡಾಗ ಹೊರದೂಡಲ್ಪಟ್ಟ ಏಳು ದೇವತೆಗಳನ್ನು ಕಂಡುಹಿಡಿಯುವ ಕ್ಯಾಸ್ಪಿಯನ್‌ನ ಪ್ರಯಾಣವನ್ನು ಸೇರಿಕೊಳ್ಳುತ್ತಾರೆ. ಈ ಅಪಾಯಕಾರಿ ಪ್ರಯಾಣವು ಅವರು ಅನೇಕ ಅದ್ಭುತಗಳನ್ನು ಮತ್ತು ಅಪಾಯಗಳನ್ನು ಎದುರಿಸುವಂತೆ ಮಾಡುತ್ತದೆ. ಕೊನೆಯಲ್ಲಿ ಅವರು ಅಸ್ಲಾನ್‌ನ ರಾಜ್ಯವನ್ನು ತಲುಪುತ್ತಾರೆ.

ದ ಸಿಲ್ವರ್ ಚೇರ್ (1953)

ಬದಲಾಯಿಸಿ

1951ರ ಚಳಿಗಾಲದಲ್ಲಿ ಪೂರ್ಣಗೊಂಡು 1953ರಲ್ಲಿ ಪ್ರಕಟಗೊಂಡ ದ ಸಿಲ್ವರ್ ಚೇರ್ ಪೆವೆನ್ಸಿ ಮಕ್ಕಳಿಲ್ಲದ ಮೊದಲ ನಾರ್ನಿಯಾ ಪುಸ್ತಕವಾಗಿದೆ. ಬದಲಿಗೆ ಅಸ್ಲಾನ್ ಯ‌ೂಸ್ಟೇಸ್‌ನನ್ನು ಅವನ ಸಹಪಾಠಿ ಜಿಲ್ ಪೋಲ್‌ನೊಂದಿಗೆ ನಾರ್ನಿಯಾಕ್ಕೆ ಹಿಂದಕ್ಕೆ ಕರೆಯುತ್ತದೆ. ಅಲ್ಲಿ ಅವರಿಗೆ, ತಾಯಿಯ ಮರಣದ ಸೇಡು ತೀರಿಸಿಕೊಳ್ಳಲು ಹತ್ತು ವರ್ಷಗಳ ಹಿಂದೆ ಕಣ್ಮರೆಯಾದ ಕ್ಯಾಸ್ಪಿಯನ್‌ನ ಮಗ ಪ್ರಿನ್ಸ್ ರಿಲಿಯನ್‌ನನ್ನು ಹುಡುಕಲು ನಾಲ್ಕು ಸೂಚನೆಗಳನ್ನು ನೀಡಲಾಗುತ್ತದೆ. ಯ‌ೂಸ್ಟೇಸ್ ಮತ್ತು ಜಿಲ್ ಜವುಗುಭೂಮಿಯ-ಹುಳು ಪುಡ್ಲೆಗ್ಲಮ್‌‌ನ ನೆರವಿನಿಂದ ರಿಲಿಯನ್‌ನನ್ನು ಕಂಡುಹಿಡಿಯುವುದಕ್ಕಿಂತ ಮೊದಲು ಅನೇಕ ಅಪಾಯ ಮತ್ತು ನಂಬಿಕೆದ್ರೋಹಕ್ಕೆ ಒಳಗಾಗುತ್ತಾರೆ.

ದ ಹೋರ್ಸ್ ಆಂಡ್ ಹಿಸ್ ಬಾಯ್ (1954)

ಬದಲಾಯಿಸಿ

1950ರ ಚಳಿಗಾಲದಲ್ಲಿ ಸಂಪೂರ್ಣಗೊಂಡು 1954ರಲ್ಲಿ ಬಿಡುಗಡೆಯಾದ ದ ಹೋರ್ಸ್ ಆಂಡ್ ಹಿಸ್ ಬಾಯ್ , ಪೆವೆನ್ಸಿ ಮಕ್ಕಳ ನಾರ್ನಿಯಾದಲ್ಲಿನ ಆಳ್ವಿಕೆಯ ಕಾಲದ -ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನ ಅಂತಿಮ ಅಧ್ಯಾಯದಲ್ಲಿ ಆರಂಭಗೊಳ್ಳುವ ಮತ್ತು ಕೊನೆಗೊಳ್ಳುವ ಒಂದು ಅವಧಿ- ಬಗ್ಗೆ ಹೇಳುತ್ತದೆ. ಈ ಕಥೆಯು ಬ್ರೀ ಎಂಬ ಮಾತನಾಡುವ ಕುದುರೆ ಮತ್ತು ಶಾಸ್ತ ಹೆಸರಿನ ಒಬ್ಬ ಸಣ್ಣ ಹುಡುಗನ ಬಗ್ಗೆಯಾಗಿದೆ. ಇವರಿಬ್ಬರೂ ಕ್ಯಾಲರ್ಮೆನ್‌ನಲ್ಲಿ ಬಂಧನದಲ್ಲಿರುತ್ತಾರೆ. ಆಕಸ್ಮತ್ತಾಗಿ ಅವರಿಬ್ಬರು ಪರಸ್ಪರ ಭೇಟಿಯಾಗುತ್ತಾರೆ ಮತ್ತು ನಾರ್ನಿಯಾಕ್ಕೆ ಹಿಂದಿರುಗಿ ಸ್ವತಂತ್ರರಾಗುವ ಯೋಜನೆ ಮಾಡುತ್ತಾರೆ. ದಾರಿಯಲ್ಲಿ ಅವರು ತಪ್ಪಿಸಿಕೊಂಡು ನಾರ್ನಿಯಾಕ್ಕೆ ಹೋಗುತ್ತಿರುವ ಅರಾವಿಸ್ ಮತ್ತು ಅವಳ ಮಾತನಾಡುವ ಕುದುರೆ ಹ್ವಿನ್ಅನ್ನು ಸಂಧಿಸುತ್ತಾರೆ.

ದ ಮ್ಯಾಜಿಶಿಯನ್ಸ್ ನೆಫ್ಯೂ (1955)

ಬದಲಾಯಿಸಿ

1954ರ ಚಳಿಗಾಲದಲ್ಲಿ ಪೂರ್ಣಗೊಂಡು 1955ರಲ್ಲಿ ಪ್ರಕಟಗೊಂಡ ಕೃತಿಯ ಘಟನೆಗಳನ್ನೇ ಹೊಂದಿರುವ ಕಥೆ ದ ಮ್ಯಾಜಿಶಿಯನ್ಸ್ ನೆಫ್ಯೂ , ಓದುಗನನ್ನು ತುಂಬಾ ಹಿಂದಕ್ಕೆ ನಾರ್ನಿಯಾದ ಮ‌ೂಲಕ್ಕೆ ಕರೆದುಕೊಂಡು ಹೋಗುತ್ತದೆ. ಅದರಲ್ಲಿ ನಾವು ಅಸ್ಲಾನ್ ಹೇಗೆ ಆ ಲೋಕವನ್ನು ಸೃಷ್ಟಿಸಿತು ಮತ್ತು ದುಷ್ಟ ಶಕ್ತಿಯು ಹೇಗೆ ಅದನ್ನು ಪ್ರವೇಶಿಸಿತು ಎಂಬುದರ ಬಗ್ಗೆ ತಿಳಿಯುತ್ತೇವೆ. ಡೈಗರಿ ಕಿರ್ಕೆ ಮತ್ತು ಅವನ ಸ್ನೇಹಿತ ಪಾಲಿ ಪ್ಲಮ್ಮರ್‌, ಸಾವನ್ನು ತರುವ ಲೋಕ ಚಾರ್ನ್‌ನಲ್ಲಿ ಜ್ಯಾಡಿಸ್ (ವೈಟ್ ವಿಚ್‌)ಅನ್ನು ಎದುರಿಸಲು ಮತ್ತು ನಾರ್ನಿಯಾದ ಸೃಷ್ಟಿಗೆ ಸಾಕ್ಷಿಯಾಗಿಸಲು ಡೈಗರಿಯ ಅಂಕಲ್ ತಯಾರಿಸಿದ ಮ್ಯಾಜಿಕ್ ಉಂಗುರವನ್ನು ಪ್ರಯೋಗಿಸಿ ಬೇರೆ ಬೇರೆ ಲೋಕಗಳನ್ನು ಸಂಧಿಸುತ್ತಾರೆ. ನಾರ್ನಿಯಾದ ಬಗೆಗಿನ ಅನೇಕ ಬಹಳ-ಕಾಲದ ಪ್ರಶ್ನೆಗಳಿಗೆ ಆನಂತರ ಬರುವ ಸಾಹಸವು ಉತ್ತರಿಸುತ್ತದೆ.

ದ ಲಾಸ್ಟ್ ಬ್ಯಾಟಲ್‌ (1956)

ಬದಲಾಯಿಸಿ

ದ ಲಾಸ್ಟ್ ಬ್ಯಾಟಲ್‌ 1953ರ ಚಳಿಗಾಲದಲ್ಲಿ ಪೂರ್ಣಗೊಂಡು 1956ರಲ್ಲಿ ಪ್ರಕಟಗೊಂಡಿತು. ಇದು ನಾರ್ನಿಯಾ ಲೋಕದ ಕೊನೆಯನ್ನು ನಿರೂಪಿಸುತ್ತದೆ. ಜಿಲ್ ಮತ್ತು ಯ‌ೂಸ್ಟೇಸ್ ಶಿಫ್ಟ್‌ ಎಂಬ ಒಂದು ಕಪಿಯಿಂದ ನಾರ್ನಿಯಾವನ್ನು ಉಳಿಸಲು ಹಿಂದಿರುಗುತ್ತಾರೆ. ಆ ಕಪಿಯು ಅಸ್ಲಾನ್‌ ಸಿಂಹದಂತೆ ಅಭಿನಯಿಸುವಂತೆ ಪಜಲ್‌ ಎಂಬ ಒಂದು ಕತ್ತೆಯ ಮೇಲೆ ಕುತಂತ್ರ ನಡೆಸಿ, ಕ್ಯಾಲರ್ಮೆನ್‌ನವರ ಮತ್ತು ರಾಜ ಟಿರಿಯನ್ ಮಧ್ಯೆ ಅಂತಿಮ ಹೋರಾಟ ನಡೆಯುವಂತೆ ಪ್ರೇರೇಪಿಸುತ್ತದೆ.

ಓದುವ ಕ್ರಮ

ಬದಲಾಯಿಸಿ

ಸರಣಿಯ ಅಭಿಮಾನಿಗಳು ಪುಸ್ತಕಗಳನ್ನು ಓದುವ ಕ್ರಮದ ಬಗ್ಗೆ ದೃಢವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ದ ಮ್ಯಾಜಿಶಿಯನ್ಸ್ ನೆಫ್ಯೂ ಮತ್ತು ದ ಹೋರ್ಸ್ ಆಂಡ್ ಹಿಸ್ ಬಾಯ್ ಇವೆರಡು ಸಂಪುಟಗಳ ಕ್ರಮವು ವಿವಾದದಲ್ಲಿದೆ. ಇವೆರಡೂ ಅವನ್ನು ಬರೆದ ಕ್ರಮಕ್ಕಿಂತ ಗಮನಾರ್ಹವಾಗಿ ಮೊದಲಿನ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅಲ್ಲದೆ ಇವು ಇತರೆಗಳನ್ನು ಸಂಪರ್ಕಿಸುವ ಮುಖ್ಯ ಕಥೆಯಿಂದ ಹೊರಗುಳಿದಿವೆ. ಇತರ ಐದು ಪುಸ್ತಕಗಳ "ಓದುವ ಕ್ರಮ"ದ ಬಗ್ಗೆ ಭಿನ್ನಾಭಿಪ್ರಾಯವಿಲ್ಲ.

ಪ್ರಕಟನೆಯ ಕ್ರಮ ಕಾಲಾನುಕ್ರಮದಲ್ಲಿ ಜೋಡಿಸಿದ ಕ್ರಮ ಬರೆದ ಕ್ರಮ ಅಂತಿಮವಾಗಿ ಪೂರ್ಣಗೊಳಿಸಿದ ಕ್ರಮ[]
ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ದ ಮ್ಯಾಜಿಶಿಯನ್ಸ್ ನೆಫ್ಯೂ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌
ಪ್ರಿನ್ಸ್ ಕ್ಯಾಸ್ಪಿಯನ್ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಪ್ರಿನ್ಸ್ ಕ್ಯಾಸ್ಪಿಯನ್ ಪ್ರಿನ್ಸ್ ಕ್ಯಾಸ್ಪಿಯನ್
ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ದ ಹೋರ್ಸ್ ಆಂಡ್ ಹಿಸ್ ಬಾಯ್ ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌
ದ ಸಿಲ್ವರ್ ಚೇರ್ ಪ್ರಿನ್ಸ್ ಕ್ಯಾಸ್ಪಿಯನ್ ದ ಹೋರ್ಸ್ ಆಂಡ್ ಹಿಸ್ ಬಾಯ್ ದ ಹೋರ್ಸ್ ಆಂಡ್ ಹಿಸ್ ಬಾಯ್
ದ ಹೋರ್ಸ್ ಆಂಡ್ ಹಿಸ್ ಬಾಯ್ ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ದ ಸಿಲ್ವರ್ ಚೇರ್ ದ ಸಿಲ್ವರ್ ಚೇರ್
ದ ಮ್ಯಾಜಿಶಿಯನ್ಸ್ ನೆಫ್ಯೂ ದ ಸಿಲ್ವರ್ ಚೇರ್ ದ ಮ್ಯಾಜಿಶಿಯನ್ಸ್ ನೆಫ್ಯೂ ದ ಲಾಸ್ಟ್ ಬ್ಯಾಟಲ್‌
ದ ಲಾಸ್ಟ್ ಬ್ಯಾಟಲ್‌ ದ ಲಾಸ್ಟ್ ಬ್ಯಾಟಲ್‌ ದ ಲಾಸ್ಟ್ ಬ್ಯಾಟಲ್‌ ದ ಮ್ಯಾಜಿಶಿಯನ್ಸ್ ನೆಫ್ಯೂ

ಪುಸ್ತಕಗಳು ಆರಂಭದಲ್ಲಿ ಪ್ರಕಟಗೊಳ್ಳುವಾಗ ಅವುಗಳಿಗೆ ಸಂಖ್ಯೆಗಳನ್ನು ಕೊಟ್ಟಿರಲಿಲ್ಲ. ಮೊದಲ ಅಮೇರಿಕಾದ-ಪ್ರಕಾಶಕ ಮ್ಯಾಕ್‌ಮಿಲ್ಲನ್‌ ಪುಸ್ತಕಗಳಿಗೆ ಆರಂಭಿಕ ಪ್ರಕಟನೆಯ ಕ್ರಮದ ಆಧಾರದಲ್ಲಿ ಸಂಖ್ಯೆಗಳನ್ನು ನೀಡಿದ. 1994ರಲ್ಲಿ ಹಾರ್ಪರ್ ಕೊಲಿನ್ಸ್‌ ಈ ಕಾದಂಬರಿಯ ಸರಣಿಯನ್ನು ತೆಗೆದುಕೊಂಡಾಗ ಪುಸ್ತಕಗಳಿಗೆ, ಲೆವಿಸ್‌ನ ಮಲಮಗ ಡೌಗ್ಲಸ್ ಗ್ರೆಶ್ಯಾಮ್‌ ಸೂಚಿಸಿದಂತೆ ಕಾಲಾನುಕ್ರಮದಲ್ಲಿ ಜೋಡಿಸಿದ ಕ್ರಮದಲ್ಲಿ ಮತ್ತೊಮ್ಮೆ ಸಂಖ್ಯೆಗಳನ್ನು ನೀಡಿದನು. ಗ್ರೆಶ್ಯಾಮ್ ಸೂಚಿಸಿದ ಕ್ರಮಕ್ಕೆ ನಿದರ್ಶನ ಒದಗಿಸುವ ಸಲುವಾಗಿ ಅವನು, ಕ್ರಮದ ಬಗ್ಗೆ ತನ್ನ ತಾಯಿಯೊಂದಿಗೆ ವಾಗ್ವಾದವನ್ನು ಹೊಂದಿದ್ದ ಅಮೇರಿಕಾದ ಒಬ್ಬ ಅಭಿಮಾನಿಯ ಪತ್ರವೊಂದಕ್ಕೆ 1957ರಲ್ಲಿ ಲೆವಿಸ್‌ ನೀಡಿದ ಉತ್ತರವನ್ನು ಈ ಹೀಗೆ ನಿರೂಪಿಸಿದ್ದಾನೆ:

ನಿಮ್ಮ ತಾಯಿಗಿಂತ ಹೆಚ್ಚಾಗಿ ಪುಸ್ತಕಗಳನ್ನು ಓದಲು ನೀವು ಅನುಸರಿಸಿದ ಕಾಲಾನುಕ್ರಮದಲ್ಲಿ ಜೋಡಿಸಿದ ಕ್ರಮವನ್ನು ನಾನು ಸಮ್ಮತಿಸುತ್ತೇನೆ. ನಿಮ್ಮ ತಾಯಿ ಯೋಚಿಸುವಂತೆ ಸರಣಿಯನ್ನು ಮೊದಲೇ ಯೋಜಿಸಿಲ್ಲ. ನಾನು ದ ಲಯನ್ ಅನ್ನು ಬರೆದಾಗ, ನಾನು ಮತ್ತಷ್ಟು ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ನಂತರ ನಾನು P. ಕ್ಯಾಸ್ಪಿಯನ್‌ ಅನ್ನು ಉತ್ತರಭಾಗವಾಗಿ ಬರೆದೆ. ಆಗಲೂ ಇನ್ನಷ್ಟು ಬರೆಯುತ್ತೇನೆ ಎಂದು ಭಾವಿಸಲಿಲ್ಲ. ದ ವೋಯೇಜ್ ಅನ್ನು ಬರೆದಾಗ ಇದು ಖಂಡಿತವಾಗಿ ಕೊನೆಯದು ಎಂದೆನಿಸಿದೆ. ಆದರೆ ಅದು ತಪ್ಪಾಗಿತ್ತು. ಆದ್ದರಿಂದ ಬಹುಶಃ ಅವನ್ನು ಯಾರಾದರು ಯಾವ ಕ್ರಮದಲ್ಲಿ ಓದುತ್ತಾರೆಂಬುದು ದೊಡ್ಡ ವಿಷಯವಲ್ಲ. ಅವು ಪ್ರಕಟಗೊಂಡ ಕ್ರಮದಲ್ಲೇ ನಾನು ಬರೆದಿದ್ದೇನೆಯೇ ಎಂಬುದರ ಬಗ್ಗೆ ನನಗೇ ಖಾತರಿಯಿಲ್ಲ.[]

ಪುಸ್ತಕಗಳ ಹಾರ್ಪರ್ ಕೊಲಿನ್ಸ್‌‌ನ ಸಂಪೂರ್ಣ ಆವೃತ್ತಿಗಳಲ್ಲಿ (2005) ಪ್ರಕಾಶಕರು,ವ ಅವರು ಅಳವಡಿಸಿಕೊಂಡ ಸಂಖ್ಯೆಗಳನ್ನು ನೀಡುವ ಕ್ರಮದ ಬಗೆಗಿನ ಲೆವಿಸ್‌ನ ಆದ್ಯತೆಯನ್ನು ಬೆಂಬಲಿಸಲು ಕೃತಿಸ್ವಾಮ್ಯ ಪುಟದಲ್ಲಿ ಈ ಕೆಳಗಿನ ಹೇಳಿಕೆಯನ್ನು ಸೇರಿಸುವ ಮ‌ೂಲಕ ಈ ಪತ್ರವನ್ನು ಬಳಸುತ್ತಿದ್ದಾರೆ:

Although The Magician's Nephew was written several years after C. S. Lewis first began The Chronicles of Narnia, he wanted it to be read as the first book in the series. Harper Collins is happy to present these books in the order which Professor Lewis preferred.

ಆದರೆ ಹೆಚ್ಚಿನ ವಿಧ್ವಾಂಸರು ಹಾರ್ಪರ್ ಕೊಲಿನ್ಸ್‌ನ ಈ ನಿರ್ಧಾರದ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಾರೆ ಹಾಗೂ ಲೆವಿಸ್‌ನ ಉದ್ದೇಶಕ್ಕೆ ಕಾಲಾನುಕ್ರಮದಲ್ಲಿ ಜೋಡಿಸಿದ ಕ್ರಮವೇ ಹೆಚ್ಚು ಸೂಕ್ತವಾದುದೆಂದು ಹೇಳುತ್ತಾರೆ[]. ಮ‌ೂಲ ಕ್ರಮಕ್ಕೆ ಹೆಚ್ಚು ಮಹತ್ವ ಕೊಡುವ ವಿಧ್ವಾಂಸರು ಮತ್ತು ಓದುಗರು, ಲೆವಿಸ್‌ ಅವನ ಯುವ ಪತ್ರವ್ಯವಹಾರಿಗೆ ಸೌಜನ್ಯಶೀಲನಾಗಿದ್ದಾನೆ ಮತ್ತು ಪುಸ್ತಕಗಳ ಕ್ರಮವನ್ನು ಅವನ ಇಚ್ಛೆಯಂತೆ ಬದಲಾಯಿಸಬಹುದಿತ್ತು ಎಂದು ನಂಬುತ್ತಾರೆ.[] ನಾರ್ನಿಯಾದ ಹೆಚ್ಚಿನ ಮ್ಯಾಜಿಕ್ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನಲ್ಲಿ ಅನುಕ್ರಮವಾಗಿ ಇರುವ ಕಂಡುಬರುವ ರೀತಿಯಲ್ಲಿರುತ್ತದೆ ಎಂದು ಅವರು ಕಲ್ಪಿಸಿಕೊಳ್ಳುತ್ತಾರೆ. ನಿರೂಪಕ ಉಪಕರಣವಾದ ರಹಸ್ಯಮಯ ಬಟ್ಟೆಬೀರು ನಾರ್ನಿಯಾಕ್ಕೆ ದ ಮ್ಯಾಜಿಶಿಯನ್ಸ್ ನೆಫ್ಯೂ ಗಿಂತ ಅತ್ಯುತ್ತಮವಾದ ಪ್ರಸ್ತಾವನೆಯಾಗಿದೆ, ಇದರಲ್ಲಿ "ನಾರ್ನಿಯಾ" ಪದವು ಮೊದಲ ಪ್ಯಾರಾಗ್ರ್ಯಾಫ್‌ನಲ್ಲಿ ಓದುಗನಿಗೆ ಈ ಹಿಂದೆಯೇ ತಿಳಿದಿರುವ ಪದವಾಗಿ ಕಂಡುಬರುತ್ತದೆ ಎಂದು ಅವರು ಹೇಳುತ್ತಾರೆ. ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ಅನ್ನು ಮೊದಲು ಓದಬೇಕೆಂಬುದನ್ನು ಮ‌ೂಲಗ್ರಂಥವೇ ಸ್ಪಷ್ಟ ಪಡಿಸುತ್ತದೆ ಎಂದೂ ಅವರು ತಿಳಿಸುತ್ತಾರೆ. ಉದಾಹರಣೆಗಾಗಿ, ಅಸ್ಲಾನ್ಅನ್ನು ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನಲ್ಲಿ ಸೂಚಿಸುವಾಗ ನಿರೂಪಕ ಹೀಗೆ ಹೇಳುತ್ತಾನೆ - "ನಿಮ್ಮಂತೆ ಯಾವ ಮಕ್ಕಳಿಗೂ ಅಸ್ಲಾನ್ ಎಂದರೆ ಯಾರು ಎಂಬುದು ತಿಳಿದಿರುವುದಿಲ್ಲ". ದ ಮ್ಯಾಜಿಶಿಯನ್ಸ್ ನೆಫ್ಯೂ ವನ್ನು ಅದಾಗಲೇ ಓದಿದ್ದರೆ ಇದು ಅಸಂಬದ್ಧವಾಗಿರುತ್ತದೆ.[] ಇಂತಹುದೇ ಇತರ ಮ‌ೂಲಗ್ರಂಥದ ಉದಾಹರಣೆಗಳನ್ನು ನೀಡಬಹುದು.[]

C.S. ಲೆವಿಸ್‌ ಇನ್ ಕಾಂಟೆಕ್ಸ್ಟ್‌ ಮತ್ತು ಬೇರ್‌ಫೇಸ್: ಎ ಗೈಡ್ ಟು C.S. ಲೆವಿಸ್‌ ‌ನ ಲೇಖಕ ಡೋರಿಸ್ ಮೇಯೆರ್‌, ಕಥೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿದರೆ "ಪ್ರತಿಯೊಂದು ಕಥೆಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ" ಮತ್ತು "ಸಂಪೂರ್ಣವಾಗಿ ಸಾಹಿತ್ಯಕ ರಚನೆಯನ್ನು ಅಸ್ಪಷ್ಟಗೊಳಿಸುತ್ತದೆ" ಎಂದು ಸೂಚಿಸುತ್ತಾನೆ.[] ಪೀಟರ್‌ ಶ್ಕ್ಯಾಕೆಲ್‌ ಅವನ ಪುಸ್ತಕ ಇಮ್ಯಾಜಿನೇಶನ್ ಆಂಡ್ ದ ಆರ್ಟ್ಸ್ ಇನ್ C.S. ಲೆವಿಸ್‌: ಜರ್ನಿಯಿಂಗ್ ಟು ನಾರ್ನಿಯಾ ಆಂಡ್ ಅದರ್ ವರ್ಲ್ಡ್‌ ‌ನಲ್ಲಿ ಈ ವಿಷಯಕ್ಕಾಗಿ ಒಂದು ಸಂಪೂರ್ಣ ಅಧ್ಯಾಯವನ್ನೇ ಮೀಸಲಿಟ್ಟಿದ್ದಾನೆ ಹಾಗೂ ರೀಡಿಂಗ್ ವಿದ್ ದ ಹಾರ್ಟ್: ದ ವೇ ಇನ್ಟು ನಾರ್ನಿಯಾ ‌ದಲ್ಲಿ ಹೀಗೆ ಬರೆಯುತ್ತಾನೆ:

ದ ಮ್ಯಾಜಿಶಿಯನ್ಸ್ ನೆಫ್ಯೂ ವನ್ನು ಮೊದಲು ಓದಬೇಕಾದ ಕಾರಣವೆಂದರೆ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿದ ಕ್ರಮ ಹಾಗೂ ಪ್ರತಿಯೊಂದು ಕಥೆ ಹೇಳುವವರು ತಿಳಿದಿರುವಂತೆ ಅದು ತೀರ ಅಮುಖ್ಯವಾದುದು. ಹೆಚ್ಚಾಗಿ ಸರಣಿಕ್ರಮದಲ್ಲಿ ಹಿಂದಿನ ಘಟನೆಗಳು ಪುನರಾವರ್ತನೆಯಾಗುವ ರೂಪದಲ್ಲಿ ಅಧಿಕ ಪರಿಣಾಮವನ್ನು ಅಥವಾ ಪ್ರಭಾವವನ್ನು ಹೊಂದಿರುತ್ತವೆ. ಕೆಲವು ಘಟನೆಗಳ ನಂತರ ಹೇಳುವ ಕಥೆಯು ಹಿನ್ನೆಲೆಯನ್ನು ನೀಡುತ್ತದೆ ಮತ್ತು ದೃಷ್ಟಿಕೋನವನ್ನು ಊರ್ಜಿತಗೊಳಿಸುತ್ತದೆ. ಆದ್ದರಿಂದ ಇದು ಕಾಲಾನುಕ್ರಮ ‌ ವರದಿಯಲ್ಲಿರುತ್ತದೆ. ಕಲಾವಂತಿಕೆ, ಮ‌ೂಲರೂಪ ಮತ್ತು ಕ್ರಿಶ್ಚಿಯನ್ ಯೋಚನೆಯ ಅಂಶಗಳು ಇವೆಲ್ಲವೂ ಪುಸ್ತಕಗಳನ್ನು ಅವುಗಳು ಪ್ರಕಟನೆಯಾದ ಕ್ರಮದಲ್ಲಿ ಓದುವಂತೆ ಸೂಚಿಸುತ್ತವೆ.[]

ಕ್ರಿಶ್ಚಿಯನ್ ಹೋಲಿಕೆಗಳು

ಬದಲಾಯಿಸಿ
ಪ್ರತಿಯೊಂದು ಪುಸ್ತಕ ಮತ್ತು ಪಾತ್ರಗಳಲ್ಲಿ ಕೆಲವು ನಿರ್ದಿಷ್ಟ ಕ್ರಿಶ್ಚಿಯನ್ ಹೋಲಿಕೆಗಳು ಕಂಡುಬಂದಿರಬಹುದು.

