ದೈತ್ಯ ಪಾಂಡ
ಕರಡಿಯ ಆಕಾರ ಹೊಂದಿದೆ. ಇವು ಬೆಕ್ಕುವಿನ ವರ್ಗಕ್ಕೆ ಸೇರುತ್ತದೆ. ಪಾಂಡ ಎಂಬ ಪದ ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ. ಇವು ಸಾಮಾನ್ಯವಾಗಿ ದಕ್ಷಿನ ಚೀನಾಭಾಗದಲ್ಲಿ ಕಂಡುಬರುತ್ತದೆ. ಇವು ಕೇಂದ್ರ ಚೀನಾ ಶ್ರೇಣಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸಿಚಿವಾನ್ ಪ್ರಾಂತ್ಯ ಹಾಗೂ ನೆರೆಯ ಪ್ರಾಂತ್ಯವಾದ ಶಾಂಕ್ಸಿ ಮತ್ತು ಗನ್ಸುಗಳಲ್ಲಿ ಕಂಡುಬರುತ್ತವೆ. ದೈತ್ಯ ಪಾಂಡ ಎಂಬ ಹೆಸರು ಕೆಲವೊಮ್ಮೆ ಸಂಬಂಧವಿಲ್ಲದ ಕೆಂಪು ಪಾಂಡ ಗಳಿಂದ ಭಿನ್ನಮಾಡಲು ಬಳಸಲಾಗುತ್ತದೆ. ಚೀನಾದ ರಾಷ್ತ್ರೀಯ ಚಿಹ್ನೆ ಡ್ರಾಗನ್ ಎಂದರೂ ದೈತ್ಯ ಪಾಂಡ ಕನಿಷ್ಠವಾಗಿ ಕಾಣಿಸಿಕೊಳ್ಳುತ್ತದೆ.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿಕರಡಿ ಮತ್ತು ರಕೂನ್ಗಳ ಗುಣಲಕ್ಷಣಗಳನ್ನು ಹಂಚಿಕೊಂಡಿರುವುದರಿಂದ ಪಾಂಡಗಳ ವರ್ಗೀಕರಣ ಹಲವಾರು ದಶಕಗಳಿಂದ ಚರ್ಚೆಯಲ್ಲಿತ್ತು.[೧] ಅಣುಗಳ ಅಧ್ಯಯನ, ಇವು ಕರಡಿಯ ವರ್ಗಕ್ಕೆ ಸೇರಿದ್ದು ಎಂದು ಸೂಚಿಸುತ್ತದೆ. ದೈತ್ಯ ಪಾಂಡ ಜೀವಂತ ಪಳೆಯುಳಿಕೆಯೆಂದು ಉಲ್ಲೇಖಿಸಲಾಗಿದೆ.[೨] ದೈತ್ಯ ಪಾಂಡ ಮತ್ತು ಕೆಂಪು ಪಾಂಡಗಳು, ಹೆಸರು, ಆವಾಸಸ್ಥಾನದ ರೀತಿ, ಹುಸಿ ಮೂಳೆಗಳ ಸಾಮ್ಯತೆಯಿರುವ ಕಾರಣದಿಂದ ಇವುಗಳು ದೂರದ ಸಂಬಂಧ ಹೊಂದಿದೆ.
