ದೀಪಕ್ ಪರೇಖ್ (ಜನನ ೧೮ ಅಕ್ಟೋಬರ್ ೧೯೪೪) ಒಬ್ಬ ಭಾರತೀಯ ಉದ್ಯಮಿ. ಇವರು ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಹಾಗೂ ಭಾರತದ ಪ್ರಮುಖ ವಸತಿ ಖಾಸಗಿ ಅಭಿವೃದ್ಧಿ ಹಣಕಾಸು ಸಂಸ್ಥೆಯ ಮಾಜಿ ಅಧ್ಯಕ್ಷರು. ಇದು ಮುಂಬೈ ನಲ್ಲಿ ನೆಲೆಗೊಂಡಿದೆ.[][]

ದೀಪಕ್ ಪರೇಖ್
ಅಕ್ಟೋಬರ್ ೨೦೦೯ ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ ಸಭೆಯಲ್ಲಿ ತಿಮೋತಿ ಗೀತ್ನರ್ ಅವರೊಂದಿಗೆ ಪರೇಖ್ (ಎಡ ಭಾಗದಲ್ಲಿ) ಕುಳಿತಿದ್ದಾರೆ.
ಜನನ (1944-10-18) ೧೮ ಅಕ್ಟೋಬರ್ ೧೯೪೪ (ವಯಸ್ಸು ೮೦)
ಶಿಕ್ಷಣ ಸಂಸ್ಥೆ
  • ಸಿಡೆನ್‌ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್, ಮುಂಬೈ
  • ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆ
ವೃತ್ತಿಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ
ಪ್ರಶಸ್ತಿಗಳುಪದ್ಮಭೂಷಣ

ಹೆಚ್ ಡಿ ಎಫ್ ಸಿ (ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ) ಬ್ಯಾಂಕಿನ ಅಧ್ಯಕ್ಷರಾದ ದೀಪಕ್ ಪಾರೇಖ್ ರವರು ೧೯೪೪ ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರ ತಂದೆ ಶಾಂತಿಲಾಲ್ ಪರೇಖ್. ಇವರ ಮಡದಿ ಸ್ಮಿತ ಪರೇಖ್. ಇವರಿಗೆ ಆದಿತ್ಯಪರೇಖ್ ಮತ್ತು ಸಿದ್ಧಾರ್ಥ್ ಪರೇಖ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಶಿಕ್ಷಣ

ಬದಲಾಯಿಸಿ
 
ಮುಂಬೈ

ಪರೇಖ್ ತನ್ನ ಶಾಲಾ ಶಿಕ್ಷಣವನ್ನು ಸಂತ ಕ್ಸೇವಿಯರ್ ಶಾಲೆಯಲ್ಲಿ ಮುಗಿಸಿದ್ದಾರೆ []. ನಂತರ ಮುಂಬೈ ವಿಶ್ವವಿದ್ಯಾನಿಲಯ ಸಂಯೋಜಿತ ಸಿಡೆನ್‌ಹ್ಯಾಮ್ ಕಾಲೇಜ್ ನಿಂದ ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಪಡೆದರು []. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅರ್ಹತೆ ಪಡೆಯಲು ಅವರು ೧೯೬೫ ರಲ್ಲಿ ಇಂಗ್ಲೆಂಡ್‌ಗೆ ಹೋದರು. ಅವರು ಲಂಡನ್‌ನಲ್ಲಿ ವಿನ್ನಿ, ಸ್ಮಿತ್ ಮತ್ತು ವಿನ್ನಿ (ನಂತರ ಅರ್ನ್ಸ್ಟ್ ಮತ್ತು ಯಂಗ್) ಅವರೊಂದಿಗೆ ತಮ್ಮ ಲೇಖನಗಳನ್ನು ಪೂರ್ಣಗೊಳಿಸಿದರು.

ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್‌ನ ಸರ್ಟಿಫೈಡ್ ಅಸೋಸಿಯೇಟ್ ಆಫ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ ಅನ್ನು ಸಹ ತೆರವುಗೊಳಿಸಿದರು. ಅವರು ತಮ್ಮ ಎಸಿಎ ಪರೀಕ್ಷೆಗಳನ್ನು ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದರು. ನಂತರ ನ್ಯೂಯಾರ್ಕ್‌ನಲ್ಲಿರುವ ಸಂಸ್ಥೆಯ ಸಲಹಾ ವಿಭಾಗದಲ್ಲಿ ಅರ್ನ್ಸ್ಟ್ ಮತ್ತು ಅರ್ನ್ಸ್ಟ್ ನೇಮಕಗೊಂಡರು [].

