ಕಾರ್ಪೊರೇಟ್ ಕಾನೂನು

ಕಾರ್ಪೊರೇಟ್ ತಂತ್ರಗಾರಿಕೆ ಒಂದು ( "ಕಂಪನಿ"ಅಥವಾ "ಸಂಸ್ಥೆ"ಗಳ ಕಾನೂನು) ಆಧುನಿಕ ಜಗತ್ತಿನಲ್ಲಿರುವ ಅತ್ಯಂತ ಪ್ರಧಾನ ರೀತಿಯ ವ್ಯವಹಾರ ಉದ್ಯಮಗಳ ಕಾನೂನಾಗಿದೆ. ಕಾರ್ಪೊರೇಟ್ ಕಾನೂನು ಎಂಬುದು ಷೇರುದಾರರು, ನಿರ್ದೇಶಕರು, ನೌಕರರು, ಸಾಲದಾತರು, ಹಾಗು ಗ್ರಾಹಕರುಸಮೂದಾಯ ದಂತಹ ಇತರ ಮಧ್ಯಸ್ಥಗಾರರು ಮತ್ತು ಪರಿಸರ , ವ್ಯವಹಾರ ಸಂಸ್ಥೆಯ ಆಂತರಿಕ ನಿಯಮಗಳಡಿಯಲ್ಲಿ ಹೇಗೆ ಪರಸ್ಪರ ಕಾರ್ಯನಿರ್ವಹಿಸುತ್ತಾರೆ ಎನ್ನುವುದರ ಅಧ್ಯಯನವಾಗಿದೆ. ಕಾರ್ಪೊರೇಟ್ ಕಾನೂನು ಎಂಬುದು ದೊಡ್ಡ ಕಂಪನಿಗಳ ಕಾನೂನಿನ ಭಾಗವಾಗಿದೆ(ಅಥವಾ ವ್ಯಾಪಾರ ಸಂಸ್ಥೆಗಳ ಕಾನೂನಾಗಿದೆ). ಇತರ ರೀತಿಯ ವ್ಯಾಪಾರ ಸಂಸ್ಥೆಗಳು ಪಾಲುದಾರಿಕೆಗಳನ್ನು (ಬಹುಪಾಲು ಕಾನೂನು ಸಂಸ್ಥೆ ಗಳಂತೆ), ಅಥವಾ ದತ್ತಿಸಂಸ್ಥೆ (ಪಿಂಚಣಿ ನಿಧಿಯ ರೀತಿ) ಅಥವಾ ಖಾತರಿಯ ಮೇಲೆ ಸೀಮಿತ ಕಂಪನಿಗಳು (ಕೆಲವು ವಿಶ್ವವಿದ್ಯಾನಿಲಯಗಳು ಅಥವಾ ದತ್ತಿಸಂಸ್ಥೆಗಳ ರೀತಿ) ಒಳಗೊಳ್ಳಬಹುದು. ಕಾರ್ಪೊರೇಟ್ ಕಾನೂನು ದೊಡ್ಡ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ, ಇದು ಪ್ರತ್ಯೇಕವಾದ ಕಾನೂನು ಬದ್ಧ ಅಸ್ತಿತ್ವವಾಗಿದ್ದು, ಅದರ ಸದಸ್ಯರು ಅಥವಾ ಷೇರುದಾರರಿಗೆ ಸೀಮಿತ ಹೊಣೆಯ ಪರಿಕಲ್ಪನೆ ಅಥವಾ ಅಪರಿಮಿತ ಹೊಣೆಯ ಪರಿಕಲ್ಪನೆಯನ್ನು ಹೊಂದಿದೆ. ನಿರ್ದೇಶಕರ ಮಂಡಳಿಯ ಕಾರ್ಯವನ್ನು ಅವಲಂಬಿಸಿ ಇವರು ಅವರ ಸ್ಟಾಕ್‌ಗಳನ್ನು ಕೊಂಡುಕೊಳ್ಳುತ್ತಾರೆ ಮತ್ತು ಮಾರಾಟಮಾಡುತ್ತಾರೆ. ಇದು ಸಂಘಟಿತ ಸಂಸ್ಥೆ ಅಥವಾ ಸಂಯುಕ್ತ ಸಂಸ್ಥೆ ಅಥವಾ ಸಾರ್ವಭೌಮ ರಾಷ್ಟ್ರದ ಅಥವಾ ಅದರ ಆಳಿತಾತ್ಮಕ ವಿಭಾಗಗಳ ಕಂಪನಿ ಕಾನೂನಿನಡಿಯಲ್ಲಿ ಸಂಘಟಿತವಾದ ಅಥವಾ ನೊಂದಾಯಿಸಲಾದ ವ್ಯವಹಾರ ಸಂಸ್ಥೆಗಳೊಡನೆ ವ್ಯವಹರಿಸುತ್ತದೆ. ಆಧುನಿಕ ಸಂಸ್ಥೆಯನ್ನು ವ್ಯಾಖ್ಯಾನಿಬಹುದಾದ ನಾಲ್ಕು ಪ್ರಮುಖ ಗುಣಲಕ್ಷಣಗಳು ಈ ಕೆಳಕಂಡಂತಿವೆ:[]

  • ಸಂಸ್ಥೆಯ ಪ್ರತ್ಯೇಕವಾದ ಕಾನೂನು ಬದ್ಧ ವ್ಯಕ್ತಿತ್ವ(ಮೊಕದ್ದಮೆ ಹೂಡುವ ಹಕ್ಕಿರುತ್ತದೆ ಹಾಗು ಅದರದೇ ಹೆಸರಿನಲ್ಲಿ ಮೊಕದ್ದಮೆ ಹೂಡಬಲ್ಲದು, ಉದಾಹರಣೆಗೆ ಕಾನೂನು, ಕಂಪನಿಯನ್ನು ಮನುಷ್ಯನಂತೆ ನಡೆಸಿಕೊಳ್ಳುತ್ತದೆ)
  • ಷೇರುದಾರನ ಸೀಮಿತ ಬಾಧ್ಯತೆ (ಇದರಿಂದಾಗಿ ಕಂಪನಿಯು ದಿವಾಳಿಯಾದಾಗ, ಅವರು ತಮ್ಮ ಹೆಸರಿನಲ್ಲಿರುವ ಷೇರುಗಳಿಗೆ ಮಾತ್ರ ಹಣ ಪಡೆಯುತ್ತಾರೆ.)
  • ಷೇರುಗಳ ವಿನಿಮಯ (ಸಾಮಾನ್ಯವಾಗಿ ಪಟ್ಟಿಮಾಡಲಾದ ಷೇರು ವಿನಿಮಯ ಕೇಂದ್ರದಲ್ಲಿ, ಉದಾಹರಣೆಗೆ ಲಂಡನ್ ಷೇರು ವಿನಿಮಯ, ನ್ಯೂಯಾರ್ಕ್ ಷೇರು ವಿನಿಮಯ ಅಥವಾ ಪ್ಯಾರಿಸ್ ನಲ್ಲಿ ಯುರೊನೆಕ್ಸ್ಟ್)
  • ನಿಯೋಜಿತ ನಿರ್ವಹಣೆ, ಇತರ ಮಾತಿನಲ್ಲಿ ಹೇಳಬೇಕೆಂದರೆ, ಕಂಪನಿಯ ನಿಯಂತ್ರಣವು ನಿರ್ದೇಶಕರ ಮಂಡಳಿಯ ಹಿಡಿತದಲ್ಲಿರುತ್ತದೆ.

ಅಭಿವೃದ್ಧಿ ಹೊಂದಿದ ಬಹುಪಾಲು ರಾಷ್ಟ್ರಗಳಲ್ಲಿ, ಇಂಗ್ಲೀಷ್ ಭಾಷೆಯನ್ನು ಮಾತನಾಡುವ ಪ್ರಪಂಚವನ್ನು ಹೊರತುಪಡಿಸಿ, ಕಂಪನಿಯ ಕಾರ್ಯವಿಧಾನವನ್ನು "ಸಹ ನಿರ್ಧಾರ" ಮಾಡಲು ಕಂಪನಿಯ ಮಂಡಳಿಗಳನ್ನು , ಷೇರುದಾರರ ಮತ್ತು ನೌಕರರ ಪ್ರತಿನಿಧಿಗಳಾಗಿ ನೇಮಿಸಲಾಗುತ್ತದೆ. ಕಾರ್ಪೊರೇಟ್ ಕಾನೂನನ್ನು ಹೆಚ್ಚಾಗಿ ಕಾರ್ಪೊರೇಟ್ ಆಡಳಿತ (ಇದು ಸಂಸ್ಥೆಯೊಳಗಿನ ಅನೇಕ ಅಧಿಕಾರ ವ್ಯವಹಾರಗಳಿಗೆ ಸಂಬಂಧಿಸಿದೆ) ಹಾಗು ಕಾರ್ಪೊರೇಟ್ ಹಣಕಾಸಿನ ಆಡಳಿತ (ಇದು ಬಂಡವಾಳವನ್ನು ಹೇಗೆ ಬಳಸಿಕೊಳ್ಳಬೇಕೆಂಬ ನಿಯಮಗಳಿಗೆ ಸಂಬಂಧಿಸಿದೆ) ವೆಂದು ವಿಂಗಡಿಸಲಾಗುತ್ತದೆ.

ಸಂದರ್ಭಗಳಲ್ಲಿ ಕಾರ್ಪೊರೇಟ್ ಕಾನೂನು

ಬದಲಾಯಿಸಿ

ವ್ಯಾಖ್ಯಾನ

ಬದಲಾಯಿಸಿ

"ಕಾರ್ಪೊರೇಷನ್" ಎಂಬ ಪದವು ಸಾಮಾನ್ಯವಾಗಿ, ಸಾರ್ವಜನಿಕ ಸ್ವಾಮ್ಯದ ದೊಡ್ಡ ಕಂಪನಿಗಳಿಗೆ ಸದೃಶವಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ , ಕಂಪನಿಯು ಪ್ರತ್ಯೇಕವಾದ ಕಾನೂನಿನ ಅಸ್ತಿತ್ವವನ್ನು ಹೊಂದಿರಬಹುದು ಅಥವಾ ಹೊಂದದೇ ಇರಬಹುದು. ಅಲ್ಲದೇ ಇದನ್ನು ಹೆಚ್ಚಾಗಿ "ವ್ಯವಹಾರ ಸಂಸ್ಥೆ" ಅಥವಾ "ವ್ಯವಹಾರ"ಕ್ಕೆ ಸದೃಶವಾಗಿ ಬಳಸಲಾಗುತ್ತದೆ. ಸಂಸ್ಥೆಯನ್ನು ಖಚಿತವಾಗಿ ಕಂಪನಿ ಎನ್ನಬಹುದು; ಆದರೂ, ಕಂಪನಿಯನ್ನು ಸಂಸ್ಥೆ ಎನ್ನಲಾಗುವುದಿಲ್ಲ. ಇದು ವಿಭಿನ್ನವಾದ ಗುಣಲಕ್ಷಣಗಳನ್ನು ಹೊಂದಿದೆ. ಬ್ಲ್ಯಾಕ್ ನ ಕಾನೂನು ಶಬ್ದಕೋಶದ ಪ್ರಕಾರ, U.S. ನಲ್ಲಿ, ಕಂಪನಿ ಎಂದರೆ " ಕೈಗಾರಿಕೆ ಉದ್ಯಮವನ್ನು ನಡೆಸುವ ಒಂದು ಸಂಸ್ಥೆ ಅಥವಾ, ಹೆಚ್ಚು ಸಾಮಾನ್ಯವಾಗಿ ಅಲ್ಲದಿರುವ, ಸಂಘಟನೆ, ಪಾಲುದಾರಿಕೆ ಅಥವಾ ಸಂಘವಾಗಿದೆ"[] ಅದನ್ನು ಸೃಷ್ಟಿಸಿದ ಜನರಿಂದ ಕಾನೂನಿನ ಸ್ವಾತಂತ್ರ್ಯವನ್ನು ಹೊಂದಿರುವುದು ಸಂಸ್ಥೆಯ ಗುಣಲಕ್ಷಣವಾಗಿದೆ. ಒಂದುವೇಳೆ ಸಂಸ್ಥೆ ವಿಫಲವಾದಲ್ಲಿ ,ಅದರ ಷೇರುದಾರರು ಅವರ ಹಣವನ್ನು ಕಳೆದುಕೊಳ್ಳುತ್ತಾರೆ, ಹಾಗು ನೌಕರರು ಅವರ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆದರೂ, ಮೇಲ್ವರ್ಗದ ಕಾರ್ಯನಿರ್ವಾಹಕರಿಗಿಂತ ಅದರ ನೌಕರರ ಮೇಲೆ ಏರುಪೇರು ಪರಿಣಾಮವನ್ನು ಬೀರುತ್ತದೆ. ಆದರೂ, ಕಂಪನಿಯ ಒಂದು ಭಾಗವನ್ನು ಹೊಂದಿರುವ ಷೇರುದಾರರು, ಸಂಸ್ಥೆಯು ಸಾಲದಾತರಿಗೆ ಕೊಡಬೇಕಾದ ಸಾಲಗಳಿಗೆ ಜವಾಬ್ದಾರರಾಗಿರುವುದಿಲ್ಲ. ಈ ನಿಯಮವನ್ನು ಸೀಮಿತ ಹೊಣೆ ಎಂದು ಕರೆಯಲಾಗುತ್ತದೆ, ಅದ್ದರಿಂದ ಸಂಸ್ಥೆಗಳು "Ltd." ನಿಂದ ಕೊನೆಗೊಳ್ಳುತ್ತವೆ (ಅಥವಾ "Inc." ಮತ್ತು "plc" ಯಂತಹ ಕೆಲವು ಪ್ರಯೋಗಗಳು). ಬ್ರಿಟಿಷ್ ನ್ಯಾಯಾಧೀಶನಾದ, ವಾಲ್ಟನ್ J ಯವರ ಮಾತಿನಲ್ಲಿ, ಕಂಪನಿ ಎಂದರೆ...

"...ಕೇವಲ ಕಲ್ಪನೆಯ ನ್ಯಾಯಶಾಸ್ತ್ರದ ಕಲ್ಪಿತಹೇಳಿಕೆಯಾಗಿದೆ, ಇದರಲ್ಲಿ ಒದೆಯಲು ಯಾವುದೇ ದೇಹವಿರುವುದಿಲ್ಲ ಮತ್ತು ಖಂಡಿಸಲು ಆತ್ಮವಿರುವುದಿಲ್ಲ".[]

ಆದರೆ ಇದರ ಹೊರತಾಗಿಯೂ, ಸಂಸ್ಥೆಗಳಿಗೆ ವಾಸ್ತವ ಮನುಷ್ಯರಂತೆ ಹಕ್ಕನ್ನು ಮತ್ತು ಜವಾಬ್ದಾರಿಯನ್ನು ಹೊಂದಲು ಕಾನೂನು ಮನ್ನಣೆ ನೀಡಿದೆ. ಸಂಸ್ಥೆಗಳು,ನಿಜವಾದ ವ್ಯಕ್ತಿಯ ಮೇಲೆ ಮತ್ತು ರಾಷ್ಟ್ರದ ಮೇಲೆ ಮಾನವ ಹಕ್ಕುಗಳನ್ನು ಬಳಸಬಹುದಾಗಿವೆ ,[] ಅಲ್ಲದೇ ಅವು ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಜವಾಬ್ದಾರರಾಗಬಲ್ಲವು.[] ಯಾವ ರೀತಿ ಅವುಗಳ ಸದಸ್ಯರು ಸಂಸ್ಥೆಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವ ಮೂಲಕ ಅಸ್ತಿತ್ವದ "ಜನ್ಮ" ತಳೆಯುತ್ತದೆಯೇ, ಹಾಗೇ ದಿವಾಳಿತನ ದಲ್ಲಿ ಅವು ಹಣವನ್ನು ಕಳೆದುಕೊಂಡಾಗ "ಸಾಯಬಹುದು". ಸಂಸ್ಥೆಗಳ ಮೇಲೆ, ವಂಚನೆ ಮತ್ತು ನರಹತ್ಯೆ ಯಂತಹ ಕಾನೂನುಬಾಹಿರ ಚಟುವಟಿಕೆಗಳಿಗೂ ಶಿಕ್ಷೆವಿಧಿಸಬಹುದಾಗಿದೆ.[]