ಲಕ್ಷಣಗಳು
ಬದಲಾಯಿಸಿಇವುಗಳ ಕಣ್ಣಿನ ಸುತ್ತ, ಕಿವಿಯ ಮೇಲೆ ಹಾಗೂ ದೇಹದ ಸುತ್ತಲೂ ದೊಡ್ಡ, ಕಪ್ಪು ಪಟ್ಟೆಗಳಿಂದ ಗುರುತಿಸಲ್ಪಡುತ್ತದೆ. ಇವುಗಳಿಗೆ ಕಪ್ಪು ಮತ್ತು ಬಿಳಿಯ ದಪ್ಪವಾದ ತುಪ್ಪಳವಿರುತ್ತದೆ. ಇವು ೧.೨ ರಿಂದ ೧.೩ ಮೀಟರ್ ಉದ್ದವಿರುತ್ತದೆ, ಬಾಲ ಸುಮಾರು ೧೦-೧೫ ಸೆಂಟಿಮೀಟರಷ್ಟಿರುತ್ತವೆ, ಹಾಗೂ ೬೦ ರಿಂದ ೯೦ ಸೆಂಟಿಮೀಟರ್ ಎತ್ತರವಿರುತ್ತದೆ. ಗಂಡು ೧೬೦ ಕೆಜಿಯಷ್ಟು ತೂಕವಿರುತ್ತದೆ ಹಾಗು ಹೆಣ್ಣು ೭೦ ಕೆಜಿಯಷ್ಟು ತೂಕವಿರುತ್ತದೆ.[೩] ದೈತ್ಯ ಪಾಂಡದ ಆಕಾರ ಕರಡಿಯ ದೇಹಾಕಾರವನ್ನು ಹೋಲುತ್ತದೆ. ದಪ್ಪವಾದ ಕಪ್ಪು ತುಪ್ಪಳ ಇವುಗಳ ಕಿವಿ, ಕಣ್ಣು, ಬಾಯಿ,ಕಾಲು, ತೋಳು ಹಾಗು ಭುಜಗಳ ಮೇಲಿರುತ್ತದೆ, ಬೇರೆಲ್ಲಾ ಭಾಗಗಳು ಬಿಳಿಯಾಗಿರುತ್ತದೆ. ತಂಪಾದ ವಾತವರಣಗಳಲ್ಲಿ ಇವುಗಳನ್ನು ದಪ್ಪಗಿನ ತುಪ್ಪಳ ಬೆಚ್ಚಗಿಡುತ್ತದೆ. ದೈತ್ಯ ಪಾಂಡದ ತಲೆಬುರುಡೆಯೂ ಡ್ಯೂರೊಫೆಗಸೆ ಎಂಬ ಮಾಂಸಹಾರಿ ಪ್ರಾಣಿಯಂತಿರುತ್ತದೆ. ಇವು ದೊಡ್ಡ ದವಡೆಯನ್ನು ಪ್ರದರ್ಶಿಸುವುದಕ್ಕೆ ಹೆಚ್ಚಿನ ಸಂಕೀರ್ಣತೆಯಿಂದ ವಿಕಾಸಗೊಂಡಿವೆ.[೪] ಇವುಗಳಿಗೆ ಹೆಬ್ಬೆರಳ ಜೊತೆ ಐದುಬೆರಳುಗಳಿರುತ್ತವೆ. ಹೆಬ್ಬೆರಳು ಮಾರ್ಪಡಿಸಿದ ತಿಲಾಸ್ಥಿಯಾಗಿ, ಬಿದುರುಗಳನ್ನು ತಿನ್ನುವಾಗ ಗಟ್ಟಿಯಾಗಿ ಹಿಡಿದುಕೊಳ್ಳಲು ಉಪಯೋಗವಾಗುತ್ತದೆ. ಸ್ಟೀಫನ್ ಜೇ ಗೌಲ್ಡ್ ತಮ್ಮ 'ವಿಕಾಸನ ಮತ್ತು ಜೀವಶಾಸ್ತ್ರ' ಎಂಬ ಪುಸ್ತಕದಲ್ಲಿ ಇದರ ಬಗ್ಗೆ ಚರ್ಚಿಸಿದ್ದಾರೆ. ದೈತ್ಯ ಪಾಂಡದ ಬಾಲ ೧೦ ರಿಂದ ೧೫ ಸೆಂಟಿಮೀಟರ್ ಉದ್ದವಿದ್ದು, ಕರಡಿಯ ವರ್ಗದಲ್ಲಿ ಎರಡನೆಯ ಸ್ಥಾನ ಹೊಂದಿದೆ. ಪಾಂಡಗಳು ದಿನಕ್ಕೆ ಎರಡು ಬಾರಿ, ನಸಕು ಮತ್ತು ಮಸುಕುನಲ್ಲಿ ಚುರುಕಾಗಿರುವುದರಿಂದ ಇವು ಕ್ರೆಪುಸ್ಕುಲರ್ ವರ್ಗಕ್ಕೆ ಸೇರಿದ್ದೆಂದು ಭಾವಿಸಲಾಗುತ್ತದೆ.
