ದ್ವಿತೀಯ ಆಂಗ್ಲೋ-ಸಿಖ್ ಸಮರ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2010) |
ದ್ವಿತೀಯ ಆಂಗ್ಲೋ-ಸಿಖ್ ಸಮರ ವು 1848 ಮತ್ತು 1849ನೇ ಇಸವಿಗಳಲ್ಲಿ ಸಿಖ್ಖರ ಸಾಮ್ರಾಜ್ಯ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗಳ ನಡುವೆ ನಡೆಯಿತು. ಇದರ ಫಲಿತಾಂಶವಾಗಿ ಸಿಖ್ಖರ ಸಾಮ್ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು ಹಾಗೂ ಪಂಜಾಬ್‌ಅನ್ನು ಕೂಡಾ ವಶಪಡಿಸಿಕೊಳ್ಳಲಾಯಿತಲ್ಲದೇ ತರುವಾಯ ಇದೇ ಪ್ರಾಂತ್ಯವು ಈಸ್ಟ್ ಇಂಡಿಯಾ ಕಂಪೆನಿಯ ವಾಯುವ್ಯ ಸರಹದ್ದಿನ ಪ್ರಾಂತ್ಯವಾಯಿತು.
Second Anglo-Sikh War | |||||||
---|---|---|---|---|---|---|---|
Topographical map of The Punjab, "Land of 5 Waters" | |||||||
| |||||||
ಯುದ್ಧಾಕಾಂಕ್ಷಿಗಳು | |||||||
British East India Company | Sikh Empire | ||||||
ಸಾವುನೋವುಗಳು ಮತ್ತು ನಷ್ಟಗಳು | |||||||
2,687+ killed 2,388+ wounded 113 missing | 3000 - 5000 killed |
ಸಮರದ ಹಿನ್ನೆಲೆ
ಬದಲಾಯಿಸಿಪಂಜಾಬ್ನ ಸಿಖ್ಖರ ಸಾಮ್ರಾಜ್ಯವನ್ನು ಹತ್ತೊಂಬತ್ತನೇ ಶತಮಾನದ ಆದಿಯ ವರ್ಷಗಳಲ್ಲಿ ಮಹಾರಾಜಾ ರಣಜಿತ್/ರಂಜಿತ್ ಸಿಂಗ್‌ರು ಸಂಘಟಿಸಿದರು ಹಾಗೂ ವಿಸ್ತರಿಸಿದರು. ಇದೇ ಅವಧಿಯಲ್ಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸಂಸ್ಥಾನಗಳನ್ನು, ಪಂಜಾಬನ್ನು ನೆರೆಯ ಪ್ರಾಂತ್ಯವಾಗಿಸುವವರೆಗೆ ವಿಸ್ತರಿಸಲಾಗಿತ್ತು. ಖಾಲ್ಸಾ ಸೇನಾಪಡೆಯ(ತಮ್ಮ ರಾಷ್ಟ್ರ ಹಾಗೂ ಧರ್ಮದ ಮೂರ್ತಸ್ವರೂಪವನ್ನಾಗಿ ಮೈದಾಳಿದ ಸಿಖ್ಖರ ಸೇನಾಪಡೆ) ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ತನ್ನ ರಾಜ್ಯದ ಮೇಲಿನ ಬ್ರಿಟಿಷರ ದುರಾಕ್ರಮಣವನ್ನು ತಡೆಯಲು ಹಾಗೂ ಆಫ್ಘಾನಿಸ್ತಾನ ಮತ್ತು ಕಾಶ್ಮೀರ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಸಿಖ್ಖರ ಪ್ರಾಂತ್ಯದ ಸೀಮೆಯನ್ನು ಉತ್ತರ ಹಾಗೂ ವಾಯುವ್ಯ ದಿಕ್ಕುಗಳಲ್ಲಿ ವಿಸ್ತರಿಸುವ ಉದ್ದೇಶದಿಂದ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ರಣಜಿತ್/ರಂಜಿತ್ ಸಿಂಗ್ ಅಹಿತರಕರ ಸಂಧಾನವನ್ನು ಕಾಯ್ದುಕೊಂಡು ಬಂದಿದ್ದನು.
1839ರಲ್ಲಿ ರಣಜಿತ್/ರಂಜಿತ್ ಸಿಂಗ್‌ರು ಮರಣಿಸಿದಾಗ ಸಿಖ್ಖರ ಸಾಮ್ರಾಜ್ಯದಲ್ಲಿ ಅರಾಜಕತೆಯ ಪರಿಸ್ಥಿತಿಯು ಆರಂಭವಾಗತೊಡಗಿತು. ಕೇಂದ್ರೀಯ ದರ್ಬಾರಿನಲ್ಲಿ (ರಾಜಾಸ್ಥಾನ) ಅಲ್ಪಾವಧಿಯ ಅರಸರುಗಳ ಪರಂಪರೆಯೇ ಉಂಟಾಯಿತು ಹಾಗೂ ಖಾಲ್ಸಾ ಪಡೆ ಮತ್ತು ದರ್ಬಾರಿನವರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಾ ಬಂದವು. ಈಸ್ಟ್ ಇಂಡಿಯಾ ಕಂಪೆನಿಯು ಪಂಜಾಬ್‌ನ ಗಡಿಪ್ರದೇಶಗಳಲ್ಲಿ ತನ್ನ ಸೇನಾಪಡೆಗಳ ಜಮಾವಣೆಯನ್ನು ಹೆಚ್ಚಿಸಿಕೊಳ್ಳಲು ಆರಂಭಿಸಿತು. ಅಂತಿಮವಾಗಿ, ಹೆಚ್ಚುತ್ತಾ ಹೋದ ಭಿನ್ನಾಭಿಪ್ರಾಯಗಳ ಒತ್ತಡವು ಖಾಲ್ಸಾ ಪಡೆಯನ್ನು ದುರ್ಬಲರಾದ ಹಾಗೂ ಪ್ರಾಯಶಃ ವಿಶ್ವಾಸಘಾತಕರಾಗಬಹುದಾದ ನಾಯಕರುಗಳ ನಾಯಕತ್ವದಲ್ಲಿ ಬ್ರಿಟಿಷ್ ಪ್ರಾಂತ್ಯದ ಮೇಲೆ ಆಕ್ರಮಣವನ್ನು ನಡೆಸುವಂತೆ ಪ್ರಚೋದಿಸಿತು. ಪ್ರಯಾಸಕರವಾದ ಹೋರಾಟದಿಂದ ಕೂಡಿದ್ದ ಪ್ರಥಮ ಆಂಗ್ಲೋ-ಸಿಖ್ ಸಮರದ ಅಂತ್ಯದಲ್ಲಿ ಖಾಲ್ಸಾ ಪಡೆಯು ಸೋಲನ್ನಪ್ಪಬೇಕಾಯಿತು.
ಪ್ರಥಮ ಆಂಗ್ಲೋ-ಸಿಖ್ ಸಮರಾನಂತರದ ಪರಿಣಾಮಗಳು
ಬದಲಾಯಿಸಿಸಮರದ ಕೊನೆಯ ವೇಳೆಗೆ, ಸಿಖ್ಖರ ಸಾಮ್ರಾಜ್ಯವು ಕೆಲ ಅಮೂಲ್ಯವಾದ ಪ್ರಾಂತ್ಯಗಳನ್ನು (ಜುಲ್ಲುಂದೂರ್/ಜಲ್ಲಂದೂರು ಡೋಬ್) ಈಸ್ಟ್ ಇಂಡಿಯಾ ಕಂಪೆನಿಗೆ ಬಿಟ್ಟುಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತಲ್ಲದೇ, ಈಸ್ಟ್ ಇಂಡಿಯಾ ಕಂಪೆನಿಯು ಜಮ್ಮುವಿನ ಅರಸರಾದ ಮಹಾರಾಜಾ ಗುಲಾಬ್ ಸಿಂಗ್‌ರಿಂದ ಭಾರೀ ಪ್ರಮಾಣದ ನಗದು ಹಣವನ್ನು ಪಡೆದು, ಸಿಖ್ಖರ ಸಾಮ್ರಾಜ್ಯದಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಿತು. ಗುಲಾಬ್ ಸಿಂಗ್‌ರಿಗೆ ಸಹಾಯವಾಗುವಂತೆ ಕಾಶ್ಮೀರದ ಆಡಳಿತಾರೂಢ ಮಹಾರಾಜರನ್ನು ಪದಚ್ಯುತಗೊಳಿಸಲು ದಂಡಯಾತ್ರೆಯನ್ನು ಕೈಗೊಳ್ಳುವಂತೆ ಖಾಲ್ಸಾ ಪಡೆಯ ಕೆಲವರನ್ನು ಒತ್ತಾಯಪೂರ್ವಕವಾಗಿ ಕಳಿಸಲಾಯಿತು.[೧]
ಅಪ್ರಾಪ್ತ ವಯಸ್ಕನಾಗಿದ್ದ ಸಿಖ್ಖರ ಸಾಮ್ರಾಜ್ಯದ ಮಹಾರಾಜಾ ದುಲೀಪ್ ಸಿಂಗ್‌ನಿಗೆ ತನ್ನ ಗದ್ದುಗೆಯನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಯಿತಾದರೂ, ಓರ್ವ ಬ್ರಿಟಿಷ್ ಪ್ರತಿನಿಧಿಯಾದ ಸರ್ ಹೆನ್ರಿ ಲಾರೆನ್ಸ್ ಎಂಬಾತನು ದರ್ಬಾರಿನ ರಾಜನೀತಿಯ ಮೇಲೆ ನಿಯಂತ್ರಣವನ್ನು ಹೊಂದಿದ್ದನು. ದುಲೀಪ್ ಸಿಂಗ್'ನ ತಾಯಿ, ಮಹಾರಾಣಿ ಜಿಂದ್ ಕೌರ್‌ಳು, ರಾಜಪ್ರತಿನಿಧಿಯಾಗಿ ಹಿಂದೆ ತನಗಿದ್ದ ಕೆಲ ಅಧಿಕಾರಗಳನ್ನು ಮರುಗಳಿಸಿಕೊಳ್ಳಲು ಸತತವಾಗಿ ಯತ್ನಿಸುತ್ತಿದ್ದರೂ, ಅಂತಿಮವಾಗಿ ಲಾರೆನ್ಸ್‌ನಿಂದ ಗಡೀಪಾರುಗೊಳಿಸಲ್ಪಟ್ಟಳು. ಕೆಲ ಸಿಖ್ಖರ ದಳಪತಿಗಳು ಹಾಗೂ ಆಸ್ಥಾನಿಕರು ಆಕೆಯ ಗಡೀಪಾರನ್ನು ಸ್ವಾಗತಿಸಿದರೂ, ಇತರರು ಲಾರೆನ್ಸ್'ನ ಕ್ರಮದಿಂದ ತೀವ್ರ ಅಸಮಾಧಾನಗೊಂಡರು.[೨]
ಖಾಲ್ಸಾ ಪಡೆಯ ಕೆಲಭಾಗವನ್ನು ಹಾಗೆಯೇ ಮುಂದುವರೆಸುವುದು ಅತ್ಯಗತ್ಯವಾಗಿತ್ತು, ಏಕೆಂದರೆ ಸಿಖ್ಖರ ಸಾಮ್ರಾಜ್ಯದ ಅನೇಕ ಮುಸಲ್ಮಾನ ಪ್ರಾಧಾನ್ಯದ ಪ್ರದೇಶಗಳು ಆಫ್ಘಾನಿಸ್ತಾನದ ದೋಸ್ತ್ ಮೊಹಮ್ಮದ್ ಖಾನ್‌ನೊಂದಿಗೆ ಮೈತ್ರಿ ಹೊಂದುವ ಇಲ್ಲವೇ ಅರಾಜಕತೆಗೀಡು ಮಾಡುವ ಭೀತಿಯನ್ನು ಉಂಟು ಮಾಡಿದ್ದು, ಕೇವಲ ಸೈನ್ಯದ ಬಲಪ್ರಯೋಗವು ಮಾತ್ರವೇ ಅವುಗಳನ್ನು ನಿಗ್ರಹಿಸಲು ಸಾಧ್ಯವಿತ್ತು. ಬ್ರಿಟಿಷರು ಭಾರೀ ಸಂಖ್ಯೆಯ ಬ್ರಿಟಿಷ್ ಅಥವಾ ಬಂಗಾಳ ಸೇನಾಪಡೆಯ ಘಟಕಗಳನ್ನು ಈ ಕಾರ್ಯಾಚರಣೆಗೆ ಬಳಸುವುದರಿಂದ ಆಗಬಹುದಾದ ಮಾನವಶಕ್ತಿಯ ವ್ಯಯ ಹಾಗೂ ಆರ್ಥಿಕ ವೆಚ್ಚಗಳನ್ನು ಭರಿಸಲು ಸಿದ್ಧರಿರಲಿಲ್ಲ. ಇದಕ್ಕೆ ಪ್ರತಿಕೂಲವಾಗಿ ಭಾರತದ ಗವರ್ನರ್ ಜನರಲ್/ಮಹಾಮಂಡಲಾಧಿಪತಿಯಾಗಿದ್ದ, ವಿಸ್ಕೌಂಟ್/ವೈಕೌಂಟ್ ಹಾರ್ಡಿಂಗ್/ಗೆನು ಬಂಗಾಳ ಸೇನಾಪಡೆಯ ಪ್ರಮಾಣದಲ್ಲಿ 50,000 ಸಿಬ್ಬಂದಿಗಳನ್ನು ಕಡಿಮೆ ಮಾಡುವ ಮೂಲಕ ಮಹಾ ಸಮರಾನಂತರ ಆರ್ಥಿಕ ಮಿತವ್ಯಯವನ್ನು ಸಾಧಿಸುವ ಪ್ರಯತ್ನದಲ್ಲಿ ತೊಡಗಿದ್ದನು. ಖಾಲ್ಸಾದ ಸರದಾರರು (ಸೇನಾಧಿಪತಿಗಳು) ತುಲನಾತ್ಮಕವಾಗಿ ಕಿರಿಯರಾದ ಬ್ರಿಟಿಷ್ ಅಧಿಕಾರಿಗಳು ಹಾಗೂ ಆಡಳಿತಕಾರರ ಆದೇಶಗಳನ್ನು ಪಾಲಿಸಬೇಕಾದುದಕ್ಕೆ ಸಹಜವಾಗಿಯೇ ಅಸಮಾಧಾನಗೊಂಡಿದ್ದರು.