ಇತಿಹಾಸ

ಬದಲಾಯಿಸಿ
 
ಎಡ್ವರ್ಡ್ ಮ್ಯಾಥ್ಯು ವಾರ್ಡ್ ಟೆಟ್ ಗ್ಯಾಲರಿಯ ಮೂಲಕ, ಸೌತ್ ಸಿ ಬಬಲ್ ನ ಹೋಗಾರ್ಥಿಯನ್ ರೂಪ

ಆದರೂ ಕೆಲವು ರೀತಿಯ ಕಂಪನಿಗಳು ಪ್ರಾಚೀನ ರೋಮ್ ಮತ್ತು ಪ್ರಾಚೀನ ಗ್ರೀಸ್ ನಲ್ಲಿ ಇದ್ದವು ಎಂದು ಹೇಳಲಾಗಿದೆ. ಆಧುನಿಕ ಕಂಪನಿಯ ಅತ್ಯಂತ ಸಮೀಪದ ಪೂರ್ವಿಕರು ಎಂದು ಗುರುತಿಸಬಹುದಾದುದು ಎರಡನೆ ಸಹಸ್ರಮಾನದವರೆಗೆ ಕಂಡುಬಂದಿಲ್ಲ. ಗುರುತಿಸಬಹುದಾದ ಮೊದಲನೆಯ ವಾಣಿಜ್ಯ ಸಂಘಟನೆಗಳು ಮಧ್ಯಯುಗದ ಸಮಾನೋದ್ದೇಶ ಸಂಘಗಳಾಗಿವೆ. ಇಲ್ಲಿ ಸಂಘದ ಸದಸ್ಯರು ಸಂಘದ ನಿಯಮಗಳಿಗೆ ಬದ್ಧವಾಗಿರಲು ಒಪ್ಪಿಕೊಂಡಿದ್ದರು. ಆದರೆ ಸಮಾನ ಲಾಭಕ್ಕಾಗಿ ಸಾಹಸೋದ್ಯಮಗಳಲ್ಲಿ ಭಾಗವಹಿಸಲಿಲ್ಲ. ಲೆಕ್ಸ್ ಮೆರ್ಕ್ಯಾಟೋರಿಯ (ವ್ಯಾಪಾರಿ ಕಾನೂನು)ದಡಿಯಲ್ಲಿ ಜಂಟಿ ವಾಣಿಜ್ಯ ಉದ್ಯಮದ ಹಿಂದಿನ ರೂಪಗಳೆಂದರೆ ಪಾಲುದಾರಿಕೆಗಳಾಗಿವೆ. ಆದರೆ ಅಂತಾರಾಷ್ಟ್ರೀಯ ವಾಣಿಜ್ಯದ ವಿಸ್ತರಣೆಯೊಂದಿಗೆ ಯುರೋಪ್ (ಇಂಗ್ಲೆಂಡ್ ಮತ್ತು ಹಾಲೆಂಡ್ನಲ್ಲಿ ಗಣನೀಯವಾಗಿ) ನಲ್ಲಿ ರಾಜ ಸನ್ನದನ್ನುವ್ಯಾಪಾರ ಸಾಹಸೋದ್ಯಮಕ್ಕೆ ನೀಡಲಾಯಿತು. ರಾಜ ಸನ್ನದು, ಸಾಮಾನ್ಯವಾಗಿ ವ್ಯಾಪಾರ ಕಂಪನಿಗಳ ಮೇಲೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ (ಸಾಮಾನ್ಯವಾಗಿ ಏಕಸ್ವಾಮ್ಯತೆಯ ಕೆಲವು ರೂಪವನ್ನು ಒಳಗೊಂಡಂತೆ). ಮೂಲತಃ, ಈ ಸಂಸ್ಥೆಗಳಲ್ಲಿ ವ್ಯಾಪಾರಿಗಳು ಅವರ ಜವಾಬ್ದಾರಿಯ ಮೇಲೆ ಸ್ಟಾಕ್ ಗಳ ವ್ಯಾಪಾರಮಾಡುತ್ತಿದ್ದರು. ಆದರೆ ನಂತರ ಜಂಟಿ ಸ್ಟಾಕ್‌ನೊಂದಿಗೆ ಜಂಟಿ ಖಾತೆಯನ್ನು ನಿರ್ವಹಿಸಲು ಸದಸ್ಯರು ಮುಂದಾದರು. ಅಲ್ಲದೇ ಹೊಸ ಜಾಯಿಂಟ್ ಸ್ಟಾಕ್ ಕಂಪನಿ(ಕೂಡು ಬಂಡವಾಳದ ಕಂಪನಿಯು) ಉದಯಿಸಿತು.[] ಮೊದಲಿನ ಕಂಪನಿಗಳು ಸಂಪೂರ್ಣವಾಗಿ ಆರ್ಥಿಕ ಸಾಹಸೋದ್ಯಮಗಳಾಗಿದ್ದವು; ಕೂಡು ಬಂಡವಾಳವನ್ನು ಹೊಂದುವುದರಿಂದ ಪಡೆಯಬಹುದಾದ ಲಾಭವೆಂದರೆ ಕಂಪನಿಯ ಷೇರುಗಳನ್ನು ಕೇವಲ ಒಬ್ಬ ಸದಸ್ಯನ ಸಾಲಗಳಿಗಾಗಿ ವಶಪಡಿಸಿಕೊಳ್ಳುವಂತಿರಲಿಲ್ಲ ಎಂಬುದನ್ನು ಅವರು ತಡವಾಗಿ ಅರಿತುಕೊಂಡರು.[] ಯುರೋಪ್ ನಲ್ಲಿ ಕಂಪನಿ ಕಾನೂನಿನ ಬೆಳವಣಿಗೆಗೆ, ಎರಡು ಕುಖ್ಯಾತ "ಆರ್ಥಿಕ ನೀರ್ಗುಳ್ಳೆಗಳಿಂದ" (ಇಂಗ್ಲೆಂಡ್ ನಲ್ಲಿ ಸೌತ್ ಸಿ ಬಬಲ್ ಹಾಗು ಹಾಲೆಂಡ್ ನಲ್ಲಿ ಟುಲಿಪ್ ಬಲ್ಬ್ ಬಬಲ್)ನಿಂದ 17 ನೇ ಶತಮಾನದಲ್ಲಿ ಅಡ್ಡಿಯಾಯಿತು. ಇದರಿಂದಾಗಿ ಎರಡು ಪ್ರಮುಖ ಅಧಿಕಾರವ್ಯಾಪ್ತಿಗಳಲ್ಲಿ ಕಂಪನಿಗಳ ಅಭಿವೃದ್ಧಿಯು ಒಂದು ಶತಮಾನಕ್ಕೂ ಹೆಚ್ಚು ಕಾಲ ಜನಪ್ರಿಯ ಅಂದಾಜಿನಂತೆ ಕುಸಿಯಿತು.

ಆದರೆ ಕಂಪನಿಗಳು, ಬಹುಪಾಲು ಅನಿವಾರ್ಯವಾಗಿ, ವ್ಯಾಪಾರದ ಮುಂಚೂಣಿಗೆ ಮರಳಿದವು. ಆದರೂ, ಇಂಗ್ಲೆಂಡ್ ನಲ್ಲಿ ಬಬಲ್ ಕಾಯ್ದೆ 1720 ರಿಂದ ಪಾರಾಗಲು ಬಂಡವಾಳದಾರರು ಅಸಂಘಟಿತ ಸಂಸ್ಥೆಗಳ ಸ್ಟಾಕನ್ನು ವ್ಯಾಪಾರ ಮಾಡಲಾರಂಭಿಸಿದರು. 1825 ರಲ್ಲಿ ಇದನ್ನು ರದ್ದುಮಾಡುವವರೆಗು ಮುಂದುವರೆಯಿತು. ರಾಜ ಸನ್ನದ್ದನ್ನು ಪಡೆಯುವ ಬಹು ತೊಡಕಿನ ಪ್ರಕ್ರಿಯೆಯು ಬೇಡಿಕೆಯನ್ನು ಉಳಿಸಿಕೊಳ್ಳಲು ಸಾಕಾಗಲಿಲ್ಲ. ಇಂಗ್ಲೆಂಡ್ ನಲ್ಲಿ ನಿಷ್ಕ್ರಿಯವಾಗಿದ್ದ ಕಂಪನಿಗಳ ಸನ್ನದುಗಳ ವ್ಯವಹಾರದಲ್ಲಿ ಒಂದು ಉತ್ಸಾಹಪೂರ್ಣ ವ್ಯಾಪಾರ ನಡೆಯಿತು. ಆದಾಗ್ಯೂ, ಕಾನೂನಿನಿಂದ ನುಣುಚಿಕೊಳ್ಳುವ ಕ್ರಿಯೆಯಿಂದ ಇಂಗ್ಲೆಂಡ್ ನಲ್ಲಿ ಕೂಡು ಬಂಡವಾಳ ಕಂಪನಿಗಳ ಕಾಯ್ದೆ 1844ಯ ನಂತರವೇ ನೊಂದಾವಣೆಯಿಂದ ರಚಿತವಾದ ಆಧುನಿಕ ಕಂಪನಿಗಳಿಗೆ ಸಮನಾದ ಮೊದಲನೆಯ ಕಂಪನಿ ಕಂಡುಬಂದಿತು. ಸೀಮಿತ ಹೊಣೆ ಕಾಯ್ದೆ 1855, ಬಂದ ಸ್ವಲ್ಪ ಕಾಲದ ನಂತರ, ಕಂಪನಿಯು ದಿವಾಳಿಯಾದಲ್ಲಿ ಎಲ್ಲಾ ಷೇರುದಾರರು ಹೂಡಿದ ಬಂಡವಾಳದ ಮೊತ್ತದ ಮೇಲೆ ಅವರ ಬಾಧ್ಯತೆಯನ್ನು ಸೀಮಿತಗೊಳಿಸಿತು. ಆಧುನಿಕ ಕಂಪನಿ ಕಾನೂನಿನ ಆರಂಭವು , ಕಾನೂನಿನ ಎರಡು ಭಾಗಗಳನ್ನು ಕೂಡು ಬಂಡವಾಳ ಕಂಪನಿಗಳ ಕಾಯ್ದೆ 1856 ರ ರಡಿಯಲ್ಲಿ ಕ್ರೋಡೀಕರಿಸಿದಾಗ ಬಂದಿತು. ಇದು ವಾಣಿಜ್ಯ ಮಂಡಳಿಯ ನಂತರದ ಉಪಾಧ್ಯಕ್ಷರಾದ, Mr ರಾಬರ್ಟ್ ಲೊವೆಯ ಪ್ರೇರಣೆ ಮೇಲೆ ನಡೆಯಿತು. ಈ ಕಾನೂನು ಅತಿ ಶೀಘ್ರದಲ್ಲೇ ರೈಲ್ವೇ ಅಭಿವೃದ್ಧಿಗೆ ಅನುವುಮಾಡಿಕೊಟ್ಟಿತು. ಅಲ್ಲದೇ ಅಲ್ಲಿಂದ ರಚನೆಯಾದ ಕಂಪೆನಿಗಳ ಸಂಖ್ಯೆ ಏರುಗತಿಯಲ್ಲಿತ್ತು. ಹತ್ತೊಂಭತ್ತನೆ ಶತಮಾನದ ಉತ್ತರಾರ್ಧದಲ್ಲಿ ಆರ್ಥಿಕ ಹಿಂಜರಿಕೆಯುಂಟಾಯಿತು. ಅಲ್ಲದೇ ಕಂಪನಿಯ ಸಂಖ್ಯೆಗಳು ಹೆಚ್ಚುತ್ತಾ ಹೋದಂತೆ ಅನೇಕ ಕಂಪನಿಗಳು ಅಂತಃಸ್ಫೋಟಗೊಂಡು ದಿವಾಳಿಯಾದವು. ಶೈಕ್ಷಣಿಕ, ಶಾಸಕಾಂಗ ಮತ್ತು ನ್ಯಾಯಾಂಗದ ಅತ್ಯಂತ ಪ್ರಬಲವಾದ ಅಭಿಪ್ರಾಯದಲ್ಲಿ, ವ್ಯವಹಾರಗಳು ವೈಫಲ್ಯ ಅನುಭವಿಸಿದರೆ ಉದ್ಯಮಿಗಳು ಹೊಣೆಗಾರಿಕೆಯಿಂದ ಪಾರಾಗಬಹುದೆಂಬ ಕಲ್ಪನೆಯನ್ನು ವಿರೋಧಿಸಿದವು. ಕಂಪನಿಗಳ ಇತಿಹಾಸದಲ್ಲಿ ನಡೆದ ಪ್ರಧಾನವಾದ ಅಂತಿಮ ಬೆಳವಣಿಗೆ ಎಂದರೆ ಸಲೊಮನ್ v. ಸಲೊಮನ್ & Co. ನಲ್ಲಿ ಹೌಸ್ ಆಫ್ ಲಾರ್ಡ್ಸ್ ಗಳ ತೀರ್ಮಾನವಾಗಿದೆ. ಇಲ್ಲಿ ಹೌಸ್ ಆಫ್ ಲಾರ್ಡ್ಸ್ ಕಂಪನಿಯ ಪ್ರತ್ಯೇಕವಾದ ಕಾನೂನು ಬದ್ಧ ಅಸ್ತಿತ್ವವನ್ನು ಧೃಢಪಡಿಸಿತು ಹಾಗು ಕಂಪನಿಯ ಈ ಬಾಧ್ಯತೆಗಳು ಅದರ ಮಾಲೀಕರ ಬಾಧ್ಯತೆಗಳಿಗಿಂತ ಪ್ರತ್ಯೇಕವಾಗಿದ್ದವು ಮತ್ತು ಭಿನ್ನವಾಗಿದ್ದವು. 2006 ರ ಡಿಸೆಂಬರ್ ಲೇಖನದಲ್ಲಿ, ದಿ ಎಕನಾಮಿಸ್ಟ್ ಕೂಡು ಬಂಡವಾಳ ಕಂಪನಿಯ ಬೆಳವಣಿಗೆಯನ್ನು ಪುನರುದಯನಂತರದ ಯುಗದಲ್ಲಿ, ಮಧ್ಯಪ್ರಾಚ್ಯದಲ್ಲಿ ಪಶ್ಚಿಮದ ವಾಣಿಜ್ಯವು ಅದರ ಪ್ರತಿಸ್ಪರ್ಧಿಗಳನ್ನು ಮೀರಿ ಮುಂದುವರೆಯಲು ಮುಖ್ಯ ಕಾರಣವೆಂದು ಗುರುತಿಸಿತು.[] ಯಾರು ಆರಂಭಿಕ ಕೈಗಾರಿಕೀಕರಣದ ಪರಿಣಾಮಗಳನ್ನು ಕಡಿಮೆ ಎಂದು ಭಾವಿಸುವಂತಿಲ್ಲ.[ಸಾಕ್ಷ್ಯಾಧಾರ ಬೇಕಾಗಿದೆ]

ಕಾರ್ಪೊರೇಟ್ ವ್ಯಕ್ತಿತ್ವ

ಬದಲಾಯಿಸಿ

ಸಂಸ್ಥೆಗಳ ಅತ್ಯಂತ ಪ್ರಮುಖವಾದ ಗುಣಲಕ್ಷಣಗಳಲ್ಲಿ ಒಂದು ಪ್ರತ್ಯೇಕವಾದ ಕಾನೂನು ಬದ್ಧ ವ್ಯಕ್ತಿತ್ವವಾಗಿದೆ. ಇದನ್ನು , "ವ್ಯಕ್ತಿತನ" ಅಥವಾ "ಕೃತಕ ಮನುಷ್ಯರು" ಎಂದು ಕೂಡ ಕರೆಯಲಾಗುತ್ತದೆ. ಆದರೂ, ಪ್ರತ್ಯೇಕವಾದ ಕಾನೂನು ಬದ್ಧ ವ್ಯಕ್ತಿತ್ವವನ್ನು ಸಲೊಮನ್ v. ಸಲೊಮನ್ & Co. ಪ್ರಕರಣದಲ್ಲಿ ಹೌಸ್ ಆಫ್ ಲಾರ್ಡ್ಸ್ 1895ರಲ್ಲಿ ನಿರ್ಧರಿಸುವವರೆಗೂ, ಇದು ಇಂಗ್ಲೀಷ್ ಕಾನೂನಿನಡಿಯಲ್ಲಿ ದೃಢ ಪಟ್ಟಿರಲಿಲ್ಲ.[೧೦] ಪ್ರತ್ಯೇಕವಾದ ಕಾನೂನು ಬದ್ಧ ವ್ಯಕ್ತಿತ್ವವು ವಿಶೇಷವಾಗಿ ಚಿಕ್ಕ ಕೌಟುಂಬಿಕ ಕಂಪನಿಗಳಿಗೆ ಸಂಬಂಧಿಸಿದಂತೆ ಅಸಂಕಲ್ಪಿತ ಪರಿಣಾಮಗಳನ್ನು ಒಳಗೊಂಡಿತ್ತು. ಇದು B v. B [1978] ಫ್ಯಾಮ್ 181 ನಲ್ಲಿ ಪತಿಯ ವಿರುದ್ಧ ಪತ್ನಿಯು ಪಡೆದ ದಾಖಲೆಗಳ ಹಾಜರಾತಿ ಆದೇಶವು ಆಕೆಯ ಪತಿಯ ಕಂಪನಿಯ ವಿರುದ್ಧ ಪರಿಣಾಮಕಾರಿಯಾಗಿರಲಿಲ್ಲ. ಏಕೆಂದರೆ ಆದೇಶದಲ್ಲಿ ಕಂಪನಿಯನ್ನು ಹೆಸರಿಸಿರಲಿಲ್ಲ ಹಾಗೂ ಅದು ಪ್ರತ್ಯೇಕವಾಗಿತ್ತು ಮತ್ತು ಅವನ ಹೆಸರಿಗಿಂತ ಭಿನ್ನವಾಗಿತ್ತು.[೧೧] ಅಲ್ಲದೇ ಮ್ಯಾಕಾರಾ v. ನಾರ್ಧನ್ ಅಶುರೆನ್ಸ್ Co Ltd [೧೨] ಪ್ರಕರಣದಲ್ಲಿ ವಿಮಾ ಪಾಲಿಸಿಯ ಅನ್ವಯ ಕೋರಿಕೆ ವಿಫಲವಾಯಿತು. ಏಕೆಂದರೆ, ವಿಮಾದಾರನು ಅವನ ಹೆಸರಿನಲ್ಲಿದ್ದ ಮರದ ದಿಮ್ಮಿಗಳ ಮಾಲೀಕತ್ವವನ್ನು ಅವನೇ ನಡೆಸುತ್ತಿದ್ದ ಕಂಪನಿಯ ಹೆಸರಿಗೆ ವರ್ಗಾವಣೆ ಮಾಡಿದ್ದ. ಅನಂತರ ಈ ಮರದ ದಿಮ್ಮಿಗಳು ಬೆಂಕಿಯಿಂದಾಗಿ ನಾಶವಾದವು; ಈಗ ಆಸ್ತಿಯು ಕಂಪನಿಗೆ ಸೇರುತ್ತದೆಯೇ ಹೊರತು ಅವನಿಗೆ ಸೇರುವುದಿಲ್ಲ, ಆದ್ದರಿಂದ ಅವನು ಕಂಪನಿಯಲ್ಲಿ "ವಿಮಾಯೋಗ್ಯ ಹಿತಾಸಕ್ತಿ"ಯನ್ನು ಹೊಂದಿಲ್ಲವಾದ್ದರಿಂದ ಅವನ ಕೋರಿಕೆ ವಿಫಲವಾಯಿತು. ಆದರೂ, ತೆರಿಗೆ ಯೋಜನೆಗೆ ಸಂಬಂಧ ಪಟ್ಟಂತೆ ಪ್ರತ್ಯೇಕವಾದ ಕಾನೂನು ಬದ್ಧ ವ್ಯಕ್ತಿತ್ವವು , ಕಾರ್ಪೊರೇಟ್ ಸಮೂಹಗಳಿಗೆ ಹೆಚ್ಚಿನ ನಮ್ಯತೆಯ ಅವಕಾಶವನ್ನು ನೀಡಿದೆ. ಅಲ್ಲದೇ ಬಹುರಾಷ್ಟ್ರೀಯ ಕಂಪನಿಗಳು ಅವುಗಳ ಕಡಲಾಚೆಯ ಕಾರ್ಯಾಚರಣೆಗಳ ಬಾಧ್ಯತೆಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿವೆ. ಉದಾಹರಣೆಗೆ, ಆಡಮ್ಸ್ v. ಕೇಪ್ ಇಂಡಸ್ಟ್ರೀಸ್ plc [೧೩] ನಲ್ಲಿ ಈ ಕೆಳಕಂಡ ಘಟನೆ ನಡೆಯಿತು. ಅಮೇರಿಕನ್ ಅಂಗಸಂಸ್ಥೆಯಿಂದ ಆಸ್‌ಬೆಸ್ಟಸ್ ವಿಷಕ್ಕೆ ಬಲಿಪಶುವಾದರು ವೈಯಕ್ತಿಕ ಅಪರಾಧದಲ್ಲಿ ಇಂಗ್ಲೀಷ್ ಮೂಲದ ಮಾತೃ ಸಂಸ್ಥೆಯ ಮೇಲೆ ಮೊಕದ್ದಮೆಯನ್ನು ಹೂಡಲಾಗಲಿಲ್ಲ. ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸಾಮಾನ್ಯವಾಗಿ ಪ್ರತ್ಯಕ್ಷರೂಪವಾಗಿ ನೋಡಲು "ಕಾರ್ಪೊರೇಟ್ ನ ಪರದೆಯನ್ನು ಭೇದಿಸಲು" ತಯಾರಾಗಿರುತ್ತವೆ. ಕಂಪನಿಯ ಹಿಂದಿರುವ ವ್ಯಕ್ತಿಯ ಮೇಲೆ ನೇರವಾಗಿ ಜವಾಬ್ದಾರಿಗಳನ್ನು ಹೇರುತ್ತವೆ. ಹೆಚ್ಚಾಗಿ ಉಲ್ಲೇಖಿಸಲಾದ ಉದಾಹರಣೆಗಳು ಈ ಕೆಳಕಂಡಂತಿವೆ:

  • ಕಂಪನಿಯು ಕೇವಲ ತೋರಿಕೆಗೆ ಮಾತ್ರವಾಗಿದ್ದಾಗ
  • ಕಂಪನಿಯು ಕೇವಲ ಸದಸ್ಯರ ಅಥವಾ ನಿಯಂತ್ರಕರ ಪರಿಣಾಮಕಾರಿ ಪ್ರತಿನಿಧಿ ಮಾತ್ರವಾಗಿದ್ದಾಗ.
  • ಕಂಪನಿಯ ಪ್ರತಿನಿಧಿ ಹೇಳಿಕೆಗಾಗಿ ಅಥವಾ ಕಾರ್ಯಕ್ಕಾಗಿ ಕೆಲವು ವೈಯಕ್ತಿಯ ಜವಾಬ್ದಾರಿಗಳನ್ನು ತೆಗೆದುಕೊಂಡಾಗ[೧೪]
  • ಕಂಪನಿಯು ವಂಚನೆ ಅಥವಾ ಇತರ ಅಪರಾಧಗಳಲ್ಲಿ ತೊಡಗಿದಾಗ,
  • ಸಹಜವಾಗಿ ಒಪ್ಪಂದ ಅಥವಾ ಕಾಯಿದೆಯ ಸಾಮಾನ್ಯ ವ್ಯಾಖ್ಯಾನವು ಕಾರ್ಪೊರೇಟ್ ಸಮೂಹವನ್ನು ಉಲ್ಲೇಖಿಸಿದೆ, ಆದರೆ ವೈಯಕ್ತಿಕ ಕಂಪನಿಯನ್ನಲ್ಲ.
  • ಕಾಯಿದೆಯ ಅನುಮತಿ ಪಡೆದಿದ್ದಾಗ (ಉದಾಹರಣೆಗೆ, ಕಂಪನಿಯು ಪರಿಸರ ರಕ್ಷಣೆ ಕಾನೂನುಗಳನ್ನು ಉಲ್ಲಂಘಿಸಿದಾಗ, ಷೇರುದಾರನ ಬಾಧ್ಯತೆಗಳನ್ನು ಅನೇಕ ನ್ಯಾಯಾಧಿಕಾರಗಳು ಒದಗಿಸುತ್ತವೆ.)
  • ಅನೇಕ ಅಧಿಕಾರವ್ಯಾಪ್ತಿಗಳಲ್ಲಿ ಕಂಪನಿಯು ಅನಿವಾರ್ಯವಾದ ದಿವಾಳಿತನದ ಹೊರತಾಗಿಯೂ ವ್ಯಾಪಾರವನ್ನು ಮುಂದುವರೆಸಿದಲ್ಲಿ, ನಿರ್ದೇಶಕರು ವೈಯಕ್ತಿಕವಾಗಿ ವ್ಯಾಪಾರದ ನಷ್ಟಗಳಿಗೆ ಕಾರಣ ನೀಡಬೇಕಾಗುತ್ತದೆ.

ಸಾಮರ್ಥ್ಯ ಮತ್ತು ಅಧಿಕಾರಗಳು

ಬದಲಾಯಿಸಿ

ಐತಿಹಾಸಿಕವಾಗಿ ಕಂಪನಿಗಳು, ಕಾನೂನಿನ ಕಾರ್ಯಾಚರಣೆಯಿಂದ ಸೃಷ್ಟಿಸಲಾದ ಕೃತಕ(ಕಲ್ಪಿತ) ಮನುಷ್ಯರಾಗಿರುವುದರಿಂದ, ಕಂಪನಿ ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಕಾನೂನು ಸೂಚಿಸುತ್ತದೆ. ಸಾಮಾನ್ಯವಾಗಿ ಇದು ವಾಣಿಜ್ಯ ಉದ್ದೇಶದ ಅಭಿವ್ಯಕ್ತಿಯಾಗಿದೆ. ಇದನ್ನು ಕಂಪನಿಯ ಉದ್ದೇಶ ಗಳು ಎಂದು ಉಲ್ಲೇಖಿಸಲಾಗಿದೆ ಹಾಗು ಈ ಉದ್ದೇಶಗಳ ವ್ಯಾಪ್ತಿಯು ಕಂಪನಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಒಂದು ಕಾರ್ಯವು ಕಂಪನಿಯ ಸಾಮರ್ಥ್ಯದಿಂದ ಹೊರತಾಗಿದ್ದರೆ ಇದನ್ನು ಅಲ್ಟ್ರಾ ವೈರ್ಸ್ ಮತ್ತು ವಾಯ್ಡ್ ಎಂದು ಕರೆಯಲಾಗುತ್ತದೆ. ವಿಶಿಷ್ಟ ಅರ್ಥದಲ್ಲಿ, ಕಂಪನಿಯ ವಿಭಾಗಗಳನ್ನು ವಿವಿಧ ಕಾರ್ಪೊರೇಟ್ ಅಧಿಕಾರ ಗಳೊಂದಿಗೆ ಅಭಿವ್ಯಕ್ತಿಸಲಾಗಿದೆ. ಉದ್ದೇಶಗಳು, ಕಂಪನಿಯು ಸಾಧಿಸಲು ಸಾಧ್ಯವಾದ ವಸ್ತುವಾಗಿದ್ದರೆ, ಅಧಿಕಾರಗಳು ಅದನ್ನು ಸಾಧಿಸಲು ಬೇಕಾದ ಸಾಧನವಾಗಿದೆ. ಸಾಮಾನ್ಯವಾಗಿ ಅಧಿಕಾರಗಳ ಅಭಿವ್ಯಕ್ತಿಗಳು ಬಂಡವಾಳವನ್ನು ಹೆಚ್ಚಿಸುವ ವಿಧಾನಗಳಿಗೆ ಸೀಮಿತವಾಗಿರುತ್ತದೆ, ಆದರೂ ಮುಂಚಿನ ಕಾಲದಿಂದ ಉದ್ದೇಶಗಳು ಮತ್ತು ಅಧಿಕಾರಗಳ ನಡುವಿನ ವ್ಯತ್ಯಾಸವು ವಕೀಲರಿಗೆ ತೊಂದರೆ ಉಂಟುಮಾಡಿದೆ.[೧೫] ಬಹುಪಾಲು ಅಧಿಕಾರವ್ಯಾಪ್ತಿಗಳು ಈಗ ಕಾನೂನಿನ ಮೂಲಕ ಸ್ಥಿತಿಯನ್ನು ಸುಧಾರಿಸಿವೆ. ಅಲ್ಲದೇ ಒಬ್ಬ ಸಹಜವಾದ ವ್ಯಕ್ತಿ ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಕಂಪನಿಗಳು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಅಷ್ಟೇ ಅಲ್ಲದೇ ಒಬ್ಬ ಸಹಜವಾದ ವ್ಯಕ್ತಿ ಅದನ್ನು ಮಾಡಬಹುದಾದ ರೀತಿಯಲ್ಲೆ ಕಂಪನಿಗಳು ಕೂಡ ನಿರ್ವಹಿಸಬಲ್ಲ ಶಕ್ತಿಯನ್ನು ಹೊಂದಿವೆ. ಆದರೂ,ಕಾರ್ಪೊರೇಟ್ ಸಾಮರ್ಥ್ಯ ಮತ್ತು ಅಧಿಕಾರಗಳ ಉಲ್ಲೇಖನಗಳನ್ನು ಕಾನೂನು ಇತಿಹಾಸದ ಕಸದ ಬುಟ್ಟಿಯಲ್ಲಿ ಹಾಕಲಾಗಿಲ್ಲ. ಅನೇಕ ಅಧಿಕಾರವ್ಯಾಪ್ತಿಗಳಲ್ಲಿ, ನಿರ್ದೇಶಕರು ಅವರ ಉದ್ದೇಶದ ಹೊರತಾಗಿ ಕಂಪನಿಯನ್ನು ಇತರ ವ್ಯವಹಾರದಲ್ಲಿ ತೊಡಗಿಸಿದಾಗ ಹಾಗು ಕಂಪನಿ ಮತ್ತು ಮೂರನೆಯ ಪಕ್ಷದ ನಡುವೆಯ ವ್ಯವಹಾರವು ಕ್ರಮಬದ್ಧವಾಗಿದ್ದರೂ, ನಿರ್ದೇಶಕರು ಅವರ ಷೇರುದಾರರಿಗೆ ಬಾಧ್ಯಸ್ಥರಾಗಿರುತ್ತಾರೆ. ಅಲ್ಲದೇ ಅನೇಕ ಅಧಿಕಾರವ್ಯಾಪ್ತಿಗಳು "ಕಾರ್ಪೊರೇಟ್ ಹಿತಾಸಕ್ತಿ" ಕೊರತೆಗಾಗಿ ವ್ಯವಹಾರಗಳನ್ನು ಪ್ರಶ್ನಿಸಲು ಅನುಮತಿ ನೀಡುತ್ತವೆ. ಇಲ್ಲಿ ಪ್ರಸಕ್ತ ವ್ಯವಹಾರವು ಕಂಪನಿಯ ಅಥವಾ ಅದರ ಷೇರುದಾರನ ವಾಣಿಜ್ಯ ಹಿತಾಸಕ್ತಿಯ ಉದ್ದೇಶವನ್ನು ಹೊಂದಿರುವುದಿಲ್ಲ. ಕೃತಕ ವ್ಯಕ್ತಿಗಳಂತೆ, ಕಂಪನಿಗಳು ಕೇವಲ ಮಾನವ ಪ್ರತಿನಿಧಿಗಳ ಮೂಲಕವೇ ಕಾರ್ಯ ನಿರ್ವಹಿಸಬಲ್ಲವು. ನಿರ್ದೇಶಕರ ಮಂಡಳಿಯು ಕಂಪನಿಯ ಆಡಳಿತವನ್ನು ಮತ್ತು ವ್ಯವಹಾರವನ್ನು ನೋಡಿಕೊಳ್ಳುವ ಪ್ರಧಾನ ಪ್ರತಿನಿಧಿಯಾಗಿದೆ. ಆದರೆ ಅನೇಕ ಅಧಿಕಾರವ್ಯಾಪ್ತಿಗಳಲ್ಲಿ ಇತರ ಅಧಿಕಾರಿಗಳನ್ನು ನೇಮಿಸಬಹುದಾಗಿದೆ. ನಿದೇಶಕರ ಮಂಡಳಿಯನ್ನು ಸಾಮಾನ್ಯವಾಗಿ ಸದಸ್ಯರು ಆಯ್ಕೆ ಮಾಡುತ್ತಾರೆ ಹಾಗು ಇತರ ಅಧಿಕಾರಿಗಳನ್ನು ಸಾಮಾನ್ಯವಾಗಿ ಮಂಡಳಿ ನೇಮಿಸುತ್ತದೆ. ಈ ಪ್ರತಿನಿಧಿಗಳು ಕಂಪನಿಯ ಪರವಾಗಿ ಮೂರನೆ ಪಕ್ಷಗಳೊಂದಿಗೆ ಒಪ್ಪಂದಕ್ಕೆ ಸಹಿಹಾಕುತ್ತಾರೆ. ಆದರೂ ಕಂಪನಿಯ ಪ್ರತಿನಿಧಿಗಳು, (ಮತ್ತು, ಪರೋಕ್ಷವಾಗಿ, ಷೇರುದಾರರಿಗೆ) ಈ ಅಧಿಕಾರಗಳನ್ನು ಸರಿಯಾದ ಉದ್ದೇಶಗಳಿಗೆ ಬಳಸುವ ಮೂಲಕ ಕಂಪನಿಗೆ ತಮ್ಮ ಕರ್ತವ್ಯವನ್ನು ಸಲ್ಲಿಸುತ್ತಾರೆ. ಆದರೆ ಅಧಿಕಾರಿಗಳು ಆ ಅಧಿಕಾರಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಾಗ ಮೂರನೆ ಪಕ್ಷದ ಹಕ್ಕನ್ನು ಪ್ರತಿಭಟಿಸುವಂತಿಲ್ಲ. ಕಂಪನಿಯು ಅದರ ಪ್ರತಿನಿಧಿಗಳಿಗೆ ತನ್ನ ಪರವಾಗಿ ಕಾರ್ಯನಿರ್ವಹಿಸುವಂತೆ ನೀಡಿರುವ ಸ್ಪಷ್ಟ ಅಧಿಕಾರದ ಮೇಲೆ ಅವಲಂಬನೆಯಾಗುವ ಅರ್ಹತೆಯನ್ನು ಮೂರನೇ ಪಕ್ಷಗಳು ಹೊಂದಿರುತ್ತವೆ. ರಾಯಲ್ ಬ್ರಿಟಿಷ್ ಬ್ಯಾಂಕ್ v ಟರ್ಕ್ವೆಂಡ್ ವರೆಗೆ ಹರಡಿದ ಸಾಮಾನ್ಯ ಕಾನೂನು ಪ್ರಕರಣಗಳ ಸಾಲು ಸಾಮಾನ್ಯ ಕಾನೂನಿನಲ್ಲಿ ಸ್ಥಾಪಿತವಾಯಿತು. ಇಲ್ಲಿ ಮೂರನೆಯ ಪಕ್ಷವು ಕಂಪನಿಯ ಆಂತರಿಕ ನಿರ್ವಹಣೆ ಸರಿಯಾದ ಕ್ರಮದಲ್ಲಿ ನಡೆಯುತ್ತಿದೆಯೇ ಎಂದು ನೋಡಿಕೊಳ್ಳುವ ಅಧಿಕಾರವನ್ನು ನೀಡಲಾಗಿರುತ್ತದೆ. ಅಲ್ಲದೇ ಈಗ ಬಹುಪಾಲು ರಾಷ್ಟ್ರಗಳಲ್ಲಿ ನಿಯಮವನ್ನು ಕಾನೂನಾಗಿ ಕ್ರೋಢೀಕರಿಸಲಾಗಿದೆ. ಆದ್ದರಿಂದಾಗಿ, ಸಾಮಾನ್ಯವಾಗಿ ಕಂಪನಿಗಳು ಅವುಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಎಲ್ಲಾ ಕಾರ್ಯಗಳಿಗೆ ಮತ್ತು ಕರ್ತವ್ಯ ಲೋಪಗಳಿಗೆ ಕಂಪನಿಗಳೇ ಬಾಧ್ಯಸ್ತವಾಗಿರುತ್ತದೆ. ಇದು ಬಹುಪಾಲು ಎಲ್ಲಾ ತಪ್ಪುಗಳನ್ನು ಒಳಗೊಳ್ಳುತ್ತದೆ, ಆದರೆ ಕಂಪನಿಗಳು ಮಾಡಿದ ಅಪರಾಧಕ್ಕೆ ಸಂಬಂಧಿಸಿದ ಕಾನೂನು ಅತ್ಯಂತ ಜಟಿಲವಾಗಿರುತ್ತದೆ ಹಾಗು ಇದು ರಾಷ್ಟ್ರಗಳ ನಡುವೆ ಗಮನಾರ್ಹವಾಗಿ ಭಿನ್ನವಾಗಿರುತ್ತದೆ.