C.S. ಲೆವಿಸ್‌ ಒಬ್ಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವ. ಅವನು ಹಿಂದೆ ಕ್ರೈಸ್ತ ಧರ್ಮವನ್ನು ಸಮರ್ಥಿಸುವ ಮತ್ತು ಕ್ರಿಶ್ಚಿಯನ್ ಅಂಶಗಳ ಕಲ್ಪನೆಯ ಬಗ್ಗೆ ಕೆಲವು ಕೃತಿಗಳನ್ನು ರಚಿಸಿದ್ದನು. ಆದರೆ ಅವನು ಮ‌ೂಲತಃ ಕ್ರಿಶ್ಚಿಯನ್ ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಅವನ ನಾರ್ನಿಯಾ ಕಥೆಗಳಲ್ಲಿ ತರುವ ಉದ್ದೇಶವನ್ನು ಹೊಂದಿರಲಿಲ್ಲ. ಆತನು ಆಫ್ ಅದರ್ ವರ್ಲ್ಡ್ಸ್ ‌ನಲ್ಲಿ ಬರೆದಿರುವಂತೆ:

Some people seem to think that I began by asking myself how I could say something about Christianity to children; then fixed on the fairy tale as an instrument, then collected information about child psychology and decided what age group I’d write for; then drew up a list of basic Christian truths and hammered out 'allegories' to embody them. This is all pure moonshine. I couldn’t write in that way. It all began with images; a faun carrying an umbrella, a queen on a sledge, a magnificent lion. At first there wasn't anything Christian about them; that element pushed itself in of its own accord.

ಸಾಂಕೇತಿಕ ನಿರೂಪಣೆ[] ಯ ವಿಷಯದಲ್ಲಿ ಹೆಚ್ಚು ನಿಪುಣನಾಗಿರುವ ಮತ್ತು ದ ಅಲೆಗರಿ ಆಫ್ ಲವ್ ಪುಸ್ತಕದ ಲೇಖಕ ಲೆವಿಸ್ ಈ ಪುಸ್ತಕಗಳು ಸಾಂಕೇತಿಕ ಕಥೆಗಳಲ್ಲ ಎಂದು ನಿರೂಪಿಸಿದ್ದಾನೆ. ಅವುಗಳ ಕ್ರಿಶ್ಚಿಯನ್ ಅಂಶಗಳು "ಕಲ್ಪಿಸಿಕೊಂಡದ್ದು" ಎಂದು ಹೇಳಿದ್ದಾನೆ. ಲೆವಿಸ್‌ನ ದೃಷ್ಟಿಕೋನದಲ್ಲಿ ನಾರ್ನಿಯಾವು ಒಂದು ಕಾಲ್ಪನಿಕ ಲೋಕ ಎಂಬುದನ್ನು ಇದು ಸೂಚಿಸುತ್ತದೆ. ಲೆವಿಸ್‌ 1958ರ ಡಿಸೆಂಬರ್‌ನಲ್ಲಿ ಮಿ. ಹುಕ್‌ಗೆ ಬರೆದ ಪತ್ರದಲ್ಲಿ ಹೀಗಿದೆ:

<nowiki>''[[ದ ಪಿಲಿಗ್ರಿಮ್ಸ್ ಪ್ರೊಗ್ರೆಸ್‌]]'' ‌ನಲ್ಲಿನ ಒಂದು ಪಾತ್ರ ಜೈಂಟ್ ಡೆಸ್ಪೇರ್‌ನಂತೆ ಅಸ್ಲಾನ್ಅನ್ನು ಅಶರೀರ ದೇವತೆಯಾಗಿ ನಿರೂಪಿಸಿದ್ದರೆ ಅದು ಸಾಂಕೇತಿಕ ಅರ್ಥವಿರುವ ಪಾತ್ರವಾಗುತ್ತಿತ್ತು.</nowiki> ವಾಸ್ತವವಾಗಿ, ಅದು 'ನಾರ್ನಿಯಾ ಎಂಬ ಲೋಕವು ನಿಜವಾಗಿಯ‌ೂ ಇದ್ದು, ಯೇಸು ಕ್ರಿಸ್ತನು ನೈಜವಾಗಿ ಮಾಡಿದಂತೆ ಆ ಲೋಕದಲ್ಲಿ ಅವತರಿಸಲು ಮತ್ತು ಸತ್ತು ಪುನಃ ಹುಟ್ಟಿಬರಲು ಆಯ್ಕೆ ಮಾಡಿದ್ದರೆ ಅವನು ಏನಾಗುತ್ತಿದ್ದನು?' ಎಂಬ ಪ್ರಶ್ನೆಗೆ ಊಹಾತ್ಮಕ ಉತ್ತರವನ್ನು ನೀಡುತ್ತದೆ. ಇದು ಸಾಂಕೇತಿಕ ಕಥೆ ಅಲ್ಲವೇ ಅಲ್ಲ.[]

ಲೆವಿಸ್‌ ತನ್ನ ಈ ಕಾದಂಬರಿಗಳನ್ನು ಸಾಂಕೇತಿಕ ಕಥೆಗಳೆಂದು ಪರಿಗಣಿಸದಿದ್ದರೂ ಮತ್ತು ವಾರ್ಡ್‌ರೋಬ್‌ ನಲ್ಲಿ ಕ್ರಿಶ್ಚಿಯನ್ ಅಂಶಗಳನ್ನು ಸೇರಿಸಿಲ್ಲದಿದ್ದರೂ, ಅವನ್ನು ಬಹಿರಂಗಪಡಿಸಲು ಅವನು ಶಂಕಿಸಲಿಲ್ಲ. 1961ರ ಮಾರ್ಚ್‌ನಲ್ಲಿ ಬರೆದ ಲೆವಿಸ್‌ನ ಕೊನೆಯ ಪತ್ರಗಳಲ್ಲಿ ಒಂದಾದ ಪತ್ರವೊಂದರಲ್ಲಿ ಹೀಗೆ ಬರೆದಿದ್ದಾನೆ:

ನಾರ್ನಿಯಾವು ಮಾತನಾಡುವ ಮೃಗಗಳ ಲೋಕವಾದುದರಿಂದ, ಯೇಸು ಕ್ರಿಸ್ತನು ಇಲ್ಲಿ ಮನುಷ್ಯನಾದಂತೆ ಅಲ್ಲಿ ಮಾತನಾಡುವ ಮೃಗವಾಗಬೇಕೆಂದು ನಾನು ಯೋಚಿಸಿದೆ. ಯೇಸುಕ್ರಿಸ್ತನನ್ನು ನಾನು ಅಲ್ಲಿ ಸಿಂಹವಾಗಿ ಚಿತ್ರಿಸಿದ್ದು ಏಕೆಂದರೆ - (a) ಸಿಂಹವು ಮೃಗಗಳ ರಾಜನಾಗಿರುವುದರಿಂದ; (b) ಬೈಬಲ್‌ನಲ್ಲಿ ಯೇಸುವನ್ನು "ಜುದಾಹ್‌ನ ಸಿಂಹ" ಎಂದು ಕರೆಯಲಾಗಿರುವುದರಿಂದ; (c) ನಾನು ಈ ಕಾದಂಬರಿಗಳನ್ನು ಬರೆಯಲು ಆರಂಭಿಸಿದಾಗ ಸಿಂಹದ ಬಗೆಗಿನ ವಿಚಿತ್ರ ಕನಸುಗಳನ್ನು ಕಾಣುತ್ತಿದ್ದುದರಿಂದ. ಸಂಪೂರ್ಣ ಸರಣಿಯನ್ನು ಈ ಕೆಳಗಿನಂತೆ ವ್ಯವಸ್ಥೆಗೊಳಿಸಬಹುದು.
ದ ಮ್ಯಾಜಿಶಿಯನ್ಸ್ ನೆಫ್ಯೂ - ಸೃಷ್ಟಿಯ ಬಗ್ಗೆ ಮತ್ತು ಹೇಗೆ ದುಷ್ಟ ಶಕ್ತಿಯು ನಾರ್ನಿಯಾವನ್ನು ಪ್ರವೇಶಿಸುತ್ತದೆ ಎಂಬುದನ್ನು ಹೇಳುತ್ತದೆ.
ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ - ಶಿಲುಬೆಗೆ ಏರಿಸುವುದು ಮತ್ತು ಪುನರುತ್ಥಾನ.
ಪ್ರಿನ್ಸ್ ಕ್ಯಾಸ್ಪಿಯನ್ - ನೀತಿಭ್ರಷ್ಟತೆಯ ನಂತರ ಸತ್ಯ ಧರ್ಮದ ಪುನಃಸ್ಥಾಪನೆ.
ದ ಹೋರ್ಸ್ ಆಂಡ್ ಹಿಸ್ ಬಾಯ್ - ಕ್ರೈಸ್ತೇತರ ದೈವ ಪ್ರೇರಣೆ ಮತ್ತು ಮತಾಂತರ.
ದ ವೋಯೇಜ್ ಆಫ್ ದ "ಡಾವ್ನ್ ಟ್ರೀಡರ್" - ಆಧ್ಯಾತ್ಮಿಕ ಜೀವನ (ವಿಶೇಷವಾಗಿ ರೀಪಿಚೀಪ್‌ನ).
ದ ಸಿಲ್ವರ್ ಚೇರ್ - ದುಷ್ಟ ಶಕ್ತಿಗಳೊಂದಿಗಿನ ಯುದ್ಧದ ಮುಂದುವರಿಕೆ.
ದ ಲಾಸ್ಟ್ ಬ್ಯಾಟಲ್‌ - ಕ್ರಿಸ್ತನ ಶತ್ರುವಿನ (ಕಪಿ) ಪ್ರವೇಶ, ಪ್ರಪಂಚದ ಕೊನೆ ಮತ್ತು ಅಂತಿಮ ದೈವ ಶಿಕ್ಷೆ.[]

2005ರಲ್ಲಿ ಡಿಸ್ನಿ ಚಲನಚಿತ್ರವು ಬಿಡುಗಡೆಯಾದ ನಂತರ ಈ ಪುಸ್ತಕಗಳಲ್ಲಿ ಕ್ರಿಶ್ಚಿಯನ್ ಹೋಲಿಕೆಗಳು ಕಂಡುಬಂದುದರ ಬಗ್ಗೆ ಅತೀವ ಆಸಕ್ತಿ ಹುಟ್ಟಿಕೊಂಡಿತು. ಕ್ರೈಸ್ತ ಧರ್ಮದ ಬಗ್ಗೆ ತಿಳಿದಿಲ್ಲದಿದ್ದರೆ ಈ ಕಾದಂಬರಿಗಳನ್ನು ಓದುವಾಗ ಅವನ್ನು ಸುಲಭವಾಗಿ ಗಮನಿಸದೆ ಬಿಡಬಹುದಾದ್ದರಿಂದ ಕೆಲವರಿಗೆ ಈ ಅಭಿಪ್ರಾಯಗಳು ಹಿಡಿಸಲಿಲ್ಲ.[೧೦] ದ ನಾರ್ನಿಯನ್: ದ ಲೈಫ್ ಆಂಡ್ ಇಮ್ಯಾಜಿನೇಶನ್ ಆಫ್ C. S. ಲೆವಿಸ್‌ ‌ನ ಲೇಖಕ ಅಲನ್ ಜ್ಯಾಕೋಬ್ಸ್, ಈ ಕ್ರಿಶ್ಚಿಯನ್ ಅಂಶಗಳಿಂದಾಗಿ ಲೆವಿಸ್‌ "ಅಮೇರಿಕಾದ ಸಾಂಸ್ಕೃತಿಕ ಸಂಘರ್ಷದಲ್ಲಿ ಕೈಗೊಂಬೆಯಾದನು" ಎಂದು ನಿರೂಪಿಸುತ್ತಾನೆ.[೧೧] ಕೆಲವು ಕ್ರಿಶ್ಚಿಯನ್ನರು ಕ್ರೋನಿಕಲ್ಸ್ಅನ್ನು ಕ್ರೈಸ್ತ ಧರ್ಮ ಉಪದೇಶದ ಅತ್ಯುತ್ತಮ ಸಾಧನ ಎಂದು ಹೇಳುತ್ತಾರೆ.[೧೨] ಈ ಕಾದಂಬರಿಗಳಲ್ಲಿನ ಕ್ರಿಶ್ಚಿಯನ್ ಅಂಶವು ಅನೇಕ ಪುಸ್ತಕಗಳ ಕೇಂದ್ರೀಕರಿಸುವ ವಿಷಯವಾಯಿತು. (ಕೆಳಗಿನ ಹೆಚ್ಚಿನ ಮಾಹಿತಿಗಾಗಿ ಗಮನಿಸಿ.)

ಪಾದ್ರಿ ಅಬ್ರಾಹಂ ಟ್ಯೂಕರ್ ಹೀಗೆಂದು ಸೂಚಿಸಿದ್ದಾರೆ - "ನಾರ್ನಿಯಾ ಕಥೆಗಳಲ್ಲಿನ ಅನೇಕ ಅಂಶಗಳು ಬೈಬಲ್‌ನ ಘಟನಗೆಳಿಗೆ ಹೋಲಿಕೆಯನ್ನು ಹೊಂದಿದ್ದರೂ, ಅವು ಯಥಾವತ್ತಾಗಿ ಹಾಗೆಯೇ ಇಲ್ಲ. (...) ಧರ್ಮದ್ರೋಹಿಯಾಗಿದ್ದು ನಂತರ ಸಂಪೂರ್ಣವಾಗಿ ತಿದ್ದಿಕೊಂಡ ಮತ್ತು ಕ್ಷಮಿಸಲ್ಪಟ್ಟ ಎಡ್ಮಂಡ್‌ನನ್ನು ಕಾಪಾಡುವುದಕ್ಕಾಗಿ ಅಸ್ಲಾನ್ ತನ್ನನ್ನು ತ್ಯಾಗ ಮಾಡಿಕೊಳ್ಳುತ್ತದೆ. ಇದು ಯೇಸು ಕ್ರಿಸ್ತನು ಜ್ಯೂದಾಸ್ ಇಸ್ಕ್ಯಾರಿಯಟ್‌ನನ್ನು ಸಂರಕ್ಷಿಸುತ್ತಾನೆ ಮತ್ತು ನಂತರ ಆ ಜ್ಯೂದಾಸ್ ಯೇಸುದೂತರಲ್ಲಿ ಒಬ್ಬನಾಗುತ್ತಾನೆ ಎಂಬುದನ್ನು ತಿಳಿಯಪಡಿಸುವ ಹೊಸ ಒಡಂಬಡಿಕೆಯಾಗಿದೆ. (...) ಕ್ರೈಸ್ತ ಇತಿಹಾಸದಲ್ಲಿ, ಮತಧರ್ಮಶಾಸ್ತ್ರದಲ್ಲಿ ಸಣ್ಣ ಪ್ರಮಾಣದ ಸೃಜನಾತ್ಮಕ ಹೊಸ ಮಾರ್ಪಾಡುಗಳನ್ನು ತಂದುದಕ್ಕಾಗಿ ಲೆವಿಸ್‌ನನ್ನು ಅಸಂಪ್ರದಾಯಿ ಎಂದು ಕರೆಯಬಹುದಾದ ಸಮಯವೊಂದಿತ್ತು."[೧೩]

ನಾರ್ನಿಯಾ ಮೇಲಿನ ಪ್ರಭಾವಗಳು

ಬದಲಾಯಿಸಿ

ಲೆವಿಸ್‌ನ ಜೀವನ

ಬದಲಾಯಿಸಿ

ಲೆವಿಸ್‌‌ನ ಆರಂಭಿಕ ಜೀವನವು ದ ಕ್ರೋನಿಕಲ್ಸ್ ಆಫ್ ನಾರ್ನಿಯಾದಲ್ಲಿ ಪ್ರತಿಧ್ವನಿಸುತ್ತದೆ. ಐರ್ಲ್ಯಾಂಡ್‌ಬೆಲ್ಫಾಸ್ಟ್‌ನಲ್ಲಿ 1898ರಲ್ಲಿ ಜನಿಸಿದ ಲೆವಿಸ್‌ ಏಳು ವರ್ಷ ವಯಸ್ಸಿನವನಾಗಿದ್ದಾಗ ತನ್ನ ಕುಟುಂಬದೊಂದಿಗೆ ನಗರದ ಅಂಚಿನಲ್ಲಿರುವ ಒಂದು ದೊಡ್ಡ ಮನೆಗೆ ಆ ಮನೆಯು ವಿಸ್ತಾರವಾದ ಹಜಾರಗಳನ್ನು ಮತ್ತು ಖಾಲಿ ಕೋಣೆಗಳನ್ನು ಹೊಂದಿತ್ತು. ಲೆವಿಸ್‌ ಮತ್ತು ಅವನ ಸಹೋದರ ಮನೆಯನ್ನು ಸುತ್ತಿನೋಡುವಾಗ ಕಲ್ಪನೆಯಲ್ಲಿ ಲೋಕವೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ - ಇದು ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನಲ್ಲಿ ಲ್ಯೂಸಿ ಕಂಡುಹಿಡಿಯುವ ನಾರ್ನಿಯಾದ ಮೇಲೆ ಪ್ರಭಾವ ಬೀರಿದೆ.[೧೪] ಕ್ಯಾಸ್ಪಿಯನ್‌ ಮತ್ತು ರಿಲಿಯನ್‌ರಂತೆ ಲೆವಿಸ್‌ ಸಹ ಸಣ್ಣ ವಯಸ್ಸಿನಲ್ಲಿಯೇ ಅವನ ತಾಯಿಯನ್ನು ಕಳೆದುಕೊಂಡಿದ್ದನು. ಪೆವೆನ್ಸಿ ಮಕ್ಕಳಂತೆ ಹಾಗೂ ಯ‌ೂಸ್ಟೇಸ್ ಸ್ಕ್ರಬ್ ಮತ್ತು ಜಿಲ್ ಪೋಲ್‌ರಂತೆ ಲೆವಿಸ್‌ ಸಹ ಅವನ ಬಾಲ್ಯದ ಹೆಚ್ಚಿನ ದಿನಗಳನ್ನು ಇಂಗ್ಲಿಷ್ ಬೋರ್ಡಿಂಗ್ ಶಾಲೆಯಲ್ಲಿ ಕಳೆದಿದ್ದನು. ವಿಶ್ವ ಸಮರ IIರ ಸಂದರ್ಭದಲ್ಲಿ ವಿಮಾನ ದಾಳಿಯಿಂದಾಗಿ ಲಂಡನ್‌ನ ಅನೇಕ ಮಕ್ಕಳು ಸ್ಥಳಾಂತರಿಸಲ್ಪಟ್ಟರು. ಆ ಸಂದರ್ಭದಲ್ಲಿ ಲ್ಯೂಸಿ ಹೆಸರಿನ ಅವನ ಧರ್ಮಪುತ್ರಿಯನ್ನೂ ಒಳಗೊಂಡಂತೆ ಕೆಲವು ಮಕ್ಕಳು ಲೆವಿಸ್‌ನೊಂದಿಗೆ ಆಕ್ಸ್‌ಫರ್ಡ್‌‌ನಲ್ಲಿನ ಅವನ ಮನೆಯಲ್ಲಿ ಉಳಿದುಕೊಂಡಿದ್ದರು, ಪೆವೆನ್ಸಿ ಮಕ್ಕಳು ಪ್ರೊಫೆಸರ್‌ನೊಂದಿಗೆ ಉಳಿದುಕೊಳ್ಳುವಂತೆ.[೧೫]

ಸುಳಿವು ಪಡೆ

ಬದಲಾಯಿಸಿ

ಲೆವಿಸ್‌ ಸುಳಿವು ಪಡೆಯ ಮುಖ್ಯ ಸದಸ್ಯನಾಗಿದ್ದನು. ಇದು J. R. R. ಟಾಲ್ಕೀನ್, ಚಾರ್ಲ್ಸ್ ವಿಲಿಯಮ್ಸ್, ಲೆವಿಸ್‌ನ ಸಹೋದರ W. H. ಲೆವಿಸ್‌ ಮತ್ತು ರೋಗರ್ ಲ್ಯಾನ್ಸೆಲಿನ್ ಗ್ರೀನ್ ಮೊದಲಾದ ಬರಹಗಾರರನ್ನು ಒಳಗೊಂಡಿದ್ದ ಆಕ್ಸ್‌ಫರ್ಡ್‌‌ನಲ್ಲಿದ್ದ ಒಂದು ಅನೌಪಚಾರಿಕ ಸಾಹಿತ್ಯಕ ಚರ್ಚಾ ಗುಂಪು. ಸಾಮಾನ್ಯವಾಗಿ ಮ್ಯಾಗ್ದಲೆನ್ ಕಾಲೇಜ್‌ನ C. S. ಲೆವಿಸ್‌ನ ಕಾಲೇಜು ಕೊಠಡಿಯಲ್ಲಿ ಗುರುವಾರ ಸಂಜೆ ಭೇಟಿಯಾಗುತ್ತಿದ್ದಾಗ ಆ ಚರ್ಚಾ ಗುಂಪು ಮುಖ್ಯವಾಗಿ ಪೂರ್ಣಗೊಳಿಸದ ಕೆಲಸಕಾರ್ಯಗಳ ಬಗ್ಗೆ ಚರ್ಚಿಸುತ್ತಿದ್ದವು. ಕೆಲವು ನಾರ್ನಿಯಾ ಕಥೆಗಳು ಅವುಗಳ ಅಭಿಪ್ರಾಯ ಮತ್ತು ವಿಮರ್ಶೆಗಾಗಿ ಸುಳಿವು ಪಡೆಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಿದ್ದವು ಎಂದು ತಿಳಿಯಲಾಗಿದೆ.