1848ರ ಆರಂಭದ ಸಮಯದಲ್ಲಿ, ಅನಾರೋಗ್ಯಕ್ಕೊಳಗಾಗಿದ್ದ ಸರ್ ಹೆನ್ರಿ ಲಾರೆನ್ಸ್, ರಜೆಯ ಮೇಲೆ ಇಂಗ್ಲೆಂಡ್‌ಗೆ ತೆರಳಿದನು. ಹಾರ್ಡಿಂಗ್/ಗೆನ ಬದಲಿಯಾಗಿ ಗವರ್ನರ್ ಜನರಲ್/ಮಹಾಮಂಡಲಾಧಿಪತಿಯಾಗಿ ಬಂದ ಲಾರ್ಡ್ ಡಾಲ್‌ಹೌಸಿ ಆತನ ಹುದ್ದೆಗೆ ಆತನ ಕಿರಿಯ ಸಹೋದರ ಜಾನ್ ಲಾರೆನ್ಸ್‌ನನ್ನು ನೇಮಿಸಲಾಗುತ್ತದೆಂದು ಭಾವಿಸಲಾಗಿದ್ದರೂ ಆತನ ಬದಲಿಗೆ ಸರ್ ಫ್ರೆಡೆರಿಕ್ ಕರ್ರೀ ಎಂಬಾತನನ್ನು ನೇಮಿಸಿದನು. ಕಲಕತ್ತಾ ಮೂಲದವನಾಗಿದ್ದ ಕರ್ರೀಯು ಓರ್ವ ಶಾಸನವಾದಿಯಾಗಿದ್ದು ಸೇನಾಪಡೆಯ ವಿಚಾರಗಳು ಹಾಗೂ ಪಂಜಾಬ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿರಲಿಲ್ಲ.[೩] ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ಪ್ರತಿನಿಧಿಗಳು ಹಾಗೂ ಬ್ರಿಟಿಷ್ ಪ್ರತಿನಿಧಿಗಳಾಗಿರುತ್ತಿದ್ದ ಕಿರಿಯ ಅಧಿಕಾರಿಗಳೊಂದಿಗೆ ಲಾರೆನ್ಸ್ ಸಹೋದರರು ತುಲನಾತ್ಮಕವಾಗಿ ಅನೌಪಚಾರಿಕತೆಯ ಹಾಗೂ ಸಲಿಗೆಯ ವರ್ತನೆಯನ್ನು ತೋರುತ್ತಿದ್ದರೆ, ಒಂದು ರೀತಿಯಲ್ಲಿ ಕಠೋರ ವರ್ತನೆಯ ಕರ್ರೀಯು ತನ್ನ ಅಧೀನ ಅಧಿಕಾರಿಗಳ ವರದಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಪ್ರವೃತ್ತಿಯನ್ನು ಹೊಂದಿದ್ದನು. ನಿರ್ದಿಷ್ಟವಾಗಿ ಆತನು ಹಝಾರಾದಲ್ಲಿನ ಸಿಖ್ಖರ ಪ್ರಾಂತಾಧಿಪತಿಯಾಗಿದ್ದ ಸರ್ದಾರ್ ಚತ್ತಾ/ಟ್ಟಾರ್ ಸಿಂಗ್ ಅತ್ತಾ/ಟ್ಟಾರೆವಾಲಾನು, ಇತರೆ ಸರದಾರರುಗಳೊಂದಿಗೆ ಸೇರಿಕೊಂಡು ಬಂಡಾಯವನ್ನು ಯೋಜಿಸುತ್ತಿದ್ದಾನೆಂದು ನಿಶ್ಚಿತಾಭಿಪ್ರಾಯವನ್ನು ಹೊಂದಿದ್ದ ಹಝಾರಾದ ರಾಜಕೀಯ ಪ್ರತಿನಿಧಿಯಾಗಿದ್ದ ಜೇಮ್ಸ್ ಅಬಾಟ್ಟ್‌ನ ವರದಿಯನ್ನು ಆಧರಿಸಿ ಕ್ರಮವನ್ನು ಕೈಗೊಳ್ಳಲು ನಿರಾಕರಿಸಿದ್ದನು.
ಪ್ರಥಮ ಕದನದ ಹಠಾತ್ ಆರಂಭ
ಬದಲಾಯಿಸಿ1818ರಲ್ಲಿ ರಣಜಿತ್/ರಂಜಿತ್ ಸಿಂಗ್‌ನು ವಶಪಡಿಸಿಕೊಂಡಿದ್ದ ಮುಲ್ತಾನ್ ನಗರವು ಸಿಖ್ಖರ ಸಾಮ್ರಾಜ್ಯದ ಭಾಗವಾಗಿತ್ತು. 1848ರಲ್ಲಿ ಅದು ದಿವಾನ್ ಮುಲ್‌ರಾಜ್ ಎಂಬ ಓರ್ವ ಹಿಂದೂ ವೈಸ್‌ರಾಯ್‌ನ ಆಳ್ವಿಕೆಗೊಳಪಟ್ಟಿತ್ತು. ಪ್ರಥಮ ಆಂಗ್ಲೋ-ಸಿಖ್ ಸಮರವು ಕೊನೆಗೊಂಡ ನಂತರದ ಅವಧಿಯಲ್ಲಿ, ಮುಲ್‌ರಾಜ್ ತನ್ನದು ಸ್ವತಂತ್ರ ಪ್ರಾಂತ್ಯವೆಂಬಂತೆ ನಡೆದುಕೊಳ್ಳತೊಡಗಿದನು. ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿದ್ದ ಲಾಹೋರ್‌ನಲ್ಲಿನ ದರ್ಬಾರಿನಲ್ಲಿ ತಾನು ಬಾಕಿಯುಳಿಸಿಕೊಂಡಿದ್ದ ಏರಿಕೆಯಾದ ತೆರಿಗೆಮೊತ್ತವನ್ನು ಹಾಗೂ ಕಂದಾಯಗಳನ್ನು ಪಾವತಿಸಲು ಹಾಜರಾಗಬೇಕಿದ್ದ ಸಮಯದಲ್ಲಿ ತನ್ನ ಕುಟುಂಬದವರೇ ಅರಸರಾಗಿ ಪದವಿ ಉಳಿಸಿಕೊಳ್ಳುವ ಉದ್ದೇಶದಿಂದ ತನ್ನ ಪುತ್ರನಿಗೆ ಪಟ್ಟವನ್ನು ಕಟ್ಟುವ ಪ್ರಯತ್ನದಲ್ಲಿ, ಮುಲ್‌ರಾಜ್ ತೊಡಗಿಕೊಂಡಿದ್ದನು. ಆಗ ಆತನ ಬದಲಿಯಾಗಿ ಕರ್ರೀಯು, ಓರ್ವ ಬ್ರಿಟಿಷ್ ರಾಜಕೀಯ ಪ್ರತಿನಿಧಿ ಲೆಫ್ಟಿನೆಂಟ್/ಸೇನಾಧಿಕಾರಿ ಪ್ಯಾಟ್ರಿಕ್ ವ್ಯಾನ್ಸ್ ಆಗ್‌ನ್ಯೂ ಎಂಬ ಸಹಾಯಕನೊಂದಿಗೆ ಸರದಾರ ಖಾನ್ ಸಿಂಗ್‌ನನ್ನು ಸಿಖ್ಖರ ಪ್ರಾಂತಾಧಿಪತಿಯಾಗಿ ಹೇರಿದನು.