ಕಾರ್ಪೊರೇಟ್ ಆಡಳಿತ

ಬದಲಾಯಿಸಿ

ಕಾರ್ಪೊರೇಟ್ ಆಡಳಿತವು ಪ್ರಧಾನವಾಗಿ ನಿರ್ದೇಶಕರ ಮಂಡಳಿ ಮತ್ತು ಅದನ್ನು ಆಯ್ಕೆ ಮಾಡಿದವರ( "ವಾರ್ಷಿಕ ಸಾಮಾನ್ಯ ಸಭೆ" ಯಲ್ಲಿ ಪಾಲ್ಗೊಳ್ಳುವ ಷೇರುದಾರರು ಮತ್ತು ನೌಕರರು) ನಡುವಿನ ಅಧಿಕಾರದ ಸಂಬಂಧದ ಬಗೆಗಿನ ಅಧ್ಯಯನವಾಗಿದೆ. ಇದು ಸಾಲದಾತರು, ಗ್ರಾಹಕರು,ಪರಿಸರ ಮತ್ತು ಬೃಹತ್ ಪ್ರಮಾಣದಲ್ಲಿ ಸಮೂದಾಯ ದಂತಹ ಇತರ ಮಧ್ಯಸ್ಥಗಾರರೊಂದಿಗೂ ಸಂಬಂಧಿಸಿದೆ. ಕಂಪನಿಗಳ ಆಂತರಿಕ ರೂಪದಲ್ಲಿ ಭಿನ್ನ ಭಿನ್ನ ರಾಷ್ಟ್ರಗಳ ಮಧ್ಯೆಯಿರುವ ಪ್ರಮುಖ ವ್ಯತ್ಯಾಸಗಳಲ್ಲಿ ಒಂದು ವ್ಯತ್ಯಾಸವೆಂದರೆ ಎರಡು-ಶ್ರೇಣಿಯ ಮತ್ತು ಒಂದು ಶ್ರೇಣಿಯ ಮಂಡಳಿಯಾಗಿದೆ. ಯುನೈಟೆಡ್ ಕಿಂಗ್ಡಮ್, ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಬಹುಪಾಲು ಕಾಮನ್‌ವೆಲ್ತ್ ರಾಷ್ಟ್ರಗಳು ಏಕೀಕೃತ ಏಕ ನಿರ್ದೇಶಕರ ಮಂಡಳಿಯನ್ನು ಹೊಂದಿವೆ. ಜರ್ಮನಿಯಲ್ಲಿ, ಕಂಪನಿಗಳು ಎರಡು ಶ್ರೇಣಿಗಳನ್ನು ಹೊಂದಿರುತ್ತವೆ. ಇದರಿಂದಾಗಿ ಷೇರುದಾರರು (ಮತ್ತು ನೌಕರರು) "ಮೇಲುಸ್ತುವಾರಿ ಮಂಡಳಿ" ಯನ್ನು ಆಯ್ಕೆಮಾಡಬಹುದಾಗಿದೆ. ಅಲ್ಲದೇ ನಂತರ ಮೇಲುಸ್ತುವಾರಿ ಮಂಡಳಿ "ಆಡಳಿತ ಮಂಡಳಿ"ಯನ್ನು ಆಯ್ಕೆ ಮಾಡುತ್ತದೆ. ಫ್ರಾನ್ಸ್ ನಲ್ಲಿ ಮತ್ತು ಯುರೋಪಿನ ಹೊಸ ಕಂಪನಿಗಳಲ್ಲಿ (ಸೊಸೈಟಸ್ ಯುರೋಪಿಯ) ಎರಡು ಶ್ರೇಣಿಗಳನ್ನು ಬಳಸುವ ಅವಕಾಶವಿರುತ್ತದೆ. ಇತ್ತೀಚಿನ ಸಾಹಿತ್ಯವು, ವಿಶೇಷವಾಗಿ ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಕಾರ್ಪೊರೇಟ್ ಆಡಳಿತವನ್ನು ಪರಿಕ್ರಿಯಾ ಸಂಶೋಧನೆ ಯ ರೂಪದಲ್ಲಿ ಚರ್ಚಿಸಲು ಪ್ರಾರಂಭಿಸಿದೆ. ಯುದ್ಧದ ನಂತರದ ಸಂವಾದವು ಷೇರುದಾರರು ಮತ್ತು ಇತರ ಮಧ್ಯಸ್ಥಗಾರರಿಗಾಗಿ ಹೇಗೆ ಪರಿಣಾಮಕಾರಿಯಾದ "ಕಾರ್ಪೊರೇಟ್ ಪ್ರಜಾಪ್ರಭುತ್ವ"ವನ್ನು ಪಡೆಯಬಹುದು ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದರೆ, ಅನೇಕ ವಿದ್ವಾಂಸರು ಕಾನೂನನ್ನು ಪ್ರಿನ್ಸಿಪಾಲ್-ಏಜೆಂಟ್ ಸಮಸ್ಯೆಗಳಿಗೆ ಅನುಗುಣವಾಗಿ ಚರ್ಚಿಸಲು ವರ್ಗಾಯಿಸಿದ್ದಾರೆ. "ಮುಖ್ಯಸ್ಥ" ವ್ಯಕ್ತಿ, ಅವನ ಆಸ್ತಿಯನ್ನು (ಸಾಮಾನ್ಯವಾಗಿ ಷೇರುದಾರನ ಬಂಡವಾಳ, ಆದರೆ ನೌಕರರ ದುಡಿಮೆ ಕೂಡ)"ಪ್ರತಿನಿಧಿಯ" (ಉದಾಹರಣೆಗೆ ಕಂಪನಿಯ ನಿರ್ದೇಶಕ) ನಿಯಂತ್ರಣಕ್ಕೆ ನಿಯೋಜಿಸಿದಾಗ, ಪ್ರತಿನಿಧಿಯು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ ಹಾಗು ಮುಖ್ಯಸ್ಥನ ಇಚ್ಛೆಯನ್ನು ಪೂರೈಸುವುದಕ್ಕಿಂತ ಹೆಚ್ಚಾಗಿ ಅವನು "ಸಮಯಸಾಧಕ"ನಾಗಿ ವರ್ತಿಸಬಹುದು ಎಂಬುದು ಕಾರ್ಪೊರೇಟ್ ಕಾನೂನಿನ ಮೂಲ ವಿವಾದವಾಗಿದೆ. ಈ ಸಮಯ ಸಾಧಕತೆ ಅಥವಾ "ಏಜನ್ಸಿ ಕಾಸ್ಟ್" ನ ಅಪಾಯವನ್ನು ತಡೆಯುವುದು ಕಾರ್ಪೊರೇಟ್ ಕಾನೂನಿನ ಕೇಂದ್ರಬಿಂದುವಾಗಿದೆ.

ಕಾರ್ಪೊರೇಟ್ ಸಂವಿಧಾನ

ಬದಲಾಯಿಸಿ
 
1623 ರ ನವೆಂಬರ್ 7 ದಿನಾಂಕವನ್ನು ನಮೂದಿಸಿ 2,400 ಫ್ಲಾರಿನ್ಸ್‌ಗಳಿಗೆ ಡಚ್ ಈಸ್ಟ್ ಇಂಡಿಯ ಕಂಪನಿ ಹೊರಡಿಸಿದ ಬಾಂಡ್

ಸಂಸ್ಥೆ ಗೆ ನಿಯಮಗಳನ್ನು ಎರಡು ಮೂಲಗಳಿಂದ ಪಡೆಯಬಹುದು. ಇವು ರಾಷ್ಟ್ರದ ಕಾನೂನುಗಳಾಗಿವೆ (US ನಲ್ಲಿ ಸಾಮಾನ್ಯವಾಗಿ ಡೆಲವೇರ್ ಜನರಲ್ ಕಾರ್ಪೊರೇಷನ್ ಲಾ (DGCL); UKಯಲ್ಲಿ, ಕಂಪನಿಗಳ ಕಾಯ್ದೆ 2006 (CA 2006); ಜರ್ಮನಿಯಲ್ಲಿ, ಅಕ್ಟೈನ್ ಗೆಸೆಟ್ಸ್ (AktG) ಮತ್ತು ಗೆಸೆಟ್ಸ್ ಬೆಟ್ ರೆಫೆಂಡ್ ಡೈ ಗೆಸೆಲ್ ಸ್ಚಾಫ್ಟನ್ ಮಿಟ್ ಬೆಸ್ಚರಾಂಕ್ಟರ್ ಹ್ಯಾಫ್ ಟಂಗ್ (GmbH-ಗೆಸೆಟ್ಸ್, GmbHG). ಈ ಕಾನೂನುಗಳ ನಿಯಮಗಳು ಕಡ್ಡಾಯವಾಗಿವೆ. ಅಲ್ಲದೇ ಈ ನಿಯಮಗಳನ್ನು ಮೊಟಕುಗೊಳಿಸಬಹುದು. ಮೊಟಕುಗೊಳಿಸಲು ಸಾಧ್ಯವಾಗದ ಪ್ರಮುಖ ನಿಯಮಗಳು, ಸಾಮಾನ್ಯವಾಗಿ ನಿರ್ದೇಶಕರ ಮಂಡಳಿಯನ್ನು ಹೇಗೆ ವಜಾಮಾಡುವುದು, ನಿರ್ದೇಶಕರು ಕಂಪನಿಗೆ ಸಲ್ಲಿಸಬೇಕಾದ ಕರ್ತವ್ಯಗಳು ದಿವಾಳಿ ಸ್ಥಿತಿಗೆ ತಲಪುತ್ತಿರುವ ಕಂಪನಿಯನ್ನು ವಿಸರ್ಜಿಸುವುದು ಯಾವಾಗ? ಎನ್ನುವುದನ್ನು ಒಳಗೊಂಡಿವೆ. ಕಂಪನಿಯ ಸದಸ್ಯರಿಗೆ ಬದಲಾಯಿಸುವ, ಆಯ್ಕೆಮಾಡುವ ಅವಕಾಶ ನೀಡುವ ನಿಯಮಗಳ ಉದಾಹರಣೆಯೆಂದರೆ ಸಾಮಾನ್ಯ ಸಭೆಗಳು ಯಾವರೀತಿಯ ಕಾರ್ಯವಿಧಾನವನ್ನು ಅನುಸರಿಸಬೇಕು, ನಿವ್ವಳ ಲಾಭಾಂಶವನ್ನು ಯಾವಾಗ ಪಾವತಿಸಬೇಕು ಹಾಗೂ ಅಥವಾ ಎಷ್ಟುಮಂದಿ ಸದಸ್ಯರು (ಕಾನೂನಿನಲ್ಲಿ ಕನಿಷ್ಠ ನಿಗದಿಯನ್ನು ಮೀರಿ) ಸಂವಿಧಾನವನ್ನು ತಿದ್ದುಪಡಿಮಾಡಬಹುದು ಎಂಬ ವಿಚಾರವನ್ನು ಒಳಗೊಂಡಿರುತ್ತವೆ. ಸಾಮಾನ್ಯವಾಗಿ, ಕಾನೂನು ಮಾದರಿ ಅನುಚ್ಛೇದಗಳನ್ನು ರಚಿಸುತ್ತದೆ. ಸಂಸ್ಥೆ ಸಂವಿಧಾನವು ನಿರ್ದಿಷ್ಟವಾದ ಕಾರ್ಯವಿಧಾನದ ಬಗ್ಗೆ ಯಾವುದೇ ಆಧಾರ ಇಲ್ಲದಿದ್ದರೆ ಮೇಲಿನ ಅನುಚ್ಛೇದವನ್ನು ಸ್ವೀಕರಿಸುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇತರ ಕೆಲವು ಸಾರ್ವತ್ರಿಕ ಕಾನೂನಿನ ರಾಷ್ಟ್ರಗಳು, ಕಾರ್ಪೊರೇಟ್ ಸಂವಿಧಾನವನ್ನು ಎರಡು ಪ್ರತ್ಯೇಕವಾದ ದಾಖಲೆಗಳಾಗಿ ವಿಭಾಗಿಸಿವೆ(UK ಯು 2006ರಲ್ಲಿ ಇದರಿಂದ ಹೊರಬಂದಿತು). ದಿಮೆಮರಂಡಮ್ ಆಫ್ ಅಸೋಸಿಯೇಷನ್ (ಅಥವಾ ಸಂಸ್ಥೆಯ ಅನುಚ್ಛೇದಗಳು) ಇದು ಪ್ರಧಾನವಾದ ದಾಖಲೆಯಾಗಿದೆ. ಅಲ್ಲದೇ ಇದು ಸಾಮಾನ್ಯವಾಗಿ ಬಾಹ್ಯ ಪ್ರಪಂಚದೊಂದಿಗಿರುವ ಕಂಪನಿಯ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಯಾವ ಉದ್ದೇಶವನ್ನು ಕಂಪನಿ ಅನುಸರಿಸಬೇಕಿದೆ ಎಂಬುದನ್ನು ಸೂಚಿಸುತ್ತದೆ (ಉದಾಹರಣೆಗೆ "ಈ ಕಂಪನಿಯು ಮೋಟಾರು,ಕಾರು"ಗಳನ್ನು ನಿರ್ಮಿಸುತ್ತದೆ) ಹಾಗು ಇದು ಕಂಪನಿಯ ಅಧಿಕೃತ ಷೇರು ಬಂಡವಾಳದ ಪಾಲನ್ನು ನಿಗದಿ ಮಾಡುತ್ತದೆ. ಆರ್ಟಿಕಲ್ಸ್ ಆಫ್ ಅಸೋಸಿಯೇಷನ್(ಅಥವಾ ಉಪ ನಿಬಂಧನೆಗಳು) ಎರಡನೆಯ ದಾಖಲೆಯಾಗಿದೆ. ಅಲ್ಲದೇ ಸಾಮಾನ್ಯವಾಗಿ ಇದು , ಮಂಡಳಿಯ ಸಭೆಗಳನ್ನು ನಡೆಸಲು ಬೇಕಾದ ಕಾರ್ಯವಿಧಾನಗಳು, ನಿವ್ವಳ ಲಾಭಾಂಶ ಅರ್ಹತೆಗಳ ನಿರ್ಧಾರ ಇತ್ಯಾದಿ ಕಂಪನಿಯ ಆಂತರಿಕ ವ್ಯವಹಾರಗಳು ಮತ್ತು ನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಹೊಂದಾಣಿಕೆಯಾಗದ ಸಂದರ್ಭದಲ್ಲಿ ಮೆಮೋರಾಂಡಂ ಮೇಲುಗೈ ಪಡೆಯುತ್ತವೆ [೧೬]. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಕೇವಲ ಮೆಮೋರಾಂಡಂ ಪ್ರಕಟಿಸಲಾಗುತ್ತದೆ. ನಾಗರಿಕ ಕಾನೂನು ಅಧಿಕಾರವ್ಯಾಪ್ತಿಗಳಲ್ಲಿ, ಕಂಪನಿಯ ಸಂವಿಧಾನವನ್ನು ಏಕ ಶಾಸನವಾಗಿ ಕ್ರೋಢೀಕರಿಸಲಾಗುತ್ತದೆ. ಅಲ್ಲದೇ ಇದನ್ನು ಹೆಚ್ಚಾಗಿ ಸನ್ನದು ಎಂದು ಕರೆಯಲಾಗುತ್ತದೆ. ಷೇರುದಾರರ ಒಪ್ಪಂದಗಳಂತಹ ಹೆಚ್ಚುವರಿಕ ಸಿದ್ಧತೆಗಳೊಂದಿಗೆ ಕಾರ್ಪೊರೇಟ್ ಸಂವಿಧಾನವನ್ನು ಪೂರೈಸುವುದು ಕಂಪನಿಯ ಸದಸ್ಯರಿಗೆ ಸಾಮಾನ್ಯವಾಗಿದೆ. ಈ ಮೂಲಕ ಅವರು ಅವರ ಸದಸ್ಯತ್ವದ ಹಕ್ಕನ್ನು ನಿರ್ದಿಷ್ಟ ರೀತಿಯಲ್ಲಿ ಬಳಸಲು ಒಪ್ಪಿಕೊಳ್ಳುತ್ತಾರೆ. ಕಲ್ಪನಾತ್ಮಕವಾಗಿ ಷೇರುದಾರರ ಒಪ್ಪಂದಗಳು ಕಾರ್ಪೊರೇಟ್ ಸಂವಿಧಾನದ ಅನೇಕ ಕಾರ್ಯಗಳನ್ನು ಪೂರೈಸುತ್ತದೆ. ಆದರೆ ಇದು ಒಪ್ಪಂದವಾಗಿರುವುದರಿಂದ ಕಂಪನಿಯ ಹೊಸ ಸದಸ್ಯರು ಹೇಗಾದರೂ ಸಮ್ಮತಿಸದ ಹೊರತು ಅವರನ್ನು ಇದಕ್ಕೆ ಬದ್ಧಗೊಳಿಸುವುದಿಲ್ಲ.[೧೭] ಷೇರುದಾರರ ಒಪ್ಪಂದದ ಒಂದು ಲಾಭವೆಂದರೆ, ಈ ಒಪ್ಪಂದಗಳು ಸಾಮಾನ್ಯವಾಗಿ ಗೋಪ್ಯವಾಗಿರುತ್ತದೆ. ಅನೇಕ ಅಧಿಕಾರಕ್ಷೇತ್ರಗಳು ಷೇರುದಾರರ ಒಪ್ಪಂದಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಅಗತ್ಯ ಹೊಂದಿರುವುದಿಲ್ಲ. ಮತದಾನದ ಟ್ರಸ್ಟ್ ಗಳು ಕಾರ್ಪೊರೇಟ್ ಸಂವಿಧಾನವನ್ನು ಪೂರೈಸುವ ಮತ್ತೊಂದು ಸಾಮಾನ್ಯ ವಿಧಾನವಾಗಿದೆ. ಆದರು ಇವುಗಳು ಅಮೇರಿಕ ಸಂಯುಕ್ತ ಸಂಸ್ಥಾನದ ಹೊರಗೆ ಮತ್ತು ನಿರ್ದಿಷ್ಟ ಕಡಲಾಚೆಯ ಅಧಿಕಾರವ್ಯಾಪ್ತಿಗಳಲ್ಲಿ ಅಪರೂಪವಾಗಿದೆ. ಕೆಲವು ಅಧಿಕಾರವ್ಯಾಪ್ತಿಗಳು ಕಂಪನಿ ಮುದ್ರೆಯನ್ನು ಕಂಪನಿಯ "ಸಂವಿಧಾನ" ಪಕ್ಷವೆಂದು (ಪದವನ್ನು ಸಡಿಲವಾಗಿ ಪ್ರಯೋಗಿಸಿದಲ್ಲಿ) ಪರಿಗಣಿಸುತ್ತವೆ, ಆದರೆ ಮುದ್ರೆಯ ಅವಶ್ಯಕತೆಯನ್ನು ಬಹುಪಾಲು ರಾಷ್ಟ್ರಗಳು ಶಾಸನದ ಮೂಲಕ ನಿರಾಕರಿಸಿವೆ.