ವಾಸ ಮತ್ತು ಆಹಾರ
ಬದಲಾಯಿಸಿಇವು ಮಾಂಸಹಾರಿ ವರ್ಗಕ್ಕೆ ಸೇರಿದ್ದರೂ, ತೊಂಬತ್ತೊಂಬತ್ತು ಪ್ರತಿಶದಷ್ಟು ಬಿದಿರು ಸೇವಿಸುತ್ತದೆ.[೫] ದೈತ್ಯ ಪಾಂಡ ಕಾಡುಗಳಲ್ಲಿ ಕೆಲವೊಮ್ಮೆ ಹುಲ್ಲು,ಗೆಡ್ಡೆಗಳು, ಪಕ್ಷಿಗಳನ್ನು ಸೇವಿಸುತ್ತದೆ. ಸೆರೆಯಲ್ಲಿರುವಾಗ ಜೇನು, ಮೊಟ್ಟೆ, ಮೀನು,ಮುಡಿಗೆಣಸುಗಳು, ಪೊದೆ ಎಲೆಗಳು, ಕಿತ್ತಳೆ ಹಾಗು ಬಾಳೆಹಣ್ಣುಗಳನ್ನು ಸೇವಿಸುತ್ತವೆ.[೬] ಕೃಷಿ, ಅರಣ್ಯ ನಾಶ ಮತ್ತಿತರ ಅಭಿವೃದ್ದಿಗಳಿಂದಾಗಿ ಒಮ್ಮೆ ವಾಸಿಸುತ್ತಿದ್ದ ತಗ್ಗು ಪ್ರದೇಶಗಳಿಂದ ಕಾಣೆಯಾಗಿವೆ. ಪ್ರಾಥಮಿಕವಾಗಿ ಸಸ್ಯಹಾರಿಯಾಗಿದ್ದರೂ, ಮಾಂಸ, ಮೀನು,ಮೊಟ್ಟೆಗಳನ್ನು ತಿನ್ನುತ್ತದೆ. ಸೆರೆಯಲ್ಲಿ, ಪ್ರಾಣಿಸಂಗ್ರಹಾಲಗಳಲ್ಲಿ ಪಾಂಡಗಳಿಗೆ ಬಿದಿರುಗಳನ್ನೇ ಕೊಡಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಕಾಡುಗಳಲ್ಲಿ ಸುಮಾರು ೨೦ ವರ್ಷಗಳು ಹಾಗು ಸೆರೆಯಲ್ಲಿ ೩೦ ವರ್ಷಗಳ ಕಾಲ ಬದುಕಿರುತ್ತವೆ. ದೈತ್ಯ ಪಾಂಡ ಸಿಚುವನ್ ಪ್ರಾಂತ್ಯದ ಗುಡ್ಡಗಳಲ್ಲಿ ಮತ್ತು ಕಿನ್ಲಿಂಗ್ ಪರ್ವತಗಳ ಬಿದಿರು ಕಾಡುಗಳಲ್ಲಿ ಬಿದಿರುಗಳನ್ನು ಸೇವಿಸಿ ಅಲೆದಾಟದಲ್ಲಿ ತಮ್ಮ ಜೀವನವನ್ನು ಕಳೆಯುತ್ತದೆ.[೭]
ವರ್ತನೆ
ಬದಲಾಯಿಸಿಇವು ಸಾಮಾನ್ಯವಾಗಿ ಏಕಾಂಗಿಗಳು.ಇವುಗಳು ಬೇರೆ ಪಾಂಡಗಳ ಜೊತೆಗಿರಲು ಇಷ್ಟಪಡುವುದಿಲ್ಲ.