ವ್ಯಾನ್ಸ್ ಆಗ್‌ನ್ಯೂ ಮತ್ತೋರ್ವ ಅಧಿಕಾರಿಯಾದ, ಲೆಫ್ಟಿನೆಂಟ್/ಸೇನಾಧಿಕಾರಿ ವಿಲಿಯಂ ಆಂಡರ್‌ಸನ್ ಮತ್ತು ಚಿಕ್ಕ ಬೆಂಗಾವಲು ಪಡೆಯೊಂದಿಗೆ ಮುಲ್ತಾನ್‌ಗೆ 18 ಏಪ್ರಿಲ್ 1848ರಂದು ಬಂದಿಳಿದನು. ಕೋಟೆಯ ಕೀಲಿಕೈಗಳನ್ನು ಮುಲ್‌ರಾಜ್ ಹಸ್ತಾಂತರಿಸಿದನಾದರೂ ವ್ಯಾನ್ಸ್ ಆಗ್‌ನ್ಯೂ'ನ ತಂಡವು ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಅವರ ಮೇಲೆ ಮುಲ್‌ರಾಜ್'ನ ಅನಿಯತ ಸೈನಿಕರ ತಂಡ ಹಾಗೂ ನಗರದ ಜನಸಮೂಹವೊಂದು ಆಕ್ರಮಣ ಮಾಡಿತು. ಇಬ್ಬರೂ ಅಧಿಕಾರಿಗಳು ಗಾಯಗೊಂಡರಾದರೂ, ಖಾನ್ ಸಿಂಗ್‌ನ ಸಹಾಯದಿಂದ ಪಾರಾದರು. ಅವರನ್ನು ನಗರದ ಹೊರಗಿರುವ ಮಸೀದಿಯೊಂದಕ್ಕೆ ಕರೆದೊಯ್ಯಲಾಯಿತು. ಅವರ ಬೆಂಗಾವಲು ಪಡೆಯು ತಪ್ಪಿಸಿಕೊಂಡಿತು ಅಥವಾ ಮುಲ್‌ರಾಜ್‌ನ ಕಡೆಗೆ ಪಕ್ಷಾಂತರ ಮಾಡಿದರು, ಹಾಗೂ ಆ ಅಧಿಕಾರಿಗಳು ಆ ಜನಸಮೂಹದಿಂದ ಮರುದಿನ ಕೊಲ್ಲಲ್ಪಟ್ಟರು.[೪]
ಮುಲ್‌ರಾಜ್ ನಂತರ ಈ ದಾಳಿಗಳನ್ನು ತಾನು ಪ್ರೇರೇಪಿಸಿರಲಿಲ್ಲವೆಂದು, ಆದರೆ ಅವರುಗಳಿಂದಾಗಿಯೇ ತಾನು ಬಂಡಾಯಕ್ಕೆ ಬದ್ಧನಾಗಿರುವ ಅನಿವಾರ್ಯತೆ ಎದುರಾಯಿತೆಂದು ಹೇಳಿಕೊಂಡನು.[೫] ಆತನು ಸರದಾರ ಖಾನ್ ಸಿಂಗ್‌ಗೆ ವಾನ್ಸ್ ಆಗ್‌ನ್ಯೂನ ತಲೆಯನ್ನು ಒಪ್ಪಿಸಿದ ನಂತರ ಆತನಿಗೆ ಅದನ್ನು, ಲಾಹೋರ್‌ಗೆ ತೆಗೆದುಕೊಂಡು ಮರಳಲು ತಿಳಿಸಿದನು.[೬] ಈ ಹತ್ಯೆಗಳ ಸುದ್ದಿಯು ಪಂಜಾಬ್‌ನಾದ್ಯಂತ ಹರಡಿದುದರಿಂದ, ಅಶಾಂತಿ ಮತ್ತು ಕ್ಷೋಭೆಗಳು ಹೆಚ್ಚಾದವು. ಭಾರೀ ಸಂಖ್ಯೆಯಲ್ಲಿ ಸಿಖ್ ಸೈನಿಕರು ದರ್ಬಾರಿಗೆ ನಿಷ್ಠೆಯಿಂದಿದ್ದ ತುಕಡಿಗಳನ್ನು ತೊರೆದು ಮುಲ್‌ರಾಜ್ ಹಾಗೂ ಅಸಂತುಷ್ಟ ಸರದಾರರುಗಳ ನೇತೃತ್ವದಡಿಯಲ್ಲಿ ಬಂಡಾಯಕ್ಕೆ ತಯಾರಾಗಿದ್ದವರೊಡನೆ ಸೇರಲು ಮುಂದಾದರು.
ತರುವಾಯದ ಕದನಗಳ ಆರಂಭ
ಬದಲಾಯಿಸಿಬನ್ನು ಪ್ರದೇಶದ ಬ್ರಿಟಿಷ್ ರಾಜಕೀಯ ಪ್ರತಿನಿಧಿಯಾಗಿದ್ದ ಲೆಫ್ಟಿನೆಂಟ್/ಸೇನಾಧಿಕಾರಿ ಹರ್ಬರ್ಟ್ ಎಡ್ವರ್ಡೆಸ್‌ನು ಏಪ್ರಿಲ್ ತಿಂಗಳಿನಲ್ಲಿ ಮುಲ್ತಾನ್‌ನ ಸಮೀಪವೇ ಇದ್ದರೂ ವಾನ್ಸ್ ಆಗ್‌ನ್ಯೂನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆತನು ತರಾತುರಿಯಿಂದ ಕೆಲ ಪಖ್‌ಟುನ್/ಪಷ್ಟುಣ/ಪಠಾಣರ ಅನಿಯತ ಸೈನಿಕ ಪಡೆಗಳನ್ನು ಜಮಾಯಿಸಿದ ನಂತರ ಜೂನ್ 18ರಂದು ಛೆ/ಜೆನಾಬ್ ನದಿಯ ಬಳಿಯಲ್ಲಿ ನಡೆದ ಕಿನೇಯ್ರಿ ಕದನದಲ್ಲಿ ಸ್ವಲ್ಪ ಸಿಖ್ಖರ ತುಕಡಿಗಳೊಂದಿಗೆ, ಮುಲ್‌ರಾಜ್'ನ ಸೇನಾಪಡೆಯನ್ನು ಸೋಲಿಸಿದನು. ಆತನು ಅವರನ್ನು ಮರಳಿ ನಗರದ ಕಡೆಗೆ ಓಡಿಸುವಲ್ಲಿ ಯಶಸ್ವಿಯಾದನಾದರೂ ಕೋಟೆಕೊತ್ತಲಗಳಿಂದ ರಕ್ಷಣೆ ಪಡೆದಿದ್ದ ನಗರದ ಮೇಲೆ ಆಕ್ರಮಣ ನಡೆಸುವಲ್ಲಿ ಯಶಸ್ವಿಯಾಗಲಿಲ್ಲ.
ಈ ನಡುವೆ, ಮುಲ್ತಾನ್‌ನಲ್ಲಿ ನಡೆದ ಘಟನೆಗಳನ್ನು ಕುರಿತು ಮಾಹಿತಿ ಪಡೆದ ನಂತರ, ಬಂಗಾಳ ಸೇನಾಪಡೆಯ ಪ್ರಧಾನ ದಂಡನಾಯಕನಾದ ಸರ್ ಹುಗ್ ಗೌಘ್ ಎಂಬಾತನಿಗೆ ಕರ್ರೀಯು ಪ್ರಧಾನ ಬ್ರಿಟಿಷ್ ಸೇನಾಪಡೆಯನ್ನು ಮುಲ್ತಾನ್‌ನೆಡೆಗೆ ಕಳುಹಿಸಬೇಕೆಂದು ಶಿಫಾರಸು ಮಾಡಿ ಪತ್ರವೊಂದನ್ನು ಬರೆದನು. ಆದಾಗ್ಯೂ ಗವರ್ನರ್ ಜನರಲ್/ಮಹಾಮಂಡಲಾಧಿಪತಿಯಾದ ಡಾಲ್‌ಹೌಸಿಯ ಬೆಂಬಲವನ್ನು ಪಡೆದಿದ್ದ ಗೌಘ್‌ನು, ಈಸ್ಟ್ ಇಂಡಿಯಾ ಕಂಪೆನಿಯ ಪ್ರಧಾನ ಸೇನಾಘಟಕಗಳನ್ನು ಬೇಸಿಗೆಯ ಅವಧಿ ಹಾಗೂ ಮುಂಗಾರಿನ ಋತುಗಳ ಕೊನೆಗೊಳ್ಳುವವರೆಗೆ ಎಂದರೆ ನವೆಂಬರ್ ತಿಂಗಳಿನವರೆಗೆ ಪಂಜಾಬ್‌ನೆಡೆಗೆ ಕಳುಹಿಸಲು ಸಾಧ್ಯವಿಲ್ಲವೆಂದು ನಿರಾಕರಿಸಿದನು.[೭] ಬದಲಿಗೆ, ಕರ್ರೀಯು ಸ್ಥಳೀಯವಾಗಿ ನೇಮಕಗೊಂಡ ಸೈನಿಕರು ಹಾಗೂ ಖಾಲ್ಸಾದಿಂದ ಪ್ರತ್ಯೇಕಗೊಂಡ ದಳಗಳನ್ನು ಸೇರಿಸಿಕೊಂಡು ಸೈನ್ಯಾಧಿಪತಿ/ಜನರಲ್ ವ್ಹಿಶ್‌ರ ನೇತೃತ್ವದಡಿಯಲ್ಲಿ ಬಂಗಾಳ ಸೇನಾಪಡೆಯ ಸಣ್ಣ ತುಕಡಿಯೊಂದನ್ನು ನಗರವನ್ನು ವಶಪಡಿಸಿಕೊಳ್ಳಲು ಕಳುಹಿಸಿಕೊಟ್ಟನು. ಈ ಹೆಚ್ಚುವರಿ ಸೇನೆಗಳು ಮುಲ್ತಾನ್‌ನಲ್ಲಿ ಎಡ್ವರ್ಡೆಸ್‌ನನ್ನು ಆಗಸ್ಟ್‌ನ 18ರಿಂದ 28ರ ದಿನಾಂಕಗಳ ನಡುವೆ ಸೇರಿಕೊಂಡವು. ಅನೇಕ ರಾಜಕೀಯ ಪ್ರತಿನಿಧಿಗಳು ನೀಡಿದ ಎಚ್ಚರಿಕೆಯ ಮೇರೆಗೆ, ಛತ್ತಾ/ಟ್ಟಾರ್ ಸಿಂಗ್'ರ ಪುತ್ರ ಸರದಾರ ಷೇರ್ ಸಿಂಗ್ ಅಟ್ಟಾ/ತ್ತಾರಿವಾಲಾನ ನೇತೃತ್ವದಡಿಯಲ್ಲಿ ಬೃಹತ್ ದತ್ತದಳವನ್ನು ಕೂಡಾ ಖಾಲ್ಸಾ ಪಡೆಯು ಸೇರಿಸಿಕೊಂಡಿತು.