ಅಧಿಕಾರದ ಸಮತೋಲನ

ಬದಲಾಯಿಸಿ
 
ಅಡಾಲ್ಫ್ ಬರ್ಲೆ , ಮಾಡರ್ನ್ ಕಾರ್ಪೊರೇಷನ್ ಮತ್ತು ಪ್ರವೇಟ್ ಪ್ರಾಪರ್ಟಿಯಲ್ಲಿ, ಮಾಲೀಕತ್ವ ಹೊಂದಬೇಕಿದ್ದ ಹೂಡಿಕೆದಾರರಿಂದ ಕಂಪನಿಗಳ ನಿಯಂತ್ರಣವನ್ನು ತೆಗೆದಿದ್ದು, ಅಮೆರಿಕದ ಅರ್ಥಶಾಸ್ತ್ರಕ್ಕೆ ಅಪಾಯವುಂಟು ಮಾಡಿತು ಹಾಗೂ ಸಂಪತ್ತಿನ ಅಸಮರ್ಪಕ ವಿತರಣೆಗೆ ದಾರಿ ಕಲ್ಪಿಸಿತು.

ನಿದೇಶಕರ ಮಂಡಳಿ ಮತ್ತು ಕಂಪನಿಯ ಸದಸ್ಯರ ನಡುವಿನ ಅಧಿಕಾರದ ಸಮತೋಲನೆಗೆ ಸಂಬಂಧಿಸಿದ ನಿಯಮಗಳು ,ಕಾರ್ಪೊರೇಟ್ ಆಡಳಿತಕ್ಕೆ ಅಗತ್ಯವಿರುವ ಅತ್ಯಂತ ಪ್ರಮುಖವಾದ ನಿಯಮಗಳಾಗಿರುತ್ತವೆ. ಹೂಡಿಕೆದಾರರ ಯಶಸ್ಸಿಗೆ ಕಂಪನಿಯನ್ನು ಯಶಸ್ವಿಯಾಗಿ ನಡೆಸಲು ಅಧಿಕಾರವನ್ನು , ಮಂಡಳಿಗೆ ನೀಡಲಾಗಿರುತ್ತದೆ ಅಥವಾ "ನಿಯೋಜಿಸಲಾಗಿರುತ್ತದೆ". ಕೆಲವೊಂದು ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕನ್ನು ಹೆಚ್ಚಾಗಿ ಷೇರುದಾರರಿಗೆಂದು ಕಾಯ್ದಿರಿಸಲಾಗಿರುತ್ತದೆ. ಇಲ್ಲಿ ಅವರ ಆಸಕ್ತಿಯು ಪ್ರಧಾನವಾಗಿ ಪರಿಣಾಮ ಬೀರುತ್ತದೆ. ನಿರ್ದೇಶಕರನ್ನು ಯಾವಾಗ ಕಛೇರಿಯಿಂದ ತೆಗೆದುಹಾಕಬಹುದು ಮತ್ತು ಬದಲಾಯಿಸಬಹುದು ಎಂಬುದರ ಮೇಲೆ ಕೆಲವು ಅತ್ಯವಶ್ಯವಾದ ನಿಯಮಗಳಿವೆ. ಇದನ್ನು ಮಾಡಲು, ಈ ವಿಷಯದ ಮೇಲೆ ಮತಚಲಾಯಿಸಲು ಸಭೆ ಕರೆಯಬೇಕಾಗುತ್ತದೆ. ಸಂವಿಧಾನವನ್ನು ಸುಲಭವಾಗಿ ಹೇಗೆ ತಿದ್ದುಪಡಿಗೊಳಿಸಬಹುದು ಹಾಗು ಯಾರಿಂದ ಎನ್ನುವುದು ಅಧಿಕಾರದ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಕಂಪನಿಯ ನಿರ್ದೇಶಕರು ಕಂಪನಿಯನ್ನು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ ಎಂಬುದು ಕಾರ್ಪೊರೇಟ್ ಕಾನೂನಿನ ತತ್ವವಾಗಿದೆ. ಇದನ್ನು ಶಾಸನ DGCL ದಲ್ಲಿ ತಿಳಿಸಲಾಗಿದೆ, ಇಲ್ಲಿ §141(a)[೧೮] ಹೇಳುತ್ತದೆ.

(a) ಈ ಚಾಪ್ಟರ್ ನಡಿಯಲ್ಲಿ ಸಂಘಟಿಸಲಾದ ಪ್ರತಿ ಸಂಸ್ಥೆ ವ್ಯಾಪಾರ ಮತ್ತು ವ್ಯವಹಾರಗಳು ನಿರ್ದೇಶಕರ ಮಂಡಳಿಯಿಂದ ಅಥವಾ ಅದರ ನಿರ್ದೇಶನದಡಿಯಲ್ಲಿ ನಡೆಯುತ್ತವೆ. ಒಂದು ವೇಳೆ ಈ ಚಾಪ್ಟರ್‌ನಲ್ಲಿ ಅಥವಾ ಸಂಸ್ಥೆಯ ಪ್ರಮಾಣಪತ್ರದಲ್ಲಿ ಅಥವಾ ಅದರ ಸಂಘಟನೆಯ ಪ್ರಮಾಣಪತ್ರದಲ್ಲಿ ಇದಕ್ಕೆ ಕೆಲವು ವಿನಾಯಿತಿಗಳಿರಬಹುದು.

ಜರ್ಮನಿಯಲ್ಲಿ, §76 AktG ಇದನ್ನೇ ಆಡಳಿತ ಮಂಡಳಿಗೆ ಹೇಳುತ್ತದೆ, ಏಕೆಂದರೆ §111 AktG ಯಡಿಯಲ್ಲಿ ಮೇಲುಸ್ತುವಾರಿ ಮಂಡಳಿಯ ಪಾತ್ರವು "ಮೇಲ್ವಿಚಾರಣೆಯನ್ನು ನಡೆಸುವುದಾಗಿದೆ" ಎಂದು ತಿಳಿಸಿದೆ (überwachen ). ಯುನೈಟೆಡ್ ಕಿಂಗ್ಡಮ್ ನಲ್ಲಿ, ಆಡಳಿತದ ಹಕ್ಕನ್ನು ಕಾನೂನಲ್ಲಿ ನಮೂದಿಸಿಲ್ಲ, ಆದರೆ ಇದು ಮಾದರಿ ಅನುಚ್ಛೇದಗಳ Art.2 ನಲ್ಲಿ ಕಂಡುಬರುತ್ತದೆ. ಬದಲಾಯಿಸಬಹುದಾದ ನಿಯಮವೆಂಬುದು ಇದರ ಅರ್ಥವಾಗಿದೆ. ಕಂಪನಿಗಳು ಸದಸ್ಯರಿಗೆ ಅಧಿಕಾರವನ್ನು ಕಾಯ್ದಿರಿಸುವ ಮೂಲಕ ಇದರಲ್ಲಿ ಭಾಗವಹಿಸದಿರಲು ನಿರ್ಧರಿಸಬಹುದು (s.20 CA 2006), ಆದರೂ ಕಂಪನಿಗಳು ಇದನ್ನು ಮಾಡುವುದು ತುಂಬ ಅಪರೂಪ. UK ಕಾನೂನು ನಿರ್ದಿಷ್ಟವಾಗಿ ಷೇರುದಾರರ "ಗಣನೀಯ ಪ್ರಮಾಣದ ನಗದುರೂಪದಲ್ಲಿರದ ಆಸ್ತಿಯ ವ್ಯವಹಾರಗಳನ್ನು" (s.190 CA 2006) ಸಮ್ಮತಿಸುವ ಅವರ ಹಕ್ಕು ಮತ್ತು ಕರ್ತವ್ಯವನ್ನು ಕಾಯ್ದಿರಿಸಿದೆ. ಇದು ಕನಿಷ್ಠ £5,000 ಮತ್ತು ಗರಿಷ್ಠ £100,000 ನೊಂದಿಗೆ ಕಂಪನಿ ಮೌಲ್ಯದ ಸುಮಾರು 10% ಕ್ಕಿಂತ ಹೆಚ್ಚು ಎಂಬ ಅರ್ಥವನ್ನು ಕೊಡುತ್ತದೆ.[೧೯] ಇದೇ ರೀತಿಯ ನಿಯಮಗಳು, ಕಡಿಮೆ ಕಠಿಣವಾಗಿದ್ದರೂ, §271 DGCL[೨೦] ನಲ್ಲಿ ಮತ್ತು ಹಾಲ್ಜ್ ಮ್ಯುಲರ್-ಡಾಕ್ಟ್ರೀನ್ ನಡಿಯಲ್ಲಿ ಜರ್ಮನಿಯಲ್ಲಿರುವ ಪ್ರಕರಣ ಕಾನೂನಿನ ಮೂಲಕ ಅಸ್ತಿತ್ವದಲ್ಲಿವೆ.[೨೧] ಬಹುಶಃ ಸದಸ್ಯರ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿರ್ದೇಶಕರು ಕಾರ್ಯನಿರ್ವಹಿಸುವ ಮೂಲಭೂತ ಖಾತರಿಯೇನೆಂದರೆ, ಅವರನ್ನು ಸುಲಭವಾಗಿ ವಜಾ ಮಾಡಬಹುದು. ಮಹಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹಾರ್ವರ್ಡ್ ನ ಇಬ್ಬರು ವಿದ್ವಾಂಸರಾದ ಅಡಾಲ್ಫ್ ಬರ್ಲೆ ಮತ್ತು ಗಾರ್ಡಿನರ್ ಮೀನ್ಸ್ ದಿ ಮಾರ್ಡನ್ ಸಂಸ್ಥೆ ಅಂಡ್ ಪ್ರೈವೆಟ್ ಪ್ರಾಪರ್ಟಿ ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕದಲ್ಲಿ ನಿರ್ದೇಶಕರನ್ನು ಹೊಣೆಯನ್ನಾಗಿಸಲು ವಿಫಲವಾದ ಅಮೆರಿಕದ ಕಾನೂನಿನ ಮೇಲೆ ವಾಗ್ದಾಳಿ ನಡೆಸಿತು. ಹೆಚ್ಚುತ್ತಿರುವ ಅಧಿಕಾರ ಮತ್ತು ನಿರ್ದೇಶಕರ ಸ್ವಯಮಾಧಿಪತ್ಯಕ್ಕೂ ಆರ್ಥಿಕ ಬಿಕ್ಕಟ್ಟಿಗೂ ಕೊಂಡಿ ಕಲ್ಪಿಸಿದರು. UKಯಲ್ಲಿ, ಸರಳವಾದ ಬಹುಮತದ ಮೂಲಕ ನಿರ್ದೇಶಕರನ್ನು ಪದಚ್ಯುತಿಗೊಳಿಸುವ ಸದಸ್ಯರ ಹಕ್ಕನ್ನು s.168 CA 2006[೨೨] ಅಡಿಯಲ್ಲಿ ಖಾತರಿಪಡಿಸಲಾಗಿದೆ, ಅಷ್ಟೇ ಅಲ್ಲದೇ ಮಾದರಿ ಅನುಚ್ಛೇದದ Art.20 ಪ್ರಕಾರ, ಮಂಡಳಿಯ ಮೂರನೆ ಒಂದರಷ್ಟು ಸದಸ್ಯರು ಪ್ರತಿವರ್ಷ ಮರುಚುನಾವಣೆಗೆ ಒಡ್ಡಬೇಕಾದ ಅಗತ್ಯವಿರುತ್ತದೆ. (ಗರಿಷ್ಠ ಪಕ್ಷ ಮೂರು ವರ್ಷ ಕಾಲಾವಧಿಯನ್ನು ಸೃಷ್ಟಿಸಲು). ಷೇರುದಾರರಲ್ಲಿ 10% ರಷ್ಟು ಷೇರುದಾರರು ಯಾವುದೇ ಸಮಯದಲ್ಲಿ ಸಭೆ ಕರೆಯುವ ಬೇಡಿಕೆಯನ್ನು ಮಂಡಿಸಬಹುದು ಹಾಗು 5% ದಷ್ಟು ಷೇರುದಾರರು ಕಳೆದ ಸಭೆ ನಡೆದು ಒಂದು ವರ್ಷವಾಗಿದ್ದಾಗ ಮತ್ತೆ ಸಭೆ ಕರೆಯುವ ಬೇಡಿಕೆಯನ್ನು ಇಡಬಹುದು(s.303 CA 2006). ಜರ್ಮನಿಯಲ್ಲಿ, ನೌಕರರು ಪಾಲ್ಗೊಳ್ಳಲು ದೊಡ್ಡ ಸಭಾಕೊಠಡಿ ಸ್ಥಿರತೆಯ ಅವಶ್ಯಕತೆ ಸೃಷ್ಟಿಸುತ್ತದೆ. §84(3) AktG , ಆಡಳಿತ ಮಂಡಳಿಯ ನಿರ್ದೇಶಕರನ್ನು ಕೇವಲ ಮೇಲುಸ್ತುವಾರಿ ಮಂಡಳಿ ಮಾತ್ರ ಪ್ರಮುಖ ಕಾರಣಕ್ಕಾಗಿ ತೆಗೆದುಹಾಕಬಲ್ಲದು (ಏಇನ್ ವಿಚ್ ಟೈಗರ್ ಗ್ರುಂಡ್ ) ಎಂದು AktG ಪ್ರತಿಪಾದಿಸಿದೆ. ಆದರೂ ಇದು ಷೇರುದಾರರಿಂದ ಅವಿಶ್ವಾಸ ಮತದಾನವನ್ನು ಒಳಗೊಂಡಿದೆ. 75 ಪ್ರತಿಶತದಷ್ಟು ಷೇರುದಾರರು ಮತಚಲಾಯಿಸದ ಹೊರತು ಐದು ವರ್ಷಗಳಿಗೆ ಇದರ ಕಾಲಾವಧಿಯು ಮುಗಿಯುತ್ತದೆ. §122 AktG , 10 ಪ್ರತಿಶತದಷ್ಟು ಷೇರುದಾರರಿಗೆ ಸಭೆ ನಡೆಸುವ ಬೇಡಿಕೆಯನ್ನಿಡುವ ಅವಕಾಶ ನೀಡಿದೆ. US ನಲ್ಲಿ ಡೆಲವೇರ್, ನಿರ್ದೇಶಕರಿಗೆ ಗಣನೀಯವಾದ ಸ್ವಯಮಾಧಿಪತ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸಿದೆ. §141(k) DGCL , ಮಂಡಳಿಯು "ವರ್ಗೀಕೃತ" ವಾಗಿಲ್ಲದಿದ್ದರೆ ನಿರ್ದೇಶಕರನ್ನು ಯಾವುದೇ ಕಾರಣವಿಲ್ಲದೇ ತೆಗೆದುಹಾಕಬಹುದು ಎಂದು ತಿಳಿಸಿದೆ. ನಿರ್ದೇಶಕರು ಭಿನ್ನ ವರ್ಷಗಳಲ್ಲಿ ಮರು ನೇಮಕಾತಿಯ ಮೂಲಕ ಮಾತ್ರ ಸೇರಬಹುದು ಎಂಬುದು ಇದರ ಅರ್ಥವಾಗಿದೆ. ಮಂಡಳಿಯನ್ನು ವರ್ಗೀಕೃತಗೊಳಿಸಿದ್ದಲ್ಲಿ, ನಿರ್ದೇಶಕರ ಕೆಟ್ಟ ಆಡಳಿತ ನಿರ್ವಹಣೆ ಸಂದರ್ಭದಲ್ಲಿ ಮಾತ್ರ ಅವರನ್ನು ತೆಗೆದುಹಾಕಬಹುದೇ ಹೊರತು ಮತ್ಯಾವ ಕಾರಣಕ್ಕೂ ಅವರನ್ನು ತೆಗೆದುಹಾಕುವಂತಿಲ್ಲ. ಷೇರುದಾರರಿಂದ ನಿರ್ದೇಶಕರ ಸ್ವಯಮಾಧಿಪತ್ಯವನ್ನು ಮುಂದೆ §216 DGCL ನಲ್ಲಿ ನೋಡಬಹುದು, ಇದು ಸಾಪೇಕ್ಷ ಬಹುಮತಕ್ಕೆ ಅವಕಾಶವನ್ನು ನೀಡಿದೆ ಹಾಗು §211(d) , ಸಂವಿಧಾನವು ಅವಕಾಶವನ್ನು ನೀಡಿದಾಗ ಮಾತ್ರ ಷೇರುದಾರರ ಸಭೆಯನ್ನು ಕರೆಯಲಾಗುತ್ತದೆ ಎಂದು ಹೇಳಿದೆ.[೨೩] ಸಮಸ್ಯೆಯೆಂದರೆ, ಅಮೇರಿಕಾದಲ್ಲಿ ಕಂಪನಿಯನ್ನು ಎಲ್ಲಿ ಸಂಘಟಿಸಬಹುದು ಎಂಬುದನ್ನು ಸಾಮಾನ್ಯವಾಗಿ ನಿರ್ದೇಶಕರು ಆಯ್ಕೆಮಾಡುತ್ತಾರೆ ಮತ್ತು §242(b)(1) DGCL , ಯಾವುದೇ ಸಂವಿಧಾನ ತಿದ್ದುಪಡಿಯನ್ನು ಮಾಡಲು ನಿರ್ದೇಶಕರ ದೃಢನಿರ್ಣಯ ಅಗತ್ಯವಿರುತ್ತದೆ ಎಂದು ಹೇಳಿದೆ. ಇದಕ್ಕೆ ತದ್ವಿರುದ್ಧವೆಂಬಂತೆ, ಜರ್ಮನಿ (§179 AktG) ಮತ್ತು UKಯಲ್ಲಿ (s.21 CA 2006[೨೪]) 75ಪ್ರತಿಶತ ದಷ್ಟು ಷೇರುದಾರರು ಯಾವುದೇ ಸಮಯದಲ್ಲಿ ಸಂವಿಧಾನದ ತಿದ್ದುಪಡಿಯನ್ನು ಮಾಡಬಹುದಾಗಿದೆ.