ಪುರಾಣದ ಮತ್ತು ವಿಶ್ವವಿಜ್ಞಾನದ ಪ್ರಭಾವಗಳು

ಬದಲಾಯಿಸಿ

ಈ ಕಾದಂಬರಿ ಸರಣಿಯ ಪ್ರಾಣಿಕೋಟಿಯು ಗ್ರೀಕ್ ಪುರಾಣ ಮತ್ತು ಜರ್ಮನ್ ಪುರಾಣ ಎರಡರ ಅಂಶಗಳನ್ನೂ ಪಡೆದುಕೊಳ್ಳುತ್ತವೆ. ಉದಾಹರಣೆಗಾಗಿ, ಸೆಂಟಾರ್(ಮನುಷ್ಯ ಕುದುರೆ) ಗ್ರೀಕ್ ಪುರಾಣದಲ್ಲಿ ಹುಟ್ಟಿಕೊಂಡದ್ದು ಮತ್ತು ಗಿಡ್ಡ ಜೀವಿಗಳು ಜರ್ಮನ್ ಪುರಾಣದಲ್ಲಿ ಕಂಡುಬರುತ್ತವೆ. ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ದ ಚಲನಚಿತ್ರ ರೂಪಾಂತರದ ನಿರ್ಮಾಪಕರು, ಈ ಪುಸ್ತಕಗಳು ಜೋಸೆಫ್ ಕ್ಯಾಂಪ್‌ಬೆಲ್‌ದ ಹೀರೊ ವಿದ್ ಎ ಥೌಸಂಡ್ ಫೇಸಸ್‌ ‌ನಲ್ಲಿ ವಿವರಿಸಿದ ಮೋನೋಮಿತ್‌ನ ಮ‌ೂಲಮಾದರಿಯನ್ನು ಹೆಚ್ಚು ಹೋಲುತ್ತವೆಂದು ಭಾವಿಸಿದರು ಎಂಬುದನ್ನು ಸೆಂಟರ್ ಫಾರ್ ಕ್ರಿಶ್ಚಿಯನ್ ಸ್ಟಡಿಯ ಅಧ್ಯಕ್ಷ ಡ್ರೂ ಟ್ರಾಟರ್ ಸೂಚಿಸಿದ್ದಾನೆ.[೧೬]

ಲೆವಿಸ್‌ ಮಧ್ಯಯುಗದ ಕೆಲ್ಟಿಕ್ ಸಾಹಿತ್ಯವನ್ನೂ ವ್ಯಾಪಕವಾಗಿ ಓದಿದ್ದನು. ಇದರ ಪ್ರಭಾವವು ಈ ಪುಸ್ತಕಗಳಾದ್ಯಂತ ಅತಿಹೆಚ್ಚಾಗಿ ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ನಲ್ಲಿ ಪ್ರತಿಬಿಂಬಿತವಾಗಿದೆ. ಈ ಪುಸ್ತಕವು ಸಂಪೂರ್ಣವಾಗಿ ಇಮ್ರಾಮ ಗಳಲ್ಲಿ (English pronunciation: /ˈɪmrəmə/; ಏಕವಚನದಲ್ಲಿ ಇಮ್ರಾಮ್ ; ಐರಿಷ್:iomramh, IPA: [ˈʊmˠɾˠəw], ವೋಯೇಜ್ ) ಒಂದನ್ನು ಅನುಕರಿಸುತ್ತದೆ. ಈ ಇಮ್ರಾಮವು ಒಂದು ಪ್ರಕಾರದ ಸಾಂಪ್ರದಾಯಿಕ ಮಧ್ಯಯುಗದ ಐರಿಷ್ ಕಥೆ. ಇದರಲ್ಲಿ ಮುಖ್ಯಪಾತ್ರಗಳು ಹಲವಾರು ಅಸಾಧಾರಣ ದ್ವೀಪಗಳಿಗೆ ಹಡಗು ಪ್ರಯಾಣ ಮಾಡುತ್ತವೆ. ನಾರ್ನಿಯಾದಂತೆ ಮಧ್ಯಯುಗದ ಐರ್ಲ್ಯಾಂಡ್ ಸಹ ಕಡಿಮೆ ಪ್ರಾಬಲ್ಯದ ರಾಜರು ಮತ್ತು ರಾಣಿಯರನ್ನು ಅಥವಾ ಅಧೀನ ರಾಜರನ್ನು ಆಳುವ ಪ್ರಬಲ ರಾಜರ ಪರಂಪರೆಯನ್ನು ಹೊಂದಿತ್ತು. ಕೈರ್ ಪ್ಯಾರವೆಲ್‌ನಲ್ಲಿರುವ ಲೆವಿಸ್‌ನ ಪದ "ಕೈರ್", ವೆಲ್ಶ್ "ಕೇರ್" ಅಂದರೆ "ಕೋಟೆ"ಯನ್ನು ಹೋಲುತ್ತದೆ (ಕಾರ್ಡಿಫ್‌ನಂತಹ (ವೆಲ್ಶ್ ಕೇರ್ಡಿಡ್) ಇಂಗ್ಲಿಷ್ ಸ್ಥಳಗಳ ಹೆಸರಿನಲ್ಲಿರು 'ಕಾರ್'ನಂತೆ ಕಾಣಿಸುತ್ತದೆ). ರೀಪಿಚೀಪ್‌ನ ಸಣ್ಣ ಬುಟ್ಟಿ ದೋಣಿಯ‌ೂ ಸಹ ಕೆಲ್ಟಿಕ್ ರಾಷ್ಟ್ರಗಳ ಸಾಂಪ್ರದಾಯಿಕ ದೋಣಿಯಾಗಿದೆ.

ಪುಸ್ತಕಗಳ ಕೆಲವು ಅಂಶಗಳು ಹೆಚ್ಚು ಮಧ್ಯಯುಗದ್ದಾಗಿವೆ. ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ‌ನಲ್ಲಿರುವ ಒಂದು-ಕಾಲಿನ ಮೋನೋಪಾಡ್‌ಗಳ ಅಥವಾ ಡಫೆಲ್‌ಪಡ್‌ಗಳ ಆಕಾರವು ಅದ್ಭುತ ಪೂರ್ವ ಪ್ರದೇಶಗಳಲ್ಲಿ ಜೀವಿಸುವ ಮಧ್ಯಯುಗದ

2008ರಲ್ಲಿ ಮೈಕೆಲ್ ವಾರ್ಡ್ ಪ್ಲ್ಯಾನೆಟ್ ನಾರ್ನಿಯಾ [೧೭] ವನ್ನು ಪ್ರಕಟಿಸಿದನು. ಇದು ಈ ಏಳು ಪುಸ್ತಕಗಳಲ್ಲಿ ಪ್ರತಿಯೊಂದೂ ಟಾಲೆಮಿಯ ಅಥವಾ ಭೂಕೇಂದ್ರೀಯ ಮಾದರಿಯ ಪ್ರಕಾರ ಮಧ್ಯಯುಗದಲ್ಲಿ ಹೆಸರಿಸಲಾದ ಏಳು ಚಲಿಸುವ ಆಕಾಶಕಾಯಗಳಲ್ಲಿ ಅಥವಾ "ಗ್ರಹಗಳಲ್ಲಿ" ಒಂದಕ್ಕೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ. ಈ ಪ್ರತಿಯೊಂದು ಆಕಾಶಕಾಯಗಳು ಕೆಲವು ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಮಧ್ಯಯುಗದಲ್ಲಿ ನಂಬಲಾಗಿತ್ತು. ಈ ವೈಶಿಷ್ಟ್ಯಗಳನ್ನು ಲೆವಿಸ್‌ ಅವನ ಈ ಸರಣಿ ಕಾದಂಬರಿಗಳ ವಿಷಯಗಳಲ್ಲಿ ಉದ್ದೇಶಪೂರ್ವಕವಾಗಿ (ಆದರೆ ರಹಸ್ಯವಾಗಿ) ಬಳಸಿದ್ದಾನೆ. "ದ ಲಯನ್‌ನಲ್ಲಿ ಪೆವೆನ್ಸಿ ಮಕ್ಕಳು ಸಾರ್ವಭೌಮ ಜೊನಡಿಯಲ್ಲಿ ರಾಜರಾಗುತ್ತಾರೆ; ದ ಡಾವ್ನ್ ಟ್ರೀಡರ್‍ನಲ್ಲಿ ಅವರು ಸೋಲ್‌ನ ಹುಡುಕಾಟದ ಸಂದರ್ಭದಲ್ಲಿ ಬೆಳಕನ್ನು ಕುಡಿಯುತ್ತಾರೆ; ಪ್ರಿನ್ಸ್ ಕ್ಯಾಸ್ಪಿಯನ್‌ನಲ್ಲಿ ಅವರು ಪ್ರಬಲ ಮಾರ್ಸ್(ಮಂಗಳ ಗ್ರಹ)‌ನಿಂದಾಗಿ ಮತ್ತಷ್ಟು ದೃಢವಾಗುತ್ತಾರೆ; ದ ಸಿಲ್ವರ್ ಚೇರ್‌ನಲ್ಲಿ ಅವರು ಅಧೀನ ಅಧಿಕಾರಿ ಲ್ಯೂನಾನಿಂದ ವಿಧೇಯತೆಯನ್ನು ಕಲಿಯುತ್ತಾರೆ; ದ ಹೋರ್ಸ್ ಆಂಡ್ ಹಿಸ್ ಬಾಯ್‌ನಲ್ಲಿ ಅವರು ವಾಕ್ಚಾತುರ್ಯದ ಮರ್ಕ್ಯುರಿ(ಬುಧಗ್ರಹ)ಯಿಂದಾಗಿ ಕಾವ್ಯವನ್ನು ಪ್ರೀತಿಸಲು ಆರಂಭಿಸುತ್ತಾರೆ; ದ ಮ್ಯಾಜಿಶಿಯನ್ಸ್ ನೆಫ್ಯೂನಲ್ಲಿ ಅವರು ಫಲವತ್ತಾದ ವೀನಸ್(ಶುಕ್ರ ಗ್ರಹ)ನಿಂದಾಗಿ ಜೀವ-ಕೊಡುವ ಹಣ್ಣನ್ನು ಪಡೆಯುತ್ತಾರೆ; ಹಾಗೂ ದ ಲಾಸ್ಟ್ ಬ್ಯಾಟಲ್‌‌ನಲ್ಲಿ ಅವರು ಕೊರೆಯುವ ಚಳಿಯಿರುವ ಸ್ಯಾಟರ್ನ್(ಶನಿ ಗ್ರಹ)ನಲ್ಲಿ ತೀವ್ರ ನೋವು ಅನುಭವಿಸಿ ಸಾವನ್ನಪ್ಪುತ್ತಾರೆ."[೧೮] ಲೆವಿಸ್‌ ಮಧ್ಯಯುಗದ ಸಾಹಿತ್ಯಕ ನಿರೂಪಣೆಯಲ್ಲಿ ಮತ್ತು ನವೋದಯ ಜ್ಯೋತಿಶ್ಯಾಸ್ತ್ರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದನು. ಅವನ ಆರಂಭಿಕ ಕಾವ್ಯ ಎಲಿಜಬೆತ್ ರಾಣಿಯ ಕಾಲದ ಪ್ರಪಂಚ-ಅವಲೋಕನ ದ ಡಿಸ್ಕಾರ್ಡೆಡ್ ಇಮೇಜ್‌ ‌ನಂತಹ ಇತರ ಕೃತಿಗಳಲ್ಲಿ ಇದು ಅತಿಹೆಚ್ಚಾಗಿ ಪ್ರತಿಬಿಂಬಿತವಾಗಿದೆ ಮತ್ತು ಇದರ ಹೆಚ್ಚು ಕಣ್ಣಿಗೆ ಕಾಣುವಂತಿರುವ ಉಲ್ಲೇಖಗಳು ಅವನ ವಿಜ್ಞಾನ-ಕಾಲ್ಪನಿಕ ಕೃತಿತ್ರಯದಲ್ಲಿ ಕಾಣಬಹುದು. ಲೆವಿಸ್‌ ಕ್ರೋನಿಕಲ್ಸ್ಅನ್ನು ಮಧ್ಯಯುಗದ ಜ್ಯೋತಿಶ್ಯಾಸ್ತ್ರ ಅಸಂಭಾವ್ಯದ ಸಾಕಾರ ರೂಪವಾಗಿ ರಚಿಸಿದ್ದಾನೆ ಎಂಬ ವಾರ್ಡ್‌ನ ಸಮರ್ಥನೆಯನ್ನು ಇತರ ನಾರ್ನಿಯಾ ಪಂಡಿತರು ಕಂಡುಹಿಡಿದ್ದಾರೆ[].

ನಾರ್ನಿಯಾ ಹೆಸರಿನ ಮ‌ೂಲದ ಬಗ್ಗೆ ಸರಿಯಾಗಿ ತಿಳಿದಿಲ್ಲ. ಪಾಲ್ ಫೋರ್ಡ್‌ನ ಕಂಪಾನಿಯನ್ ಟು ನಾರ್ನಿಯಾ ದ ಪ್ರಕಾರ ಲೆವಿಸ್‌, ನಾರ್ ನದಿಯ ನಂತರ ಕ್ರಿ. ಪೂ. 299ರಲ್ಲಿ ಅಧೀನಕ್ಕೆ ತೆಗೆದುಕೊಂಡ ರೋಮನ್ನರು ನಾರ್ನಿಯಾ ಎಂದು ಮರುಹೆಸರಿಸಿದ, ಪ್ರಾಚೀನ ಇಟಲಿಯ ಅಂಬ್ರಿಯ ನಗರದ ನಿಕ್ವಿನಿಯಂಅನ್ನು ಪರೋಕ್ಷವಾಗಿ ಸೂಚಿಸುತ್ತಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ. ಲೆವಿಸ್‌ ಆಕ್ಸ್‌ಫರ್ಡ್‌ನಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಓದಿದ್ದರಿಂದ, ಅವನು ನಾರ್ನಿಯಾಕ್ಕೆ ಕನಿಷ್ಠ ಏಳು ಅಥವಾ ಅದಕ್ಕಿಂತ ಹೆಚ್ಚು ಉಲ್ಲೇಖಗಳನ್ನು ಲ್ಯಾಟಿನ್ ಸಾಹಿತ್ಯದಿಂದ ಪಡೆದಿರಬಹುದಾದ ಸಾಧ್ಯತೆ ಇದೆ.[] ಮಧ್ಯಯುಗದ ಮತ್ತು ಪುನರುತ್ಥಾನ ಸಾಹಿತ್ಯವನ್ನು ಅಧ್ಯಯನ ಮಾಡಿದ ಲೆವಿಸ್‌, 1501ರ ಜರ್ಮನ್ ಧರ್ಮಗ್ರಂಥ ಎರ್ಕೋಲೆ ಡಿಎಸ್ಟೆ ಬರೆದ ವಂಡರ್ಲಿಚಿ ಗೆಸ್ಚಿಚ್ಟನೆ ವನ್ ಗೈಸ್ಟ್ಲಿಚೆನ್ ವೈಬಿಲ್ಡರ್ನ್ ("ಕ್ರೈಸ್ತ ಸನ್ಯಾಸಿನಿಯರ ಅಧ್ಬುತ ಕಥೆಗಳು")‌ನಲ್ಲಿನ ಲ್ಯೂಸಿಯಾ ವನ್ ನಾರ್ನಿಯಾ ("ಲ್ಯೂಸಿ ಆಫ್ ನಾರ್ನಿಯಾ")ದ ಉಲ್ಲೇಖದ ಬಗ್ಗೆ ತಿಳಿದಿರಬಹುದಾದ ಸಂಭವವೂ ಇದೆ (ಆದರೆ ಯಾವುದೇ ಪ್ರಬಲ ಸಾಕ್ಷ್ಯವಿಲ್ಲ).[೧೯] ಟಾಲ್ಕೀನ್‌ನ ಮರಣಾನಂತರ ಪ್ರಕಟಗೊಂಡ ನಾರ್ನ್ ಐ ಚಿನ್ ಹ್ಯುರಿನ್ ‌ನಲ್ಲಿರುವ ಕ್ರೈಸ್ತ ಪಾದ್ರಿ ಅಥವಾ ಕಾವ್ಯಾತ್ಮಕ ನಿರೂಪಕ ಎಂಬರ್ಥವಿರುವ ಅವನ ಎಲ್ವಿಶ್ (ಸಿಂಡರಿನ್) ಪದ ನಾರ್ನ್ ಒಂದಿಗೆ ಹೋಲಿಕೆ ಇರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರವಿಲ್ಲ. ಇದರ ಬಗ್ಗೆ ಲೆವಿಸ್‌ ಸುಳಿವು ಪಡೆಯಲ್ಲಿ ಓದಿರಬಹುದು ಅಥವಾ ಕೇಳಿರಬಹುದು.

ಇತರೆಗಳ ಮೇಲಿನ ನಾರ್ನಿಯಾದ ಪ್ರಭಾವ

ಬದಲಾಯಿಸಿ

ಲೇಖಕರ ಮೇಲಿನ ಪ್ರಭಾವ

ಬದಲಾಯಿಸಿ

ಇತ್ತೀಚಿನ ಬ್ರಿಟಿಷ್ ಕಾದಂಬರಿಗಳ ಸರಣಿ ಫಿಲಿಪ್ ಪುಲ್‌ಮ್ಯಾನ್‌ಹಿಸ್ ಡಾರ್ಕ್ ಮೆಟೀರಿಯಲ್ಸ್ ಅನ್ನು ನಾರ್ನಿಯಾದ ಪುಸ್ತಕಗಳ ಪ್ರತಿಕ್ರಿಯೆಯಾಗಿ ಮ‌ೂಡಿಬಂದ ಕೃತಿಯಾಗಿದೆ. ಸ್ವಯಂ-ಘೋಷಿತ ನಾಸ್ತಿಕ ಪುಲ್‌ಮ್ಯಾನ್‌ನ ಸರಣಿಯು ನಾರ್ನಿಯಾದ ಸರಣಿಯಲ್ಲಿ ವ್ಯಾಪಿಸಿಕೊಂಡಿರುವ ಆಧ್ಯಾತ್ಮಿಕ ಅಂಶಗಳನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತದೆ. ಆದರೆ ಅಂತಹುದೇ ಅನೇಕ ವಿವಾದಾಂಶಗಳನ್ನು ನಿರೂಪಿಸುತ್ತದೆ ಮತ್ತು ಅದೇ ರೀತಿಯ ಕೆಲವು ಪಾತ್ರಗಳನ್ನು (ಮಾತನಾಡುವ ಪ್ರಾಣಿಗಳನ್ನೂ ಒಳಗೊಂಡಂತೆ) ಪರಿಚಯಿಸುತ್ತದೆ.[೨೦][೨೧][೨೨][೨೩] ಹಿಸ್ ಡಾರ್ಕ್ ಮೆಟೀರಿಯಲ್ಸ್ ಮತ್ತು ಮೊದಲು ಪ್ರಕಟಗೊಂಡ ನಾರ್ನಿಯಾ ಪುಸ್ತಕಗಳೆರಡೂ ಬಟ್ಟೆಬೀರಿನಲ್ಲಿ ಅಡಗಿಕೊಂಡಿರುವ ಒಬ್ಬಳು ಎಳೆಯ ಹುಡುಗಿಯ ಕಥೆಯೊಂದಿಗೆ ಆರಂಭಗೊಳ್ಳುತ್ತವೆ.

ಕಲ್ಪನಾಶಕ್ತಿಯ ಲೇಖಕ ನೈಲ್ ಗೈಮ್ಯಾನ್‌ 2004ರಲ್ಲಿ ದ ಪ್ರೋಬ್ಲೆಮ್ ಆಫ್ ಸೂಸಾನ್ [೨೪] ಎಂಬ ಒಂದು ಸಣ್ಣ ಕಥೆಯನ್ನು ಬರೆದನು. ಅದರಲ್ಲಿ ಒಬ್ಬಳು ಹಿರಿಯ ಮಹಿಳೆ ಪ್ರೊಫೆಸರ್ ಹೇಸ್ಟಿಂಗ್ಸ್‌ಳನ್ನು, ರೈಲು ಅಪಘಾತವೊಂದರಲ್ಲಿ ಅವಳ ಇಡೀ ಕುಟುಂಬ ಸಾವನ್ನಪ್ಪಿದುದರ ಆಘಾತ ಮತ್ತು ದುಃಖದಲ್ಲಿರುವಂತೆ ಚಿತ್ರಿಸಲಾಗಿದೆ. ಆ ಮಹಿಳೆಯ ಕೊನೆಯ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ. ಆದರೆ ಆಕೆ ಅವಳ ಸಹೋದರನನ್ನು "ಎಡ್" ಎಂದು ಪ್ರಸ್ತಾವಿಸುತ್ತಾಳೆ. ಇದು ಹಿರಿಯ ಮಹಿಳೆಯಾಗಿರುವುದು ಸೂಸಾನ್ ಪೆವೆನ್ಸಿ ಎಂಬುದನ್ನು ಬಲವಾಗಿ ಸೂಚಿಸುತ್ತದೆ. ಕಥೆಯಲ್ಲಿ ಗೈಮ್ಯಾನ್, ಸೂಸಾನ್‌ನ ಬಗೆಗಿನ ಲೆವಿಸ್‌ನ ನಿರೂಪಣೆಯ ವಿಮರ್ಶನ ಕಲೆಯಾಗಿ ಕಾಲ್ಪನಿಕ ರೂಪದಲ್ಲಿ ಪ್ರಸ್ತಾಪಿಸುತ್ತಾನೆ. ದ ಪ್ರೋಬ್ಲೆಮ್ ಆಫ್ ಸೂಸಾನ್ ಅನ್ನು ವಯಸ್ಕ ಓದುಗರಿಗಾಗಿ ಬರೆಯಲಾಗಿದೆ ಹಾಗೂ ಇದು ಲೈಂಗಿಕತೆ ಮತ್ತು ದೌರ್ಜನ್ಯದ ಬಗ್ಗೆ ತಿಳಿಸುತ್ತದೆ.[೨೫] ಗೈಮ್ಯಾನ್‌ನ ವಯಸ್ಕರ-ಭಯಾನಕ-ಕಿರು-ಕಾದಂಬರಿ ಕೊರಲಿನ್‌ ಅನ್ನೂ ಸಹ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಒಂದಿಗೆ ಹೋಲಿಕೆ ಮಾಡಬಹುದು. (ಎರಡೂ ಪುಸ್ತಕಗಳು, ಎಳೆಯ ಹುಡುಗಿಯರು ಅವರ ಮನೆಯಲ್ಲಿರುವ ಬಾಗಿಲುಗಳ ಮ‌ೂಲಕ ಮಾಂತ್ರಿಕ ಲೋಕಕ್ಕೆ ಹೋಗುವ ಮತ್ತು ಮಾತನಾಡುವ ಪ್ರಾಣಿಗಳ ಸಹಾಯದಿಂದ ದುಷ್ಟಶಕ್ತಿಗಳೊಂದಿಗೆ ಹೋರಾಡುವ ಕಥೆಯನ್ನು ಒಳಗೊಂಡಿವೆ.) ಹೆಚ್ಚುವರಿಯಾಗಿ, ಗೈಮ್ಯಾನ್‌ನ ಸ್ಯಾಂಡ್‌ಮ್ಯಾನ್‌ ರೇಖಾಚಿತ್ರಗಳ ಕಾದಂಬರಿ ಸರಣಿಯು ಅದರ ಎ ಗೇಮ್ ಆಫ್ ಯು ಎಂಬ ಶೀರ್ಷಿಕೆಯ ಕಥೆಯಲ್ಲಿ ನಾರ್ನಿಯಾ-ರೀತಿಯ "ಕನಸಿನ ದ್ವೀಪ"ವೊಂದನ್ನು ನಿರೂಪಿಸುತ್ತದೆ.

ಕ್ಯಾಥೆರಿನ್ ಪ್ಯಾಟರ್ಸನ್‌ಳ ಪುಸ್ತಕ ಬ್ರಿಡ್ಜ್ ಟು ಟೆರಬಿಥಿಯಾ ದಲ್ಲಿ, ಒಂದು ಪ್ರಮುಖ ಪಾತ್ರ ಲೆಸ್ಲಿಯು ಮತ್ತೊಂದು ಮುಖ್ಯ ಪಾತ್ರ ಜೆಸ್ಸಿಗೆ ತನ್ನ ಅಚ್ಚುಮೆಚ್ಚಿನ C. S. ಲೆವಿಸ್‌ನ ಪುಸ್ತಕದ ಬಗ್ಗೆ ಹೇಳುತ್ತಾಳೆ ಮತ್ತು ನಾರ್ನಿಯಾ ದ ಬಗ್ಗೆ ಸೂಚಿಸುತ್ತಾಳೆ. ಕೆಲವರು ಪ್ಯಾಟರ್ಸನ್‌ಳ ಪುಸ್ತಕವು "ಟೆರಬಿಂಥಿಯಾ" ಹೆಸರಿಗೆ ನಾರ್ನಿಯಾ ದ್ವೀಪದ ಹೆಸರನ್ನು ತೆಗೆದುಕೊಂಡಿದೆ ಎಂದು ಹೇಳುತ್ತಾ ಆಕೆ ಕೃತಿಚೌರ್ಯ ಮಾಡಿದ್ದಾಳೆಂದು ದೂರಿದ್ದಾರೆ; ಆದರೆ ಪ್ಯಾಟರ್ಸನ್‌ ಆ ಉಲ್ಲೇಖವು ಉದ್ದೇಶಪೂರ್ವಕವಾದುದಲ್ಲ ಎಂದು ಹೇಳಿಕೊಂಡಿದ್ದಾಳೆ.[೨೬]

ವಿಜ್ಞಾನ-ಕಾಲ್ಪನಿಕ ಲೇಖಕ ಗ್ರೆಗ್ ಏಗನ್‌ನ ಸಣ್ಣ ಕಥೆ ಒರಾಕಲ್ , ಕಾಲ್ಪನಿಕ ನೆಸಿಕಾ ಸಾಮ್ರಾಜ್ಯದ ಬಗ್ಗೆ ಕಾದಂಬರಿಗಳನ್ನು ಬರೆದ ಮತ್ತು ಪತ್ನಿಯು ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪುವ "ಜ್ಯಾಕ್" ಎಂಬ ಉಪನಾಮದ ಲೇಖಕನ ಕಾದಂಬರಿಯೊಂದಿಗೆ ಹೋಲಿಕೆಯಿರುವ ಲೋಕವನ್ನು ನಿರೂಪಿಸುತ್ತದೆ. ಈ ಕಥೆಯು ಧರ್ಮದ ಸಮಸ್ಯೆಗಳನ್ನು ಹಾಗೂ ವಿಜ್ಞಾನ ಮತ್ತು ಜ್ಞಾನದ ನಡುವಿನ ಸತ್ಯವನ್ನು ಪರಿಶೋಧಿಸಲು ನಾರ್ನಿಯಾದ ಅನೇಕ ಸಾಂಕೇತಿಕ ನಿರೂಪಣೆಗಳನ್ನು ಬಳಸಿಕೊಳ್ಳುತ್ತದೆ.[೨೭]

ಜನಪ್ರಿಯ ಸಂಸ್ಕೃತಿಯ ಮೇಲಿನ ಪ್ರಭಾವ

ಬದಲಾಯಿಸಿ

ಯಾವುದೇ ಜನಪ್ರಿಯ, ದೀರ್ಘಕಾಲಿಕ ಕೃತಿಯ ಬಗ್ಗೆ ಒಬ್ಬರು ನಿರೀಕ್ಷಿಸುವಂತೆ ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ದ ಉಲ್ಲೇಖಗಳು ಪಾಪ್ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿವೆ. ಬಟ್ಟೆಬೀರಿನ ಮ‌ೂಲಕ ಪ್ರಯಾಣಿಸುವ ಅಸ್ಲಾನ್ ಸಿಂಹದ ಉಲ್ಲೇಖಗಳು ಮತ್ತು ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ದ ನೇರ ಉಲ್ಲೇಖಗಳು ಪುಸ್ತಕ, ದೂರದರ್ಶನ, ಹಾಡು, ಆಟ ಮತ್ತು ರೇಖಾಚಿತ್ರಗಳ ಕಾದಂಬರಿಗಳಲ್ಲಿ ಕಂಡುಬರುತ್ತವೆ.

ನಾರ್ನಿಯಾದ ಸಂಗೀತ ಉಲ್ಲೇಖಗಳು ಬಿಲ್ಲಿ ಬ್ರೀತ್ಸ್‌ ಎಂಬ ಆಲ್ಬಂನ ಫಿಲಿಶ್‌ನ ಹಾಡು ಪ್ರಿನ್ಸ್ ಕ್ಯಾಸ್ಪಿಯನ್ ಅನ್ನು ಒಳಗೊಂಡಿವೆ.

