ದಿಲಿಪ್ ಕೆ. ಬಿಸ್ವಾಸ್

ದಿಲೀಪ್ ಕೆ. ಬಿಸ್ವಾಸ್ ಭಾರತೀಯ ಪರಿಸರವಾದಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಮಾಜಿ ಅಧ್ಯಕ್ಷರು. [] ಅವರು ಸೈಲೆಂಟ್ ವ್ಯಾಲಿಯಲ್ಲಿ ಪರಿಸರ ಅಧ್ಯಯನಗಳನ್ನು ನಡೆಸಿದ ಸಮಿತಿಯ ಸದಸ್ಯರಾಗಿದ್ದರು ಮತ್ತು ಆ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿದರು. ಅಂತಿಮವಾಗಿ ಯೋಜನೆಯ ವಿರುದ್ಧ ಶಿಫಾರಸು ಮಾಡಿದರು. ಇದು ಸೈಲೆಂಟ್ ವ್ಯಾಲಿಯನ್ನು ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲು ಕಾರಣವಾಯಿತು. [] ಅವರು ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ ಸ್ವಚ್ಛ ಅಭಿವೃದ್ಧಿಯ ಪ್ರಕ್ರಿಯೆಯ ಅನುಷ್ಠಾನದ ಲೇಖಕರಾಗಿದ್ದಾರೆ. ಕ್ಯೋಟೋ ಪ್ರೋಟೋಕಾಲ್ ಸೂಚಿಸಿದ ಸ್ವಚ್ಛ ಅಭಿವೃದ್ಧಿಯ ಪ್ರಕ್ರಿಯೆಯ (ಸಿಡಿಎಂ) ಅನುಷ್ಠಾನಕ್ಕೆ ಮಾರ್ಗದರ್ಶಿಯಾಗಿ ವಿಶ್ವಸಂಸ್ಥೆ ಪ್ರಕಟಿಸಿದ ವರದಿ -ಸಮಸ್ಯೆಗಳು, ಸವಾಲುಗಳು ಮತ್ತು ಅವಕಾಶಗಳು - ಇದು ಅವರು ತಯಾರಿಸಿದ ವರದಿ.[] ಭಾರತದ ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋದಲ್ಲಿ ಪರಿಸರ ನಿರ್ವಹಣಾ ಕಾನೂನುಗಳ ಕರಡು ರಚನೆಯ ಹಿಂದೆ ಅವರ ಕೊಡುಗೆ ಇದೆ.[] ಭಾರತ ಸರ್ಕಾರವು ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ೨೦೦೭ ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀಯನ್ನು ನೀಡಿ ಪುರಸ್ಕರಿಸಿತು. []

ದಿಲಿಪ್ ಕೆ. ಬಿಸ್ವಾಸ್
ಜನನ
ವೃತ್ತಿಪರಿಸರವಾದಿ
ಗಮನಾರ್ಹ ಕೆಲಸಗಳುಮಾಲಿನ್ಯ ನಿಯಂತ್ರಣ
ಪ್ರಶಸ್ತಿಗಳುಪದ್ಮಶ್ರೀ

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Saligram Bhatt (2004). Kashmir Ecology and Environment: New Concerns and Strategies. APH Publishing. p. 305. ISBN 9788176486019.
  2. Prasad (2008). Environment, Development and Society in Contemporary India:An Introduction. Macmillan. p. 438. ISBN 9780230635302.
  3. Dilip K. Biswas (2003). Implementation of the Clean Development Mechanism in Asia and the Pacific: Issues, Challenges, and Opportunities. United Nations Publications. p. 36. ISBN 9789211203844.[ಶಾಶ್ವತವಾಗಿ ಮಡಿದ ಕೊಂಡಿ]
  4. "A Report on State of Environment Lucknow" (PDF). Central Pollution Control Board. 2016. Retrieved 14 January 2016.
  5. "Padma Awards" (PDF). Ministry of Home Affairs, Government of India. 2016. Archived from the original (PDF) on 15 October 2015. Retrieved 3 January 2016.

ಬಾಹ್ಯ ಕೊಂಡಿಗಳು

ಬದಲಾಯಿಸಿ