ನಿರ್ದೇಶಕರ ಕರ್ತವ್ಯಗಳು

ಬದಲಾಯಿಸಿ

ಬಹುಪಾಲು ಅಧಿಕಾರವ್ಯಾಪ್ತಿಗಳಲ್ಲಿ, ನಿರ್ದೇಶಕರು, ನ್ಯಾಸರಕ್ಷಣೆಯ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಅಲ್ಲದೇ ಕಂಪನಿಯ ಆರ್ಥಿಕ ಪರಿಸ್ಥಿತಿ ಮತ್ತು ಸದಸ್ಯರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಬೇಕಾದ , ಕಾಳಜಿ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಿರ್ದೇಶಕ ಹೊಂದಿರುವ ಕಾಳಜಿ ಮತ್ತು ಸಾಮರ್ಥ್ಯದ ಗುಣಮಟ್ಟವನ್ನು , ಅಗತ್ಯವಿರುವ ಜ್ಞಾನವನ್ನು ಗಳಿಸುವುದು ಮತ್ತು ನಿಭಾಯಿಸುವುದು, ಹಾಗು ಅವನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಕಂಪನಿಯ ವ್ಯವಹಾರವನ್ನು ಅರ್ಥಮಾಡಿಕೊಳ್ಳುವುದು ಎಂದು ಸಾಮಾನ್ಯವಾಗಿ ವಿವರಿಸಲಾಗಿರುತ್ತದೆ. ನಿರ್ದೇಶಕರು ಕೂಡ ಅವರ ಕಠಿಣವಾಗಿ ಕೇವಲ ಸರಿಯಾದ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ಅಧಿಕಾರ ವಹಿಸಲಾಗುತ್ತದೆ. ಉದಾಹರಣೆಗೆ, ನಿರ್ದೇಶಕನಿಗೆ , ಬಂಡವಾಳವನ್ನು ಹೆಚ್ಚಿಸುವ ಉದ್ದೇಶವಿಲ್ಲದೇ ಸಮರ್ಥ ಸ್ವಾಧೀನದ ಬಿಡ್ ಸೋಲಿಸುವುದಕ್ಕಾಗಿ ಬೃಹತ್ ಪ್ರಮಾಣದ ಹೊಸ ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ, ಅದು ಅನುಚಿತ ಉದ್ದೇಶವಾಗುತ್ತದೆ.[೨೫] ನಿರ್ದೇಶಕರು, ವಿವೇಕಪೂರ್ಣ ಕೌಶಲ, ಕಾಳಜಿ ಮತ್ತು ಕಾರ್ಯ ಶ್ರದ್ಧೆ ನಿರ್ವಹಿಸುವ ಕರ್ತವ್ಯವನ್ನು ಹೊಂದಿರುತ್ತಾರೆ. ಒಂದು ವೇಳೆ ನಿರ್ದೇಶಕ ಈ ವಿವೇಕ ಪೂರ್ಣ ಕೌಶಲ , ಕಾಳಜಿ ಮತ್ತು ಕಾರ್ಯಶ್ರದ್ಧೆಯನ್ನು ತೋರಿಸದೆ ಕಂಪನಿಗೆ ನಷ್ಟವನ್ನು ಉಂಟುಮಾಡಿದ್ದಲ್ಲಿ ಈ ಹಕ್ಕು ಕಂಪನಿಗೆ ನಿರ್ದೇಶಕನಿಂದ ಪರಿಹಾರವನ್ನು ಕೇಳಬಹುದಾದ ಅವಕಾಶನೀಡಿದೆ. ನಿರ್ದೇಶಕರು, ಯಾವುದೇ ಕಾನ್ ಫ್ಲಿಕ್ಟ್ ಆಫ್ ಇನ್‌ಟ್ರಸ್ಟ್ (ಹಿತಾಸಕ್ತಿಗಳ ಘರ್ಷಣೆ) ಗಳಿಗೆ ಅಥವಾ ಕರ್ತವ್ಯದೊಂದಿಗೆ ಘರ್ಷಣೆಗೆ ಅವಕಾಶ ನೀಡದೇ ಕಂಪನಿಯ ಅತ್ಯುತ್ತಮ ಹಿತಾಸಕ್ತಿಗಳ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಬೇಕು. ಈ ನಿಯಮವನ್ನು ಕಠಿಣವಾಗಿ ಜಾರಿಗೆ ತಂದಿರಬೇಕು. ಹಿತಾಸಕ್ತಿ ಘರ್ಷಣೆ ಅಥವಾ ಕರ್ತವ್ಯ ಘರ್ಷಣೆಯು ಶುದ್ಧ ಆಧಾರಕಲ್ಪನೆಯಾಗಿದ್ದರೂ, ಅದರಿಂದ ಉಂಟಾಗುವ ಎಲ್ಲ ವೈಯಕ್ತಿಕ ಲಾಭಗಳನ್ನು ಹೊರಹಾಕಲು ನಿರ್ದೇಶಕರ ಮೇಲೆ ಒತ್ತಡ ಬರಬಹುದು. ಅಬರ್ಡೀನ್ Ry v. ಬಲೈಕಿ (1854)ಯಲ್ಲಿ 1 Macq HL 461 ಲಾರ್ಡ್ ಕ್ರಾನ್ ವರ್ತ್ , ಅವರ ತೀರ್ಪಿನಲ್ಲಿ ಈ ಕೆಳಕಂಡಂತೆ ತಿಳಿಸಿದ್ದಾರೆ,

"ಕಾರ್ಪೊರೇಟ್ ಅಸ್ತಿತ್ವವು ಕೇವಲ ಪ್ರತಿನಿಧಿಗಳಿಂದ ಮಾತ್ರ ಕಾರ್ಯನಿರ್ವಹಿಸಬಲ್ಲದು. ಆದ್ದರಿಂದ ಈ ಪ್ರತಿನಿಧಿಗಳ ಕಾರ್ಯವೇನೆಂದರೆ, ಸಂಸ್ಥೆಯ ಹಿತಾಸಕ್ತಿಗಳಿಗೆ ಉತ್ತೇಜನ ನೀಡುವಂತೆ ಅತ್ಯುತ್ತಮವಾಗಿ ನಿರ್ವಹಿಸಬೇಕು. ಇಂತಹ ಪ್ರತಿನಿಧಿಗಳು ಅವರ ಮುಖ್ಯಸ್ಥರ ಕಡೆಗೆ ನ್ಯಾಸರಕ್ಷಕ ಸ್ವಭಾವವನ್ನು ತೋರಿಸಬೇಕಾದ ಕರ್ತವ್ಯವನ್ನು ಹೊಂದಿರುತ್ತಾರೆ. ಅಲ್ಲದೇ ಇದು ಸಾರ್ವತ್ರಿಕ ಬಳಕೆಯ ನಿಯಮವಾಗಿದ್ದು, ಅಂತಹ ಕರ್ತವ್ಯಗಳನ್ನು ನಿಭಾಯಿಸುವ ವ್ಯಕ್ತಿಗೆ ಇರುವ ಅಥವಾ ಇರಲು ಸಾಧ್ಯವಾದ ವೈಯಕ್ತಿಕ ಹಿತಾಸಕ್ತಿಯು ಅವನು ರಕ್ಷಿಸಲು ಬದ್ಧನಾದ ವ್ಯಕ್ತಿಯ ಹಿತಾಸಕ್ತಿಯೊಂದಿಗೆ ಘರ್ಷಿಸುವ ಅಥವಾ ಅದು ಘರ್ಷಿಸಲು ಸಂಭವನೀಯ ವಾದ ವ್ಯವಹಾರಗಳಿಗೆ ಪ್ರವೇಶಿಸಲು ಅವಕಾಶ ನೀಡಬಾರದು. ಆದ್ದರಿಂದ ಈ ತತ್ವವು ಕಠಿಣವಾಗಿ ಅದಕ್ಕೆ ನಿಷ್ಠವಾಗಿದ್ದು, ಸಂಬಂಧಿತ ಒಪ್ಪಂದದಲ್ಲಿ ಸತ್ಯ ಮತ್ತು ಅಸತ್ಯದ ಬಗ್ಗೆ ಯಾವುದೇ ಪ್ರಶ್ನೆ ಮಾಡಲು ಅವಕಾಶವಿಲ್ಲ..."

ಆದಾಗ್ಯೂ, ಅನೇಕ ಅಧಿಕಾರವ್ಯಾಪ್ತಿಗಳಲ್ಲಿ ಕಂಪನಿಯ ಸದಸ್ಯರು ವ್ಯವಹಾರಗಳಿಗೆ ಅಂಗೀಕಾರ ನೀಡಲು ಅನುಮತಿ ನೀಡಲಾಗಿರುತ್ತದೆ. ಇಲ್ಲದಿದ್ದರೆ ಈ ವ್ಯವಹಾರಗಳಿಗೆ ಮೇಲಿನ ತತ್ವದೊಂದಿಗೆ ಘರ್ಷಣೆ ಉಂಟಾಗಬಹುದು. ಈ ತತ್ವವನ್ನು ಕಂಪನಿಯ ಸಂವಿಧಾನದಿಂದ ರದ್ದುಮಾಡುವ ಸಾಮರ್ಥ್ಯ ಉಳ್ಳದ್ದಾಗಿದೆ ಎಂದು ಬಹುಪಾಲು ಅಧಿಕಾರವ್ಯಾಪ್ತಿಗಳಲ್ಲಿ ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ.

  • ಸ್ಮಿತ್ v. ವ್ಯಾನ್ ಗೊರ್ಕಾಮ್

ಕಾರ್ಪೊರೇಟ್ ವಿವಾದ

ಬದಲಾಯಿಸಿ

ಕಂಪನಿಯ ಸದಸ್ಯರು ಸಾಮಾನ್ಯವಾಗಿ ಒಬ್ಬರ ವಿರುದ್ಧ ಮತ್ತೊಬ್ಬರಿಗೆ ಮತ್ತು ಕಂಪನಿಯ ವಿರುದ್ಧ , ಸಂವಿಧಾನದಲ್ಲಿ ತಿಳಿಸಲಾದ ಹಕ್ಕುಗಳನ್ನು ಹೊಂದಿರುತ್ತಾರೆ. ಅವರ ಹಕ್ಕುಗಳ ಬಳಕೆಗೆ ಸಂಬಂಧಪಟ್ಟಂತೆ, ಅಲ್ಪಮತದ ಷೇರುದಾರರು, ಮತದಾನದ ಹಕ್ಕುಗಳ ಮಿತಿಗಳಿಂದಾಗಿ ಕಂಪನಿಯ ಸಂಪೂರ್ಣ ನಿಯಂತ್ರಣಕ್ಕೆ ನಿರ್ದೇಶನ ನೀಡುವಂತಿಲ್ಲ ಎನ್ನುವುದನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ ಹಾಗು ಬಹುಸಂಖ್ಯಾತರ ಇಚ್ಛೆಯನ್ನು ಒಪ್ಪಿಕೊಳ್ಳಬೇಕು( ಹೆಚ್ಚಾಗಿ ಮೆಜಾರಿಟಿ ರೂಲ್ ಎಂದು ಕರೆಯಲಾಗುತ್ತದೆ). ಆದರೂ, ಬಹುಮತದ ನಿರ್ಣಯ ಅನ್ಯಾಯದಿಂದ ಕೂಡಿರಬಹುದು, ಅದರಲ್ಲೂ ವಿಶೇಷವಾಗಿ ಒಬ್ಬ ಷೇರುದಾರನ ನಿಯಂತ್ರಣದಲ್ಲಿದ್ದಾಗ ಅನ್ಯಾಯವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರಿಂದಾಗಿ, ಬಹುಮತ ನಿಯಮದ ಸಾಮಾನ್ಯ ತತ್ವಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಅನೇಕ ಅಪವಾದಗಳು ಬೆಳೆದವು.

  • ಒಂದುವೇಳೆ ಬಹುಸಂಖ್ಯೆಯ ಷೇರುದಾರರು(s) ಅಲ್ಪಸಂಖ್ಯಾತರಿಗೆ ವಂಚನೆ ಎಸಗಲು ತಮ್ಮ ಮತಗಳನ್ನು ಚಲಾಯಿಸುತ್ತಿದ್ದರೆ, ಅಲ್ಪಸಂಖ್ಯಾತರಿಗೆ ದಾವೆ ಹೂಡಲು ಕೋರ್ಟ್‌ಗಳು ಅನುಮತಿ ನೀಡುತ್ತವೆ[೨೬]
  • ಒಂದು ವೇಳೆ ಬಹುಸಂಖ್ಯಾತರು ತಮ್ಮ ವೈಯಕ್ತಿಕ ಹಕ್ಕುಗಳ ಮೇಲೆ ದಾಳಿಗೆ ಮುಂದಾದಾಗ, ಸದಸ್ಯರು ದಾವೆ ಹೂಡುವ ಹಕ್ಕನ್ನು ಹೊಂದಿರುತ್ತಾರೆ. ಉದಾಹರಣೆಗೆ, ಕಂಪನಿಯ ವ್ಯವಹಾರಗಳನ್ನು ಕಂಪನಿಯ ಸಂವಿಧಾನಕ್ಕೆ ಅನುಗುಣವಾಗಿ ನಡೆಸದಿದ್ದಲ್ಲಿ ಮೇಲೆ ತಿಳಿಸಲಾದ ದಾವೆಯನ್ನು ಹೂಡಬಹುದಾಗಿದೆ (ಈ ನಿಲುವು ಚರ್ಚಾಸ್ಪದವಾಗಿದೆ. ಏಕೆಂದರೆ ವೈಯಕ್ತಿಕ ಹಕ್ಕಿನ ವ್ಯಾಪ್ತಿಯನ್ನು ಕಾನೂನಿನಲ್ಲಿ ನೀಡಲಾಗಿಲ್ಲ). ಮ್ಯಾಕ್ ಡೋಲಾಗ್ v ಗಾರ್ಡಿನರ್ ಮತ್ತು ಪೆಂಡರ್ v ಲುಷಿಂಗ್ಟನ್ , ಅಸಮಂಜಸ ಭಿನ್ನಾಭಿಪ್ರಾಯಗಳನ್ನು ನೀಡಿದೆ.
  • ಅನೇಕ ಅಧಿಕಾರವ್ಯಾಪ್ತಿಗಳಲ್ಲಿ , ಕಂಪನಿಯು ಆರೋಪಿತ ವಂಚಕರಿಂದ ನಿಯಂತ್ರಿಸಲಾಗುತ್ತಿದ್ದರೆ, ಆಗ ಅಲ್ಪಮತದ ಷೇರುದಾರರು , ಕಂಪನಿಯ ಹೆಸರಿನಲ್ಲಿ ಪ್ರತಿನಿಧಿಯನ್ನು ತೆಗೆದುಕೊಳ್ಳುವ ಅಥವಾ ಸಂಸ್ಥೆಯ ಪರವಾಗಿ ದಾವೆ ಹೂಡುವ ಸಾಧ್ಯತೆಗಳಿರುತ್ತವೆ.

ಕಾರ್ಪೊರೇಟ್ ಹಣಕಾಸು

ಬದಲಾಯಿಸಿ

ಷೇರುಗಳು ಮತ್ತು ಷೇರು ಬಂಡವಾಳ

ಬದಲಾಯಿಸಿ

ಕಂಪನಿಗಳು ಅವುಗಳ ವ್ಯವಹಾರಗಳಿಗೆ ಬೇಕಿರುವ ಬಂಡವಾಳವನ್ನು ಸಾಮಾನ್ಯವಾಗಿ ಸಾಲದ ಮೂಲಕ ಅಥವಾ ಈಕ್ವಿಟಿ ಮೂಲಕ ಪಡೆಯುತ್ತವೆ. ಈಕ್ವಿಟಿ ಮೂಲಕ ಪಡೆದ ಬಂಡವಾಳವನ್ನು ಸಾಮಾನ್ಯವಾಗಿ ಬಿಡುಗಡೆ ಮಾಡಿದ ಷೇರುಗಳಿಂದ ಅಥವಾ ವಾರಂಟ್‌ಗಳಿಂದ ಎತ್ತಲಾಗುತ್ತದೆ(ಕೆಲವೊಮ್ಮೆ "ಸ್ಟಾಕ್" ಎಂದು ಕರೆಯಲಾಗುತ್ತದೆ(ವಾಣಿಜ್ಯದ ಸ್ಟಾಕ್ (ಸರಕು) ಎಂದು ಗೊಂದಲಕ್ಕೀಡಾಗಬಾರದು) ಷೇರು ಎಂಬುದು ಆಸ್ತಿಯ ವಸ್ತುವಾಗಿದೆ. ಅಲ್ಲದೇ ಇದನ್ನು ಮಾರಬಹುದು ಅಥವಾ ವರ್ಗಾಯಿಸಬಹುದಾಗಿದೆ. ಷೇರನ್ನು ಹೊಂದುವುದು ಷೇರುದಾರನನ್ನು ಕಂಪನಿಯ ಸದಸ್ಯನನ್ನಾಗಿಸುತ್ತದೆ. ಅಲ್ಲದೇ ಕಂಪನಿಯ ಸಂವಿಧಾನದಲ್ಲಿ ನೀಡಲಾದ ನಿಯಮಗಳನ್ನು ಕಂಪನಿಯ ವಿರುದ್ಧ ಮತ್ತು ಇತರ ಸದಸ್ಯರ ವಿರುದ್ಧ ಚಲಾಯಿಸಬಹುದಾದ ಹಕ್ಕನ್ನು ನೀಡುತ್ತದೆ. ಷೇರುಗಳು ಸಾಮಾನ್ಯವಾಗಿ ಅಂಕಿತ ಮೌಲ್ಯ ಅಥವಾ ಸರಾಸರಿ ಮೌಲ್ಯವನ್ನು ಹೊಂದಿರುತ್ತವೆ. ಇದು ಕಂಪನಿಯು ದಿವಾಳಿಯಾಗುವ ಸಂದರ್ಭದಲ್ಲಿ ಕಂಪನಿಯ ಸಾಲಗಳನ್ನು ತೀರಿಸುವಲ್ಲಿ ಷೇರುದಾರನ ಬಾಧ್ಯತೆಯ ಮಿತಿಯನ್ನು ತೋರಿಸುತ್ತದೆ. ಷೇರುಗಳು ಸಾಮಾನ್ಯವಾಗಿ ಷೇರುದಾರನಿಗೆ ಕೆಲವೊಂದು ಹಕ್ಕುಗಳನ್ನು ನೀಡುತ್ತವೆ. ಇವುಗಳು ಸಾಮಾನ್ಯವಾಗಿ ಈ ಕೆಳಕಂಡವುಗಳನ್ನು ಒಳಗೊಂಡಿರುತ್ತವೆ:

  • ಮತಚಲಾಯಿಸುವ ಹಕ್ಕು
  • ಕಂಪನಿಯಿಂದ ಘೋಷಿಸಲಾದ ಲಾಭಂಶದಲ್ಲಿ ಪಾಲು ಪಡೆಯಬಹುದಾದ ಅಧಿಕಾರ
  • ಷೇರಿನ ಮರುಖರೀದಿಯ ವೇಳೆ ಅಥವಾ ಕಂಪನಿಯ ದಿವಾಳಿಯ ಮೇಲೆ ಬಂಡವಾಳವನ್ನು ಹಿಂದಕ್ಕೆ ಪಡೆಯುವ ಅಧಿಕಾರ
  • ಕೆಲವು ರಾಷ್ಟ್ರಗಳಲ್ಲಿ, ಷೇರುದಾರರ ಬಳಿ ಪೂರ್ವಕ್ರಯದ ಹಕ್ಕುಗಳಿರುತ್ತವೆ. ಇದರ ಮೂಲಕ ಅವರಿಗೆ ಭವಿಷ್ಯದಲ್ಲಿ ಕಂಪನಿಯಿಂದ ಬಿಡುಗಡೆ ಮಾಡುವ ಷೇರುಗಳಲ್ಲಿ ಭಾಗವಹಿಸುವ ಆದ್ಯತೆಯ ಹಕ್ಕನ್ನು ಹೊಂದಿರುತ್ತಾರೆ.