ಬೇರೆ ಪಾಂಡ ಸಮೀಪಿಸಿದರೆ,ಗುರುಗುಟ್ಟಿ,ಹೊಡೆದಾಟ ಶುರುವಾಗಿ ಪರಸ್ಪರ ಕಚ್ಚಾಡುತ್ತವೆ. ಇವು ಒಂದೊಂದು ಪ್ರದೇಶದಲ್ಲೂ ತಮ್ಮದೆಯಾದ ಸಾಮ್ರಾಜ್ಯವನ್ನು ನಿರ್ಮಿಸುತ್ತದೆ. ಹೆಣ್ಣು ಪಾಂಡ ತನ್ನ ವ್ಯಾಪ್ತಿಯಲ್ಲಿ ಇತರ ಹೆಣ್ಣು ಪಾಂಡಗಳನ್ನು ಸಹಿಸುವುದಿಲ್ಲ. ಪಾಂಡಗಳು ದನಿ, ಮೂತ್ರದ ತುಂತುರಗಳನ್ನು ಮತ್ತು ತಮ್ಮ ಪಂಜಗಳಿಂದ ಮರದ ತೊಗಟೆಯನ್ನು ಗೀಜಿ ಪರಿಮಳವನ್ನುಂಟು ಮಾಡುತ್ತದೆ.[೮] ಇವು ಟೊಳ್ಳು ಮರಗಳನ್ನು ಹತ್ತಿ ಅಥವಾ ಕಲ್ಲಿನ ಬಿರುಕುಗಳಲ್ಲಿ ಆಶ್ರಯ ಪಡೆಯತ್ತದೆ, ಆದರೆ ಶಾಶ್ವತವಾದ ವಾಸಸ್ಥಳವನ್ನು ನಿರ್ಮಿಸುವುದಿಲ್ಲ. ಈ ಕಾರಣಕ್ಕಾಗಿ ಪಾಂಡಗಳು ಒಂದೇ ಜಾಗದಲ್ಲಿ ಹೆಚ್ಚು ಕಾಲವಿರುವುದಿಲ್ಲ. ಪಾಂಡಗಳು ಪ್ರಾದೇಶಿಕ ನೆನೆಪುಗಳಿಗಿಂತ ಹೆಚ್ಚಾಗಿ ದೃಶ್ಯ ನೆನಪುಗಳ ಮೇಲೆ ಅವಲಂಬಿತವಾಗುತ್ತದೆ.[೯] ಪಾಂಡ ಪಳಗಿಸಬಹುದಾದ ಜೀವಿ, ಆದರೊ ಕೆಲವೊಮ್ಮೆ ದಾಳಿ ಮಾಡಿದ್ದೆ ಆದಲ್ಲಿ ಅದು ಕೇವಲ ಕಿರಿಕಿರಿಯಿಂದ ಮಾತ್ರವಾಗಿರುತ್ತದೆ.[೧೦][೧೧] ದೈತ್ಯ ಪಾಂಡದ ಜೀರ್ಣಾಂಗ ವ್ಯವಸ್ಥೆ ಮತ್ತು ಜೀನ್ಗಳು ಮಾಂಸಹಾರಿಯದೇಯಾಗಿರುತ್ತದೆ.[೧೨] ಆದುದರಿಂದ ಬಿದಿರು ಸೇವಿಸಿದ್ದಲ್ಲಿ ಇವುಗಳಿಗೆ ಸ್ವಲ್ಪ ಮಟ್ಟಕ್ಕೆ ಮಾತ್ರ ಶಕ್ತಿ ದೊರೆಯುತ್ತದೆ. ಇವುಗಳಿಗೆ ಸೆಲ್ಯುಲೋಸನ್ನು ಜೀರ್ಣಿಸಲು ಸೂಕ್ಷ್ಮಜೀವಿಗಳ ಅಗತ್ಯವಿದೆ. ಪಾಂಡಗಳು ಬರಡು ಕರುಳಿಂದ ಹುಟ್ಟಿದ್ದ ಕಾರಣ ತನ್ನ ತಾಯಿಯ ಮಲದ ಅಣು ಜೀವಿಗಳಿಂದ ತಮ್ಮ ಆಹಾರಗಳನ್ನು ಜೀರ್ಣಿಸುತ್ತದೆ. ದೈತ್ಯ ಪಾಂಡ ಅನನ್ಯ ರೂಪಾಂತರಗಳ ಕಾರಣದಿಂದ ಲಕ್ಷಾಂತರ ವರ್ಷಗಳಿಂದ ಬಿದಿರು ಕಾಡುಗಳಲ್ಲಿ ವಾಸಿಸುತ್ತದೆ.