ರೇಖಾಚಿತ್ರಗಳ ಕಾದಂಬರಿ ದ ಲೀಗ್ ಆಫ್ ಎಕ್ಸ್ಟ್ರಾರ್ಡಿನರಿ ಜಂಟಲ್‌ಮ್ಯಾನ್‌ (ಸಂಪುಟ 2, ಸಂಖ್ಯೆ 1) ಕಲ್ಪನಾಶಕ್ತಿಯ ಸಾಹಿತ್ಯದ ಅನೇಕ ಪ್ರಸಿದ್ಧ ಕೃತಿಗಳಿಗೆ ಹಲವಾರು ಉಲ್ಲೇಖಗಳನ್ನು ನೀಡಿದೆ. ಒಂದು ಗ್ರಂಥಭಾಗವು ದ ಮ್ಯಾಜಿಶಿಯನ್ಸ್ ನೆಫ್ಯೂ ವಿನ ಸೇಬು ಹಣ್ಣಿನ ಮರವನ್ನು ನಿರೂಪಿಸುತ್ತದೆ. ಸರಣಿಯಲ್ಲಿನ ಹಾಸ್ಯ ವ್ಯಕ್ತಿಯೊಂದು ಸೇಬು ಹಣ್ಣಿನ ಮರದಿಂದ ಬಟ್ಟೆಬೀರನ್ನು ಮಾಡುವ ಸಾಧ್ಯತೆಯ ಬಗ್ಗೆ ಸೂಚಿಸುತ್ತದೆ.

ಜನಪ್ರಿಯ ದೂರದರ್ಶನವೊಂದು ಅಸ್ಲಾನ್‌ನ ಅನೇಕ ರೂಪಗಳನ್ನು ಒಳಗೊಂಡ ನಾರ್ನಿಯಾವನ್ನು ಸೂಚಿಸುವ ಸೌತ್ ಪಾರ್ಕ್ ‌‌ಅನ್ನು ಪ್ರದರ್ಶಿಸಿದೆ; "ಫ್ಯಾಮಿಲಿ ಗೇ"ಯಲ್ಲಿ ಮಿ. ತುಮ್ನಸ್ ಒಂದು ಪಾತ್ರಾಭಿನಯ ಮಾಡುತ್ತಾನೆ; ಲೋಸ್ಟ್ ‌ನ ಒಂದು ಪಾತ್ರಕ್ಕೆ ಚಾರ್ಲೋಟ್ ಸ್ಟ್ಯಾಪ್ಲೆಸ್ ಲೆವಿಸ್‌ ಎಂದು ಹೆಸರಿಡಲಾಗಿದೆ.

ನಾರ್ನಿಯಾದ ಬಗ್ಗೆ ಸೂಚ್ಯವಾದ ಉಲ್ಲೇಖವನ್ನು ಹೊಂದಿರುವ ಒಂದು ಕಂಪ್ಯೂಟರ್ ಆಟವೆಂದರೆ ಸೈಮನ್ ದ ಸಾರ್ಕರರ್. ಇದರಲ್ಲಿ ಮುಖ್ಯ ಪಾತ್ರವು ಕಲ್ಲಿನ ಮೇಜೊಂದನ್ನು ಕಂಡುಹಿಡಿದು ಅದನ್ನು "ಅತಿದೊಡ್ಡ ಪ್ರಮಾಣದ ಆಹಾರ ಮತ್ತು ಕೇಸರಗಳಿಲ್ಲದ ಸಿಂಹಕ್ಕೆ ಸೂಕ್ತವಾದುದು" ಎಂದು ಕರೆಯುವ ಒಂದು ದೃಶ್ಯವಿದೆ.

ಲಿಂಗ ರೂಢರೂಪಕ್ಕೆ ತರುವುದು

ಬದಲಾಯಿಸಿ

C. S. ಲೆವಿಸ್‌ ಮತ್ತು ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಹಲವಾರು ವರ್ಷಗಳ ಕಾಲ ಸಮಕಾಲೀನ ಲೇಖಕರಿಂದ ಅನೇಕ ಟೀಕೆಗಳಿಗೆ ಒಳಗಾಯಿತು. ದ ಲಾಸ್ಟ್ ಬ್ಯಾಟಲ್‌ ‌ನಲ್ಲಿನ ಸೂಸಾನ್ ಪೆವೆನ್ಸಿಯ ವಿವರಣೆಯಲ್ಲಿ ಲೆವಿಸ್‌ ಸೂಸಾನ್‌ಳನ್ನು "ನಾರ್ನಿಯಾದ ಸ್ನೇಹಿತಳಲ್ಲ" ಮತ್ತು "ನೈಲಾನ, ಲಿಪ್‌ಸ್ಟಿಕ್ ಮತ್ತು ಆಮಂತ್ರಣಗಳಲ್ಲದ ಹೊರತು ಬೇರೆ ಯಾವುದರಲ್ಲೂ ಆಸಕ್ತಿಯನ್ನು ಹೊಂದಿಲ್ಲ" ಎಂದು ಚಿತ್ರಿಸುವ ಮ‌ೂಲಕ ಲಿಂಗ ಭೇದಭಾವದ ವಿಷಯಗಳನ್ನು ಒತ್ತಿಹೇಳಿದ್ದಾನೆ.

ಹ್ಯಾರಿ ಪಾಟರ್‌ ಪುಸ್ತಕ ಸರಣಿಯ ಲೇಖಕಿ J.K. ಹೀಗೆ ಹೇಳಿದ್ದಾಳೆ:

ವಯಸ್ಸಾದ ಹುಡುಗಿ ಸೂಸಾನ್ ಲಿಪ್‌ಸ್ಟಿಕ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದರಿಂದಾಗಿಯೇ ನಾರ್ನಿಯಾಕ್ಕೆ ಬರುತ್ತಾಳೆ, ಎಂಬ ವಿಷಯವನ್ನು ಇಲ್ಲಿ ಗಮನಿಸಬೇಕು. ಹುಡುಗಿ ಎಂಬ ಕಾರಣಕ್ಕಾಗಿ ಹಿಂಸೆಗೊಳಗಾಗುವುದರಿಂದ, ಅವಳು ಧರ್ಮವಿರೋಧಿಯಾಗುತ್ತಾಳೆ. ಈ ಬಗ್ಗೆ ನನಗೂ ದೊಡ್ಡ ಸಮಸ್ಯೆ ಇದೆ.[೨೮]

ಹಿಸ್ ಡಾರ್ಕ್ ಮೆಟೀರಿಯಲ್ಸ್ ‌‍‌ ಕೃತಿತ್ರಯ ಲೇಖಕ ಮತ್ತು ಲೆವಿಸ್‌ನ ಕೃತಿಯ ತೀವ್ರ ವಿಮರ್ಶಕ ಫಿಲಿಪ್ ಪುಲ್‌ಮ್ಯಾನ್‌[೨೦][೨೧][೨೨][೨೩] ನಾರ್ನಿಯಾ ಕಥೆಗಳನ್ನು "ಮಹಿಳೆಗೆ ಭಾರಿ ಅಗೌರವ ತರುವವು" ಎಂದು ಹೇಳಿದ್ದಾನೆ.[೨೯] ಅಲ್ಲದೇ ಕಥೆಯಲ್ಲಿನ ಸೂಸಾನ್‌ಳ ಚಿಕ್ಕಭಾಗವನ್ನು ಹೀಗೆಂದು ವಿವರಿಸಿದ್ದಾನೆ:

ಸಿಂಡೆರೆಲ್ಲಾ ಮಾದರಿಯ ಸೂಸಾನ್ ಅವಳ ಜೀವನದ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಪರಿವರ್ತನೆಯಾಗುತ್ತಾಳೆ. ಲೆವಿಸ್‌ ಅದನ್ನು ಒಪ್ಪುವುದಿಲ್ಲ. ಅವನು ಸಾಮಾನ್ಯವಾಗಿ ಮಹಿಳೆಯರನ್ನು ಅಥವಾ ಲೈಂಗಿಕತೆಯನ್ನು, ಕನಿಷ್ಠ ಪಕ್ಷ ನಾರ್ನಿಯಾ ಪುಸ್ತಕಗಳನ್ನು ಬರೆಯುವಾಗಿನ ಹಂತದಲ್ಲೂ ಇಷ್ಟಪಡುತ್ತಿರಲಿಲ್ಲ. ಅವನು ವಿವೇಕದಿಂದ ಬೆಳೆಯಬೇಕಾದ ಉದ್ದೇಶದ ಬಗ್ಗೆ ಗಾಬರಿಯಾದನು.[೩೦]

ಅಭಿಮಾನಿಗಳ ನಿಯತಕಾಲಿಕದ ಸಂಪಾದಕ ಆಂಡ್ರಿವ್ ರಿಲ್‌ಸ್ಟೋನ್, "ಲಿಪ್‌ಸ್ಟಿಕ್‌, ನೈಲಾನ್ ಮತ್ತು ಆಮಂತ್ರಣ"ಗಳ ಉದ್ಧರಣವನ್ನು ಸಂದರ್ಭದ ಹೊರಗಿನಿಂದ ಪಡೆಯಲಾಗಿದೆ, ಎಂದು ವಾದಿಸುವ ಮ‌ೂಲಕ ಈ ಅಭಿಪ್ರಾಯವನ್ನು ವಿರೋಧಿಸುತ್ತಾನೆ. ಇದನ್ನು ಸೂಸಾನ್ ನಾರ್ನಿಯಾವನ್ನು ನಂಬುವುದಿಲ್ಲವಾದ್ದರಿಂದ ಅವಳನ್ನು ಅದರಿಂದ ಹೊರಗಿಡುವ ಮ‌ೂಲಕ ದ ಲಾಸ್ಟ್ ಬ್ಯಾಟಲ್‌ ನಲ್ಲಿ ತೋರಿಸಲಾಗುತ್ತದೆ. ದ ಲಾಸ್ಟ್ ಬ್ಯಾಟಲ್‌ ‌ನ ಕೊನೆಯಲ್ಲಿ ಸೂಸಾನ್ ಮತ್ತೆಯ‌ೂ ಜೀವಂತವಿರುತ್ತಾಳೆ; ಅವಳ ಅಂತಿಮ ಭವಿಷ್ಯದ ಬಗ್ಗೆ ಸರಣಿಯಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ. ಸೂಸಾನ್‌ಳ ಬಾಲ್ಯ ಮತ್ತು ಲೈಂಗಿಕ ಬೆಳವಣಿಗೆಯ ಬಗ್ಗೆ ದ ಹೋರ್ಸ್ ಆಂಡ್ ಹಿಸ್ ಬಾಯ್ ‌ನಲ್ಲಿ ಗುಣಾತ್ಮಕವಾಗಿಯೇ ಚಿತ್ರಿಸಲಾಗಿದೆ. ಆದ್ದರಿಂದ ಅವಳನ್ನು ನಾರ್ನಿಯಾದಿಂದ ಹೊರಹಾಕುವುದಕ್ಕೆ ಇವು ಅಸಂಭವ ಕಾರಣಗಳಾಗಿವೆ. ಇದೂ ಅಲ್ಲದೇ, ದ ಸಿಲ್ವರ್ ಚೇರ್ ‌ನಲ್ಲಿ ಜಿಲ್ ಪೋಲ್, ದ ಹೋರ್ಸ್ ಆಂಡ್ ಹಿಸ್ ಬಾಯ್ ‌ನಲ್ಲಿ ಅರವಿಸ್ ಟಾರ್ಖೀನಾ, ದ ಮ್ಯಾಜಿಶಿಯನ್ಸ್ ನೆಫ್ಯೂ ‌ವಿನಲ್ಲಿ ಪಾಲಿ ಪ್ಲಮ್ಮರ್‌ ಮತ್ತು ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನಲ್ಲಿ ಲ್ಯೂಸಿ ಪೆವೆನ್ಸಿ ಮೊದಲಾದವರನ್ನು ಒಳಗೊಂಡಂತೆ ಅನೇಕ ಲೆವಿಸ್‌ ಬೆಂಬಲಿಗರು ಈ ಕಾದಂಬರಿ ಸರಣಿಯಲ್ಲಿನ ಮಹಿಳೆಯರ ಗುಣಾತ್ಮಕ ಪಾತ್ರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಲ್ಯೂಸಿಯದು ಮಾನವೀಯ ಗುಣಲಕ್ಷಣಗಳುಳ್ಳ ಹೆಚ್ಚು ಪ್ರಶಂಸನೀಯ ಪಾತ್ರವಾಗಿದೆ; ಅಲ್ಲದೇ ಈ ಕಥೆಗಳಲ್ಲಿ ಹುಡುಗರಿಗಿಂತ ಹುಡುಗಿಯರನ್ನೇ ಹೆಚ್ಚಾಗಿ ಉತ್ತಮ ರೀತಿಯಲ್ಲಿ ಚಿತ್ರಿಸಲಾಗಿದೆ, ಎಂದು ಜ್ಯಾಕೋಬ್ಸ್ ಸಮರ್ಥಿಸುತ್ತಾನೆ.[೧೧][೩೧][೩೨] ಸ್ಟೀವನ್ಸ್ ಪಾಯಿಂಟ್‌ನ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಕ್ಯಾರಿನ್ ಫ್ರೈ ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಆಂಡ್ ಫಿಲಾಸಫಿ ಗೆ ನೀಡಿದ ಲೇಖನದಲ್ಲಿ, "ಕ್ರೋನಿಕಲ್ಸ್‌ ‌ನಲ್ಲಿನ ಹೆಚ್ಚು ಸ್ನೇಹಪರ ಹುಡುಗಿಯ ಪಾತ್ರಗಳೆಂದರೆ ಮಹಿಳೆಯರ ಸಾಂಪ್ರದಾಯಿಕ ಪಾತ್ರವನ್ನು ಪ್ರಶ್ನಿಸುವವರು ಮತ್ತು ಹುಡುಗರಂತೆ ಸಾಹಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮ‌ೂಲಕ ಅಸ್ಲಾನ್‌ಗೆ ಅವರ ಯೋಗ್ಯತೆಯನ್ನು ತೋರಿಸಿಕೊಡುವವರು" ಎಂದು ಸೂಚಿಸುತ್ತಾಳೆ.[೩೩] ಫ್ರೈ ಹೀಗೆಂದು ಹೇಳುತ್ತಾ ಮುಂದುವರಿಯುತ್ತಾಳೆ -

ಲಿಂಗಗಳ ಮಧ್ಯೆ ಸಮಾನತೆಯನ್ನು ಸೂಚಿಸುವ ಮ‌ೂಲಕ ಗಂಡು ಮತ್ತು ಹೆಣ್ಣು ಪಾತ್ರಗಳ ಬಗ್ಗೆ ಹೇಳಲು ಅವುಗಳು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಹೊಂದಿರುತ್ತವೆ. ಹೆಣ್ಣು ಪಾತ್ರಗಳ ಹೆಚ್ಚಿನ ಗುಣಾತ್ಮಕ ಅಂಶಗಳು ಅವರ ಸ್ತ್ರೀಯತ್ವ ಎತ್ತಿಹಿಡಿದ ಹಾಗೆ ಕಂಡುಬರುವುದೇ ಸಮಸ್ಯೆಯಾಗಿದೆ. ರೂಢ ಮಾದರಿಯ(ಏಕ ರೂಪದ) ಹೆಣ್ಣಿನ ಆಸಕ್ತಿಗಳ ಕ್ಷುಲ್ಲಕ ಲಕ್ಷಣವು ಆಪಾದನೆಗೊಳಗಾಗುತ್ತದೆ.[೩೩]

(ಪೂರ್ವಾಗ್ರಹ) ಲಿಂಗಭೇದದೊಂದಿಗೆ ನಾರ್ನಿಯಾ ಸರಣಿಯು ಜನಾಂಗ ಭೇದ ನೀತಿಯನ್ನೂ ಉತ್ತೇಜಿಸಿದೆ, ಎಂದು ಪುಲ್‌ಮ್ಯಾನ್ ಆಪಾದಿಸಿದ್ದಾನೆ.[೨೯][೩೪] ನಿರ್ದಿಷ್ಟವಾಗಿ ದ ಹೋರ್ಸ್ ಆಂಡ್ ಹಿಸ್ ಬಾಯ್ ‌ನಲ್ಲಿ ಹೇಳಲಾಗಿರುವ ಜನಾಂಗ ಭೇದ ನೀತಿಯ ಬಗ್ಗೆ ವೃತ್ತಪತ್ರಿಕೆಯ ಸಂಪಾದಕ ಕೈರೀ ಒಕಾನ್ನರ್ ಹೀಗೆಂದು ಹೇಳಿದ್ದಾನೆ:

ಇದು ತುಂಬಾ ಬೇಸರ ಹುಟ್ಟಿಸುವುದಾಗಿದೆ. ಪುಸ್ತಕದ ಕಥೆ ಹೇಳುವ ಮೌಲ್ಯಗಳು ಅಗಾಧವಾಗಿದ್ದರೂ, ಅರಬ್-ವಿರೋಧಿ ಅಥವಾ ಪೌರಾತ್ಯ-ವಿರೋಧಿ ಅಥವಾ ಆಟಮನ್-ವಿರೋಧಿ ಕಲ್ಪನಾಶಕ್ತಿಗಳನ್ನು ಕಂಡುಹಿಡಿಯಲು ನೀವು ರಾಜಕೀಯ ತಜ್ಞ ರು ಅಥವಾ ಪಂಡಿತರಾಗಿರಬೇಕಾಗಿಲ್ಲ. ಹೆಚ್ಚಾಗಿ ಹೊಟ್ಟೆ ಬಿರಿಯೆ ನಗುವುದಕ್ಕಾಗಿ ನಿರೂಪಿಸಲಾದ ಅದರ ಎಲ್ಲಾ ರೂಢಮಾದರಿಯೊಂದಿಗೆ ಮತ್ತಷ್ಟು ಅಂಶಗಳು ಈ ಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.[೩೫]

ಜನಾಂಗ ಭೇದ ನೀತಿಯ ವಿಮರ್ಶೆಯು ಇತರ ಜನಾಂಗಗಳ ನಿರ್ದಿಷ್ಟವಾಗಿ ಕ್ಯಾಲರ್ಮೆನ್‌ರ ಋಣಾತ್ಮಕ ಚಿತ್ರಣವನ್ನು ಆಧರಿಸಿದೆ. ಕಾದಂಬರಿಕಾರ ಫಿಲಿಪ್ ಹೆನ್ಶರ್‌ ಮತ್ತು ಇತರ ವಿಮರ್ಶಕರು ಕ್ಯಾಲರ್ಮೆನ್ ಸಂಸ್ಕೃತಿಯ ನಿರೂಪಣೆಯನ್ನು ಇಸ್ಲಾಂ ಮೇಲಿನ ದಾಳಿಯೆಂದು ಪರಿಗಣಿಸಿದ್ದಾರೆ.[೩೬] ಕ್ಯಾಲರ್ಮೆನ್‌ರ ನಿರೂಪಣೆಯು ಆಟಮನ್ ಸಂಸ್ಕೃತಿಯ ಯುರೋಪಿನವರ ಅರಿವಿನಿಂದ ವರ್ಣಿಸಲ್ಪಟ್ಟಿದ್ದರೂ, ಲೆವಿಸ್‌ ನಿರೂಪಿಸಿದ ಕ್ಯಾಲರ್ಮೆನ್ ಧರ್ಮವು ಬಹುದೇವತಾ ಆರಾಧನೆಯ ಸಿದ್ಧಾಂತವಾಗಿದೆ. ಅಲ್ಲದೇ ಸ್ವಲ್ಪಮಟ್ಟಿಗೆ ಇಸ್ಲಾಂ ಧರ್ಮವನ್ನು ಹೋಲುತ್ತದೆ. ಅನೇಕ ಕ್ಯಾಲರ್ಮೆನ್‌ರನ್ನು, ವಿಶೇಷವಾಗಿ ದ ಹೋರ್ಸ್ ಆಂಡ್ ಹಿಸ್ ಬಾಯ್ ‌ನಲ್ಲಿನ ಅರಾವಿಸ್‌ ಮತ್ತು ದ ಲಾಸ್ಟ್ ಬ್ಯಾಟಲ್‌ನ ಕಿರಿಯ ಕ್ಯಾಲರ್ಮೆನ್ ಎಮ್ಮೆತ್‌ರನ್ನು, ಬುದ್ಧಿವಂತ ಮತ್ತು ಶ್ರೇಷ್ಠ ವ್ಯಕ್ತಿಗಳಾಗಿ ಚಿತ್ರಿಸಲಾಗಿದೆ.

ಪೇಗನಿಸಂ(ನಿಸರ್ಗ ಆರಾಧಕರ ಸಮಾಜ)

ಬದಲಾಯಿಸಿ

ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಸರಣಿಯು ಪೇಗನ್(ಅಧಾರ್ಮಿಕ) ಅಂಶಗಳನ್ನು ಪುನಾರಾವರ್ತಿಸುವುದರಿಂದ ಮತ್ತು ಯೇಸು ಕ್ರಿಸ್ತನನ್ನು ಮಾನವರೂಪಿ ಸಿಂಹವಾಗಿ ಅಸಂಪ್ರದಾಯಿಕ ರೀತಿಯಲ್ಲಿ ಚಿತ್ರಿಸಿರುವುದರಿಂದ ಇದು "ಪೇಗನಿಸಂ ಮತ್ತು ಇಂದ್ರಜಾಲ"ವನ್ನು ಪ್ರೇರೇಪಿಸುತ್ತದೆ; ಎಂದು ಭಾವಿಸಿದ ಕೆಲವು ಕ್ರಿಶ್ಚಿಯನ್ನರಿಂದ ಮತ್ತು ಕ್ರಿಶ್ಚಿಯನ್ ಸಂಸ್ಥೆಗಳಿಂದಲೂ ಲೆವಿಸ್‌ ಟೀಕೆಗೊಳಗಾದನು. ಗ್ರೀಕ್ ದೇವರು ಡಯಾನಿಸಸ್‌ ಮತ್ತು ಮೆನ್ಯಾಡ್‌‌ರನ್ನು ಸಾಮಾನ್ಯವಾಗಿ ಪೇಗನ್‌ನ ಪ್ರಮುಖ ಲಕ್ಷಣಗಳೆಂದು ಪರಿಗಣಿಸಲಾಗಿದೆ.ಆದರೂ ಅವನ್ನು ಧನಾತ್ಮಕವಾಗಿ ಚಿತ್ರಿಸಲಾಗಿದೆ, (ಅಸ್ಲಾನ್ ಇಲ್ಲದೆ ಅವನ್ನು ಭೇಟಿಯಾಗುವುದು ಸುರಕ್ಷಿತವಲ್ಲ). ಜೀವಂತ ರೂಪದ "ನದೀ ದೇವತೆ"ಯೊಂದನ್ನೂ ಗುಣಾತ್ಮಕವಾಗಿ ತೋರಿಸಲಾಗಿದೆ.[೩೭][೩೮] ಕ್ರೈಸ್ಟಿನಿಟಿ ಟುಡೆ ಯ ಜೋಶ್ ಹರ್ಸ್ಟ್ ಪ್ರಕಾರ, "ಲೆವಿಸ್ ಅವನ ಪುಸ್ತಕಗಳನ್ನು ಕ್ರಿಶ್ಚಿಯನ್ ಸಾಂಕೇತಿಕ ನಿರೂಪಣೆ ಎಂದು ಕರೆಯಲು ಅನಿಶ್ಚತೆಯನ್ನು ಹೊಂದಿರುವುದು ಮಾತ್ರವಲ್ಲದೆ, ಕಥೆಗಳೂ ಸಹ ಬೈಬಲ್‌ನಿಂದ ಪಡೆದಂತೆ ಪೇಗನ್ ಪುರಾಣದಿಂದಲೂ ಅಂಶಗಳನ್ನು ಹೊಂದಿವೆ".[೩೯]