ಹಲವು ಕಂಪನಿಗಳು ವಿಭಿನ್ನ ವರ್ಗದ ಷೇರುಗಳನ್ನು ಹೊಂದಿವೆ. ಈ ವಿಭಿನ್ನ ಷೇರುಗಳು ಷೇರುದಾರರಿಗೆ ಭಿನ್ನ ರೀತಿಯ ಹಕ್ಕುಗಳನ್ನು ನೀಡುತ್ತವೆ. ಉದಾಹರಣೆಗೆ, ಕಂಪನಿಯು ಸಾಮಾನ್ಯ ಮತ್ತು ಆದ್ಯತೆಯ ಷೇರುಗಳನ್ನು ಬಿಡುಗಡೆ ಮಾಡಬಲ್ಲದು. ಈ ಷೇರುಗಳ ಮೇಲೆ ಮತಚಲಾಯಿಸುವ ಅಧಿಕಾರ/ಅಥವಾ ಆರ್ಥಿಕ ಅಧಿಕಾರ ಬೇರೆ ಬೇರೆ ರೀತಿಯಲ್ಲಿರುತ್ತದೆ. ಉದಾಹರಣೆಗೆ, ಆದ್ಯತೆಯ ಷೇರುಗಳನ್ನು ಹೊಂದಿರುವವರಿಗೆ ಕಂಪನಿ , ಪ್ರತಿವರ್ಷ ಒಂದು ನಿರ್ದಿಷ್ಟ ಮೊತ್ತದ ಸಂಚಿತ ಆದ್ಯತೆಯ ಲಾಭಂಶವನ್ನು ನೀಡಬಹುದು. ಆದರೆ ಸಾಮಾನ್ಯ ಷೇರುದಾರರಿಗೆ ಎಲ್ಲವೂ ಲಭ್ಯವಾಗುತ್ತದೆ. ಕಂಪನಿಯಲ್ಲಿ ಬಿಡುಗಡೆ ಮಾಡಲಾದ ಷೇರುಗಳ ಒಟ್ಟು ಸಂಖ್ಯೆಯು ಅದರ ಬಂಡವಾಳ ವನ್ನು ಪ್ರತಿನಿಧಿಸುವಂತಿರಬೇಕು ಎನ್ನಲಾಗುತ್ತದೆ. ಕಂಪನಿಯು ಇಟ್ಟುಕೊಳ್ಳಬಹುದಾದ ಬಂಡವಾಳದ ಕನಿಷ್ಠ ಮೊತ್ತವನ್ನು ಅನೇಕ ಅಧಿಕಾರವ್ಯಾಪ್ತಿಗಳು ನಿಯಂತ್ರಿಸುತ್ತವೆ. ಆದರೂ, ಕೆಲವು ರಾಷ್ಟ್ರಗಳು , ಕಂಪನಿಯು ಒಂದು ನಿರ್ದಿಷ್ಟ ರೀತಿಯ ವ್ಯವಹಾರದಲ್ಲಿ ತೊಡಗಲು ಬಂಡವಾಳದ ಕನಿಷ್ಠಮೊತ್ತ ವನ್ನು ನಿಗದಿಮಾಡುತ್ತವೆ(ಉದಾಹರಣೆಗೆ ಬ್ಯಾಂಕಿಂಗ್, ವಿಮೆ ಇತ್ಯಾದಿ.). ಇದೇ ರೀತಿಯಲ್ಲಿ, ಬಹುಪಾಲು ಅಧಿಕಾರವ್ಯಾಪ್ತಿಗಳು ಬಂಡವಾಳ ನಿರ್ವಹಣೆಯನ್ನು ನಿಯಂತ್ರಿಸುತ್ತವೆ. ಅಲ್ಲದೇ ಕಂಪನಿಯು ಷೇರುದಾರರಿಗೆ ವಿತರಣೆಯ ಮೂಲಕ ಹಣವನ್ನು ಹಿಂದಿರುಗಿಸುವುದನ್ನು ತಡೆಯುತ್ತವೆ. ಏಕೆಂದರೆ ಈ ಕಾರಣದಿಂದ ಕಂಪನಿಯು ಆರ್ಥಿಕವಾಗಿ ಬಹಿರಂಗಗೊಳ್ಳಬಹುದು. ಕೆಲವು ಅಧಿಕಾರವ್ಯಾಪ್ತಿಗಳಲ್ಲಿ ಕಂಪನಿಯು ಅದರದೇ ಷೇರುಗಳನ್ನು ಕೊಂಡುಕೊಳ್ಳಲು ಆರ್ಧಿಕ ನೆರವು ನೀಡುವುದನ್ನು ನಿಷೇಧಿಸಲಾಗಿರುತ್ತದೆ.

ದಿವಾಳಿಗಳು

ಬದಲಾಯಿಸಿ

ದಿವಾಳಿ ಎಂಬುದು ಮೂಲಕ ಕಂಪನಿಯ ಅಸ್ತಿತ್ವವನ್ನು ಸಮಾಪ್ತಿ ಮಾಡುವ ಸಾಮಾನ್ಯ ಸಾಧನವಾಗಿದೆ. ಕೆಲವೊಂದು ಅಧಿಕಾರವ್ಯಾಪ್ತಿಗಳಲ್ಲಿ ಇದು (ಪರ್ಯಾಯವಾಗಿ ಅಥವಾ ಸಮಕಾಲೀನವಾಗಿ) ವೈಂಡಿಂಗ್ ಅಪ್ ಮತ್ತು/ಅಥವಾ ವಿಸರ್ಜನೆ ಎಂದು ಕೂಡ ಕರೆಯಲಾಗುತ್ತದೆ. ದಿವಾಳಿಯು ಸಾಮಾನ್ಯವಾಗಿ ಎರಡು ರೂಪದಲ್ಲಿ ನಡೆಯುತ್ತದೆ. ಒಂದು ಕಡ್ಡಾಯ ದಿವಾಳಿಗಳು (ಕೆಲವೊಮ್ಮೆ ಸಾಲದಾತರ ದಿವಾಳಿ ಎಂದು ಕರೆಯಲಾಗುತ್ತದೆ) ಮತ್ತು ಸ್ವಯಂಪ್ರೇರಿತ ದಿವಾಳಿಗಳು (ಕೆಲವೊಮ್ಮೆ ಸದಸ್ಯರ ದಿವಾಳಿಗಳು ಎಂದು ಕರೆಯಲಾಗುತ್ತದೆ, ಆದರೆ ಕಂಪನಿಯ ಸಾಲ ತೀರಿಸಲಾಗದ ಸ್ವಯಂಪ್ರೇರಿತ ದಿವಾಳಿಯ ಸ್ಥಿತಿಯನ್ನು ಸಾಲದಾತರು ನಿಯಂತ್ರಿಸಬಹುದು. ಅಲ್ಲದೇ ಇದನ್ನು ಸೂಕ್ತವಾಗಿ ಸಾಲದಾತರ ಸ್ವಯಂಪ್ರೇರಿತ ದಿವಾಳಿ ಎಂದು ಉಲ್ಲೇಖಿಸಲಾಗುತ್ತದೆ). ಅದರ ಹೆಸರುಗಳು ಸೂಚಿಸುವಂತೆ ,ಕಡ್ಡಾಯ ದಿವಾಳಿಗೆ ಅರ್ಜಿಗಳನ್ನು ಸಾಮಾನ್ಯವಾಗಿ ಕಂಪನಿಯ ಸಾಲದಾತರು ಸಲ್ಲಿಸುತ್ತಾರೆ. ಇದು ಕಂಪನಿಯು ಸಾಲಗಳನ್ನು ತೀರಿಸಲಾಗದ ಪರಿಸ್ಥಿತಿಯಲ್ಲಿ ನಡೆಯುತ್ತದೆ. ಆದರೂ ಕೆಲವೊಂದು ಅಧಿಕಾರವ್ಯಾಪ್ತಿಗಳಲ್ಲಿ, ನಿಯಂತ್ರಕರಿಗೆ ಸಾರ್ವಜನಿಕ ಹಿತದೃಷ್ಟಿಯ ಆಧಾರದ ಮೇಲೆ ಕಂಪನಿಯ ದಿವಾಳಿಗೆ ಅರ್ಜಿ ಸಲ್ಲಿಸುವ ಅಧಿಕಾರವಿರುತ್ತದೆ. ಉದಾಹರಣೆಗೆ, ಕಂಪನಿಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದೆ ಎಂದು ನಂಬಲಾಗಿದ್ದರೆ ಅಥವಾ ಸಾರ್ವಜನಿಕರಿಗೆ ಹಾನಿಕಾರಕ ಎಂದು ಭಾವಿಸಲಾಗುವ ನಡವಳಿಕೆಯಲ್ಲಿ ನಿರತವಾಗಿದ್ದರೆ ದಿವಾಳಿಗೆ ಅರ್ಜಿ ಸಲ್ಲಿಸಬಹುದು.

ಸದಸ್ಯರು ಸ್ವಯಂಪ್ರೇರಣೆಯಿಂದ ಕಂಪನಿಯ ವ್ಯವಹಾರಗಳನ್ನು ನಿಲ್ಲಿಸಲು ನಿರ್ಧರಿಸಿದಾಗ, ಸ್ವಯಂಪ್ರೇರಣೆಯ ದಿವಾಳಿಗಳು ಸಂಭವಿಸುತ್ತವೆ. ಕಂಪನಿಯು ಅತಿಶೀಘ್ರದಲ್ಲೆ ದಿವಾಳಿಯಾಗಲಿದೆ  ಎಂದು ಅವರು ನಂಬಬಹುದು ಅಥವಾ ಆರ್ಥಿಕ ಕಾರಣಗಳು ಇರಬಹುದು, ಯಾವ ಉದ್ದೇಶಕ್ಕಾಗಿ ಕಂಪನಿಯನ್ನು ಪ್ರಾರಂಭಿಸಲಾಯಿತು ಆ ಉದ್ದೇಶ ಅಂತ್ಯಗೊಂಡಿದೆ ಅಥವಾ ಕಂಪನಿಯು ಆಸ್ತಿಗಳಿಗೆ ಸೂಕ್ತ ಪ್ರತಿಫಲ ಒದಗಿಸುತ್ತಿಲ್ಲವಾದ್ದರಿಂದ ಅಧನ್ನು ವಿಭಜಿಸಬಹುದು ಅಥವಾ ಮಾರಿಬಿಡಬಹುದೆಂದು ನಂಬಿದರೆ ಕಂಪೆನಿಯ ವ್ಯವಹಾರಗಳನ್ನು ಸ್ಥಗಿತಗೊಳಿಸಬಹುದು.

ಕೆಲವು ನ್ಯಾಯಾಧಿಕಾರಗಳು ಕಂಪನಿಗಳನ್ನು ಸರಿಯಾದ ಮತ್ತು ನ್ಯಾಯಸಮ್ಮತ ಕಾರಣಗಳ ಮೇಲೆ ದಿವಾಳಿ ಘೋಷಣೆಗೆ ಅನುಮತಿ ನೀಡಬಹುದು [೨೭] ಸಾಮಾನ್ಯವಾಗಿ, ಕಂಪನಿಯನ್ನು ಸರಿಯಾದ ಮತ್ತು ನ್ಯಾಯಸಮ್ಮತ ಮುಚ್ಚುವಿಕೆಗೆ ನಿವೇದನೆಗಳನ್ನು ಕಂಪನಿಯ ಸದಸ್ಯನು ಮಂಡಿಸುತ್ತಾನೆ. ಕಂಪೆನಿಯ ವ್ಯವಹಾರಗಳನ್ನು ಪೂರ್ವಗ್ರಹಪೀಡಿತ ರೂಪದಲ್ಲಿ ಮಾಡಲಾಗುತ್ತಿದೆ ಎಂದು ಅವನು ಆರೋಪಿಸಿ, ನ್ಯಾಯಾಲಯಕ್ಕೆ ಕಂಪನಿಯ ಅಸ್ತಿತ್ವವನ್ನು ಕೊನೆಗಾಣಿಸಲು ಮನವಿ ಮಾಡಿಕೊಳ್ಳುತ್ತಾನೆ. ಸ್ಪಷ್ಟ ಕಾರಣಗಳಿಂದ, ಬಹುಪಾಲು ರಾಷ್ಟ್ರಗಳಲ್ಲಿ, ಸದಸ್ಯನ ಆರೋಪಗಳಿಗೆ ಎಷ್ಟೇ ಉತ್ತಮ ಆಧಾರಗಳಿದ್ದರೂ ಕೂಡ ನ್ಯಾಯಾಲಯಗಳು ಕೇವಲ ಒಬ್ಬ ಸದಸ್ಯನ ನಿರಾಶೆಯ ಏಕೈಕ ಆಧಾರದ ಮೇಲೆ, ಕಂಪನಿಯನ್ನು ಮುಚ್ಚಿಬಿಡಲು ಹಿಂಜರಿಯುತ್ತವೆ. ಆದ್ದರಿಂದ, ಸರಿಯಾದ ಮತ್ತು ನ್ಯಾಯಸಮ್ಮತವಾದ ದಿವಾಳಿಗೆ ಅನುಮತಿ ನೀಡುವ ಬಹುಪಾಲು ಅಧಿಕಾರವ್ಯಾಪ್ತಿಗಳು , ನ್ಯಾಯಾಲಯಕ್ಕೆ ಇತರೆ ಪರಿಹಾರಗಳನ್ನು ವಿಧಿಸಲು ಅನುಮತಿ ನೀಡುತ್ತದೆ. ನಿರಾಶೆಗೊಂಡ ಅಲ್ಪಸಂಖ್ಯಾತನ ಷೇರುಗಳಿಗೆ ನ್ಯಾಯವಾದ ಮೌಲ್ಯವನ್ನು ನೀಡಿ ಬಹುಸಂಖ್ಯೆಯ ಷೇರುದಾರ/ಷೇರುದಾರರು ಖರೀದಿಸುವ ಅವಕಾಶವನ್ನು ಕಲ್ಪಿಸುತ್ತದೆ. ಕಂಪನಿಯು ದಿವಾಳಿಯಾಗುವ ಪರಿಸ್ಥಿತಿಗೆ ಬಂದಾಗ, ಬರಖಾಸ್ತುದಾರನನ್ನು, ಕಂಪನಿಯ ಸಂಪೂರ್ಣ ಆಸ್ತಿಗಳನ್ನು ಒಟ್ಟುಗೂಡಿಸಲು ಹಾಗು ಕಂಪನಿಯ ವಿರುದ್ಧದ ಎಲ್ಲಾ ಹಕ್ಕುಪ್ರತಿಪಾದನೆಗಳನ್ನು ಇತ್ಯರ್ಥಮಾಡಲು ನೇಮಿಸಲಾಗುತ್ತದೆ. ಕಂಪನಿಯ ಎಲ್ಲಾ ಸಾಲದಾತರಿಗೆ ಸಾಲವನ್ನು ತೀರಿಸಿದ ನಂತರ ಹೆಚ್ಚುವರಿ ಹಣ ಉಳಿದರೆ,ಅದನ್ನು ಸದಸ್ಯರ ನಡುವೆ ವಿತರಿಸಲಾಗುತ್ತದೆ.