[೬] ಇವು ಒಂದು ದಿನಕ್ಕೆ ೧೨ ಗಂಟೆಗಳ ಕಾಲ ಬಿದಿರುಗಳನ್ನು ಸೇವಿಸುತ್ತದೆ. ಬಿದಿರಿನಿಂದ ಲಭಿಸುವ ಶಕ್ತಿಯ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದಾಗಿ ಇವು ದಿನಕ್ಕೆ ೯ ರಿಂದ ೧೪ ಕ್.ಜಿ ಯಷ್ಟು ಬಿದಿರುಗಳನ್ನು ಸೇವಿಸುತ್ತದೆ. ಜೀರ್ಣವಾಗದ ಸಸ್ಯ ವಸ್ತುಗಳು ಸಣ್ಣ ಜೀರ್ಣಾಂಗದಲ್ಲಿ ಬೇಗನೆ ಹರಿಯುವುದರ ಕಾರಣದಿಂದಾಗಿ ಇವು ಬೃಹತ್ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತದೆ. ಈ ಬೇಗನೆ ಹರಿಯುವ ಜೀಣಾಳುಗಳಿಂದ, ಸೂಕ್ಷ್ಮಜೀವಿಗಳ ಜೀರ್ಣಕ್ರಿಯೆ ಸೀಮಿತವಾಗುತ್ತದೆ. ಈ ಆಹಾರ ಕ್ರಮದಿಂದಾಗಿ ಇವುಗಳ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗು ಇವು ದಿನಕ್ಕೆ ನಲವತ್ತು ಸಾರಿ ಮಲವಿಸರ್ಜನೆಯನ್ನು ಮಾಡುತ್ತದೆ.[೧೩] ತನ್ನ ಶಕ್ತಿಯನ್ನು ಉಳಿಸಲು, ಬೆರೆಯುವಿಕೆಯನ್ನು ಸೀಮಿತಗೊಳಿಸಲು, ಇಳಿಜಾರು ಭೂಪ್ರದೇಶಗಳಿಂದ ದೂರವಿರುತ್ತದೆ. ದೊಡ್ಡ ದವಡೆಗಳಿಂದ ಇವು ತುಂತು ಸಸ್ಯಗಳನ್ನು ಪುಡಿಮಾಡುತ್ತದೆ. ಪಾಂಡಗಳು ಕಾಡಿನಲ್ಲಿರುವ ೨೫ ರೀತಿಯ ಬಿದಿರುಗಳನ್ನು ತಿನ್ನುತ್ತದೆ, ಇದರಲ್ಲಿ ಫರ್ಗಿಸಿಯ ರುಫಯೆಂಬುದೊಂದಾಗಿದೆ. ಈಗ ಕೆಲವೇ ಎತ್ತರದ ಪ್ರದೇಶಗಳಲ್ಲಿ ಈ ಜಾತಿಯ ಬಿದಿರುಗಳು ಕಂಡುಬರುತ್ತದೆ. ಒಂದೇ ಜಾತಿಯ ಬಿದಿರಿನಲ್ಲಿ, ಸಮಕಾಲಿಕ ಹೂಬಿಡುವಿಕೆ ಮತ್ತು ಪುನರುತ್ಪಾದನೆಯಿಂದ ಪಾಂಡಗಳಿಗೆ ಬೇರೆರಡು ಜಾತಿಯ ಬಿದಿರುಗಳನ್ನು ತನ್ನ ವ್ಯಾಪ್ತಿಯಲ್ಲಿಟ್ಟರೆ ಹಸಿವಿನಿಂದ ಪಾರಾಗುತ್ತದೆ.