ಪೇಗನ್ ಪುರಾಣವು ವ್ಯಕ್ತಿಯೊಬ್ಬನ ಇತಿಹಾಸ ಮತ್ತು ಕಲ್ಪನಾತ್ಮಕ ಜೀವನ, ಎರಡರಲ್ಲೂ ಕ್ರೈಸ್ತ ಧರ್ಮಕ್ಕೆ ಪೂರ್ವಸಿದ್ಧತೆಯಾಗಿ ಪ್ರಭಾವ ಬೀರುತ್ತದೆ, ಎಂದು ಲೆವಿಸ್‌ ನಂಬಿದ್ದನು. ಅಲ್ಲದೆ ಆಧುನಿಕ ಮಾನವನು ಎಷ್ಟೊಂದು ಶೋಚನೀಯ ಪರಿಸ್ಥಿತಿಯಲ್ಲಿದ್ದಾನೆ; ಎಂದರೆ ಬಹುಶಃ "ಜನರನ್ನು ಮೊದಲು ಉತ್ತಮ ಪೇಗನ್ನರಾಗಿ ಮಾಡಿ ನಂತರ ಕ್ರಿಶ್ಚಿಯನ್ನರಾಗಿ ಮಾಡಬೇಕಾದಷ್ಟು" ಎಂದು ಸೂಚಿದ್ದಾನೆ.[೪೦] ಆತನು ಹೀಗೆಂದೂ ವಾದಿಸಿದ್ದಾನೆ - ಪ್ರಾಚೀನ ಪುರಾಣದ ಕಲ್ಪನಾತ್ಮಕ ಸುಖಾನುಭವವು ಅದರ ಇತಿಹಾಸದಿಂದಾಗಿ ಕ್ರಿಶ್ಚಿಯನ್ ಸಂಸ್ಕೃತಿಯ ಒಂದು ವಿಶಿಷ್ಟ ಲಕ್ಷಣವಾಗಿದೆ. ಅಲ್ಲದೇ ಯುರೋಪಿನ ಸಾಹಿತ್ಯವು ಮ‌ೂರು ಅಂಶಗಳನ್ನು ಒಳಗೊಂಡಿದೆ: ನೈಸರ್ಗಿಕ, ನಿಜವೆಂದು ನಂಬಲಾದ ಆಧ್ಯಾತ್ಮಿಕ (ಆಚರಿಸಲ್ಪಡುವ ಧರ್ಮ), ಕಲ್ಪನೆಯೆಂದು ನಂಬಲಾದ ಆಧ್ಯಾತ್ಮಿಕ (ಪುರಾಣ). ಲೆವಿಸ್‌ ಕ್ರಿಶ್ಚಿಯನ್-ನಂತರದ ಸಂಸ್ಕೃತಿಯನ್ನು ತಲುಪಲು ಕ್ರಿಶ್ಚಿಯನ್-ಹಿಂದಿನ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ನಂಬಿದ್ದನು ಎಂದು ಲೆವಿಸ್‌ ಬಗೆಗಿನ ಮ‌ೂರು ಪುಸ್ತಕಗಳ ಲೇಖಕ ಕೊಲಿನ್ ಡ್ಯೂರಿಯಜ್ ಸೂಚಿಸಿದ್ದಾನೆ.[೪೧] ಲೆವಿಸ್‌ ಆಧುನಿಕತಾ ಸಿದ್ಧಾಂತವು ಯಾಂತ್ರೀಕರಿಸುವಂತದ್ದು ಮತ್ತು ನೀರಸವಾದುದು. ಅಲ್ಲದೇ ಪ್ರಪಂಚದ ನೈಸರ್ಗಿಕ ಸಂಬಂಧಕ್ಕೆ ಇದು ತಡೆಯಾಗಿದೆ ಎಂದು ಭಾವಿಸಿ ಇಷ್ಟಪಡುತ್ತಿರಲಿಲ್ಲ. ಅವನು ಕ್ರಿಶ್ಚಿಯನ್-ಹಿಂದಿನ ಪೇಗನ್ ಸಂಸ್ಕೃತಿಯ ಬಗ್ಗೆ ಯಾವುದೇ ಕಟ್ಟುಪಾಡನ್ನು ಹೊಂದಿರಲಿಲ್ಲ. ಅವನು ಆಧುನಿಕತೆಯ ಅಧಾರ್ಮಿಕ ಆಜ್ಞೇಯತಾವಾದಿ(ನಾಸ್ತಿಕತೆಯ) ಪಾತ್ರವನ್ನು ತಿರಸ್ಕರಿಸಿದನು, ಆದರೆ ಪೇಗನ್ ಧರ್ಮದ ಬಹುದೇವತಾ ಸಿದ್ಧಾಂತವನ್ನಲ್ಲ.[೪೨][೪೩]

ಸ್ವಾಗತ ಪೂರ್ಣ ಪ್ರತಿಕ್ರಿಯೆ: ಧಾರ್ಮಿಕ ದೃಷ್ಟಿಕೋನದ ಪ್ರಭಾವ

ಬದಲಾಯಿಸಿ

ಆರಂಭಿಕ ವಿಮರ್ಶಾತ್ಮಕ ಪ್ರತಿಕ್ರಿಯೆಯು ಧನಾತ್ಮಕವಾಗಿತ್ತು, ಮತ್ತು ಸರಣಿಯು ಮಕ್ಕಳಿಂದಾಗಿ ಅತಿಶೀಘ್ರದಲ್ಲಿ ಜನಪ್ರಿಯವಾಯಿತು.[೪೪] ಅಂದಿನಿಂದ ಇಂದಿನವರೆಗಿನ ಕಥೆಗಳ ಗುಣಾತ್ಮಕ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳೆರಡೂ ಧಾರ್ಮಿಕ ದೃಷ್ಟಿಕೋನದಲ್ಲಿವೆ; ಎಂಬುದು ಸ್ಪಷ್ಟವಾಗಿದೆ. ಕೆಲವರು ಪುಸ್ತಕಗಳು ಪ್ರಬಲ ಮತಾಂತರಗೊಳಿಸುವ ಅಂಶವೆಂದು ಹೇಳಿದರೆ, ಮತ್ತೆ ಕೆಲವು ನಾಸ್ತಿಕ ಓದುಗರು ಅವರ ಸ್ವಂತ ಪ್ರಾಶಸ್ತ್ಯದೊಂದಿಗೆ ಪುಸ್ತಕಗಳನ್ನು ಆನಂದಿಸಬಹುದೆಂದು ಸೂಚಿಸಿದ್ದಾರೆ.[೪೫]

ನಾರ್ನಿಯಾ ಪುಸ್ತಕಗಳು ಅತಿಹೆಚ್ಚಿನ ಪ್ರಮಾಣದ ಕ್ರಿಶ್ಚಿಯನ್ ಅನುಯಾಯಿಗಳನ್ನು ಹೊಂದಿವೆ. ಅಲ್ಲದೆ ಅವನ್ನು ಕ್ರಿಶ್ಚಿಯನ್ ಚಿಂತನೆಗಳನ್ನು ಪ್ರಚೋದಿಸಲು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ. ನಾರ್ನಿಯಾ 'ಸಂಬಂಧ' ಕೃತಿಗಳು ನೇರವಾಗಿ ಕ್ರಿಶ್ಚಿಯನ್ ಓದುಗರಿಗೆ ಮಾತ್ರವಲ್ಲದೆ ಭಾನುವಾರದ ಶಾಲೆಗೂ ಮಾರಲ್ಪಟ್ಟವು.[೪೬] ಮೇಲೆ ತಿಳಿಸಿದಂತೆ, ಪೇಗನ್ ಚಿತ್ರಣವನ್ನು ಸೇರಿಸಿಕೊಂಡಿದುದಕ್ಕೆ ಅಥವಾ ಕ್ರಿಶ್ಚಿಯನ್ ಕಥೆಯನ್ನು ತಪ್ಪಾಗಿ ಸೂಚಿಸಿದುದಕ್ಕೆ ಸರಣಿಯನ್ನು ಹಲವಾರು ಕ್ರಿಶ್ಚಿಯನ್ನರು ಟೀಕಿಸಿದರು.[೪೭] ಪುಸ್ತಕಗಳನ್ನು ಟೀಕಿಸಿದ ಕ್ರಿಶ್ಚಿಯನ್ ಲೇಖಕರೆಂದರೆ - ಕಾಲ್ಪನಿಕ ಕಥೆಗಳ ಲೇಖಕ J.K. ರೋಲಿಂಗ್‌‌ ನೈತಿಕ ಆಧಾರದಲ್ಲಿ ದೂರಿದನು. (ವಿಮರ್ಶೆಯನ್ನು ಗಮನಿಸಿ) ಅಲ್ಲದೇ ಸಾಹಿತ್ಯಕ ವಿಮರ್ಶಕ ಜಾನ್ ಗೋಲ್ಡ್‌ವೈಟ್ ಪುಸ್ತಕಗಳಲ್ಲಿನ ಗಣ್ಯಪ್ರಜ್ಞೆ ಮತ್ತು ದೊಡ್ಡಸ್ತಿಕೆಗಾಗಿ ದ ನ್ಯಾಚುರಲ್ ಹಿಸ್ಟರಿ ಆಫ್ ಮೇಕ್-ಬಿಲೀವ್ ‌ನಲ್ಲಿ ಟೀಕಿಸಿದನು.

J. R. R. ಟಾಲ್ಕೀನ್‌ ಲೆವಿಸ್‌ನ ಆಪ್ತಮಿತ್ರ, ಸಮಕಾಲೀನ ಲೇಖಕ ಮತ್ತು ಲೆವಿಸ್‌ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಕಾರಣನಾದ ಪ್ರಮುಖ ವ್ಯಕ್ತಿ.[೪೮] ಸುಳಿವು ಪಡೆ ಸಾಹಿತ್ಯ ಗುಂಪಿನ ಸದಸ್ಯರಾಗಿದ್ದುಕೊಂಡು ಅವರಿಬ್ಬರು ಹೆಚ್ಚಾಗಿ ಅವರ ಕೃತಿಗಳನ್ನು ಓದಿ ಅದರ ಬಗ್ಗೆ ವಿಮರ್ಶೆ ಮಾಡುತ್ತಿದ್ದರು. ಪುರಾಣದ ಸಾರಸಂಗ್ರಹದ ಅಂಶಗಳಿಂದಾಗಿ ಮತ್ತು ಅವರು ಆಕಸ್ಮಿಕವಾಗಿ ಒಂದಾಗುತ್ತಿದ್ದುದರಿಂದ ಟಾಲ್ಕೀನ್‌ ನಾರ್ನಿಯಾ ಕಥೆಗಳ ಬಗ್ಗೆ ಉತ್ಸಾಹಭರಿತನಾಗಿರಲಿಲ್ಲ. ಕಥೆಗಳು ನೈಜ ಮತ್ತು ಕಾಲ್ಪನಿಕ ಪ್ರಪಂಚದ ಮಧ್ಯೆ ನಡೆಯುವ ಅಂಶಗಳನ್ನು ಒಳಗೊಂಡಿದುದರಿಂದ ಅವನು ಅವುಗಳ ಬಗ್ಗೆ ವಿರುದ್ಧಾಭಿಪ್ರಾಯವನ್ನು ಹೊಂದಿದ್ದನು.[೪೯] ಲೆವಿಸ್‌ ಬಳಸಿದ ಪ್ರತ್ಯಕ್ಷ ಸಾಂಕೇತಿಕ ನಿರೂಪಣೆಯನ್ನು ಆಶ್ರಯಿಸದೆ ಕಲ್ಪನಾಶಕ್ತಿಯು ಕ್ರಿಶ್ಚಿಯನ್ ಮೌಲ್ಯಗಳನ್ನು ಸಂಘಟಿಸಬೇಕು, ಎಂದು ಸ್ವತಃ ಕ್ರಿಶ್ಚಿಯನ್ ಆಗಿದ್ದರೂ ಟಾಲ್ಕೀನ್‌ ಭಾವಿಸಿದನು.[೫೦]

ಕ್ರಿಶ್ಚಿಯನ್-ಅಲ್ಲದವರ ಪ್ರತಿಕ್ರಿಯೆಯ‌ೂ ಮಿಶ್ರವಾಗಿತ್ತು. ಫಿಲಿಪ್ ಪುಲ್‌ಮ್ಯಾನ್ ಅವನ ಧರ್ಮ-ವಿರೋಧಿ ಅವಲೋಕನದೊಂದಿಗೆ ನಾರ್ನಿಯಾ ಸರಣಿಯ ಬಗ್ಗೆ ಗಂಭೀರ ವಿರೋಧ ಹೊಂದಿದ್ದನು. ಪುಸ್ತಕಗಳು ನಿಯೊ-ಪೇಗನ್ ಓದುಗರ ಪಟ್ಟಿಯಲ್ಲಿ[೫೧] ಕಾಣಿಸಿಕೊಂಡವು (ವಿಕ್ಕ್ಯಾನ್ ಲೇಖಕ ಸ್ಟಾರ್‌ಹಾಕ್ ನಿಂದಾಗಿ[೫೨]). ಲೆವಿಸ್‌ನ ಕೆಲವು ಧಾರ್ಮಿಕ ಅಭಿಪ್ರಾಯಗಳನ್ನು ಹಂಚಿಕೊಂಡ ಲೇಖಕರ ಪುಸ್ತಕಗಳ ಬಗೆಗಿನ ಧನಾತ್ಮಕ ಪ್ರತಿಕ್ರಿಯೆಗಳು ಶ್ಯಾನ ಕಾಘೆ ಸಂಪಾದಿಸಿದ ರಿವಿಸಿಟಿಂಗ್ ನಾರ್ನಿಯಾ ದಲ್ಲಿ ಕಂಡುಬಂದಿವೆ.

ಮೆಲ್ ಗಿಬ್ಸನ್‌ನ ಚಿತ್ರ ದ ಪ್ಯಾಶನ್ ಆಫ್ ದ ಕ್ರೈಸ್ಟ್ ನ ಯಶಸ್ಸಿನಿಂದಾಗಿ 2005ರ ಸಂದರ್ಭದ ಚಲನಚಿತ್ರ ನಿರ್ಮಾಪಕರು ಅತಿಹೆಚ್ಚಿನ ಧಾರ್ಮಿಕ-ಪ್ರೇಕ್ಷಕರನ್ನು ಪಡೆಯಬಹುದೆಂದು ಆಶಿಸಿದರು. ಅದೇ ಸಂದರ್ಭದಲ್ಲಿ ಲೌಕಿಕ ಪ್ರೇಕ್ಷಕರಿಗೆ ಪ್ರಿಯವಾಗುವ ಸಾಹಸ ಚಿತ್ರಗಳನ್ನು ನಿರ್ಮಿಸಲು ಉದ್ದೇಶಿಸಿದರು; ಆದರೆ ಅವರು (ವಿಮರ್ಶಕರೂ ಸಹ) ಕಥೆಯ ವಿಷಯಗಳು ಎರಡೂ ಗುಂಪುಗಳನ್ನು ನಾನಾ ಬಗೆಯಲ್ಲಿ ದೂರಮಾಡಬಹುದಾದುದರ ಬಗ್ಗೆ ಚಿಂತಿತರಾದರು.[೫೩]

ನಾರ್ನಿಯಾವನ್ನು ಧಾರ್ಮಿಕವಲ್ಲದ ದೃಷ್ಟಿಕೋನದಿಂದ ಪರಿಶೀಲಿಸುವ ಎರಡು ಸಂಪೂರ್ಣ-ಗಾತ್ರದ ಪುಸ್ತಕಗಳು ಅದರ ಸಾಹಿತ್ಯಕ ಮಹತ್ವದ ಆಧಾರದಲ್ಲಿ ಸಂಪೂರ್ಣವಾಗಿ ತದ್ವಿರುದ್ಧ ವಿಮರ್ಶೆಗಳನ್ನು ಪಡೆಯುತ್ತವೆ. ಡಿಕೆನ್ಸ್, ಲಾರೆನ್ಸ್, ಲೆವಿಸ್‌ ಕ್ಯಾರೋಲ್ ಮತ್ತು ಅಯನ್ ಫ್ಲೆಮಿಂಗ್ ಮೊದಲಾದವರನ್ನೂ ಒಳಗೊಂಡಂತೆ ಅನೇಕ ಪ್ರಖ್ಯಾತ ಕಾದಂಬರಿಕಾರರ ಮನೋವಿಶ್ಲೇಷಕ ನಿರೂಪಣೆಗಳನ್ನು ಡೇವಿಡ್ ಹಾಲ್‌ಬ್ರೂಕ್ ಬರೆದಿದ್ದಾನೆ. ಆತನ 1991ರ ಪುಸ್ತಕ ದ ಸ್ಕೆಲಿಟನ್ ಇನ್ ದ ವಾರ್ಡ್‌ರೋಬ್‌ , ಲೆವಿಸ್‌ ತನ್ನ ತಾಯಿಯ ಮರಣದಿಂದ ಚೇತರಿಸಿಕೊಳ್ಳಲಿಲ್ಲ. ಅಲ್ಲದೇ ಆತ ವಯಸ್ಕ ಹೆಣ್ಣಿನ ಲೈಂಗಿಕತೆಯ ಬಗ್ಗೆ ಮುಜುಗರವನ್ನು ಹೊಂದಿದ್ದನು, ಎಂದು ಹೇಳುತ್ತಾ ಮನೋವಿಶ್ಲೇಷಣ ಪದ್ಧತಿಯ ಮ‌ೂಲಕ ನಾರ್ನಿಯಾದ ಬಗ್ಗೆ ನಿರೂಪಿಸುತ್ತದೆ. ಆತ ಪುಸ್ತಕಗಳನ್ನು, ಲೆವಿಸ್‌ ಅವನ ಅನೇಕ ಆಂತರಿಕ ಸಂಘರ್ಷಗಳನ್ನು ಕೂಲಂಕುಷವಾಗಿ ಯೋಜಿಸಲು ಮಾಡಿದ ವಿಫಲ ಪ್ರಯತ್ನ ಎಂಬುದಾಗಿ ವಿವರಿಸುತ್ತಾನೆ. ಹಾಲ್‌ಬ್ರೂಕ್ ದ ಮ್ಯಾಜಿಶಿಯನ್ಸ್ ನೆಫ್ಯೂ ಮತ್ತು ಟಿಲ್ ವಿ ಹ್ಯಾವ್ ಫೇಸಸ್ (ಕ್ಯುಪಿಡ್ ಮತ್ತು ಸೈಕ್‌ನ ಪುರಾಣದ ಬಗೆಗಿನ ಲೆವಿಸ್‌ನ ಕೃತಿ) ಬಗ್ಗೆ, ಇವು ಅಧಿಕ ವೈಯಕ್ತಿಕ ಮತ್ತು ನೈತಿಕ ಪ್ರಬುದ್ಧತೆಯನ್ನು ಪ್ರತಿಬಿಂಬಿಸುತ್ತವೆಂದು ಪ್ರಶಂಸಿಸಿದ್ದಾನೆ. ಹಾಲ್‌ಬ್ರೂಕ್ ಅವನ ಕ್ರೈಸ್ತ ಧರ್ಮದಲ್ಲಿನ ಅಪನಂಬಿಕೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾನೆ.

ಹಾಲ್‌ಬ್ರೂಕ್‌ಗೆ ವಿರುದ್ಧವಾಗಿ ಲಾರ ಮಿಲ್ಲರ್‌ಳ ದ ಮ್ಯಾಜಿಶಿಯನ್ಸ್ ಬುಕ್: ಎ ಸ್ಕೆಪ್ಟಿಕ್ಸ್ ಗೈಡ್ ಟು ನಾರ್ನಿಯಾ (2008), ನಾರ್ನಿಯಾ ಪುಸ್ತಕಗಳು ಧಾರ್ಮಿಕವಲ್ಲದ ದೃಷ್ಟಿಕೋನದಿಂದ ಒಂದು ಗಾಢವಾದ ಆಧ್ಯಾತ್ಮಿಕ ಮತ್ತು ನೈತಿಕ ಅರ್ಥವನ್ನು ಹೊಂದಿದೆಯೆಂದು ಹೇಳುತ್ತದೆ. ಮಿಲ್ಲರ್ (Salon.comನ ಸಹ-ಸ್ಥಾಪಕಿ) ಬಾಲ್ಯದಲ್ಲಿ ಕ್ಯಾಥೋಲಿಕ್ ಪಾಲನೆಯನ್ನು ಹೇಗೆ ವಿರೋಧಿಸುತ್ತಿದ್ದಳೆಂಬುದನ್ನು ಆಕೆಯ ಆತ್ಮಚರಿತ್ರೆ ಮತ್ತು ಸಾಹಿತ್ಯಕ ವಿಮರ್ಶೆಗಳಲ್ಲಿ ಕಾಣಬಹುದು; ಆಕೆ ನಾರ್ನಿಯಾ ಪುಸ್ತಕಗಳನ್ನು ಇಷ್ಟಪಡುತ್ತಿದ್ದಳು. ಆದರೆ ಕ್ರೈಸ್ತ ಧರ್ಮದ ಒಳಾರ್ಥವನ್ನು ಅರಿತ ನಂತರ ತಾನು ದ್ರೋಹವೆಸಗುತ್ತಿದ್ದೇನೆ ಎಂದು ಭಾವಿಸಿದಳು. ದೊಡ್ಡವಳಾದಂತೆ ಅವಳು ಪುಸ್ತಕಗಳಲ್ಲಿ ಹೆಚ್ಚು ಆನಂದ ಕಂಡಳು. ಅಲ್ಲದೇ ಈ ಕೃತಿಗಳು ಕ್ರಿಶ್ಚಿಯನ್ ಅಂಶಗಳನ್ನು ಮೀರಿಸಿ ಅತ್ಯುತ್ಕೃಷ್ಟತೆಯನ್ನು ಹೊಂದಿವೆ ಎಂಬ ನಿರ್ಣಯಕ್ಕೆ ಬಂದಳು. ನಾರ್ನಿಯಾದ ಒಬ್ಬ ಗಂಭೀರ ವಿಮರ್ಶಕ ಫಿಲಿಪ್ ಪುಲ್‌ಮ್ಯಾನ್‌ನ ಹಿಸ್ ಡಾರ್ಕ್ ಮೆಟೀರಿಯಲ್ಸ್ ‌ನಲ್ಲಿನ ಹೇಗೆ ಮಕ್ಕಳು ಮುಗ್ಧತೆಯಿಂದ ದೈವಾನುಗ್ರಹಕ್ಕೆ ಒಳಗಾಗುತ್ತಾರೆ ಮತ್ತು ವಯಸ್ಕರು ಅನುಭವದಿಂದ ದೈವಾನುಗ್ರಹವನ್ನು ಪಡೆಯುತ್ತಾರೆ, ಎಂಬುದರ ಬಗೆಗಿನ ಒಂದು ವಿಭಾಗವು ನಾರ್ನಿಯಾ ಪುಸ್ತಕಗಳ ಬಗೆಗಿನ ಮಿಲ್ಲರ್‌ಳ ನಂತರದ ಅಭಿಪ್ರಾಯದ ಮೇಲೆ ಗಹನವಾದ ಪ್ರಭಾವ ಬೀರಿತು.[೫೪]

ನಾರ್ನಿಯಾ ಲೋಕ

ಬದಲಾಯಿಸಿ

ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ದ ಹೆಚ್ಚಿನ ಭಾಗವು ಲೆವಿಸ್‌ ನಿರ್ಮಿತ ಲೋಕ ನಾರ್ನಿಯಾದಲ್ಲಿ ನಡೆಯುತ್ತದೆ. ನಾರ್ನಿಯಾ ಲೋಕವನ್ನು ನಮ್ಮ ಪ್ರಪಂಚವನ್ನೂ ಒಳಗೊಂಡಂತೆ ಲೆಕ್ಕವಿಲ್ಲದಷ್ಟು ಬಹುಲೋಕಗಳಲ್ಲಿ ಒಂದಾಗಿ ಇರಿಸಲಾಗಿದೆ. ಈ ಲೋಕಗಳ ಮಧ್ಯೆ ಸಾಗುವುದು ಅಪರೂಪವಾದರೂ ಸಾಧ್ಯವಾದಷ್ಟು, ಇದನ್ನು ವಿವಿಧ ರೀತಿಗಳಲ್ಲಿ ಸಾಧಿಸಬಹುದು. ಯುರೋಪಿನ ಪುರಾಣ ಮತ್ತು ಬ್ರಿಟಿಷ್ ದಂತಕಥೆಗಳ ಬಗ್ಗೆ ಚೆನ್ನಾಗಿ ತಿಳಿದವರಿಗೆ ಮಾತ್ರ ಗುರುತಿಸಲಾಗುವ ವಿವಿಧ ರೀತಿಯ ಜೀವಿಗಳನ್ನು ನಾರ್ನಿಯಾ ಹೊಂದಿತ್ತು, ಎಂದು ವಿವರಿಸಲಾಗಿದೆ.

ನಿವಾಸಿಗಳು

ಬದಲಾಯಿಸಿ
ಇವನ್ನೂ ಗಮನಿಸಿ: ನಾರ್ನಿಯಾ ಪ್ರಾಣಿಗಳು ಮತ್ತು ನಾರ್ನಿಯಾ ಪಾತ್ರಗಳು

ಲೆವಿಸ್‌ ಅವನ ಕಥೆಗಳಲ್ಲಿ ಎರಡು ಭಿನ್ನ ವರ್ಗದ ನಿವಾಸಿಗಳನ್ನು ಚಿತ್ರಿಸಿದ್ದಾನೆ: ಓದುಗನದೇ ಪ್ರಪಂಚದಲ್ಲಿ ಹುಟ್ಟುವ ಜನರು ಹಾಗೂ ಅಸ್ಲಾನ್‌ನಿಂದ ಸೃಷ್ಟಿಯಾಗುವ ಜೀವಿಗಳು ಮತ್ತು ಈ ಜೀವಿಗಳ ಕುಲಕ್ಕೆ ಸೇರಿದವು. ಹೋಲಿಕೆಯುಳ್ಳ ಲೋಕಗಳನ್ನು ಒಳಗೊಂಡಿರುವುದು ಈ ಕೃತಿಗಳ ವಿಶಿಷ್ಟತೆಯಾಗಿದೆ. ಓದುಗನ ಪ್ರಪಂಚದ ಹೆಚ್ಚಿನ ಪಾತ್ರಗಳು ಅನೇಕ ಪುಸ್ತಕಗಳಲ್ಲಿ ಮುಖ್ಯ ಪಾತ್ರಗಳಾಗಿವೆ. ಆದರೂ ಕೆಲವರನ್ನು ಮೇಲ್ನೋಟಕ್ಕೆ ಮಾತ್ರ ಸೂಚಿಸಲಾಗಿದೆ. ಲೆವಿಸ್‌ ಅಸ್ಲಾನ್ ಪಾತ್ರದ ಮ‌ೂಲಕ ಸೃಷ್ಟಿಸುವ ನಿವಾಸಿಗಳನ್ನು ಭಿನ್ನವಾಗಿ, ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ, ನಿರೂಪಿಸಲಾಗಿದೆ. ಲೆವಿಸ್‌ ತನ್ನನ್ನು ಒಂದೇ ಮ‌ೂಲಕ್ಕೆ ಸೀಮಿತಗೊಳಿಸಿಕೊಂಡಿಲ್ಲ. ಬದಲಿಗೆ ಅವನು ಅನೇಕ ಮ‌ೂಲಗಳಿಂದ ಪಡೆದುಕೊಂಡಿದ್ದಾನೆ. ಅಲ್ಲದೇ ಅದಕ್ಕೆ ತನ್ನ ಸ್ವಂತ ಕೆಲವು ಅಂಶಗಳನ್ನು ಸೇರಿಸಿದ್ದಾನೆ.