ವೃತ್ತಿ ಜೀವನ

ಬದಲಾಯಿಸಿ
 
ನ್ಯೂಯಾರ್ಕ್
 
ಬ್ಯಾಂಕಿನ ಸಂಸ್ಥಾಪಕ
 
ಹೆಚ್ ಡಿ ಎಫ಼್ ಸಿ ಬ್ಯಾಂಕಿನ ಸಂಸ್ಥಾಪಕರು

ಶ್ರೀ ಪರೇಖ್ ರವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ನ್ಯೂಯಾರ್ಕ್‌ನ ಅರ್ನ್ಸ್ಟ್ ಅಂಡ್ ಯಂಗ್ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಪರೇಖ್ ಅವರು ದಕ್ಷಿಣ ಏಷ್ಯಾದ ಅರ್ನ್ಸ್ಟ್ & ಯಂಗ್, ಗ್ರಿಂಡ್ಲೇಸ್ ಬ್ಯಾಂಕ್ ಮತ್ತು ಚೇಸ್ ಮ್ಯಾನ್‌ಹ್ಯಾಟನ್ ಬ್ಯಾಂಕ್‌ಗಳಿಗೆ ಅದರ ಸಹಾಯಕ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಅವರು ೧೯೭೮ ರಲ್ಲಿ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್‌ಗೆ ಸೇರಿದರು. ಪಾರೇಖ್ ೧೯೯೭ ರಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವ ವಿಶೇಷ ಹಣಕಾಸು ಸಂಸ್ಥೆಯಾದ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಫೈನಾನ್ಸ್ ಕಂಪನಿ ಲಿಮಿಟೆಡ್ (ಐಡಿಎಫ್‌ಸಿ) ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾದರು. ಅವರು ಗ್ಲಾಕ್ಸೋ ಇಂಡಿಯಾ ಲಿಮಿಟೆಡ್ ಮತ್ತು ಬರೋಸ್ ವೆಲ್‌ಕಮ್ (ಇಂಡಿಯಾ) ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರೂ ಆಗಿದ್ದಾರೆ.

ಶ್ರೀ ಪರೇಖ್ ರವರು ನ್ಯೂಯಾರ್ಕ್ ನಿಂದ ಭಾರತಕ್ಕೆ ಮರಳಿದ ನಂತರ ಚೇಸ್ ಮ್ಯಾನ್ಹ್ಯಾಟನ್ ಬ್ಯಾಂಕಿನಲ್ಲಿ ದಕ್ಷಿಣ ಏಷ್ಯಾದ ಪ್ರತಿನಿಧಿಯಾಗಿದ್ದರು. ೧೯೭೮ ರಲ್ಲಿ ಹೆಚ್ ಡಿ ಎಫ್ ಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. ೧೯೯೭ ರಲ್ಲಿ ಐಡಿಎಫ್ ನ ಕಾರ್ಯ ನಿರ್ದೇಶಕರಾಗಿ ಪಾತ್ರವಹಿಸಿದರು.ಪಾರೇಖ್ ಅವರು ಭಾರತ ಸರ್ಕಾರ ಸ್ಥಾಪಿಸಿದ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ. ೧೯೬೪ ರಲ್ಲಿ ಯುನಿಟ್ ಯೋಜನೆಯನ್ನು ಬಲಪಡಿಸುವ ಕ್ರಮಗಳನ್ನು ಶಿಫಾರಸು ಮಾಡಲು ರಚಿಸಲಾಗಿದ್ದ ಉನ್ನತ ಮಟ್ಟದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ನೇಮಕಾತಿಗೊಂಡರು. ಭಾರತೀಯ ರಿಸರ್ವ್ ಬ್ಯಾಂಕ್ ಅವರನ್ನು ಸೆಕ್ಯುರಿಟೀಸ್ ಮಾರುಕಟ್ಟೆ ನಿಯಂತ್ರಣಕ್ಕಾಗಿ ಸಲಹಾ ಗುಂಪಿನ ಅಧ್ಯಕ್ಷರನ್ನಾಗಿ ನೇಮಿಸಿತು. ಇದನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಕಾರ್ಯವನ್ನು ಮಾಡಲಾಯಿತು. ಇತರ ದೇಶಗಳಲ್ಲಿ ಇವರ ಜನಪ್ರಿಯತೆ ಹೆಚ್ಛಿತು. ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣಾ ಪ್ರಯತ್ನಗಳನ್ನು ಪರಿಶೀಲಿಸಲು ವಿದ್ಯುತ್ ಸಚಿವಾಲಯ ರಚಿಸಿದ ತಜ್ಞರ ಸಮಿತಿಯ ಅಧ್ಯಕ್ಷರೂ ಆಗಿದ್ದರು.ಭಾರತೀಯ ರಿಸರ್ವ್ ಬ್ಯಾಂಕ್ ಅವರನ್ನು ಸೆಕ್ಯುರಿಟೀಸ್ ಮಾರುಕಟ್ಟೆ ನಿಯಂತ್ರಣಕ್ಕಾಗಿ ಸಲಹಾ ಗುಂಪಿನ ಅಧ್ಯಕ್ಷರನ್ನಾಗಿ ನೇಮಿಸಿತು.