ಒಳಗಿನವನ ವ್ಯಾಪಾರ

ಬದಲಾಯಿಸಿ

ಕಾರ್ಪೊರೇಟ್ ಹುಟ್ಟು ಮತ್ತು ಸಾವು

ಬದಲಾಯಿಸಿ

ಕಾರ್ಪೊರೇಟ್ ಅಪರಾಧ

ಬದಲಾಯಿಸಿ
  • ಕಾರ್ಪೊರೇಟ್ ನರಹತ್ಯೆ ಮತ್ತು ನರಹತ್ಯಾಕಾರಿ ಕಾಯ್ದೆ 2007

ವಿಲೀನಗಳು ಮತ್ತು ಸ್ವಾಧೀನಗಳು

ಬದಲಾಯಿಸಿ
  • ಪುನರ್ನಿರ್ಮಾಣ(ಕಾನೂನು)

ಕಾರ್ಪೊರೇಟ್ ದಿವಾಳಿತನ

ಬದಲಾಯಿಸಿ
  • ಕಾರ್ಪೊರೇಟ್ ರಕ್ಷಣೆ ಮತ್ತು ದಿವಾಳಿತನದ ದಾಖಲೆ

ಇದನ್ನು ಸಹ ನೋಡಿ

ಬದಲಾಯಿಸಿ
ಕಾರ್ಪೊರೇಟ್ ಕಾನೂನು
ಸಾರ್ವತ್ರಿಕ ಪುಟಗಳು
  • ಕಂಪನಿ ಹೆಸರಿನ ನಿಷ್ಪತ್ತಿಗಳ ಪಟ್ಟಿ
  • ಜನರ ಹೆಸರುಗಳ ಮೇಲಿನ ಕಂಪನಿಗಳ ಪಟ್ಟಿ
  • ಕಂಪನಿಗಳ ವಿಧಗಳು
  • ಭಾಗಶಃ ಸಂಸ್ಥೆ
  • ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಭದ್ರತಾಪತ್ರಗಳ ನಿಯಂತ್ರಣ
  • ರೇಸ್ ಟು ದಿ ಬಾಟಮ್
  • ಕಾರ್ಪೊರೇಟ್ ಕಾನೂನಿನ ಡೆಲವೇರ್ ಜರ್ನಲ್

ಟಿಪ್ಪಣಿಗಳು

ಬದಲಾಯಿಸಿ
  1. RC ಕ್ಲ್ಯಾರ್ಕ್ ನ , ಕಾರ್ಪೊರೇಟ್ ಲಾ (Aspen 1986)ವನ್ನು ನೋಡಿ 2; H ಹನ್ಸ್ ಮನ್ ಎಟ್ ಅಲ್ , ಅನಾಟಮಿ ಆಫ್ ಕಾರ್ಪೊರೇಟ್ ಲಾ (2004) ch 1 ಈಪ್ರಕಾರವಾಗಿಯೇ ಮಾನದಂಡವನ್ನು ನಿರ್ಧರಿಸಲಾಗುತ್ತದೆ. ಇಷ್ಟೇ ಅಲ್ಲದೇ ಅದುನಿಕ ಕಂಪನಿಗಳು ಷೇರುದಾರರ ಮಾಲಿಕತ್ವವನ್ನು ಒಳಗೊಂಡಿರುತ್ತವೆ. ಆದರೂ, ಈ ನಂತರ ಮಾತು ಬಹುಪಾಲು ಯುರೋಪಿಯನ್ ಅಧಿಕಾರವ್ಯಾಪ್ತಿಗಳಲ್ಲಿ ಕಂಡುಬರುವುದಿಲ್ಲ. ಇಲ್ಲಿ ನೌಕರರು ಅವರ ಕಂಪನಿಗಳಲ್ಲಿ ಪಾಲ್ಗೊಳ್ಳುತ್ತಾರೆ.
  2. 8ನೇ ಆವೃತ್ತಿ (2004), ISBN 0-314-15199-0
  3. ನಾರ್ದನ್ ಕಂಟ್ರೀಸ್ ಸೆಕ್ಯುರಿಟೀಸ್ Ltd. v. ಜ್ಯಾಕ್ಸನ್ &ಅಂಡ್ ಸ್ಟಿಪಲ್ Ltd. [1974] 1 WLR 1133; ವಾಲ್ಟನ್ J ಈ ಪದವನ್ನು ವಾಸ್ತವವಾಗಿ ಲಾರ್ಡ್ ಹ್ಯಾಲ್ಡನೆಯನ್ನು ಉಲ್ಲೇಖಿಸಿ,ತನ್ನ ವಕೀಲ Mr ಪ್ರೈಸ್‌‌ನದು ಎಂದಿದ್ದಾರೆ. ಆದರೆ ಲಾರ್ಡ್ ಹ್ಯಾಲ್ಡನೆ ಎಂದಿಗು ಅಂತಹ ಸಾಂಕೇತಿಕ ಶಬ್ದಗಳನ್ನು ಬಳಸಿಲ್ಲ. ಹಿಂದೆ ತಿರುಗಿದರೆ ಅದು ಲಾರ್ಡ್ ಚಾನ್ಸಲರ್ ಥ್ರೊಲಾ (1731–1806) ಆಗಿರಬಹುದು, ಇವರು ಅಲಂಕಾರಿಕ ರೂಪದಲ್ಲಿ ಹೀಗೆಂದು ಹೇಳಿದ್ದಾರೆ "ಒದೆಯಲು ಯಾವುದೇ ಶರೀರವಿಲ್ಲದಂತಹ ಮತ್ತು ದೂಷಿಸಲು ಯಾವುದೇ ಆತ್ಮವಿಲ್ಲದಂತಹ ಕಾರ್ಪೊರೇಟ್‌ಗೆ ಪ್ರಜ್ಞೆಯಿದೆಯೆಂದು ನೀವು ಎಂದಾದರೂ ನಿರೀಕ್ಷಿಸುತ್ತೀರಾ?" ಆದರೂ ಅವನ ಹೇಳಿಕೆಯ ನಿಜವಾದ ಅರ್ಥ ಈ ಕೆಳಕಂಡತಿದೆ. " ಸಂಸ್ಥೆಗಳಿಗೆ ಶಿಕ್ಷೆ ಕೊಡಬಹುದಾದ ಶರೀರವಿರುವುದಿಲ್ಲ ಹಾಗು ದೂಷಿಸಬಹುದಾದ ಆತ್ಮವಿರುವುದಿಲ್ಲ ಆದ್ದರಿಂದ ಅವರಿಗೆ ಇಷ್ಟವಾದುದ್ದನ್ನು ಅವು ಮಾಡುತ್ತವೆ." ಜಾನ್ ಪಾಯ್ನ್ಡರ್ ಸಾಹಿತ್ಯದ ಉದ್ಧರಣ (1844) vol. 1, p. 2 or 268
  4. ಉದಾಹರಣೆಗೆ ದಕ್ಷಿಣ ಆಫ್ರಿಕದ ಸಂವಿಧಾನ Art.8, ವಿಶೇಷವಾಗಿ Art.(4)
  5. ಫಿಲಿಫ್ I. ಬ್ಲುಮ್ ಬರ್ಗ್, ದಿ ಮಲ್ಟಿನ್ಯಾಷ್ಯನಲ್ ಚಾಲೆಂಜ್ ಟು ಸಂಸ್ಥೆ ಕಾಲಾ: ದಿ ಸರ್ಚ್ ಫಾರ್ ಅ ನ್ಯೂ ಕಾರ್ಪೊರೇಟ್ ಪರ್ಸನಾಲ್ಟಿ, (1993) ಇದರಲ್ಲಿ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವುದರ ಬಗ್ಗೆ ವಿವಾದಾಸ್ಪದ ಸ್ವರೂಪದ ಒಂದು ಉತ್ತಮವಾದ ಚರ್ಚೆ ದೊರೆಯುತ್ತದೆ.
  6. ಉದಾಹರಣೆಗೆ, ಕಾರ್ಪೊರೇಟ್ ಮ್ಯಾನ್‌ಸ್ಲಾಟರ್ ಮತ್ತು ಕಾರ್ಪೊರೇಟ್ ಹೋಮಿಸೈಡ್ ಆಕ್ಟ್ 2007
  7. ಈಸ್ಟ್ ಇಂಡಿಯಾ ಕಂಪನಿಯು ಇಂಗ್ಲೆಂಡ್ ನ ಮೊದಲನೆಯ ಕೂಡು ಬಂಡವಾಳ ಕಂಪನಿಯಾಗಿದೆ. ಇದು ಇದರ ಸನ್ನದನ್ನು 1600 ರಲ್ಲಿ ಪಡೆಯಿತು. ಡಚ್ ಈಸ್ಟ್ ಇಂಡಿಯಾ ಕಂಪನಿ ಅದರ ಸನ್ನದನ್ನು 1602 ರಲ್ಲಿ ಪಡೆದುಕೊಂಡಿತು. ಆದರೆ ಸಾಮಾನ್ಯವಾಗಿ ಕೂಡು ಬಂಡವಾಳವನ್ನು ಜಾರಿಗೆ ತಂದ ಪ್ರಪಂಚದ ಮೊದಲನೆಯ ಕಂಪನಿ ಎಂದು ಗುರುತಿಸಲಾಗುತ್ತದೆ. ಅಸಂಗತವಾಗಿ, ಈ ಎರಡು ಕಂಪನಿಗಳು ಪ್ರತಿಸ್ಪರ್ಧಿಗಳಾಗಿದ್ದವು.
  8. ಇಂಗ್ಲೆಂಡ್ ನಲ್ಲಿ ಎಡ್ಮಂಡ್ v ಬ್ರೌನ್ ಟಿಲ್ಲರ್ಡ್ (1668) 1 Lev 237 ಮತ್ತು ಸಾಲ್ಮನ್ v ದಿ ಹ್ಯಾಮ್ ಬೊರೊಗ್ ಕೊ (1671) 1 Ch Cas 204 ವನ್ನು ನೋಡಿ
  9. " ಅನೇಕ ವರ್ಷಗಳ ಹಿಂದೆ, ಕೂಡು ಬಂಡವಾಳದ ಕಂಪನಿಯನ್ನು ಬೆಳೆಸುವ ಪ್ರದೇಶದ ವೈಫಲ್ಯವು ಏಕೆ ಇದು ಪಶ್ಚಿಮದಲ್ಲಿ ಹಿಂದುಳಿಯಿತು ಎಂಬುದಕ್ಕೆ ಒಂದು ಕಾರಣವಾಗಿದೆ." [೧] Archived 2007-02-28 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಎಕನಾಮಿಸ್ಟ್
  10. ಸಲೊಮನ್ v. ಸಲೊಮನ್ ಅಂಡ್ Co. [1897] AC 22.
  11. ಆದರೂ ಇದು ಗಂಡನ ಪಾಲನೆ ಅಥವಾ ನಿಯಂತ್ರಣದೊಳಗಿನ ದಾಖಲೆಗಳಿಗೆ ಇದು ಸೇರಿತ್ತು.
  12. ಮ್ಯಾಕಾರಾ v. ನಾರ್ಧನ್ ಅಶುರೆನ್ಸ್ Co Ltd [1925] AC 619
  13. ಆಡಮ್ಸ್ v. ಕೇಪ್ ಇಂಡಸ್ಟ್ರೀಸ್ plc [1990] Ch 433
  14. ವಿಲಿಯಂ v ನ್ಯಾಚುರಲ್ ಲೈಫ್' [1998] 1 WLR 830
  15. ಕಾಟ್ ಮ್ಯಾನ್ v. ಬ್ರೊಗ್ಯಾಮ್ ನಲ್ಲಿ [1918] ಹೌಸ್ ಆಫ್ ಲಾರ್ಡ್ಸ್ ವ್ಯಕ್ತಪಡಿಸಿರುವ ನಿರಾಶೆಯನ್ನು ನೋಡಿ AC 514
  16. ಅಶ್ ಬರಿ v. ವ್ಯಾಟ್ ಸನ್ ಅನ್ನು ನೋಡಿ (1885) 30 Ch D 376
  17. ಷಲ್ ಫೂನ್ v ಚೆಡರ್ ವ್ಯಾಲಿ ಯನ್ನು ನೋಡಿ [1924] NZLR 561
  18. §141(a), ಡೆಲವೇರ್ ಜನರಲ್ ಕಾರ್ಪೊರೇಷನ್ ಲಾ
  19. ಸಾರ್ವಜನಿಕ ಕಂಪನಿಗಳಿಗೆ ಪಟ್ಟಿಮಾಡುವ ನಿಯಮ 10 ನ್ನು ನೋಡಿ, ಷೇರುದಾರರ ಸಮ್ಮತಿ ಮತ್ತು ಪ್ರಕಟಗೊಳಿಸುವಿಕೆ ಅಗತ್ಯವಿರುವ ವ್ಯವಹಾರಗಳ ಮಾನದಂಡವನ್ನು ನಿರ್ಧರಿಸಲಾಗುತ್ತದೆ.
  20. ಷೇರುದಾರರು, ಗಿಂಬೆಲ್ (1974) ನಲ್ಲಿದ್ದ "ಎಲ್ಲ ಅಥವಾ ಗಣನೀಯವಾಗಿ ಎಲ್ಲಾ ಆಸ್ತಿಗಳ" ಮಾರಾಟವನ್ನು ಒಪ್ಪಿಕೊಳ್ಳಬೇಕು. ಇವು ಸಂಸ್ಥೆಯ "ಅಸ್ತಿತ್ವ ಮತ್ತು ಉದ್ದೇಶಕ್ಕೆ ಗುಣಾತ್ಮಕವಾಗಿ ಮುಖ್ಯವಾಗಿದೆ"; ಕ್ಯಾಟ್ಸ್ v. ಬ್ರೆಗ್ ಮನ್ (1981) ಪ್ರಕರಣದಲ್ಲಿ ಕಂಪನಿ ಮೌಲ್ಯದ 50% ನಷ್ಟು ಆಸ್ತಿಯನ್ನು ಒಳಗೊಂಡಿರಲು ಆದೇಶಿಸಲಾಯಿತು.
  21. Bundesgerichtshof ಪ್ರಕರಣದಲ್ಲಿ ಎಲ್ಲಾ ಷೇರುದಾರರು ಕಂಪನಿಗಳ ಮೌಲ್ಯದ 80 ಪ್ರತಿಶತ ಆಸ್ತಿಗಳ ಮಾರಾಟಕ್ಕೆ ಅನುಮೋದಿಸಬೇಕು ಎಂದು ಆದೇಶಿಸಲಾಯಿತು.
  22. c.f. ಬುಶೆಲ್ v. ಫೇತ್ , ಮತ್ತು ನಿರ್ಣಯವನ್ನು ಈಗಲು ಇದೇ ರೀತಿಯಲ್ಲಿ ತೆಗೆದುಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಲಾಯಿತು.
  23. SEC 13d-5 ಇದನ್ನು ಕೂಡ ನೋಡಿ, ಹಣಹೂಡಿಕೆದಾರರ ಗುಂಪನ್ನು ಸಮರ್ಥ ಒಕ್ಕೂಟವೆಂದು ಪರಿಗಣಿಸಿದ ಕಾಲದಿಂದ, ಷೇರುದಾರರ 5% ಮತದಾರ ಗುಂಪು ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೆಂಜ್ ಕಮಿಷನ್ ಫೆಡರಲ್ ವಿತ್ತಿಯ ಪ್ರಾಧಿಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕು.
  24. ಸಂವಿಧಾನ ಯಾವುದಾದರು ನಿರ್ದಿಷ್ಟವಾದ ನಿಯಮಗಳಿಗೆ ಮುಂದೆ "ಭದ್ರವಾಗಿ ನೆಲೆಸಲು" ಅನುಮತಿ ಕೊಡಬಹುದು, s.22; ಹೆಚ್ಚಿಗೆ, ಮಾದರಿ ಅನುಚ್ಛೇದದ Art.3 ಸಾಮಾನ್ಯಾ ಸಭೆಯ 75% ನಷ್ಟು ಸದಸ್ಯರು ನಿರ್ದೇಶಕರಿಗೆ ವಿಶೇಷವಾದ ಸೂಚನೆಗಳನ್ನು ನೀಡಬಹುದಾದ ಅವಕಾಶವನ್ನು ನೀಡುತ್ತದೆ.
  25. ಹ್ಯಾರ್ಲೊವೆಸ್ ನಾಮೀನಿಸ್ Pty v. ವುಡ್ ಸೈಡ್ (1968) 121 CLR 483 (Aust HC)
  26. ಫಾಸ್ v ಹರ್ ಬಾಟಲ್ (1843) 2 Hare 461
  27. ಇಂಗ್ಲೆಂಡ್ ನಲ್ಲಿ, ಎಬ್ರಹಿಮಿ v ವೆಸ್ಟ್ ಬೊರ್ನೆ ಗ್ಯಾಲರೀಸ್ ಅನ್ನು ನೋಡಿ [1973] AC 360

ಉಲ್ಲೇಖಗಳು

ಬದಲಾಯಿಸಿ
ಪುಸ್ತಕಗಳು
  • ರೆಯಿನರ್ ಕ್ರ್ಯಾಕ್ ಮನ್, ಹೆನ್ರಿ ಹನ್ಸ್ ಮನ್, ಪೌಲ್ L. ಡೇವಿಸ್, ಕ್ಲಾಸ್ ಹಾಪ್ಟ್ , ಗೆರ್ಯಾರ್ಡ್ ಹರ್ಟಿಗ್, ಹೈಡೆಕಿ ಕ್ಯಾನ್ಡ, ದಿ ಅನಾಟಮಿ ಆಫ್ ಕಾರ್ಪೊರೇಟ್ ಲಾ (OUP 2004)
  • ಡೇವಿಡ್ ಕರ್ಶ್ಯಾವ್, ಕಂಪನಿ ಲಾ ಇನ್ ಕಾನ್ಟೆಸ್ಟ್ (OUP, ಆಕ್ಸ್‌ಫರ್ಡ್ 2009)
ಲೇಖನಗಳು
  • LCB ಗೊವೆರ್, ‘ಸಮ್ ಕಾಂಟ್ರ್ಯಾಸ್ಟ್ ಬಿಟ್ವೀನ್ ಬ್ರಿಟಿಷ್ ಅಂಡ್ ಅಮೇರಿಕನ್ ಕಾರ್ಪೋರೆಷನ್ ಲಾ’ (1955) ಹಾರ್ವರ್ಡ್ ಲಾ ರಿವ್ಯೂ 1369

ಬಾಹ್ಯ ಕೊಂಡಿಗಳು

ಬದಲಾಯಿಸಿ