ಉಪಯೋಗ
ಬದಲಾಯಿಸಿಪ್ರಾಚೀನ ಚಿನಾ ಕಾಲದಲ್ಲಿ ಇತರ ಪ್ರಾಣಿಗಳಿಗಿಂತ ಪಾಂಡಗಳಿಗೆ ಹೆಚ್ಚು ಉಪಯೋಗವಿತ್ತೆಂದು ಭಾವಿಸಲಾಗಿತ್ತು. ಸಿಚುವನ್ ಬುಡಕಟ್ಟಿನವರು, ನುಂಗಿದ ಸೂಜಿಗಳನ್ನು ಕರಗಿಸುವುದಕ್ಕೆ ಪಾಂಡದ ಮೂತ್ರವನ್ನು ಉಪಯೋಗಿಸುತ್ತಿದ್ದರು. ಸ್ತ್ರೀಗಳು ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವವನ್ನು ನಿಯಂತ್ರಿಸುವುದ್ದಕ್ಕೆ ಪಾಂಡಗಳ ತುಪ್ಪಳಗಳು ಉಪಯೋಗಿಸಲಾಗಿತ್ತೆಂದು ಕ್ವಿನ್ ರಾಜವಂಶದ ವಿಶ್ವಕೋಶದಲ್ಲಿ ಉಲ್ಲೇಖಿಸಲಾಗಿದೆ.
ಜೈವಿಕ ಇಂಧನ
ಬದಲಾಯಿಸಿಪಾಂಡದ ತ್ಯಾಜ್ಯ ವಸ್ತುಗಳಲ್ಲಿರುವ ಸೂಕ್ಷ್ಮಜೀವಿಗಳಿಂದ,ಬಿದಿರು,ಇತರ ಸಸ್ಯಗಳಿಂದ ಜೈವಿಕ ಇಂಧನ ನಿರ್ಮಿಸಲು ತನಿಖೆಮಾಡಲಾಗುತ್ತಿದೆ.[೧೪]
ಸಂತಾನಾಭಿವೃದ್ಧಿ
ಬದಲಾಯಿಸಿಆವಾಸಸ್ಥಾನದ ನಷ್ಟ ಮತ್ತು ಛಿದ್ರೀಕರಣ, ಕಡಿಮೆ ಜನನ ಪ್ರಮಾಣಗಳ ಕಾರಣದಿಂದಾಗಿ, ದೈತ್ಯ ಪಾಂಡ ಅಳಿವಿನಂಚಿನಲ್ಲಿರುವ ಕೆಂಪು ಪಟ್ಟಿಯ ಪ್ರಾಣಿಯ ವರ್ಗಕ್ಕೆ ಸೇರಿದ್ದು. ಒಮ್ಮೆ ಸೆರೆಹಿಡಿದಲ್ಲಿ, ಮಿಲನದ ಆಸಕ್ತಿಯನ್ನು ಕಳೆದುಕೊಳ್ಳುವುದರಿಂದ ಸೆರೆಯಲ್ಲಿ ದೈತ್ಯ ಪಾಂಡದ ತಳಿ ವಿಧಾನ ಕೃತಕ ಗರ್ಭಧಾರಣೆಯ ಮೂಲಕವಾಗಿರುತ್ತದೆ. ೨೦೦೯ ರಲ್ಲಿ ಇಲ್ಯುಮಿನಾ ಡೈ ಸೀಕ್ವೆನ್ಸಿಂಗ್ ಎಂಬ ರೀತಿಯ ಮೂಲಕ ದೈತ್ಯ ಪಾಂಡಗಳ ಜೀನೋಮ್ಗಳು ಪರಿವಿಡಿ ಮಾಡಲಾಗಿತ್ತು.[೧೫] ಇವು ಇಪ್ಪತ್ತು ಜೋಡಿ ಅಲಿಂಗಗಳು ಹಾಗು ಒಂದು ಜೋಡಿ ಲಿಂಗ ನಿರ್ಧಾರಕ ವರ್ಣತುಂತುರಗಳಿಂದ ಕೂಡಿರುತ್ತದೆ. ಪ್ರಚಲಿತ ಸಂತಾನೋತ್ಪತ್ತಿ ದರ ಎರಡು ವರ್ಷಗಳಿಗೊಮ್ಮೆ ಒಂದು ಮರಿಯೆಂಬುದಾಗಿದೆ.