ದುರ್ಗಾ ಜಲಪಾತ
ದುರ್ಗಾ ಗ್ರಾಮವು ಕಾರ್ಕಳದಿಂದ ಸ್ವಲ್ಪ ದೂರದಲ್ಲಿರುವ ಗುಡ್ಡಗಾಡು ಪ್ರದೇಶವಾಗಿದೆ. ದುರ್ಗಾ ಎಂಬ ಹೆಸರು ಸಂಸ್ಕೃತದಲ್ಲಿ ದುರ್ಗಮಾ ಎಂಬ ಪದದಿಂದ ಹುಟ್ಟಿಕೊಂಡಿದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಮರಗಳಿಂದ ಕೂಡಿದೆ. ದುರ್ಗಾ ಜಲಪಾತ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದು ವಾಸ್ತವವಾಗಿ ಜಲಪಾತವಲ್ಲ. ಆದರೆ ಆ ಬಂಡೆಗಳ ಮೇಲೆ ನೀರು ಬಲದಿಂದ ಉಕ್ಕಿ ಹರಿಯುವುದರಿಂದ ಇದನ್ನು ಜಲಪಾತ ಎಂದು ಕರೆಯುತ್ತಾರೆ. [೧] ಈ ಜಲಪಾತವು ನೀರು ತಡೆಯುವ ಬಂಡೆಗಳ ಮೂಲಕ ಸಾಗಿದಂತೆ, ಅದು ಹಿಮಭರಿತ ಬಿಳಿ ವರ್ಣಮಯವಾಗಿ ಕಾಣುತ್ತದೆ. ವಾಹನಗಳು ಇಲ್ಲದ ದಿನಗಳಲ್ಲಿ, ಈ ಗ್ರಾಮವು ಸಂಪೂರ್ಣವಾಗಿ ದೂರದ ವಾಸಸ್ಥಾನವಾಗಿತ್ತು. ಆದರೆ ಇವಾಗ ಈ ಸ್ಥಳದಲ್ಲಿ ರಸ್ತೆ ಇರುವುದರಿಂದ ವಾಹನದಲ್ಲಿ ಕುಳಿತು ಜಲಪಾತದ ಸೌಂದರ್ಯವನ್ನು ಆನಂದಿಸಬಹುದು.
ವಿಶೇಷತೆ
ಬದಲಾಯಿಸಿಪಶ್ಚಿಮ ಘಟ್ಟದಲ್ಲಿ ಹುಟ್ಟುವ ಸ್ವರ್ಣಾ ನದಿಯ ಹಾದಿಯಲ್ಲಿರುವ ದುರ್ಗಾ ಜಲಪಾತವು ಹಳ್ಳಿಗೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಒಂದು ತಾಣವಾಗಿದೆ. ಸ್ವರ್ಣಾ ನದಿಯು ವಿಶಾಲವಾದ ಒರಟಾದ ಬಂಡೆಯ ವಿಸ್ತಾರದ ಮೂಲಕ ಹರಿಯುತ್ತದೆ, ಮಾನ್ಸೂನ್ ಮತ್ತು ಕೆಲವು ತಿಂಗಳುಗಳಲ್ಲಿ ಈ ದೃಶ್ಯವು ಆನಂದವನ್ನು ನೀಡುತ್ತದೆ. ಎತ್ತರದ ಬಂಡೆಗಳ ಮೇಲೆ ಕುಳಿತುಕೊಂಡು ಅಲ್ಲಿನ ಹಾಗೂ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯವನ್ನು ಆನಂದಿಸಬಹುದು.
ಮಾರ್ಗಸೂಚಿ
ಬದಲಾಯಿಸಿಈ ಜಲಪಾತವು ಕಾರ್ಕಳದಿಂದ ಐದು ಕಿಲೋಮೀಟರ್ ಹಾಗೂ ಉಡುಪಿಯಿಂದ ೪೪.೮ ಕಿಲೋಮೀಟರ್ ದೂರದಲ್ಲಿದ್ದು ಮಳೆಗಾಲದಲ್ಲಿ ಸಂಜೆ ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳವಾಗಿದೆ.
ಸಹ ನೋಡಿ
ಬದಲಾಯಿಸಿ- ಗೊಮ್ಮಟೇಶ್ವರ ಪ್ರತಿಮೆ, ಕಾರ್ಕಳ
- ಶ್ರೀ ಚತುರ್ಮುಖ ಜೈನ ಬಸದಿ
- ಅತ್ತೂರು ಚರ್ಚ್