ದೋತ್ರ (ಪಂಚೆ, ಧೋತಿ) ಭಾರತೀಯ ಉಪಖಂಡದಲ್ಲಿ ಧರಿಸಲ್ಪಡುವ ಪುರುಷರ ಒಂದು ಸಾಂಪ್ರದಾಯಿಕ ಉಡುಪು.[]ಇದು ಹೊಲಿಯದ ಬಟ್ಟೆಯ ಆಯತಾಕಾರದ ತುಂಡಾಗಿರುತ್ತದೆ. ಸಾಮಾನ್ಯವಾಗಿ ೪.೫ ಮೀಟರ್‌ಗಳಷ್ಟು ಉದ್ದವಿರುವ ಇದನ್ನು ಸೊಂಟ ಹಾಗೂ ಕಾಲುಗಳ ಸುತ್ತ ಸುತ್ತಿ ಸೊಂಟದ ಭಾಗದಲ್ಲಿ ಗಂಟುಹಾಕಲಾಗುತ್ತದೆ.

ಖಾಸಿ ಜನಪದ ನರ್ತಕರು ದೋತ್ರಗಳು ಹಾಗೂ ಇತರ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದಾರೆ.

ಧೋತಿ ಎಂಬ ಶಬ್ದವು ಧೌತಿ (ಇದರರ್ಥ "ತೊಳೆ, ಒಗೆ") ಎಂಬ ಸಂಸ್ಕೃತ ಶಬ್ದದಿಂದ ವ್ಯುತ್ಪನ್ನವಾಗಿದೆ. ಉಡುಪಿನ ವಿಷಯದಲ್ಲಿ, ಇದು ಕೇವಲ ಶ್ರೌತ ಯಾಗಗಳು ಅಥವಾ ಸಾಮಾನ್ಯವಾಗಿ ಧಾರ್ಮಿಕ ಸಂದರ್ಭಗಳಲ್ಲಿ ಧರಿಸಲ್ಪಡುತ್ತಿದ್ದ ಸ್ವಚ್ಛ ಉಡುಪನ್ನು ಸೂಚಿಸುತ್ತದೆ.: 129  ದೋತ್ರವು ಪ್ರಾಚೀನ ಅಂತರೀಯದಿಂದ ವಿಕಸನಗೊಂಡಿತು. ಅಂತರೀಯವನ್ನು ಕಾಲುಗಳ ಮಧ್ಯದಿಂದ ಸಾಗಿಸಿ, ಬೆನ್ನಿನ ಹತ್ತಿರ ಸಿಕ್ಕಿಸಲಾಗುತ್ತಿತ್ತು ಮತ್ತು ಕಾಲುಗಳನ್ನು ಸಡಿಲವಾಗಿ ಮುಚ್ಚುತ್ತಿತ್ತು. ಕಾಲುಗಳ ಮುಂದಿನ ಭಾಗದಲ್ಲಿ ಇದನ್ನು ಉದ್ದನೆಯ ನಿರಿಗೆಗಳಾಗಿ ಇಳಿಬಿಡಲಾಗುತ್ತಿತ್ತು. ಇದನ್ನು ಈಗಲೂ ಇದೇ ರೀತಿಯಲ್ಲಿ ಧರಿಸಲಾಗುತ್ತದೆ.: 130 

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ದೋತ್ರ&oldid=1158899" ಇಂದ ಪಡೆಯಲ್ಪಟ್ಟಿದೆ