[೧೬] ದೈತ್ಯ ಪಾಂಡ ಬೇರೆಲ್ಲಾ ಸಸ್ತನಿಗಳಿಗಿಂತ ಚಿಕ್ಕದಾದ ಮರಿಯನ್ನು ಉತ್ಪಾದಿಸುತ್ತದೆ,ಇವು ೪ ರಿಂದ ೮ ವಯಸ್ಸಿನೊಳಗೆ ಪ್ರೌಢತೆಯನ್ನು ಪಡೆಯುತ್ತದೆ ಹಾಗು ೨೦ ವಯಸ್ಸಿನವರೆಗೂ ಸಂತಾನೋತ್ಪತ್ತಿ ಮಾಡುತ್ತದೆ.[೧೭] ಮಿಲನದ ಖತು ಮಾರ್ಚ್ ಮತ್ತು ಮೇ ಮಾಸಗಳ ನಡುವೆಯಿರುತ್ತದೆ. ಪ್ರಾಥಮಿಕವಾಗಿ ತಳಿಯ ಉತ್ಪತ್ತಿ ಕಾಲದಲ್ಲಿ ಪರಸ್ಪರ ಹತ್ತಿರವುಳ್ಳ ಪಾಂಡಗಳು ಒಂದುಗೂಡುತ್ತವೆ. ಒಟ್ಟುಗೂಡಿದ ನಂತರ, ಗಂಡು ತನ್ನ ಮರಿಯನ್ನು ಒಂಟಿಯಾಗಿ ಸಾಕುವುದ್ದಕ್ಕೆ ಹೆಣ್ಣನ್ನು ಬಿಟ್ಟು ಹೋಗುತ್ತದೆ. ಗರ್ಭಾವಸ್ಥೆಗೆ ೯೫ ರಿಂದ ೧೬೦ ದಿನಗಳ ವ್ಯಾಪ್ತಿಯಿರುತ್ತದೆ. ಪಾಂಡ ಅವಳಿ ಮರಿಗಳಿಗೆ ಜನ್ಮ ನೀಡಿದಾಗ ಬಲವಾದದನ್ನು ಆಯ್ಕೆ ಮಾಡುತ್ತದೆ ಏಕೆಂದರೆ ಕೊಬ್ಬು ಶೇಖರಣೆ ಇಲ್ಲದಿರುವುದರಿಂದ ಎರಡು ಮಕ್ಕಳನ್ನು ಸಾಕುವಷ್ಟು ಹಾಲಿರುವುದಿಲ್ಲ.[೧೮] ಪಾಂಡ ಮರಿಯೂ ೧೦೦ ರಿಂದ ೨೦೦ ಗ್ರಾಂ ತೂಕವಿರುತ್ತದೆ ಹಾಗು ೧೫ ರಿಂದ ೧೭ ಸೆಂಟಿಮೀಟರ್ ಉದ್ದವಿರುತ್ತದೆ. ಮರಿ ಮೊದಲು ಜನಿಸಿದಾಗ, ಗುಲಾಬಿ ಬಣ್ಣದಲ್ಲಿ, ಹಲ್ಲಿಲ್ಲದೆ, ಕುರುಡಾಗಿರುತ್ತದೆ. ಹುಟ್ಟಿದ್ದ ಒಂದೆರಡು ವಾರಗಳಲ್ಲಿ ಚರ್ಮ ಬೂದಿ ಬಣ್ಣಕ್ಕೆ ಬದಲಾಗುತ್ತದೆ ಹಾಗು ಅದರ ಕೂದಲು ಕಪ್ಪು ಬಣ್ಣವಾಗುತ್ತದೆ. ಅದರ ತುಪ್ಪಳ ಮೃದುವಾಗಿದ್ದು, ಬೆಳೆದ ನಂತರ ಒರಟಾಗತೊಡುತ್ತದೆ. ೭೫ ರಿಂದ ೮೦ ದಿನಗಳಲ್ಲಿ ಮರಿ, ಅಂಬೆಗಾಲಿಡಲು ಪ್ರಾರಂಬಿಸುತ್ತದೆ.[೧] ತಾಯಿ, ಅವುಗಳ ಜೊತೆಗೆ ಆಟವಾಡುತ್ತದೆ. ಆರು ತಿಂಗಳ ನಂತರ ಕಡಿಮೆ ಪ್ರಮಾದಲ್ಲಿ ಬಿದಿರುಗಳನ್ನು ಸೇವಿಸುತ್ತದೆ, ಆದರೂ ಒಂದು ವಯಸ್ಸಿನ ವರೆಗೂ ತಾಯಿಯ ಮೊಲೆ ಹಾಲನ್ನು ಕುಡಿಯುತ್ತದೆ.