ಬಂಡಾಯ ಹೋರಾಟಗಳು ಸಿಡಿದೇಳುವ ಮುನ್ನವೇ ಅವನ್ನು ಹತ್ತಿಕ್ಕಲು ಆ ಹೊತ್ತಿಗಾಗಲೇ ಕೆಲ ಪ್ರತಿನಿಧಿಗಳು ಕ್ರಮ ತೆಗೆದುಕೊಳ್ಳುತ್ತಿದ್ದರು. ಪೇಷಾವರ ಮೂಲದ ಅನಿಯತ ಅಶ್ವಸೈನಿಕ ಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್/ಮುಖ್ಯಾಧಿಕಾರಿ ಜಾನ್ ನಿಕೋಲ್‌ಸನ್ ಸಿಂಧೂ ನದಿದಂಡೆಯಲ್ಲಿದ್ದ ಮಹತ್ವದ ಅಟ್ಟಾಕ್ ಕೋಟೆಯನ್ನು ತಾವು ಬಂಡಾಯವೇಳಬೇಕೆ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿರದಿದ್ದ ಸಿಖ್ಖರ ಕೋಟೆರಕ್ಷಕಸೈನ್ಯದಿಂದ ಅವರು ಹೋರಾಟಕ್ಕೆ ಇನ್ನೂ ತಯಾರಾಗದಿರುವಾಗಲೇ ವಶಪಡಿಸಿಕೊಂಡನು. ಅದಾದ ನಂತರ ಜೇಮ್ಸ್ ಅಬಾಟ್ಟ್'ನ ಸ್ಥಳೀಯ ಹಝಾರಾ ಪಡೆಯೊಂದಿಗೆ ನಿಕೋಲ್‌ಸನ್'ನ ಪಡೆಯು ಸೇರಿಕೊಂಡು ಪಂಜಾಬ್‌ನ ಇತರ ಭಾಗಗಳಿಂದ ಹಝಾರಾವನ್ನು ಪ್ರತ್ಯೇಕಿಸುವ ಮಾರ್ಗಲ್ಲಾ ಗುಡ್ಡಗಾಡು ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದುವರೆಯಿತು. ಛತ್ತಾ/ಟ್ಟಾರ್ ಸಿಂಗ್‌ನು ಆಗಸ್ಟ್‌ನಲ್ಲಿ ಬಹಿರಂಗವಾಗಿ ಬಂಡಾಯವನ್ನು ಘೋಷಿಸಿದಾಗ, ಆತನ ಪಡೆಗಳು ಕದನವನ್ನು ಮಾಡದೇ ಹಝಾರಾವನ್ನು ತೊರೆಯಲು ಸಾಧ್ಯವಾಗಲಿಲ್ಲ. ಛತ್ತಾ/ಟ್ಟಾರ್ ಸಿಂಗ್‌ನು ಎರಡು ಬಾರಿ ಗುಡ್ಡಗಾಡು ಪ್ರದೇಶದ ಕಣಿವೆ ಪ್ರದೇಶಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಆತ ಅದರ ಅನುಕೂಲತೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲೇ ಇಲ್ಲವಾದುದರಿಂದ (ತನ್ನ ಹಿರಿಯ ಅಧಿಕಾರಿಗಳ ನಡುವಿನ ಒಡಕುಗಳು ಹಾಗೂ ಬ್ರಿಟಿಷ್‌ರ-ಪರವಾದ ಅನಿಯತ ಸೈನಿಕರುಗಳಿಂದ ಆಗುತ್ತಿದ್ದ ಸತತ ಕಿರುಕುಳಗಳಿಂದಾಗಿ), ಹಝಾರಾಗೆ ಹಿಮ್ಮೆಟ್ಟಬೇಕಾಯಿತು.
ಷೇರ್ ಸಿಂಗ್'ನ ಸೇನಾಪಡೆಯು ಬಹಿರಂಗವಾಗಿ ಸೆಪ್ಟೆಂಬರ್ 14ರಂದು ಮುಲ್ತಾನ್‌ನಲ್ಲಿ ಬಂಡಾಯವೆದ್ದಿತು. ಆದಾಗ್ಯೂ ಆತನು ಮುಲ್‌ರಾಜ್‌ನೊಂದಿಗೆ ಸಖ್ಯ ಬೆಳೆಸಲಿಲ್ಲ. ಆತ ಹಾಗೂ ಮುಲ್‌ರಾಜ್ ಈರ್ವರೂ ಎಚ್ಚರಿಕೆಯಿಂದ ಆಯ್ಕೆ ಮಾಡಿದ ತಟಸ್ಥ ಪ್ರದೇಶದಲ್ಲಿ ಸೇರಿ ಸಮಾಲೋಚನೆ ನಡೆಸಿದರು, ಆ ಸಭೆಯಲ್ಲಿ ಷೇರ್ ಸಿಂಗ್'ನ ಸೇನಾಪಡೆಗೆ ಮುಲ್‌ರಾಜ್ ತನ್ನ ಖಜಾನೆಯಿಂದ ಸ್ವಲ್ಪ ಹಣವನ್ನು ನೀಡುವುದೆಂದು ಹಾಗೂ ತದನಂತರ ಆ ಪಡೆಯು ಉತ್ತರದಿಕ್ಕಿನಲ್ಲಿ ಮಧ್ಯ ಪಂಜಾಬ್‌ನೆಡೆಗೆ ಸಾಗಿ ಅಂತಿಮವಾಗಿ ಛತ್ತಾ/ಟ್ಟಾರ್ ಸಿಂಗ್‌ನೊಡನೆ ಮತ್ತೆ ಸೇರಿಕೊಳ್ಳುವುದೆಂದು ನಿರ್ಧಾರವಾಯಿತು. ಅಷ್ಟರಲ್ಲಿ, ವ್ಹಿಶ್‌ನಿಗೆ ಆತನು ಮತ್ತೆ ಸೇನೆಯನ್ನು ಬಲಪಡಿಸಿಕೊಳ್ಳುವುದರೊಳಗೆ ಮುತ್ತಿಗೆ ಹಾಕಲು ಆದೇಶಿಸಲಾಯಿತು.
ಯುದ್ಧದ ಪಥ
ಬದಲಾಯಿಸಿನವೆಂಬರ್ನಲ್ಲಿ ಚಳಿಗಾಲದ ಋತುವು ಆರಂಭವಾಗುತ್ತಿದ್ದ ಹಾಗೆಯೇ, ಈಸ್ಟ್ ಇಂಡಿಯಾ ಕಂಪೆನಿ'ಯ ಸೇನಾಪಡೆಯಿಂದ ಗಮನಾರ್ಹ ಪ್ರಮಾಣದ ದತ್ತದಳಗಳು ಕೊನೆಗೆ ಸಮರಕಣವನ್ನು ಪ್ರವೇಶಿಸಿದವು.
ಮುಂಬಯಿ ಸೇನಾಪಡೆಯ (ಬಂಗಾಳ ಸೇನಾಪಡೆಯಿಂದ ಪ್ರತ್ಯೇಕಿಸಿ ನಿರ್ವಹಣೆಗೊಳಪಟ್ಟ) ದತ್ತದಳ/ತುಕಡಿಯೊಂದನ್ನು ವ್ಹಿಶ್‌ನ ಪಡೆಯನ್ನು ಬಲಪಡಿಸಲು ಹಾಗೂ ಮುಲ್ತಾನ್‌ನನ್ನು ವಶಪಡಿಸಿಕೊಳ್ಳಲು ಕಳಿಸಲಾಯಿತು. ಈ ಪಡೆಯ ಹೊರಡುವಿಕೆಯು ಹಿರಿತನದ ಬಗೆಗಿನ ಕ್ಷುಲ್ಲಕ ವ್ಯಾಜ್ಯದಿಂದಾಗಿ ತಡವಾಯಿತಲ್ಲದೇ ಅದರ ಮೊದಲಿನ ಕಮ್ಯಾಂಡರು/ದಳಪತಿಯ (ಈತನು ವ್ಹಿಶ್‌ನಿಗಿಂತ ಹಿರಿಯನಾಗಿದ್ದ ಹಾಗೂ ಆ ಕಾರಣದಿಂದ ಆತನ ಅಧೀನದಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಿದ್ದ) ಬದಲಿಯಾಗಿ ಮತ್ತಷ್ಟು ಕಿರಿಯ ಅಧಿಕಾರಿಯನ್ನು ನೇಮಿಸಿದ ಮೇಲಷ್ಟೆ ಹೊರಡಲು ಸಾಧ್ಯವಾಯಿತು. ಸಿಂಧೂ ಹಾಗೂ ಛೇ/ಜೆನಾಬ್ ನದಿಗಳ ಮೇಲೆ ಸಮುದ್ರ ಹಾಗೂ ನದಿ ಸಾರಿಗೆ ವ್ಯವಸ್ಥೆಯ ಮೂಲಕ ವ್ಹಿಶ್‌ನ ಸೇನಾಪಡೆಗೆ ಸರಬರಾಜು ಹಾಗೂ ಬೆಂಬಲ ಪಡೆಯನ್ನು ಒದಗಿಸಲಾಗಿತ್ತು.
ತನ್ನ ಪ್ರಧಾನ ಪಡೆಯನ್ನು ಸರ್ ಹುಗ್ ಗೌಘ್, ಅನೇಕ ವಾರಗಳ ಕಾಲ ಛೆ/ಜೆನಾಬ್ ನದಿಯ ದಂಡೆಯ ಪ್ರದೇಶವನ್ನು ಗೌಘ್‌ನ ಪಡೆಯಿಂದ ರಕ್ಷಿಸಿಕೊಂಡು ಬರುತ್ತಿದ್ದ ಷೇರ್ ಸಿಂಗ್'ನ ಸೇನಾಪಡೆಯನ್ನು ಎದುರಿಸಲು ಮುನ್ನಡೆಸಿದ. ರಾಮನಗರದ ಕದನದಲ್ಲಿ ಸಿಖ್ಖರು ನದಿಯ ಪೂರ್ವದಿಕ್ಕಿನ ಪ್ರದೇಶದಲ್ಲಿ ನವೆಂಬರ್ 22ರಂದು ಬ್ರಿಟಿಷ್ ಅಶ್ವಸೈನಿಕ ಪಡೆಯು ನಡೆಸಿದ ಆಕ್ರಮಣವನ್ನು ತಡೆದು ಅವರನ್ನು ಹಿಮ್ಮೆಟ್ಟಿಸಿದರು. ತರುವಾಯ ಅವರು ತಮ್ಮ ಬಹಿರಂಗಗೊಂಡ ನೆಲೆಯಾದ ಸೇತುಶಿರದಿಂದ ಹಿಂತೆಗೆದುಕೊಂಡರೂ, ಸಿಖ್ಖರು ಈ ಕದನವನ್ನು ತಮ್ಮ ವಿಜಯವೆಂದೇ ಭಾವಿಸಿದುದರಿಂದ ಅವರ ನೈತಿಕಶಕ್ತಿಯು ಹೆಚ್ಚಿತು. ಡಿಸೆಂಬರ್‌ನಲ್ಲಿ ಛೆ/ಜೆನಾಬ್ ನದಿಯ ಮತ್ತೊಂದು ದಡದೆಡೆಗೆ ತನ್ನ ಪಡೆಯನ್ನು ವೈರಿಗಳನ್ನು ಹಿಮ್ಮೆಟ್ಟಿಸುತ್ತಾ ಕರೆದೊಯ್ದ ಗೌಘ್ ಕಾಲುಹೊಳೆಯನ್ನು ಕಾವಲು ಕಾಯುತ್ತಿದ್ದ ಸಿಖ್ಖರನ್ನು ಸೋಲಿಸಿ ಮುಂದುವರೆದನು, ಆದರೆ ಆತನ ಅಶ್ವಸೈನಿಕ ಪಡೆಯು ಅಲ್ಲಿಯೇ ಹೆಚ್ಚುವರಿ ಪದಾತಿದಳಕ್ಕಾಗಿ ಕಾಯುತ್ತಾ ಉಳಿದುಕೊಂಡಿದ್ದರಿಂದ ಸಿಖ್ಖರು ಯಾವುದೇ ಅಡ್ಡಿಯಿಲ್ಲದೇ ಹಿಂದೆಗೆಯಲು ಅವಕಾಶವಾಯಿತು.