ಭೌಗೋಳಿಕ ವಿವರಣೆ

ಬದಲಾಯಿಸಿ
ಇದನ್ನೂ ಗಮನಿಸಿ: ನಾರ್ನಿಯಾದ ಸ್ಥಳಗಳು

ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ದಲ್ಲಿ ನಾರ್ನಿಯಾವು "ಪೌರಾತ್ಯ ಸಾಗರ"ಕ್ಕೆ ಎದುರಾಗಿರುವ ಒಂದು ಪ್ರಮುಖ ಭೂಪ್ರದೇಶದಲ್ಲಿರುವಂತೆ ವಿವರಿಸಲಾಗಿದೆ. ಈ ಸಾಗರವು ದ್ವೀಪಗಳನ್ನು ಹೊಂದಿರುತ್ತದೆ. ಅವನ್ನು ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ‌ನಲ್ಲಿ ಪರಿಶೋಧಿಸಲಾಗುತ್ತದೆ. ಪ್ರಮುಖ ಭೂಪ್ರದೇಶದಲ್ಲಿ ಲೆವಿಸ್‌ ನಾರ್ನಿಯಾ, ಆರ್ಕೆನ್‍‌ಲ್ಯಾಂಡ್‌, ಕ್ಯಾಲರ್ಮೆನ್ ಮತ್ತು ಟೆಲ್ಮಾರ್ ಮೊದಲಾದ ದೇಶಗಳನ್ನು ಮಾತ್ರವಲ್ಲದೆ ದೇಶಗಳೆಂದು ಹೇಳಲಾಗಿರದ ವಿವಿಧ ರೀತಿಯ ಇತರ ಪ್ರದೇಶಗಳನ್ನೂ ಚಿತ್ರಿಸಿದ್ದಾನೆ. ಏಣಿನಾಕಾರದ ಪ್ರದೇಶ ಮತ್ತು ಪಾತಾಳಲೋಕ ಮೊದಲಾದವನ್ನೂ ಒಳಗೊಂಡಂತೆ ಅನೇಕ ಅತ್ಯದ್ಭುತ ಸ್ಥಳಗಳು ನಾರ್ನಿಯಾದ ಸುತ್ತಮುತ್ತಲಿರುವಂತೆ ಲೆವಿಸ್‌ ನಿರೂಪಿಸಿದ್ದಾನೆ.

ನಾರ್ನಿಯಾ ಲೋಕದ ಬಗ್ಗೆ ಹಲವಾರು ನಕ್ಷೆಗಳು ಲಭ್ಯ ಇವೆ. ಪುಸ್ತಕದ ಚಿತ್ರಕಾರ ಪಾಲಿನ್ ಬೇಯ್ನೆಸ್‌‌ 1972ರಲ್ಲಿ ಪ್ರಕಟಗೊಳಿಸಿದ ಸಂಪೂರ್ಣ-ವರ್ಣಮಯ ಆವೃತ್ತಿಯನ್ನು ಹೆಚ್ಚಿನವರು "ಅಧಿಕೃತ"ವಾದುದೆಂದು ಹೇಳುತ್ತಾರೆ. ಇವುಗಳ ಮುದ್ರಿತ ಪ್ರತಿಗಳು ಪ್ರಸ್ತುತ ಸಿಗುವುದಿಲ್ಲ. ಆದರೂ ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ದ ಇತ್ತೀಚಿನ ಹಾರ್ಪರ್‌ಕೊಲಿನ್ಸ್ 2006ರ ಗಟ್ಟಿರಟ್ಟಿನ ಆವೃತ್ತಿಯಲ್ಲಿ ಸಣ್ಣ ಪ್ರತಿಗಳು ಕಂಡುಬಂದಿವೆ. 2005ರ ಚಲನಚಿತ್ರ The Chronicles of Narnia: The Lion, the Witch and the Wardrobe ದ ಜನಪ್ರಿಯತೆಯ ನಂತರ ಇತ್ತೀಚಿಗೆ ಇತರ ಎರಡು ನಕ್ಷೆಗಳನ್ನು ತಯಾರಿಸಲಾಗಿದೆ. ಅದರಲ್ಲಿ ಒಂದು ನಕ್ಷೆ "ರೋಸ್ ಮ್ಯಾಪ್ ಆಫ್ ನಾರ್ನಿಯಾ" ಬೇಯ್ನೆಸ್‌ನ ನಕ್ಷೆಯನ್ನು ಆಧರಿಸಿದೆ, ಇದರಲ್ಲಿ ನಾರ್ನಿಯಾದ ವಿಷಯಗಳನ್ನು ವ್ಯತಿರಿಕ್ತವಾಗಿ ಚಿತ್ರಿಸಲಾಗಿದೆ. ಟಾಲ್ಕೀನ್‌ನ ಮಿಡ್ಲ್-ಅರ್ಥ್‌ನ ನಕ್ಷೆಯನ್ನು ನೆನಪಿಗೆ ತರುವಂತಹ ಪ್ರಾಚೀನ ಶೈಲಿಯಲ್ಲಿ ಒಂದೇ ಬಣ್ಣದಲ್ಲಿ ಮಾಡಲಾದ ಮತ್ತೊಂದು ನಕ್ಷೆಯು ಮುದ್ರಿಸಿದ ನಕಾಶೆಯಾಗಿ ಮತ್ತು ಚಲನಚಿತ್ರ DVDಯಲ್ಲಿ ಪರಿಣಾಮಕಾರಿ ಆವೃತ್ತಿಯಲ್ಲಿ ಲಭ್ಯವಿದೆ. ಈ ನಕ್ಷೆಯು ಲೆವಿಸ್‌ನ ಪ್ರಪಂಚದ ಉಳಿದ ಭಾಗವನ್ನು ನಿರೂಪಿಸದೆ ಕೇವಲ ನಾರ್ನಿಯಾ ಲೋಕವನ್ನು ಮಾತ್ರ ಚಿತ್ರಿಸುತ್ತದೆ.

ವಿಶ್ವವಿಜ್ಞಾನ

ಬದಲಾಯಿಸಿ

ದ ಕ್ರೋನಿಕಲ್ಸ್ ‌ನ ಪುನರಾವೃತ್ತಿಸುವ ಕಥಾ ವಿಷಯವೆಂದರೆ ನಾರ್ನಿಯಾದ ಬಹುಲೋಕವನ್ನು ಉಂಟುಮಾಡುವ ಅನೇಕ ಪ್ರಪಂಚಗಳ ನಡುವಿನ ಪರಸ್ಪರ ಕ್ರಿಯೆಯಾಗಿದೆ. ಈ ರೀತಿ ಬೇರೆ ಬೇರೆ ಪ್ರಪಂಚಕ್ಕೆ ಹಾದುಹೋಗುವುದಕ್ಕಾಗಿ ವಿವಿಧ ರೀತಿಯ ಸಾಧನಗಳನ್ನು ಬಳಸಲಾಗಿದೆ. ಇವು ಪಾತ್ರಗಳು ನಾರ್ನಿಯಾ ಲೋಕಕ್ಕೆ ಪ್ರವೇಶಿಸಲು ಸಹಾಯ ಮಾಡುತ್ತವೆ. ನಾರ್ನಿಯಾದ ವಿಶ್ವವಿಜ್ಞಾನವು ಲೆವಿಸ್‌ನ ಸಮಕಾಲೀನ ಟಾಲ್ಕೀನ್‌ಮಿಡ್ಲ್-ಅರ್ಥ್‌‌ಗೆ ಹೆಚ್ಚು ಹೋಲಿಕೆಯನ್ನು ಹೊಂದಿಲ್ಲ. ಆದರೆ ಇದು ಕಥೆಗೆ ದಂತ ಕಥೆಯ ಸ್ವರೂಪವನ್ನು ತುಂಬಾ ಚೆನ್ನಾಗಿ ನೀಡಿದೆ. ನಾರ್ನಿಯಾ ಲೋಕವು ಸಮತಲವಾಗಿ ಭೂಕೇಂದ್ರೀಯವಾಗಿದ್ದು ನಮ್ಮ ಲೋಕಕ್ಕಿಂತ ಭಿನ್ನವಾಗಿರುವ ನಕ್ಷತ್ರಗಳನ್ನು ಹೊಂದಿದೆ. ಆ ಕಾಲದ ಪಯಣದ ನಮ್ಮ ಪ್ರಪಂಚದ ಸಮಯ ಉರುಳಲು ನೇರ ಹೊಂದಿಕೆಯನ್ನು ಹೊಂದಿಲ್ಲ ಎಂಬುದನ್ನು ನಾವು ಈ ಸರಣಿಯನ್ನು ಓದುವಾಗ ತಿಳಿಯುತ್ತೇವೆ.

ಇತಿಹಾಸ

ಬದಲಾಯಿಸಿ
ಇದನ್ನೂ ಗಮನಿಸಿ: ನಾರ್ನಿಯಾದ ಸಮಯರೇಖೆ

ನಾರ್ನಿಯಾ ಸೃಷ್ಟಿಯಾದ ಕ್ರಿಯೆ, ಅದು ವಿಕಾಸವಾದಂತೆ ಅಲ್ಲಿ ಕಂಡುಬಂದ ಜೀವಿಗಳ ಚಿತ್ರಣ ಮತ್ತು ಅಂತಿಮವಾಗಿ ನಾರ್ನಿಯಾ ಹೇಗೆ ನಾಶಹೊಂದಿತು ಎಂಬುದನ್ನು ತೋರಿಸುವ ಮ‌ೂಲಕ ನಾರ್ನಿಯಾ ಲೋಕದ ಸಂಪೂರ್ಣ ಚರಿತ್ರೆಗೆ ಲೆವಿಸ್‌ ನಮ್ಮನ್ನು ಕರೆದುಕೊಂಡು ಹೋಗುತ್ತಾನೆ. ಮಕ್ಕಳ ಸರಣಿಯಾಗಿರುವುದರಿಂದ ಈ ಕಾದಂಬರಿಗಳ ಎಲ್ಲಾ ಘಟನೆಗಳಲ್ಲಿ ನಮ್ಮ ಪ್ರಪಂಚದ ಮಕ್ಕಳು ಪ್ರಮುಖ ಪಾತ್ರವಹಿಸುತ್ತಾರೆ. ನಾರ್ನಿಯಾದ ಇತಿಹಾಸವು ಈ ಕೆಳಗಿನ ಅವಧಿಗಳಾಗಿ ವಿಭಾಗಿಸಲ್ಪಟ್ಟಿದೆ: ಸೃಷ್ಟಿ ಮತ್ತು ಅದರ ನಂತರದ ಅಲ್ಪಾವಧಿ, ವೈಟ್ ವಿಚ್‌ನ ಪಾತ್ರ, ಸುವರ್ಣ ಯುಗ, ಟೆಲ್ಮರಿನ್‌ರ ದಾಳಿ ಮತ್ತು ಆಡಳಿತ, ಅವರ ಆನಂತರದ ಕ್ಯಾಸ್ಪಿಯನ್‌ Xರಿಂದ ಅನುಭವಿಸಿದ ಸೋಲು, ರಾಜ ಕ್ಯಾಸ್ಪಿಯನ್‌‌ನ ಆಡಳಿತ ಮತ್ತು ಅವನ ವಂಶಸ್ಥರು ಹಾಗೂ ನಾರ್ನಿಯಾದ ನಾಶ. ಅನೇಕ ಕಥೆಗಳಂತೆ, ಇಲ್ಲಿಯ‌ೂ ನಿರೂಪಣೆಯನ್ನು ಕಾಲಾನುಕ್ರಮದಲ್ಲಿ ಜೋಡಿಸಿದ ಕ್ರಮದಲ್ಲಿ ಪ್ರಸ್ತುತಪಡಿಸಿಲ್ಲ.

ಇತರ ಮಾಧ್ಯಮದಲ್ಲಿ ನಾರ್ನಿಯಾ

ಬದಲಾಯಿಸಿ

ದೂರದರ್ಶನ

ಬದಲಾಯಿಸಿ

ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಅನ್ನು 1967ರಲ್ಲಿ ದೂರದರ್ಶನಕ್ಕೆ ಹೊಂದಾವಣೆ ಮಾಡಿಕೊಳ್ಳಲಾಯಿತು. ಮ‌ೂವತ್ತು ನಿಮಿಷಗಳ ಹತ್ತು ಎಪಿಸೋಡ್‌ಗಳು ಹೆಲೆನ್ ಸ್ಟ್ಯಾಂಡೇಜ್ ನಿರ್ದೇಶನದಲ್ಲಿ ಮ‌ೂಡಿಬಂದವು. ಚಿತ್ರಕಥೆಯನ್ನು ಮತ್ತು ಆನಂತರದ ಭಿನ್ನವಾದ ಹೊಂದಾವಣೆಗಳನ್ನು ಟ್ರೆವರ್ ಪ್ರೆಸ್ಟನ್ ಬರೆದಿದ್ದಾನೆ. ಮನೆಯಲ್ಲಿ ವೀಕ್ಷಿಸುವುದಕ್ಕಾಗಿ ಖರೀದಿಸಲು ಪ್ರಸ್ತುತ ಇದು ಲಭ್ಯವಿಲ್ಲ.

1979ರಲ್ಲಿ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಅನ್ನು ಮತ್ತೆ ದೂರದರ್ಶನಕ್ಕೆ ಹೊಂದಾವಣೆ ಮಾಡಿಕೊಳ್ಳಲಾಯಿತು. ಈ ಬಾರಿ ಬಿಲ್ ಮೆಲೆಂಡೆಜ್ (ಎ ಚಾರ್ಲಿ ಬ್ರೌನ್ ಕ್ರಿಸ್‌ಮಸ್ ಮತ್ತು ಇತರ ಪೀನಟ್ಸ್ ವಿಶೇಷತೆಗಳಿಗಾಗಿ ಜನಪ್ರಿಯವಾಗಿರುವ) ಹಾಗೂ ಚಿಲ್ಡ್ರನ್ಸ್ ಟೆಲಿವಿಷನ್ ವರ್ಕ್‌ಶಾಪ್‌ನಿಂದ (ಸೀಸೇಮ್ ಸ್ಟ್ರೀಟ್ ಮತ್ತು ದ ಎಲೆಕ್ಟ್ರಿಕ್ ಕಂಪೆನಿ ಇತ್ಯಾದಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ) ನಿರ್ಮಿಸಲ್ಪಟ್ಟು ಆನಿಮೇಟ್ ಮಾಡಿದ ವಿಶೇಷತೆಯಾಗಿ ಮ‌ೂಡಿಬಂದಿತು. ಇದಕ್ಕೆ ಚಿತ್ರಕಥೆಯನ್ನು ಡೇವಿಡ್ D. ಕೊನ್ನೆಲ್ ಒದಗಿಸಿದನು. ಇದು ಆ ವರ್ಷದ ಅತ್ಯದ್ಭುತ ಆನಿಮೇಟ್ ಮಾಡಿದ ಕಾರ್ಯಕ್ರಮಕ್ಕಾಗಿ ಎಮ್ಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ದೂರದರ್ಶನದಲ್ಲಿ ಆನಿಮೇಟ್ ಮಾಡಿದ ಮೊದಲ ದೀರ್ಘ ಚಿತ್ರವಾಗಿದೆ. ಬ್ರಿಟಿಷ್ ದೂರದರ್ಶನದಲ್ಲಿನ ಇದರ ಬಿಡುಗಡೆಯ ಪಾತ್ರಗಳಿಗೆ ಧ್ವನಿಗಳನ್ನು ಬ್ರಿಟಿಷ್ ನಟ ಮತ್ತು ನಟಿಯರು (ಲಿಯೊ ಮ್ಯಾಕ್‌ಕರ್ನ್, ಆರ್ಥರ್ ಲೋವ್ ಮತ್ತು ಶೈಲ ಹ್ಯಾನ್ಕಾಕ್ ಮೊದಲಾದವರನ್ನೂ ಒಳಗೊಂಡು) ನೀಡಿದ್ದಾರೆ. ಆದರೆ "ಅಸ್ಲಾನ್"ಗೆ ನೀಡಿದ ಧ್ವನಿಯು U.S. ಮತ್ತು ಬ್ರಿಟಿಷ್ ಆವೃತ್ತಿಗಳೆರಡಲ್ಲೂ ಸ್ಟೀಫನ್ ಥೋರ್ನ್‌‌ನ ಧ್ವನಿಯೇ ಆಗಿದೆ. ಅಲ್ಲದೆ ಪೀಟರ್‌ ಪೆವೆನ್ಸಿ, ಸೂಸಾನ್ ಪೆವೆನ್ಸಿ ಮತ್ತು ಲ್ಯೂಸಿ ಪೆವೆನ್ಸಿಗೆ ನೀಡಿದ ಧ್ವನಿಯ‌ೂ ಸಹ ಒಂದೇ ಆಗಿದೆ.

1988–1990ರ ಸಂದರ್ಭದಲ್ಲಿ ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ದ ಭಾಗಗಳು ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಎಂಬ ನಾಲ್ಕು ಅನುಕ್ರಮ BBC ದೂರದರ್ಶನ ಸರಣಿ ಕಾರ್ಯಕ್ರಮಗಳಾದವು. ಇವು "ಅದ್ಭುತ ಮಕ್ಕಳ ಕಾರ್ಯಕ್ರಮ" ವಿಭಾಗದಲ್ಲಿ ಎಮ್ಮಿಯನ್ನೂ ಒಳಗೊಂಡಂತೆ 14 ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವು. ಕೇವಲ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ , ಪ್ರಿನ್ಸ್ ಕ್ಯಾಸ್ಪಿಯನ್ , ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ಮತ್ತು ದ ಸಿಲ್ವರ್ ಚೇರ್ ಮಾತ್ರ ಚಲನಚಿತ್ರಗಳಾದವು. ನಾಲ್ಕು ದಾರಾವಾಹಿಗಳನ್ನು ನಂತರ ಮ‌ೂರು ದೀರ್ಘ-ಚಿತ್ರಗಳಾಗಿ ನಿರ್ಮಿಸಿ (ಪ್ರಿನ್ಸ್ ಕ್ಯಾಸ್ಪಿಯನ್ ಮತ್ತು ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ಅನ್ನು ಸಂಯೋಜಿಸಿ) VHS ಮತ್ತು DVDಗಳಲ್ಲಿ ಬಿಡುಗಡೆಗೊಳಿಸಲಾಯಿತು.

ರೇಡಿಯೊ

ಬದಲಾಯಿಸಿ

ಇದನ್ನು BBC ರೇಡಿಯೊ 4 ನಾಟಕವಾಗಿ 1980ರಲ್ಲಿ ನಿರ್ಮಿಸಲಾಯಿತು. 15 ಗಂಟೆಗಳಷ್ಟು ಉದ್ದದ ಟೇಲ್ಸ್ ಆಫ್ ನಾರ್ನಿಯಾ ಶೀರ್ಷಿಕೆಯ ಈ ನಾಟಕವು ಸಂಪೂರ್ಣ ಸರಣಿಯನ್ನು ಆವರಿಸುತ್ತದೆ. ಈ ಸರಣಿಯು ಗ್ರೇಟ್ ಬ್ರಿಟನ್‌ನಲ್ಲಿ BBC ಆಡಿಯೊಬುಕ್ಸ್‌ನಿಂದ ಆಡಿಯೊ ಕ್ಯಾಸೆಟ್ ಮತ್ತು CD ಆಗಿ ಬಿಡುಗಡೆಯಾಯಿತು.

1981ರಲ್ಲಿ ಸರ್ ಮೈಕೆಲ್ ಹಾರ್ಡರ್ನ್ ಈ ಸಾಂಪ್ರದಾಯಿಕ ಕಥೆಗಳ ಸಂಕ್ಷೇಪ ಆವೃತ್ತಿಗಳನ್ನು ಮ್ಯಾರಿಸ ರಾಬಲ್ಸ್‌‌ನ ಹಾರ್ಪ್ ವಾದ್ಯ ಮತ್ತು ಕ್ರಿಸ್ಟೋಫರ್ ಹೈಡ್-ಸ್ಮಿತ್‌ನ ಕೊಳಲಿನ ಸಂಗೀತದೊಂದಿಗೆ ಓದಿದನು. ಇದು 1997ರಲ್ಲಿ ಕೊಲಿನ್ಸ್ ಆಡಿಯೊ ದಿಂದ ಪುನಃ-ಬಿಡುಗಡೆಯಾಯಿತು. ಅದು 2005ರಲ್ಲಿಯ‌ೂ ಮತ್ತೆ ಪ್ರಕಟಗೊಂಡಿತು (ISBN 978-0-00-721153-1). http://www.harpercollinschildrensbooks.co.uk/books/default.aspx?id=33175 Archived 2008-05-21 ವೇಬ್ಯಾಕ್ ಮೆಷಿನ್ ನಲ್ಲಿ.

1999ರಿಂದ 2002ರವರೆಗಿನ ಸಂದರ್ಭದಲ್ಲಿ ಫೋಕಸ್ ಆನ್ ದ ಫ್ಯಾಮಿಲಿ ಅದರ ರೇಡಿಯೊ ಥಿಯೇಟರ್ ಕಾರ್ಯಕ್ರಮದ ಮ‌ೂಲಕ ಎಲ್ಲಾ 7 ಪುಸ್ತಕಗಳ ರೇಡಿಯೊ ನಾಟಕ ರೂಪಾಂತರಗಳನ್ನು ನಿರ್ಮಿಸಿತು. ಈ ನಿರ್ಮಾಣವು ಸುಮಾರು ನೂರು ನಟರನ್ನು (ಪಾಲ್ ಸ್ಕೊಫೀಲ್ಡ್ "ಕಥಾ ನಿರೂಪಕ"ನಾಗಿ ಮತ್ತು ಡೇವಿಡ್ ಸ್ಯುಚೆಟ್ "ಅಸ್ಲಾನ್" ಆಗಿ), ಮ‌ೂಲ ಆರ್ಕೇಸ್ಟ್ರಾ ಸಂಗೀತವನ್ನು ಹಾಗೂ ಸಿನಿಮಾ-ಗುಣಮಟ್ಟದ ಡಿಜಿಟಲ್ ಧ್ವನಿಯನ್ನು ಒಳಗೊಂಡಿತ್ತು. ಇದರ ಪ್ರಸಾರ ಸಮಯವು ಸುಮಾರು 22 ಗಂಟೆಗಳಷ್ಟು ದೀರ್ಘವಾಗಿತ್ತು. C. S. ಲೆವಿಸ್‌ನ ಮಲಮಗ ಡೌಗ್ಲಸ್ ಗ್ರೆಶ್ಯಾಮ್‌ ಈ ಸರಣಿಯನ್ನು ನಡೆಸಿಕೊಟ್ಟನು. ಫೋಕಸ್ ಆನ್ ದ ಫ್ಯಾಮಿಲಿ ವೆಬ್‌ಸೈಟ್‌ನಿಂದ:

Between the lamp post and Cair Paravel on the Western Sea lies Narnia, a mystical land where animals hold the power of speech ... woodland fauns conspire with men ... dark forces, bent on conquest, gather at the world's rim to wage war against the realm's rightful king ... and the Great Lion Aslan is the only hope. Into this enchanted world comes a group of unlikely travellers. These ordinary boys and girls, when faced with peril, learn extraordinary lessons in courage, self-sacrifice, friendship and honour.[೫೫]

ಹಂತಗಳು

ಬದಲಾಯಿಸಿ

1984ರಲ್ಲಿ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ವ್ಯಾನೆಸ್ಸಾ ಫೋರ್ಡ್ ಪ್ರೊಡಕ್ಷನ್ಸ್‌‌ನಿಂದ ನಿರ್ಮಿಸಲ್ಪಟ್ಟು ಲಂಡನ್‌ನ ವೆಸ್ಟ್‌ಮಿಂಸ್ಟರ್ ಥಿಯೇಟರ್‌ನಲ್ಲಿ ಪ್ರದರ್ಶಿನ ಕಂಡಿತು. ಈ ನಾಟಕವು ಗ್ಲಿನ್ ರಾಬಿನ್ಸ್‌ನಿಂದ ಹೊಂದಾವಣೆಗೊಂಡು, ರಿಚಾರ್ಡ್ ವಿಲಿಯಮ್ಸ್‌ನಿಂದ ನಿರ್ದೇಶಿಸಲ್ಪಟ್ಟು ಮತ್ತು ಮಾರ್ಟಿ ಫ್ಲಡ್‌ನಿಂದ ವಿನ್ಯಾಸಗೊಂಡು ವೆಸ್ಟ್‌ಮಿಂಸ್ಟರ್ ಮತ್ತು ದ ರಯಾಲ್ಟಿ ಥಿಯೆಟರ್‌ನಲ್ಲಿ ಪುನಃ-ಪ್ರದರ್ಶಿಸಲ್ಪಟ್ಟಿತು ಹಾಗೂ 1997ರವರೆಗೆ ಪ್ರವಾಸ ಮಾಡಿತು. ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ (1986), ದ ಮ್ಯಾಜಿಶಿಯನ್ಸ್ ನೆಫ್ಯೂ (1988) ಮತ್ತು ದ ಹೋರ್ಸ್ ಆಂಡ್ ಹಿಸ್ ಬಾಯ್ (1990) ಮೊದಲಾದವನ್ನೂ ಒಳಗೊಂಡಂತೆ ಇತರ ನಾರ್ನಿಯಾ ಕಥೆಗಳ ನಿರ್ಮಾಣಗಳೂ ಪ್ರದರ್ಶಿಸಲ್ಪಟ್ಟವು. ನಾರ್ನಿಯನ್ ಕ್ರೋನಿಕಲ್ಸ್‌ನ ರಾಬಿನ್ಸ್‌ನ ರೂಪಾಂತರಗಳು ಲಂಡನ್‌ನ ಸ್ಯಾಮ್ಯುಯೆಲ್ ಫ್ರೆಂಚ್ ಮ‌ೂಲಕ UKಯಲ್ಲಿ ನಿರ್ಮಾಣಕ್ಕೆ ಲಭ್ಯಯಿವೆ.

