ದೊಡ್ಡಬೆಟ್ಟ ನೀಲಗಿರಿ ಬೆಟ್ಟಗಳ ( ಅದರ ಎತ್ತರ 2,637 ಮೀಟರ್ ಅಥವಾ 8,652   ಅಡಿಗಳು) ಅತ್ಯಂತ ಎತ್ತರದ ಪರ್ವತ ಶಿಖರವಾಗಿದೆ. ಶಿಖರದ ಸುತ್ತಲೂ ಕಾಯ್ದಿರಿಸಿದ ಅರಣ್ಯ ಪ್ರದೇಶವಿದೆ. ಅದು  ಭಾರತದ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ-ಕೊಟಗಿರಿ ರಸ್ತೆಯಲ್ಲಿರುವ ಊಟಿಯಿಂದ 9 ಕಿ.ಮೀ ದೂರದಲ್ಲಿದೆ. ಇದು ಶಿಖರಕ್ಕೆ ರಸ್ತೆ ಪ್ರವೇಶ ಹೊಂದಿರುವ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಅನಮುಡಿ, ಮನ್ನಾಮಲೈ ಮತ್ತು ಮೀಸಪುಲಿಮಾಲಾ ನಂತರ ದಕ್ಷಿಣ ಭಾರತದ ನಾಲ್ಕನೇ ಅತಿ ಎತ್ತರದ ಶಿಖರ ಇದು. ಉದಗುಮಂಡಲಂ ಬಳಿಯಿರುವ ದೋಡಬೆಟ್ಟ ಶ್ರೇಣಿಯ ಪಶ್ಚಿಮದಲ್ಲಿ ಹೆಕುಬಾ (2375 ಮೀ), ಕಟ್ಟಾಡಡು (2418 ಮೀ) ಮತ್ತು ಕುಲ್ಕುಡಿ (2439 ಮೀ) ಶಿಖರಗಳು ನಿಕಟ ಸಂಬಂಧ ಹೊಂದಿರುವ ಮೂರು ಶಿಖರಗಳಾಗಿವೆ.

ದೊಡ್ಡಬೆಟ್ಟ ಶಿಖರದಿಂದ ಊಟಿಯ ನೋಟ.
ಸುತ್ತಮುತ್ತಲಿನ ಪ್ರದೇಶದ ವಿವರವಾದ ನಕ್ಷೆ

ಟೆಲಿಸ್ಕೋಪ್ ಹೌಸ್ಸಂಪಾದಿಸಿ

ದೊಡ್ಡಬೆಟ್ಟದ ಮೇಲ್ಭಾಗದಲ್ಲಿ ಎರಡು ದೂರದರ್ಶಕಗಳು ಸಾರ್ವಜನಿಕರಿಗೆ ಲಭ್ಯವಿದೆ. ಇದನ್ನು 18 ಜೂನ್ 1983 ರಂದು ತೆರೆಯಲಾಯಿತು ಮತ್ತು ಇದನ್ನು ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಟಿಟಿಡಿಸಿ) ನಡೆಸುತ್ತಿದೆ. 2001-2002ರಲ್ಲಿ ಸರಾಸರಿ ವೀಕ್ಷಕರ ಸಂಖ್ಯೆ ಋತುವಿನಲ್ಲಿ ದಿನಕ್ಕೆ 3500 ಮತ್ತು ಆಫ್ ಸೀಸನ್‌ನಲ್ಲಿ (ಬೇರೆ ಸಮಯದಲ್ಲಿ) ದಿನಕ್ಕೆ 700 ಆಗಿತ್ತು. [೧]

ಉಲ್ಲೇಖಗಳುಸಂಪಾದಿಸಿ

  1. "Ooty, Nilgiris". National Informatics Centre, Nilgiris. 20 August 2007. Archived from the original on 2011-01-14.