1849ರ ಆದಿಯ ಸಮಯದಲ್ಲಿ, ಆಫ್ಘಾನಿಸ್ತಾನದ ಆಮೀರ್ ದೋಸ್ತ್ ಮೊಹಮ್ಮದ್ ಖಾನ್‌ರು ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ರಣಜಿತ್/ರಂಜಿತ್ ಸಿಂಗ್‌ನು ವಶಪಡಿಸಿಕೊಂಡಿದ್ದ ಪೇಷಾವರ ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಡುವುದಾಗಿ ವಾಗ್ದಾನ ಮಾಡಿದ ಬಂಡಾಯವೆದ್ದ ಸಿಖ್ಖರ ಕಡೆಗೆ ಪಕ್ಷಾಂತರ ಮಾಡಿದರು. ಸಿಖ್ಖರುಗಳಿಗೆ ದೋಸ್ತ್ ಮೊಹಮ್ಮದ್ ಖಾನ್'ನು ನೀಡಿದ ಬೆಂಬಲವು ಎಚ್ಚರಿಕೆಯಿಂದಲೇ ಕೂಡಿತ್ತು, ಆದರೆ 3,500 ಮಂದಿಯ ಆಫ್ಘನ್ ಅಶ್ವಾರೋಹಿ ಪಡೆಯು ಸಿಂಧೂ ನದಿಯ ಮೇಲಿನ ಮಹತ್ವದ ಕೋಟೆ ಅಟ್ಟಾಕ್‌ಅನ್ನು ಸಮೀಪಿಸಿದಾಗ ನಿಕೋಲ್‌ಸನ್ ಹಿಂದೆಯೇ ಅಲ್ಲಿ ಇರಿಸಿದ್ದ ಮುಸಲ್ಮಾನ ಪಡೆಗಳಿಂದ ಕೂಡಿದ ಅದರ ಕೋಟೆರಕ್ಷಕಸೈನ್ಯವು ಕೋಟೆಯನ್ನು ತೊರೆಯಬೇಕಾಯಿತು. ಇದು ಛತ್ತಾ/ಟ್ಟಾರ್ ಸಿಂಗ್‌ನಿಗೆ ಪಶ್ಚಿಮದೆಡೆಗೆ ತದನಂತರ ದಕ್ಷಿಣದೆಡೆಗೆ ಷೇರ್ ಸಿಂಗ್'ನ ಸೇನಾಪಡೆಯನ್ನು ಸೇರಿಕೊಳ್ಳಲು ಉದ್ದೇಶಿಸಿ ಹಝಾರಾದಿಂದ ಹೊರಕ್ಕೆ ಹೊರಟು ಹೋಗಲು ಅನುವು ಮಾಡಿತು. ಡಾಲ್‌ಹೌಸಿ ಈ ಹಿಂದೆ ಅದುವರೆಗೆ ವ್ಹಿಶ್‌ನನ್ನು ತನ್ನ ಸೇನಾಪಡೆಯನ್ನು ಬಲಪಡಿಸಿಕೊಳ್ಳಲು ಅನುವಾಗುವಂತೆ ಮುಲ್ತಾನ್ ಸಂಸ್ಥಾನವು ಸ್ವತಃ ಕುಸಿಯುವವರೆಗೆ ಕಾರ್ಯಾಚರಣೆಯನ್ನು ಮುಂದುವರೆಸದೇ ತಡೆಯುವಂತೆ ಗೌಘ್‌ಗೆ ನಿರ್ದೇಶನ ನೀಡಿದ್ದನು. ಅಟ್ಟಾಕ್ ಕೋಟೆಯ ಪತನವಾಯಿತೆಂದು ತಿಳಿದ ನಂತರ, ಆತನು ಅದರ ಬದಲಿಗೆ ಛತ್ತಾ/ಟ್ಟಾರ್ ಸಿಂಗ್ ಆತನನ್ನು ಸೇರುವುದಕ್ಕಿಂತ ಮೊದಲೇ ಷೇರ್ ಸಿಂಗ್'ನ ಸೇನಾಪಡೆಯನ್ನು ಧ್ವಂಸ ಮಾಡಲು ಗೌಘ್‌ನಿಗೆ ಆದೇಶವಿತ್ತನು.
ಗೌಘ್‌ನು ಝೀಲಮ್ ನದಿಯ ಸಮೀಪದ ಷೇರ್ ಸಿಂಗ್'ನ ಸೇನಾ ನೆಲೆಯ ಮೇಲೆ 13 ಜನವರಿ 1849ರಂದು ಅನಿರೀಕ್ಷಿತ ಆಕ್ರಮಣ ಮಾಡಿದನು. ಷೇರ್ ಸಿಂಗ್‌ನು ಚಾತುರ್ಯದಿಂದ ತನ್ನ ಸೇನಾಪಡೆಯನ್ನು ಮರೆಮಾಡಿಟ್ಟಿದ್ದುದರಿಂದ, ಗೌಘ್‌ನಿಗೆ ಒಂದೋ ಹಿಂದೆಗೆಯಬೇಕು ಇಲ್ಲವೇ ದಿನದ ಕೊನೆಯಲ್ಲಿ ದಾಳಿಯಿಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಹಿಂದುಮುಂದೆ ನೋಡದೆಯೇ ಎರಡನೆಯ ದಾರಿಯನ್ನು ಗೌಘ್ ಆಯ್ಕೆ ಮಾಡಿದನು. ಆಗ ಆರಂಭವಾದ ಛಿ/ಚಿಲ್ಲಿಯನ್‌ವಾಲಾ ಕದನವನ್ನು ವಿಷಮ ಪರಿಸ್ಥಿತಿಯಲ್ಲಿ ಕಾದಾಡಲಾಯಿತು. ಗೌಘ್'ನ ಸೇನಾ ಪಡೆಗಳು, ಪರಿಣಾಮಕಾರಿಯಾದ ಫಿರಂಗಿ ದಳದ ಬೆಂಬಲವಿಲ್ಲದೇ ದಟ್ಟ ಸೇನಾಪಡೆಯ ಮೇಲೆ ಮಾಡಿದ ದಾಳಿಯಿಂದಾಗಿ ಭಾರೀ ಸಾವುನೋವು ಕಾಣಬೇಕಾಯಿತು. ಕೆಲ ಸೇನಾಘಟಕಗಳು ತಮ್ಮ ಸ್ವರೂಪವನ್ನೇ ಕಳೆದುಕೊಂಡವು (ಇದನ್ನು ಅಪಖ್ಯಾತಿಯೆಂದು ಪರಿಗಣಿಸಲಾಗಿತ್ತು) ಹಾಗೂ ದಿಗ್ಭ್ರಾಂತಿಯಿಂದ ಬ್ರಿಟಿಷ್ ಅಶ್ವಸೈನಿಕ ಪಡೆ ತುಕಡಿಯೊಂದರ ಭಾಗವು ಪಲಾಯನವನ್ನು ಮಾಡಿತು, ತೇಜೋವಧೆಯೆಂದು ಪರಿಗಣಿತವಾಗುವಂತೆ ನಾಲ್ಕು ತೋಫುಖಾನೆಗಳನ್ನು ಕೂಡಾ ಕಳೆದುಕೊಂಡಿತು. ಷೇರ್ ಸಿಂಗ್'ನ ಸೇನಾಪಡೆಯು ಕೂಡಾ ತೀವ್ರ ಆಘಾತವನ್ನು ಎದುರಿಸಬೇಕಾಯಿತು ಅದು ತನ್ನದೇ ಆದ ಹನ್ನೆರಡು ಫಿರಂಗಿಗಳನ್ನು ಕಳೆದುಕೊಂಡಿತು.
ಇದಾದ ನಂತರ ಸತತವಾಗಿ ಮೂರು ದಿನಗಳ ಕಾಲ ಧಾರಾಕಾರ ಮಳೆಯು ಎಡೆಬಿಡದೇ ಸುರಿದು ಎರಡೂ ಕಡೆಯವರಿಗೆ ಕದನವನ್ನು ಮುಂದುವರೆಸುವ ಬಗ್ಗೆ ನಿರುತ್ಸಾಹಗೊಳಿಸಿತು. ಎರಡೂ ಸೇನಾಪಡೆಗಳು ಮೂರು ದಿನಗಳ ಕಾಲ ಎದುರಾಗಿಯೇ ಇದ್ದರೂ ಪರಸ್ಪರ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ, ಎರಡೂ ಪಡೆಗಳು ಹಿಂದೆ ಸರಿದವು. ಛತ್ತಾ/ಟ್ಟಾರ್ ಸಿಂಗ್‌ನನ್ನು ಸೇರಿಕೊಳ್ಳಲು ಉತ್ತರದೆಡೆಗೆ ಷೇರ್ ಸಿಂಗ್ ಮುಂದುವರೆದಿದ್ದು, ಈ ಯುದ್ಧವನ್ನು ಯುದ್ಧತಾಂತ್ರಿಕವಾದ ಬ್ರಿಟಿಷರ ಸೋಲನ್ನಾಗಿ ಮಾರ್ಪಡಿಸಿತು.