1998ರಲ್ಲಿ ರಾಯಲ್ ಶೇಕ್ಸ್‌ಪಿಯರ್ ಕಂಪೆನಿಯು ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನ ಮೊದಲ ಪ್ರದರ್ಶನವನ್ನು ನೀಡಿತು. ಈ ಕಾದಂಬರಿಯು ಶಾನ್ ಡೇವಿಯ ಸಂಗೀತದೊಂದಿಗೆ ಆಡ್ರಿಯನ್ ಮಿಟ್ಚೆಲ್‌ನಿಂದ ನಾಟಕವಾಗಿ ರೂಪಾಂತರಗೊಂಡಿತು. ಈ ಮರುಪ್ರದರ್ಶವನ್ನು ಲ್ಯೂಸಿ ಪಿಟ್‌ಮ್ಯಾನ್-ವ್ಯಾಲೇಸ್‌ ನಿರ್ದೇಶನ ಮಾಡುವುದರೊಂದಿಗೆ, ಇದಕ್ಕೆ ಸಂಗೀತವನ್ನು ಮ‌ೂಲತಃ ಆಡ್ರಿಯನ್ ನೋಬೆಲ್ ನೀಡಿದನು ಮತ್ತು ಆಂಟೋನಿ ವಾರ್ಡ್ ವಿನ್ಯಾಸಗೊಳಿಸಿದನು. ಈ ನಿರ್ಮಾಣವು ಭಾರಿ ಯಶಸ್ಸು ಗಳಿಸಿತು ಮತ್ತು ಸ್ಟ್ರ್ಯಾಟ್‌ಫೋರ್ಡ್‌ನ ರಾಯಲ್ ಶೇಕ್ಸ್‌ಪಿಯರ್ ಥಿಯೇಟರ್‌‌ನಲ್ಲಿ 1998ರಿಂದ 2002ರವರೆಗಿನ ರಜಾದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ಕಂಡಿತು. ಈ ನಿರ್ಮಾಣವು ನಂತರ ಲಂಡನ್‌ನ ಬಾರ್ಬಿಕನ್ ಥಿಯೇಟರ್‌ನಲ್ಲಿ ಮತ್ತು ಸ್ಯಾಡ್ಲರ್ಸ್ ವೆಲ್ಸ್‌ನಲ್ಲಿ ನಾಟಕ ಸೀಮಿತ ಕಾರ್ಯಕ್ರಮಗಳಿಗೂ ವರ್ಗಾವಣೆಯಾಯಿತು. ಲಂಡನ್ ಈವ್ನಿಂಗ್ ಸ್ಟ್ಯಾಂಡರ್ಡ್‌' ಹೀಗೆ ಬರೆದಿದೆ:

...Lucy Pitman-Wallace's beautiful recreation of Adrian Noble's production evokes all the awe and mystery of this mythically complex tale, while never being too snooty to stoop to bracingly comic touches like outrageously camp reindeer or a beaver with a housework addiction... In our science and technology-dominated age, faith is increasingly insignificant — yet in this otherwise gloriously resonant production, it is possible to understand its allure.

ಆಡ್ರಿಯನ್ ಮಿಟ್ಚೆಲ್‌ನ ರೂಪಾಂತರವು ನಂತರ 2000ರಲ್ಲಿ ಟೋನಿ ಪ್ರಶಸ್ತಿ-ವಿಜೇತ ಮಿನ್ನಿಯಪೊಲಿಸ್ ಚಿಲ್ಡ್ರನ್ಸ್ ಥಿಯೇಟರ್ ಕಂಪೆನಿಯೊಂದಿಗೆ USನಲ್ಲಿ ಮೊದಲ ಪ್ರದರ್ಶನ ಕಂಡಿತು. ಅದರ ಪಶ್ಚಿಮ-ಕರಾವಳಿಯ ಮೊದಲ ಪ್ರದರ್ಶನವನ್ನು ಸೀಟಲ್ ಚಿಲ್ಡ್ರನ್ಸ್ ಥಿಯೇಟರ್‌ನೊಂದಿಗೆ 2002–3 ಅವಧಿಯಲ್ಲಿ ಕ್ರಿಸ್‌ಮಸ್ ರಂಗಸ್ಥಳದಲ್ಲಿ ನಡೆಸಿಕೊಟ್ಟಿತು (2003–4 ಅವಧಿಯಲ್ಲಿ ಮರು-ಪ್ರದರ್ಶನ ಕಂಡಿತು). ಈ ರೂಪಾಂತರವು UKಯಲ್ಲಿ ನಿರ್ವಹಿಸುವುದಕ್ಕಾಗಿ ಸ್ಯಾಮ್ಯುಯೆಲ್ ಫ್ರೆಂಚ್‌ನಿಂದ ಪರವಾನಗಿಯನ್ನು ಪಡೆಯಿತು.

ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನ ಇತರ ಗಮನಾರ್ಹ ನಾಟಕ ನಿರ್ಮಾಣಗಳೆಂದರೆ - ಮಾಲ್ಕೋಮ್ C. ಕುಕ್ ಪ್ರೊಡಕ್ಷನ್ಸ್‌ನ ಆಸ್ಟ್ರೇಲಿಯಾದಲ್ಲಿನ ವಾಣಿಜ್ಯ ನಿರ್ಮಾಣ (ನಾಡಿಯಾ ಟ್ಯಾಸ್ ನಿರ್ದೇಶನದ ಮತ್ತು ಡೌಗ್ಲಸ್ ಗ್ರೆಶ್ಯಾಮ್‌ ನೋಡಿದುದರಲ್ಲಿ ಕಾದಂಬರಿಯ ಅತ್ಯುತ್ತಮ ನಿರ್ಮಾಣ ಎಂದು ವಿವರಿಸಿದ - ಅಮಾಂದ ಮುಗ್ಲೆಟನ್, ಡೆನ್ನಿಸ್ ಓಲ್ಸೆನ್, ಮೀಘನ್ ಡೇವೀಸ್ ಮತ್ತು ಯೊಲ್ಯಾಂಡ್ ಬ್ರೌವ್ ಮೊದಲಾದವರು ನಟಿಸಿದ ನಾಟಕ) ಹಾಗೂ ಫಿಲಿಪೈನ್ಸ್‌ನ ಅತಿದೊಡ್ಡ ವಾಣಿಜ್ಯ ಚಿತ್ರಮಂದಿರಗಳಲ್ಲಿ ಒಂದಾದ ಟ್ರೆಂಪೆಟ್ಸ್ ಥಿಯೇಟರ್‌ನ ನಿರ್ಮಾಣ.

ಸಂಪೂರ್ಣ-ಸಂಗೀತಮಯ ಸರಳೀಕೃತ ಆವೃತ್ತಿ ನಾರ್ನಿಯಾ ವು (ಥೋಮಸ್ ಟಿಯರ್ನಿಯ ಸಂಗೀತ ಮತ್ತು ಟೆಡ್ ಡ್ರ್ಯಾಚ್‌ಮ್ಯಾನ್‌ನ ಸಾಹಿತ್ಯದೊಂದಿಗೆ ಜ್ಯೂಲ್ಸ್ ಟಾಸ್ಕ ರೂಪಾಂತರ ಮಾಡಿದ) ಪ್ರಸ್ತುತ ಥಿಯೇಟರ್‌ವರ್ಕ್ಸ್USA ಒಂದಿಗೆ USನಲ್ಲಿ ಪ್ರದರ್ಶನವಾಗುತ್ತಿದೆ. ಈ ಸಂಪೂರ್ಣ-ಸಂಗೀತಮಯ ನಾಟಕದ ಸರಳೀಕೃತ ಆವೃತ್ತಿಯು ಡ್ರಾಮ್ಯಾಟಿಕ್ ಪಬ್ಲಿಷಿಂಗ್‌ನಿಂದ ಪರವಾನಗಿಯನ್ನು ಪಡೆದುಕೊಂಡಿದೆ; ಅಲ್ಲದೆ ಇದು ಜೋಸೆಫ್ ರೋಬಿನೆಟ್‌ನ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಮತ್ತು ಆರಂಡ್ ಹ್ಯಾರಿಸ್‌ನ ದ ಮ್ಯಾಜಿಶಿಯನ್ಸ್ ನೆಫ್ಯೂ ರೂಪಾಂತರಗಳಿಗೂ ಅನುಮತಿಯನ್ನು ನೀಡಿದೆ.

ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ‌ನ ಅನುಮತಿ-ಪಡೆದ ಸಂಗೀತಮಯ ನಾಟಕವು 1983ರಲ್ಲಿ ಟೊಟಿನೊ ಫೈನ್ ಆರ್ಟ್ಸ್ ಸೆಂಟರ್‌ನ ನಾರ್ತ್‌ವೆಸ್ಟರ್ನ್ ಕಾಲೇಜ್ (ಮಿನ್ನೆಸೊಟ)ನಲ್ಲಿ ಮೊದಲ ಪ್ರದರ್ಶನವನ್ನು ಮಾಡಿತು. ಕೆವಿನ್ ನಾರ್ಬರ್ಗ್‌ನ ಮ‌ೂಲ ಸಂಗೀತದೊಂದಿಗೆ, ಕಥಾವಸ್ತುವಿನ ರೂಪಾಂತರವನ್ನು ವೇಯ್ನ್ ಓಲ್ಸನ್‌ ಮಾಡಿದನು.

"ದ ಕ್ರೋನಿಕಲ್ಸ್ ಆಫ್ ನಾರ್ನಿಯಾ"ದ ರಂಗಪ್ರದರ್ಶನದ ನಿರ್ಮಾಣಗಳು ಇತ್ತೀಚಿಗೆ ವೃತ್ತಿಗರು, ಸಮುದಾಯ ಮತ್ತು ಯುವ ಚಿತ್ರಮಂದಿರಗಳೊಂದಿಗೆ ಜನಪ್ರಿಯವಾಗುತ್ತಿದೆ. ವಿಶೇಷವಾಗಿ ಯುವಕ-ವೃಂದದ ನಿರ್ವಹಣೆಗಾಗಿ ಬರೆಯಲಾದ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನ ಸಂಗೀತಮಯ ಆವೃತ್ತಿಯನ್ನು ಜೋಸೆಫ್ ವೈನ್‌ಬರ್ಗರ್‌ ಪ್ರದರ್ಶಿಸುತ್ತಿದ್ದಾನೆ.[೪]

ಚಲನಚಿತ್ರ

ಬದಲಾಯಿಸಿ

ಲೆವಿಸ್‌ ಅವನ ಪುಸ್ತಕಗಳು ಚಲನಚಿತ್ರವಾಗುವುದನ್ನು ಬಯಸದಿದ್ದರೂ, ಇದನ್ನು ನಾಲ್ಕು ಬಾರಿ ಮಾಡಲಾಗಿದೆ. ಅವುಗಳಲ್ಲಿ ಮ‌ೂರನ್ನು ದೂರದರ್ಶನಕ್ಕಾಗಿ ತಯಾರಿಸಲಾಗಿದೆ (ದೂರದರ್ಶನವನ್ನು ಗಮನಿಸಿ). BBCಯು ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ , ಪ್ರಿನ್ಸ್ ಕ್ಯಾಸ್ಪಿಯನ್ , ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ಮತ್ತು ದ ಸಿಲ್ವರ್ ಚೇರ್ ‌ ಮೊದಲಾದವುಗಳ ದೂರದರ್ಶನ ದಾರಾವಾಹಿ ರೂಪಾಂತರಗಳನ್ನು ತಯಾರಿಸಿತು. ವಾಲ್ಡನ್ ಮೀಡಿಯಾ ನಿರ್ಮಾಣದ ಮತ್ತು ವಾಲ್ಟ್ ಡಿಸ್ನಿ ಪಿಕ್ಚರ್ಸ್‌ ವಿತರಿಸಿದ The Chronicles of Narnia: The Lion, the Witch and the Wardrobe ಎಂಬ ಶೀರ್ಷಿಕೆಯ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ನ ಚಲನಚಿತ್ರ ಆವೃತ್ತಿಯು 2005ರ ಡಿಸೆಂಬರ್‌‌ನಲ್ಲಿ ಬಿಡುಗಡೆಯಾಯಿತು. ಚಲನಚಿತ್ರಗಳನ್ನು ಮಾಡುವ ಅನುಮತಿಯನ್ನು C. S. ಲೆವಿಸ್‌ನ ಮಗ ನೀಡಿದನು. ಇದನ್ನು ಆಂಡ್ರಿವ್ ಆಡಮ್ಸನ್‌ ನಿರ್ದೇಶಿಸಿದನು. ಕಥಾವಸ್ತುವನ್ನು ಬರೆದದ್ದು ಆನ್ ಪೀಕಾಕ್. ಚಿತ್ರದ ಮುಖ್ಯ ಛಾಯಾಚಿತ್ರಣವನ್ನು ಪೋಲ್ಯಾಂಡ್‌, ಜೆಕ್ ರಿಪಬ್ಲಿಕ್ ಮತ್ತು ನ್ಯೂಜಿಲ್ಯಾಂಡ್ ಮೊದಲಾದ ಕಡೆಗಳಲ್ಲಿ ನಡೆಸಲಾಯಿತು. ರಿಧಮ್ ಆಂಡ್ ಹ್ಯೂಸ್ ಸ್ಟುಡಿಯೋಸ್, ಸೋನಿ ಪಿಕ್ಚರ್ಸ್ ಇಮೇಜ್‌ವರ್ಕ್ಸ್, ಇಂಡಸ್ಟ್ರಿಯಲ್ ಲೈಟ್ ಆಂಡ್ ಮ್ಯಾಜಿಕ್ (ILM)ನಂತಹ ಪ್ರಮುಖ ದೃಷ್ಟಿ-ಪರಿಣಾಮಕಾರಿತ್ವವನ್ನು ಹೊಂದಿರುವ ಸ್ಟುಡಿಯೊಗಳು ಮತ್ತು ಇನ್ನೂ ಅನೇಕ ಸ್ಟುಡಿಯೊಗಳು ಚಿತ್ರಕ್ಕಾಗಿ VFXನಲ್ಲಿ ಕೆಲಸ ಮಾಡಿವೆ. ಈ ಚಿತ್ರವು ಪ್ರಶಂಸೆಯನ್ನು ಗಳಿಸಿತು ಮತ್ತು ಗಲ್ಲಾ-ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತು. ಆ ಸಂದರ್ಭದಲ್ಲಿ ಬಿಡುಗಡೆಯಾದ ಎಲ್ಲಾ ಚಿತ್ರಗಳಲ್ಲಿ ಅತ್ಯುತ್ತಮ 25 ಚಿತ್ರಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆಯಿತು (ಆದಾಯದಿಂದ). ಡಿಸ್ನೆಯು ನಿರ್ಮಿಸಿದ ಉತ್ತರಭಾಗ The Chronicles of Narnia: Prince Caspian ವು 2008ರ ಮೇ 16ರಲ್ಲಿ ಬಿಡುಗಡೆಗೊಂಡಿತು. ಕ್ಯಾಸ್ಪಿಯನ್‌‌ನ ಬಿಡುಗಡೆಯ ಸಮಯದಲ್ಲಿ ಡಿಸ್ನೆಯು ಮುಂದಿನ ಭಾಗ The Chronicles of Narnia: The Voyage of the Dawn Treaderದ ನಿರ್ಮಾಣ ಹಂತದಲ್ಲಿದ್ದನು. ಇದು ಆಯವ್ಯಯದ ಇತಿಮಿತಿಯಿಂದಾಗಿ ಮ‌ೂರನೇ ಚಲನಚಿತ್ರಕ್ಕೆ ಹಣಕಾಸು ಒದಗಿಸುವುದಿಲ್ಲ ಆದರೂ 20ಯತ್ ಸೆಂಚುರಿ ಫಾಕ್ಸ್ ಈ ಸರಣಿಯನ್ನು ಮುಂದುವರಿಸುವಂತೆ ಕಾಣುತ್ತದೆ ಎಂದು 2008ರ ಡಿಸೆಂಬರ್‌ನಲ್ಲಿ ಡಿಸ್ನೆ ಘೋಷಿಸಿದನು.[೫೬] ಏಕ ಪ್ರಚಾರಕ ಎರ್ನೀ ಮಲಿಕ್ ಈ ಚಿತ್ರದ ಚಿತ್ರೀಕರಣವು 2009ರ ಜುಲೈ 15ರಲ್ಲಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಿದೆ ಎಂದು ದೃಢಪಡಿಸಿದ್ದಾನೆ.[೫೭]

ದ ಕ್ರೋನಿಕಲ್ಸ್ ಆಫ್ ನಾರ್ನಿಯಾದ ವಿಷಯಗಳು ಅಥವಾ ಉಲ್ಲೇಖಗಳು ಸಂಗೀತದಲ್ಲೂ ಕಾಣಿಸಿಕೊಂಡಿವೆ. ಉದಾಹರಣೆಗಾಗಿ, ಅಮೇರಿಕಾದ ಕ್ರಿಶ್ಚಿಯನ್ ರಾಕ್ ವಾದ್ಯ-ವೃಂದ ರಿಲೈಯಂಟ್ K ಮತ್ತು ಬ್ರಿಟಿಷ್ ಹಾರ್ಡ್-ರಾಕ್ ವಾದ್ಯ ವೃಂದ ಟೆನ್ ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಅನ್ನು ಆಧರಿಸಿರುವ ಅನುಕ್ರಮವಾಗಿ "ಇನ್ ಲೈಕ್ ಎ ಲಯನ್ (ಆಲ್ವೇಸ್ ವಿಂಟರ್)" ಮತ್ತು "ದ ಕ್ರೋನಿಕಲ್ಸ್" ಹಾಡುಗಳನ್ನು ಧ್ವನಿಮುದ್ರಣ ಮಾಡಿವೆ. ಸ್ವೀಡಿಶ್ ಕ್ರಿಶ್ಚಿಯನ್ ಪ್ರಬಲ ಮೆಟಲ್-ವಾದ್ಯ ವೃಂದ ನಾರ್ನಿಯಾದ ಹಾಡುಗಳು ಹೆಚ್ಚಾಗಿ ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಅಥವಾ ಬೈಬಲ್‌ನ ಬಗ್ಗೆಯಾಗಿರುತ್ತವೆ. ಈ ವಾದ್ಯ-ವೃಂದದ ಎಲ್ಲಾ ಮುಖಪುಟಗಳಲ್ಲಿ ಅಸ್ಲಾನ್ ಚಿತ್ರವನ್ನು ಹೊಂದಿರುತ್ತದೆ. ಫಿಶ್ ಎನ್ನುವ ವಾದ್ಯ-ವೃಂದವು ಅದರ 1996ರ ಆಲ್ಬಂ ಬಿಲ್ಲಿ ಬ್ರೀತ್ಸ್‌ ‌ನಲ್ಲಿ "ಪ್ರಿನ್ಸ್ ಕ್ಯಾಸ್ಪಿಯನ್" ಎಂಬ ಹಾಡನ್ನು ಹೊಂದಿದೆ.

ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ‌ದ ಸಂಗೀತಮಯ ಆವೃತ್ತಿ ದ ರೋರ್ ಆಫ್ ಲವ್ , ಸಮಕಾಲೀನ ಕ್ರಿಶ್ಚಿಯನ್ ಸಂಗೀತ ತಂಡ 2ನ್ಡ್ ಚ್ಯಾಪ್ಟರ್ ಆಫ್ ಆಕ್ಟ್ಸ್‌ನಿಂದ 1980ರಲ್ಲಿ ಬಿಡುಗಡೆಯಾಯಿತು.

ಆಡಿಯೊ ಬುಕ್‌ಗಳು

ಬದಲಾಯಿಸಿ

ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಕಥೆಗಳೆಲ್ಲವೂ ಆಂಡ್ರಿವ್ ಸ್ಯಾಚ್ಸ್ ವಾಚಿಸಿದ ಆಡಿಯೊ ಬುಕ್‌‍‌‌ನಲ್ಲಿ ಲಭ್ಯಯಿವೆ. ಇವು ಚಿವರ್ಸ್ ಚಿಲ್ಡ್ರನ್ಸ್ ಆಡಿಯೊ ಬುಕ್‌ಗಳಿಂದ ಪ್ರಕಟಗೊಂಡಿವೆ.

1979ರಲ್ಲಿ ಕೇಡ್ಮನ್ ರೆಕಾರ್ಡ್ಸ್ ಎಲ್ಲಾ ಏಳು ಪುಸ್ತಕಗಳ ಸಂಕ್ಷೇಪಿತ ಆವೃತ್ತಿಗಳನ್ನು ಧ್ವನಿಮುದ್ರಣಗಳಲ್ಲಿ ಮತ್ತು ಕ್ಯಾಸೆಟ್‌ಗಳಲ್ಲಿ ಬಿಡುಗಡೆ ಮಾಡಿತು. ಇವನ್ನು ಅಯನ್ ರಿಚಾರ್ಡ್ಸನ್ (ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಮತ್ತು ದ ಸಿಲ್ವರ್ ಚೇರ್ ), ಕ್ಲಾರೆ ಬ್ಲೂಮ್‌ (ಪ್ರಿನ್ಸ್ ಕ್ಯಾಸ್ಪಿಯನ್ ಮತ್ತು ದ ಮ್ಯಾಜಿಶಿಯನ್ಸ್ ನೆಫ್ಯೂ ), ಆಂಥೋನಿ ಕ್ವಾಲೆ (ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ಮತ್ತು ದ ಹೋರ್ಸ್ ಆಂಡ್ ಹಿಸ್ ಬಾಯ್ ) ಹಾಗೂ ಮೈಕೆಲ್ ಯಾರ್ಕ್ (ದ ಲಾಸ್ಟ್ ಬ್ಯಾಟಲ್‌ ) ಮೊದಲಾದವರು ವಾಚಿಸಿದ್ದಾರೆ.

ಹಾರ್ಪರ್ಆಡಿಯೊ ಈ ಸರಣಿಯನ್ನು ಆಡಿಯೊ ಬುಕ್‌ನಲ್ಲಿ ಪ್ರಕಟಗೊಳಿಸಿತು. ಇದನ್ನು ಬ್ರಿಟಿಷ್ ಮತ್ತು ಐರಿಷ್ ನಟರುಗಳಾದ ಮೈಕೆಲ್ ಯಾರ್ಕ್ (ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ), ಲಿನ್ನ್ ರೆಡ್‌ಗ್ರೇವ್ (ಪ್ರಿನ್ಸ್ ಕ್ಯಾಸ್ಪಿಯನ್ ), ಡೆರೆಕ್ ಜ್ಯಾಕೋಬಿ (ದ ವೋಯೇಜ್ ಆಫ್ ದ ಡಾವ್ನ್ ಟ್ರೀಡರ್‌ ), ಜೆರೆಮಿ ನಾರ್ತ್ಯಾಮ್ (ದ ಸಿಲ್ವರ್ ಚೇರ್ ), ಅಲೆಕ್ಸ್ ಜೆನ್ನಿಂಗ್ಸ್ (ದ ಹೋರ್ಸ್ ಆಂಡ್ ಹಿಸ್ ಬಾಯ್ ), ಕೆನ್ನೆತ್ ಬ್ರ್ಯಾನ್ಯಾಘ್ (ದ ಮ್ಯಾಜಿಶಿಯನ್ಸ್ ನೆಫ್ಯೂ ) ಹಾಗೂ ಪ್ಯಾಟ್ರಿಕ್ ಸ್ಟಿವಾರ್ಟ್ (ದ ಲಾಸ್ಟ್ ಬ್ಯಾಟಲ್‌ ) ಮೊದಲಾದವರು ಓದಿದ್ದಾರೆ.

ಕೊಲ್ಲಿನ್ಸ್ ಆಡಿಯೊ ಸಹ ಸರಣಿಯನ್ನು ಆಡಿಯೊ ಬುಕ್‌‌ನಲ್ಲಿ ಬಿಡುಗಡೆ ಮಾಡಿತು. ಇದನ್ನು ಮ್ಯಾರಿಸ ರೋಬಲ್ಸ್‌ನ ಮ‌ೂಲ ಸಂಗೀತ ಸಂಯೋಜನೆ ಮತ್ತು ನಿರ್ವಹಣೆಯೊಂದಿಗೆ ಸರ್ ಮೈಕೆಲ್ ಹಾರ್ಡರ್ನ್ ಓದಿದ್ದಾನೆ. ಅಲ್ಲದೆ ಇದು ನಟ ಟಾಮ್ ಬೇಕರ್ ವಾಚಿಸಿದ ಆವೃತ್ತಿಯೊಂದನ್ನೂ ಪ್ರಕಟಗೊಳಿಸಿದೆ.

1998-2003ರಲ್ಲಿ ಫೋಕಸ್ ಆನ್ ದ ಫ್ಯಾಮಿಲಿ ರೇಡಿಯೊ ಥಿಯೇಟರ್ ಎಲ್ಲಾ ಏಳು ಕ್ರೋನಿಕಲ್ಸ್ ಆಫ್ ನಾರ್ನಿಯಾವನ್ನು CDಯಲ್ಲಿ ಧ್ವನಿಮುದ್ರಣ ಮಾಡಿದೆ. ಎರಡು CDಗಳನ್ನು ಹೊಂದಿರುವ ದ ಮ್ಯಾಜಿಶಿಯನ್ಸ್ ನೆಫ್ಯೂ ಮತ್ತು ದ ಲಯನ್, ದ ವಿಚ್ ಆಂಡ್ ದ ವಾರ್ಡ್‌ರೋಬ್‌ ಅನ್ನು ಹೊರತುಪಡಿಸಿ ಪ್ರತಿಯೊಂದು ಪುಸ್ತಕವು ಮ‌ೂರು CDಗಳನ್ನು ಹೊಂದಿದೆ. ಇವು ಡೌಗ್ಲಸ್ ಗ್ರೆಶ್ಯಾಮ್‌‌ನ ಪೀಠಿಕೆಯೊಂದಿಗೆ C.S. ಲೆವಿಸ್‌ ಕಂಪೆನಿಯ ಸಹಯೋಗದೊಂದಿಗೆ ಬಿಡುಗಡೆಯಾಗಿವೆ. ಅವರು ಸುಮಾರು ನೂರು ನಟರನ್ನು, ಮ‌ೂಲ ಆರ್ಕೇಸ್ಟ್ರಾ ಸಂಗೀತವನ್ನು ಮತ್ತು ಡಿಜಿಟಲ್ ಧ್ವನಿ ವಿನ್ಯಾಸವನ್ನು ಬಳಸಿಕೊಂಡಿದ್ದರು. ಅದರಲ್ಲಿ ಭಾಗವಹಿಸಿದ ನಟರೆಂದರೆ - ಕಥಾ ನಿರೂಪಕನಾಗಿ ಪಾಲ್ ಸ್ಕೊಫೀಲ್ಡ್, ಅಸ್ಲಾನ್ ಆಗಿ ಡೇವಿಡ್ ಸ್ಯುಚೆಟ್, ವೈಟ್ ವಿಚ್‌ ಆಗಿ ಎಲಿಜಬೆತ್ ಕೌನ್ಸೆಲ್ ಮತ್ತು ಕ್ಯಾಸ್ಪಿಯನ್‌ X ಆಗಿ ರಿಚಾರ್ಡ್ ಸ್ಯುಚೆಟ್.