ಸಂರಕ್ಷಣೆ
ಬದಲಾಯಿಸಿದೈತ್ಯ ಪಾಂಡ, ಅಳಿವಿನಂಚಿನಲ್ಲಿದ್ದು ಸಂರಕ್ಷಣೆ ಮಾಡಬೇಕಾದ ಪ್ರಾಣಿ. ಆವಾಸಸ್ಥಾನದ ನಷ್ಟ ಮತ್ತು ಆವಾಸಸ್ಥಾನ ಛಿದ್ರೀಕರಣ ಬೆದರಿಕೆ ಇವುಗಳಲ್ಲಿ ಮುಂದುವರೆಯುತ್ತಿದೆ.[೧೯] ಇವು, ದಕ್ಷಿಣ ಮತ್ತು ಪೂರ್ವ ಚೀನಾ ಹಾಗೂ ಉತ್ತರ ಮ್ಯಾನ್ಮಾರ್ ಮತ್ತು ಉತ್ತರ ವಿಯೆಟ್ನಾಂ ಭಾಗಗಳಲ್ಲಿ ಸೀಮಿತಗೊಂಡಿವೆ.[೨೦]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ https://www.britannica.com/animal/giant-panda
- ↑ https://web.archive.org/web/20080504213933/http://www.abc.net.au/tv/btn/stories/s1947589.htm
- ↑ "ಆರ್ಕೈವ್ ನಕಲು". Archived from the original on 2014-12-23. Retrieved 2016-09-21.
- ↑ http://onlinelibrary.wiley.com/doi/10.1111/evo.12059/abstract;jsessionid=D835500BF45B42B6629AE1550A9E3125.f01t02
- ↑ http://www.factslides.com/s-Panda
- ↑ ೬.೦ ೬.೧ https://nationalzoo.si.edu/animals/giant-panda
- ↑ https://web.archive.org/web/20080607110445/http://www.wwfchina.org/english/pandacentral/htm/learn_about_giant_panda/panda_q_a/panda_behavior_habitat.htm
- ↑ https://web.archive.org/web/20080704204350/http://www.panda.org/about_wwf/what_we_do/species/our_solutions/endangered_species/giant_panda/index.cfm
- ↑ http://www.apa.org/monitor/jan04/pandas.aspx
- ↑ http://www.foxnews.com/story/2007/10/23/teenager-hospitalized-after-panda-attack-at-chinese-zoo.html
- ↑ http://news.bbc.co.uk/2/hi/asia-pacific/7743748.stm
- ↑ http://www.nature.com/nature/journal/v463/n7279/full/nature08696.html
- ↑ http://news.bbc.co.uk/2/hi/uk_news/wales/5095448.stm
- ↑ http://news.nationalgeographic.com/news/energy/2013/09/130910-panda-poop-might-help-turn-plants-into-fuel/
- ↑ https://www.ncbi.nlm.nih.gov/pmc/articles/PMC3951497/
- ↑ http://ngm.nationalgeographic.com/2006/07/panda/warren-text?fs=animals-panther.nationalgeographic.com
- ↑ https://web.archive.org/web/20080527204441/http://newsdesk.si.edu/kits/pandas/nzp_panda_reproduction.pdf
- ↑ http://www.pandasinternational.org/education-2/panda-facts/
- ↑ http://www.sciencedirect.com/science/article/pii/S0006320714004625
- ↑ http://www.iucnredlist.org/details/712/0