ಗೌಘ್‌ನ ತಂಡವು ಅನುಭವಿಸಿದ ಸಾವುನೋವುಗಳ ಬಗ್ಗೆ ಮುಂಚೆಯೇ ಸಾಕಷ್ಟು ಅಪಾಯಸೂಚನೆಗಳನ್ನು ನೀಡಲಾಗಿತ್ತು. ಆತನ ಯುದ್ಧತಂತ್ರಗಳನ್ನು ತೀವ್ರವಾಗಿ ಟೀಕೆ ಮಾಡಲಾಯಿತು ಹಾಗೂ ಆತನ ಬದಲಿಗೆ ಜನರಲ್/ಸೇನಾಧಿಕಾರಿ ಚಾರ್ಲ್ಸ್ ಜೇಮ್ಸ್ ನೇಪಿಯರ್‌ನನ್ನು ನೇಮಿಸಲಾಯಿತಾದರೂ ಅನೇಕ ವಾರಗಳು ಕಳೆದರೂ ಆತನಿಗೆ ಬ್ರಿಟನ್‌ನಿಂದ ಬರಲಾಗಿರಲಿಲ್ಲ. ಕೆಳ ಹಂತದ ಕೆಲ ಅಧಿಕಾರಿಗಳು ಈ ಹಿಮ್ಮೆಟ್ಟುವಿಕೆಯ ಹಿಂದಿನ ನಿಜವಾದ ಕಾರಣ ಎಂಬ ಅಭಿಪ್ರಾಯಕ್ಕೆ ಕೆಲ ಕಿರಿಯ ಅಧಿಕಾರಿಗಳು ಬಂದರು. ಬ್ರಿಟಿಷ್ ಮತ್ತು ಬಂಗಾಳ ಸೇನಾಪಡೆಗಳಲ್ಲಿ ನೌಕರಿಯಲ್ಲಿನ ಬಡತಿಗಳು ನಿಧಾನವಾಗಿ ಆಗುತ್ತಿದ್ದವು, ಹಾಗೂ ತುಕಡಿಗಳ ಹಾಗೂ ಪದಾತಿದಳಗಳ ಮೇಲೆ ಅಧಿಪತ್ಯ ನಡೆಸುವ ಸ್ಥಾನದಲ್ಲಿ ಅಧಿಕಾರಿಗಳನ್ನು ನೇಮಿಸುವ ವೇಳೆಗೆ ಅವರು ತೀರ ವೃದ್ಧರಾಗಿದ್ದು ಅಸಹನೀಯ ವಾತಾವರಣ ಹಾಗೂ ರೋಗರುಜಿನಗಳು ಅವರನ್ನು ಹಣ್ಣು ಮಾಡಿರುತ್ತಿದ್ದವು. ಆಗ ಛಿ/ಚಿಲ್ಲಿಯನ್‌ವಾಲಾ ಕದನದ ಸಮಯದಲ್ಲಿ, ಅನೇಕ ಹಿರಿಯ ಅಧಿಕಾರಿಗಳು ತಮ್ಮ ಘಟಕಗಳ ನೇತೃತ್ವವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರಲಿಲ್ಲ ಎಂಬುದು ಸಾಬೀತಾಗಿತ್ತು.[೮]
ಅಂತಿಮ ಕದನಗಳು
ಬದಲಾಯಿಸಿಆ ಹೊತ್ತಿಗೆ, ವ್ಹಿಶ್'ನ ಸೇನಾಪಡೆಯು ಮುಲ್ತಾನ್ ಸುತ್ತುಮುತ್ತಲಿನ ವಶಪಡಿಸಿಕೊಳ್ಳುವಿಕೆ ಕಾರ್ಯಾಚರಣೆಗಳೆಲ್ಲವನ್ನೂ ಮುಗಿಸಿಕೊಂಡಿತ್ತು, ಅವರ ತೋಫುಖಾನೆಗಳು ಬೆಂಕಿಯುಗುಳಲು ತೊಡಗಿದ್ದರಿಂದ ರಕ್ಷಣಾ ಪಡೆಗಳ ರಕ್ಷಣೆಯಲ್ಲಿ ಬಿರುಕನ್ನು ಉಂಟುಮಾಡಿದವು, ಹಾಗೆ ಉಂಟಾದ ಬಿರುಕಿನ ಮೇಲೆ ಪದಾತಿದಳಗಳು ದಾಳಿಯಿಟ್ಟವು. ಮುಲ್‌ರಾಜ್ ಜನವರಿಯ 22ರಂದು ಶರಣಾದನು. ಆತನನ್ನು ಉಳಿದ ಜೀವಿತಾವಧಿಯ ಕಾಲ ಸೆರೆಗೆ ತಳ್ಳಲಾಯಿತು. ಈ ಮುತ್ತಿಗೆ ಕಾರ್ಯಾಚರಣೆಯ ಮುಕ್ತಾಯಗೊಳ್ಳುವಿಕೆಯು ಬೆಂಬಲವಾಗಿ ನಿಂತು ಗೌಘ್‌ನ ಪಡೆಯನ್ನು ಬಲಪಡಿಸುವ ಅವಕಾಶವನ್ನು ವ್ಹಿಶ್‌ನಿಗೆ ನೀಡಿತು. ನಿರ್ದಿಷ್ಟವಾಗಿ, ವ್ಹಿಶ್'ನ ವಿಭಾಗವು ದೊಡ್ಡ ಸಂಖ್ಯೆಯ ಭಾರೀ ಫಿರಂಗಿಗಳನ್ನು ಹೊಂದಿದ್ದರು, ಆದರೆ ಅದನ್ನು ಸಿಖ್ಖರು ಹೊಂದಿರಲಿಲ್ಲ.
ಗೌಘ್'ನ ಸೇನಾಪಡೆಯು ಖಾಲ್ಸಾ ಪಡೆಯನ್ನು ಸುತ್ತುವರೆಯುತ್ತಿದ್ದ ಹಾಗೆಯೇ, ಅಶ್ವಸೈನಿಕ ಪಡೆಯೊಂದಕ್ಕೆ ಛೆ/ಜೆನಾಬ್ ನದಿಯನ್ನು ದಾಟಿ, ಗೌಘ್'ನ ಪಡೆಯನ್ನು ಹಿಂದಿನಿಂದ ಸುತ್ತುವರೆಯಲು ಆದೇಶ ನೀಡಿ ಒಂದು ಕೊನೆಯ ಅನಿರೀಕ್ಷಿತ ದಿಕ್ಕುಗೆಡಿಸುವ ನಡೆಯೊಂದನ್ನು ಷೇರ್ ಸಿಂಗ್ ಕೈಗೊಂಡನು. ಅವರು ಒಂದೆಡೆ ಸುರಿದ ಧಾರಾಕಾರ ಮಳೆಯಿಂದ ನದಿಯನ್ನು ದಾಟಲಾಗದೇ ತೊಂದರೆಗೊಳಗಾದರೆ, ಮತ್ತೊಂದೆಡೆ ಹ್ಯಾರ್ರಿ ಬರ್ನೆಟ್ ಲಮ್ಸ್‌ಡೆನ್ ಮತ್ತು ವಿಲಿಯಂ ಹಾಡ್ಸನ್‌ರವರುಗಳ ನೇತೃತ್ವದ ಬ್ರಿಟಿಷ್ ಅನಿಯತ ಅಶ್ವಸೈನಿಕ ಪಡೆಯವರು ಅಡ್ಡಬಂದರು. ಖಾಲ್ಸಾ ಪಡೆಯ ಮೇಲೆ ಗುಜ್ರಾತ್/ಗುಜರಾತ್ ಕದನದಲ್ಲಿ ಗೌಘ್ ಫೆಬ್ರವರಿ 13ರಂದು ಆಕ್ರಮಣ ಮಾಡಿದನು. ಇಲ್ಲಿ ಆತನು ಬಹುತೇಕ 100 ಫಿರಂಗಿಗಳಿಂದ ಮೂರು ಗಂಟೆಗಳ ಕಾಲ ಸತತ ಗುಂಡು ಹಾರಿಸುವಿಕೆಯ ಮೂಲಕ ಕದನವನ್ನು ಆರಂಭಿಸಿದುದು, ಸಿಖ್ಖರು ತಮ್ಮ ಅಲ್ಪ ಸಾಮರ್ಥ್ಯದ ಆಶ್ರಯತಾಣಗಳಿಂದ ತ್ವರಿತವಾಗಿ ತಪ್ಪಿಸಿಕೊಳ್ಳುವಂತೆ ಮಾಡಿತು. ನಂತರ ಆತನು ತನ್ನ ಅಶ್ವಸೈನಿಕ ಪಡೆಯನ್ನು ಹಾಗೂ ಕುದುರೆ ಮೇಲಿನ ಫಿರಂಗಿಬಂಡಿಯೊಂದಿಗೆ ತಪ್ಪಿಸಿಕೊಂಡವರನ್ನು ಬೇಟೆಯಾಡಲು ಕಳಿಸಿದನು, ಈ ಕಾರ್ಯಾಚರಣೆಯು ನಾಲ್ಕು ಗಂಟೆಗಳ ಕಾಲ ನಡೆಯಿತು.
ಛತ್ತಾ/ಟ್ಟಾರ್ ಸಿಂಗ್ ಮತ್ತು ಷೇರ್ ಸಿಂಗ್‌ರವರುಗಳು ರಾವಲ್ಪಿಂಡಿಯ ಸಮೀಪ ಮಾರ್ಚ್ 12ರಂದು ಶರಣಾದರು. ಸುಮಾರು 20,000 ಮಂದಿ ಸೈನಿಕರು (ಪ್ರಮುಖವಾಗಿ ಅನಿಯತ ಅಶ್ವಸೈನಿಕ ಪಡೆ) ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದರು. ಆಫ್ಘನ್ ದತ್ತದಳ/ತುಕಡಿಯು ಅವಸರ ಅವಸರವಾಗಿ ಅಟ್ಟಾಕ್‌ನಿಂದ ಪೇಷಾವರದವರೆಗಿನ ಸ್ಥಳಗಳಿಂದ ಹಿಂದೆಗೆದಾಗ, ಅವುಗಳನ್ನು ಬ್ರಿಟಿಷರು ಮತ್ತೆ ಆಕ್ರಮಿಸಿಕೊಂಡರು. ದೋಸ್ತ್ ಮೊಹಮ್ಮದ್ ಖಾನ್ ನಂತರ ಈ ನಗರಗಳನ್ನು ಬ್ರಿಟಿಷರ ಸ್ವಾಮ್ಯಕ್ಕೊಳಪಟ್ಟವೆಂಬುದನ್ನು ಒಪ್ಪಿಕೊಳ್ಳುವ ಒಪ್ಪಂದವೊಂದಕ್ಕೆ ಸಹಿ ಹಾಕಿದನು.
ದುಲೀಪ್ ಸಿಂಗ್ ಲಾಹೋರ್‌ನಲ್ಲಿ ತನ್ನ ಕಟ್ಟಕಡೆಯ ದರ್ಬಾರನ್ನು ನಡೆಸಿ, ಅದರಲ್ಲಿ ಪಂಜಾಬ್‌ನ ಆಡಳಿತದ ಮೇಲಿನ ತನ್ನೆಲ್ಲಾ ಹಕ್ಕುಗಳನ್ನು ತ್ಯಜಿಸಿದ ಒಪ್ಪಂದಗಳಿಗೆ ಮಾರ್ಚ್ 30ರಂದು ಸಹಿ ಹಾಕಿದ್ದನು. ಪಂಜಾಬನ್ನು ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ಡಾಲ್‌ಹೌಸಿ ಯು ಹೊರಡಿಸಿದ ಅಧಿಕೃತ ಘೋಷಣೆಯನ್ನು ಆಗ ಗಟ್ಟಿಯಾಗಿ ಓದಿ ಹೇಳಲಾಯಿತು. ಕೇವಲ ಅರ್ಲ್ ಆಗಿದ್ದ ಡಾಲ್‌ಹೌಸಿಯು ತಾನು ಸಲ್ಲಿಸಿದ್ದ ಸೇವೆಗಳಿಂದಾಗಿ ಬ್ರಿಟಿಷ್ ಸಂಸತ್ತಿನಿಂದ ಕೃತಜ್ಞತೆಯ ಒಕ್ಕಣಿಕೆಯನ್ನು ಹಾಗೂ ಶ್ರೀಮಂತ ವರ್ಗಗಳ ದರ್ಜೆಯಲ್ಲಿ ಮುಂದಿನ ದರ್ಜೆಗೆ ಬಡ್ತಿ ಪಡೆದು ಮಾರ್ಕ್ವಿಸ್ ಎನಿಸಿಕೊಂಡನು. ಗೌಘ್ ಕೂಡಾ ತನ್ನ ಸೇವೆಗಳಿಗಾಗಿ ಪ್ರತಿಫಲವನ್ನು ಪಡೆದರೂ, ಛಿ/ಚಿಲ್ಲಿಯನ್‌ವಾಲಾ ಕದನದಲ್ಲಿನ ಆತನ ಯುದ್ಧತಂತ್ರಗಳ ಬಗ್ಗೆ ಆತನ ಜೀವನದ ಉಳಿದ ಭಾಗದುದ್ದಕ್ಗೂ ಟೀಕೆಗಳನ್ನೆದುರಿಸಬೇಕಾಯಿತು. ಖಾಲ್ಸಾ ಪಡೆಯ ವಿರುದ್ಧ ಸ್ಥಳೀಯರಿಂದ ವಿರೋಧ ಬರುವಂತೆ ಎತ್ತಿಕಟ್ಟಿದ್ದುದ್ದಕ್ಕಾಗಿ ಕಿರಿಯ ಬ್ರಿಟಿಷ್ ರಾಜಕೀಯ ಪ್ರತಿನಿಧಿಗಳಲ್ಲಿ ಅನೇಕರಿಗೆ ನಂತರದ ತಮ್ಮ ವೃತ್ತಿಜೀವನದಲ್ಲಿ ಪ್ರಾಮುಖ್ಯತೆಗಳನ್ನು ನೀಡಲಾಯಿತು.