1984ರಲ್ಲಿ ವರ್ಡ್ ಪಬ್ಲಿಷಿಂಗ್, ಲೈಫ್‌ವೇರ್ ಅಭಿವೃದ್ಧಿಪಡಿಸಿದ ಒಂದು ಆಟ ಅಡ್ವೆಂಚರ್ಸ್ ಇನ್ ನಾರ್ನಿಯಾ ವನ್ನು ಬಿಡುಗಡೆ ಮಾಡಿತು. ಈ ಆಟವು ಆತ್ಮಸಂಯಮ ಮತ್ತು ತ್ಯಾಗದತಂಹ ಧನಾತ್ಮಕ ಮೌಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿತ್ತು. ಇದು ಆಟದಲ್ಲಿ ಕಾರ್ಡ್‌ ಮತ್ತು ದಾಳಗಳಂತಹ ಭೌತಿಕ ವಸ್ತುಗಳನ್ನು ಒಳಗೊಂಡಿತ್ತು ಹಾಗೂ ಕೊಮ್ಮೊಡೋರ್ 64ರಲ್ಲಿ ಲಭ್ಯವಿತ್ತು.[೫೮]

ನವೆಂಬರ್ 2005ರಲ್ಲಿ ಡಿಸ್ನೆಯ ಪ್ರಕಾಶನಾ ಸಂಸ್ಥೆ ಬ್ಯುಯೆನ ವಿಸ್ತಾ ಗೇಮ್ಸ್, ವಾಲ್ಡನ್ ಮೀಡಿಯಾ/ವಾಲ್ಟ್ ಡಿಸ್ನಿ ಪಿಕ್ಚರ್ಸ್‌ ಚಿತ್ರದ ವೀಡಿಯೊಗೇಮ್ ರೂಪಾಂತರಗಳನ್ನು ಬಿಡುಗಡೆ ಮಾಡಿತು. ಆ ಸಂದರ್ಭದಲ್ಲಿ ವೀಡಿಯೊಗೇಮ್ ಆಧಾರದಲ್ಲಿ ಹೆಚ್ಚು ಅಭಿವೃದ್ಧಿಗೊಂಡ ಆವೃತ್ತಿಗಳೆಂದರೆ - ವಿಡೋಸ್ PC, ನಿಂಟೆಂಡೊ ಗೇಮ್‌ಕ್ಯೂಬ್, ಎಕ್ಸ್‌ಬಾಕ್ಸ್ ಮತ್ತು ಪ್ಲೇಸ್ಟೇಶನ್ 2 (UK-ಆಧಾರಿತ ಟ್ರಾವೆಲ್ಲರ್ಸ್ ಟೇಲ್ಸ್‌ನಿಂದ ಅಭಿವೃದ್ಧಿಪಡಿಸಲಾಗಿದೆ). ಕೈಯಿಂದ ಆಡಲಾಗುವ ಆಟದ ಆವೃತ್ತಿಯೊಂದನ್ನೂ ಗ್ರಿಪ್ಟೋನೈಟ್ ಗೇಮ್ಸ್, ನಿಂಟೆಂಡೊ DS ಮತ್ತು ಗೇಮ್ ಬಾಯ್ ಅಡ್ವಾನ್ಸ್‌ಗಾಗಿ ಅಭಿವೃದ್ಧಿಪಡಿಸಿತು.

ಟಿಪ್ಪಣಿಗಳು

ಬದಲಾಯಿಸಿ
  1. Kelly, Clint (2006). "Dear Mr. Lewis". Respone. 29 (1). Retrieved 2008-09-22. The seven books of Narnia have sold more than 100 million copies in 30 languages, nearly 20 million in the last 10 years alone.
  2. Edward, Guthmann (2005-12-11). "'Narnia' tries to cash in on dual audience". www.sfgate.com. San Francisco Chronicle. Archived from the original on 2007-11-03. Retrieved 2008-09-22. {{cite news}}: Italic or bold markup not allowed in: |publisher= (help)
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ Ford, Paul (2005). Companion to Narnia: Revised Edition. San Francisco: HarperCollins. ISBN 0-06-079127-6.
  4. Dorsett, Lyle (1995). C. S. Lewis: Letters to Children. Touchstone. ISBN 0684823721. {{cite book}}: Unknown parameter |coauthors= ignored (|author= suggested) (help)
  5. Brady, Erik (2005-12-01). "A closer look at the world of Narnia". USA Today. Retrieved 2008-09-21.
  6. ೬.೦ ೬.೧ Schakel, Peter (1979). Reading with the Heart: The Way into Narnia. Grand Rapids: Erdmans. ISBN 0-8028-1814-5.
  7. Rilstone, Andrew. "What Order Should I Read the Narnia Books in (And Does It Matter?)". The Life and Opinions of Andrew Rilstone, Gentleman. Archived from the original on 2005-11-30. Retrieved 2021-07-17.{{cite web}}: CS1 maint: bot: original URL status unknown (link)
  8. Collins, Marjorie (1980). Academic American Encyclopedia. Aretê Pub. Co. p. 305. ISBN 0933880006.
  9. ಮಾರ್ಟಿಂಡೇಲ್, ವೇಯ್ನ್; ರೂಟ್, ಜೆರ್ರಿ. ದ ಕೋಟೇಬಲ್ ಲೆವಿಸ್‌ .
  10. Toynbee, Polly (2005-12-05). "Narnia represents everything that is most hateful about religion". The Guardian. Retrieved 2008-10-28.
  11. ೧೧.೦ ೧೧.೧ Jacobs, Alan (2005-12-04). "The professor, the Christian, and the storyteller". The Boston Globe. Retrieved 2008-10-28.
  12. Kent, Keri Wyatt (2005). "Talking Narnia to Your Neighbors". Today's Christian Woman. 27 (6): 42. Retrieved 2008-10-28. {{cite journal}}: Unknown parameter |month= ignored (help)
  13. ಅಬ್ರಾಹಂ ಟ್ಯೂಕರ್, "ರಿಲೀಜನ್ ಆಂಡ್ ಲಿಟರೇಚರ್, ರಿಲೀಜನ್ ಇನ್ ಲಿಟರೇಚರ್", ನ್ಯೂಯಾರ್ಕ್, 1979 (ಪ್ರಿಫೇಸ್)
  14. Lewis, C.S. (1990). Surprised by Joy. Fount Paperbacks. p. 14. ISBN 0006238157.
  15. Wilson, Tracy V. (2005-12-07). "How Narnia Works". HowStuffWorks. Retrieved 2008-10-28.
  16. Trotter, Drew (2005-11-11). "What Did C. S. Lewis Mean, and Does It Matter?". Leadership U. Retrieved 2008-10-28.
  17. ಮೈಕೆಲ್ ವಾರ್ಡ್, ಪ್ಲ್ಯಾನೆಟ್ ನಾರ್ನಿಯಾ: ದ ಸೆವೆನ್ ಹೆವೆನ್ಸ್ ಇನ್ ದ ಇಮ್ಯಾಜಿನೇಶನ್ ಆಫ್ C.S. ಲೆವಿಸ್‌ (ಆಕ್ಸ್‌ಫರ್ಡ್‌ ಯ‌ೂನಿವರ್ಸಿಟಿ ಪ್ರೆಸ್, 2008)
  18. ದ ಇಂಡಿಪೆಂಡೆಂಟ್ ‌ನ ವಿಮರ್ಶೆಯಲ್ಲಿ ಉಲ್ಲೇಖಿತವಾಗಿದೆ [೧]
  19. * ಗ್ರೀನ್. "ದ ರಿಸೈಕಲ್ಡ್ ಇಮೇಜ್".
  20. ೨೦.೦ ೨೦.೧ ಮಿಲ್ಲರ್, "ಫಾರ್ ಫ್ರಮ್ ನಾರ್ನಿಯಾ.
  21. ೨೧.೦ ೨೧.೧ ಕ್ಯಾಥಿ ಯಂಗ್, "ಎ ಸೆಕ್ಯೂಲರ್ ಫ್ಯಾಂಟಸಿ - ದ ಫ್ಲೇವ್ಡ್ ಬಟ್ ಫ್ಯಾಸಿನೇಟಿಂಗ್ ಫಿಕ್ಷನ್ ಆಫ್ ಫಿಲಿಪ್ ಪುಲ್‌ಮ್ಯಾನ್‌ Archived 2009-09-03 ವೇಬ್ಯಾಕ್ ಮೆಷಿನ್ ನಲ್ಲಿ.", ರೀಸನ್ ಮ್ಯಾಗಜಿನ್ (ಮಾರ್ಚ್ 2008).
  22. ೨೨.೦ ೨೨.೧ ಪೀಟರ್‌ ಹಿಚನ್ಸ್, "ದಿಸ್ ಈಸ್ ದ ಮೋಸ್ಟ್ ಡೇಂಜರಸ್ ಆಥರ್ ಇನ್ ಬ್ರಿಟನ್ Archived 2013-03-27 ವೇಬ್ಯಾಕ್ ಮೆಷಿನ್ ನಲ್ಲಿ.", ದ ಮೇಲ್ ಆನ್ ಸಂಡೆ (27 ಜನವರಿ 2002), ಪುಟ 63.
  23. ೨೩.೦ ೨೩.೧ ಚ್ಯಾಟವೇ, ಪೀಟರ್‌ T. "ಕ್ರೋನಿಕಲ್ಸ್ ಆಫ್ ಆಥೆಸಮ್, ಕ್ರೈಸ್ಟಿನಿಟಿ ಟುಡೆ .
  24. ಕಥೆಯು ಫ್ಲೈಟ್ಸ್: ಎಕ್ಸ್‌ಟ್ರೀಮ್ ವಿಶನ್ಸ್ ಆಫ್ ಫ್ಯಾಂಟಸಿ ವಾಲ್ಯೂಮ್ II ರಲ್ಲಿ (ಆಲ್ ಸ್ಯಾರಂಟೋನಿಯೊ ಸಂಪಾದಿಸಿದ) ಮತ್ತು ಗೈಮ್ಯಾನ್‌ ಸಂಗ್ರಹ ಫ್ರ್ಯಾಗೈಲ್ ಥಿಂಗ್ಸ್ ‌ನಲ್ಲಿ ಕಂಡುಬರಬಹುದು.
  25. ಗೈಮ್ಯಾನ್‌. "ದ ಪ್ರೋಬ್ಲೆಮ್ ಆಫ್ ಸೂಸಾನ್", ಪುಟ 151ff.
  26. ಪ್ಯಾಟರ್ಸನ್, ಕ್ಯಾಥೆರಿನ್ ಪ್ಯಾಟರ್ಸನ್‌: ಆನ್ ಹರ್ ಓನ್ ವರ್ಡ್ಸ್ , ಪುಟ 1.
  27. ಏಗನ್, ಒರಾಕಲ್ Archived 2010-08-11 ವೇಬ್ಯಾಕ್ ಮೆಷಿನ್ ನಲ್ಲಿ. .
  28. * ಗ್ರಾಸ್‌ಮ್ಯಾನ್. J.K. ರೋಲಿಂಗ್‌ ಹಾಗ್‌ವಾರ್ಟ್ಸ್ ಆಂಡ್ ಆಲ್ Archived 2012-09-13 at Archive.is .
  29. ೨೯.೦ ೨೯.೧ ಎಜಾರ್ಡ್. "ನಾರ್ನಿಯಾ ಬುಕ್ಸ್ ಅಟ್ಯಾಕ್ಡ್ ಆಸ್ ರೇಸಿಸ್ಟ್ ಆಂಡ್ ಸೆಕ್ಸಿಸ್ಟ್".
  30. ಪುಲ್‌ಮ್ಯಾನ್. "ದ ಡಾರ್ಕ್‌ಸೈಡ್ ಆಫ್ ನಾರ್ನಿಯಾ Archived 2010-11-16 ವೇಬ್ಯಾಕ್ ಮೆಷಿನ್ ನಲ್ಲಿ.".
  31. ಆಂಡರ್ಸನ್. "ದ ಪ್ರೋಬ್ಲೆಮ್ ಆಫ್ ಸೂಸಾನ್".
  32. ರಿಲ್‌ಸ್ಟೋನ್, "ಲಿಪ್‌ಸ್ಟಿಕ್ ಆನ್ ಮೈ ಸ್ಕೋಲರ್".
  33. ೩೩.೦ ೩೩.೧ ಚ್ಯಾಪ್ಟರ್ 13: ನೊ ಲಾಂಗರ್ ಎ ಫ್ರೆಂಡ್ ಆಫ್ ನಾರ್ನಿಯಾ: ಜಂಡರ್ ಇನ್ ನಾರ್ನಿಯಾ. ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಆಂಡ್ ಫಿಲಾಸಫಿ: ದ ಲಯನ್, ದ ವಿಚ್ ಆಂಡ್ ದ ವರ್ಲ್ಡ್‌ವ್ಯೂ. ಗ್ರೆಗರಿ ಬ್ಯಾಶ್ಯಾಮ್ ಮತ್ತು ಜೆರ್ರಿ L. ವಾಲ್ಸ್ ಸಂಪಾದಿಸಿದ್ದು. ಓಪನ್ ಕೋರ್ಟ್. ಇಲಿನಾಯ್ಸ್‌ನ ಚಿಕಾಗೊ ಮತ್ತು ಲಾ ಸ್ಯಾಲೆ. 2005.
  34. "ಪುಲ್‌ಮ್ಯಾನ್ ಅಟ್ಯಾಕ್ಸ್ ನಾರ್ನಿಯಾ ಫಿಲ್ಮ್ ಪ್ಲಾನ್ಸ್", BBC ನ್ಯೂಸ್ 16 (2005).
  35. ಒಕಾನ್ನರ್, "5ನೇ ನಾರ್ನಿಯಾ ಪುಸ್ತಕವು ಹೆಚ್ಚು ಪ್ರದರ್ಶನವನ್ನು ಪಡೆಯುವುದಿಲ್ಲ".
  36. ಹೆನ್ಶರ್, "ಡೋನ್ಟ್ ಲೆಟ್ ಯುವರ್ ಚಿಲ್ಡ್ರನ್ ಗೊ ಟು ನಾರ್ನಿಯಾ: C. S. ಲೆವಿಸ್‌ ಬುಕ್ಸ್ ಆರ್ ರೇಸಿಸ್ಟ್ ಆಂಡ್ ಮಿಸೋಜಿನಿಸ್ಟ್".
  37. ಚ್ಯಾಟವೇ, ಪೀಟರ್‌ T. "ನಾರ್ನಿಯಾ 'ಬ್ಯಾಪ್ಟೈಜಸ್' — ಆಂಡ್ ಡಿಫೆಂಡ್ಸ್ — ಪ್ಯಾಗನ್ ಮೈಥಾಲಜಿ".
  38. ಕ್ಜೋಸ್. ನಾರ್ನಿಯಾ: ಬ್ಲೆಂಡಿಂಗ್ ಟ್ರುಥ್ ಆಂಡ್ ಮಿಥ್ .
  39. ಹರ್ಸ್ಟ್, "ನೈನ್ ಮಿನುಟ್ಸ್ ಆಫ್ ನಾರ್ನಿಯಾ".
  40. ಮೋಯ್ನಿಹ್ಯಾನ್ (ಸಂಪಾದಕ). ದ ಲ್ಯಾಟಿನ್ ಲೆಟರ್ಸ್ ಆಫ್ C. S. ಲೆವಿಸ್‌: C. S. ಲೆವಿಸ್‌ ಆಂಡ್ ಡಾನ್ ಗಿಯೊವನಿ ಕ್ಯಾಲಬ್ರಿಯ .
  41. "ಕ್ರೈಸ್ಟಿನಿಟಿ Today.com". Archived from the original on 2011-06-29. Retrieved 2010-06-10.
  42. "The paganism of Narnia".
  43. ವಾಲ್ಟರ್ ಹೂಪರ್ ಸಂಪಾದಿಸಿದ C.S.ಲೆವಿಸ್‌‌ನ ಗಾಡ್ ಇನ್ ಡಾಕ್‌ ನಲ್ಲಿ "ಈಸ್ ಥೈಸಮ್ ಇಂಪಾರ್ಟೆಂಟ್?" ಪ್ರಬಂಧವನ್ನು ಗಮನಿಸಿ
  44. ಇನ್ಟು ದ ವಾರ್ಡ್‌ರೋಬ್: C.S. ಲೆವಿಸ್‌ ಮತ್ತು ನಾರ್ನಿಯಾ ಕ್ರೋನಿಕಲ್ಸ್, ಪುಟ 160, ಡೇವಿಡ್ C. ಡೌವ್ನಿಂಗ್
  45. ಶ್ಯಾನ ಕಾಘೆಯ "ರಿವಿಸ್ಟಿಂಗ್ ನಾರ್ನಿಯಾ: ಫ್ಯಾಂಟಸಿ, ಮಿಥ್ ಆಂಡ್ ರಿಲೀಜಿಯನ್ ಇನ್ C. S. ಲೆವಿಸ್‌ ಕ್ರೋನಿಕಲ್ಸ್"‌ನ ಪುಟ 54ರಲ್ಲಿ ಸೂಚಿಸಿದಂತೆ ನಾರ್ನಿಯಾವು ಮತಾಂತರಗೊಳಿಸುವ ಸಾಧನವಾಗಬಹುದೆಂಬ ನಂಬಿಕೆ ಕ್ರಿಶ್ಚಿಯನ್ ಓದುಗರಲ್ಲಿದೆ. ಡೇವಿಡ್ ಆಡಮ್ಸ್ ಲೀಮಿಂಗ್ ಮತ್ತು ಕ್ಯಾಥ್ಲೀನ್ ಮಾರ್ಗನ್‌ರ "ಎನ್‌ಸೈಕ್ಲೋಪೀಡಿಯಾ ಆಫ್ ಆಲಿಗಾರಿಕಲ್ ಲಿಟರೇಚರ್"ನ ಪುಟ 56ರಲ್ಲಿ ಹೀಗೆಂದು ಚರ್ಚಿಸಲಾಗಿದೆ - "ಅವು ಕೇವಲ ಕ್ರಿಶ್ಚಿಯನ್ ಓದುಗರಿಗೆ ಮಾತ್ರ ಯಾವುದೇ ರೀತಿಯಿಂದಲೂ ಸೂಕ್ತವಾಗಿಲ್ಲ." ಒಂದು ಪ್ರಸಿದ್ಧ ನಾರ್ನಿಯಾ ಆನ್‌ಲೈನ್ ಆಟದ ಸೈಟ್, ಅದಕ್ಕೆ ಭೇಟಿನೀಡುವ ಕ್ರಿಶ್ಚಿಯನ್ನರು ಆಟದ-ಚ್ಯಾಟ್‌ನ ಸಂದರ್ಭದಲ್ಲಿ ನಂಬಿಕೆಯಿಲ್ಲದವರನ್ನು ಮತಾಂತರಗೊಳಿಸಲು ಪ್ರಯತ್ನಿಸಬಾರದೆಂದು ಕೇಳಿಕೊಳ್ಳುತ್ತದೆ. ಗಮನಿಸಿ - http://enter-narnia.com/tos.php Archived 2009-12-08 ವೇಬ್ಯಾಕ್ ಮೆಷಿನ್ ನಲ್ಲಿ.. ಕ್ರಿಶ್ಚಿಯನ್ ಅಭಿಮಾನಿಗಳನ್ನು ಆಧಾರಿತ ವಿವಾದವು Filibustercartoons.com ನಲ್ಲಿನ ಒಂದು ಕಾರ್ಟೂನ್‌ನಲ್ಲಿ ಪ್ರತಿಬಿಂಬಿತವಾಗಿದೆ.
  46. "ಎ ಕ್ರಿಶ್ಚಿಯನ್ ಟೀಚರ್ಸ್ ಗೈಡು ಟು ನಾರ್ನಿಯಾ" ಎಂಬ ಶೀರ್ಷಿಕೆಯ ಸಂಡೆ ಶಾಲೆಯ ಪುಸ್ತಕವೊಂದನ್ನು "Christian Teachers guide to Narnia".ರಲ್ಲಿ ಮಾರಾಟಕ್ಕೆ ಇಡಲಾಯಿತು. "United Methodists find spiritual riches, tools, in 'Narnia'". faithstreams.com.ರಲ್ಲಿ ಸೂಚಿಸಿದಂತೆ ಯುನೈಟೆಡ್ ಮೆಥಾಡಿಸ್ಟ್ ಚರ್ಚ್ ಅದರದೇ ಆದ ನಾರ್ನಿಯಾ ಪಠ್ಯಕ್ರಮವನ್ನು ಪ್ರಕಟಿಸಿತು. ವಾಲ್ಡನ್ ಮೀಡಿಯಾದ ಸ್ಟಡಿ ಗೈಡ್‌ಗಳು ಕ್ರಿಶ್ಚಿಯನ್ ಅಲ್ಲದಿದ್ದರೂ, ಅವರು ಮ‌ೂವಿ ಮಾರ್ಕೆಟಿಂಗ್ ಮ‌ೂಲಕ ಸಂಡೆ ಶಾಲೆಗಳಿಗೆ ಮಾರಾಟ ಮಾಡಿದರು.
  47. ಕ್ರಾಸ್‌ರೋಡ್ - ಸೇಯರ್ಸ್ ಜೀವನಚರಿತ್ರೆಯನ್ನೂ ಗಮನಿಸಿ. ಪುಟ 419.
  48. ಕಾರ್ಪೆಂಟರ್, ದ ಇಂಕ್ಲಿಂಗ್ಸ್ , ಪುಟ 42-45. ಲೆವಿಸ್‌ನ ಆತ್ಮಚರಿತ್ರೆ ಸರ್ಪ್ರೈಸ್ಡ್ ಬೈ ಜಾಯ್ ಅನ್ನೂ ಗಮನಿಸಿ.
  49. ಜಾರ್ಜ್ ಸೇಯರ್, ಲೈಲ್ W. ಡಾರ್ಸೆಟ್‌ರ ಜ್ಯಾಕ್: ಎ ಲೈಫ್ ಆಫ್ C. S. ಲೆವಿಸ್‌ಅನ್ನು ಗಮನಿಸಿ, ಪುಟ 312-313
  50. ಕಾಲಿನ್ ಡ್ಯುರೈಜ್‌ನ ಟಾಲ್ಕೀನ್ ಆಂಡ್ C.S. ಲೆವಿಸ್‌: ದ ಗಿಫ್ಟ್ ಆಫ್ ಫ್ರೆಂಡ್‌ಶಿಪ್ ಅನ್ನು ಗಮನಿಸಿ, ಪುಟ 131; ಹಂಫ್ರೆ ಕಾರ್ಪೆಂಟರ್‌ನ ದ ಇಂಕ್ಲಿಂಗ್ಸ್ ಅನ್ನೂ ನೋಡಿ, ಪುಟ 224. ಡಯಾನ ಗ್ಲೈರ್‌ನ ದ ಕಂಪೆನಿ ದೆ ಕೀಪ್ ಅನ್ನು, ಪುಟ 84 ಮತ್ತು ಹ್ಯಾರೋಲ್ಡ್ ಬ್ಲೂಮ್‌ ಸಂಪಾದಿತ ಸಂಕಲನ ದ ಕ್ರೋನಿಕಲ್ಸ್ ಆಫ್ ನಾರ್ನಿಯಾ ಅನ್ನು, ಪುಟ 140 ಗಮನಿಸಿ. ಟಾಲ್ಕೀನ್ ಅವನ ಪ್ರಬಂಧ ಆನ್ ಫಾರಿ-ಸ್ಟೋರೀಸ್ ‌ನಲ್ಲಿ ನೈಜ ಪ್ರಪಂಚ ಮತ್ತು ದಂತಕಥೆಗಳ ಪ್ರಪಂಚದ ಮಧ್ಯೆ ಸಾಗುವ ಕಥೆಗಳ ಬಗ್ಗೆ ಅವನ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾನೆ.
  51. [೨] ಮತ್ತು [೩] Archived 2009-02-08 ವೇಬ್ಯಾಕ್ ಮೆಷಿನ್ ನಲ್ಲಿ. ಗಮನಿಸಿ
  52. "How Narnia Made me a Witch". www.beliefnet.net.
  53. ಚಲನಚಿತ್ರ ನಿರ್ಮಾಪಕರ ಉಭಯ ವ್ಯವಹಾರಗಳಿಗಾಗಿ Edward, Guthmann (2005-12-11). "'Narnia' tries to appeal to the religious and secular". www.sfgate.com. San Francisco Chronicle. Retrieved 2008-09-22. {{cite news}}: Italic or bold markup not allowed in: |publisher= (help) ನೋಡಿ. ಕ್ರಿಶ್ಚಿಯನ್ ಕೋರಿಕೆಯ ಬಗೆಗಿನ ಮಾಹಿತಿಗಾಗಿ "'Prince Caspian' walks tightrope for Christian fans". www.usatoday.com. USA Today. {{cite news}}: Italic or bold markup not allowed in: |publisher= (help) ಮತ್ತು http://www.usatoday.com/life/books/2001-07-18-narnia.htm ಗಮನಿಸಿ. ಚಲನಚಿತ್ರಗಳ 'ಲೌಕಿಕ' ಕೋರಿಕೆಯ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೊ ಕ್ರೋನಿಕಲ್‌ನ ವಿಮರ್ಶೆ Edward, Guthmann (2005-12-11). "Children open a door and step into an enchanted world of good and evil — the name of the place is 'Narnia'". www.sfgate.com. San Francisco Chronicle. Retrieved 2008-09-22. {{cite news}}: Italic or bold markup not allowed in: |publisher= (help)ಯಲ್ಲಿ ಚರ್ಚಿಸಲಾಗಿದೆ.
  54. ಮಿಲ್ಲರ್ ಪುಟ 172 ಅನ್ನು ಗಮನಿಸಿ
  55. Enter Narnia, Focus on the Family Radio Theatre, 2005.
  56. "Disney No Longer Under Spell of Narnia". December 2008. {{cite web}}: Cite has empty unknown parameter: |coauthors= (help)
  57. "The Mysterious Filming Date... Confirmed". Aslan's Country. July 27, 2009. {{cite web}}: Cite has empty unknown parameter: |coauthors= (help)
  58. Weiss, Bret. "Adventures in Narnia (synopsis)". All Game. Archived from the original on 2014-11-14. Retrieved 2010-06-10.


ಆಕರಗಳು

ಬದಲಾಯಿಸಿ

ಹೆಚ್ಚಿನ ಮಾಹಿತಿಗಾಗಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಸಂಬಂಧಿತ ಮಾಹಿತಿ

ಬದಲಾಯಿಸಿ