ಕೊಡುಗೆ

ಬದಲಾಯಿಸಿ

ಭಾರತದ ಹಣಕಾಸು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ದೀಪಕ್ ಪರೇಖ್ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ ಹಾಗೂ ಭಾರತದಲ್ಲಿ ಫ್ರೆಂಚ್ ಸಂಸ್ಥೆಗಳನ್ನು ಸ್ಥಾಪಿಸಲು ಸಹಕರಿಸಿದ್ದಾರೆ. ಫ್ರಾನ್ಸ್ ಸರ್ಕಾರದ ಪ್ರಕಾರ ಶ್ರೀ ಪರೇಖ್ ಆರ್ಥಿಕ ವಲಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವನ್ನು ಸುಧಾರಿಸಿದ್ದಾರೆ. ಅಲ್ಲದೆ ಭಾರತದ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಸಾಲ ನೀಡುವ ಮೂಲಕ ಮನೆ ಅಥವಾ ಫ್ಲ್ಯಾಟ್‌ಗಳನ್ನು ಖರೀದಿಸುವಂತಹ ಅವಕಾಶ ಮಾಡಿಕೊಟ್ಟರು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕುರಿತು ಶ್ರೀ ಪರೇಖ್ ಅವರ ಚಿಂತನೆ ಸರಳವಾದರೂ ಆಳವಾದದ್ದು. ಒಂದು ಕಂಪನಿಯು ಗಳಿಸಿದ ಲಾಭ ಸಮಾಜದ ಒಳಿತಿಗೆ ಉಪಯೊಗಿಸುವುದು ಅಗತ್ಯ ಮತ್ತು ಅದು ಎಲ್ಲಾ ಕಂಪನಿಗಳ ಜವಾಬ್ದಾರಿ ಎಂದು ಅವರು ನಂಬುತ್ತಾರೆ. ನಿವೃತ್ತರಾಗಲಿರುವ ದೀಪಕ್ ಪರೇಖ್ ಅವರ ಬಹುತೇಕ ಸಮಾನಾರ್ಥಕ ಸಂಸ್ಥೆಯಲ್ಲಿ ಹಸ್ತಕ್ಷೇಪ ಮಾಡದಿರುವುದು ಅವರ ದೊಡ್ಡ ಸವಾಲು ಎಂದು ಹೇಳುತ್ತಾರೆ.

ಪ್ರಶಸ್ತಿಗಳು

ಬದಲಾಯಿಸಿ

ತಮ್ಮ ಕಾರ್ಯವೈಖರಿ ಹಾಗೂ ಸಾಮಾಜಿಕ ಕಳಕಳಿಗೆ ಪ್ರಸಿದ್ಧರೆನಿಸಿಕೊಂಡಿರುವ ಶ್ರೀ ಪರೆಖ್‌ರವರು ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ೨೦೦೬ ರಲ್ಲಿ ಭಾರತ ಸರ್ಕಾರದ ವತಿಯಿಂದ ಪದ್ಮಭೂಷಣ ಗೌರವಕ್ಕೆ ಭಾಜೀನರದರು. ೨೦೦೯ ರಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವಾರ್ಥ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ವೇತಭವನದಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ೨೦೧೦ ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ವತಿಯಿಂದ ಅತ್ಯುತ್ತಮ ಸಾಧನೆ ಪ್ರಶಸ್ತಿ ಪಡೆದರು. ಎಕನಾಮಿಕ್ ಟೈಮ್ಸ್ ವತಿಯಿಂದ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ
  1. Profile at Forbes.com
  2. Chatterjee, Dev (28 ಮಾರ್ಚ್ 2002). "If Govt. can't protect lives, it should go". Mumbai: The Milli Gazette.
  3. Modak, Sadaf (7 ಅಕ್ಟೋಬರ್ 2010). "Alumni go back to school". Hindustan Times. Retrieved 2 ಸೆಪ್ಟೆಂಬರ್ 2015.[ಮಡಿದ ಕೊಂಡಿ]
  4. "Deepak S. Parekh BCom FCA: Executive Profile & Biography". Bloomberg. Retrieved 2 ಸೆಪ್ಟೆಂಬರ್ 2015.
  5. Young, Colin (17 ಏಪ್ರಿಲ್ 2010). "A rich legacy". GAA Accounting. Archived from the original on 4 ಮಾರ್ಚ್ 2016. Retrieved 2 ಸೆಪ್ಟೆಂಬರ್ 2015.