ಪರಿಣಾಮಗಳು
ಬದಲಾಯಿಸಿಸಿಖ್ಖರು ಹೊಂದಿದ ಸೋಲು ಅನೇಕ ಕಾರಣಗಳಿಂದಾಗಿ ಉಂಟಾಗಿದ್ದುದಾಗಿತ್ತು. ಪಂಜಾಬ್‌ನ ಜನತೆಗೆ ಅವರು ನೀಡಿದ ಆಡಳಿತವು ತೀರ ಕಳಪೆ ಮಟ್ಟದ್ದಾಗಿತ್ತು, ಅವರ ಬೃಹತ್ ಸಂಖ್ಯೆಯ ಸೇನಾಪಡೆಗಳಿಗೆ ಅಗತ್ಯವಾದಷ್ಟು ಆಹಾರವನ್ನು ಪಡೆಯಲು ಶಕ್ತರಾಗಿರಲಿಲ್ಲ. ಅದರಲ್ಲೂ ಪ್ರಮುಖವಾಗಿ ಸರಹದ್ದಿನ ಜಿಲ್ಲೆಗಳ ಮುಸಲ್ಮಾನ ನಿವಾಸಿಗಳು ಹಿಂದಿನ ವರ್ಷಗಳಲ್ಲಿ ತಮ್ಮನ್ನೇ ವಶಪಡಿಸಿಕೊಂಡಿದ್ದ ಖಾಲ್ಸಾ ಪಡೆಯ ವಿರುದ್ಧವಾಗಿದ್ದ ಜನರು ಬ್ರಿಟಿಷ್ ಅಧಿಕಾರಿಗಳ ಅಧೀನದಲ್ಲಿ ಸಿಖ್ಖರ ವಿರುದ್ಧದ ಹೋರಾಟವನ್ನು ಮನಃಪೂರ್ವಕವಾಗಿ ಕೈಗೊಂಡು ಸತತವಾಗಿ ಅವರ ಚಟುವಟಿಕೆಗಳಿಗೆ ಭಂಗವನ್ನುಂಟು ಮಾಡುತ್ತಾ ಬಂದರು. ಅಂತಿಮವಾಗಿ, ಈಸ್ಟ್ ಇಂಡಿಯಾ ಕಂಪೆನಿಯು ಅವರ ವಿರುದ್ಧ ಅಗಾಧ ಪ್ರಮಾಣದ ಸೇನೆಯನ್ನು ತಂದು ಸೋಲುಣಿಸಿತ್ತು.
ಸಿಖ್ಖರ ಮೇಲೆ ನಡೆದ ಕದನಗಳು ಎರಡೂ ಕಡೆಯವರಿಗೆ ಪರಸ್ಪರರ ಶೌರ್ಯ ಪರಾಕ್ರಮಗಳ ಬಗ್ಗೆ ಗೌರವವನ್ನು ಹುಟ್ಟುವಂತೆ ಮಾಡಿತು (ಯುದ್ಧವನ್ನು ಮಾಡಬೇಕಾದರೆ ಯಾವುದೇ ಕರುಣೆಯನ್ನು ತೋರಿಸದೇ ಹೋದರೂ; ಸಿಖ್ಖರು ಛಿ/ಚಿಲ್ಲಿಯನ್‌ವಾಲಾ ಕದನದಲ್ಲಿ ಯಾರನ್ನೂ ಯುದ್ಧಕೈದಿಗಳನ್ನಾಗಿ ಸೆರೆಹಿಡಿದಿರಲಿಲ್ಲ, ಹಾಗೆಯೇ ಬ್ರಿಟಿಷರು ಕೂಡಾ ಗುಜರಾತ್‌ನಲ್ಲಿ ಯಾರನ್ನೂ ಯುದ್ಧಕೈದಿಯನ್ನಾಗಿ ಸೆರೆಹಿಡಿದಿರಲಿಲ್ಲ).
ಬ್ರಿಟಿಷರ ಸೇನಾಧಿಪತ್ಯದಡಿಯಲ್ಲಿ ಪಂಜಾಬ್‌ನ ವಿವಿಧ ಸಮುದಾಯಗಳ ಜನರನ್ನು ಪಂಜಾಬ್ ಅನಿಯತ ಸೇನಾಪಡೆಗೆ ಸೇರಿಸಿಕೊಳ್ಳುವ ನೇಮಕಾತಿಯ ಪ್ರಮಾಣವು ಹೆಚ್ಚಿತ್ತು. ಹೀಗೆ ನೇಮಕಗೊಂಡವರು 1857ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ/ಸಿಪಾಯಿ ದಂಗೆಯ ಅವಧಿಯಲ್ಲಿ, ಹಾಗೂ ಬಂಡಾಯಗಾರರ ಮತ್ತು ಇತರ ವಿರೋಧಿಗಳ ಮೇಲೆ (ಅವರುಗಳಲ್ಲಿ ಬಹುತೇಕರು ಪೂರ್ವದ ಪ್ರಾಂತ್ಯಗಳ ಉನ್ನತ ಜಾತಿಯ ಹಿಂದೂಗಳು, ಮತ್ತು ಷಿಯಾ, ಮರಾಠರು ಮತ್ತು ಮೊಘಲ್ ಅರಸರುಗಳ ಸೇನಾಪಡೆ ಅಥವಾ ಅವರ ನಿಷ್ಠಾವಂತರಾಗಿರುತ್ತಿದ್ದರು) ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಪರವಾಗಿ ಹೋರಾಡಿದ್ದರು. ಈ ಪಂಜಾಬಿನಲ್ಲಿ ನೇಮಕಗೊಂಡ ಸೈನಿಕರು ಬಂಗಾಳ ಸೇನಾಪಡೆಯ ಹಿಂದೂ ಬಂಡಾಯಗಾರರ ಮೇಲೆ ಅನುಕಂಪವನ್ನೇನು ಹೊಂದಿರಲಿಲ್ಲ, ಆಂಗ್ಲೋ-ಸಿಖ್ಖರ ಸಮರಗಳಲ್ಲಿ ಬ್ರಿಟಿಷರಿಗೆ ಅವರುಗಳು ನೀಡಿದ್ದ ಸಹಕಾರವು ಈಗ ಅವರಿಗೆ ತದ್ವಿರುದ್ಧವಾಗಿತ್ತು. ಅವರು ತಮ್ಮ ಸಾಂಕೇತಿಕ ನಾಯಕನನ್ನಾಗಿ ಬಹಾದ್ದೂರ್ ಷಾಹ್ ಜಾಫರ್‌ನನ್ನು ಆಯ್ಕೆ ಮಾಡಿದ್ದುದರಿಂದ ಮೊಘಲರ ಆಳ್ವಿಕೆ ವಿರುದ್ಧದ ಸಿಖ್ಖರ ವೈರತ್ವದ ದೀರ್ಘ ಇತಿಹಾಸವು ಕೂಡಾ ಬಂಡಾಯಗಾರರ ಉತ್ತಮ ಉದ್ದೇಶದ ಬಗ್ಗೆ ಮನವರಿಕೆ ಮಾಡಿಸಲು ಅಸಾಧ್ಯವಾಗಿತ್ತು.
ಯುದ್ಧದ ಬಿರುದುಗಳು/ಸವಲತ್ತುಗಳು/ಮನ್ನಣೆಗಳು
ಬದಲಾಯಿಸಿ1849ರ ಗವರ್ನರ್ ಜನರಲ್/ಮಹಾಮಂಡಲಾಧಿಪತಿಗಳ ಹೊರಡಿಸಿದ ಗೆಜೆಟ್ಟು ಸಂಖ್ಯೆ 277ರ ನಮೂದನೆಯ ಅನುಸಾರ 1848-49ರ ಅವಧಿಯ ಆಂಗ್ಲೋ-ಸಿಖ್ಖರ ಸಮರಗಳ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಎಲ್ಲಾ ತುಕಡಿಗಳಿಗೆ ಮುಕ್ತ ಹಸ್ತದಿಂದ ಪಂಜಾಬ್/Punjaub ಎಂಬ ಯುದ್ಧ ಬಿರುದನ್ನು ವಿತರಿಸಲಾಯಿತು ಹಾಗೂ ಈ ಗೌರವಕ್ಕೆ ಅರ್ಹರಾದ ತುಕಡಿಗಳ ಪಟ್ಟಿಯನ್ನು 1853ರ GoGG 803ರಲ್ಲಿ ನಮೂದನೆಯ ಅನುಸಾರ ಪ್ರಕಟಿಸಲಾಗಿತ್ತು. ಮುಂಬಯಿ ಸೇನಾಪಡೆಗೆ ಪ್ರತ್ಯೇಕವಾಗಿಯೇ ಮನ್ನಣೆಯನ್ನು ನೀಡಲಾಯಿತು ಹಾಗೂ ಪ್ರಾಂತ್ಯದ ಹೆಸರಿನ ಕಾಗುಣಿತವನ್ನು 1910ರ ಭಾರತದ ಗೆಜೆಟ್ಟು ಸಂಖ್ಯೆ No 1079ರ ನಮೂದನೆಯ ಅನುಸಾರವಾಗಿ 'ಪಂಜಾಬ್ 'ನಿಂದ ಮೇಲೆ ಸೂಚಿತವಾದುದಕ್ಕೆ ಬದಲಾಯಿಸಲಾಯಿತು. ಹೀಗೆ ಮನ್ನಣೆಗೆ ಒಳಪಟ್ಟಿದ್ದ ಬಂಗಾಳ ಸೇನಾಪಡೆಯ ನಲವತ್ತು ಘಟಕಗಳು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ/ಸಿಪಾಯಿ ದಂಗೆಯಲ್ಲಿ ನಾಶವಾಗಿ ಹೋದವು. ಭಾರತವು ಈಗ ಫಿರೋಜ್‌ಪುರದಲ್ಲಿ ಆಂಗ್ಲೋ-ಸಿಖ್ಖರ ಸಮರಗಳಲ್ಲಿ ತಮ್ಮ ಜೀವವನ್ನು ಬಲಿಗೊಟ್ಟ ಖಾಲ್ಸಾ ಸೇನಾಪಡೆಯ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲು ಸ್ಮಾರಕವೊಂದನ್ನು ನಿಲ್ಲಿಸಿದೆ ಹಾಗೂ ಈ ಬಗ್ಗೆ ನೀಡಿದ ಯುದ್ಧಬಿರುದುಗಳನ್ನು ಅಸಂಗತವೆಂದು ಪರಿಗಣಿಸಲಾಗಿದೆ.[೯]
ಈ ಯುದ್ಧದ ಮನ್ನಣೆ/ಬಿರುದುಗಳನ್ನು ಪಡೆದ ಸೇನಾ ಘಟಕಗಳು ಯಾವುವೆಂದರೆ :
- 2nd ಬಂಗಾಳ ಅನಿಯತ ಅಶ್ವಸೈನಿಕ ಪಡೆ - ಪ್ರಸ್ತುತ 2nd ಭಲ್ಲೆ ಅಶ್ವಾರೋಹಿಗಳ ಪಡೆ
- 1st, 2nd ಸಿಂಧೆ ಅನಿಯತ ರಾವುತ ಪಡೆ - ಪ್ರಸ್ತುತ ಸಿಂಧೆ ರಾವುತ ಪಡೆ
- 7th ಬಂಗಾಳ ಅನಿಯತ ಅಶ್ವಸೈನಿಕ ಪಡೆ - ಪ್ರಸ್ತುತ 3rd ಅಶ್ವಸೈನಿಕ ಪಡೆ
- 17th ಬಂಗಾಳ ಅನಿಯತ ಅಶ್ವಸೈನಿಕ ಪಡೆ - ಪ್ರಸ್ತುತ 18 ಅಶ್ವಸೈನಿಕ ಪಡೆ
- 1st ಕಂಪೆನಿ ಮುಂಬಯಿ ಕಾಲಿನಿಂದ ನಡೆಸುವ ತೋಫುಖಾನೆ - 5 Mtn Bty
- 1st, 2nd, 3rd ಕಂಪೆನಿಯ ಬಂಗಾಳ ಸ್ಯಾಪ್ಪರ್‌ಗಳು ಹಾಗೂ 1stರಿಂದ 7thರವರೆಗಿನ ಕಂಪೆನಿಯ ಬಂಗಾಳ ಪಯೋನೀರ್ಸ್ - ಪ್ರಸ್ತುತ ಬಂಗಾಳ ಎಂಜಿನೀಯರ್ ಗ್ರೂಪ್
- ಮುಂಬಯಿ ಸ್ಯಾಪ್ಪರ್ಸ್ & ಮೈನರ್ಸ್ - ಪ್ರಸ್ತುತ ಮುಂಬಯಿ ಎಂಜಿನೀಯರ್ ಗ್ರೂಪ್
- 9th ಮುಂಬಯಿ ಪದಾತಿ ದಳ - 4th ದಂಡು ತುಕಡಿ, ಗ್ರೆನೇಡಿಯರ್‌ಗಳು
- 3rd ಮುಂಬಯಿ ಪದಾತಿ ದಳ - 1st ದಂಡು ತುಕಡಿ, ಮರಾಠಾ ಲಘು ಪದಾತಿ ದಳ
- 4th ಮುಂಬಯಿ ಪದಾತಿ ದಳ - 1st ದಂಡು ತುಕಡಿ, ರಜಪುಟಾಣ ರೈಫಲ್ಸ್, ಪ್ರಸ್ತುತ 3rd ದಂಡು ತುಕಡಿ, ಬ್ರಿಗೇಡ್ ಆಫ್ ಗಾರ್ಡ್ಸ್
- 31st ಬಂಗಾಳ ಪದಾತಿ ದಳ - 1st ದಂಡು ತುಕಡಿ, ರಜಪೂತ್ ತುಕಡಿ, ಪ್ರಸ್ತುತ 4th ದಂಡು ತುಕಡಿ, ಬ್ರಿಗೇಡ್ ಆಫ್ ಗಾರ್ಡ್ಸ್
- 70th ಬಂಗಾಳ ಪದಾತಿ ದಳ - 5th ದಂಡು ತುಕಡಿ, ರಜಪೂತ್ ತುಕಡಿ
- 19th ಮುಂಬಯಿ ಪದಾತಿ ದಳ - 2nd ದಂಡು ತುಕಡಿ, ಜಾಟ್ ತುಕಡಿ
- ಕಾರ್ಪ್ಸ್ ಆಫ್ ಗೈಡ್ಸ್ - 10 ಗೈಡ್ಸ್ ಅಶ್ವಸೈನಿಕ ಪಡೆ (ಪಾಕಿಸ್ತಾನ)
- 1st ಮುಂಬಯಿ ಅಶ್ವಸೈನಿಕ ಪಡೆ - ಕನ್ನಾಟ್‌ನ 13th ಡ್ಯೂಕರ ಖಾಸಗೀ ಭಲ್ಲೆ ಅಶ್ವಾರೋಹಿಗಳ ಪಡೆ
- 1st ಸಿಖ್ಖರ ಸ್ಥಳೀಯ ಪದಾತಿ ದಳ ಮತ್ತು 2nd ಸಿಖ್/ಸಿಖ್ಖರ ಸ್ಥಳೀಯ ಪದಾತಿ ದಳ - 1st ಮತ್ತು 2nd ದಂಡು ತುಕಡಿಗಳು, 12th ಸರಹದ್ದು ದಳ ತುಕಡಿ
- 1st ಬಂಗಾಳ ಅಶ್ವಸೈನಿಕ ಪಡೆ, 5th ಬಂಗಾಳ ಅಶ್ವಸೈನಿಕ ಪಡೆ, 6th ಬಂಗಾಳ ಅಶ್ವಸೈನಿಕ ಪಡೆ, 7th ಬಂಗಾಳ ಅಶ್ವಸೈನಿಕ ಪಡೆ, 8th ಬಂಗಾಳ ಅಶ್ವಸೈನಿಕ ಪಡೆ, 11th ಬಂಗಾಳ ಅಶ್ವಸೈನಿಕ ಪಡೆ (2nd ಬಂಗಾಳ ಅಶ್ವಸೈನಿಕ ಪಡೆ) - 1857ರಲ್ಲಿ ದಂಗೆಗೀಡಾಗಿದ್ದುದು.
- 3rd ಬಂಗಾಳ ಅನಿಯತ ಅಶ್ವಸೈನಿಕ ಪಡೆ, 9th ಬಂಗಾಳ ಅನಿಯತ ಅಶ್ವಸೈನಿಕ ಪಡೆ, 11th ಬಂಗಾಳ ಅನಿಯತ ಅಶ್ವಸೈನಿಕ ಪಡೆ, 12th ಬಂಗಾಳ ಅನಿಯತ ಅಶ್ವಸೈನಿಕ ಪಡೆ, 13th ಬಂಗಾಳ ಅನಿಯತ ಅಶ್ವಸೈನಿಕ ಪಡೆ, 14th ಬಂಗಾಳ ಅನಿಯತ ಅಶ್ವಸೈನಿಕ ಪಡೆ, 15th ಬಂಗಾಳ ಅನಿಯತ ಅಶ್ವಸೈನಿಕ ಪಡೆ. (16th ಬಂಗಾಳ ಅನಿಯತ ಅಶ್ವಸೈನಿಕ ಪಡೆ - 1857ರಲ್ಲಿ ದಂಗೆಗೀಡಾಗಿದ್ದುದು).
- 1st ಬಂಗಾಳ ಪದಾತಿ ದಳ, 3rd ಬಂಗಾಳ ಪದಾತಿ ದಳ, 4th ಬಂಗಾಳ ಪದಾತಿ ದಳ, 8th ಬಂಗಾಳ ಪದಾತಿ ದಳ, 13th ಬಂಗಾಳ ಪದಾತಿ ದಳ, 15th ಬಂಗಾಳ ಪದಾತಿ ದಳ, 18th ಬಂಗಾಳ ಪದಾತಿ ದಳ, 20th ಬಂಗಾಳ ಪದಾತಿ ದಳ, 22nd ಬಂಗಾಳ ಪದಾತಿ ದಳ, 25th ಬಂಗಾಳ ಪದಾತಿ ದಳ, 29th ಬಂಗಾಳ ಪದಾತಿ ದಳ, 30th ಬಂಗಾಳ ಪದಾತಿ ದಳ, 36th ಬಂಗಾಳ ಪದಾತಿ ದಳ, 37th ಬಂಗಾಳ ಪದಾತಿ ದಳ, 45th ಬಂಗಾಳ ಪದಾತಿ ದಳ, 46th ಬಂಗಾಳ ಪದಾತಿ ದಳ, 49th ಬಂಗಾಳ ಪದಾತಿ ದಳ, 50th ಬಂಗಾಳ ಪದಾತಿ ದಳ, 51st ಬಂಗಾಳ ಪದಾತಿ ದಳ, 52nd ಬಂಗಾಳ ಪದಾತಿ ದಳ, 53rd ಬಂಗಾಳ ಪದಾತಿ ದಳ, 56th ಬಂಗಾಳ ಪದಾತಿ ದಳ, 69th ಬಂಗಾಳ ಪದಾತಿ ದಳ, 71st ಬಂಗಾಳ ಪದಾತಿ ದಳ, 72nd ಬಂಗಾಳ ಪದಾತಿ ದಳ, 73rd ಬಂಗಾಳ ಪದಾತಿ ದಳ - 1857ರಲ್ಲಿ ದಂಗೆಗೀಡಾಗಿದ್ದುದು.
- ನೌಕಾಪಡೆಯ ದಂಡು ತುಕಡಿ (10th ದಂಡು ತುಕಡಿ, ಮುಂಬಯಿ ಪಯೋನಿಯರ್ಸ್) - 1933ರಲ್ಲಿ ರದ್ದುಗೊಳಿಸಲಾಗಿತ್ತು.
ಟಿಪ್ಪಣಿಗಳು
ಬದಲಾಯಿಸಿ- ↑ ಹೆರ್ನಾನ್, p.575
- ↑ ಹೆರ್ನಾನ್, p.576
- ↑ ಅಲ್ಲೆನ್, pp.145-146
- ↑ ಅಲ್ಲೆನ್, pp.149-150
- ↑ ಹೆರ್ನಾನ್, p.578
- ↑ ಅಲ್ಲೆನ್, p.150
- ↑ ಮಾಲ್ಲೆಸನ್, ಜಾರ್ಜ್ ಬ್ರೂಸ್: ಡಿಸಿಸೀವ್ ಬ್ಯಾಟಲ್ಸ್ ಆಫ್ ಇಂಡಿಯಾ , p.40
- ↑ ಅಲ್ಲೆನ್, p.192
- ↑ ಸಿಂಗ್, ಸರ್ಬನ್ಸ್ (1993) ಬ್ಯಾಟಲ್ಸ್ ಹಾನರ್ಸ್ ಆಫ್ ದ ಇಂಡಿಯನ್ ಆರ್ಮಿ 1757 - 1971 . ವಿಷನ್ ಬುಕ್ಸ್ (ನವ ದೆಹಲಿ) ISBN 81-7094-115-6
ಉಲ್ಲೇಖಗಳು
ಬದಲಾಯಿಸಿ- Allen, Charles (2000). Soldier Sahibs. Abacus. ISBN 0-349-11456-0.
- Farwell, Byron (1973). Queen Victoria's Little Wars. Wordsworth Military Library. ISBN 1-84022-216-6.
- Hernon, Ian (2002). Britain's Forgotten Wars. Sutton Publishing. ISBN 0-7509-3162-0.
ಬಾಹ್ಯ ಕೊಂಡಿಗಳು
ಬದಲಾಯಿಸಿ- ದ್ವಿತೀಯ ಆಂಗ್ಲೋ-ಸಿಖ್ಖರ ಸಮರ Archived 2019-03-25 ವೇಬ್ಯಾಕ್ ಮೆಷಿನ್ ನಲ್ಲಿ.
- ಆಂಗ್ಲೋ ಸಿಖ್ಖರ ಸಮರಗಳು Archived 2008-11-20 ವೇಬ್ಯಾಕ್ ಮೆಷಿನ್ ನಲ್ಲಿ.